ಈ ದಶಮಾನದ ಪುಸ್ತಕವೊಂದು ಎರಡನೇ ಓದಿಗೆ ಒಳಪಡುವಷ್ಟು ಆಸಕ್ತಿಕರವೂ ಮೊದಲ ಸಲದಷ್ಟೇ ಇಂಟೆನ್ಸ್ ರೀಡ್ ಆಗುವಷ್ಟು ಗಟ್ಟಿಯೂ ಆಗಿರುವುದು ಅಪರೂಪ. This is one such book. Sandhyaarani knows how to use her words to trigger emotions.
PS; not all men can digest this one 🙃
_______________
ಸಮಾಜವೊಂದರ ಆಧಾರವಾದ ವಿವಾಹ ಪದ್ಧತಿ, ಕುಟುಂಬ ವ್ಯವಸ್ಥೆ ಇವೆಲ್ಲವೂ ಹುಟ್ಟಿದಾರಭ್ಯ ಬದಲಾಗುತ್ತಲೇ ಬೆಳೆಯುತ್ತಲೇ ಬಂದ ವ್ಯವಸ್ಥೆಗಳು. ಏನೇ ಚೌಕಟ್ಟು, ನಿಯಮ ಅಂದ್ರೂ ಸಹ ಪ್ರತಿಯೊಬ್ರಿಗೂ ಅವರವರ ಸಂಸಾರ/ ವೈವಾಹಿಕ ಜೀವನ /ಸಾಂಗತ್ಯ ಅನ್ನೋದು ಟೈಲರ್ ಮೇಡ್ ಬಟ್ಟೆಯಂತೆ ಅವರವರ ಅಳತೆಗೆ ಅವಶ್ಯಕತೆಗೆ ಒಗ್ಗದ ಹೊರತು ರುಚಿಸದು. ಬಯಸಿದಂತ ಬಾಂಧವ್ಯಕ್ಕಾಗಿ ಹುಡುಕುತ್ತಾ ಕಳೆದುಹೋಗುತ್ತಾ ಕಂಡುಕೊಳ್ಳುತ್ತಾ ಸಾಗುವ ಬಹುಕಾಲ ನೆನಪಲ್ಲುಳಿಯೋ ಒಂದಷ್ಟು ಚಂದದ ಪಾತ್ರಗಳನ್ನೊಳಗೊಂಡ ಕಾದಂಬರಿ 'ಇಷ್ಟುಕಾಲ ಒಟ್ಟಿಗಿದ್ದು...'. ಇದೇ ಪಾಕದ (women finding themselves) ಸಿನಿಮಾಗಳೂ ಕಥೆಗಳೂ ಈಗಾಗಲೇ ಬಂದಿದ್ದರೂ ಈ ಕಾದಂಬರಿಯ ಸ್ಥಾನ ಬೇರೆಯೇ ಅನಿಸುವಷ್ಟು ಇಷ್ಟವಾಯ್ತು. ಇಷ್ಟವಾಗಿದ್ದು - *ಕಾದಂಬರಿ ವೈವಾಹಿಕ ವ್ಯವಸ್ಥೆಯ pros and cons ಸುತ್ತಲೂ ಸುತ್ತಿದರೂ ಬರೀ ಅಷ್ಟಕ್ಕೇ ಸೀಮಿತವಾಗದೆ ಪರ್ಯಾಯ ವ್ಯವಸ್ಥೆ, ಅದರ ಸಾಧಕ ಬಾಧಕಗಳನ್ನೂ ತೂಗಿ ನೋಡುವಂತೆ ಮಾಡುತ್ತದೆ. *ಗೌರಿ, ಅರುಂಧತಿ ಕಡೆಗೆ ಸರೋಜಿನಿಯೂ ಸೇರಿ ಯಾರೊಬ್ಬರೂ ಸ್ತ್ರೀ ಸ್ವಾತಂತ್ರ್ಯದ ಹೆಸರಿನಲ್ಲಿ ಪುರುಷ ದ್ವೇಷವನ್ನು ಅಡ್ವೊಕೇಟ್ ಮಾಡದಿರುವುದು. ರಾಮಚಂದ್ರನ ಉದಾತ್ತತೆ ಅವನೊಬ್ಬನದೇ, ರಾಜದೀಪನ ಪಕ್ವತೆ ಅವನೊಬ್ಬನದೇ, ನಿರಂಜನನ ವ್ಯಕ್ತಿತ್ವದ ಕೊರತೆಗಳು ಅವನೊಬ್ಬನದೇ, ರೆಡ್ಡಿಯ ಪುರುಷಾಹಂಕಾರ ಅವನೊಬ್ಬನದೇ ಆಗಿ ಉಳಿಯುತ್ತವೆ, ಇಡೀ ಸಮಾಜಕ್ಕೆ ಕನ್ನಡಿಯಾಗಲ್ಲ. *ನೋವುಂಡ ಸರೋಜಿನಿಗಾಗಲೀ, ಗೌರಿಗಾಗಲೀ ಓದುತ್ತಿರುವ ನಮಗಾಗಲೀ ನಿರಂಜನನ ಮೇಲೆ ದ್ವೇಷ ಬರುವಂತೆ ಬರೆಯುವ ಪ್ರಯತ್ನವನ್ನೇ ಲೇಖಕಿ ಮಾಡುವುದಿಲ್ಲ. ಇದು ಹೀಗಿದೆ - ಇವರು ಹೀಗಿದ್ದಾರೆ, ಹೇಗೆ ಸ್ವೀಕರಿಸುವುದೋ ಅದು ಪಾತ್ರಗಳಿಗೂ ಓದುಗರಿಗೂ ಬಿಟ್ಟದ್ದು ಎನ್ನುವಂತೆ ಸಾಗುವ ಕಥೆಯಲ್ಲಿ ಸರೋಜಿನಿ ದುರಂತ ನಾಯಕಿಯಾಗದೇ a self made person ಆಗಿ ನಮ್ಮ ಮನಸ್ಸಿಗಿಳಿಯುತ್ತಾಳೆ. * ಬಸಮ್ಮಜ್ಜಿ is so aweee * ಬಾಗೇಶ್ರೀಯವರ ಅತಿ ಚಂದದ ಭಾವಗೀತೆ 'ಒಮ್ಮೆ ಕದಡಿದ ಕೊಳವು...'ಅಲ್ಲಲ್ಲಿ ಕೋಟ್ ಮಾಡಿರುವ ರೀತಿ ಮತ್ತು ಕಡೆಯದಾಗಿ *ಲೇಖಕಿ ಕಥೆಯ ನಡುನಡುವೆ ನಮ್ಮೊಂದಿಗೆ ಸಂಭಾಷಿಸಲು ತಗೊಳ್ಳೋ ಬ್ರೇಕ್'ಗಳು ನಮ್ಮ ಓದಿನ spread breaking humps ಅನಿಸದೇ ಈ ಓದಿನ ಪಯಣದಲ್ಲಿ ನಾನೊಬ್ಬಳೇ ಇಲ್ಲ, ಲೇಖಕಿಯೂ ನನ್ನೊಂದಿಗೇ ಇದ್ದಾರೆ ಅನ್ನೋ ಬೆಚ್ಚನೆಯ ಭಾವ ಮೂಡಿಸಿ ನನಗಿಷ್ಟವಾಯ್ತು. ಕಥೆಗಾರರೇ ಹೀಗೆ ನಡುವಲ್ಲಿ ಬಂದುಹೋಗೋದನ್ನ (authorial interference ಅಂತಾರೆ ಅನ್ನೋ ವಿಷಯ ಗೆಳೆಯರಲ್ಲಿ ಕೇಳಿ ತಿಳಿದುಕೊಂಡದ್ದು) ಬೇರೆ ಒಂದೆರಡು ಕಾದಂಬರಿಗಳಲ್ಲಿ ಓದಿದ್ದೆನಾದ್ರೂ ಅಲ್ಲವು ಲೇಖಕರ ವಾಚಾಳಿತನ ಅನ್ನಿಸಿ ಕೋಪ ಬಂದಿದ್ದೇ ಹೆಚ್ಚು ಇಷ್ಟವಾಗದ್ದು ಅಥವಾ ನನಗೆ ಕನ್ವಿನ್ಸಾಗದ್ದು - *ಇನಾಯ ಮತ್ತು ರಫಿ ಶುದ್ಧಾತಿ ಶುದ್ಧ ಕಾಲ್ಪನಿಕ ಜೀವಿಗಳು ಅನ್ನಿಸ್ತಾರೆ. ಯಾವುದೋ ಫೇರಿಟೇಲಿನಿಂದ ನಮ್ಮ ಮೆಟ್ರೋಪಾಲಿಟನ್ ಜಗತ್ತಿಗೆ ಆಗಾಗ ಬಂದುಹೋಗೋ ದಂಪತಿಗಳು ಅನ್ನಿಸ್ತಾರೆ. * ನಿರಂಜನ, ರೆಡ್ಡಿ ಸಹಜ ಅನ್ನಿಸಿದಷ್ಟು ರಾಮಚಂದ್ರ, ರಫಿ, ರಾಜದೀಪ್ ಸಹಜ ಅನ್ನಿಸುವುದಿಲ್ಲ..ಇಂತವ್ರೆಲ್ಲ ಕಥೆಗಳಾಚೆ ಎಲ್ಲಿರ್ತಾರೆ ಅನ್ನಿಸುವುದೂ ಕಡೆಯವರೆಗೂ ಒಂದು ಅನುಮಾನದ ಕಣ್ಣಲ್ಲೇ ಅವರನ್ನ ನೋಡುವಂತಾಗುವುದೂ says something about the society we are living in and not about the novel.
Four more shots ನೋಡಿ ಬರೆದಿದ್ದಾರೋ ಅನಿಸಿತು. patriarchy ,male ego ಸಂಬಂಧಗಳ ನಿಭಾಯಿಸುವಿಕೆ ಇತ್ಯಾದಿಗಳ ಸುತ್ತ ಕತೆ ಸುತ್ತುತ್ತದೆ. ಪಾತ್ರಗಳ ಆಯ್ಕೆಯಲ್ಲಿ ಜಾತ್ಯಾತೀತತೆ ಮೆರೆದಿದ್ದಾರೆ. ನಮ್ಮ ಪುಣ್ಯಕ್ಕೆ lgbtq ಪಾತ್ರ ಒಂದು ಇಲ್ಲ ಅಷ್ಟೇ.
ಚೆನ್ನಾಗಿದೆ ಹಾಗೂ ಚೆನ್ನಾಗಿಲ್ಲ ಎರಡು ಒಟ್ಟಿಗೆ ಅನ್ಸಿಸಿದ ಪುಸ್ತಕ. ( I mean its hard for me to explain why both at the same time).
ಸರೋಜಿನಿ ಗೌರಿ ಇನಾಯ ರಾಮ್ ಅರು ಸುತ್ತ ನಡೆಯುವ ಕಥೆ. ಮದುವೆ, relationships, ಬೆಂಗಳೂರಿನ ಈಗಿನ ಜೀವನ ಶೈಲಿ ಪುಸ್ತಕದ ತಿರುಳು. ಕಥೆ ಮಧ್ಯೆ ಮಧ್ಯೆ author ಬಂದು ಹೋಗೋ ಭಾಗ ನಂಗೆ ಇಷ್ಟ ಆಗ್ಲಿಲ್ಲ.
ಕಥೆಗೆ ಒಂದು finite end ಕೊಡದೆ, ಕಥೆ ಇಲ್ಲಿಗೇ end ಆಗ್ಬೇಕು ಅನ್ನೋ ನಿಯಮ ಇಲ್ಲ ಅಂದ ರೀತಿ ಇಷ್ಟ ಆಯ್ತು.
ಪುಸ್ತಕದ ಒಂದು line: ಬದುಕೆಂದರೆ ಹೊಸ ಪ್ರಶ್ನೆ, ಹೊಸ ಉತ್ತರ, ಹೊಸ ಸಮಸ್ಯೆ, ಹೊಸ ಸವಾಲು ಮತ್ತು ಅವುಗಳ ಪರಿಹಾರದ ಹುಡುಕಾಟ!
“ಇಷ್ಟುಕಾಲ ಒಟ್ಟಿಗಿದ್ದು” ಇದೊಂದು ಸ್ತ್ರೀಕೇಂದ್ರಿತ ಕಾದಂಬರಿ. ಹೆಣ್ಣಿನ ಸೂಕ್ಷ್ಮಸಂವೇದನೆಗಳನ್ನ, ತಲ್ಲಣಗಳನ್ನ, ಒಳತೋಟಿಗಳನ್ನ ಇಲ್ಲಿ ಕಾಣಬಹುದು. ಈ ಕಾದಂಬರಿ ಇಷ್ಟವಾಯ್ತು ಅಂತ ಹೇಳಲಾರೆ, ಏಕೆಂದರೆ ಇಷ್ಟವಾಗದಿರುವ ಕೆಲವು ಅಂಶಗಳೂ ಇವೆ.
ಪ್ರೀತಿಯ ಅವಶ್ಯಕತೆ , ಕುಟುಂಬದ ಪ್ರಾಮುಖ್ಯತೆ , ದಾಂಪತ್ಯದ ವಾಸ್ತವಿಕತೆಯನ್ನ ಮತ್ತು ಕಾಲ ಕಳೆದಂತೆ ಅವು ಬದಲಾಗುವ ಪರಿ ಈ ಕಾದಂಬರಿಯಲ್ಲಿ ನನಗೆ ಇಷ್ಟವಾದ ಅಂಶಗಳು. ಕೊನೆಯವರೆಗೂ ಓದಿಸಿಕೊಂಡು ಹೋಗಿದ್ದು ಸಂಧ್ಯಾರಾಣಿಯವರ ಭಾವಪೂರ್ಣ ಬರವಣಿಗೆ, ಪಾತ್ರಗಳ ಭಾವ ಮತ್ತು ಮಾತುಗಳಲ್ಲಿ ಮಾರ್ದವತೆ ತುಂಬಿತ್ತು. ಕಥೆಯ ಮಧ್ಯೆ ಲೇಖಕರು ಅಲ್ಲಲ್ಲಿ ಬಂದು ಈ ಕಾದಂಬರಿಯ ಬರೆಯುವಾಗ ತಮಗಾಗುತ್ತಿರುವ ಅನುಭವಗಳನ್ನ ಭಾವನೆಗಳನ್ನ ಹೊರಹಾಕಿದ್ದು ಇಷ್ಟವಾಯ್ತು.
ಕಾದಂಬರಿಯಲ್ಲಿ ಒಳ್ಳೊಳ್ಳೆ “ಮೊಮೆಂಟ್ಸ್” ಇದ್ದರೂ ಸಹ, ನನ್ನನ್ನ ಕನ್ಸಿಸ್ಟನ್ಟ್ ಆಗಿ ಎಂಗೇಜಿಂಗ್ ಆಗಿ ಇಡಲಿಲ್ಲ, ಪಾತ್ರಗಳ ನಡುವೆ ನೆಡೆಯುತ್ತಿರುವ ಸಂಭಾಷಣೆ ಯಾವ್ದೋ ದೊಡ್ಡ ಹಂತ ತಲುಪುತ್ತೆ, ದೊಡ್ಡ ನಿರ್ಧಾರ ತಗೊಳುತ್ತೆ, ಇಲ್ಲ ಇಲ್ಲೊಂದು ದೊಡ್ಡ ತಿರುವೊಂದಿದೆ ಅಂದುಕೊಳ್ಳುತ್ತಿರುವಾಗಲೇ ಆ ಸನ್ನಿವೇಶವೇ ಅಲ್ಲಿಗೆ ತುಂಡಾಗಿ ಓದುಗರನ್ನ ಬೇರೆ ಪಾತ್ರದ ಪರಿಧಿಗೆ ಎಳೆದೊಯುತ್ತೆ. ಒಂದೆರಡು ಪುರುಷ ಪಾತ್ರಗಳಿದ್ದರೂ ಆ ಪಾತ್ರಗಳಿಗೆ ಅಷ್ಟು ಸ್ಪೇಸ್ ಇರಲಿಲ್ಲ, ಅವರನ್ನ ದೂರಲಿಲ್ಲ ಆದರೆ ಅಸಹಾಯಕರನ್ನಾಗಿ ಮಾಡ್ಬಿಟ್ರಾ ಅನ್ನಿಸ್ತು.
ಪುಸ್ತಕ: ಇಷ್ಟು ಕಾಲ ಒಟ್ಟಿಗಿದ್ದು ಲೇಖಕಿ: ಸಂಧ್ಯಾರಾಣಿ ಪ್ರಕಾಶನ: ಸಾವಣ್ಣ ಪ್ರಕಾರ: ಕಾದಂಬರಿ ಪುಟ:212 ಬೆಲೆ: 250/
ಪ್ರೀತಿ ಪ್ರೇಮದ ಬಗ್ಗೆ ಕಾದಂಬರಿಗಳನ್ನ ಓದಿ ವರ್ಷಗಳೇ ಆಯಿತು. ಈ ವರ್ಷ ಒಂದೇ ಲೇಖಕಿಯ ಎರಡು ಪುಸ್ತಕ ಒಂದಾದಮೇಲೆ ಒಂದು ಓದಿದ್ದು ಇದೆ ಮೊದಲು. ಅದಕ್ಕೆ ಕಾರಣ ಅವರ ಬರವಣಿಗೆಯ ಶೈಲಿ ಮತ್ತು ಓದುಗರನ್ನ ಬಿಗಿಯಾಗಿ ಕಟ್ಟಿ ಕೂರಿಸುವ ಚಾಣಕ್ಯತನ.
ಎಷ್ಟೋ ಪ್ರೇಮ ಕಾದಂಬರಿ ಓದಿದ್ದ ನಾನು ಬೆರಗಾದದ್ದು ಈ ಕಾದಂಬರಿಯ ವಿಶಿಷ್ಟ ವಿಷಯಕ್ಕೆ. ಪೂರ್ತಿ ಪ್ರೇಮ ಕಾದಂಬರಿಯೂ ಅಲ್ಲದ ಈ ಪುಸ್ತಕ ಬದುಕಿನ ಎಷ್ಟೋ ಅಂಶವನ್ನ ಒಮ್ಮೆಲೇ ನಮ್ಮ ಮುಂದೆ ಇಟ್ಟು ಜ್ಞಾನೋದಯ ಮಾಡಿಸುತ್ತದೆ. ಒಂದಷ್ಟು ಪಾತ್ರಗಳನ್ನ ಇಟ್ಟುಕೊಂಡು ಅದರ ಜೊತೆ ಕತೆ ಹೇಳುವ ಲೇಖಕಿಗೆ ನನ್ನ hugs.
HSV ಅವರು ಯಾವ ಘಳಿಗೆಯಲ್ಲಿ "ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ, ಅರಿತೆವೆವು ನಾವು ನಮ್ಮ ಅಂತರಾತ್ಮವ?" ಅಂತ ಭಾವಗೀತೆನಾ ಬರುದ್ರೋ ಅಷ್ಟು ಕಾಲದವರೆಗೂ ಈ ಪುಸ್ತಕ ನನ್ನ ಅಂತಃಕರಣವನ್ನ ಮೌನವಾಗಿ ಹಿಂಡಿತು. ಕಾರಣ? ಪುಸ್ತಕದಲ್ಲಿ ಇದ್ದ ಎರಡು ಪಾತ್ರಗಳು ಸರೋಜಿನಿ ಮತ್ತು ಇನಾಯ.
ಕಾದಂಬರಿಯ ಶುರುವಿನಲ್ಲಿ ಲೇಖಕಿ, ಪಾತ್ರಗಳು, ಕತೆಯ ವಿಸ್ತರಣೆಯ ಜೊತೆ ಓದುಗರನ್ನ ತುಂಬ Active Modeನಲ್ಲಿ ಇರಿಸಿದರೆ, ಕತೆ ಹೋಗ್ತಾ ಹೋಗ್ತಾ ಒಂದಷ್ಟು ವಿಷಯದ ಬಗ್ಗೆ ತುಂಬ ಮನದಟ್ಟಾಗಿ ಓದುಗರಿಗೆ ಅರ್ಥ ಮಾಡಿಸುತ್ತೆ. especially when it comes to that open marriage topic ತುಂಬ thoughts ನನ್ನ provoke ಮಾಡಿತು. ಇನ್ನು 120 ಪುಟಗಳು ಆದ ಮೇಲೆ ನಿಜವಾದ ಕಿಕ್ ಕಾದಂಬರಿಗೆ. Interesting ಆದಾಗ ಸಂಧ್ಯಾ ಮೇಡಂ ಅವರ ಪುಟ್ಟ ವಿರಾಮದ ಪುಟ ನನಗೆ ಕೋಪ ಭರಿಸಿತ್ತು (hahaha sorry mam) ಎಲ್ಲೂ ಕೂಡ ಬೋರ್ ಆಗದೆ 120 ಪುಟದಿಂದ ಕೊನೆವರೆಗೂ ನಿರಂತರ ಓದು, ಓದು ಮುಗಿದ ಮೇಲೆ ನಾನು ಸರೂ ನಾ? ಇನಾಯ ನಾ? ಎಂಬ ಗೊಂದಲ, ಕಾದಂಬರಿಯ ಅಮಲಿನಲ್ಲಿ ಜಾರಬಂಡಿಯಿಂದ ಬಿದ್ದರೂ ಅಳಲಾಗದ ಮೌನ. ಹೃದಯದಲ್ಲಿ ಭಾರ, ಮೌನ, ಯೋಚನೆ ಹೀಗೆ ನನ್ನನ್ನೇ ಹಿಂಡಿತು.
ಆದರೂ ಸರೂ ಖುಷಿಯಾಗಿ ಇದ್ದಾಳಾ?????? ಇನಾಯ ಅವಳ ಗಂಡನ ಜೊತೆ ಸರಿ ಹೋದಳಾ????? ಗೌರಿಯ ಮದುವೆ ಆಯ್ತಾ????? ರಾಮಚಂದ್ರ ಮತ್ತು ಅಭಿ ಏನಾದ್ರು????? ರಾಜದೀಪ್ ಎಲ್ಲಿದ್ದಾನೆ????? ಆರೂ ಕತೆ?????? ಮತ್ತು ನಿರಂಜನ ಮತ್ತೆ ಪತ್ರ ಬರೆದನಾ?????? oh god!!!!! ನೆನ್ನೆ ಮಧ್ಯಾಹ್ನದಿಂದ ತಲೇಲಿ ಇವೆ ಯೋಚನೆಗಳು.
Sandhya Rani ಮೇಡಂ please ಇದ್ದಕ್ಕಾದರೂ ಭಾಗ 2 ಬರಲಿ.
ನನ್ನಿಷ್ಟದ ಸಾಲುಗಳು:
1. ಯಾರೇ ಆಗಲಿ, ಅವರು ಎಷ್ಟೇ ಪ್ರೀತಿಪಾತ್ರರಾಗಲಿ ನಿನ್ನನ್ನ ನೀನು ಕಳ್ಕೋಬಾರ್ದು.
2. ಹೆಚ್ಚು ಹತ್ತಿರವಿದ್ದಾಗಲೇ ಅಲ್ಲವೇ ಗಾಯ ಹೆಚ್ಚು ಆಳವಾಗುವುದು? ಇಡೀ ಜಗತ್ತಿಗೆ ನಾವು ಎದುರಾಬದುರಾ ನಿಂತು, ನೋಡುತ್ತಾ, ಗಮನಿಸುತ್ತಾ ಹೋರಾಡುತ್ತೇವೆ.
3. ಒಬ್ಬ ಗಂಡು ಮಾಡಿದ ಅಪಮಾನವನ್ನು, ಮತ್ತೊಬ್ಬ ಗಂಡು ಮಾತ್ರ ಕಳೆಯಲು ಸಾಧ್ಯ. ಒಂಥರಾ ಸಮಾಧಾನ.
4. ಪ್ರೀತಿ ಅಷ್ಟು ಸುಲಭಕ್ಕೆ ಸಾಯಲ್ಲ ಮಗಳೇ, ರೂಪ ಬದಲಾಯಿಸುತ್ತೆ.
5. ದೂರಾದಾಗಲೇ, ದೂರ ಇದ್ದಾಗಲೇ ಪಾತ್ರಗಳು, ವ್ಯಕ್ತಿಗಳು, ಅವರ ಗುಣದೋಷಗಳೆರಡರ ಜೊತೆಯಲ್ಲೂ ಕಾಣಲು ಸಾಧ್ಯ. ಹತ್ತಿರವಿದ್ದಾಗ ಇಡಿಯಾಗಿ ಕಾಣದ ದೃಷ್ಟಿದೋಷವನ್ನು ದೂರದಿಂದಲೇ ನಿವಾರಿಸಿಕೊಳ್ಳಬೇಕು.
6. ನವಿಲು ಬೇಕೆಂದರೆ, ನಾವೇ ನವಿಲಾಗಬೇಕು.
7. ಕೆಲವು ರೂಢಿಗಳನ್ನು ಕಳಚಿಕೊಳ್ಳುವುದು ಅಷ್ಟು ಸುಲಭವಲ್ಲ. ಹಣೆಯ ಮೇಲೆ ಒತ್ತಿ ಹಿಡಿದ ನಾಣ್ಯವನ್ನು ತೆಗೆದುಬಿಟ್ಟರೂ ಸುಮಾರು ಕಾಲ ಅದು ಅಲ್ಲೇ ಇದೆ ಅನ್ನಿಸುತ್ತಲೇ ಇರುತ್ತದೆ.
8. ಸಂಬಂಧವೊಂದು ಕೈಜಾರಿದಾಗ ಮೊಟ್ಟಮೊದಲು ಮುರಿಯುವುದು ನಮ್ಮ ಆತ್ಮವಿಶ್ವಾಸ. ನಮ್ಮ ಬಗೆಗಿನ ನಮ್ಮ ನಂಬಿಕೆಯೇ ಕುಸಿದುಹೋಗುತ್ತದೆ.
9. ಇಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಶಾಪಗ್ರಸ್ಥರೇ. ಆದರೆ ಪ್ರತಿ ಶಾಪಕ್ಕೂ ಒಂದು ಪರಿಹಾರ ಇರುತ್ತೆ. ಬಂದ ಶಾಪಗಳನ್ನು ಎದುರಿಸಬೇಕು, ನಿವಾರಿಸಿಕೊಳ್ಳಬೇಕು, ಆಗಲಿಲ್ಲ ಅಂದರೆ ಒಪ್ಪಿಕೊಂಡು ಬದುಕಬೇಕು. ಅಷ್ಟೇ ಬದುಕು. ನಿಜವಾದ ಕೆಡುಕು ಶಾಪ ಇರೋದಿಲ್ಲ ಮಗಳೇ, ಶಾಪ ಇದೆ ಎಂದು ಕೈಚಲ್ಲಿ ಕೂರುವುದು ಕೆಡುಕು.