The novel examines the transformation in the lives of the people residing in Belli moda estate. Indira is an heiress for her father's estate called Belli Moda. A young man called Mohan is engaged to her and dreams about owning Belli Moda when Indira's father passes away. Mohan returns from US discovering that Indira's mother has given birth to a son who is going to inherit Belli Moda. This shatters Mohan's dreams of owning the estate and refuses to marry Indira. One day,Mohan gets into a car accident and is severely injured. He is taken care of by Indira. Mohan falls truly in love with her and proposes for marriage. However,this time, Indira refuses to marry him and breaks his heart because he only cared about her money.
ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ದರಾದ ಅನುಸೂಯ ಶಂಕರ್ ರವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ತಂದೆ ಬಿ.ಎಮ್. ಕೃಷ್ಣಸ್ವಾಮಿ, ತಾಯಿ ತಂಗಮ್ಮ ಇವರ ಮಗಳಾಗಿ 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು.
ಹೈಸ್ಕೂಲ್ ವರೆಗಿನ ಶಿಕ್ಷಣ ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. 1953 ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ಇಪ್ಪತ್ತು ಕಾದಂಬರಿಗಳನ್ನು ಪ್ರಕಟಿಸಿದರು.
ಮನಸ್ಸಿನ ಭಾವನೆಗಳನ್ನೂ ಚಿತ್ರಿಸಿ ಬರೆದ ಇವರು ರಚಿಸಿದ ಪ್ರಮುಖ ಕಾದಂಬರಿಗಳೆಂದರೆ- ಹೂವು ಹಣ್ಣು, ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ, ವಸಂತಗಾನದಿಂದ ಹಿಡಿದು ಬೆಳ್ಳಿಮೋಡದವರೆಗೆ ಸುಮಾರು 20 ಕಾದಂಬರಿಗಳನ್ನು ಹಾಗೂ 3 ಕತಾ ಸಂಕಲನಗಳನ್ನು ರಚಿಸಿದ್ದಾರೆ.
ಇವರ ಬೆಳ್ಳಿಮೋಡ, ಶರಪಂಜರ, ಹಣ್ಣಲೆ ಚಿಗುರಿದಾಗ ಕಾದಂಬರಿಗಳು ಚಲನಚಿತ್ರವಾಗಿಯೂ ಅಪಾರ ಜನಮನ್ನಣೆ ಗಳಿಸಿವೆ. ಇವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ – 'ಅವಳ ಮನೆ' ಕಾದಂಬರಿಗೆ, ದೇವರಾಜ ಬಹದ್ದೂರ್ ಪ್ರಶಸ್ತಿ 'ಸಮಸ್ಯೆಯ ಮಗು' ಕಥಾಸಂಕಲನಕ್ಕೆ ಲಭಿಸಿದೆ. ತ್ರಿ
ತ್ರಿವೇಣಿ ಕಾದಂಬರಿಯ ಸೃಷ್ಟಿಯಲ್ಲಿ ಮನಶ್ಯಾಸ್ತ್ರದ ತಿಳುವಳಿಕೆಯನ್ನು ಉದ್ದೇಶಪೂರ್ವಕವಾಗಿ ಬಳಸಲು ಪ್ರಯತ್ನಿಸಿದ್ದಾರೆ. ಮನಶಾಸ್ತ್ರ ಮನುಷ್ಯನ ಅಧ್ಯಯನದ ವಿಶಿಷ್ಟ ಕ್ಷೇತ್ರವಾಗುವ ಮುನ್ನವೇ ತ್ರಿವೇಣಿಯವರು ಮನುಷ್ಯನ ಮನಸ್ಸನ್ನು ಅರ್ಥಮಾಡಿಕೊಂಡು ತಮ್ಮ ಕಾದಂಬರಿಯಲ್ಲಿ ಪಾತ್ರಗಳ ಸ್ವಭಾವ ನಡೆ ನುಡಿಗಯಲ್ಲಿ ಜೀವನವನ್ನು ಎದುರಿಸುವ ಅಥವಾ ಎದುರಿಸಲು ಹಿಂಜರಿಯುವ ರೀತಿಯಲ್ಲಿ ಪಾತ್ರಗಳನ್ನು ತಮ್ಮ ಕಾದಂಬರಿಯಲ್ಲಿ ಸೃಷ್ಟಿಸಿದರು. ತ್ರಿವೇಣಿಯವರ ‘ಬೆಕ್ಕಿನ ಕಣ್ಣು, ಮತ್ತು ‘ಶರಪಂಜರ, ಎರಡು ಮುಖ್ಯವಾದ ಮನೋವೈಜ್ಞಾನಿಕ ಕಾದಂಬರಿಯಾಗಿವೆ. ಮುಖ್ಯವಾಗಿ ಗಂಡು ಹೆಣ್ಣಿನ ಸಹಜೀವನದ ಶ್ರೀಮಂತಿಕೆಯನ್ನು ಮತ್ತೆಮತ್ತೆ ಚಿತ್ರಿಸುತ್ತಾರೆ. ಪುರುಷನ ಪ್ರೇಮ, ತಾಯ್ತನದ ಹಿಗ್ಗು, ಇವನ್ನು ಹೆಣ್ಣು ಎಷ್ಟರ ಮಟ್ಟಿಗೆ ಬಯಸುತ್ತಾಳೆ ಎಂಬುದನ್ನು ಹೆಣ್ಣಿನ ದೃಷ್ಟಿಯಿಂದ ನಿರೂಪಿಸುತ್ತಾರೆ.
ಬಹಳ ಚೆನ್ನಾದ ಕಾದಂಬರಿ, ತ್ರಿವೇಣಿಯವರದ್ದು ಸಾಮಾನ್ಯವಾಗಿ ಮನೋವೈಜ್ಞಾನಿಕ ಕಾದಂಬರಿಗಳನ್ನು ಬರೆಯುವವರು ಅಂತ ಜನರ ಅನಿಸಿಕೆ ಆದರೆ ಇದರಲ್ಲಿ ಅವರ ಹೊಸತನವನ್ನು ಕಾಣಬಹುದು. ಕಾದಂಬರಿಯ ಕೊನೆಯ ಸಾಲುಗಳು ಅದ್ಭುತ- ಬೆಳ್ಳಿ ಕರಗಿತು, ನನಗಿರುವುದು ಮೋಡ ಮಾತ್ರ 👌🏽
ಮಾನವನ ಕ್ರೌರ್ಯ, ಲಾಲಸೆ, ಮತ್ತೊಬ್ಬ ಸಹಮಾನವರ ಸಹಾಯದ ದುರುಪಯೋಗ, ಕೊಟ್ಟ ಮಾತಿಗೆ ತಪ್ಪುವ ಕೆಟ್ಟ ನಡವಳಿಕೆಗಳ ನಡುವೆ ಅಂದವಾಗಿಲ್ಲದಿದ್ದರೂ ತನ್ನ ಸ್ವಂತ ವ್ಯಕ್ತಿತ್ವದಿಂದ ನಮ್ಮ ಮನಸ್ಸನ್ನು ಗೆಲ್ಲುವ ನಾಯಕಿ ಎಲ್ಲರಿಗೂ ಹಿಡಿಸುತ್ತಾಳೆ. ಮನುಷ್ಯನ ಗುಣ ಮತ್ತು ಅದು ಬದಲಾಗುವ ರೀತಿ ಅರಿಯಲು ಈ ಕಾದಂಬರಿ ಓದಬೇಕು.
ಒಂದು ಬಾರಿ ಮನಸ್ಸು ಹೊಡೆದು ಹೋದರೆ ಮತ್ತೆ ಕೂಡಿಸುವುದು ಕಷ್ಟ. ಮನಸ್ಸಿನ ಸೂಕ್ಷ್ಮ ಸ್ವಭಾವವನ್ನು ಬಹಳ ಚನ್ನಾಗಿ ಬರೆಯಲಾಗಿದೆ. ಚಿಕ್ಕಮಗಳೂರಿನ ಕಾಫೀ ತೋಟದ ವರ್ಣನೆ, ಮುಳ್ಳಯಂಗಿರಿಯ ಸೊಬಗು ಕಣ್ಣಿಗೆ ಕಟ್ಟಿದ ಹಾಗೆ ಇದೆ. ಕೆಲವೊಮ್ಮೆ ಸಮ ಅಂತಸ್ತವರನ್ನು ಮದುವೆ ಆಗುವುದೇ ಒಳ್ಳೇದು ಎಂದೆನಿಸುತ್ತದೆ.