I read this e-book at one of my non-reader friend's request to tell her the gist of the book in my mother tongue Kannada.
Pasting here my response to her..in Kannada.
ಈ ಪುಸ್ತಕ basically high school, college ಗಳಲ್ಲಿ ಹಿಂದೂ ಧರ್ಮವನ್ನು ಒಂದು ವಿಷಯವಾಗಿ ಓದುವವರಿಗೆ ಪಠ್ಯವಾಗಿ ಅಳವಡಿಸುವ ರೀತಿಯಲ್ಲಿ ರಚಿಸಲಾಗಿದೆ. ಹಾಗಾಗಿ ಅದೇ ಧರ್ಮದಲ್ಲಿ ಹುಟ್ಟಿ ಅದರ ಬಗ್ಗೆ ಕೇಳಿ, ಓದಿ, ನೋಡಿ, ಆಚರಿಸಿ, ಜೀವಿಸಿ ತಿಳಿದಿರುವ ನಮಗೆ, ವಿಶೇಷವಾಗಿ ಏನೂ ತೋರುವುದಿಲ್ಲ.
ಪುಸ್ತಕದಲ್ಲಿ ಹಿಂದೂ ಧರ್ಮದ ಮೂಲಭೂತ ವಿಚಾರಗಳು, ಶಾಸ್ತ್ರಗಳು, ಆಚರಣೆಗಳನ್ನ ವೇದ, ಭಗವದ್ಗೀತೆ, ಪುರಾಣಗಳ ಆಧಾರದ ಮೇಲೆ ಬಹಳ ಸರಳವಾಗಿ, ಸಂಕ್ಷಿಪ್ತವಾಗಿ ಮೂರು ಭಾಗಗಳಾಗಿ ವಿಂಗಡಿಸಿ ವಿವರಿಸಲಾಗಿದೆ.
ಪುಸ್ತಕದ ಮೊದಲನೇ ಭಾಗದಲ್ಲಿ ವೇದಗಳು, ಅವುಗಳು ತಲೆತಲಾಂತರದಿಂದ ಹರಿದುಬಂದ ರೀತಿ (ಶ್ರುತಿ, ಸ್ಮೃತಿ), ಒಬ್ಬನೇ ಭಗವಂತ, ಅವನ ಬಹು ರೂಪಗಳು, ಅವನ ಸೃಷ್ಟಿ, ಜೀವಾತ್ಮ-ಪರಮಾತ್ಮನ ಸಂಬಂಧ, ಜೀವಾತ್ಮದ ಕರ್ಮ, ಜನಮ- ಮರಣ ಚಕ್ರ, ತ್ರೈಲೋಕಗಳು ಹೀಗೆ ಮೂಲಭೂತ ವಿಚಾರಗಳನ್ನ ವಿವರಿಸಲಾಗಿದೆ.
ಎರಡನೇ ಭಾಗದಲ್ಲಿ ಆ ಮೂಲಭೂತ ವಿಚಾರಗಳ ಆಧಾರದ ಮೇಲೆ ಪ್ರತಿಯೊಂದು ಮಾನವ ಜೀವಿ ಉನ್ನತವಾಗಿ ಬಾಳುವ ಹಾಗೆ ಹಿಂದೂ ಧರ್ಮದಲ್ಲಿ ಸಂಪ್ರದಾಯ, ಆಚರಣೆಗಳಾಗಿ ಅಳವಡಿಸಿದ ರೀತಿಯನ್ನು (ಸಂಸ್ಕಾರಗಳು, ಷೋಡಶ ಕರ್ಮಗಳು, ಭಗವತಾರಾಧನೆ, ಮಾನವ ಜನ್ಮದ ನಾಲ್ಕು ಆಶ್ರಮಗಳು, ವರ್ಣಾಶ್ರಮ..) ವಿವರಿಸಲಾಗಿದೆ.
ಮೂರನೇ ಭಾಗದಲ್ಲಿ ನೈತಿಕತೆಯ ಪಾಠ ಹೇಳಲಾಗಿದೆ. ಸರಿ -ತಪ್ಪು, ಸದ್ಗುಣ-ದುರ್ಗುಣ, ಅದರ ಪರಿಣಾಮಗಳು, ಭಾವನೆಗಳ ಸಂತುಲನೆ, ಸಾಂದರ್ಭಿಕ ನಡುವಳಿಕೆ, ಹಿರಿಯರು, ಕಿರಿಯರು ಮತ್ತು ಸರೀಕರ ಜೊತೆಗಿನ ವ್ಯವಹಾರ ಹೇಗಿರಬೇಕು... ಹೀಗೆ ಒಬ್ಬ ಉತ್ತಮ ಜೀವಿಯ ನಡುವಳಿಕೆ ಹೇಗಿರಬೇಕೆಂದು ಮಾರ್ಗದರ್ಶನ ರಾಮಾಯಣ, ಮಹಾಭಾರತದ ಮತ್ತು ಹಲವು ಪುರಾಣಗಲ್ಲಿ ಬರುವ ಸಣ್ಣ ಸಣ್ಣ ಪ್ರಸಂಗಗಳ ಉದಾಹರಣೆಯೊಂದಿಗೆ ನೀಡಲಾಗಿದೆ.
ಒಟ್ಟಿನಲ್ಲಿ ಅನ್ಯ ಧರ್ಮೀಯರು, ಪರಕೀಯರು ಆಸಕ್ತಿ ಇದ್ದರೆ, ಸುಲಭವಾಗಿ ಹಿಂದೂ ಧರ್ಮದ ಸಾರ ತಿಳಿಯಲು ಈ ಪುಸ್ತಕ ಸಹಾಯವಾಗುತ್ತದೆ. ವಿಪರ್ಯಾಸವೆಂದರೆ,
ಕನ್ನಡ, ಸಂಸ್ಕೃತ ಅಥವಾ ಇನ್ಯಾವುದೇ ಭಾರತೀಯ ಭಾಷಾಜ್ಞಾನ ಇಲ್ಲದ, ಹಿರಿಯರು ಹೇಳುವ ಆಚಾರ, ವಿಚಾರಗಳನ್ನ ತಮ್ಮ ಸ್ವಂತ ಹಿರಿಯರ ಬಾಯಲ್ಲಿ- ಅನುಭವದಲ್ಲಿ ಕೇಳಿ ಅರಿಯಲು ಸಮಯ, ಮನಸ್ಸು, ತಾಳ್ಮೆ ಇಲ್ಲದ ಆದರೆ ಆ ಬಗ್ಗೆ ಓದಿ ತಿಳಿಯಲು ಆಸಕ್ತಿ ಇರುವ ಇಂದಿನ ನಮ್ಮ ಭಾರತೀಯ ಹಿಂದೂ ಯುವ ಪೀಳಿಗೆಗೆ ಕೂಡ ಸುಲಭದಲ್ಲಿ ಸ್ವಧರ್ಮದ ಬಗ್ಗೆ ಸ್ವಲ್ಪ basic ಮಾಹಿತಿ ಅರಿಯಲು ಕೂಡ ಈ ಪುಸ್ತಕದಿಂದ ಅನುಕೂಲವಾಗಬಹುದು!!