What do you think?

ಸಾವು
ಅವನು ಕೊನೆಗೆ ಬರುತ್ತಾನೆ. ಹೊರಡು ಅನ್ನುತ್ತಾನೆ. ನಾವೆಲ್ಲ ಎದ್ದು ಹೊರಡುತ್ತೇವೆ, ಅಲ್ಲಿಗೆ ಆಟ ಮುಗಿಯುತ್ತದೆ. ಮುಂದೇನು ಅನ್ನುವುದು ಯಾರಿಗೂ ಗೊತ್ತಿಲ್ಲ. ನಾವು ಭೇಟಿಯಾಗುವ ಕೊನೆಯ ಗಿರಾಕಿ ಸಾವು. ಅದು ನಾವು ಕೊಟ್ಟ ಕೊನೆಯ ಅಪಾಯಿಂಟ್‌ಮೆಂಟ್. ಏನೇ ಮಾಡಿದರೂ ಅದು ರದ್ದಾಗದೇ ಇರುವ ಮುಖಾಮುಖಿ. ಕೊನೆಗೂ ಉಳಿಯುವ ಗೆಳೆಯ, ಬಂದೇ ಬರುವ ಅತಿಥಿ, ಕರೆದುಕೊಂಡೇ ಹೋಗುವ ಸಾಲಗಾರ, ತಪ್ಪಿಸಿಕೊಳ್ಳಲಿಕ್ಕೆ ಅವಕಾಶ ಕೊಡದ ಚಾಣಾಕ್ಷ ಪತ್ತೇದಾರ, ಎಲ್ಲ ನೋವನ್ನೂ ಕೊನೆಗಾಣಿಸುವ ವೈದ್ಯ, ನಮ್ಮ ಹುಟ್ಟಿನೊಂದಿಗೆ ನಮ್ಮೊಳಗೇ ಹುಟ್ಟುವ ಆತ್ಮಬಂಧು- ಸಾವು. ಗರುಡ ಪುರಾಣ, ಉಪನಿಷತ್ತು, ಪುರಾಣದ ಕತೆಗಳೆಲ್ಲ ಸಾವಿನ ಚಿಂತನೆ ನಡೆಸಿವೆ. ಸಾವಿನ ನಂತರ ಏನು, ಪುನರ್ಜನ್ಮ ಇದೆಯೇ ಎಂದು ಹುಡುಕಾಡಿವೆ. ಕವಿಗಳೂ, ಕತೆಗಾರರೂ, ಚಿಂತಕರೂ, ಅಧ್ಯಾತ್ಮ ಬಲ್ಲವರೂ ಸಾವಿನ ಬೆನ್ನಟ್ಟಿ ಹೋಗಿದ್ದಾರೆ. ನಶ್ವರವಾದ ಬದುಕು, ಅಮರತ್ವದ ಆಶೆ ಮತ್ತು ಸಾವಿನ ಭಯ ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ. ಈ ಪುಸ್ತಕದಲ್ಲಿ ಸಾವನ್ನು ಎಲ್ಲಾ ಮಗ್ಗಲುಗಳಿಂದ ಸ್ಪರ್ಶಿಸಲಾಗಿದೆ. ಬದುಕುತ್ತಿದ್ದೇನೆ ಅಂದರೆ ಸಾಯುತ್ತಿದ್ದೇನೆ ಅಂತಲೇ ಅರ್ಥ. ಒಂದು ದಿನ ಬದುಕಿದರೆ, ನಮ್ಮ ಬದುಕಿನಿಂದ ಒಂದು ದಿನ ಕಳೆದುಹೋದ ಹಾಗೆ. ಎಲ್ಲ ದಿನಗಳೂ ಮುಗಿದ ನಂತರ ಆ ದಿನ ಬರುತ್ತದೆ. ಹಕ್ಕಿ ಹಾರಿಹೋಗುತ್ತದೆ. ಗಿಣಿಯು ಪಂಜರದೊಳಿಲ್ಲ ಅನ್ನುವುದು ಗೊತ್ತಾಗುತ್ತದೆ. ಆದರೆ ಆ ಗಿಣಿ ಮತ್ತೊಂದು ಪಂಜರವನ್ನು ಹುಡುಕಿಕೊಂಡು ಹೊರಡುತ್ತದೆಯೋ ಸ್ವಚ್ಛಂದವಾಗಿ ಹಾರಾಡುತ್ತಲೇ ಇರಲಿಕ್ಕೆ ಬಯಸುತ್ತದೆಯೋ ಗೊತ್ತಿಲ್ಲ. ಹುಟ್ಟಿನ ಜತೆಗೇ ಹುಟ್ಟುವ ಗುಟ್ಟು ಸಾವು. ಆ ಗುಟ್ಟಿನ ಕುರಿತು ಈ ಪುಸ್ತಕ.
240 pages, Paperback
Published January 1, 2022
About the author
ಜೋಗಿ | Jogi
79 books47 followersJogi Girish Rao Hatwar
ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
WikiPage- https://kn.wikipedia.org/s/pyg
Facebook Profile- facebook.com/girish.hatwar

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 4 of 4 reviews
March 20, 2023
ಒಂದೇ ಹೆಸರಿನ ಎರಡು ಪುಸ್ತಕ back to back ಓದಿದೆ. ಕೆಲ ಸಾಲುಗಳು, ಪುರಾಣದಿಂದ ಆಯ್ತುಕೊಂಡ ಭಾಗಗಳು ಎರಡರಲ್ಲೂ ಇದ್ದು ಓದುತ್ತಿರುವುದು ಯಾವ ಪುಸ್ತಕವಪ್ಪ ಅಂತ ಗೊಂದಲ ಆಗಿದ್ದಿದೆ.
ಜೋಗಿಯವರು ಬರೆದಿರುವ 'ಸಾವು' ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯ ಬರೆಯುವ ಅಂದ್ರೆಏಏಏ.. I don't knowwww man.. ಪಳಗಿದ ಸಂಗೀತಗಾರನ ಅಳುವೂ ಸುಶ್ರಾವ್ಯ ಅಂತೆ. ಜೋಗಿ ಏನೇ ಬರೆದರೂ ಓದಲಾರದಂತೆ ಅಂತೂ ಇರುವುದಿಲ್ಲ. ಪ್ರತೀ ಹತ್ತು ಸಾಲಿಗೊಂದು ಅಡಿಗೆರೆ ಎಳೆದಿಟ್ಟು ಪದೆಪದೇ ಓದಬಲ್ಲಂಥ ಕೊಟೇಷನ್ ಸಾಲುಗಳು, ಜೋಗಿಯವರ ಎಂದಿನ ಬರಹಶೈಲಿ plus points.
ಮುಖಪುಟ, ಪ್ರತೀಪುಟಕ್ಕೂ ಇರೋ ಚಿತ್ತಾರದ ಬ್ರಾಕೆಟ್ ತುಂಬ ಚೆಂದ ಇದೆ. ಆದ್ರೆ horrible binding. ಎರಡು ಸಾರಿ ಆಚೀಚೆ ಮಾಡೋದ್ರಲ್ಲೇ ಪುಟಗಳೆಲ್ಲ ಕಿತ್ತು ಕೈಗೆ ಬರ್ತಿವೆ. that's a major minus point. ಅದರ ಹೊರತಾಗಿ ಹೇಳುವುದಾದರೆ ಒಂದೇ ವಿಚಾರದ ಬಗ್ಗೆ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಮಾತನಾಡಿದರೇ ಬೋರಾಗಿ ಆಕಳಿಸುವ ನಾನು ಒಂದು ವಿಷಯದ ಸುತ್ತ ಬರೆದಿರುವ ಲೇಖನಮಾಲೆಯ ಪುಸ್ತಕ ಇದು ಅಂತ ಗೊತ್ತಿದ್ದೂ ಖರೀದಿಸಿದ್ದು, ಓದಿದ್ದು ತಪ್ಪಾಯ್ತೇನೋ.. Somewhat disappointed by the book. Not one of Jogi's finest in my opinion.
2.5 stars from me

May 31, 2023
ಸಾವಿನ ವಿಷಯದ ಬಗೆಗಿನ ಅಂಕಣ ಬರಹಗಳನ್ನು ಒಟ್ಟು ಸಂಗ್ರಹಿಸಿದ ಕೃತಿ ಎನಿಸುತ್ತದೆ. Dark theme printing of the book is good, ಪ್ರತಿ ಲೇಖನ / ಅಧ್ಯಾಯದ ಶುರುವಲ್ಲಿನ quotes ಸಂಗ್ರಹ ಯೋಗ್ಯ. ಕೆಲವು ವಿಷಯಗಳು ಪುನರಾವರ್ತಿತ.
P. S. ನಾನು ಕೊಂಡ ಪುಸ್ತಕದಲ್ಲಿ ಕೆಲವು ಪುಟಗಳು blank ಪ್ರಿಂಟ್ ಇದ್ದವು, ಪುಸ್ತಕ ತೆರೆದು ನೋಡಿ ಕೊಳ್ಳುವುದು ಉತ್ತಮ 😉
P. S. ನಾನು ಕೊಂಡ ಪುಸ್ತಕದಲ್ಲಿ ಕೆಲವು ಪುಟಗಳು blank ಪ್ರಿಂಟ್ ಇದ್ದವು, ಪುಸ್ತಕ ತೆರೆದು ನೋಡಿ ಕೊಳ್ಳುವುದು ಉತ್ತಮ 😉
October 2, 2025
good one 👍
April 16, 2024
ಪೂರ್ತಿ ಓದಿದ ಮೇಲೆ ಉಳಿದದ್ದು ಬರೀ ನಿರಾಸೆ. ಜೋಗಿಯವರ ಯಾವುದೇ ಬರಹ ಓದಿ ಹೇಗೆ ಅನಿಸಿದ್ದು ಇದೇ ಮೊದಲು. ತುಂಬಾ ವರ್ಷಗಳ ಕಾಲ ಹಲವು ಪುಸ್ತಕಗಳು ಹಾಗು ಅಂತರ್ಜಾಲವನ್ನು ಕೆದಕಿ ಹುಡುಕಿ ತೆಗೆದ ಕೆಲವು ಸ್ವಾರಸ್ಯಕರ ಅಂಶಗಳ ಒಂದು ನೋಟ್ಸ್ ಎಂದು ಹೇಳಬಹುದು ಅಷ್ಟೇ.
Displaying 1 - 4 of 4 reviews