ಐದಾರು ವರ್ಷಗಳ ಹಿಂದೆ ಮುಂಬಯಿಯ ಬೀದಿಯಲ್ಲಿ ಡೊಂಬರ ಮಹಿಳೆಯೊಬ್ಬಳು -- " ಶಾರುಖ್ ಖಾನ್ ನನ್ನ ಮಗ, ಹಿಂದೆಂದೋ ಜಾತ್ರೆಯಲ್ಲಿ ಕಲೆದುಹೊಗಿದ್ದ. ಅವನೇ ಖಂಡಿತ ಅಲ್ಲಗಳೆಯಲಾರ" -- ಎಂದು ಹಠ ಹಿಡಿದು ಒಂದು ಮಾಯಾ ಕೋಲಾಹಲವನ್ನೇ ಎಬ್ಬಿಸಿಬಿಟ್ಟಳು . ಅವನ ಮನೆಯೆದುರು ರಂಪ ಮಾದಿದಲು. ಕೋರ್ಟಿಗೆ ಹೋಗುತ್ತೇನೆಂದು ರೋಡಿಸಿದಳು. ಪೋಲೀಸರು ನಡುವೆ ಬಂದರು. ಜನ ಅವಳನ್ನು ಭ್ರಮಿತೆ ಅನ್ದರು. ಪತ್ರಿಕೆಗಳೂ ಈ ಸುದ್ದಿಯೊಂದಿಗೆ ಅವರದೆ ಆಟವಾಡಿದುವು. ಶಾರುಖ್ ಖಾನ್ ಮಾತ್ರ ಈ ಪ್ರಸಂಗದುದ್ದಕ್ಕೂ ಒಂದು ಬಗೆಯ ನಿರುಪಾಯ ಸಹಾನುಭೂತಿಯಲ್ಲಿ ಮೊಉನವಾಗಿದ್ದ. ನೀನು ಕೂಡ ನನ್ನ ತಾಹಿಯಂತೆ ಎಂದಾತ ಘನತೆಯಿಂದ ಹೇಳಲು ಯತ್ನಿಸುತ್ತಿರುವಂತೆ ಭಾದವಾಗುತ್ತಿತ್ತು. ಆದರೆ ಮಾತು ಎಲ್ಲವನ್ನೂ ಬೇರೆಯೇ ಆಗಿಸುತ್ತಿತ್ತು ನಂತರ ಎಲ್ಲ ಮರೆಯಾಯಿತು.
ಏಕಾಏಕಿ ಆ ತಾಯಿಗೆ ಹಾಗೇಕೆ ಅನಿಸಿತು? ಮತ್ತು ಈ ಅಪರಿಚಿತ ತಾಯಿಂದ ವಿಚಿತ್ರವಾದ ಅಷ್ಟೇ ತೀವ್ರವಾದ ಹಟ ಶಾರುಖ್ ಖಾನ್ ನನ್ನು ಈಗಲೂ ಹೇಗೆ ಆಳವಾಗಿ ಕುಲುಕುತ್ತಿರುಬಹುದು ?
ಕತೆಗಿಂತ ಮಿಗಿಲಾದ ಸತ್ಯ ಯಾವುದಿದೆ?
ನಾನು ಮುಂಬಯಿಂದ ಬಿಟ್ಟ ಮೇಲೆ - ( ಸದ್ಯ, ಅದು ನನ್ನನ್ನು ಬಿಟ್ಟಿಲ್ಲ ) -- ಕಳೆದೈದು ವರುಷಗಳಲ್ಲಿ ಈ ಹನ್ನೊಂದು ಕತೆಗಳನ್ನು ಬರೆದ್ದಿದ್ದೇನೆ ಎನ್ನುವುದು ನಂಗಂತೂ ಒಳ್ಳೆಯ ಸುದ್ದಿ! ಈ ಸಂಕಲವನ್ನು ಉಮೇದಿಯಿಂದ ಪ್ರಕಾಶಿಸುತ್ತಿರುವ ಪ್ರಕಾಶ್, ಪ್ರಭಾ ಕಂಬತ್ತಳ್ಳಿ, ಬೆನ್ನ ಹಿಂದೆ ಎರಡು ಉತ್ಸಾಹದ ಮಾತಾಡಿರುವ ಗಿರೀಶ್ ಕಾರ್ನಾಡ್, ತಮ್ಮ 'ಫ್ಯಾಂಟಮ್ ಲೇಡಿ" -- ಛಾಯಾಚಿತ್ರ ಸರಣಿಯ ಬಿಂಬಗಳನ್ನು ಹೂದಿಕೆಗೆ ಬಳಸಲು ಸಮ್ಮತಿ ಕೊಟ್ಟ ಕಲೆಗಾರ್ತಿ ಪುಷ್ಪಮಾಲ ಎನ್., ಅದನ್ನು ವಿನ್ಯಾಸಗೊಳಿಸಿದ ಶ್ರೀಪಾದ್, ಈ ಕತೆಗಳನ್ನು ಪ್ರಕಟಿಸಿದ ಕನ್ನಡ ಪ್ರಭ, ಲಂಕೇಶ್ ಪತ್ರಿಕೆ, ಸುಧಾ, ಪ್ರಜಾವಾಣಿ, ..... ಇವರೆಲ್ಲರ ಮಿತ್ರಋಣ ಈ ಪುಸ್ತಕದ ಹಿಂದಿದೆ .
ಸ್ಪೋರ್ತಿಯನ್ನೂ ಸ್ತೈರ್ಯವನ್ನು ಸೂಸುವ ಅಕ್ಕರೆಯ ಲೋಕ ಕಣ್ಣ ಮುಂದಿದೆ .
(A good collection of short stories. Some very abstract, some very abrupt. Could not understand the intent of some stories.)
Jayanth Kaikini is an Indian poet, short stories author and a lyricist working in Kannada cinema. ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು.[೩] ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ,ಸಂಭಾಷಣೆಗಾರನಾಗಿ, ಅಂಕಣಕಾರ ನಾಗಿ, ನಾಟಕಕಾರನಾಗಿ, ಕಥೆಗಾರನಾಗಿ, ಮತ್ತು ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.
ಏನೇ ಹೇಳಿ, ಜಯಂತ್ ಕಾಯ್ಕಿಣಿಯವರು ಜೀವನವನ್ನು ನೋಡುವ ದೃಷ್ಟಿಯೇ ವಿಭಿನ್ನ ! ಕಥೆಗಳು ಇನ್ನೂ ಚೆನ್ನ ! ಅವರು ಸಣ್ಣ ಸಣ್ಣ ವಿಚಾರಗಳಲ್ಲಿ ಕಾಣುವ ಹಿರಿತನಕ್ಕೆ ನಾನು ಖಾಯಂ ಅಭಿಮಾನಿ !
ಕಾಯ್ಕಿಣಿಯವರು "ತೂಫಾನ್ ಮೇಲ್" ಎಂಬ ಎಕ್ಸ್ಪ್ರೆಸ್ ರೈಲಿನಲ್ಲಿ ನಮ್ಮನ್ನು ಮುಂಬೈ ನಗರಿಯ ಸಾಮಾನ್ಯ ಜನರ ಭಾವನೆಗಳ ಲೋಕಕ್ಕೆ ಕರೆದೊಯ್ದಿದ್ದಾರೆ. ಇಲ್ಲಿ ಪ್ರೀತಿಯಿದೆ, ಕನಸುಗಳಿವೆ, ದುಡಿಮೆಯಿದೆ,ಹತಾಶೆಯಿದೆ, ಬದುಕಿನ ವಿಭಿನ್ನ ದೃಷ್ಟಿಕೋನವಿದೆ! ಇಲ್ಲಿರುವ ೧೧ ಕಥೆಗಳೂ ವಿಶಿಷ್ಟವಾಗದಿದ್ದು ಮನಸ್ಸಿಗೆ ಮುದ ನೀಡುತ್ತದೆ.ಮುಂಬೈನ ೧೦ ಅಡಿಗಳ ಖೋಲಿಗಳಲ್ಲಿ ಬಾಳುವ ವಿವಿಧ ಹಿನ್ನೆಲೆಯ ಜನರು ಈ ಕಥೆಗಳ ನಾಯಕರು. ಕಾರ್ಖಾನೆಗಳ ದುಡಿಯುವವರು, ಕೆಲಸ ಕಳೆದುಕೊಂಡವರು, ಥಿಯೇಟರನ್ನು ಸ್ವಚ್ಛಗೊಳಿಸುವವರು, 'ಮೃತ್ಯು ಕೂಪ'ದಲ್ಲಿ ಬೈಕ್ ಸ್ಟಂಟ್ ಮಾಡುವವರು, ಸಿನಿಮಾಗಳಿಗೆ ಸ್ಟಂಟ್ ಡಬಲ್ ಗಳಾಗಿ ದುಡಿಯುವವರು.. ಹೀಗೆ, ಸಾಮಾನ್ಯ ಕಣ್ಣುಗಳಿಗೆ ಕಂಡೂ ಕಾಣದಂತಿರುವ ವ್ಯಕ್ತಿಗಳ ದೃಷಿಕೋನದಲ್ಲಿ ಜೀವನ ಹೇಗಿರುತ್ತದೆ ಎಂಬುದನ್ನು ನಾವು ಇಲ್ಲಿ ಕಾಣಬಹುದು.
ಈ ಕೃತಿಯಲ್ಲಿ ಕಾಯ್ಕಿಣಿ ಅವರ ನೋ ಪ್ರೆಸೆಂಟ್ಸ್ ಪ್ಲೀಸ್, ಕಣ್ಮರೆಯ ಕಾಡು, ಪಾರ್ಟನರ್, ಭಾಮಿನಿ ಸಪ್ತಪದಿ, ಕನ್ನಡಿ ಇಲ್ಲದ ಊರಲ್ಲಿ, ತೂಫಾನ್ ಮೇಲ್, ಬಕುಲ ಗಂಧ, ಬಾವಿಯಲ್ಲೊಂದು ಬಾಗಿಲು, ಗೇಟ್ ವೇ, ಟಿಕ್ ಟಿಕ್ ಗೆಳೆಯ ಹಾಗೂ ಒಪೆರಾ ಹೌಸ್ ಹೀಗೆ ಹನ್ನೊಂದು ಕತೆಗಳು ಸಂಕಲನಗೊಂಡಿವೆ.
ಹಾ! ಇನ್ನೊಂದು ವಿಷ್ಯ, 'ಕನ್ನಡಿ ಇಲ್ಲದ ಊರಲ್ಲಿ' ಕಥೆ , "ದಯವಿಟ್ಟು ಗಮನಿಸಿ" ಎಂಬ ಕನ್ನಡ ಸಿನಿಮಾದಲ್ಲಿ ಒಂದು ಅಧ್ಯಾಯವಾಗಿದೆ.
ಜಯಂತ ಕಾಯ್ಕಿಣಿಯವರ ಮನುಷ್ಯ, ಊರು, ಜೀವನವನ್ನ ಕಾಣುವ humanist ನೋಟ ಈ ಸಂಕಲನದಲ್ಲಿ ಎದ್ದು ಕಾಣುತ್ತದೆ. ಮುಂಬೈ ಹಾಗೂ ನಗರದ ನಿವಾಸಿಗಳನ್ನು ವರ್ಣಿಸಲು ಅವರು ಉಪಯೋಗಿಸುವ ರೂಪಕಗಳಿಗಂತೋ ಸಾಟಿಯೇ ಇಲ್ಲ.
"ಸ್ಟೇಷನ್ನಿಂದ ಭೋರ್ಗೆರೆದು ಹೊರಬೀಳುವ ಜನಪ್ರವಾಹ ಇಳಿಬಿಸಿಲಿಗೆ ಹೊಳೆಯುತ್ತಿತ್ತು." ಇಂತಹ ಹಲವಾರು ಸಾಲುಗಳಿಂದ ನಾನು ಕೆಲ ಕಾಲ ಓದುವುದನ್ನು ಬಿಟ್ಟು ನನ್ನ ಅಕ್ಕಪಕ್ಕದ ಬೆಂಗಳೂರನ್ನು ಕಂಡು ಕಣ್ಣು ತಿಂಬಿಕೊಳ್ಳುತಿದ್ದೆ.
ಆದರೆ ಕಾಯ್ಕಿಣಿ ಅವರ biggest strength ಅವರು ಕಥೆ ಕಟ್ಟುವ ರೀತಿ. ಪ್ರತಿ ಕಥೆಯ ಕೊನೆಯಲ್ಲಿ "ಅಯ್ಯೋ ಮುಗೀತಾ?" ಎಂದೆನಿಸುತ್ತದೆ. ಮತ್ತಷ್ಟು ಕಾಲ ಅವರು ವರ್ಣಿಸಿರುವ, ಚಿತ್ರಿಸಿರುವ ಮುಂಬೈನಲ್ಲಿ ಕಾಲ ಕಳೆಯಬೇಕು, ಈ ಸುಂದರ ಪಾತ್ರಗಳ ಜೊತೆ ಇನ್ನೂ ಹೆಚ್ಚು ಕಾಲ ಬಾಳಬೇಕು ಎಂದು ಆಸೆಯಾಗುತ್ತದೆ. ಅದೇ ಒಳ್ಳೆ ಸಣ್ಣ ಕಥೆಗಳ ವಿಶೇಷತೆ. ಸಂಪೂರ್ಣ closure ಕೊಡದೆ, ಇನ್ನಷ್ಟು ಮತ್ತಷ್ಟು ಬೇಕು ಎಂಬ ಬಯಕೆ ಮೂಡಿಸುವುದು.
ನನಗೆ ಬಹಳ ಇಷ್ಟವಾದ ಕಥೆಗಳು: - ಭಾಮಿನಿ ಸಪ್ತಪದಿ - ಬಕುಲ ಗಂಧ - ಟಿಕ್ ಟಿಕ್ ಗೆಳೆಯ - ಕನ್ನಡಿ ಇಲ್ಲದ ಊರಲ್ಲಿ - ನೋ ಪ್ರೆಸೆಂಟ್ಸ್ ಪ್ಲೀಸ್
ಒಬ್ಬ ಮನುಷ್ಯ ಅಥವಾ ಒಂದು ಸಾಹಿತ್ಯ ಕೃತಿ ಮನಸಿನ ಆಳದಲ್ಲಿ ಬೇರೂರ ಬೇಕಾದರೆ ಅದಕ್ಕೆ ನಿಜವಾಗಿ ಬೇಕಾದುದು ವ್ಯಕ್ತಿತ್ವ. ಒಂದು ಮರ ಹೇಗೆ ಭೌತಿಕವಾಗಿ ಬೆಳೆಯುತ್ತಾ ಹೋದಂತೆ ಅದರ ಎತ್ತರ, ಅದರ ಕಾಂಡ, ಟೊಂಗೆ, ರೆಂಬೆ ಕೊಂಬೆಗಳನ್ನೆಲ್ಲ ನಾವು ಮೇಲಿಂದಲೇ ಕಾಣಬಹುದು. ಆದರೆ ಮರದ ಬೇರಿನ ಅಂತರಳಾದ ಬೆಳವಣಿಗೆ ನಾವು ಕಾಣುಲಾಗುವುದಿಲ್ಲ. ಆದರೆ ಬೇರು ಮಣ್ಣಿನಾಳದಲ್ಲೂ ಬೆಳೆಯುತ್ತಲೇ ಇರುತ್ತದೆ. ಅದು ನಿರಂತರ. ಬಹುಶಃ ಇದರಂತೆಯೇ ಒಂದು ವಿಷಯದ ಅಸಂಗತ ವ್ಯಕ್ತಿತ್ವ, ಘಟನೆ ನಮ್ಮ ಮನದಾಳದಲ್ಲಿ ಬೇರೂರಿ ಬೆಳೆಯುತ್ತಲೇ ಇರುತ್ತದೆ. ಅಂತಹ ನೂರಾರು ಘಟನೆಗಳು ನಮ್ಮ ನಿಮ್ಮಲ್ಲೇ ಆಗಿ ಹೋಗಿರುತ್ತವೆ. ಆದರೆ ಅವುಗಳೆಲ್ಲವೂ ನಮಗೆ ನೆನಪಿನಲ್ಲಿರಬೇಕೆಂದೆನಿಲ್ಲ.
ನನಗೆ ನಮ್ಮಂತಹ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಿಂದ ಬದುಕನ್ನು ಒಂದೊಂದು ರೀತಿಯಲ್ಲಿ ನೋಡುತ್ತಾ ಹೋರಟಾಗ ಬದುಕಿನ ಸೊಗಸಾದ ಕಲ್ಪನೆ ಮನಸ್ಸಿಗೆ ಮುದ ನೀಡುತ್ತದದಲ್ಲದೆ ಜೀವನ ಪ್ರೀತಿ ಹೆಚ್ಚುತ್ತಲೇ ಹೋಗುತ್ತದೆ. ಇದನ್ನು ನಾನು ಕಲಿಯಲು ಪ್ರಾರಂಭಿಸಿದ್ದು ಜಯಂತ ಕಾಯ್ಕಿಣಿಯವರ ಕಥೆಗಳನ್ನು ಓದಲು ಪ್ರಾರಂಭಿಸಿದ ಮೇಲೆಯೇ. ಅಲ್ಲಿಯವರೆಗಿನ ನನ್ನ ಜೀವನದ ಬಗೆಗಿನ ದೃಷ್ಟಿಕೋನ ಮೆಚ್ಚುವಂತಹದೆನಲ್ಲ. ಬದುಕನ್ನು ಹೀಗೂ ನೋಡಿ ಆಸ್ವಾದಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟವರು ಜಯಂತ ಕಾಯ್ಕಿಣಿಯವರು. ಒಂದು ನಗರದ ಜನಜೀವನ, ಅಲ್ಲಿನ ಸಾಮಾಜಿಕತೆ ವ್ಯವಸ್ಥೆ, ಮನಸ್ಸಿನ ತೋಳಲಾಟ, ಚಿಕ್ಕ ಚಿಕ್ಕ ಸಂಗತಿಗಳಲ್ಲಿ ಬದುಕನ್ನು ಕಾಣಬಹುದಾದ ವಿಧಾನ ಇವೆಲ್ಲವೂ ಬಹುಶಃ ಒಬ್ಬ ಕ್ರಿಯಾಶಿಲ ಲೇಖಕನಿಗೆ ಇರುವ ಗುಣವೇ ಎನ್ನಬಹುದು. ನನ್ನಂತಹ ವಿದ್ಯಾರ್ಥಿಗಳಿಗೆ ಜಯಂತ ಕಾಯ್ಕಿಣಿಯವರನ್ನು ಓದಿಕೊಂಡಾಗ ಎಲ್ಲರಿಗೂ ಈ ಅನುಭವ ಆಗಿದ್ದಿರಬಹುದು. ನನಗೆ ತುಸು ಹೆಚ್ಚಾಗಿಯೇ ಕಾಡಿದೆ.
‘ತೂಫಾನ್ ಮೇಲ್’ ಜಯಂತ ಕಾಯ್ಕಿಣಿ ಕತೆಗಳು ಮನುಷ್ಯನ ಜೀವನದ ಹಾಗೂ ಒಂದು ನಗರ ಜೀವನವನ್ನು ಯಾವ ರೀತಿ ನೋಡಬಹುದೆಂದು ಕಳಿಸಿ ಕೋಡಬಹುದಾದ ವಿಭಿನ್ನ ಕಥಾಸಂಕಲನ. ಜಯಂತ ಕಾಯ್ಕಿಣಿಯವರ ಜೀವನ ಬಗೆಗಿನ ನೋಟವೆ ಅಂತಹುದು. ಇಲ್ಲಿ ನಾವ್ಯಾರೂ ನೋಡಿರದಂತಹ ಕಥೆಗಳ ಸುಂದರ ಹಾಗೂ ಮಧುರವಾದ ದನಿಯಿದೆ. ಕಾವ್ಯಾತ್ಮಕವಾಗಿ ಕಥೆ ಹೆಣೆದಿರುವಾದಂತಹ ಕತೆಗಳು ಜಯಂತ ಕಾಯ್ಕಿಣಿಯವರ ಕವಿತ್ವವನ್ನು ಕಾಣಬಹುದು. ಅವರ ಕಥೆಗಳೆಲ್ಲವೂ ಕವಿತೆಗಳಂತೆಯೇ ಇರುತ್ತವೆ ಎಂದು ಕೇಳಿರುವೆ. ಹಾಗೆ ಅನ್ನಿಸಿಯೂ ಇದೆ. ಬಹುಶಃ ಅದು ನಿಜವೂ ಹೌದು. ಆದರೆ ಕಥೆಯನ್ನು ಹೆಣೆಯುವ ಜಯಂತ ಕಾಯ್ಕಿಣಿಯವರ ಕಲೆ ವಿಭಿನ್ನವಾದ ಕ್ರಿಯಾಶಿಲತೆಯೇ ಸರಿ. ತಮ್ಮ ಬರವಣಿಗೆಗೆ ನಿಜವಾದ ಹದವನ್ನು ಒದಗಿಸಿ ಕಥೆಗೆ ಮಾನವೀಯ ಅಸಂಗತದ ನೋಟವನ್ನು ಹಚ್ಚಿ ಅಲ್ಲಿ ತಾವು ಹೇಳಬೇಕೆಂದಿರುವ ವಿಷಯದ ಅರಿವನ್ನು ಮೂಡಿಸುವಲ್ಲಿ ಜಯಂತ ಕಾಯ್ಕಿಣಿಯವರು ನಿಸ್ಸಿಮರು.
ಪುಸ್ತಕದ ಬೆನ್ನುಡಿ ಬರೆದಿರುವ ಖ್ಯಾತ ಸಾಹಿತಿ ಗಿರೀಶ ಕಾನಾರ್ಡರು “ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ” ಎನ್ನುವಂತೆ ಜಯಂತ ಕಾಯ್ಕಿಣಿಯವರು ಮತ್ತೆ ಮತ್ತೆ ಓದಿಸಿಕೊಂಡು ಹೋಗುವ ಕಥೆಗಳನ್ನು ಬರೆದು ಕನ್ನಡಿಗರಿಗೆ ನೀಡಿದವರು. ಅಂತಹ ಕೃತಿಗಳಲ್ಲಿ ‘ತೂಫಾನ್ ಮೇಲ್’ ಕೂಡ ಒಂದು. ಪುಸ್ತಕದ ಮೊದಲಲ್ಲೆ ಅರ್ಪಣೆಯ ಮೂಲಕ ಓದುಗನನ್ನು ಕೆಣಕುವ ಕ್ರಿಯಾಶೀಲತೆ ಭಿನ್ನವಾದದ್ದು. ಅದನ್ನು ಓದಿದಾಗಲೇ ನಮಗೆ ಜಯಂತರ ಅಂತರಾಳದ ವಿಶೇಷ ಭಾವನೆ ಅರ್ಥವಾಗಬಹುದು.
ನನ್ನನ್ನು ಉಳಿಸಿಕೊಂಡು ಬಂದ
ಹಾಸ್ಟೆಲ್ ಕೋಣೆಗಳಿಗೆ
ಬ್ಯಾಚಲರ್ಸ ಡೆನ್ ಗಳಿಗೆ
ನಂತರದ ಬೆಕ್ಕಿನ ಬಿಡಾರಗಳಿಗೆ
ಇನ್ನೂ ಮುಂದೆಲ್ಲೋ ಇರುವ
ಅಗೋಚರ ಹೊಸ ವಿಳಾಸಗಳಿಗೆ.,
ಅಂತಹ ಕಲಾತ್ಮಕತೆಯನ್ನು ನಾವು ಅವರ ತೂಫಾನ್ ಮೇಲ್ ಪುಸ್ತಕದ ಪ್ರತಿಯೊಂದು ಕತೆಯಲ್ಲಿ ಕಾಣಬಹುದು. ಕಥೆಗಳಾದ ‘ನೋ ಪ್ರೆಸೆಂಟ್ಸ್ ಪ್ಲೀಸ್’, ‘ಕಣ್ಮರೆಯ ಕಾಡು’, ‘ಪಾರ್ಟನರ್’, ;ಬಕುಲ ಗಂಧ’, ತೂಫಾನ್ ಮೇಲ್’, ‘ಒಪೆರಾ ಹೌಸ್’,’ಟಿಕ್ ಟಿಕ್ ಗೆಳೆಯಾ.’ಕನ್ನಡಿ ಇಲ್ಲದ ಊರಲ್ಲಿ’, ‘ಭಾಮಿನಿ ಸಪ್ತಪದಿ’, ‘ಬಾವಿಯಲ್ಲೊಂದು ಬಾಗಿಲು’, ‘ಗೇಟ್ ವೇ’ ಎಲ್ಲವೂ ಒಂದಂಕ್ಕಿಂತ ಒಂದು ವಿಭಿನ್ನ. ನನ್ನನ್ನು ಸದಾ ಕಾಡುವಂತಹ ಕತೆಗಳು.
ಜಯಂತ ಕಾಯ್ಕಿಣಿಯವರೇ ಹೇಳುವಂತೆ “ಕತೆಗಿಂತ ಮಿಗಿಲಾದ ಸತ್ಯ ಯಾವುದಿದೆ?.” ಹೌದು ಇಲ್ಲಿಯ ಎಲ್ಲ ಕಥೆಗಳಲ್ಲೂ ನಾವು ಬದುಕಿನ ಸತ್ಯವನ್ನು ಅರಿತುಕೊಳ್ಳಬಹುದು. ಬೃಹತ್ ನಗರಿ ಮುಂಬಯಿನಂತಹ ನಗರವನ್ನು ಲೇಖಕರು ನೋಡಿರುವ ಬಗೆ ಒಂದು ರೀತಿ ವಿಚಿತ್ರವೆನ್ನಿಸಿದರೂ ಅದೇ ನಿಜವಾದ ಸತ್ಯವೆನ��ನಬಹುದು. ಕೆಲಸಕ್ಕಾಗಿ ಕಾಯ್ಕಿಣಿಯವರು ಮುಂಬಯಿನಲ್ಲೇ ಇದ್ದುದರಿಂದ ಅವರಿಗೆ ಮುಂಬಯಿ ನಗರದ ಸ್ಥಳಗಳ ಆಪ್ತತೆ ಅವರ ಕತೆಗಳಲ್ಲಿ ಮುಖ್ಯ ಪಾತ್ರಗಳಾಗಿ ಕಾರ್ಯ ನಿರ್ವಹಿಸಿವೆ. ಕಥೆ ನಡೆಯುವ ಸ್ಥಳಗಳೂ ಅಷ್ಟೆ ವಿಶೇಷವಾದವು. ಸಿನೆಮಾ ಟಾಕೀಸ್, ರೈಲ್ವೇ ಸ್ಟೇಷನ್, ಫ್ಲೈ ಓವರಗಳು ಹೀಗೆ ಒಂದೊಂದು ಸ್ಥಳದಲ್ಲಿ ನಡೆಯಬಹುದಾದ ಒಂದೊದು ಭಾವುಕ ಕತೆಗಳೂ ಜಯಂತ ಕಾಯ್ಕಿಣಿಯವರು ಬರೆದು ನೀಡಿದಲ್ಲದೆ ಓದುಗನನ್ನು ಕೈ ಹಿಡಿಸಿ ನಡೆಸಿಕೊಂಡು ಹೋದಂತಿವೆ.
ಒಂದೊಂದು ಕಥೆಯ ಬಗ್ಗೆ ಹೇಳಲಾಗದಿದ್ದರೂ ಪ್ರತಿಯೊಂದು ಕಥೆಗೂ ಅದರದ್ದೇ ಆದ ವಿಶೇಷ ಗುಣವಿದೆ, ನಿಜವಾದ ಸತ್ವ ಅದರಲ್ಲಿ ಅಡಗಿದೆ. ಕತೆಯನ್ನು ಓದುವಾಗಲೆಲ್ಲವೂ ಒಂದು ಬದುಕನ್ನೂ ಹೀಗೂ ನೋಡಬಹುದೆಂದು ಎಂದು ಆಶ್ಚರ್ಯವಾಗಿದೆ. ನಿಧಾನವಾಗಿಯೇ ಕತೆಯನ್ನು ಹೇಳಿ ಮತ್ತಷ್ಟು ಬೆರಗು ಮೂಡಿಸುತ್ತಾ ಮತ್ತಷ್ಟು ಓದಿಗೆ ಕಾರಣರಾಗುತ್ತಾರೆ. ಅವರ ಹುಟ್ಟಿದ ಊರು ಗೋಕರ್ಣದ ಹಲವು ದೃಶ್ಯಗಳು ನಮ್ಮ ಬಾಲ್ಯದ ನೆನಪುಗಳನ್ನೇ ಮೆಲುಕು ಹಾಕುವಷ್ಟು ಕತೆ ಹತ್ತಿರವಾಗುತ್ತದೆ. ಜಯಂತ ಕಾಯ್ಕಿಣಿಯವರ ಕತೆಗಳಲ್ಲಿ ಕಾಣಬಹುದಾದ ಇನ್ನೊಂದು ವಿಶೇಷ ಸಂಗತಿ ನನಗೆ ಅತೀಯಾಗಿ ಕಾಡುವಂತಹವು ಭಾವುಕವಾದ ಮಾತುಗಳು. ಉದಾಹರಣೆಗೆ ಬಕುಲ ಗಂಧದ ಕೊನೆಯಲ್ಲಿಯ “ದೇವರೆ, ಎಲ್ಲರಿಗೂ ಹೊಸ ಹೊಸ ನೆನಪುಗಳನ್ನು ದಯಪಾಲಿಸುತ್ತ ಹೋಗು” ಇಂತಹ readyamde wit ಗಳಂತಹ ಮಾತುಗಳನ್ನು ಅವರ ಎಲ್ಲ ಕತೆಗಳಲ್ಲೂ ಕಾಣಬಹುದು.
‘ತೂಫಾನ್ ಮೇಲ್’ನ ಕತೆಗಳು ನನ್ನನ್ನು ಎಂದೆಂದಿಗೂ ಮತ್ತೊಮ್ಮೆ ಮಗದೊಮ್ಮೆ ಓದಿಸಿಕೊಂಡು ಹೋಗುತ್ತಲೆ ಇರುತ್ತವೆ. ಜಯಂತ ಕಾಯ್ಕಿಣಿಯವರ ಕಾವ್ಯಾತ್ಮಕ ಶೈಲಿಯೂ ಅಷ್ಟೆ ಹೃದಯಸ್ಪರ್ಶಿಯಾದುದು. ಅವರ ಎಲ್ಲ ಕತೆಗಳೂ ಒಂದೇ ರೀತಿಯಲ್ಲೆ ಇರುತ್ತವೆ ಎಂಬ ಆರೋಪವಿದೆ ಆದರೆ ಆ ಆರೋಪವೆ ಜಯಂತ ಕಾಯ್ಕಿಣಿಯವರನ್ನು ಗೆಲ್ಲಿಸಿವೆ ಎನ್ನಬಹುದು. ಜಯಂತ ಕಾಯ್ಕಿಣಿಯವರ ಕತೆಗಳೆಲ್ಲವೂ ನಾನು ನನ್ನ ಬದುಕನ್ನು ನೋಡುವ ದೃಷ್ಟಿ ಬದಲಿಸಿವೆ. ಹಾಗೆಯೇ ಬದುಕಿನ ಪ್ರೀತಿಯನ್ನು ಇನ್ನೂ ಇಮ್ಮಡಿಗೊಳಿಸಿದೆ. ಅವರನ್ನು ಓದುವ ಹಂಬಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಅವರ ಈ ಬರವಣಿಗೆಯ ಶೈಲಿಗೆ ಮರುಳಾಗಿದ್ದೇನೆ. ಅವರು ಸದಾ ಹೀಗೆ ಬರೆಯುತ್ತಲೇ ಇರಲಿ ಎಂದು ಕೋರುತ್ತಾ, ನನ್ನನ್ನು ಸದಾ ಕಾಡುವ ಜಯಂತ ಕಾಯ್ಕಿಣಿಯವರ ಬದುಕಿನತ್ತಿರುವ ವಿಶೇಷವಾದ ಕಣ್ಣೋಟಕ್ಕೆ ನನ್ನ ನಮನ.
ನನ್ನೊಳಗಿರುವ ಕವಿ ಸತ್ತೋದ. ಕಾಯ್ಕಿಣಿ ಅವರ ಬೇರೆ ಕತೆಗಳನ್ನ ಓದಿ ವಾವ್ ಅನಿಸಿದ್ದ ನನಗೆ ಈಗ ಈ ಕತೆಗಳನ್ನ ಓದಿದ್ರೂ ವಾವ್ ಅನಿಸ್ತಾನೆ ಇಲ್ಲ. ಸಿಕ್ಕಾಪಟ್ಟೆ ಜನಕ್ಕೆ ಇಷ್ಟವಾದ ನೋ ಪ್ರೆಸೆಂಟ್ಸ್ ಪ್ಲೀಸ್ ನನಗೆ ವಿಶೇಷ ಅನಿಸಲೇ ಇಲ್ಲ. ಇನ್ನ ಅವರ ಕತೆಗಳಲ್ಲಿ ಬರುವ ಸ್ವಾಭಾವಿಕ ಆದ್ರೆ ಕಣ್ಣಿಗೆ ಕಾಣದ ಮ್ಯಾಜಿಕಲ್ ಜಗತ್ತು ಈಗೀಗ ನನಗೆ ಅವರ ಕತೆಗಳನ್ನ ಓದೋವಾಗ ಸಿಗೋದೆ ಇಲ್ಲ. ಕವಿ, ಕಾವ್ಯ, ಸೌಂದರ್ಯ ಅಂತೆಲ್ಲ ಬರೋ, ಸಿಗೋ ಹೆಚ್ಚಿನ ವಿಷಯಗಳು ನನಗೆ ಇಷ್ಟ ಆಗ್ದೇ ಇರೋದ್ರಿಂದ ಈ ಕತೆಗಳೂ ಹಾಗೆ ಆಯ್ತು ಅನಿಸುತ್ತೆ. ಹಾಗಂತೆ ಬೇರೆ ಬೇರೆ ಪುಸ್ತಕಗಳು ಅದರಲ್ಲೂ ಇತ್ತೀಚೆಗೆ ಓದಿದೆ ಪುಸ್ತಕಗಳಲ್ಲಿ ಕೆಲವೊಂದು ತುಂಬಾ ಇಷ್ಟವಾದವೂ ಇವೆ. ನನಗೆ ಗೊತ್ತು ನಿಮಗೆ ಇಷ್ಟ ಆಗುತ್ತೆ ಅಂತೆ. ಮಿಸ್ ಮಾಡ್ದೆ ಓದಿ. ಜೈ!
"ತೂಫಾನ್ ಮೈಲ್" ಓದಿದ ಮೇಲೆ ತಲೆಯಲ್ಲಿ ಪ್ರಶ್ನೆಗಳ ತೂಫಾನ್ ಬೀಸುವುದು ಪಕ್ಕಾ. ಎಲ್ಲ ಕಥೆಗಳು ಮುಂಬೈಗೆ ಕನಸು ಹೊತ್ತು ಬಂದ ಅಥವಾ ಅಲ್ಲೇ ನೆಲೆಯೂರಿ ಆರ್ಥಿಕ ಇಕ್ಕಟ್ಟಿನಲ್ಲಿ ಬೆಂದು-ನೊಂದ ಮನಸಿನವು. ಯಾವುದೇ ಕಥೆಗಿಲ್ಲಿ ನಿರ್ದಿಷ್ಟ ಕೊನೆ ಇಲ್ಲ, ಎಲ್ಲವೂ ಪ್ರಶ್ನಾರ್ಥಕ. ಜಯಂತ್ ಕಾಯ್ಕಿಣಿಯವರು ಎಲ್ಲ ವರ್ಗದ ಹಾಗೂ ಬೇರೆ ಬೇರೆ ಮನುಷ್ಯನ ತರಹ-ತರಹದ ಭಾವನೆಗಳನ್ನು ಇಲ್ಲಿ ಬಲೆ ಬೀಸಿ ನಮಗೆ ಸೆರೆ ಹಿಡಿದುಕೊಟ್ಟಿದ್ದಾರೆ. ಬಹು ಬೇಗ ಓದಿ ಮುಗಿಸಬಹುದಾದ ಕಥೆಗಳ ಸಂಕಲನವಿದು. ಓದಿ, ಭಾವದಲೆಯಲ್ಲಿ ತೇಲಿ.
Started reading this book as soon as i came back from Mumbai. Jayanth Kaykini writes about some simple scenarios happening in mumbaikar's day to day life. It has 10 short stories depicting the mumbai localities as well along with the chraracters, these stories are written in a philosophical way, like some incidents happening between mumbaikars every day. I'd rate this 4/5.
Jayanth is one of my favorite short story writers. I love his stories because of the living essence imbibed in them. Particularly in this collection, he has touched a new level of "humanism". The way he portrays the characters in his stories is unique to Jayanth. Stories like " No presents please.. ", " Tik Tik geleya" shows his deep understanding of human values and sensitivity. I found many stories heartwarming. There are certain stories which drags you to some other world filled with lot of emotions. The lucid style ( trademark Jayanth ) continues in this collection too. It is a very good read.
Karnad was right when he said, " ... ಓದಬೇಕು ಅನ್ನಿಸುವ ಅಪೂರ್ವ ಸೆಳೆತದ ಲೇಖಕ ಜಯಂತ "
Collection of small stories of maximum 10 pages. Every line or every other line leads to deep thinking Every paragraph makes to different perspective to the scenario Ending are awesome in some stories. Some stories are very abstract. Enjoyed it