K P Poornachandra Tejsavi, son of the great Kannada poet, Kuvempu was born in 1938 in Shimoga district in Karnataka. After getting his M. A. degree he took up farming, and lives now in Chikkamagaluru district. Tejasvi has published a number of novels (Carvallo, Chidambara Rahasya, Svarupa), dramas (Yamala Prasne), short stories (Abachurina Post Office, Huliyurina Sarahaddu), and poems (Svagata Lahari). He is the recipient of the Karnataka Sahitya Akademi award as well as the Central Government Sahitya Akademi award.
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.
Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.
He has won several awards for his contribution to literature such as the Rajyotsava and Kannada Sahitya Academy awards.
Poornachandra Tejaswi died of cardiac arrest at the age of 69
ತೇಜಸ್ವಿರವರು ನವ್ಯ ಸಾಹಿತ್ಯ ತೊರೆದು ಬಂಡಾಯ ಸಾಹಿತ್ಯಕ್ಕೆ ದಾರಿ ಮಾಡಿಕೊಟ್ಟ ಕಥಾಸಂಕಲನವಿದು.. ಈ ಪುಸ್ತಕದ 4 ಪುಟದ ಮುನ್ನುಡಿ ತೇಜಸ್ವಿ ತೆಗೆದುಕೊಂಡ ನಿರ್ಧಾರದ ಅಗತ್ಯವನ್ನು ಮನದಟ್ಟು ಮಾಡಿಕೊಡುತ್ತದೆ
ನನಗೆ ತೇಜಸ್ವಿರವರು ಕಥೆಗಾರರಾಗಿ ಬಹಳ ಇಷ್ಟ... ಅವರ ಮಾನಸಿಕ ತೊಲಲಾಟ, ಮಲೆನಾಡಿನ ಜನಜೀವನ, ಅವರ ನಿಟ್ಟಿನ spirituality ಇವೆಲ್ಲರ ಮಿಶ್ರಣ ಕಥೆಗಳಲ್ಲಿ ಕಂಡು ಬರುತ್ತದೆ, ಇದಕ್ಕೆ ಅತ್ಯದ್ಭುತ ಉದಾಹರಣೆ - ನಿಗೂಢ ಮನುಷ್ಯರು ಎಂಬ ಕಥೆ.
ಇಲ್ಲಿನ ಕಥಾಸಂಕಲನದಲ್ಲಿ 7 ಕಥೆಗಳಿವೆ, ಈ 7 ಕಥೆಗಳಲ್ಲಿ 3 ಕಥೆಗಳು ಚಲನಚಿತ್ರವಾಗಿವೆ,1 ಕಥೆ ಚಲನಚಿತ್ರವಾಗುತ್ತಿದೆ, ಅಂದರೆ ಇವು ಎಲ್ಲ ಕಾಲಕ್ಕೂ ಸಲ್ಲುವ ಕಥೆಗಳು.
ನನ್ನ ಬಹಳ ಇಷ್ಟದ ಕಥೆ "ಅವನತಿ". ಇಲ್ಲಿ ಎರಡು ಪಾತ್ರ ಬರುತ್ತದೆ ಒಂದು ಸೂರಾಚಾರಿ, ಇವನು ಹೊಯ್ಸಳ ಶಿಲ್ಪಿಯ ವಂಶಸ್ತ ಅದ್ಭುತ ಚಿತ್ರಕಾರ. ಆದರೆ ಇಸ್ಲಾಪುರದ ಜನಕ್ಕೆ ಇವನ ಚಿತ್ರಗಳ ಶ್ರೇಷ್ಠತೆ ತಿಳಿದಿಲ್ಲ ಇವನ ಕಲೆಯನ್ನು ಮಾರಿ ಚಿತ್ರ ಬಿಡಿಸಲು ಬಳಸುತ್ತಾರೆ.. ಇನ್ನೊಂದು ಪಾತ್ರ ಗೌರಿ, ಈಕೆ ಅತಿಲೋಕ ಸುಂದರಿ. ಆದರೆ ಈಕೆಯ ಸೌಂದರ್ಯದ ಮಹತ್ವ ತಿಳಿದವರೇ ಇಲ್ಲ. ಈಕೆಯ ಮೊಲೆ ಹಾಲನ್ನು ಮಾವನ ಕಣ್ಣಿನ ಬೇನೆಗೆ ಉಪಯೋಗಿಸುತ್ತಾರೆ. ಅಂದರೆ ನಮ್ಮ ಸಂಸ್ಕೃತಿ, ನಮ್ಮ ಪರಿಸರ ಹೇಗೆ ಜನರ ಮೂಢತೆಯಿಂದ ಉನ್ನತಿಯಿಂದ ಅವನತಿಯ ಕಡೆಗೆ ಹೋಗುತ್ತಿದೆ ಎಂದು ಸಾರುವ ಶ್ರೇಷ್ಠ ಕಥೆ ಇದು... ಅಷ್ಟೇ ಸಮರ್ಥ ಕಥೆಗಳು ತುಕ್ಕೋಜಿ, ಕುಬಿ ಮತ್ತು ಇಯಾಳ, ತ್ಯಕ್ತ ಎಂಬ ಕಥೆ spiritual ಆಗಿದ್ದು ಕಠಿಣ ಎನಿಸುತ್ತದೆ... ತಬರನ ಕಥೆ ಕರುಣಾರಸದಿಂದ ಕಣ್ಣು ತುಂಬಿಸುತ್ತದೆ. ಡೇರ್ ಡೆವಿಲ್ ಮುಸ್ತಫಾ ಕಥೆ ಕಚಗುಳಿ ಇಟ್ಟರೆ, ಅಬಚೂರಿನ ಪೋಸ್ಟ್ ಆಫೀಸ್ ಕಥೆ ಬೋಬಣ್ಣನ ಅಸಹಾಯಕತೆಯನ್ನು ತೋರುತ್ತದೆ.
ಪೂರ್ಣಚಂದ್ರ ತೇಜಸ್ವಿಯವರ 'ಅಬಚೂರಿನ ಪೋಸ್ಟಾಫೀಸು' ಏಳು ಸಣ್ಣಕತೆಗಳಿಂದ ಕೂಡಿದ ಕಥಾಸಂಕಲನ. ಅವುಗಳೆಂದರೆ *ಅಬಚೂರಿನ ಪೋಸ್ಟಾಫೀಸು *ಅವನತಿ *ತಬರನ ಕತೆ *ಕುಬಿ ಮತ್ತು ಇಯಾಲ *ತುಕ್ಕೋಜಿ *ತ್ಯಕ್ತ *ಡೇರ್ ಡೆವಿಲ್ ಮುಸ್ತಾಫಾ ಇದರಲ್ಲಿ ಮೂರು ಕಥೆಗಳು ಚಲನಚಿತ್ರವಾಗಿದ್ದು, ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ. 'ತಬರನ ಕತೆ' ರಾಷ್ಟ್ರ ಪ್ರಶಸ್ತಿ ಪಡೆದಿದೆ. ಪ್ರತಿಯೊಂದು ಕಥೆಯನ್ನೂ ಮೊದಲಿನಿಂದ ಕೊನೆಯವರೆಗೆ ಭಾವನೆ ತುಂಬಿ ಅನನ್ಯ ರೀತಿಯಲ್ಲಿ ನಿರೂಪಿಸಿದ್ದಾರೆ .ಲೇಖಕರ ಮಾತುಗಳು ಕಥೆಗಳ ಭಾಗವಾಗಿ ಓದುಗರ ಗಮನ ಸೆಳೆಯುವ ಶಕ್ತಿ ಹೊಂದಿದೆ.
ಇವರ ಕಾದಂಬರಿಯಲ್ಲಿ ಏನೋ ಒಂದು ಆಕರ್ಷಣ ಶಕ್ತಿ ಇದೆ, ಓದುತ್ತಾ ಹೋದಂತೆ ಹಾಗೆ ಮನಸಲ್ಲೇ ಇಳಿದು ಬಿಡುತ್ತೆ ಪ್ರತಿಯೊಂದು ಪಾತ್ರ.
ಇದೊಂದು 7 ಸಣ್ಣ ಕಥೆಗಳ ಕಥಾಸಂಕಲನ ಅಬಚೂರಿನ ಪೋಸ್ಟಾಫೀಸು ಅವನತಿ ಕುಬಿ ಮತ್ತು ಇಯಾಲ ತುಕ್ಕೋಜಿ ಡೇರ್ ಡೆವಿಲ್ ಮುಸ್ತಫಾ ತಬರನ ಕಥೆ ತ್ಯಕ್ತ್
ಪುಟಗಳ ಆಧಾರದ ಮೇಲೆ ಇವೆಲ್ಲ ಸಣ್ಣ ಕಥೆಗಳು ಆದ್ರೆ ಕಥಾ ವಸ್ತು ಮಾತ್ರ ಅದ್ಬುತ.
ನಂಗೆ ತುಂಬಾ ಇಷ್ಟವಾದ ಕಥೆಗಳೆಂದರೆ ಅಬಚೂರಿನ ಪೋಸ್ಟಾಫೀಸು, ಕುಬಿ ಮತ್ತು ಇಯಲ, ತುಕ್ಕೊಜಿ,ತಬರನ ಕಥೆ..
ರೈಟರ್ ಕೆಲ್ಸ ಮಾಡಿಕೊಂಡಿದ್ದ ಬೋಬಣ್ಣ ಹಂಗಾಮಿ ಪೋಸ್ಟ್ ಮಾಸ್ಟರ್ ಆದ ಮೇಲೆ ಅವನು ಪಟ್ಟ ಪಾಡು ಮನೆಯ ಗತಿ ಹೇಳತೀರದು, ಅಲ್ಪ ಸ್ವಲ್ಪ ಇಂಗ್ಲಿಷ್ ಗೊತ್ತಿದ್ದೂ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬೋಬಣ್ಣ ಒಪ್ಪಿದಕ್ಕೆ ಅಬಚೂರಿನಲ್ಲಿ ಪೋಸ್ಟಾಫೀಸು ಆರಂಭ ಆಗಿದ್ದು. ಯಾರದೋ ಪತ್ರ ಗಳನ್ನ ಕದ್ದು ಓಧಿ ಅವನು ಅನುಭವಿಸುವ ಪಾಡು ಅಷ್ಟಿಷ್ಟಲ್ಲ. ಕೊನೆಗೆ ಸಹಾಯ ಮಾಡಲು ಹೋಗಿ ಅದರಿಂದನು ಸಮಸ್ಯೆ ಆಗಿ ಅವನೇ ಕಾಲಿಗೆ ಬುದ್ಧಿ ಹೇಳಿ ಎಲ್ಲರಿಂದಲೂ ಕಣ್ಮರೆ ಆಗುತ್ತಾನೆ.
ಕುಬಿ ಎನ್ನುವ ನಿಷ್ಟಾವಂತ ವೈದ್ಯ ಮತ್ತು ಇಯಾಲ ಎನ್ನುವ ಪುಟ್ಟ ಸುಂದರಿಯ ಸುತ್ತ ನಡೆಯುವ ಕಥೆ.
ತೂಕ್ಕೋಜಿ ಎಂಬ ಟೈಲರ್ ಕಥೆ ತುಂಬಾ ಇಷ್ಟ ಆಗುವಂಥದ್ದು . ತುಕೊಜ್ಜಿ ಮತ್ತು ಸರೋಜಾ ಪ್ರೀತಿಸಿ ಮದುವೆಯಾಗಿ ಆಮೇಲೆ ಅವರ ಜೀವನ ಹೇಗೆ ಬದಲಾಗುತ್ತದೆ, ತುಕೊಜ್ಜೀ ಕೆಲ್ಸದ ಮೇಲೆ ಸಂಸಾರ ಮಗು ಹೇಗೆ ಪರಿಣಾಮ ಬಿರತ್ತೆ. ತುಕೋಜ್ಜಿ ಹೊಲೆಯೋ ಬಟ್ಟೆ ಇಂದ ಗೂರೋಗಳ್ಳಿ ಹೇಗೆ ಮೆರಗು ಬರತ್ತೆ ಹಾಗೆ ಅವನ ತಯಾರಿಸಿದ ಉಡುಪು ಧರಿಸಿ ಆಮೇಲೆ ಜನರು ನಡಿಯೋ ನಡಿಗೆ ಕುಳಿತು ಕೊಳ್ಳು ಶೈಲಿಯೆ ಬದಲಾಗಿ ಬಿಡುತ್ತೆ. ತನ್ನಿಂದ ಆದ ತಪ್ಪು ಕೆಲ್ಸಕ್ಕೆ ಗಿರಾಕಿಗಳನ್ನು ಯಾಮಾರಿಸುವತೋಕೊಜ್ಜಿ ಜಾಣ್ಮೆ ನಗು ತರಿಸುತ್ತೆ.
ತಬರ ಬ್ರಿಟಿಷ ಕಾಲದಿಂದ ಸರಕಾರಿ ಕೆಲಸ ಮಾಡಿ ಕೊಂಡು ಬಂದು ಕೊನೆಗೆ ಬರುವ ಪಿಂಚಣಿ ಹಣಕ್ಕಾಗಿ ಅವನು ಪಡುವ ಪಾಡು ನಿಜಾಕ್ಕೂ ಪಾಪ ಅನಿಸತ್ತೆ. ಪಿಂಚಣಿ ಹಣದಿಂದ ಹೆಂಡತಿ ಆರೋಗ್ಯ ಗುಣ ಪಡಿಸ್ ಬಹುದೆಂದು ಪಾಪ ಎಲ್ಲ ಕಡೆ ಓಡಾಡಿ ಕೊನೆಗೆ ಈಗಿನ ಸ್ವಾತಂತ್ರ ಯಾಕಾದರೂ ಬಂತು ಮೊದಲಿನ ಬ್ರಿಟಿಷ್ ಅಧಿಕಾರ ಚೆನ್ನಾಗಿತ್ತು ಅನ್ನೋ ನಿಲುವು ತಾಳಿದ ತಬರ್. ನೋಡೋರ ಕಣ್ಣಿಗೆ ಹುಚ್ಚ. ಇದು ಈಗಿನ ಸಂದರ್ಭಕ್ಕೆ ತಕ್ಕಂತೆ ಹೆಣೆದ ಕಥೆ.
ಜೀವನದ ಕೆಲವು ಹಂತಗಳಲ್ಲಿ ವಿಭಿನ್ನ ಸಂದರ್ಭಗಳು , ವಿಭಿನ್ನ ಸನ್ನಿವೇಶಗಳು ಹೇಗೆ ಪರಿಣಾಮ ಬೀರುತ್ತವೆ ಹಾಗೂ ಹೇಗೆಲ್ಲಾ ಜೀವನದ ದಿಕ್ಕನ್ನು ಮತ್ತು ಯೋಜನೆಯನ್ನು ಬದಲಿಸುತ್ತವೆಂದು ಸಣ್ಣ ಕಥೆಯ ಪಾತ್ರಗಳು ತೊರಿಸುತ್ತವೆ.
A very good collection of stories by Poornachandra Tejaswi! There are 7 stories in total and every story is a fine blend of various emotions and much more... Very interesting - the characters, the plot everything feels so real - so alive... One can really feel a deep sense of connection while reading it.🙌
Tejaswi's stories remind me of my school days!! Latha ma'am's kannada classes and her way of telling these stories in rainy days.. those days were so peaceful.. Damn I want to go back to school.. It is collection of stories about ordinary people and their life situations.. yet seem so simple but the way of narration what it makes so addictive to read!! ತೇಜಸ್ವಿಯವರ ಕಥೆಗಳು ನನ್ನ ಶಾಲಾ ದಿನಗಳನ್ನು ನೆನಪಿಸುತ್ತವೆ !! ಲತಾ ಮಾಮ್ ನಾ ಕನ್ನಡ ತರಗತಿಗಳು ಮತ್ತು ಅವರ ಕಥೆಗಳನ್ನು ಹೇಳುವ ರೀತಿ... ಆ ದಿನಗಳು ತುಂಬಾ ಶಾಂತಿಯುತವಾಗಿದ್ದವು .. ಡ್ಯಾಮ್ ನಾನು ಮರಳಿ ಶಾಲೆಗೆ ಹೋಗಲು ಬಯಸುತ್ತೇನೆ ..
ಇದು ಸಾಮಾನ್ಯ ಜನರು ಮತ್ತು ಅವರ ಜೀವನ ಸನ್ನಿವೇಶಗಳ ಕಥೆಗಳ ಸಂಗ್ರಹವಾಗಿದೆ .. ಆದರೂ ಅದು ತುಂಬಾ ಸರಳವೆಂದು ತೋರುತ್ತದೆ ಆದರೆ ನಿರೂಪಣೆಯ ವ���ಧಾನವು ಓದಲು ತುಂಬಾ ವ್ಯಸನಕಾರಿಯಾಗಿದೆ !!
It's been so long ,I wrote in ಕನ್ನಡ.. 😭 I wrote fine thou..
The storytelling is great, the characters have so much depth, and Tejaswi brings to life the vibrance of the countryside with his prose. Loved it! Will definitely read more of him.
ಸಾಮಾನ್ಯ ಜನರ ಕನಸುಗಳನ್ನು, ನೋವು ನಲಿದಾಟಗಳನ್ನು, ಅವರ ಮುಗ್ಧತೆ, ಪ್ರಬುದ್ಧತೆಯನ್ನು ಹಾಗೂ ಅವರೆಲ್ಲರನ್ನೊಳಗೊಂಡ ನಮ್ಮೀ ಸಮಾಜದ ವಿಮರ್ಶೆಯನ್ನು ಅತ್ಯಂತ ಸುಲಲಿತವಾಗಿ ತೇಜಸ್ವಿಯವರು ಈ ಕಥೆಗಳಲ್ಲಿ ಉಣ ಬಡಿಸಿದ್ದಾರೆ.
ಏಳು ಸಣ್ಣ ಕಥೆಗಳಿರುವ ಈ ಪುಸ್ತಕ ನನ್ನನ್ನು ಬೇರೆ ಲೋಕಕ್ಕೆ ಒಯ್ಯಿತು. ಮೊದಲ ಕಥೆ ಅಬಚೂರಿನ ಪೋಸ್ಟಾಫೀಸು.ಬೋಬಣ್ಣನ ಪೋಸ್ಟಫಿಸಿನಲ್ಲಿ ಪತ್ರ ಗಳ ಸಂಖ್ಯೆ ಕಡಿಮೆ ಆದಾಗ ಕಾಲ ಹರಣಕ್ಕೆ ಕುತೂಹಲ ದಿಂದ ತೆರೆದ ಒಂದು ಪತ್ರ ಅವನ ಸಂಪೂರ್ಣ ಜೀವನವನ್ನೇ ಬದಲಾಯಿಸಿತು.ನಂತರ ಬೇಲಾಯದನ ಹೆಸರಿಗೆ ಯಾರೋ ಬರೆದ ಪತ್ರ ಅಬಚೂರಿನಲ್ಲಿ ಪ್ರಖ್ಯಾತವಾದ ಘಟನೆ ಬೋಬಣ್ಣನಿಂದ ಅವನ ಹೆಂಡತಿಯನ್ನು ದೂರ ಮಾಡಿತು. ಕೊನೆಗೆ ಬೋಬಣ್ಣನೇ ಆ ಪತ್ರ ಬರೆದಿದ್ದ ಎಂಬ ಆರೋಪ ಬಂತು. ಊರಿನವರೆಲ್ಲ ಅವನ ಮನೆಗೆ ಮುತ್ತಿಗೆ ಹಾಕಿದರು.ಬೋಬಣ್ಣ ಅವರಿಂದ ತಪ್ಪಿಸಿಕೊಂಡು ಹಿಂದಿರುಗಿ ನೋಡದೆ ಓಡಿ ಓಡಿ ಕತ್ತಲಲ್ಲಿ ಕಣ್ಮರೆಯಾದ. ನಂತರ ಕುಬಿ ಮತ್ತು ಇಯಾಲ ಎಂಬ ಕಥೆ ಕುಬಿ ಡಾಕ್ಟರ್ ನ ಸಮಾಜದ ಪರವಾಗಿನ ಕಾಳಜಿ, ಇಯಾಲಳ ಕೊಲೆ, ಕೊಲೆಗಾರನ ಪತ್ತೆ, ಕೊಲೆಗಾರ ಅನುಭವಿಸಿದ ಶಿಕ್ಷೆ ಯ ಜೊತೆಗೆ ರಾಜಕೀಯದ ಗಾಳಿಯು ಸ್ವಲ್ಪ ಸಮ್ಮಿಲನವಾಗಿದೆ.ತುಕ್ಕೋಜಿ ಎಂಬ ಕಥೆಯು ತಂದೆ ತಾಯಿ ತಮ್ಮ ಇಷ್ಟ ಬಂದಂತೆ ಮಗನನ್ನು ಬಳಸಿಕೊಂಡು, ಆ ಮುಗ್ಧ ಮಗುವಿನ ಮೇಲೆ ಆದ ಪರಿಣಾಮ, ಅವರು ಕೊನೆಗೆ ತಮ್ಮ ತಪ್ಪನ್ನು ಅರಿತುಕೊಂಡ ಬಗೆ ಶ್ಲಾಘನೀಯ. ಈ ಕಥೆಯ ಕೊನೆಯ ಸಾಲುಗಳು ನನ್ನ ಮನಸ್ಸಿಗೆ ಏನೋ ಪರಿಣಾಮ ಬೀರಿದವು. ತಬರನ ಕಥೆ ಸ್ವಾತಂತ್ರ್ಯದ ನಂತರ ಸಾಮಾನ್ಯ ಜನರು ಅನುಭವಿಸಿದ ಕಷ್ಟಗಳನ್ನು ಬಿಂಬಿಸುವ ಅದ್ಭುತ ಕಥೆ. ಅವನು ಹೇಗೆ ತನ್ನ ಪಿಂಚಣಿ ಹಣಕ್ಕಾಗಿ ಕಾದು ಕಾದು, ಈ ಸಮಯದಲ್ಲೇ ತನ್ನ ಹೆಂಡತಿಯನ್ನು ಕಳೆದುಕೊಂಡು ಮರುಳನಾದ ಎಂಬುದನ್ನು ಚೆನ್ನಾಗಿ ವರ್ಣಿಸಲಾಗಿದೆ. ಇದನ್ನು ಬಿಟ್ಟು ಅವನತಿ, ತ್ಯಕ್ತ ಮತ್ತು ಡೇರ್ ಡೆವಿಲ್ ಮುಸ್ತಫಾ ಎಂಬ ಕಥೆಗಳನ್ನು ಒಳಗೊಂಡ 110 ಪುಟದ ಈ ಪುಸ್ತಕ ತೇಜಸ್ವಿ ಅವರ ಅದ್ಬುತ ಪುಸ್ತಗಳಲ್ಲಿ ಒಂದು.
The author took the pieces of absurdity, innocence, fear, ignorance, and beauty of the village made life and made a small monument through short stories in this book. Every story is narrated in unique way to feel shuttling emotion from beginning to end. When you read through words, words of an author have the power to pull you to be a part of the stories. If you really want to feel what it likes to live in a mysterious world of the village in their village, it's a must-read.
ತೇಜಸ್ವಿಯವರ ಈ ಪುಸ್ತಕ 7 ಪುಟ್ಟ ಕಥೆಗಳಿರುವ ಕಥಾಸಂಕಲನ.7 ಕಥೆಗಳಲಿ 3 ಕಥೆ ಚಲನಚಿತ್ರವಾಗಿದ್ದು, ಇದರಲ್ಲಿ ಬರುವ ತಾಬರನ ಕಥೆಗೆ ರಾಷ್ಟ್ರ ಪ್ರಶಸ್ತಿ ದೊರಕಿದೆ. ಇತ್ತೀಚಿನ dare devil mustafa ಸಹ ಇದೇ ಪುಸ್ತಕದ ಒಂದು ಕಥೆ. ಎಲ್ಲಾ ಕಥೆಗಳು ತುಂಬಾ ಚೆನ್ನಗಿದ್ದು, ನನಗೆ ಇಷ್ಟವಾಗಿದ್ದು ತಬರನ ಕಥೆ,ಅಬಚೂರಿನ ಪೋಸ್ಟಾಫೀಸು ಮತ್ತು ಅವನತಿ. ತೇಜಸ್ವಿ ಅವರ ಸರಳ ಮತ್ತು ನೈಜ್ಯ ಬರವಣಿಗೆ ನೋಡಬಹುದು
A collection of short stories. The very first is what the title of this book. Tejasvi's typical style of entertaining which titillates readers especially young readers. once you have tasted his literature works there's no going back, you'll always crave for his books. dhanyavadagalu
ಅಬಚೂರಿನ ಪೋಸ್ಟ್ ಆಫೀಸ್... ಇದು ಸಣ್ಣ ಕಥೆಗಳ ಸಮ್ಮಿಶ್ರಣ.. ನಾನು, ನನ್ನ ಸಂಸಾರ, ನಮ್ಮ ಸಮಾಜ, ನಮ್ಮಸಮಾಜದ ವ್ಯವಸ್ಥೆ ಮತ್ತು ಸಾವುಗಳ ಬಗ್ಗೆ ಎತ್ತಿ ಹಿಡಿದ ಕನ್ನಡಿ..ಪೂರ್ಣಚಂದ್ರ ತೇಜಸ್ವಿಯವರ ಬರವಣಿಗೆ ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಶಾಶ್ವತವಾಗಿ ಮಾದರಿಯಾಗಿ ಉಳಿಯುತ್ತದೆ. ❤️
ತೇಜಸ್ವಿರವರು ನವ್ಯ ಸಾಹಿತ್ಯ ತೊರೆದು ಬಂಡಾಯ ಸಾಹಿತ್ಯಕ್ಕೆ ದಾರಿ ಮಾಡಿಕೊಟ್ಟ ಕಥಾಸಂಕಲನವಿದು.. ಈ ಪುಸ್ತಕದ 4 ಪುಟದ ಮುನ್ನುಡಿ ತೇಜಸ್ವಿ ತೆಗೆದುಕೊಂಡ ನಿರ್ಧಾರದ ಅಗತ್ಯವನ್ನು ಮನದಟ್ಟು ಮಾಡಿಕೊಡುತ್ತದೆ
ನನಗೆ ತೇಜಸ್ವಿರವರು ಕಥೆಗಾರರಾಗಿ ಬಹಳ ಇಷ್ಟ... ಅವರ ಮಾನಸಿಕ ತೊಲಲಾಟ, ಮಲೆನಾಡಿನ ಜನಜೀವನ, ಅವರ