Jump to ratings and reviews
Rate this book

ಮುಸ್ಸಂಜೆಯ ಕಥಾ ಪ್ರಸಂಗ

Rate this book

First published January 1, 1978

24 people are currently reading
494 people want to read

About the author

P. Lankesh

36 books20 followers
Palya Lankesh (8 March 1935 – 25 January 2000) was an Indian poet, fiction writer, playwright, translator, screenplay writer and journalist who wrote in the Kannada language. He was also an award-winning film director.

Lankesh was born in the small village of Konagavalli in Shimoga, Karnataka. After graduating with an honours degree in English from Central College at Bengaluru, Lankesh completed his Master of Arts degree in English from Maharaja's College, Mysore.

His 1976 film Pallavi—a cinematic narration, told from the female protagonist's point of view and based on his novel Biruku—won the National Award for Best Direction (Swarna Kamal).] Lankesh quit his job as an assistant professor in English at Bangalore University in 1980 and started Lankesh Patrike, the first Kannada tabloid, which influenced Kannada culture and politics.

Lankesh's first work was the collection of short stories Kereya Neeranu Kerege Chelli (1963). His other works include the novels Biruku ("The Fissure"), Mussanjeya Kathaprasanga (A Story at Dusk), Akka (Sister); the plays T. Prasannana Grihastashrama ("The Householder-hood of T.Prasanna"), Sankranti ("Revolution"), Nanna Tangigondu Gandu Kodi ("A Groom for my Sister") and Gunamukha ("Convalescence"); the short story collections, Umapatiya Scholarship Yatre ("Umapati's Scholarship Trip"), Kallu Karaguva Samaya (When the Stone Melts; winner of the 1993 Sahitya Akademi Award), Paapada Hoogalu, the translation of Charles Baudelaire's Les Fleurs du Mal and Dore Oedipus mattu Antigone, translation of Sophocles' Antigone and Oedipus Rex.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
14 (29%)
4 stars
15 (31%)
3 stars
12 (25%)
2 stars
3 (6%)
1 star
4 (8%)
Displaying 1 - 8 of 8 reviews
Profile Image for Sanjay Manjunath.
201 reviews10 followers
December 9, 2023
ಮನುಷ್ಯ ಮನುಷ್ಯರ ನಡುವಿನ ವರ್ತನೆಗಳನ್ನು ಕಥಾ ರೂಪಕ್ಕೆ ತಂದು, ಆ ಕಥೆಗೆ 50-60 ರ ದಶಕದ ಆಸುಪಾಸಿನ ಗ್ರಾಮೀಣ ಪರಿಸರವನ್ನು ಹೊದಿಸಿ, ಅಸತ್ಯ, ಅಪ್ರಾಮಾಣಿಕತೆ, ಅನೈತಿಕತೆಗಳನ್ನೆಲ್ಲ ಸಹಜವೆಂಬಂತೆ ಚಿತ್ರಿಸಿ, ಪಾತ್ರಗಳಿಗೆ ಜೀವಂತಿಕೆ ಇರುವುದೇ ಇವುಗಳಿಂದ ಎಂದು ಬಿಂಬಿಸಿ, ಕಥೆಯ ಸಾಗುವ ಗತಿಯನ್ನು ಓದುಗನು ತಪ್ಪಿಸಿಕೊಳ್ಳದಂತೆ ಆಗಾಗ ಲೇಖಕನು ಕಥೆಯೊಳಗೆ ಪ್ರವೇಶಿಸಿ, ಇದು ಹೀಗೆ ಎಂದು ನಿರ್ದೇಶಿಸುತ್ತ ಕಟ್ಟಿಕೊಟ್ಟಿರುವ ಕಾದಂಬರಿಯೇ
ಮುಸ್ಸಂಜೆಯ ಕಥಾ ಪ್ರಸಂಗ..

ಪಿ.ಲಂಕೇಶರು 'ಅವ್ವ' ಪದ್ಯದಿಂದ ಚಿರಪರಿಚಿತ ನನಗೆ.
ಅವರ 'ಉಲ್ಲಂಘನೆ' ಕಥಾ ಸಂಕಲನ ಮತ್ತು 'ಬಿರುಕು' ಕಾದಂಬರಿಯನ್ನು 3-4 ವರ್ಷಗಳ ಹಿಂದೆ ಓದಿದ್ದು ಮಸುಕು ಮಸುಕಾಗಿ ನೆನಪಿನಲ್ಲಿದೆ. ಹಾಗೂ ನೀಲು ಕಾವ್ಯವನ್ನು ಆಗಾಗ ಓದುತ್ತಿರುತ್ತೇನೆ.

ಈ ಕಾದಂಬರಿಯ ಶೀರ್ಷಿಕೆಯಿಂದ ಆಕರ್ಷಿತನಾಗಿದ್ದೆ.
ಇತ್ತೀಚೆಗೆ ಕೊಂಡು ತಂದಿದ್ದೆ. ಓದಲು ಶುರುಮಾಡಿದಾಗ ಇಷ್ಟು ಚೆಂದದ ಶೀರ್ಷಿಕೆಗೂ.. ಕತೆಯ ಹೂರಣಕ್ಕೂ ಹೊಂದುತ್ತಿಲ್ಲ ಎನ್ನುವ ಭಾಸವಾಗುತ್ತಿತ್ತು. ಮುಗಿದ ಮೇಲೂ ಕೂಡ.!

ಎಷ್ಟೊಂದು ಪಾತ್ರಗಳು.ಕಥೆಯ ಸ್ವರೂಪ ಚಿಕ್ಕದಿದ್ದರೂ.. ಅದರ ವಿಸ್ತಾರ ದೊಡ್ಡದು.
ಕಂಬಳ್ಳಿ ಎಂಬ ಹಳ್ಳಿ, ಆಣೆ ಬಡ್ಡಿ ರಂಗವ್ವ, ಅವಳ ಮಗಳು ಸಾವಂತ್ರಿ, ಸಾವಂತ್ರಿಯ ಪ್ರೇಯಸಿ ಬ್ಯಾಡರ ಮಂಜ, ಮೆಷಿನ್ ಭರಮಣ್ಣ, ಅವನ ಹೆಂಡತಿಯರಾದ ಸಾದ್ವಿ ರುದ್ರಿ..ಹರಾಮಿ ರಾಮಿ, ಪೈಲ್ವಾನ್ ಶಿವಾಜಿ, 13-14 ವಯಸ್ಸಿನ 'ಬಾಲಕ' ಕರಿಯ, ನೊಂದ ಪ್ರೇಮಿ ಶಿವನಂಜ, ಅವನು ಶಿವಮೊಗ್ಗದಿಂದ ಕರೆತರುವ ಸಾಹಿತ್ಯೋತ್ತಮ ಉಡುಪ, ಅವನ ಅಕ್ಕರೆಯ ಹೆಂಡತಿ ಮಮ್ತಾಜ್, ಮಕ್ಕಳು ಮಾಡಿದ ನೀಚ ಕೆಲಸಗಳಿಂದ ಹುಚ್ಚನೋ..ದಾರ್ಶನಿಕನೋ ಎಂಬ ಜಿಜ್ಞಾಸೆಗೆ ಗುರಿಯಾಗಿರುವ ಶ್ರೇಷ್ಠಿ, ಆಗಾಗ ಬಂದು ಒಳಿತು-ಕೆಡಕುಗಳನ್ನು ಹೇಳುವ ಅವನ ಗೆಳೆಯ ಶಾಸ್ತ್ರಿ, ಎಲ್ಲದರಲ್ಲೂ ಲಾಭ ಮಾಡಿಕೊಳ್ಳುಲು ನೋಡುವ ರಾಚ, ರಾಚನಂತೆ ಇದ್ದರೂ ಜಾಣೆಡ್ಡ ಬೂಸಿ ಬಸ್ಯ, ಕುಳ್ಳನೆಯ ಕಳ್ಳಬುದ್ಧಿಯ ಮೇಷ್ಟ್ರು ಸಣ್ಣೀರಪ್ಪ, ಊರಿನ ಉಸಾಬರಿಯಿಂದ ದೂರವಿರುವ..ಊರವರ ಅವಗಣನೆಗೆ ಒಳಗಾಗಿರುವ ನಂದ್ಯಪ್ಪ ಮತ್ತು ಅವನ ಕುಟುಂಬ, ಕುಟುಂಬಕ್ಕೆ ಹೊರೆಯಾಗಬಾರದೆಂದು ಬದುಕಲು ಹೋಗಿ ಸಾಯುವ ಶಿವಿ, ವಿಚಿತ್ರ ಪ್ರೇಮಿ ಇಕ್ಬಾಲ್, ಮುಸ್ಲಿಂನ ಬಡಗುಲಾಂ, ಆರೆಸ್ಸೆಸ್, ಕುಸ್ತಿಯ ಅಖಾಡ, ಮಠದ ಸ್ವಾಮಿಗಳು, ಹೀಗೆ ಹತ್ತು-ಹಲವೂ ವಿಭಿನ್ನ ಪಾತ್ರಗಳು ಇಲ್ಲಿವೆ..

ಬಡ್ಡಿಗೆ ಹಣ ಕೊಟ್ಟು, ವಸೂಲಿಯನ್ನು ಜಗಳದಿಂದಲೇ ಮಾಡುವ, ಊರವರನ್ನು ಎದುರು ಹಾಕಿಕೊಂಡು ತನ್ನ ಒಬ್ಬಳೇ ಮಗಳಾದ ಸಾವಂತ್ರಿಯನ್ನು ಸಾಕುತ್ತಿರುವ, ಕಲ್ಲು ಮನಸ್ಸಿನ ತಾಯಿ ಎಂದೆಣಿಸಿದರೂ.. ಶಿವಿಯ ಸತ್ತಾಗ ಅವಳ ಹೆಸರು ಕೆಡದಿರಲು ತನ್ನಲ್ಲಿದ್ದ ಹಣವನ್ನು ಏನೂ ಯೋಚನೆ ಮಾಡದೆ ಕೊಟ್ಟು.. ಕೊನೆಯಲ್ಲಿ ಮಗಳ ಮದುವೆಯನ್ನು ಊರವರ ವಿರುದ್ಧವಾಗಿ ಮಾಡಿ ಸೈ ಎನಿಸಿಕೊಳ್ಳುವ #ಆಣೆ_ಬಡ್ಡಿ_ರಂಗವ್ವ

ತನ್ನವ್ವನ ಅಂತರಾಳ ಅರಿತಿದ್ದರೂ, ಹರೆಯದ ಆಕರ್ಷಣೆಯಲ್ಲಿ ಬ್ಯಾಡರ ಕುಲದ ಮಂಜನನ್ನು ಪ್ರೇಮಿಸುವ, ಪಕ್ಕದಮನೆ ನಂದ್ಯಪ್ಪನವರ ಮಗಳಾದ ಶಿವಿಗೆ ಒತ್ತಾಸೆಯಾಗಿರುವ, ಅವಳ ಸಾವಿನಿಂದ ಜರ್ಜರಿತಳಾಗುವ, ಉಡುಪನ ಸಾಹಿತ್ಯ ಅರ್ಥವಾಗದಿದ್ದರೂ ಖುಷಿಪಡುವ #ಸಾವಂತ್ರಿ

13-14ರ ಆಸುಪಾಸಿನ ಬಾಲಕನಾಗಿ, ಒಟ್ಟು ಕತೆಯಲ್ಲಿ ಎಲ್ಲದರಲ್ಲೂ ಕಾಣಸಿಗುವ, ಕಾಮದ ಏರಿಳಿತಗಳಿಗೆ ಒಳಗಾಗುವ, ಬಾಲ್ಯವೂ ಅಲ್ಲದ..ಹರೆಯವೋ ಅಲ್ಲದ ವಿಕ್ಷಿಪ್ತ ಮನಸ್ಥಿತಿಯ #ಕರಿಯ

ಊರಿನ ರಾಜಕಾರಣ ಮಾಡುತ್ತ, ರಂಗವ್ವ ಮತ್ತು ಸಾವಂತ್ರಿಯನ್ನು ತನ್ನ ಕುಲಕ್ಕೆ ಅಪಚಾರ ಮಾಡಿದರೆಂದು..ತನ್ನ ಸೇಡು ತೀರಿಸಿಕೊಳ್ಳಲು ಅವರಿಬ್ಬರನ್ನು ಊರಿನಿಂದ ಹೊರಗಟ್ಟುವ ಯೋಜನೆಯಲ್ಲಿ ರಾಚ, ಶಿವಾಜಿ, ಬೂಸಿ ಬಸ್ಯ ನೊಂದಿಗೆ ಸೇರಿ ಸಾವಂತ್ರಿಯ ಮಾನ ಕೆಡಿಸಿಸಲು ಹೋಗಿ, ತನ್ನ ಹೆಂಡತಿ ರಾಮಿ ವ್ಯಭಿಚಾರಿಯಾಗಿರುವುದನ್ನು ಕಂಡುಕೊಂಡು.. ಆದರೂ ಪಟ್ಟುಬಿಡದೆ ರಂಗವ್ವವನ್ನು ಅವಮಾನಿಸಿ, ಬಹಿಷ್ಕರಿಸುವುದಕ್ಕೆ ಮಠದ ಸ್ವಾಮಿಗಳನ್ನು ಎಡತಾಕುವ #ಮೆಷಿನ್_ಭರಮಣ್ಣ

ಸಾವಂತ್ರಿಯನ್ನು ಪ್ರೀತಿಸುತ್ತಾ, ಕಾಮಿಸುತ್ತ, ಕಳ್ಳಬಟ್ಟಿ ಹೀರುತ್ತಾ, ಉಂಡಾಡಿಯಾಗಿ ಅಲೆಯುತ್ತ, ಏನನ್ನು ತಲೆಗೆ ಹಾಕಿಕೊಳ್ಳದೆ ಬಾಳುತ್ತಾ, ಕೊನೆಗೆ ಸಾವಂತ್ರಿಯನ್ನು ವರಿಸುವ #ಬ್ಯಾಡರ_ಮಂಜ

ಕಾದಂಬರಿಯಲ್ಲಿ ಇಷ್ಟು ಪಾತ್ರಗಳು ಪ್ರಮುಖವಾದರೂ.. ಇವುಗಳ ಜೊತೆಗೆ #ರಾಚ ಮತ್ತು #ಬೂಸಿ_ಬಸ್ಯ ಪಾತ್ರಗಳು ಪ್ರಮುಖವಾದವೆ .
ಆದರೂ ಈ ಕಾದಂಬರಿಯಲ್ಲಿ ನಾಯಕ, ನಾಯಕಿ ಅಥವಾ ಪ್ರಧಾನ ಕೇಂದ್ರ ಬಿಂದು ಇಂತದ್ದೆ ಎಂದು ಹೇಳಲು ಆಗುವುದಿಲ್ಲ. ಎಲ್ಲಾ ಪಾತ್ರಗಳೂ ಒಂಥರ ಒಗರೊಗರು..

ಮೊದ-ಮೊದಲಿಗೆ.. ಯಾಕೆ ಓದಬೇಕು ಈ ಕಾದಂಬರಿಯನ್ನ? ಬರೀ ಹೆಣ್ಣಿನ ಅಂಗಾಂಗಗಳ ವರ್ಣನೆ, ಜಗಳ, ಸಣ್ಣತನಗಳನ್ನು ತುಂಬಿಸಿದ್ದಾರಲ್ಲ ಎನಿಸುತ್ತಿತ್ತು. ನೂರು ಪುಟಗಳನ್ನು ದಾಟಿದ ನಂತರ ಒಂದು ಹಿಡಿತಕ್ಕೆ ಬಂದಿತು.

ಆಗಾಗ ಲೇಖಕರು ಕಾದಂಬರಿಯೊಳಗೆ ಪ್ರವೇಶಿಸುತ್ತಿದ್ದು, ಸುಖಾ-ಸುಮ್ಮನೆ ಆರೆಸ್ಸೆಸ್ ಅನ್ನು ಎಳೆದು ತಂದಿದ್ದು, ಇದ್ದಕ್ಕಿದ್ದಂತೆ ಕರಿಯನ ಪಾತ್ರ ಮಾಯವಾದದ್ದು, ಸಿನಿಮೀಯ ರೀತಿಯಲ್ಲಿ ಮುಕ್ತಾಯವಾದುದು ಸ್ವಲ್ಪಮಟ್ಟಿಗೆ ಹಿಡಿಸಲಿಲ್ಲ.

ಇಲ್ಲಿಯವರೆಗೂ ನಾನು ಓದಿದ ಗ್ರಾಮೀಣ ಪರಿಸರದ ಕಾದಂಬರಿಗಳಲ್ಲಿ ಇದೊಂದು ಭಿನ್ನವಾದ ಕಾದಂಬರಿ ಮಾತ್ರ ಹೇಳಬಲ್ಲೇ..
Profile Image for Srinath.
54 reviews15 followers
November 30, 2020
ಬಾಲ್ಯದ ದಿನಗಳು ಮನಸ್ಸಿನಲ್ಲಿ ಮೂಡಿಸುವ ಪರಿಣಾಮ ಯಾವಾಗಲೂ ತೀಕ್ಷ್ಣವಾಗಿರುತ್ತದೆ . ಮುಂದೊಮ್ಮೆ ನೆನೆವಾಗ ಹಳೆಯ ಘಟನಾವಳಿಗಳು ಹೊಸದೇ ಒಂದು ರೂಪದಲ್ಲಿ ಕಾಣಿಸಬಹುದು. ಬಾಲ್ಯಕಾಲದ ಅನುಭವಗಳನ್ನು ಕತೆಯಾಗಿಸುವ ಗುಟ್ಟಾದ ಆಸೆ ಹಲವರಲ್ಲಿರುವುದೂ ಸಹಜ. ಆದರೆ ಅಂತಹದೊಂದು ಪ್ರಯತ್ನಕ್ಕೆ ಸೂಕ್ಷ್ಮ ಸಂವೇದನೆಯ ಬರವಣಿಗೆ ಅತ್ಯಗತ್ಯ.

ಇಂತಹದ್ದೊಂದು ಕೃತಿ ಲಂಕೇಶರ "ಮುಸ್ಸಂಜೆಯ ಕಥಾ ಪ್ರಸಂಗ". ಅವರೇ ಮುನ್ನುಡಿಯಲ್ಲಿ ಹೇಳಿರುವಂತೆ ತಮ್ಮ ಮೊದಲ ಇಪ್ಪತ್ತು ವರುಷಗಳ ಬಹುಪಾಲನ್ನು ತಮ್ಮ ಹಳ್ಳಿಯಲ್ಲಿ ಕಳೆದದ್ದರಿಂದ ಅಲ್ಲಿ ತಮಗಾದ ಅನುಭವಗಳ ಹಿನ್ನೆಲೆಯಲ್ಲಿ ಈ ಕೃತಿ ರಚಿತವಾಗಿದೆ.

ಮೂವತ್ತೈದು ವರುಷಗಳ ಹಿಂದೆ ಪ್ರಕಟವಾಗಿರುವ ಈ ಕೃತಿಯಲ್ಲಿ ಬರುವ ಪ್ರಸಂಗಗಳು ನಡೆಯುವುದು ಅದಕ್ಕೂ ಮೂವತ್ತೈದು ವರುಷಗಳ ಹಿಂದೆ ಎನ್ನುವುದನ್ನು ನಾವು ಗಮನಿಸಬೇಕು. ಹೀಗಿದ್ದರೂ ಇಂದಿಗೂ ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಕೃತಿಯಿದು.

ಹಳ್ಳಿಯಲ್ಲಿ ನಡೆವ ತಮಾಷೆಯ ಘಟನೆಗಳ ಆಳದ ಜಾತೀಯತೆ, ಹುಂಬತನ ಮತ್ತು ವಿಷಾದಕರ ವಂಚನೆಯಿಂದ ಹಳ್ಳಿಯೇ ವಿನಾಶದ ಅಂಚಿಗೆ ಸಾಗುವ ಕತೆಯಿದೆಂದು ಸರಳವಾಗಿ ಹೇಳುವಾಗಲೇ, ಕತೆಯು ಕಟ್ಟಿಕೊಡುವ ರಂಗವ್ವ, ಸಾವಂತ್ರಿ, ಮಂಜ ಮೊದಲಾದ ಕೆಲವು ಅತ್ಯಂತ ಜೀವಂತಿಕೆಯ ಪಾತ್ರಗಳನ್ನೂ ಪ್ರಸ್ತಾಪಿಸಲೇಬೇಕು .

ಜಗತ್ತನ್ನು, ಬದುಕನ್ನು ಒಬ್ಬ ಪ್ರತಿಭಾವಂತ ಸಾಹಿತಿಯ ಕಣ್ಣುಗಳಿಂದ ನೋಡುವ ಖುಷಿಯೇ ಸಾಹಿತ್ಯದ ಓದಿನ ಮುಖ್ಯ ಆಕರ್ಷಣೆ. ಅಸಾಮಾನ್ಯ ಸೂಕ್ಷ್ಮತೆ, ಚಾಣಾಕ್ಷತೆ, ಜೀವಂತಿಕೆ, ಸಂವಹನ ಕುಶಲತೆ, ಎಲ್ಲವೂ ಇರುವ ಸಾಹಿತಿಗಳು ಜಗತ್ತನ್ನು ನೋಡುವ ರೀತಿಯೇ ವಿಶಿಷ್ಟ.

ಲಂಕೇಶರೇ ಹೇಳಿಕೊಂಡಿರುವಂತೆ "ಒಂದು ಬಗೆಯ ಲಹರಿಯಲ್ಲಿ ಲಂಗುಲಗಾಮಿಲ್ಲದೇ ಓಡುವ ವೃತ್ತಾಂತ" ಇದಾಗಿದ್ದರೂ, ಅಂದಿನ ಬಹಳಷ್ಟು ಹಳ್ಳಿಗಳಲ್ಲಿ ಪ್ರಾಯಶಃ ಕಾಣಬಹುದಾಗಿದ್ದ ಜಾತೀಯತೆ, ಸಣ್ಣತನ, ಗುರಿರಾಹಿತ್ಯ, ಅಸಂಸ್ಕೃತಿ, ಕ್ರೌರ್ಯ, ಬೋಳೇತನ ಇವೆಲ್ಲದರ ಚಿತ್ರಣ ಕೃತಿಯಲ್ಲಿದೆ. ಶಿವಮೊಗ್ಗೆಯ ಕಡೆಯ ಆಗಿನ ಹಳ್ಳಿಯ ನುಡಿಕಟ್ಟಿನಲ್ಲಿ ಸಾಗುವ ಕತೆ ಎಲ್ಲ ಜೀವಂತಿಕೆಯ ಆಳದಲ್ಲಿ, ಎಲ್ಲ ಮೌಲ್ಯಗಳ ಆಳದಲ್ಲಿ ಮುಖ್ಯ ಯಾವುವೆಂಬುದನ್ನು ಸೂಕ್ಷ್ಮವಾಗಿ ಮನಗಾಣಿಸುತ್ತದೆ.

ಕತೆಯ ಕುತೂಹಲದ ಜತೆಗೇ ಅಲ್ಲಲ್ಲಿ ನಮಗೆ ಮೊದಲೇ ಅಸ್ಪಷ್ಟವಾಗಿ ಅರಿವಿರಬಹುದಾದ ಜೀವನದ ವಾಸ್ತವಗಳ ಅಭಿವ್ಯಕ್ತಿ ಪರಿಣಾಮಕಾರಿಯಾಗಿ ಬರುತ್ತದೆ.

ದುರಂತದ ನೆರಳಿನಲ್ಲಿರುವ ಊರಿನ ಶ್ರೀಮಂತ ಶ್ರೇಷ್ಠಿಗೆ ಶಾಸ್ತ್ರಿ ಹೇಳುವ ಮಾತು ನೋಡಿ (ಪು.೫೪) - "... ಸುಖ, ಸಂಪತ್ತು ನಮ್ಮ ಬೇರನ್ನ ಅಲುಗಿಸಿ ಅನಾಥರನ್ನಾಗಿ ಮಾಡೋ ಹಾಗೆ ಯಾವುದೂ ಮಾಡೋಲ್ಲ, ಜನರನ್ನು ತೊರೆದ ಮನುಷ್ಯ ಉಳಿಯೋಲ್ಲ; ಅವನ ಸಂಪತ್ತು ಅವನನ್ನು ಉಳಿಸೋಲ್ಲ"

ಪಕ್ಕದ ಮನೆಯ ನಂದ್ಯಪ್ಪನ ಸಂಸಾರ ಇದ್ದುದರಲ್ಲಿಯೇ ಸಂತೃಪ್ತರಾಗಿ ಇರುವುದನ್ನು ಕಂಡು, ಅದಾಗಲೇ ತನಗಿಂತ ಕೆಳ ಜಾತಿಯ ಮಂಜನ ಪ್ರೇಮದಲ್ಲಿ ಬಿದ್ದಿದ್ದ ಸಾವಂತ್ರಿ ಹೀಗೆ ಅಂದುಕೊಳ್ಳುತ್ತಾಳೆ (ಪು. ೧೧೮-೧೧೯) - "... ದಕ್ಕಿದ್ದನ್ನು ಅನುಭವಿಸುವುದು ಕೆಲವರ ಪಾಲಿಗಾದರೆ, ಇನ್ನು ಕೆಲವರು ಈ ಬದುಕಿನಿಂದ ದಕ್ಕಿಸಿಕೊಂಡು ಜೀವ ಉಳಿಸಿಕೊಳ್ಳಬೇಕಾಗುತ್ತದೆ".

ತನ್ನ ನೆರೆಮನೆಯ ಹುಡುಗಿ ಶಿವಿಯ ಅಕಾಲಿಕ ಮರಣದಿಂದ ಸಾವಂತ್ರಿ ತೀವ್ರ ಆಘಾತಕ್ಕೊಳಗಾಗುವ ಸನ್ನಿವೇಶ (ಪು. ೨೬೦) - "ನಾವು ಬಲ್ಲ ಯಾವುದೇ ವ್ಯಕ್ತಿ ಸತ್ತಾಗ ಜೀವಿಸುವ ನಮ್ಮನ್ನು ಪಾಪ ಪ್ರಜ್ಞೆ ಬೆನ್ನು ಹತ್ತುತ್ತದೆ; ನಮ್ಮ ಸಂತೋಷ, ತುಂಟತನ, ಸಣ್ಣ ಪುಟ್ಟ ತಪ್ಪುಗಳು ಎಲ್ಲದರೊಂದಿಗೆ ಬದುಕುವುದೇ ಸಣ್ಣತನವೆನ್ನಿಸುತ್ತದೆ; ಸಾವಿನ ಅಂಚಿನಲ್ಲಿಯೇ ಸಾಗುವ ಬದುಕಿನಲ್ಲಿ ಸುಖವೆನ್ನುವುದು ಎಂಥ ನಂಬಲಸಾಧ್ಯವಾದ ಸಾಧನ ಅನ್ನಿಸುತ್ತದೆ; ಸತ್ತ ವ್ಯಕ್ತಿಯ ಬದುಕಿಗೆ ಹಿತ ತರಲು ಸಾಧ್ಯವಿದ್ದೂ ನಮ್ಮ ಕರ್ತವ್ಯದಲ್ಲಿ ಚ್ಯುತಿಯಾಯಿತೋ ಅನ್ನಿಸುತ್ತದೆ".

ಕತೆಯ ಹರಿವನ್ನನುಸರಿಸಿ ಪ್ರೇಮದ ಬಗ್ಗೆ ಲೇಖಕರು ತಮಾಷೆಯಾಗಿ ನೀಡುವ ಕೆಲವು ವ್ಯಾಖ್ಯಾನಗಳು ಹೀಗಿವೆ-

(ಪು. ೩೧೦) - "ಪ್ರೇಮವೆನ್ನುವುದು ಈ ಜಗತ್ತಿನಲ್ಲಿ ಮಹತ್ತರ ತ್ಯಾಗಗಳಿಗೆ ಕಾರಣವಾಗಿರುವಂತೆಯೇ ಹಾಸ್ಯಾಸ್ಪದ ತಪ್ಪುಗಳಿಗೂ ದಡ್ಡತನಗಳಿಗೂ ಕಾರಣವಾಗಿದೆ; ಈ ಲೋಕಕ್ಕೆ ಬೇಡವಾದ ಆದರ್ಶವಾದಿಗಳಿಗೂ ಕಾರಣವಾಗಿದೆ."

(ಪು. ೩೨೬) - "ರಾವಣನಿಂದ ಹಿಡಿದು ಇಕ್ಬಾಲ್ ಸಾಹೇಬನವರೆಗೆ ಎಲ್ಲ ಪ್ರೇಮಿಗಳೂ ಪೆದ್ದರೇ- ಹೆತ್ತವರ ಹಾಗೆ, ಋಷಿಗಳ ಹಾಗೆ, ಪ್ರಕೃತಿಯ ಹಾಗೆ."

(ಪು. ೩೭೩) - "ಪ್ರೇಮ ಕೆಲವರಿಗೆ ಮಾತ್ರ ಬದಲಾಗದ, ಚಲಿಸದ ನಕ್ಷತ್ರವಾಗಿಯೂ ದಾರಿಕಾರರಿಗೆ ಮಾರ್ಗದರ್ಶಿಯಾಗಿಯೂ ಕಾಣಿಸಿದರೆ ಮತ್ತೆ ಕೆಲವರಿಗೆ ಅನ್ನ ಬಟ್ಟೆಯಂತೆ ಕೇವಲ ಬೇಕಾದ ವಸ್ತುವಾಗಿ ಕಾಣುತ್ತದೆ; ಬದಲಾಗುವುದು ಮಾತ್ರವಲ್ಲ, ಪ್ರೇಮಿಸಿದ ವ್ಯಕ್ತಿಯ ಬಗ್ಗೆ ತಾತ್ಸಾರವನ್ನೂ ಹುಟ್ಟಿಸುತ್ತದೆ".

ಒಟ್ಟಾರೆ, ಹಲವಾರು ಸಾಮಾನ್ಯ ಮನುಷ್ಯರ ಕ್ರಿಯೆಗಳು, ಅನಿಸಿಕೆಗಳನ್ನು ದಾಖಲಿಸುತ್ತಾ ಒಂದು ಹಳ್ಳಿಯ ಅತಿಸಾಮಾನ್ಯವೆನಿಸುವ ವಿದ್ಯಮಾನಗಳನ್ನು ತಮಾಷೆಯಾಗಿ ಹೇಳುತ್ತಲೇ ಸಮಾಜದ ಕೆಲ ಮೂಲಭೂತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ "ಮುಸ್ಸಂಜೆಯ ಕಥಾ ಪ್ರಸಂಗ" ಕೆಲವೆಡೆ ಪಾತ್ರಗಳು ತೆಗೆದುಕೊಳ್ಳುವ ಅನಿರೀಕ್ಷಿತ ತೀರ್ಮಾನಗಳ ಮೂಲಕ ಬದಲಾವಣೆಯತ್ತಲೂ ಬೆರಳು ಮಾಡುತ್ತದೆ. ಉದಾಹರಣೆಗೆ, ರಂಗವ್ವ ತನ್ನ ಮಗಳು ಸಾವಂತ್ರಿ ಬೇರೆ ಜಾತಿಯವನಾದ ಮಂಜನ ಜೊತೆ ಹೋದಾಗ ಊರವರ ಒತ್ತಡಕ್ಕೆ ಸಿಕ್ಕರೂ ಮಗಳ ನೆರವಿಗೆ ಬರುವ ತೀರ್ಮಾನ ತೆಗೆದುಕೊಳ್ಳುವುದು.

ಮೂವತ್ತೈದು ವರುಷಗಳ ನಂತರದಲ್ಲಿ ಈ ಕತೆಯು ನಮಗೆ ಅಂದಿನ ಜನ ಬದುಕನ್ನು ಭಾವಿಸಿದ, ಜೀವಿಸಿದ ಬಗೆಯನ್ನು ಅರಿಯುವುದನ್ನು ಸಾಧ್ಯವಾಗಿಸುತ್ತದೆ. ಹಾಗೆಯೇ ಮನುಷ್ಯ ಜೀವಿಯ ಬದುಕಿನ ಸಣ್ಣತನ, ದೊಡ್ಡತನ, ದುಷ್ಟತನ, ಹುಂಬತನ, ಶ್ರೇಷ್ಟತನ ಈ ಎಲ್ಲ ಸಾಧ್ಯತೆಗಳ ವಲಯವನ್ನೇ ತೆರೆದಿಡುತ್ತದೆ.

For more reviews, see:
https://srikannadi.blogspot.com/
Profile Image for Prasad.
15 reviews
March 30, 2020
There are some wonderful characters, each with their own motives. It does paint a wonderful picture of a village and its politics. Towards the end, its a window all the motives behind "groups". though it was written decades its ironic how its same as whats happening now. having said that the innumerable references to sex and affairs is an unnecessary distraction at times.
Profile Image for Punith.
7 reviews2 followers
August 23, 2018
Narration feels quite erratic and running around a love story and hookups, gets boring at times. Still paints a good picture of life in villages of Kumsi around Shivamogga in the 80s.
1 review
July 3, 2022
I don't know
This entire review has been hidden because of spoilers.
Displaying 1 - 8 of 8 reviews

Can't find what you're looking for?

Get help and learn more about the design.