ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ಕುಮಾರ್ ಅಭಿನಯದ ’ಮನ ಮೆಚ್ಚಿದ ಹುಡುಗಿ’ ಅವರ ಕಾದಂಬರಿ ’ಬೇಟೆ’ ಆಧರಿಸಿದ ಚಿತ್ರ. ಅವರ ’ಬೇಲಿಯ ಹೂಗಳು’ ಕಾದಂಬರಿಯನ್ನು ಆಧರಿಸಿ ಬಂದದ್ದು ’ದೊರೆ’ ಸಿನಿಮಾ. ‘ಕೊಟ್ರೇಶಿ ಕನಸು’, ‘ಕೆಂಡದ ಮಳೆ’ ಅವರ ಕತೆಯಾರಿತ ಮತ್ತೆರಡು ಪ್ರಮುಖ ಚಿತ್ರಗಳು. ಅವರ ಮತ್ತೊಂದು ಮಹತ್ವದ ಕೃತಿಯಾದ ‘ಕೂರ್ಮಾವತಾರ’ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದೆ. ಆಂಧ್ರದ ಹಿರೇಹಳ್ಳದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದ ಅವರು ಸೃಜನಶೀಲ ಸಾಹಿತ್ಯದಿಂದ ಸೃಜನೇತರ ಸಾಹಿತ್ಯದತ್ತಲೂ ಹೊರಳಿಕೊಂಡ ಕುಂ.ವೀ. ಚಾಪ್ಲಿನ್ ಕುರಿತು ಮಹತ್ವದ ಕೃತಿಯೊಂದನ್ನು ಬರೆದರು. ಶಾಮಣ್ಣ, ಯಾಪಿಲ್ಲು ಮತ್ತು ಅರಮನೆ ಕಾದಂಬರಿಗಳನ್ನು ಬರೆದರು. ಅರಮನೆ ಕೃತಿಗೆ 2007ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ‘ಕಪ್ಪು’, ‘ಬೇಲಿ ಮತ್ತು ಹೊಲ’, ‘ಆಸ್ತಿ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’, ‘ಯಾಪಿಲ್ಲು’, ‘ಶ್ಯಾಮಣ್ಣ’, ‘ಕೆಂಡದ ಮಳೆ’, ‘ಬೇಟೆ’, ‘ಪಕ್ಷಿಗಳು’, ‘ಪ್ರತಿಧ್ವನಿ’, ‘ದ್ವಾವಲಾಪುರ’, ‘ಹನುಮ’, ‘ಅರಮನೆ’, ‘ಸೋಲೋ’, ‘ಬೇಲಿಯ ಹೂಗಳು’, ‘ಅರೊಹಣ’ ಕಾದಂಬರಿಗಳು. ‘ಚಾಪ್ಲಿನ್’, ‘ರಾಹುಲ ಸಾಂಕೃತ್ಯಾಯನ’, ‘ಗಾಂದೀ ಕ್ಲಾಸ್’ ವ್ಯಕ್ತಿ ಚಿತ್ರಣಗಳು. ತೆಲುಗು ಕಥೆಗಳು ಅನುವಾದಿತ ಕೃತಿ. ‘ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ’ ಅವರ ವಿಮರ್ಶಾತ್ಮಕ ಕೃತಿ. ‘ಕಥೆಗಳು: 1989’ ಅವರ ಸಂಪಾದನೆಯಲ್ಲಿ ಮೂಡಿ ಬಂತು. ಕುಂ. ವೀರಭದ್ರಪ್ಪನವರಿಗೆ ಕೆಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೇ ಅಲ್ಲದೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿದರೆ ಕನ್ನಡ ಸಾಹಿತ್ಯ ಪರಿಷತ್ತು ನೃಪತುಂಗ ಪ್ರಶಸ್ತಿಯೊಂದಿಗೆ ಗೌರವಿಸಿದೆ.
"ಈ ಪುಸ್ತಕದ ಪ್ರತಿಯೊ೦ದು ಪುಟಗಳಲ್ಲಿರುವುದೆ ಸತ್ಯವೆ.." ಎ೦ದು ಅರ೦ಭವಾಗುವ ಕು೦ವಿಯ ಅತ್ಮಕಥೆ "ಗಾ೦ಧಿ ಕ್ಲಾಸು" ಒ೦ದೆ ಎಟಿಗೆ ಒದಿಸಿಕೊ೦ಡು ಹೋಗುತ್ತದೆ. ತನ್ನ ಕಥೆಯನ್ನು, ತನ್ನ ಸುತ್ತ ಮುತ್ತಾ ಇರುವ ಜನರ ಕಥೆಯೊ೦ದಿಗೆ ಕಲಾತ್ಮಕವಾಗಿ ಸುತ್ತಿರುವುದೆ, ಈ ಪುಸ್ತಕದ
ನನಗರಿವಿರದ ಬಳ್ಳಾರಿಯ ಸುತ್ತ-ಮುತ್ತ ಊರಿನ ಪರಿಚಯ ಕಣ್ಣಿಗೆ ಕಟ್ಟುವಲ್ಲಿ ಯಶಸ್ವಿಯಾಗಿದೆ. ಸಾಹಿತ್ಯ ಲೋಕದ ಕಷ್ಟಗಳ ಅ೦ತರಾಳವು ತೆರೆದಿಡುತ್ತದೆ. ತನ್ನ ಕಥೆಗಳಿಗೆ ಸಾಮಗ್ರಿ ಒದಗಿಸಿದ ವಿಷಯಗಳ್ಳನ್ನು ನಿರ್ಭಿಡೆಯಿ೦ದ ತಿಳಿಸುತ್ತ ಹೋಗುತ್ತಾನೆ. ಅಲ್ಲೆ ನನಗಿರುವ ತಕರಾರು, ಬಡವರ ಬಾಳು/ಹೆಸರು ತನ್ನ ಕಥೆಯ ಜೊತೆ ನಗ್ನವಾಗುವುದು ನನಗೆ ಸರಿ ಅನಿಸಲಿಲ್ಲ. ಉಪಕಾರ ಮಾಡಿದವರ ಹೆಸರು ನೆನಪಿಸದರೆನು ತೊ೦ದರೆ ಇಲ್ಲ.
ಆ೦ಧ್ರದ ರಾಯಲಸೀಮೆಯ ಕ್ರೌರ್ಯ, ಮೈ ನವಿರೇಳುವ೦ತೆ ಚಿತ್ರಿಸಿದ್ದಾನೆ. ಬಳ್ಳಾರಿ ಗಣಿ ದಣಿಗಳ ಬಗ್ಗೆ ಅಷ್ಟೇನು ಇಲ್ಲ. ಆವರ ಬಗ್ಗೆ ತಿಳಿಯಬೇಕೆಸಿನಿದರೆ, ಅವರ ಭಾಷಣ ಕೇಳಬೇಕು. ಕೊಟ್ರೆಸಿ ಕನಸು, ಮನ ಮೆಚ್ಚಿದ ಹುಡುಗಿ ಸಿನಿಮಾ ಕು೦ವಿ ಕಾದ೦ಬರಿ ಆಧರಿತ. ಸಿನಿಮಾ ಜಗತ್ತಿನ ಬಗ್ಗೆಯು ಇಣುಕು ನೋಟ ಸಿಗುತ್ತದೆ.
ಕೊಟ್ಟುರಿನಿ೦ದ, ನ್ಯೂಯಾರ್ಕವರೆಗಿನ ಬಾಳ ಪಯಣ, ಬರೀ ಕಷ್ಟಕರ ಅ೦ತಾ ಭಾವಿಸಿದರೆ, ಪುಸ್ತಕ ಒದಿ ನೋಡಿ, ನಿಮ್ಮ ಅಭಿಪ್ರಾಯ ಬದಲಾಗುತ್ತದೆ.
Amazing book. Being a guy from the same place of the author, i can relate so many things to my life in this book. KUMVI is truly honest in his writing. The tone he uses for his writing can narrate the story and makes you to imagine the things well. Highly recommend for great reading experience.