Dr S.L. Bhyrappa is a litterateur par excellence. He writes in the south Indian language, Kannada, and has been the bestselling novelist for over 25 years now. His novels are widely translated to pan Indian languages. He is the bestselling novelist in Marathi over the past decade and is among the top-five bestselling authors in Hindi. He is a conscious artist that depicts fundamental human emotions in his novels. In addition to his profound knowledge of Indian philosophical and cultural traditions, Professor Bhyrappa has since his childhood had intense personal experiences in both rural and urban milieu. Consequently, his characters are deeply rooted in Indian soil. Seminars have been and are being held on his novels, and volumes of literary criticism have been published on his works.
His books have found their way to the curriculum of undergraduate and postgraduate degree courses of the universities in the state of Karnataka, and have been the subject of about 20 PhD dissertations. He has penned 24 novels and four volumes of literary criticism and books on aesthetics, social issues and culture. Most of his novels are translated into almost all the Indian languages and six into English. He has served as a Prof. of Philosophy over three decades at NCERT.
Dr Bhyrappa is an avid listener of both Indian and Western classical music and has a keen eye for Art. Travelling has been his paasion since childhood and he has travelled across the globe touching the glaciers of poles, forests of Amazon, deserts of Africa, bustling cities of Europe and the United States. He has trekked in the Alps, the Rockies, Andes and in Fujiama, but the Himalayas remain his greatest passion.
Academic Publications in English -------------------------------------- Values in Modern Indian Educational Thought, 1968 (New Delhi: National Council of Educational Research and Training) Truth & Beauty: A Study in Correlations, 1964 (Baroda: M. S. University Press) 20 Research Papers published in various Journals like Indian Philosophical Quarterly, Darshana International, Journal of University of Baroda
Research and Fellowship ---------------------------- National Research Professor, Government of India, 2014 One of the five members of the Indian Literary Delegation that visited China on invitation by the Government of China, 1992 Ford Foundation Award to visit the USA to study the cultural problems of Indian immigrants to the USA, 1983 British Council Fellowship tenured at the School of Education, University of London, 1977
ಔಟ್‌ಡೇಟೆಡ್ ಆಗದೇ ಸಾರ್ವಕಾಲಿಕವಾಗುವಂತಹ ವಿಚಾರಧಾರೆಗಳನ್ನು ಹೊಂದಿರುವ ಪುಸ್ತಕಗಳಿಗೆ ಸಾವಿರುವುದಿಲ್ಲ. ಅಂತಹ ಪುಸ್ತಕಗಳ ಸಾಲಿನಿಂದ "ದೂರ ಸರಿದರು" ಎಂದೂ ದೂರ ಸರಿಯುವುದಿಲ್ಲ. ಯಾವುದಾದರೊಂದು ಜೀವನ ಘಟ್ಟದಲ್ಲಿ ನಮ್ಮೆಲ್ಲರಿಗೂ ಪ್ರೀತಿ ಒಲಿಯುತ್ತದೆ. ಆ ಪ್ರೀತಿ ಹಂತ ಹಂತವಾಗಿ ಮೇಲೇರಿ ಭಾವನಾತ್ಮಕವಾಗಿ ಗಟ್ಟಿಗೊಳ್ಳುತ್ತಾ ಹೋಗಬೇಕು, ಸತ್ವಗೊಳ್ಳುತ್ತಾ ಹೋಗಬೇಕು. ಇಬ್ಬರ ನಡುವೆ ಇರುವ ಭಿನ್ನಾಭಿಪ್ರಾಯಗಳು, ಇಬ್ಬಗೆಯ ವಿಚಾರ ಸರಣಿ ಎಲ್ಲವನ್ನೂ ತಾಳಿ ಹಾಕುತ್ತಾ ತೂಗಿಸಿಕೊಳ್ಳುತ್ತಾ ಸಾಗಬೇಕು. ಇಲ್ಲವಾದಲ್ಲಿ ಪ್ರೀತಿಯ ಉಳಿವು ಕಷ್ಟ. ಆ ರೀತಿಯಾಗದೇ ಇಬ್ಬರು ಉಳಿದುಕೊಂಡಿದ್ದರೆ ಅಲ್ಲಿ ಪ್ರಾಯಶಃ ಪ್ರೀತಿ ಇರುವುದಿಲ್ಲ.
ಪುಸ್ತಕದಲ್ಲಿ ಪ್ರೀತಿಯೆಡೆಗೆ ಕಲೆ ಮತ್ತು ತತ್ವಗಳಿಗಿರುವ ವಿರೋಧಾಭಾಸಗಳನ್ನು ಕಾಣಬಹುದು. ಪ್ರೀತಿ ಒಬ್ಬ ಕವಿಗೆ ಸ್ಫುರಿಸುವ ರೀತಿಗೂ ಮತ್ತು ತತ್ವಜ್ಞಾನಿಗೆ ಸ್ಫುರಿಸುವ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಸೂಕ್ಷ್ಮವಾಗಿ ಭೈರಪ್ಪರವರು ಬರೆದಿದ್ದಾರೆ. ಬರುವ ಪಾತ್ರಗಳು, ಒಳಜಾತಿ ಪಂಗಡಗಳು, ಅಂತಸ್ತು ಇನ್ನೂ ಮುಂತಾದ ವಿಷಯಗಳು ಕಾದಂಬರಿಯನ್ನು ಯಶಸ್ವಿಯಾಗಿ ಓದಿಸುಕೊಳ್ಳುತ್ತವೆ.
ಕವಿಗೆ ಅಥವಾ ಕಲಾವಿದನಿಗೆ ತನ್ನ ಸಂಗಾತಿ ಆರಾಧಿಸಿಕೊಂಡ ದೇವರೇ ಸರಿ. ಅಲ್ಲಿ ವಿಚಾರ ಸಾಮ್ಯತೆಗಿಂತ ಭಾವಸಾಮ್ಯಗಳಿರಬೇಕು ಮತ್ತು ಅದೇ ದೀರ್ಘಕಾಲ ಉಳಿಯಬೇಕೆಂಬ ವಾದಗಳಿವೆ. ಒಬ್ಬರ ಅಭಿರುಚಿಯನ್ನು ಇನ್ನೊಬ್ಬರು ಗೌರವಿಸಿ ಪ್ರೀತಿಯುತವಾಗಿ ಸಹಬಾಳ್ವೆ ನಡೆಸುವುದು ಪ್ರೀತಿಯ ಮೂಲಭೂತ ಕರ್ತವ್ಯ ಎಂಬುದು ಬಹುಪಾಲು ಜನರಿಗೆ ಸರ್ವಸಮ್ಮತ.
ಇನ್ಮೊಂದಡೆ, ತತ್ವಜ್ಞಾನಿಯ ವಾದಗಳು ಬೇರೆಯವೇ ಆಗಿರುತ್ತವೆ. ಅಲ್ಲಿ ಭಾವಕ್ಕಿಂತ ವಿಚಾರಸಾಮ್ಯತೆಗೆ ಪ್ರಾಶಸ್ತ್ಯ ಹೆಚ್ಚು ಎಂದರೇ ತಪ್ಪಾಗಲಾರದು. ಇಂತಹ ವಾದಗಳಿರುವವರ ನಡುವೆ ಎ ಪಾರ್ಟ್ನರ್ ಇಸ್ ಜಸ್ಟ್ ಎ ಕಂಪ್ಯಾನಿಯನ್. ಪ್ರೀತಿ, ಕಾಮ, ಮರುಸೃಷ್ಟಿ ಎಲ್ಲವೂ ಪ್ರಕೃತಿಯ ಒಂದು ಭಾಗವಷ್ಟೇ. ಭಾವಗಳ ಅವಶ್ಯಕತೆಗಿಂತ ಒಂದೇ ರೀತಿಯ ಆಲೋಚನೆಗಳು ಬಹು ಕಾಲ ಸಂ"ಬಂಧ"(?!)ವನ್ನು ಉಳಿಸಬಲ್ಲವು ಎನ್ನುತ್ತಾರೆ.
ಒಟ್ಟಾರೆ ಪ್ರೀತಿಯೆಡೆಗೆ ಕಲೆಯಲ್ಲಿನ ಅನುಸರಿಸುವಿಕೆ ಮತ್ತು ತತ್ವದ ಸಮಾನತೆಯ ವಾದಗಳು ದೂರ ಸರಿದರು ಪುಸ್ತಕದ ಒಡಲಾಳ. ಆ ವಾದವೂ ಸಮರ್ಥವಾಗಿ ಪ್ರಕಟವಾಗಿದೆ. ಇದಕ್ಕೊಂದು ಸಮತೋಲಿತ ಉತ್ತರವನ್ನು ಕಂಡುಕೊಳ್ಳುವುದು ಸಾಧ್ಯವಾ? ಕಲೆಯಾ? ತತ್ವವಾ? ಅಥವಾ ಎಲ್ಲವನ್ನೂ ಮೀರಿದ ಪ್ರೀತಿಯಾ? ಈ ಎಲ್ಲಾ ಪ್ರಶ್ನೆಗಳು ನಮ್ಮೆಲ್ಲರಲ್ಲೂ ಬರುತ್ತವೆ. ಈ ಪುಸ್ತಕ ಓದಿದ ನಂತರ ಪ್ರತಿ ಓದುಗನಿಗೂ ಭಿನ್ನವಾದ ಉತ್ತರ ಕಾಣಿಸಬಹುದು.
ಈ ಎಲ್ಲಾ ವಿಚಾರಧಾರೆಗಳನ್ನು ಹೊತ್ತಿರುವ ಪಾತ್ರಗಳು ಇಷ್ಟವಾಗುತ್ತವೆ. ಒಂದು ಕ್ಷಣಕ್ಕೆ ಅದೇ ಹಳೆ ಮೈಸೂರಿಗೆ ಹೋಗಿ ಪಾತ್ರವಾಗಬೇಕು ಎನಿಸುತ್ತವೆ. ಆಗುತ್ತೇವೆ ಕೂಡ! ಅಲ್ಲಿನ ಪಾತ್ರವರ್ಗದಲ್ಲಿ ನಮಗೆ ಸಾಮ್ಯವಾದ ಪಾತ್ರಗಳೊಂದಿಗೆ ಬೆರೆತು ಒಂದು ಶೋಧನಾ ಕಾರ್ಯ ಶುರುವಾಗುತ್ತದೆ. ಒಂದೇ ಓದಿಗೆ ಓದಿಸಿಕೊಳ್ಳಬಲ್ಲ ಅಪೂರ್ವವಾದ ಪುಸ್ತಕ. ಓದಿ!!!
ಎಂದಿನಂತೆ ಈಗಾಗಲೇ ಓದಿದ್ದರೆ ನಿಮ್ಮ ಅಭಿಪ್ರಾಯವನ್ನು ನನ್ನೊಂದಿಗೂ ಹಂಚಿಕೊಳ್ಳಿ.
ಬಾಹ್ಯ ಸೌಂದರ್ಯಕ್ಕಷ್ಟೇ ಮನಸೋತು, ಗೆದ್ದ ಅಥವಾ ಸೋತ ಪ್ರೇಮಕತೆಗಳೇ ಹೇರಳವಾಗಿ ಇದ್ದು ಪ್ರೇಮಿಗಳ ಭೌತಿಕ ಸೌಂದರ್ಯವೇ ಪ್ರೀತಿಗೆ ಮೂಲ ಪ್ರೇರಣೆ ಎಂಬ ಹುಸಿನಂಬಿಕೆಯನ್ನು ಕೊಚ್ಚಿಹಾಕುವ ಮುಖ್ಯ ಕೃತಿವಿದು. ಬಾಹ್ಯ ಸೌಂದರ್ಯದ ಹೊರತು ಗಂಡು ಹೆಣ್ಣಿನ ನಡುವೆ ನಡೆಯುವ ಬೌದ್ಧಿಕ ಸಂವಾದ, ವೈಚಾರಿಕ ಸಾಮ್ಯತೆ ಹಾಗೂ ವೃತ್ತಿಪರ ನಿಯೋಜನೆಯೂ ಪ್ರೇಮದ ಚಿಗುರಿಗೆ ಕಾರಣವಾಗಬಹುದು ಎಂಬುದನ್ನು ಹಲವಾರು ಜೋಡಿಗಳ ಕಥೆಗಳ ಮೂಲಕ ಈ ಕಾದಂಬರಿ ಮನದಟ್ಟು ಮಾಡಿಕೊಡುತ್ತದೆ.
ಒಂದೊಳ್ಳೆ ಓದು, ಕಾದಂಬರಿಯ ಕೆಲ ಸಂಭಾಷಣೆಗಳು ವಿಚಾರದ ದೀವಿಗೆಯನ್ನು ಹಚ್ಚುತ್ತದೆ.
ಒಂದಷ್ಟು ಇಷ್ಟವಾದ ಸಾಲುಗಳು.
"ಯಾವ ತತ್ತ್ವವೂ ಇಲ್ಲದೆ ಇರುವ ಸಾಹಿತ್ಯವಾದರೂ ಯಾವುದು? ತತ್ತ್ವಶಾಸ್ತ್ರದ ಆಳವಾದ ಪರಿಚಯ, ದೃಷ್ಟಿಕೋನ ಇಲ್ಲದ ಯಾವ ಬರಹವೂ ನಿಜವಾದ ಸಾಹಿತ್ಯವಾಗಲಾರದು. ಪ್ರಪಂಚದ ದೊಡ್ಡ ದೊಡ್ಡ ಬರಹಗಾರರೆಲ್ಲರೂ ದೊಡ್ಡವರೆನಿಸಿಕೊಂಡಿರುವುದು ಅವರ ಲೇಖನದಲ್ಲಿ - ಕತೆ, ಕವನ, ನಾಟಕ ಯಾವುದೇ ಇರಲಿ, ಕಾಣುವ ಜೀವನದರ್ಶನದಿಂದ. ಜೀವನದರ್ಶನದಿಂದ ಕನ್ನಡಿಯಷ್ಟು ತಿಳಿಯಾಗಿ, ತರ್ಕಬದ್ಧವಾಗಿ ಹೇಳುವುದು ತಾನೇ ತತ್ತ್ವಶಾಸ್ತ್ರವೆಂದರೆ?"
"ಯಾವುದನ್ನು ನಮ್ಮ ಒಳಿತಿಗೆಂದು ಹುಟ್ಟುಹಾಕಿ ಪೋಷಿಸ್ತೀವೋ ಅದೇ ನಮಗೆ ಮುಳ್ಳಾಗುತ್ತೆ. ವಿಚಿತ್ರವೆಂದರೆ, ಅದು ಮುಳ್ಳು ಅಂತ ತಿಳಿದಮೇಲೂ ಅದನ್ನು ಬಿಡಲಾಗದಂತೆ ಮೋಹದ ಸಂಸ್ಕಾರ ಬಲವಾಗುತ್ತೆ"
"ಜೀವನದಲ್ಲಿ ನಿರಾಶರಾದವರು ಸಾಮಾನ್ಯವಾಗಿ ಮದ್ಯಪಾನದಲ್ಲಿ ಮರೆಯುತ್ತಾರಂತೆ. ಅದರ ಬದಲು ಅವರು ನನ್ನಂತೆ ಕುಳಿತು ಯಾಕೆ 'ಓದಬಾರದು'? ಸುರಾದೇವಿ, ಸರಸ್ವತಿ, ಇಬ್ಬರಲ್ಲಿಯೂ ಒಂದೇ ಗುಣವಿದೆ: ನಮಗೆ ಮರೆಯುವ ಶಕ್ತಿ ಕೊಡುವುದು."
ಜೂನ್ 20ರಂದು ಓದಲು ಕುಳಿತ ಕಾದಂಬರಿ ಇದು. ಆದರೆ ಚಾರಣ, ಆಫೀಸ್ ಕೆಲಸ ಈ ಕಾದಂಬರಿಯನ್ನು ಒಂದು ತಿಂಗಳು ಓದುವ ಹಾಗೆ ಮಾಡಿತು. ಭೈರಪ್ಪ ಅವರ ಗೃಹಭಂಗ ಓದಿ ಸತತ ಒಂದು ತಿಂಗಳು ನಾನು ಅದೇ hangover ನಲ್ಲಿ ಈ ವರ್ಷವೂ ಕೂಡ ಭೈರಪ್ಪ ಅವರನ್ನು ಓದುವ ಹಂಬಲವಿತ್ತು. ಹಾಗಾಗಿ ನಾನೇ ಸೂಚಿಸಿಕೊಂಡ ಪುಸ್ತಕ ಇದು.
ಪ್ರಪಂಚದ ಯಾವುದೇ ತರಹದ ವ್ಯಕ್ತಿತ್ವ ಇರುವ ವ್ಯಕ್ತಿ ಸೋಲುವುದು ಪ್ರೀತಿಗೆ ಮಾತ್ರ. ಗಂಡಾಗಲಿ, ಹೆಣ್ಣಾಗಲಿ ಪ್ರೀತಿ ಎಂಬ ಮಾಯೆಗೆ ಶರಣಾಗುವರು ಎನ್ನುವುದಕ್ಕೆ ದೂರ ಸರಿದರು ಕಾದಂಬರಿಯೇ ಒಂದು ಸ್ಫೂರ್ತಿ.
ತತ್ತ್ವಶಾಸ್ತ್ರದ ಅಧ್ಯಯನದಿಂದ ಶುರುವಾಗುವ ಕತೆ, ನೈತಿಕತೆ ಮಹತ್ವವನ್ನು ಸಾರಿ, ಕಾಲೇಜಿನ ವಿದ್ಯಾರ್ಥಿಗಳ ಆವಿಷ್ಕಾರ, ಓದು, ಜೀವನದ ಹೋರಾಟವನ್ನು ಪ್ರತಿಬಿಂಬಿಸುತ್ತದೆ. ಆನಂದ, ವಿನತೆ, ವಸಂತ, ರಮೆ, ಉಮೆ, ವಾಸನ್, ಜಗದಾಂಬ ಹೀಗೆ ಹಲವಾರು ಪಾತ್ರಗಳು ನಿಮ್ಮ ಮನಸ್ಸಿನಲ್ಲಿ ಮನೆ ಮಾಡುವುದಂತು ಖಚಿತ. ಚರ್ಚಾ ಸ್ಪರ್ಧೆಯಲ್ಲಿ ವಿಚಾರಶಕ್ತಿಯನ್ನು ಸಾರಿ, ಕೊನೆಗೆ ಧರ್ಮ(ಜಾತಿಯ) ಗುದ್ದಾಟ, ನಿರಾಸೆ, ಹೊಸದೊಂದು ಅಭಿಮಾನ, ಮತ್ತೊಂದು ಕನಸು, ಚಿಗುರುವ ಪ್ರೀತಿ ಇವೆಲ್ಲವೂ ನಿಮ್ಮನ್ನ ಮೌನದ ಹಾದಿಗೆ ನೂಕುತ್ತದೆ. ಒಂದೇ ಮಾತಲ್ಲಿ ಹೇಳಬೇಕೆಂದರೆ One of the Matured love stories with more meaning.
ನನಗೆ ತುಂಬಾ ಕಾಡಿದ ಎರಡು ದೃಶ್ಯಗಳು: ೧. ತಲಕಾಡಿನಲ್ಲಿ ಕಳೆಯುವ ಸಮಯ. ೨. ವಿನತೆ ಅವಳ ಪ್ರೇಮಿಯ ಜೊತೆ ಕಳೆದ ಆರು ದಿನಗಳು.
ಕಾದಂಬರಿ ಮುಗಿಯುವ ಹೊತ್ತಿಗೆ ಒಳ್ಳೆ ಮನಸ್ಸಿನ ಹುಡುಗಿಯರೆಲ್ಲರೂ ತಾವೇ ವಿನತೆ ಎಂದು ಹೇಳುತ್ತಾ, ಒಂದ್ ಸ್ವಲ್ಪ ಹೊತ್ತು ಕಣ್ಣೀರು ಹಾಕುವುದಂತೂ ಖಚಿತ .
ಭೈರಪ್ಪ and his explaination towards female characters has got a separate fanbase. ಈ ರೀತಿ ಹೇಳುವಲ್ಲಿ ನಾನು ಒಬ್ಬಳು.
ಯಾರು ದೂರ ಸರಿದರು? ಅಥವಾ ದೂರ ಸರಿದರು ಅನ್ನುವುದು ಕೇವಲ ಕಾದಂಬರಿಯ ಹೆಸರೇ? ವಿನತೆಯ ಪ್ರೇಮಿಯಾದರೂ ಯಾರು? ಈ ಕುತೂಹಲಕ್ಕಾದರೂ ಕಾದಂಬರಿಯನ್ನು ಕೊಂಡು ಓದಿ.
ನನ್ನ ಅತ್ಯಂತ ಇಷ್ಟದ ಸಾಲುಗಳು:
ಯಾವ ತತ್ವವು ಇಲ್ಲದೆ ಇರುವ ಸಾಹಿತ್ಯವಾದರೂ ಯಾವುದು? ತತ್ವಶಾಸ್ತ್ರದ ಆಳವಾದ ಪರಿಚಯ, ದೃಷ್ಟಿಕೋನ ಇಲ್ಲದ ಯಾವ ಬರಹವೂ ನಿಜವಾದ ಸಾಹಿತ್ಯವಾಗಲಾರದು ಪ್ರಪಂಚದ ದೊಡ್ಡ ದೊಡ್ಡ ಬರಹಗಾರರೆಲ್ಲರೂ ದೊಡ್ಡವರೆನಿಸಿಕೊಂಡಿರುವುದು ಅವರ ಲೇಖನದಲ್ಲಿ ಕಥೆ ಕವನ ನಾಟಕ ಯಾವುದೇ ಇರಲಿ ಕಾಣುವ ಜೀವನಾದರ್ಶನದಿಂದ ಜೀವನಾದರ್ಶನದಿಂದ ಕನ್ನಡಿಯನ್ನು ತಿಳಿಯಾಗಿ ತರ್ಕಬದ್ಧವಾಗಿ ಹೇಳುವುದು ತಾನೇ ತತ್ವಶಾಸ್ತ್ರವೆಂದರೆ?
ಜೀವನದಲ್ಲಿ ನಿರಾಶರಾದವರೂ ಸಾಮಾನ್ಯವಾಗಿ ಮದ್ಯಪಾನದಲ್ಲಿ ಮರೆಯುತ್ತಾರಂತೆ ಅದರ ಬದಲು ಅವರು ನನ್ನಂತೆ ಕುಳಿತು ಯಾಕೆ ಓದಬಾರದು? ಸುರಾದೇವಿ, ಸರಸ್ವತಿ ಇಬ್ಬರಲ್ಲಿಯೂ ಒಂದೇ ಗುಣವಿದೆ ನಮಗೆ ಮರೆಯುವ ಶಕ್ತಿ ಕೊಡುವುದು.
ನಮ್ಮ ಪ್ರಯತ್ನಕ್ಕೆ ಸಿಗುವ ಕೆಲವು ವಸ್ತುಗಳಿವೆ ವಿದ್ಯೆ ಹಣ ಜೀವನದ ಇತರ ಸೌಕರ್ಯಗಳು. ಇವೆಲ್ಲ ಸತತವಾಗಿ ಹೆಣಗುವ ಯಾರಿಗಾದರೂ ಸಿಕ್ಕುತ್ತವೆ. ಆದರೆ ತಾನು ಪ್ರೀತಿಸುವ ವ್ಯಕ್ತಿ ಹೆಂಗಸಾಗಲಿ ಗಂಡಸಾಗಲಿ ಸಿಕ್ಕುವುದು ಕೇವಲ ನಮ್ಮ ಪ್ರಯತ್ನವನ್ನೇ ಅವಲಂಬಿಸಿಲ್ಲ ಅದಕ್ಕೆ ಅದೃಷ್ಟವೂ ಬೇಕಂತ ತೋರುತ್ತೆ.
ಭೈರಪ್ಪ ಅವರ ಜನ್ಮದಿನದಂದು ಈ ಪುಸ್ತಕದ ಅನಿಸಿಕೆ ಅವರಿಗೆ ಅರ್ಪಣೆ ಮಾಡುತ್ತಿದ್ದೇನೆ.
ಪ್ರೀತಿಯನ್ನು ವ್ಯಾಖ್ಯಾನ ಮಾಡುವುದು ಕಷ್ಟ. ಎಲ್ಲದಕ್ಕೂ ಮೀರಿದ ಪ್ರೀತಿಯು ಎಲ್ಲರಿಗೂ ದಕ್ಕುವುದು ಅಪರೂಪ. ಈ ಕೃತಿಯಲ್ಲಿ ಬರುವ ಜೋಡಿಗಳಿಗೆ ಪ್ರೀತಿ ದಕ್ಕುವುದಿಲ್ಲ. ತಮ್ಮದೇ ಆದ ಪರಿಸ್ಥಿತಿಗಳಿಂದ ದೂರ ಸರಿಯುತ್ತಾರೆ. ಆ ದೂರ ಸರಿಯುವ ಕ್ರಿಯೆ ಓದುಗನನ್ನು ಕದಡಿಸುವುದೇ ಇರುವುದಿಲ್ಲ.
ವಿಚಾರವಂತಿಕೆ ಮತ್ತು ಭಾವನಾತ್ಮಕತೆಯ ತಳಹದಿಯಲ್ಲಿ ಪ್ರೀತಿಯ ಸ್ವರೂಪವನ್ನು ನಿರೂಪಿಸಿರುವ ಕೃತಿ #ದೂರಸರಿದರು.
ವೈಚಾರಿಕತೆಯನ್ನು ಹೆಗಲಗೇರಿಸಿಕೊಂಡಿರುವ ವಸಂತನಿಗೆ ಉಮೆಯ ಸಹಚರ್ಯ ಮೊದಲಿಗೆ ಖುಷಿಯೆನಿಸಿದರು ನಂತರ ಅವಳು ವೈಚಾರಿಕತೆಯಿಂದ ವಿಮುಖಳಾದ್ದರಿಂದ ಅವರಿಬ್ಬರೂ ದೂರ ಸರಿಯುತ್ತಾರೆ. ವಸಂತನ ವಿಚಾರವಂತಿಕೆ ಸರಿಯಿದ್ದರೂ ಅದು ಭಾವದ ಅಭಿವ್ಯಕ್ತಿಯೊಳಗೆ ಮಿಳಿತಗೊಳ್ಳದೆ ಇರುವುದು ಪ್ರೀತಿಫಲಿಸದೆ ಇರುವುದಕ್ಕೆ ಮುಖ್ಯ ಕಾರಣವಾಗುತ್ತದೆ.
ಭಾವನಾತ್ಮಕತೆಯ ಜೊತೆಗೆ ವೈಚಾರಿಕತೆಯನ್ನು ಮೈಗೂಡಿಸಿಕೊಂಡ ಆನಂದನಿಗೆ ವಿನಯಳ ಅತಿ ಭಾವನಾತ್ಮಕತೆ ಮತ್ತು ಅಸಹಾಯಕತೆಯೇ ಅವರಿಬ್ಬರ ಪ್ರೀತಿಗೆ ಮುಳುವಾಗತ್ತದೆ.
ಒಂದು ಅಭಿಪ್ರಾಯವನ್ನು ಸಕಲರು ಒಪ್ಪುವುದಿಲ್ಲ. ಅದು ಒಬ್ಬರಿಂದ ಒಬ್ಬರಿಗೆ ಬೇರೆಯಾಗಿಯೇ ಇರುತ್ತದೆ. ಇಲ್ಲಿಯ ಪಾತ್ರಗಳ ದೃಷ್ಟಿಯಲ್ಲಿ ಅವುಗಳ ಅಭಿಪ್ರಾಯ ಅವುಗಳಿಗೆ ಸರಿ ಎಂದೇ ಅನಿಸುತ್ತದೆ.
ಇನ್ನೂ ಈ ಕೃತಿಯಲ್ಲಿ.. ಆನಂದ-ರಮ ರ ಅಮೂರ್ತ ಪ್ರೀತಿ, ಜಗದಾಂಬೆ-ವಿನುತಾಳ ಸ್ನೇಹ ಪ್ರೀತಿ, ನರೋತ್ತಮ್-ರಮ..ರಾಮಮೂರ್ತಿ-ವಿಜಯಳ ವಂಚನೆಯ ಪ್ರೀತಿ, ವಾಸನ್-ವಿಜಯರ ಅವಸರದ ಪ್ರೀತಿ, ಆನಂದ್ ಮತ್ತು ಅವನ ತಾಯಿಯ ವಾತ್ಸಲ್ಯ ಪ್ರೀತಿ, ವಿನುತಾ ಮತ್ತು ಅವಳ ತಾಯಿಯ ಜಿಗುಟು ಪ್ರೀತಿ. ಹೀಗೆ ಪ್ರೀತಿಯ ವಿವಿಧ ಸ್ವರೂಪಗಳು ಕಾಣಿಸುತ್ತವೆ.
ಮೊದಲಿಗೆ ತರ್ಕ ವಿಚಾರಗಳೇ ಜಾಸ್ತಿಯೆಂದೆನಿಸಿ ಕೃತಿಯ ಪ್ರವೇಶಕ್ಕೆ ಸ್ವಲ್ಪ ನಿಧಾನವಾಯಿತು. ಆದರೆ ಮುಂದೆ ಕಥೆಯು ಸರಾಗವಾಗಿ ಸಾಗಿದಂತೆ ನನ್ನೊಳಗೆ ಮಥಿಸಲು ಶುರುವಾಗಿದ್ದಂತೂ ನಿಜ.
ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನುಷ್ಯನ ಮನೋವ್ಯಾಪರವನ್ನು ತರ್ಕದೊಂದಿಗೆ ಸಮೀಕರಿಸಿಕೊಂಡು ಅತ್ಯಂತ ಸಹಜವಾಗಿ ಪ್ರೀತಿಯನ್ನು ಪ್ರಸ್ತುತಪಡಿಸುತ್ತದೆ.
This is an excellent novel. It is mainly for the philosophy enthusiastic people. Each and every character that comes across in this novel is a bundle of philosophy. Be it Sachindananda, Vasantha, Vinitha or Uma. All these 4 characters can be considered as protagonists of the novel. One character which I found really imperssive is the lecturer character Varadamma and her short background story. Overall, as per my view, this book is for serious philosophy students and for those who are interested to know the philosophical aspects of life. A must read!
ಭಾವನೆಗಳ ಗಂಭೀರತೆ, ಸಂಬಂಧಗಳ ಸಂಕೀರ್ಣತೆ ಮತ್ತು ವ್ಯಕ್ತಿತ್ವಗಳ ತಳಮಳವನ್ನು ನಿಖರವಾಗಿ ಹಿಡಿದಿಟ್ಟಿರುವ ಭೈರಪ್ಪರ ಆಳವಾದ ಕಾದಂಬರಿ – ದೂರ ಸರಿದರು.
ಈ ಕಾದಂಬರಿಯು ವ್ಯಕ್ತಿಯ ಆಂತರಿಕ ಯಾನವನ್ನೂ, ಆತನ ಸಂಬಂಧಗಳು ಹೇಗೆ ಕಾಲದ ಹರಿವಿನಲ್ಲಿ ಬದಲಾಗುತ್ತವೆ ಎಂಬುದನ್ನೂ ತೀವ್ರವಾಗಿ ಚಿತ್ರಿಸುತ್ತದೆ.
ಪ್ರತಿಯೊಬ್ಬ ಪಾತ್ರವೂ ನಿಜ ಜೀವನದ ಪ್ರತಿಬಿಂಬವಾಗಿವೆ – ಇವರ ನಡುವಿನ ಮಾತುಕತೆಗಳು, ವೈಚಾರಿಕ ಸಂಘರ್ಷಗಳು ಮತ್ತು ದೂರವಾಗುವ ಕಾರಣಗಳು ಓದುಗರ ಮನಸ್ಸಿನಲ್ಲಿ ಆಳವಾಗಿ ಹತ್ತಿರವಾಗುತ್ತವೆ. ಭೈರಪ್ಪರ ಭಾಷೆ ಸಂವೇದನಾಶೀಲವಾಗಿದ್ದು, ತತ್ವಚಿಂತನೆಯ ನುಡಿಮುತ್ತುಗಳಿಂದ ತುಂಬಿರುತ್ತದೆ.
ಅಂತರ್ಗತ ಪ್ರಶ್ನೆಗಳು, ಆಲೋಚನೆಗೆ ಎಳೆದೊಯ್ಯುವ ಸಂಭಾಷಣೆಗಳು ಈ ಕಾದಂಬರಿಯನ್ನು ಕೇವಲ ಕಥೆಯಷ್ಟೇ ಅಲ್ಲ, ಬದುಕಿನ ಪ್ರತಿಬಿಂಬವನ್ನಾಗಿ ಮಾಡುತ್ತದೆ.
ಯಾಕೆ ಓದಬೇಕು?
ದೂರ ಸರಿದರು ಓದುಗರಿಗೆ ಆತ್ಮವಿಚಾರಣೆಗೆ ದಾರಿ ತೋರುತ್ತದೆ. ಭಾವನೆಗಳ ನಿಜತೆಗೆ ನೋಟ ಹಾಕಲು ಸಹಾಯ ಮಾಡುತ್ತದೆ.
*ದೂರ ಸರಿದರು (೧೯೬೨)* --- ಎಸ್.ಎಲ್.ಭೈರಪ್ಪ ಈ ಕಾದಂಬರಿಯನ್ನು ಓದುವಾಗ ಹಲವಾರು ಭಾರಿ ದೂರ ಸರಿದೆ, ಅವರ ಇತರ ಕಾದಂಬರಿಗಳನ್ನು ಓದಿ ಮುಗಿಸಿದ ನನಗೆ ಇದೊಂದು ಮಾತ್ರ ಉಳಿಯುತ್ತಲೇ ಇತ್ತು. ಈ ಭಾರಿ ಪಟ್ಟು ಹಿಡಿದು ಓದಿದೆ.
ಇಲ್ಲಿ ಬರುವ ಎಲ್ಲಾ ಪಾತ್ರಗಳೂ ಒಳ್ಳೆಯವೇ, ಅವರವರ ಅಭಿಪ್ರಾಯದ ಪ್ರಕಾರ ಯೋಚಿಸಿದರೆ ಅವರ ನಿರ್ಧಾರಗಳು ಒಮ್ಮೊಮ್ಮೆ ಸರಿ ಅನಿಸುತ್ತದೆ ಒಮ್ಮೊಮ್ಮೆ ತಪ್ಪನಿಸುತ್ತದೆ. ಅವರುಗಳ ನಿರ್ಧಾರದಿಂದ ಅವರ ಜೀವನದಲ್ಲಾಗುವ ಬದಲಾವಣೆಗಳನ್ನು ಆನಂದ,ವಿನುತ,ವಸಂತ,ಉಮ,ರಮೆ,ಜಗದಾಂಬ ಈ ಪಾತ್ರಗಳ ಮೂಲಕ ಭೈರಪ್ಪನವರು ಅದ್ಭುತವಾಗಿ ವಿವರಿಸಿದ್ದಾರೆ. ಪ್ರೀತಿ ಇದ್ದಲ್ಲಿ ಧೈರ್ಯವಿರಬೇಕು, ತಾಳ್ಮೆಯಿರಬೇಕು, ಒಮ್ಮತ ಅಭಿಪ್ರಾಯಗಳಿರಬೇಕು ಹಾಗೂ ಇನ್ನೂ ಹಲವಾರು ಅಂಶಗಳ ಬಗ್ಗೆ ಇವರ ಪಾತ್ರದ ಮೂಲಕ ತಿಳಿಸಿದ್ದಾರೆ.
ಆನಂದನು ಓದಿನಲ್ಲಿ ಪ್ರವೀಣನು, ಒಳ್ಳೆಯ ಸಾಹಿತಿಗಾರನೂ ಸಹ. ಇಡೀ ಕಾಲೇಜಿಗೆ ಆನಂದನು ಪ್ರಸಿದ್ಧನಾಗಿರುತ್ತಾನೆ,ತನ್ನ ಸಹಪಾಟಿಗಳಿಗೆ ಆನಂದನ ಬಗ್ಗೆ ತಿಳಿದಿರುವಷ್ಟು ಆನಂದನಿಗೆ ತನ್ನ ಸಹಪಾಟಿಗಳ ಬಗ್ಗೆ ಅಷ್ಟು ಯಾಕೆ ಕೆಲವರ ಹೆಸರುಗಳು ಅವನಿಗೆ ತಿಳಿದಿರುವುದಿಲ್ಲ ಅಷ್ಟು ಮಗ್ನತೆ ತತ್ವಶಾಸ್ತ್ರ ದಲ್ಲಿ ಹಾಗು ಸಾಹಿತ್ಯದಲ್ಲಿ, ರಮೆ ಮತ್ತು ವಿನತೆಯರು ಅವನಿಗೆ ಪರಿಚಯವಾಗುತ್ತಾರೆ ಪ್ರತಿಸಲ ಭೇಟಿಯಾದಾಗಲೆಲ್ಲ ಬರೀ ಓದುವ ಬಗ್ಗೆ ಸಾಹಿತ್ಯದ ಬಗ್ಗೆ ಮಾತಾನಾಡುತಿದ್ದರು. ಆನಂದ ಮತ್ತು ವಿನತೆಯ ಸ್ನೇಹವು ಪ್ರೀತಿಗೆ ಪರಿವರ್ತನೆಗೊಳ್ಳುತ್ತದೆ. ರಮೆಗೆ ಆನಂದನ ಮೇಲೆ ಪ್ರೀತಿ ಬೆಳೆಯುತ್ತದೆ, ಅದನ್ನು ಆನಂದನಿಗೆ ವ್ಯಕ್ತಪಡಿಸಿದಾಗ ಆನಂದನು ನಿರಾಕರಿಸುತ್ತಾನೆ ಕಾರಣ ವಿನುತೆಯ ಮೇಲೆ ಪ್ರೀತಿಎಂಬ ಬೇರು ಬೆಳೆದುಬಿಟ್ಟುರುತ್ತದೆ ರಮೆಯು ತುಂಬ ದುಃಖ್ಖಿತಳಾಗುತ್ತಾಳೆ.
ವಿನತೆಯ ತಾಯಿಯು ಹೇಗೆಂದರೆ ಹಣವೇ ಮುಖ್ಯ, ಹಣದ ಮುಂದೆ ಬೇರೊಂದಿಲ್ಲವೆಂಬುದು ಅವರ ಅಭಿಪ್ರಾಯ. ಅವರ ಹಿರಿಯ ಮಗಳು ವಿಜಯಾ ವಾಸನ್ ನನ್ನು ಮದುವೆಯಾಗಿರುತ್ತಾಳೆ, ವಾಸನ್ ಕುಟುಂಬದವರು ಶ್ರೀಮಂತರೆ. ಆದರೇ ಇವರು ಕದ್ದು ಮದುವೆಯಾಗಿರುತ್ತಾರೆ ಅದಕ್ಕೆ ಆನಂದ ಹಾಗು ವಿನುತೆ ಸಹಾಯ ಮಾಡಿರುತ್ತಾರೆ, ಆ ಕಥೆಯನ್ನು ಹೇಳುವುದಕ್ಕಿಂತ ಓದಿದರೆ ಉತ್ತಮ. ಆನಂದನು ಶ್ರೀಮಂತನಲ್ಲ ಆದರೆ ಅವನಲ್ಲಿ ಒಳ್ಳೆಯ ಗುಣವಿದೆ. ವಿನುತೆಯ ತಾಯಿಯು ಇವರ ಪ್ರೇಮಕ್ಕೆ ಅಡ್ಡಿಯಾಗುತ್ತಾರೆ. ಆನಂದನು ತನ್ನ ಪ್ರೀತಿಯನ್ನು ವಿನುತೆಗೆ ವ್ಯಕ್ತಪಡಿಸಿದಾಗ ಆಕೆಗೆ ಆಗುವಷ್ಟು ಸಂತೋಷ ಹೇಳತೀರದು ಏಕೆಂದರೆ ಆಕೆಯ ಮನಸ್ಸಿನಲ್ಲಿ ಇರುವುದು ಆನಂದನೆ, ಆದರೆ ತನ್ನ ತಾಯಿಯು ಒಪ್ಪದಿರುವುದನ್ನು ತಿಳಿಸಿ ಆಕೆಯನ್ನು ಎದುರಿಸಲು ಅಸಾಧ್ಯವೆಂದು ಅವನಿಂದ ದೂರ ಹೋಗುತ್ತಾಳೆ. ವಿನುತೆಯ ಸ್ನೇಹಿತೆ ಜಗದಾಂಬ ಇವರನ್ನು ಒಟ್ಟುಗೂಡಿಸಲೆಂದು ಎಷ್ಟು ಪ್ರಯತ್ನಪಟ್ಟರೂ ಅದು ವ್ಯರ್ಥವಾಗುತ್ತದೆ. ರಮೆ ತಾನಾಗಿ ಬಂದು ಪ್ರೀತಿಯನ್ನು ವ್ಯಕ್ತಪಡಿಸಿದಾಗ ಆಕೆಯನ್ನು ನಿರಾಕರಿಸಿದ್ದು ಆಕೆಗಾದ ದುಃಖದ ಬೆಲೆ ಆನಂದನಿಗೆ ಅರಿವಾಗುತ್ತದೆ. ತನ್ನ ಮನಸ್ಸನ್ನು ಹತೋಟಿಗೆ ತಂದುಕೊಳ್ಳಲು ಬಾಬಾಬುಡಂಗಿರಿ,ಮುಳಳಯ್ಯನಗಿರಿಯಲ್ಲಿ ಕೆಲವು ಕಾಲ ಇದ್ದು ಎಲ್ಲವನ್ನೂ ಮರೆತು ಪುನಃ ಓದಲು ಶುರುಮಾಡುತ್ತಾನೆ.ಇಲ್ಲಿ ಬಾಬಾಬುಡಂಗಿರಿ,ಮುಳ್ಳಯ್ಯನಗಿರಿಯಲ್ಲಿ ಪರಿಸರದ ಸೊಬಗನ್ನು ಅದ್ಭುತವಾಗಿ ವರ್ಣನೆ ಮಾಡಿದ್ದಾರೆ.
ವಿನುತೆಗೆ ಕೆಲಸ ಸಿಕ್ಕಿ ನರಸೀಪುರಕ್ಕೆ ಹೋಗುತ್ತಾಳೆ ತನಗೆ ಬರುವ ಸಂಬಳದಿಂದ ತನ್ನ ತಮ್ಮಂದಿರನ್ನು ಓದಿಸುತ್ತಿರುತ್ತಾಳೆ. ಆನಂದನು ಧಾರವಾಡದಲ್ಲಿ ಇರುತ್ತಾನೆ. ಆನಂದನು ವಿನುತೆಯನ್ನು, ವಿನುತ ಆನಂದವನನ್ನು ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ. ವಿನುತೆಯ ಪ್ರೀತಿ ನಿಜವಾದುದು,ಆದರೆ ಅವಳು ನಿಸ್ಸಹಾಯಕಳು,ತಾಯಿಗೆ ಬಹಳ ಹೆದರುತ್ತಾಳೆ ಹಾಗೂ ಪ್ರೀತಿಸುತ್ತಾಳೆ ಅವಳದೊಂದು ಅಸಡ್ಡೆಯ ಸ್ವಭಾವವೆಂದು ಹಲವಾರು ಭಾರಿ ಜಗದಾಂಬಗೆ ತಿಳಿಸಿರುತ್ತಾನೆ. ಆನಂದನ ತಾಯಿಯ ಬಲವಂತದಿಂದ ಸೀತೆಯನ್ನು ಮದುವೆಯಾಗುತ್ತಾನೆ ಆದರೆ ದೂರ ಸರಿದ ವಿನುತೆಯನ್ನು ಮರಿಯದೇ ಅವಳ ನೆನಪು ಮಾತ್ರ ಉಳಿಯುತ್ತದೆ. ಆನಂದ ತನಗೆ ದೊರಕಿಲ್ಲವೆಂಬ ಕೊರಗಿನಲ್ಲಿ ತಾನೊಬ್ಬಹೇಡಿ, ತಾಯಿಯನ್ನು ಒಪ್ಪಿಸೋ ಪ್ರಯತ್ನಪಟ್ಟಿದ್ದರೂ ಆನಂದನನನ್ನು ಪಡೆಯಬಹುದಿತ್ತೇನೋ ಎಂಬ ಕೊರಗಲ್ಲೇ ಸಾಯುತ್ತಾಳೆ. ಇದನ್ನು ತಿಳಿದ ಆನಂದ ತಾನ�� ಸಹ ಅವಳನ್ನು ನಿರಾಕರಿಸದೆ ಆಕೆಯನ್ನು ಮದುವೆಯಾಗಿದ್ದರೆ ಅವಳು ಸುಖವಾಗಿ ಇರುತ್ತಿದ್ದಳೆಂದು ದುಃಖ್ಖಿತನಾಗುತ್ತಾನೆ.ನಿರ್ಧಾರಗಳು ತೊಗೊಳುವ ಮುಂಚೆ ಹಲವಾರು ಸಲ ಯೋಚಿಸಿದರೆ ಉತ್ತಮ.
ಮತ್ತೂಂದು ಕಡೆಯಲ್ಲಿ ವಸಂತ ಹಾಗು ಉಮೆಯರ ಕಥೆ ನಡೆಯುತ್ತಿರುತ್ತದೆ. ವಸಂತ ಉಮೆ ಒಬ್ಬರಿಗೊಬ್ಬರು ಪ್ರೀತಿಸುತ್ತಿರುತ್ತಾರೆ. ಅದರ ಬಗ್ಗೆ ಅವರ ತಂದೆ ತಾಯಂದಿರಿಗೂ ತಿಳಿದು ಇವರ ಮದುವೆಗೆ ಒಪ್ಪಿರುತ್ತಾರೆ. ಅವರವರ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆಂದು ಮದುವೆಯ ಪ್ರಸ್ತಾಪ ಬಂದಾಗಲೆಲ್ಲೂ ವಸಂತನು ಮದುವೆಯನ್ನು ಮುಂದೂಡಿಸುತ್ತಾನೆ. ಯಾವುದೇ ಚರ್ಚೆಯಾದರೂ ಅವರವರ ಅಭಿಪ್ರಾಯಗಳೆ ಬೇರೆ. ಎಲ್ಲಾವಾದದಲ್ಲೂ ವಸಂತನ ಅಭಿಪ್ರಾಯವೇ ಬೇರೆ ಉಮೆಯದೇ ಬೇರೆ. ಇದ���ಿಂದ ವಸಂತನಿಗೆ ಖೇದವಾಗುತ್ತದೆ ತಾನು ಮದುವೆಯಾಗುವ ಹೆಣ್ಣೆ ತನ್ನ ಅಭಿಪ್ರಾಯವನ್ನು ಒಪ್ಪದಿದ್ದರೇ ಹೇಗೆ ಎಂದು ಯೋಚಿಸುತ್ತಾನೆ. ಉಮೆಗೆ ಹಲವಾರು ಭಾರಿ ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಲು ಹೇಳಿದಾಗ ಆಕೆಯು ಒಪ್ಪುವುದಿಲ್ಲ. ಹೀಗೆ ಮಂದೂಡಿದ ಮದುವೆಯ ಫಲಿತ ತಮ್ಮ ಅಭಿಪ್ರಾಯದಲ್ಲಿ ಯಾವ ಬದಲಾವಣೆಯಿಲ್ಲದಲ್ಲಿ ಉಮೆಗೆ ವಸಂತನನ್ನು ಮದುವೆಯಾದರೆ ತಮ್ಮ ದಾಂಪತ್ಯ ಜೀವನವು ಸುಖಕರವಾಗಿರುವುದಿಲ್ಲವೆಂದು ನಿರ್ಧರಿಸಿ ವಸಂತನನ್ನು ನಿರಾಕರಿಸುತ್ತಾಳೆ.
ಹೀಗೆ ಆನಂದ ವಿನುತೆ, ವಸಂತ ಉಮೆ, ದೂರಸರಿಯುತ್ತಾರೆ. ಉತ್ತಮ ಕಾದಂಬರಿ. *ಕಾರ್ತಿಕ್*
This is a love story written by a 28 year old SL Bhyrappa way back in 1962! Nearly 70 years ago!
As a person living in the current age, I found it difficult to relate to some of the compulsions that women in this novel face. Maybe those times were different and this novel gives a sneak peek into the lives of ordinary people in Mysore region 70 years ago.
The characters are all beautifully woven ... The characters of Anand and Vinatha are central to this novel. Vinatha seems like a well read intelligent woman who is under a spell by her mother -- Seems a bit unrealistic when I read this in 2020, but I guess this was more common earlier. Anand's character is that of a writer and his discussions of Reason vs Beauty / Feelings with another interesting Character Vasantha Rao ... If you are a philosophy student or generally any Arts student, you will probably enjoy this book more than an Engineer like me. Through out the book, I am guessing most readers will think -- Does the author see himself in the character Anand :-) ...
The book is written in excellent Kannada and I loved the choice of words, the way the words convey meaning and add life to the conversation ...
ದೂರ ಸರಿದರು by SL ಭೈರಪ್ಪ. Though this novel was written in 1962, it still feels relevant. The way love, life, relationships and philosophy described in this book is thought provoking. Every individual is right from their point of view, but it's about the perspectives ಅನ್ನೋದನ್ನ ತುಂಬಾ ಸುಂದರವಾಗಿ ಹೇಳಿದ್ದಾರೆ. ಪ್ರೀತಿ ಅಪರಿಮಿತವಾದದ್ದು. ಪ್ರತಿಯೊಬ್ಬ ವ್ಯಕ್ತಿಯೂ ಈ ಪ್ರೀತಿಯನ್ನು ನೋಡುವ ರೀತಿ ಬೇರೆ. ಬೇರೆ ಬೇರೆ ದೃಷ್ಟಿಕೋನಗಳು ಒಂದೇ ಪರಿಸ್ಥಿತಿಯನ್ನು ಹೇಗೆ ಏರು ಪೇರು ಮಾಡಬಹುದು ಅನ್ನೋದನ್ನ ತುಂಬಾ ವಿಭಿನ್ನ ಶೈಲಿಯಲ್ಲಿ ಹೇಳಿದ್ದಾರೆ. As a reader when I read through, the notion on every single character keeps changing. Sometimes it feels that they are right, sometimes as though they are wrong. But when you sit back and think, you realise it's not the character, but the situation which makes him/her good or bad. The way this is depicted in this novel is just wow. ಆನಂದ, ವಿನಿತೆ, ಉಮಾ, ರಮಾ, ವಸಂತ, ಜಗದಾಂಬೆ, ವರದಮ್ಮ ಇವರೆಲ್ಲರೂ ಇನ್ನು ನನ್ನ ತಲೆಯ ಒಂದ್ ಮೂಲೆಲಿ ಇದ್ದಾರೆ 😛 Worth a read!😊
Bhyrappa takes up his subject and executes it so well. Within the narration he tells so many things. This story not only tells the love story of Anand and Vinatha, but also the conflict between logical reasoning and emotions.
60ರ ದಶಕದಲ್ಲಿ ಬಂದ ಈ ಕಾದಂಬರಿ, ಇಂದಿಗೂ ಪ್ರಸ್ತುತ. ಪ್ರಾರಂಭದಲ್ಲಿ ಸಾಧಾರಣವಾದ ಪ್ರೇಮ ಪ್ರಸಂಗಗಳ ನಿದರ್ಶನದಂತೆ ಕಂಡರು, ಪಾತ್ರಗಳ ಪರಿಚಯವಾದಂತೆ ವಿಷಯಗಳ ತೀವ್ರತೆ ಹೆಚ್ಚುತ್ತ ಹೋಗುತ್ತದೆ. ವಿಚಾರ ಮತ್ತು ಪ್ರೀತಿಯ ನಡುವೆ ಆಗುವ ಸಮಾಲೋಚನೆ ನಮ್ಮ ಯೋಚನಾ ಶೈಲಿಗೆ ಸವಾಲನ್ನೊಡ್ಡುತ್ತದೆ. ಅತಿ ಸೂಕ್ಷ್ಮ ಸಂಗತಿಗಳನ್ನು ಸಂಕೋಚವಾಗದಂತೆ ಚಿತ್ರಿಸಿರುವ ಭೈರಪ್ಪನವರು ಕಲೆ ಶ್ಲಾಘನೀಯ. ಇಲ್ಲಿ ಬರುವ ಆನಂದ, ವಸಂತ್, ವಿನಿತ, ಉಮಾ, ರಮಾ ಎಂಬ ಪಾತ್ರಗಳು ಕೇವಲ ಹೆಸರುಗಳಾಗಿ ಉಳಿಯದೆ ನಮ್ಮದೆ ಮನಸ್ಸಿನ ಬಿಂಬಗಳು ಎನಿಸುತ್ತವೆ. ಯಾವುದೇ ಸಂದರ್ಭದ ಉತ್ಕಟ ವಿಶ್ಲೇಷಣೆ ಇಲ್ಲದೆ, ಯಾವುದೇ ಸಂಗತಿಗಳ ತರ್ಕರಹಿತ ಬದಲಾವಣೆ ಇಲ್ಲದೆ ನಮ್ಮ ನಿಜ ಜೀವನದಲ್ಲೇ ನಡೆಯಬಹುದಂತಹ ಸಂಗತಿಗಳ ಸರಣಿ ದೂರ ಸರಿದರು. ಪ್ರತಿಯೊಬ್ಬ ಯುವಕ-ಯುವತಿಯರು ಮದುವೆಯ ಮುಂಚೆ ಓದಲೇಬೇಕಾದ ಪುಸ್ತಕ ಇದಾಗಿದೆ.
"ಮಾನವ ಚಾರಿತ್ರ್ಯದಲ್ಲಿ ಎಷ್ಟೋ ಪ್ರಳಯವಾಗಿವೆ. ಸ್ತ್ರೀಯ ಪ್ರೇಮ ಪುರುಷ ಭಾಗ್ಯ ಕಾದು ಕಾದು ಮಾಗಿವೆ" ~ ಅಂಬಿಕಾತನಯ ದತ್ತ.
ವಿಚಾರವಂತಿಕೆ ಮತ್ತು ಭಾವನಾತ್ಮಕತೆಯ ತಳಹದಿಯಲ್ಲಿ ಪ್ರೀತಿಯ ಸ್ವರೂಪವನ್ನು ನಿರೂಪಿಸಿರುವ ಕೃತಿ #ದೂರಸರಿದರು. ಗಂಡು ಹೆಣ್ಣಿನ ಆಕರ್ಷಣೆ ಆಗುವುದಕ್ಕೆ ಕೇವಲ ಬಾಹ್ಯ ಸೌಂದರ್ಯ ಮುಖ್ಯವಲ್ಲ, ಇಬ್ಬರ ವಿಚಾರಗಳು, ಬೌಧಿಕ ಸಂವಾದ ಅತೀ ಮುಖ್ಯವಾದದ್ದು ಎಂದು ಪಾತ್ರಗಳ ಸಂಭಾಷಣೆಯಲ್ಲಿ ಕಾಣಬಹುದು.
ವರ್ತಮಾನದ ಪರಿಸ್ಥಿತಿ ತುಂಬ ಸೊಗಸಾಗಿದ್ದಾಗ ಆದರೆ ಅದರ ಪರಿಣಾಮ ಭವಿಷ್ಯದಲ್ಲಿ ನೋವನ್ನು ತರುತ್ತದೆ ಎಂದು ಗೊತ್ತಿದ್ದರೆ, ಸದ್ಯದ ಸ್ಥಿತಿಯನ್ನು ಅನುಭವಿಸಬೇಕೋ ಅಥವಾ ಭವಿಷ್ಯದ ಬಗ್ಗೆ ಚಿಂತಿಸಿ ನಿರಾಕರಿಸಬೇಕೊ? ಎಂಬ ಪ್ರಶ್ನೆ ಕಾಡುತ್ತದೆ.
ಹತ್ತಿರದವರು ದೂರ ಸರಿದಾಗ, ಯಾರಿಂದ ಹೀಗಾಯ್ತು ಎಂದು ಯೋಚಿಸುವ ಬದಲು ಆ ಪರಿಸ್ಥಿಯಲ್ಲಿ ನಾವಿದ್ದರೆ ಯಾವ ನಿರ್ಧಾರ ಮಾಡ್ತಾ ಇದ್ವಿ ಎಂದು ಯೋಚಿಸಿದಾಗ, ತಪ್ಪು ಇಬ್ಬರದ್ದೂ ಅಲ್ಲ ಪರಿಸ್ಥಿತಿಯ ಕಾರಣದಿಂದ ಈ ರೀತಿ ನಡೆಯಲೇಬೇಕಾಗಿತ್ತು ಎಂದು ಗೊತ್ತಾಗುತ್ತದೆ. ಭೈರಪ್ಪನವರು ಈ ಅಂಶವನ್ನು ಅನೇಕ ಸನ್ನಿವೇಶಗಳಲ್ಲಿ ಪರೋಕ್ಷವಾಗಿ ಮನ ಮುಟ್ಟುವ ಹಾಗೆ ಬರೆದಿದ್ದಾರೆ. ಕೊನೆಯ ಪುಟಗಳನ್ನು ಓದುವಾಗ, ವಿನತೆಯ ನೋವನ್ನು ಅನುಭವಿಸುವಾಗ ಕಣ್ಣುಗಳು ಒದ್ದೆಯಾಗುತ್ತವೆ. ಆನಂದ್, ವಿನತೆ, ವಸಂತ್, ಉಮಾ, ರಮಾ - ಮತ್ತೆ ಮತ್ತೇ ನೆನಪಾಗಿ ಕಾಡುವಂತಹ ಪಾತ್ರಗಳು.
ನನ್ನ ಮೇಲೆ ಅತ್ಯಂತ ಗಾಢ ಪ್ರಭಾವ ಬೀರಿದ, ನನ್ನನ್ನು ತೀವ್ರವಾಗಿ ಚಿಂತನೆಗೊಳಪಡಿಸಿದ ಅತ್ಯುನ್ನತ ಕಾದಂಬರಿ ಎಸ್.ಎಲ್. ಬೈರಪ್ಪನವರ "ದೂರ ಸರಿದರು"
ಸ್ತ್ರೀಪುರುಷರ ಪ್ರೇಮಕ್ಕೆ, ಆದರ್ಶ ದಾಂಪತ್ಯಕ್ಕೆ ಜೀವನ ಶಕ್ತಿ ಯಾವುದು? ವೈಚಾರಿಕತೆಯ ಏಕೀಕರಣವೇ ? ಅಥವಾ ಧಾರ್ಮಿಕ ನಂಬಿಕೆ ಹಾಗೂ ಭಾವನಾತ್ಮಕ ಪ್ರತಿಕ್ರಿಯೆಯುಳ್ಳ ಎರಡು ಜೀವಗಳ ಮೈತ್ರಿಯೊಂದಾದರೆ ಸಾಕೆ ? ಹೀಗೆ ಭಾವುಕತೆಗೂ ವಿಚಾರಕ್ಕೂ ನಡೆಯುವ ಸಂಘರ್ಷವೇ "ದೂರಸರಿದರು" ಕಾದಂಬರಿಯ ವಸ್ತು.
ಸಾಮಾನ್ಯವಾಗಿ ಕಥೆ, ಕಾದಂಬರಿ, ಸಿನಿಮಾಗಳಲ್ಲಿ ನಾವು ನೋಡಿರುವಂತೆ ಯುವ ಜೋಡಿಗಳಲ್ಲಿ ಪ್ರೇಮಾಂಕುರವಾಗುವುದು ಬಾಹ್ಯ ಸೌಂದರ್ಯದ ಆಧಾರದ ಮೇಲೆ. ಮುಂದೆ ಜಾತಿ, ಧರ್ಮ, ಸಾಮಾಜಿಕ ಸ್ಥಿತಿಗತಿಗಳ ಚೌಕಟ್ಟಿಗೂ ಒಳಪಡುತ್ತೆ ಪ್ರೀತಿ. ಆದರೆ ಈ ಕಾದಂಬರಿ ಮೇಲೆ ತಿಳಿಸಿದ್ದಕ್ಕಿಂತ ವಿಭಿನ್ನವಾದದು.
ಭಾವುಕತೆಗೂ ವಿಚಾರಕ್ಕೂ ಮೂಲಭೂತ ಭಿನ್ನತೆ ಏರ್ಪಟ್ಟು, ಒಮ್ಮತವಿಲ್ಲದ ವಾಗ್ಯುದ್ಧಕ್ಕೆ ಒಂದು ಜೋಡಿ ಎಡೆಮಾಡಿಕೊಟ್ಟರೆ ಮತ್ತೊಂದು ಜೋಡಿ ಬೌದ್ಧಿಕ ಸಾಮ್ಯತೆ ತಂದುಕೊಂಡರೂ ಸಮಾಜದ ಸ್ವಾರ್ಥಕ್ಕೆ, ಕುಟುಂಬದ ವಿರೋಧಕ್ಕೆ ಅವರ ಪ್ರೀತಿ ಬಲಿಯಾಗುತ್ತದೆ ಈ ಕಾದಂಬರಿಯಲ್ಲಿ. ಹೌದು, ಕೃತಿಯ ಹೆಸರೇ ಸೂಚಿಸುವಂತೆ ಇದೊಂದು ದುರಂತ ಪ್ರೇಮಕಥೆ.
ಖಂಡಿತ ಇದೊಂದು ಸಾರ್ವಕಾಲಿಕ ಕಾದಂಬರಿ. ಮೊದಲು ಮುದ್ರಣವಾಗಿದ್ದು 1962ರಲ್ಲಿ, ಆನಂತರ ಆರು ದಶಕಗಳಿಂದ ಪ್ರೇಮ ಮತ್ತು ದಾಂಪತ್ಯದ ಬಗ್ಗೆ ಹಲವು ತಲೆಮಾರುಗಳ ಚಿಂತನೆಯನ್ನು ಪ್ರಭಾವಿತಗೊಳಿಸಿದೆ. 2022 ರಲ್ಲಿ ನನ್ನನ್ನೂ ಕೂಡ.
ಭೈರಪ್ಪನವರು ಕಾದಂಬರಿಯಲ್ಲಿ ಬಹಳ ಆಳವಾದ, ನಮ್ಮ ಯೋಚನೆಗೆ ನಿಲುಕದ ಕೆಲವು ವಿಷಯಗಳ ಚರ್ಚೆ ಮಾಡಿದ್ದಾರೆ. ತತ್ವಶಾಸ್ತ್ರ, ಸಾಹಿತ್ಯ, ದಾಂಪತ್ಯ, ಸಮಾನತೆ ಹೀಗೆ ಇನ್ನೂ ಅನೇಕ ವಿಷಯಗಳನ್ನು ವಿಶ್ಲೇಷಿಸಿ ನಮ್ಮ ಯೋಚನಾ ಸರಣಿಯನ್ನು ಕೆರಳಿಸುವಂತೆ ಮಾಡಿದ್ದಾರೆ ಅಂದರೆ ತಪ್ಪಾಗಲಾರದು. ನನ್ನ ಪ್ರಕಾರ ಇದೊಂದು ಸಾಮಾನ್ಯ ಕಾದಂಬರಿಯಲ್ಲ ಬದಲಾಗಿ ಪ್ರೀತಿ, ಪ್ರೇಮ ಹಾಗೂ ದಾಂಪತ್ಯಕ್ಕೆ ಸಂಬಂಧಪಟ್ಟ ಒಂದು ಶ್ರೇಷ್ಠ ಗ್ರಂಥವಾಗಿ ತೋರುತ್ತೆ.
ನಾವೆಲ್ಲರೂ ಓದಿ ಮುಂದಿನ ಪೀಳಿಗೆಗೆ ಪರಿಚಯ ಮಾಡಬೇಕಾದಂತ ಮೇರು ಕೃತಿ ಇದು. ನನ್ನ ಜೀವನಕ್ಕೆ ಸಂಬಂಧಪಟ್ಟ ಹಾಗೆ ಒಂದಷ್ಟು ಪ್ರಶ್ನೆಗಳಿಗೆ ನನಗಿಲ್ಲಿ ಉತ್ತರ ಸಿಕ್ಕಿತು, ನಿಮಗೂ ಸಿಗಬಹುದು.
ಈ ಕಾದಂಬರಿಗೆ ಸಂಬಂಧಪಟ್ಟಂತೆ ಭೈರಪ್ಪನವರ ಬಗ್ಗೆಯಾಗಲೀ ಅಥವಾ ಅವರ ಬರವಣಿಗೆಯ ಬಗ್ಗೆಯಾಗಲೀ ಹೇಳುವುದಾದರೂ ಏನು ? ಇಂತಹ ಕ್ರಾಂತಿಕಾರಿ ಕೃತಿಯನ್ನು ರಚಿಸುವಾಗ ಬೈರಪ್ಪನವರ ವಯಸ್ಸು ಕೇವಲ 31 ಆಗಿತ್ತಷ್ಟೇ ಅನ್ನುವ ಅರಿವಾದಾಗ ರೋಮಾಂಚನವಾಯ್ತು. ಅವರ ಮೇಲಿರುವ ಅಭಿಮಾನ, ಗೌರವ ದುಪ್ಪಟ್ಟಾಯ್ತು.
Book is about about love life of a boy. It goes around their life-how like minded people fall in love , the resistance they face from the family and how they face those conditions. The book is on the young people of previous generations. To put it in kannada- idu ondu hennu-gandina sambandada vishleshane kuritu iruva kaadambari.
I rate it 3 star-Not the best ones from S.L.Bhyrappa
“ದೂರ ಸರಿದರು”-೧೯೬೨ ರಲ್ಲಿ ಪ್ರಕಟವಾದ ಭೈರಪ್ಪರವರ ಈ ಕಾದಂಬರಿಯು ಯುವ ಮನಸ್ಸುಗಳೊಳಗಿನ ತಾತ್ವಿಕ ಸಂಘರ್ಷ, ಪ್ರೇಮ ಮತ್ತು ವೈವಾಹಿಕ ನಿರ್ಧಾರಗಳ ಆಳವಾದ ಚಿತ್ರಣವನ್ನು ಉಳ್ಳದ್ದು. ಪ್ರತಿಯೊಬ್ಬ ಪಾತ್ರವೂ ಜೀವನದ ಬೇರೆ ಬೇರೆ ಅಭಿಪ್ರಾಯಗಳನ್ನು ಪ್ರತಿನಿಧಿಸುತ್ತದೆ – ಭಾವನೆಗಳೂ, ಬುದ್ಧಿಯೂ ಪರಸ್ಪರ ತೆರೆದುಕೊಳ್ಳುತ್ತವೆ.
ವೈವಾಹಿಕ ಜೀವನಕ್ಕೆ “ಪ್ರೇಮವೇ ಸಾಕಾ? ಅಥವಾ ಬೌದ್ಧಿಕ ಹೊಂದಾಣಿಕೆಯೂ ಅಗತ್ಯವೇ?” ಎಂಬ ಪ್ರಶ್ನೆಗಳ ಮೂಲಕ ಓದುಗನನ್ನೂ ಆತ್ಮಪರಿಶೀಲನೆಗೆ ನೂಕುವ ಕೃತಿ ಹಲವು ಭೌತಿಕ ಪ್ರಶ್ನೆಗಳನ್ನು ಎಬ್ಬಿಸಿ ಚಿಂತನೆಗೆ ಒಳಪಡಿಸುತ್ತದೆ.
“ವಿನತೆ-ಆನಂದನ ಪ್ರೇಮವು ನಿರ್ಧಾರದ ಕೊರತೆಯಿಂದ ದೂರವಾದರೆ, ವಸಂತ-ಉಮೆ ಪ್ರೇಮವು ನಿರ್ಧಾರ ನಂತರದ ಅಧಿಕ ಚಿಂತನೆಯಿಂದ ವಿಫಲವಾಗುತ್ತದೆ. ಆದರೆ ವಸಂತ ಮತ್ತು ಉಮೆಯು ವೈವಾಹಿಕ ನಂತರದ ಹೊಂದಾಣಿಕೆಯ ಬಗ್ಗೆ ಚಿಂತಿಸಿದರೆ ಆನಂದ ಮತ್ತು ವಿನುತೆ ಅದರ ಪರಿವಿಲ್ಲದೆಯೇ ಪ್ರೀತಿಸುತ್ತಾರೆ. ಪ್ರೀತಿ ಎಲ್ಲಿಯೂ ಲಂಪಟವಾಗದಿದ್ದರೂ ಇವರಿಬ್ಬರ ವಿಚಾರಗಳು ಸತ್ಯಕ್ಕೆ ದೂರ ಎನ್ನಬಹುದು. ಕತೆಯ ಅಂತಿಮ ಭಾವನೆಉಳ್ಳದಾಗಿದ್ದರೂ ವೈಯಕ್ತಿಕವಾಗಿ ಹಿಡಿಸಲಿಲ್ಲ. ಕೊನೆಯಲ್ಲಿ ಸರ್ಕಾರಿ ಕೆಲಸ ಕಳೆದುಕೊಳ್ಳುತ್ತೇನೆಂದು ಮತ್ತೆ ದೂರವಾಗುವುದರಲ್ಲಿ ಪ್ರೀತಿಯ ಅರ್ಥವಿಲ್ಲವೆನ್ನಿಸಿತು. ಟೈಫಾಯ್ಡ್ ರೋಗದಿಂದ ಸತ್ತರೂ ಪ್ರೇಮದ ವೈಫಲ್ಯವೆಂದು ಚಿತ್ರಿಸಿದಂತಿದೆ ವಿನುತೆಯ ಸಾವನ್ನು. ಒಂದಾಗಲಬೇಕು ಎನ್ನುವ ತವಕ ಇಬ್ಬರಲ್ಲಿದ್ದರೂ ಗುರಿಯ ಕಡೆ ಶ್ರದ್ಧೆಯೇ ಇಲ್ಲದ ಪ್ರೀತಿ ಸಾಯುವುದು ಖಂಡಿತ. ಕೆಲವು ವಿಚಾರಗಳನ್ನು ಬಿಟ್ಟರೆ ಒಟ್ಟಾರೆಯಾಗಿ ಕೃತಿಯು ಗಮನಸೆಳೆದಿದ್ದು ಕಮ್ಮಿ.”
“ತಾತ್ವಿಕ ಸಂವಾದ, ವೈಚಾರಿಕ ಗಂಭೀರತೆ, ಜಾತಿ-ಧರ್ಮ, ಭೈರಪ್ಪರ ವಿಶಿಷ್ಟ ಶೈಲಿ – ಈ ಎಲ್ಲವೂ “ದೂರ ಸರಿದರು”ಯನ್ನು ಒಂದು ಗಮನಾರ್ಹ ಸಾಹಿತ್ಯಕ ಅನುಭವವನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ. ಇದೇ ಕೃತಿಯನ್ನು ಭೈರಪ್ಪ ಬರೆದಿಲ್ಲವಾದರೆ ಜನರು ಇಷ್ಟರ ಮಟ್ಟಿಗೆ ಸ್ವೀಕರಿಸುತ್ತಿರಲಿಲ್ಲವೆನ್ನುದು ನಿಜ.”
“ಕಾಲೇಜಿನ ದಿನಗಳಲ್ಲಿ, ಮದುವೆಯ ಮುಂಚೆ ಓದಿದವರಿಗೆ ಹೆಚ್ಚು ಪರಿಣಾಮ ಬೀರುತ್ತೆ ಮತ್ತು ಉಪಯೋಗ ಕೂಡ ಆಗಬಹುದು. ಬದುಕಿನ ಅರ್ಥವನ್ನು ಹುಡುಕುತ್ತಿರುವವರಿಗೆ ಇದು ಬಹುಮಾನವಾದ ಓದು.
೧. ಸಾಹಿತ್ಯ ಮತ್ತು ತತ್ತ್ವಶಾಸ್ತ್ರ ಎರಡೂ ವಿಷಯಗಳನ್ನೂ ಏಕಕಾಲದಲ್ಲಿ ಅಧ್ಯಯನ ಮಾಡುವ ಅಸಾಧಾರಣ ಬುದ್ಧಿವಂತ ಸಚ್ಚಿದಾನಂದ, ಅದೇ ಕಾಲೇಜಿನ ಸಾಹಿತ್ಯ ವಿದ್ಯಾರ್ಥಿನಿಯಾದ ಮಿಸ್. ವಿನತಕುಮಾರಿಯನ್ನು ಪ್ರೀತಿಸಿ, ತನ್ನದೇ ಆದ ರೀತಿಯಲ್ಲಿ ಮದುವೆಯಾದರು, ಹುಡುಗಿಯ ತಾಯಿಯ ಹುಚ್ಚುಹಠಕ್ಕೆ, ಬಿಗುಮಾನಕ್ಕೆ ತನ್ನ ಪ್ರೀತಿಯನ್ನೇ ಕಳೆದುಕೊಂಡು, ದೂರವಾಗುತ್ತಾನೆ... ವಿನತೆಗೆ ಅನಂದನಲ್ಲಿ ಭಕ್ತಿ ತುಂಬಿದ ಪ್ರೀತಿ ಅಕ್ಷಯವಾಗಿದ್ದರು ತಾಯಿಯ ಮೇಲಿನ ಪ್ರೀತಿ ಮತ್ತು ಕುಟುಂಬದ ಜವಾಬ್ದಾರಿಗಳಿವೆ ಅಂಜಿ ದಿಟ್ಟ ಹೆಜ್ಜೆ ಇಡುವುದರಲ್ಲಿ ಸೋತು ದೂರ ಸರಿಯುತ್ತಾಳೆ...
೨. ವಸಂತ - ತತ್ವಜ್ಞಾನದ ಹುಚ್ಚ, ಭಾವನೆಗಳಿಗೆ ಅವನ ಜೀವನದಲ್ಲಿ ಎಂದೂ ಸ್ಥಾನವಿಲ್ಲ... ಉಮೇ ಕೂಡಾ ತತ್ತ್ವಶಾಸ್ತ್ರ ಓದುತ್ತಿರುವ ಅದೇ ಕಾಲೇಜಿನ ವಿದ್ಯಾರ್ಥಿನಿ... ವಸಂತನಿಗೆ ದಾಂಪತ್ಯ ಜೀವನದ ಕಡೆ ಒಲವಿಲ್ಲ... ಅವನ ಜೀವನದಲ್ಲಿ ವಿಚಾರಕ್ಕೆ ಇರುವ ಮಹತ್ವ ಭಾವನೆಗಳಿಗೆ ಇಲ್ಲ... ಆದರೂ ಉಮೆಯನ್ನು ಪ್ರೀತಿಸುತ್ತಾನೆ... ಆದರೆ ಉಮಾಗು ಅವನಿಗೂ ವಿಚಾರದಲ್ಲಿ ವೈಮನಸ್ಯ ಉಂಟಾಗುತ್ತದೆ.... ಒಂದೇ ವಸ್ತುವನ್ನು ಅವರಿಬ್ಬರೂ ನೋಡುವ ದೃಷ್ಟಿಕೋನವೇ ಬೇರೆ... ಅಂದ ಮಾತ್ರಕ್ಕೆ ಅವರಿಬ್ಬರಲ್ಲಿ ಪ್ರೀತಿಯಿಲ್ಲ ಎಂದಲ್ಲ... ಅಪಾರ ಪ್ರೀತಿ ಕೂಡಾ ವಸಂತನ ಅರ್ಥಹೀನ ತತ್ವದಿಂದ ದೂರವಾಗುತ್ತದೆ...
೩. ಆನಂದನ ತಾಯಿಯ ಕಾಯಕವೇ ಕೈಲಾಸ , ವಾಸನ್ ಮತ್ತು ವಿಜಯ ಅವರ ಅವಸರದ ಪ್ರೀತಿ, ರಮಾ ಮತ್ತು ನರೋತ್ತಮರ ದುಡುಕು, ಜಗದಂಬಾ ಮತ್ತು ವಿನತೆಯರ ಅಪರೂಪದ ಸ್ನೇಹ, ಅಧ್ಯಾಪಿಕೆ ವರದಮ್ಮನವರ ವಿಚಿತ್ರವಾದ ವೈಧವ್ಯ... ಅವರು ಆನಂದನಲ್ಲಿ ತೋರುವ ಪ್ರೀತಿ, ಕಾಳಜಿ, ಎಲ್ಲವೂ ಇಲ್ಲಿವೆ...
ಭೈರಪ್ಪನವರು ಈ ಪುಸ್ತಕವನ್ನು ಬಹಳ ಕಠಿಣವಾಗಿ ಬರೆದಿದ್ದಾರೆ ಎಂಬುದು ನನ್ನ ಅಭಿಪ್ರಾಯ... ನಾನು ಪುಸ್ತಕವನ್ನು ಓದಿರುವುದು ನಿಜವಾದರೂ... ಇದು ನನಗೆ ಇನ್ನೂ ಸಂಪೂರ್ಣವಾಗಿ ಅರ್ಥವಾಗಿಲ್ಲ ಎಂಬುದು ಸತ್ಯ...ನಾನು ಮತ್ತೊಮ್ಮೆ ಈ ಪುಸ್ತಕವನ್ನು ಖಂಡಿತವಾಗಿಯೂ ಓದಬೇಕಾಗಿದೆ... ಓದಿ ಅಸ್ವಾದಿಸಬೇಕಾಗಿದೆ....
ಸಚ್ಚಿದಾನಂದ (ಆನಂದ) ಒಬ್ಬ ಒಳ್ಳೆಯ ಓದುಗಾರ ಹಾಗೂ ಕಥೆ ಕಾದಂಬರಿಗಳಲ್ಲಿ ಹೆಚ್ಚು ಆಸಕ್ತಿ... ಭೈರಪ್ಪ ರವರು ದೂರಸರಿದರೂ ಕಾದಂಬರಿಯನ್ನು ಹೆಣೆದುಕೊಂಡು ಹೋಗಿರುವಂತಹ ರೀತಿ ಬಹಳ ಚಂದ. ಆನಂದ ಪ್ರೀತಿಸಿದ್ದು ವಿನತೆಯನ್ನು ಆದರೆ ಆನಂದನನ್ನು ದಿನತೆ ರಮ ಇಬ್ಬರು ತಮ್ಮದೇ ಆದ ಭಾವನೆಯಲ್ಲಿ ಪ್ರೀತಿಸಿದರು ಗೌರವಿಸಿದರು ಆದರೆ ಆನಂದ್ ದೊರಕಿದ್ದು ಸೀತಾಲಕ್ಷ್ಮಿಗೆ ..
ಇನ್ನೂ ಈ ಕೃತಿಯಲ್ಲಿ.. ಆನಂದ-ರಮ ರ ಅಮೂರ್ತ ಪ್ರೀತಿ, ಜಗದಾಂಬೆ-ವಿನುತಾಳ ಸ್ನೇಹ ಪ್ರೀತಿ, ನರೋತ್ತಮ್-ರಮ..ರಾಮಮೂರ್ತಿ-ವಿಜಯಳ ವಂಚನೆಯ ಪ್ರೀತಿ, ವಾಸನ್-ವಿಜಯರ ಅವಸರದ ಪ್ರೀತಿ, ಆನಂದ್ ಮತ್ತು ಅವನ ತಾಯಿಯ ವಾತ್ಸಲ್ಯ ಪ್ರೀತಿ, ವಿನುತಾ ಮತ್ತು ಅವಳ ತಾಯಿಯ ಜಿಗುಟು ಪ್ರೀತಿ. ಹೀಗೆ ಪ್ರೀತಿಯ ವಿವಿಧ ಸ್ವರೂಪಗಳು ಕಾಣಿಸುತ್ತವೆ.
ವಿಶ್ಲೇಷಣೆಯಿಂದ ತೂಗಿ ನೋಡುವ ವಸ್ತುವಲ್ಲ ಪ್ರೇಮವೆನ್ನುವುದು.” ವಸಂತರಾವ್ ಹಾಗೂ ಉಮಾ ಇವರಿಬ್ಬರ ಹಠದ ಮುಂದೆ ಅವರ ಪ್ರೀತಿ ಕೊನೆಗೂ ಗೆಲ್ಲಲೇ ಇಲ್ಲ . ವರದಮ್ಮನವರ ಪ್ರೀತಿಯ ಕಥೆ ಅವರು ವಿಧವೆಯಾಗದಿದ್ದರೂ ಅದೇ ರೀತಿ ಕೊನೆವರೆಗೂ ಬದುಕಿರುವುದನ್ನು ನೆನೆಸಿಕೊಂಡರೆ ಈಗಲೂ ಕಣ್ತುಂಬಿ ಕೊಳ್ಳುತ್ತದೆ, ಪುಸ್ತಕದಲ್ಲಿ ನಾನು ಕಣ್ಣೀರಿಟ್ಟ ಭಾಗವೆಂದರೆ ಅದು ವರದಮ್ಮನವರ ಕಥೆಯನ್ನು ಓದಿದ ಮೇಲೆಯೇ
ನನ್ನ ಮೇಲೆ ಆಳವಾದ ಪ್ರಭಾವ ಬೀರಿದ, ತೀವ್ರವಾದ ಚಿಂತನೆಗೆ ದಾರಿಯಾದ ಮತ್ತು ನನ್ನ ಆತ್ಮಾವಲೋಕನಕ್ಕೆ ಪ್ರೇರಣೆಯಾದ ಕಾದಂಬರಿ ಇದು..
ಇದು ಮೊದಲು ಪ್ರಕಟವಾದಾಗ ಭೈರಪ್ಪನವರ ವಯಸ್ಸು ಕೇವಲ 27-28 ವರ್ಷಗಳಷ್ಟೇ ಇರಬಹುದು — ಅಂತಹ ಯುವ ವಯಸ್ಸಿನಲ್ಲಿ ಅವರಿಗಿದ್ದ ತಾತ್ವಿಕ ಆಳತೆ ಹಾಗೂ ಕಲ್ಪನಾಶಕ್ತಿ ನಿಜಕ್ಕೂ ಅಪೂರ್ವವಾದುದು!!
ಈ ಕಾದಂಬರಿ ಇಬ್ಬರು ತಾತ್ವಿಕ ಮತ್ತು ಕಲಾತ್ಮಕ ಮನೋಭಾವದ ಕಾಲೇಜು ವಿದ್ಯಾರ್ಥಿಗಳು ಮದುವೆಯ ಕಲ್ಪನೆಗೆ ಹೊಂದಿಕೊಳ್ಳುವ ರೀತಿಯನ್ನು ಆಳವಾಗಿ ಪರಾಮರ್ಶಿಸುತ್ತದೆ. ಹೆಣ್ಣು ಗಂಡಿನ ಸ್ನೇಹ, ಪ್ರೇಮ, ವಿರಹ, ವಿಷಮ ದಾಂಪತ್ಯ, ಸರಿಸಮರ ದಾಂಪತ್ಯ, ಭೌದ್ದಿಕ ಸಹಚರ್ಯ, ನಿಷ್ಕ್ರಿಯತೆ ತಂದೊಡ್ಡುವ ದುರಂತ ಕಾದಂಬರಿಯ ಮೂಲ ಧಾತು.
ತತ್ವಶಾಸ್ತ್ರ, ವಿಚಾರವಾದ, ಸಾಹಿತ್ಯ, ಕಲೆಯ ಚರ್ಚೆ ಕಾದಂಬರಿಯಲ್ಲಿ ಹಾಸುಹೊಕ್ಕಾಗಿದೆ
ಕಾದಂಬರಿಯ ದುರಂತ ನಾಯಕಿ ವಿನುತಾ ಕುಮಾರಿ ಹಾಗೋ ಅನಂದನ ಕತೆಯ ಮೂಲಕ ವ್ಯಯಕ್ತಿಕವಾಗಿ ನನ್ನ ಜೀವನಕ್ಕೆ ಸಂಬಂಧಿಸಿದ ಹಲವಾರು ಪ್ರಶ್ನೆಗಳ ಉತ್ತರ ಸಿಕ್ಕಿದ ಅನುಭವವಾಯಿತು.
Definitely among my Top 5 SLB novels --for its depth, personal impact and novelty!
"Doora Saridaru" is a timeless novel that delves into the complexities of love, relationships, and philosophy. Despite being written in the 1960s, the themes it explores remain relevant today. The novel challenges readers to consider different perspectives on love, highlighting the conflicts between logical reasoning and emotions. The characters are richly developed, each embodying a philosophical viewpoint that provokes deep reflection. Through their stories, Bhyrappa skillfully navigates the nuances of human connections, making “Doora Saridaru” a must-read for those seeking a profound understanding of the intricacies of love and life. It’s a novel that stays with you, urging introspection and discussion long after the last page is turned.
ಈ ಕಾದಂಬರಿಯನ್ನು ಓದಿ ಮುಗಿಸಿದಾಗ ನನಗೆ ಅನಿಸಿದ್ದು, ನಾನೂ ಈವರೆಗೆ ಓದಿದ ಭೈರಪ್ಪನವರ ಎಲ್ಲ ಕೃತಿಗಳಂತೆ ಇದು ಕೂಡ ಒಂದು ಬಹಳ ಮುಖ್ಯವಾದ ಕೃತಿಯೆಂದು, ಹಾಗೂ ಇದು ನನ್ನನು ಎಂದಿಗೂ ಕಾಡುತಿರುತದೆಂದು..
ಕಾದಂಬರಿಯ ಆರಂಭದಲ್ಲಿ ಆನಂದ ಹಾಗೂ ವಿನೀತರ ವಿಚಾರಗಳ ಕುರಿತಾದ ವಾದಗಳು ಮತ್ತು ಅವರಿಬ್ಬರೂ ತಮ್ಮ ತಮ್ಮನು ಅರಿಯುವ ರೀತಿಗಳು ಹಾಗೂ ಅವರ ಸಂಭಾಷಣೆಗಳು ತುಂಬಾ ಹಿಡಿಸಿತು..
ಕೆಲವೆಡೆಯಂತು ಆನಂದನ ಪಾತ್ರ ಕುವೆಂಪುರವರ "ಕಾನೂರು ಹೆಗ್ಗಡತಿ" ಯಲ್ಲಿ ಬರುವ ಹೂವಯ್ಯನ ಪಾತ್ರವನ್ನು ನೆನಪಿಸಿತು..
ಕೊನೆಯಲ್ಲಿ ಆನಂದ ಮತ್ತು ವಿನೀತ ಕಾಣುವ ದುರ್ವಿಧಿಯನ್ನು ಅರಗಿಸಿಕೊಳ್ಳಲು ಕಷ್ಟವಾಯಿತು..
ಕೊನೆಯ ಪುಟದಲ್ಲಿ ಆನಂದ ಕೇಳುವ ಆ ಪ್ರಶ್ನೆ "ಎಲ್ಲರನ್ನು ಒಂದುಗೂಡಿಸಬೇಕಾದ ಜೀವನ ಶಕ್ತಿಯ ನಡುವೆ ಭಿನ್ನಾಭಿಪ್ರಾಯವನ್ನು ಬೆಳೆಸಿ, ಒಂದಾಗಬೇಕೆಂದು ಯತ್ನಿಸುತ್ತಿರುವ ವ್ಯಕ್ತಿಗಳನ್ನು ದೂರಸರಿಸುವ ಶಕ್ತಿ ಯಾವುದು?" ನಮ್ಮನ್ನು ಕಾಡುತ್ತದೆ..
This entire review has been hidden because of spoilers.
I sort of feel that this book is timeless and indeed a classic. This book was written in 1962 and bang on i could sense, feel and relate the incidents in the book even to today's situations. The book mainly revolves around the relationships between man and woman ! The main crux of the book is how extreme ends of couple who believed in philosophy and emotions lead a relationship. Unlike other books of his, this book has a lot of characters.
Hats off to Bhyrappa for this wonderful work. It made a huge impact on me. The characters in this book can be anyone one of us, that's why it feels so close to reality. At one stage of reading this book I almost cried. In this current world of fashion and materialistic life, this is a must read to a teenager mainly to make them realize that the love can bloom even without all these nonsense.
ಆನಂದ, ವಿನತೆ, ಜಗದಾಂಬೆ, ಉಮೆ, ರಮೆ, ವಸಂತ ಎಂಬ ಹತ್ತಾರು ಕಾಲೇಜು ವಿದ್ಯಾರ್ಥಿಗಳ ಕಥೆ. ಅವರ ಗೆಳೆತನ, ಬುದ್ದಿಮತ್ತೆ, ಅವರ ವೈಚಾರಿಕತೆ, ಪ್ರೀತಿ, ಪ್ರೇಮ, ಪ್ರಣಯ, ವಿರಸ,ವಿವಾಹ, ವಿಚ್ಚೇದನ ಹಾಗೂ ಇನ್ನಿತರ ವಿಷಯಗಳನ್ನೊಳಗೊಂಡ ನೀರಸ ಕಾದಂಬರಿ. ಮಾವಿನ ಹಣ್ಣಿನ ಬಣ್ಣ ಕಂಡು ಕೊಂಡ ಹಣ್ಣು ಸಪ್ಪೆ ಅಥವಾ ಹುಳಿಯಾದರೂ ದುಡ್ಡು ಕೊಟ್ಟದಕ್ಕಾಗಿ ತಿಂದು ಮುಗಿಸುವಂತೆ. ಕಾದಂಬರಿ ಓದಲು ಆರಂಭಿಸದ್ದರಿಂದ ಅರ್ಧಕ್ಕೆ ಬಿಡಲು ಮನಸ್ಸಾಗದೆ ಅಂತ್ಯದವರೆಗೆ ಓದಿ ಮುಗಿಸಿದ ಪುಸ್ತಕವಿದು.
S L Bhyrappa sir is a boon for Kannada literature and this novel is also his great work. I read this novel in one breath, the characters are portrayed very well but I'm not satisfied with last chapter of the story I felt something is incomplete.