Jump to ratings and reviews
Rate this book

ಸಂಧ್ಯಾರಾಗ | Sandhyaraga

Rate this book
Sandhya Raaga [Paperback] [Jan 01, 1935] Aa Na Kru

146 pages, Paperback

First published January 1, 1935

36 people are currently reading
514 people want to read

About the author

A.N. Krishnarao

113 books13 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
112 (52%)
4 stars
69 (32%)
3 stars
25 (11%)
2 stars
4 (1%)
1 star
2 (<1%)
Displaying 1 - 25 of 25 reviews
Profile Image for Ashish Iyer.
873 reviews636 followers
January 9, 2021
The way the novel goes on, nowhere does it feel boring. I didn't even realized when the novel ended. The theme of the novel is that each character is a representative of one of our qualities. No role is overlooked. This book mainly focused on the life of an artist, as he is intertwined with all the other characters around him and of course the art is appealing. “The desire of the artist begins when the desire of the people ends. What makes people feel good is what makes the artist uncomfortable. An artist is dissatisfied with the satisfaction of the people. ”- This phrase applies to the whole art community, such as music, literature and sculpture. It signifies the yearning of the mind to do something else. It is impossible to express everything that comes to mind through art. The inability to express what counts is a natural instinct. Overall, Sandhyagara is a phenomenal work. Even there is a Kannada movie on this book.
172 reviews21 followers
April 22, 2022
#ಅಕ್ಷರವಿಹಾರ_೨೦೨೨

ಕೃತಿ: ಸಂಧ್ಯಾರಾಗ

ಲೇಖಕರು: ಅ.ನ.ಕೃಷ್ಣರಾವ್

ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು


ಅನಕೃ ಅವರ ಸಂಧ್ಯಾರಾಗ ಕಾದಂಬರಿಯನ್ನು ಎರಡನೇ ಬಾರಿಗೆ ಓದಿದೆ. ಓದುತ್ತಾ ಹೋದಂತೆ ಕಾದಂಬರಿ ಮುಗಿದಿದ್ದು ಅರಿವಿಗೇ ಬರಲಿಲ್ಲ… ಅನಕೃ ಅವರು ಕನ್ನಡದ ಕಾದಂಬರಿ ಸಾರ್ವಭೌಮ ಎಂದು ಏಕೆ ಕರೆಯಲ್ಪಡುತ್ತಾರೆ ಎಂದು ತಿಳಿಯಲು ೧೫೪ ಪುಟಗಳ ಈ ಒಂದು ಕಾದಂಬರಿಯೇ ಸಾಕು… ಒಂದು ಸಣ್ಣ ಗಾತ್ರದ ಕಾದಂಬರಿಯಲ್ಲಿ ಅನೇಕ ಜೀವನ ಮೌಲ್ಯಗಳನ್ನು ಅವರು ಪ್ರಾತಿನಿಧಿಕವಾಗಿ ಪ್ರಸ್ತಾಪಿಸಿ ಕಡೆಯವರೆಗೂ ಕುತೂಹಲವನ್ನು ಕಾಯ್ದುಕೊಂಡು ಕಥೆಯನ್ನು ಬೆಳೆಸಿದ ಪರಿಗೆ ತಲೆಬಾಗಲೇಬೇಕು…..


ಹೆಸರಿಗೆ ತಕ್ಕಂತೆ ಇದೊಂದು ಸಂಗೀತ ಪ್ರಧಾನ ಕಾದಂಬರಿ. ಕಥೆಯಲ್ಲಿ ಬರುವ ಲಕ್ಷ್ಮಣ ಸಂಗೀತದ ಉಪಾಸಕ. ವಿದ್ಯೆ ತಲೆಗೆ ಹತ್ತದಿದ್ದರೂ ಸಂಗೀತ ಅವನ ಉಸಿರು. ಯಾವುದೇ ಒಂದು ವಿದ್ಯೆ ಅಥವಾ ಕಲೆ ಒಲಿಯಬೇಕಾದರೆ ಅದಕ್ಕಾಗಿ ತಪಸ್ಸು ಮಾಡಬೇಕು. ನಮ್ಮ ಮನಸ್ಸನ್ನು ಕೆರಳಿಸಿದೆ ಅರಳಿಸಬೇಕು. ಮನಃಶಾಂತಿಯನ್ನು ನೀಡಬೇಕು. ಆಗಲೇ ಆ ಕಲೆ ಕಲಿತವನಿಗೂ ಇತರರಿಗೂ ಶ್ರೇಯಸ್ಸನ್ನುಂಟು ಮಾಡುವುದು. ವೈಯಕ್ತಿಕವಾಗಿ ಎಷ್ಟೇ ಸಮಸ್ಯೆಗಳು ತೊಡರುಗಳು ಎದುರಾದರೂ ಜಾಗೃತ ಮನಸ್ಥಿತಿ ಸಾಧನೆಯ ಶಿಖರವನ್ನು ತಲುಪಿಸುತ್ತದೆ ಎಂಬುದನ್ನು ಲಕ್ಷ್ಮಣನ ಪಾತ್ರವು ಹೇಳುತ್ತದೆ. 


ಲಕ್ಷ್ಮಣನ ಅಣ್ಣ ರಾಮಚಂದ್ರ ವಿದ್ಯಾವಂತ ಬುದ್ಧಿವಂತ… ದುರದೃಷ್ಟವಶಾತ್ ಗಳಿಸಿದ ವಿದ್ಯೆಗೆ ತಕ್ಕಂತೆ ವಿನಯ ವಿವೇಕಗಳಿಲ್ಲದ ಅಹಂಕಾರ ದರ್ಪದ ವ್ಯಕ್ತಿ. ಮೊದಮೊದಲು ಎಲ್ಲರ ಮೇಲೆ ಅಧಿಕಾರದ ಮದದಲ್ಲಿ ಸವಾರಿ ಮಾಡಿ ಮಗ್ಗುಲಮುಳ್ಳಾಗಿ ಕಾಡುತ್ತಿರುತ್ತಾನೆ. ಆದರೆ ಅದೇ ಒಂದು ದಿನ ಅವನನ್ನು ಮುಳುಗಿಸಿಬಿಡುತ್ತದೆ. ತಾನು ನಿಕೃಷ್ಟವಾಗಿ ಕಂಡ ತಂಗಿ ಮತ್ತು ಆಕೆಯ ಗಂಡ ವೆಂಕಟೇಶನ ಸಹಾಯಹಸ್ತವನ್ನು ಬೇಡುವ ಪರಿಸ್ಥಿತಿ ಉದ್ಭವಿಸುತ್ತದೆ. ಅವನ ಅಹಂಕಾರ ಅವಿವೇಕಿತನಕ್ಕೆ ಒಂದು ಜೀವವು ವಿನಾಕಾರಣ ಬಲಿಯಾಗಬೇಕಾಗುವುದು ಎಷ್ಟೇ ವಿದ್ಯಾಬುದ್ಧಿ ಇದ್ದರೂ ವಿವೇಕವು ಇಲ್ಲದಿದ್ದರೆ ಅದು ನಿಷ್ಪ್ರಯೋಜಕ ಎಂಬುದನ್ನು ಮನವರಿಕೆ ಮಾಡುತ್ತದೆ. 


ಒಬ್ಬ ವ್ಯಕ್ತಿ ಎಷ್ಟೇ ನಿರ್ಗತಿಕನಾದರೂ ಸ್ವಾಭಿಮಾನ ಎಂಬುದು ಇತರರಷ್ಟೇ ಇರುವುದನ್ನು ಗುರುತಿಸಬೇಕು ಗೌರವಿಸಬೇಕು ಮತ್ತು ಪ್ರಾಮಾಣಿಕ ಪ್ರಯತ್ನ,ನಿಷ್ಕಲ್ಮಶ ಮನಸ್ಸು ಮತ್ತು ತಾನು ಸಹ ಏನಾದರೂ ಸಾಧಿಸಬೇಕೆಂಬ ಛಲ ಯಾವತ್ತೂ ಕೈ ಬಿಡುವುದಿಲ್ಲ ಎಂಬುದು ವೆಂಕಟೇಶನ ಪಾತ್ರವು ಸ್ಪಷ್ಟವಾಗಿ ಸಾರುತ್ತದೆ. ಹೀಗೆ ಮೀನಾಕ್ಷಮ್ಮ, ಸಾವಿತ್ರಿ, ಶಾಂತಾಒಂದೊಂದು ಪಾತ್ರವೂ ದಯೆ,ಕರುಣೆ, ಮಾತೃತ್ವದ ಬೆಚ್ಚಗಿನ ಆಸರೆ, ಅನ್ಯೋನ್ಯತೆ ಮುಂತಾದ ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುತ್ತಾ ಓದುಗರಲ್ಲಿ ಆಪ್ತಭಾವನೆಯನ್ನು ಮೂಡಿಸುತ್ತದೆ.


ಮೂವತ್ತರ ದಶಕದ ಹಳ್ಳಿಯ ಜೀವನ, ಸಂಬಂಧಗಳಿಗೆ ಜನರು ನೀಡುತ್ತಿದ್ದ ಬೆಲೆ, ಸಂಬಂಧಗಳ ನಡುವಿನ ಅನ್ಯೋನ್ಯತೆ, ಸಂಗೀತ ಸಾಹಿತ್ಯದೆಡೆಗಿನ ಒಲವು ಮತ್ತು ತಾತ್ಸಾರದ ಮನೋಭಾವಗಳು, ಕೆಳಗೆ ಬಿದ್ದವರಿಗೆ ಸಹಾಯಹಸ್ತ ಚಾಚುವ ಔದಾರ್ಯ, ಅಭಿಪ್ರಾಯ ಭೇದಗಳಿದ್ದರೂ ಅದನ್ನು ಗೌರವಿಸುವ ಸ್ನೇಹಪರತೆ… ಒಟ್ಟಿನಲ್ಲಿ ಒಂದು ಆದರ್ಶಮಯ ಕುಟುಂಬ ಮತ್ತು ಸಮಾಜ ಹೇಗಿರಬೇಕೆಂಬುದು ಈ ಕೃತಿಯ ತುಂಬಾ ತುಂಬಿಕೊಂಡಿದೆ. 


ಒಟ್ಟಾರೆಯಾಗಿ ಒಳಿತು ಕೆಡುಕುಗಳ ಮಿಶ್ರಣವೇ ಬದುಕನ್ನು ಸಮಾಜವನ್ನು ಮುನ್ನೆಡೆಸುವ ಪ್ರಚೋದಕ ಶಕ್ತಿಯಾಗಿದೆ.ಕಾಲಚಕ್ರದಲ್ಲಿ ಒಮ್ಮೆ ಅದು ಮೇಲೆ ಒಮ್ಮೆ ಇದು ಮೇಲೆಯಾದರೂ ಎಲ್ಲವನ್ನೂ ಸೈರಿಸಿಕೊಂಡು ತಾಳ್ಮೆಯಿಂದ ಜೀವನರಥವನ್ನು ಎಳೆಯಬೇಕೆಂಬ ಸಂದೇಶವಿರುವ ಇದೊಂದು ಕನ್ನಡದ ಕ್ಲಾಸಿಕ್ ಕೃತಿ…..


ನಮಸ್ಕಾರ,

ಅಮಿತ್ ಕಾಮತ್
Profile Image for Adarsh ಆದರ್ಶ.
115 reviews24 followers
May 3, 2021
ಕನ್ನಡದ ಉತ್ಕೃಷ್ಟ ಕಾದಂಬರಿಗಳಲ್ಲೊಂದು!
ಅತ್ಯದ್ಭುತ ಓದು!
Profile Image for Dr. Arjun M.
17 reviews8 followers
February 1, 2021
One of the finest novels of Kannada Sahitya, "sandhyaaraaga" has occupied a special place in my heart today. In just 150 pages, which on an average takes half a day to read, 'Aa Na Kru' has painted the subtle feelings of a true musician. As a listener of Carnatic music, the novel appealed to me so much in no time that, the "purvikalyani" mentioned in the novel has now become yet another reason to remain as my favorite raaga.
Profile Image for That dorky lady.
375 reviews73 followers
June 16, 2025
ಈ ಕಾದಂಬರಿಯ ಸ್ಟೊರಿಟೆಲ್'ನಲ್ಲಿರುವ ಆಡಿಯೋ ಆವೃತ್ತಿಯನ್ನು ಕೇಳಿದೆ. ವಿದ್ಯೆಗಿಂತ ವ್ಯಕ್ತಿತ್ವ ಮುಖ್ಯ ಎಂಬ ಸಾರ್ವಕಾಲಿಕ ಸತ್ಯವನ್ನು ಅಡಕವಾಗಿಸಿಕೊಂಡ ಸರಳ ಶೈಲಿಯ ಕಾದಂಬರಿ. ಚೆನ್ನಾಗಿದೆ.
Profile Image for mahesh.
270 reviews26 followers
January 3, 2023
“The desire of the artist begins when the desire of the people ends. What makes people feel good is what makes the artist uncomfortable. An artist is dissatisfied with the satisfaction of the people. ”
This is my first book by A.N Krishnarao. When I finished reading this book, There is a sense of completeness within me. The story takes you through the generation of changes, Though it's a short book it feels like a long novel. Someone who admires the intricate secrets of art or music would definitely appreciate this masterpiece.
It was also made into a movie where DR. Raj Kumar played the protagonist role in the Kannada film industry in the 90s.
You can listen to one of the masterpieces of music from that movie in the below link from three different musicians. You can feel the universe of the divine in their string of words.

link: https://www.youtube.com/watch?v=UkBca...
69 reviews12 followers
July 10, 2021
I listened to the audiobook version on StoryTel. The voice over artist did a good job of recounting the story.

I did not find anything great in the story. The story just ambles along and at times sounds like an old kannada story or kannada serial ... None of the characters appealed greatly to me.
Profile Image for Karthikeya Bhat.
109 reviews13 followers
April 20, 2022
ಸಂಧ್ಯಾರಾಗ
ಅ.ನ.ಕೃ

ಇದೇಕೆ ಲಕ್ಷ್ಮಣ ಪೂರ್ವಿ ರಾಗವನ್ನು ಹಾಡುತ್ತಿದ್ದಾನೆ?ಸಂಧ್ಯಾರಾಗ ಎಲ್ಲರ ಕಿವಿಗೂ ಕೇಳುತ್ತದೆ, ಆದರೆ ಉದಯರಾಗ ಕೇಳಿಬಂದುದು ಲಕ್ಷ್ಮಣನಿಗೆ ಮಾತ್ರ. ಇದನ್ನು ತಿಳಿಯಲು ಸ್ವಲ್ಪ ಹಿಂದಕ್ಕೆ ಹೋಗೋಣ.

ಹೊಸಹಳ್ಳಿಯಲ್ಲಿ ಶ್ರೀನಿವಾಸರಾಯರೆಂದರೆ ಗೌರವ, ರಾಯರಿಗೆ ಹಿರಿಯರು ಮಾಡಿದ ಆಸ್ತಿ ಬಹಳವಿದ್ದಿತು ಜೊತೆಗೆ ತಾವೂ ಅಷ್ಟು ಸೇರಿಸಿದ್ದರು. ಊರಿನಲ್ಲಿ ರಾಯರು ಹೆಸರುವಾಸಿಯಾಗಿದ್ದರು, ಮೀನಾಕ್ಷಮ್ಮನವರನ್ನು ಮದುವೆಯಾಗಿ ಸಂತೋಷದಿಂದ ಸಂಸಾರ ನಡೆಸುತ್ತಿದ್ದರು, ಮೀನಾಕ್ಷಮ್ಮನವರೆಂದರೆ ಊರಿನವರಿಗೆಲ್ಲ ತುಂಬಾ ಪ್ರೀತಿ, ಊರಿನವರಿಗೆ ಆಕೆಯು ಲಕ್ಷ್ಮಿಯಾಗಿದ್ದಳು, ಯಾರಿಗೆ ಯಾವ ದುಃಖ ಬಂದರೂ ಮೀನಾಕ್ಷಮ್ಮನವರಲ್ಲಿ ಬಂದು ತೋಡಿಕೊಳ್ಳುತ್ತಿದ್ದರು, ಅವರ ಕೆಲವು ಮಾತುಗಳು ಎಷ್ಟೋ ಸಮಸ್ಯೆಗಳನ್ನು ಪರಿಹರಿಸಿತ್ತು ಆದ್ದರಿಂದ ಊರಿನವರ ಪಾಲಿಗೆ ಆಕೆ ತಾಯಿಯಾಗಿದ್ದಳು. ಮಕ್ಕಳೆಂದರೆ ರಾಯರಿಗೆ ಬಹಳ ಪ್ರೇಮ ಆದರೆ ಅವರಿಗೆ ಮದುವೆಯಾಗಿ ಹಲವಾರು ವರ್ಷಗಳಾದರೂ ಸಂತಾನಭಾಗ್ಯವಿರಲಿಲ್ಲ, ದಂಪತಿಗಳಿಗೆ ಇದೊಂದೇ ಕೊರತೆ ರಾಯರ ಮನಸ್ಸನ್ನು ಅರ್ಥ ಮಾಡಿಕೊಂಡ ಮೀನಾಕ್ಷಮ್ಮನವರು ತಮ್ಮ ಹತ್ತಿರ ಸಂಬಂಧಿಯ ಪೈಕಿ ಸಾವಿತ್ರಿಯನ್ನು ಕೊಟ್ಟು ಮದುವೆಮಾಡಿದಳು, ರಾಯರಿಗೆ ಇಷ್ಟವಿಲ್ಲದಿದ್ದರೂ ಮಕ್ಕಳಾಗುವುದಕ್ಕೆ ಆಕೆ ಸವತಿಯನ್ನು ತರಲು ಏನೂ ಯೋಚನೆಮಾಡದೆ ಆಕೆಯ ತ್ಯಾಗಕ್ಕೆ ಮೆಚ್ಚಿ ಅವರ ಪಾಲಿಗೆ ಅಂದಿನಿಂದ ಆಕೆಯು ಭಾಗ್ಯಲಕ್ಷ್ಮಿಯಾದಳು. ಇವರ ಜೊತೆ ಶಾಮಣ್ಣನವರೂ ವಾಸಿಸುತ್ತಿದ್ದರು ಎಲ್ಲಿಂದ ಬಂದರೋ ತಿಳಿಯದು ಆದರೆ ಅವರು ಮನೆಯವರಲ್ಲಿ ಒಬ್ಬರಾಗಿಬಿಟ್ಟಿದ್ದರು. ಮದುವೆಯ ನಂತರ ಮೀನಾಕ್ಷಮ್ಮನವರು ಆಕೆಯ ಕೆಂಪಿನೋಲೆ ತೆಗೆದು ಸಾವಿತ್ರಿ ಕಿವಿಗಿಟ್ಟಾಗ ಎಲ್ಲರ ಪಾಲಿಗೆ ಮೀನಾಕ್ಷಮ್ಮನವರು ದೇವರೇ ಆದರು. ಸಾವಿತ್ರಿ ಮೀನಾಕ್ಷಮ್ಮನವರ ಮಾತನ್ನು ವೇದವಾಕ್ಯದಂತೆ ಭಾವಿಸುತ್ತಿದ್ದಳು. ಸಾವಿತ್ರಿ ಗರ್ಭವತಿಯಾಗಿ ಕೆಲವು ತಿಂಗಳೊಳಗೆ ಮೀನಾಕ್ಷಿಯೂ ಗರ್ಭವತಿಯಾದಾಗ ರಾಯರಿಗೆ ತಾನು ಎರಡನೆಯ ಮದುವೆಯಾಗಬಾರದಿತ್ತು ಸ್ವಲ್ಪ ಕಾಯಬೇಕಾಗಿತ್ತು ಎಂದು ಮರುಕಪಟ್ಟರು. ನಂತರ ನಾಲ್ಕು ಮಕ್ಕಳು ಹುಟ್ಟಿದರು, ಸಾವಿತ್ರಿಗೆ ರಾಮು,ಗೋಪಾಲಿ. ಮೀನಾಕ್ಷಿಗೆ ಲಕ್ಷ್ಮಣ,ಶಾಂತ, ಹಿರಿಯವನು ರಾಮು, ಕಿರಿಯವಳು ಶಾಂತ. ಇನ್ನ ಮುಂದಿನದೆ ಇವರ ಕಥೆ. ಇವರ ಜೊತೆ ರಾಯರ ಮಿತ್ರರಾದ ಸುಂದರರಾವರ ಪೈಕಿ ವೆಂಕಟೇಶ ಇವರ ಮನೆಗೆ ಓದಲು ಸೇರಿ ಮನೆಯವರಲ್ಲಿ ಒಬ್ಬ ಸದಸ್ಯನಾಗಿದ್ದನು.

ಮಕ್ಕಳ ಓದಿಗಾಗಿ ರಾಯರ ಸಂಸಾರ ಹೊಸಹಳ್ಳಿ ಬಿಟ್ಟು ಬೆಂಗಳೂರು ಬಸವನಗುಡಿಗೆ ಬಂದು ನೆಲಸಿದರು, ಮೀನಾಕ್ಷಮ್ಮನವರು ಹೊರಟುಹೋದುದಕ್ಕೆ ಹಳ್ಳಿಯ ಜನರು ಕಂಬನಿಗೈದರು. ಓದಿನಲ್ಲಿ ರಾಮು ಎತ್ತಿದ ಕೈ, ಎಲ್ ಎಲ್ ಬಿ ಮಾಡಿ ಲಾಯರ್ ಆಗಿ ಒಳ್ಳೆಯ ಹುದ್ಧೆಯಲ್ಲಿದ್ದನು, ಅವನಿಗೆ ಇನ್ನಿತರರನ್ನು ಕಂಡರೆ ಏನೋ ತಾತ್ಸಾರ, ಅದರಲ್ಲೂ ಸಂಗೀತದಲ್ಲಿ ಈಗೀಗ ಹೆಸರು ಗಳಿಸುತ್ತಿರುವ ಲಕ್ಷ್ಮಣನನ್ನು ಹಾಗು ತಮ್ಮ ಮನೆಗೆ ಜೋತುಬಿದ್ದ ವೆಂಕಟೇಶನನ್ನು ಕಂಡರೆ ದ್ವೇಷ. ನಂತರ ಶಾಂತನನ್ನು ವೆಂಕಟೇಶನಿಗೆ ಕೊಟ್ಟು ಮದುವೆಮಾಡಿದಾಗ ರಾಮುವಿಗೆ ಇನ್ನಷ್ಟು ದ್ವೇಷ ಬೆಳೆಯಿತು. ಪದ್ಮ ನನ್ನು ರಾಮು ಹಾಗು ಜಯಾ ನನ್ನು ಲಕ್ಷ್ಮಣ ಮದುವೆಯಾಗಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಮೀನಾಕ್ಷಮ್ಮನವರು ಹಾಸಿಗೆ ಹಿಡಿದು ಕೆಲವು ದಿನಗಳಾದನಂತರ ತಮ್ಮ ಜೀವನವನ್ನು ಮುಗಿಸಿದರು ಇದರಿಂದ ರಾಯರ ಮನಸ್ಸು ನೊಂದು ಸದಾ ದೇವರ ಸೇವೆಯಲ್ಲೇ ನಿರತರಾಗಿ ರಾಮು ಮನೆಯ ಯಜಮಾನನಾದನು ಇದರಿಂದ ಆತನ ದರ್ಪ ಇನ್ನೂ ಹೆಚ್ಚಿತು. ರಾಮು ತಾನೊಬ್ಬನೆ ದುಡಿಯುತ್ತಿರುವನು, ಕೆಲಸ ವಿಲ್ಲದೆ ಮನೆಯಲ್ಲಿರುವ ಇತರರನ್ನು ಹೇಗಾದರೂ ಮನೆಯಿಂದ ಆಚೆ ಹಾಕಬೇಕೆಂದು ಸಮಯ ಕಾಯುತ್ತಿದ್ದನು. ಯಾವುದೋ ಒಂದು ಸಂದರ್ಭದಲ್ಲಿ ಪದ್ಮನನ್ನು ಹೊಡೆಯುತ್ತಿರುವಾಗ ವೆಂಕಟೇಶ ಅಡ್ಡ ಬಂದುದಕ್ಕೆ ಆತನನ್ನು ಅವಮಾನಕ್ಕೀಡು ಮಾಡಿದನು, ಇದರಿಂದ ಕೆರಳಿದ ವೆಂಕಟೇಶ ಮನೆ ಬಿಟ್ಟು ಶಾಂತ ಜೊತೆ ಹೊರಟು ಹೋಗಿ ತನ್ನ ಸಂಸಾರ ನಡೆಸಲು ಶುರುಮಾಡಿದನು, ವೀರ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಗಿಟ್ಟಿಸಿಕೊಂಡನು.

ಇನ್ನು ಲಕ್ಷ್ಮಣನಿಗೆ ಚಿಕ್ಕಂದಿನಿಂದಲೂ ಓದು ತಲೆ ಹತ್ತಲಿಲ್ಲ, ಸಂಗೀತದಲ್ಲೇ ಅವನ ಆಸಕ್ತಿ ಹೆಚ್ಚು. ಮನೆಯಲ್ಲಿ ಹಾಡಲು ಶುರುಮಾಡಿದನು. ರಾಯರಿಗೆ ಲಕ್ಷ್ಮಣನದೇ ಬಹಳ ಚಿಂತೆಯಾಗಿತ್ತು ಹೇಗೆ ಬದುಕುತ್ತಾನೆ ಇವನು ಎಂದು. ಮೊದಲು ಮುಳುಬಾಗಿಲು ಚೆನ್ನಪ್ಪನವರಿಂದ ಸಂಗೀತ ಕಲಿಯಲು ಶುರುಮಾಡಿದನು, ಅವರು ಕೊಟ್ಟ ತಂಬೂರಿಯಿಂದ ಸಂಗೀತಭ್ಯಾಸವನ್ನು ಚೆನ್ನಾಗಿ ಮುಂದುವರೆಸಿದನು, ಆದರೆ ಯಾರ ಮುಂದೆ ಹಾಡುತ್ತಿರಲಿಲ್ಲ, ಎಲ್ಲರೂ ಬಲವಂತ ಮಾಡಿದ್ದಕ್ಕೆ ಶಾಂತಳ ಮದುವೆಯಲ್ಸಿ ಹಾಡಿ ಪ್ರಸಿದ್ಧಿ ಹೊಂದಿದನು, ಇದರಿಂದ ರಾಮುವಿಗೆ ದ್ವೇಷ ಹೆಚ್ಚಾಯಿತು. ರಾಮು ಮನೆಯ ಯಜಮಾನ ವಾದನಂತರ ಜಯನೆಗೆ ಮನೆಯಲ್ಲಿ ಹೆಚ್ಚು ಕೆಲಸ ಬಂದಿತು, ಗರ್ಭವತಿಯಾಗಿರುವಾಗ ರಾಮನ ನಿಂದನೆಗಳಿಗೆ ಒಳಗಾಗಿ ಜಯ ನೀರು ಸೇದುವಾಗ ಪ್ರಜ್ಞೆ ತಪ್ಪಿ ಜಾರಿ ಬಿದ್ದು ಗರ್ಭವತಿಯಾದ ಜಯ ಪ್ರಾಣವನ್ನರ್ಪಿಸಿದಾಗ ಲಕ್ಷ್ಮಣ ಮನೆಯನ್ನು ಹಾಗು ಬೆಂಗಳೂರನ್ನು ಬಿಟ್ಟು ಎಲ್ಲರಿಂದ ದೂರಹೋದನು. ನಂತರ ಅನಂತಚಾರ್ಯರಿಂದ ಸಂಗೀತ ಕಲಿತನು, ಜಯಳನ್ನು ಮರೆಯಲಾಗದೆ ಊರು ಊರು ಸುತ್ತುತ್ತಾ ಸಂಗೀತವನ್ನು ಎಲ್ಲಿ ಮನಸ್ಸಾಗುತ್ತದೊ ಅಲ್ಲಿ ಹಾಡನ್ನು ಹೇಳುತ್ತಿದ್ದನು. ಒಂದು ಕಛೇರಿಯಲ್ಲಿ ಯಾರೋ ಹಾಡುತ್ತಿರುವುದನ್ನು ಕೇಳಿ ಪ್ರಜ್ಞೆ ತಪ್ಪಿ ಬಿದ್ದನು, ನಂತರ ಆಸ್ಪತ್ರೆಗೆ ಲಕ್ಷ್ಮಣನನ್ನು ಸೇರಿಸಿದರು, ಅಲ್ಲಿರುವ ಡಾಕ್ಟರರು ಲಕ್ಷ್ಮಣನನ್ನು ಬದುಕುಳಿಸಿದರು, ಇವನಲ್ಲಿರುವ ಸಂಗೀತ ಅಭಿರುಚಿಯನ್ನು ತಿಳಿದ ಡಾಕ್ಟರರು ತಮ್ಮ ಮನೆಯಲ್ಲಿ ಕಛೇರಿ ಕೊಡಬೇಕೆಂದು ಕೇಳಿದಾಗ ಒಪ್ಪಲಿಲ್ಲ, ನಂತರ ತಂಜಾವೂರು ಕೃಷ್ಣಯ್ಯನವರನ್ನು ಪರಿಚಯ ಮಾಡಿಕೊಡುವುದಾಗಿ ಹೇಳಿದಾಗ ಡಾಕ್ಟರರ ಮನೆಯಲ್ಲಿ ಒಂದು ದಿವಸ ಕಛೇರಿ ಕೊಟ್ಟುನು, ಮೆಚ್ಚಿದ ಡಾಕ್ಟರರು ಅವನಿಗೊಂದು ಪತ್ರ ಕೊಟ್ಟು ಕಳುಹಿಸಿದರು, ಲಕ್ಷ್ಮಣನು ಅವರಿಂದ ಪತ್ರ ತೆಗೆದುಕೊಂಡು ತಂಜಾವೂರು ಕೃಷ್ಣಯ್ಯನವರನ್ನು ಭೇಟಿಯಾಗಿ ತನ್ನ ಸಂಗೀತಭ್ಯಾಸವನ್ನು ಮುಂದುವರೆಸಿ ಹಲವಾರು ರಾಗಗಳನ್ನು ಕಲೆತು ಒಳ್ಳೆ ವಿಧ್ವಾಂಸನಾಗಿ ಹೆಸರು ಗಳಿಸಿದನು, ಇದರಿಂದ ಲಕ್ಷ್ಮಣನ ಕೀರ್ತಿ ಹಬ್ಬುತ್ತಾ ಹೋಯಿತು, ಕಛೇರಿಯಲ್ಲಿ ಬಂದ ಹಣವನ್ನು ಬಡ ವಿಧ್ಯಾರ್ಥಿಗಳಿಗೆ ಸಂಗೀತ ಕಲಿಯಲು ದಾನವಾಗಿ ಕೊಡುತ್ತಿದ್ದನು. ಮಲಯಮಾರುತ, ಕಲ್ಯಾಣಿ, ಶಂಕರಾಭರಣ, ಕಾಂಬೋಜಿ, ಬಿಲಹರಿ, ಮೋಹನ, ಸಾವೇರಿ, ಆನಂದಭೈರವಿ, ಪೂರ್ವಿ ಇನ್ನಿತರೆ ರಾಗಗಳಲ್ಲಿ ಪ್ರವೀಣನಾದನು. ನಂತರ ಗುರುಗಳ ಅಪ್ಪಣೆಯನ್ನು ಪಡೆದು ಬೆಂಗಳೂರಿಗೆ ಶಾಂತಳನ್ನು ನೋಡಲು ಹೋಗುತ್ತಾನೆ.

ಗೋಪಾಲನ ಭೇಟಿಯಾಗುತ್ತದೆ, ಆತನು ಒಳ್ಳೆಯ ಲೇಖಕನಾಗಿರುತ್ತಾನೆ, ರಾಮುವಿನಿಂದ ಒಡೆದ ಸಂಸಾರದ ಕಥೆಯನ್ನು ತಿಳಿದು ದುಃಖಪಟ್ಟನು, ವೆಂಕಟೇಶನು ವೀರ ಕರ್ನಾಟಕ ಪತ್ರಿಕೆಯಲ್ಲಿ ಒಳ್ಳೆಯ ಹುದ್ಧೆಯಲ್ಲಿರುತ್ತಾನೆ. ವಕೀಲು ವೃತ್ತಿಯಲ್ಲಿದ್ದ ರಾಮು ಹಣ ಸಂಪಾದಿಸಲು ಕೆಟ್ಟ ಮಾರ್ಗ ಹಿಡಿದು ಎಲ್ಲರ ದೃಷ್ಟಿಯಲ್ಲೂ ಅವಮಾನಿತನಾಗಿ, ಎಲ್ಲರನ್ನೂ ಕಳೆದುಕೊಂಡು ತನ್ನ ತಪ್ಪನ್ನು ಅರಿತು ಹಾಗು ತನ್ನ ಮೇಲೆ ಬಂದಿದ್ದ ಆರೋಪಗಳನ್ನು ಹೋಗಲಾಡಿಸಲು ವೆಂಕಟೇಶನಿಗೆ ಶರಣಾಗತನಾಗುತ್ತಾನೆ. ರಾಮು ಬೆಂಗಳೂರು ಬಿಟ್ಟು ಎಲ್ಲರಿಂದ ದೂರ ಹೊರಟುಹೋಗುತ್ತಾನೆ. ಮನೆಗೆ ಬಂದ ಲಕ್ಷ್ಮಣ, ಗೋಪಾಲನನ್ನು ಶಾಂತ ವೆಂಕಟೇಶರು ಆದರದಿಂದ ಸ್ವಾಗತಿಸುತ್ತಾಳೆ, ಗೋಪಾಲಿ ವೀರ ಕರ್ನಾಟಕ ಪತ್ರಿಕೆ ಸೇರಿ ಅದರ ವಿಷೇಶ ಸಂಚಿಕೆಯಲ್ಲಿ ಲಕ್ಷ್ಮಣನ ಸಂಗೀತ ಜ್ಞಾನ ಕುರಿತು ಪ್ರಕಟಿಸುತ್ತಾನೆ. ಇದರಿಂದ ಲಕ್ಷ್ಮಣನ ಹೆಸರು ಬೆಂಗಳೂರಲ್ಲಿ ಹಬ್ಬಿ ಹಲವಾರು ಕಛೇರಿಗಳನ್ನು ಕೊಡುವ ಅವಕಾಶ ಸಿಗುತ್ತದೆ, ಇಷ್ಟವಿಲ್ಲದಿದ್ದರೂ ಕಛೇರಿಗಳನ್ನು ಕೊಡುತ್ತಾನೆ, ಆದರೆ ಎಲ್ಲೂ ಪೂರ್ವಿ ಹಾಡಿರುವುದಿಲ್ಲ.

ಒಮ್ಮೆ ಒಂದು ಕಛೇರಿಯಲ್ಲಿ ಹಾಡುತ್ತಿದ್ದಾಗ ಜಯ ನೆನಪು ಹಾಗು ಅವನ ಗುರುಗಳಾದ ಮುಳುಬಾಗಿಲು ಚೆನ್ನಪ್ಪನವರು, ಅನಂತಾಚಾರ್ಯರು, ತಂಜಾವೂರು ಕೃಷ್ಣರಾಯರ ದರ್ಶನವಾಗುತ್ತದೆ. ಶಂಕರಾಭರಣದಿಂದ ಕಛೇರಿ ಶುರುವಾಗುತ್ತದೆ, ನಂತರ ಕಲ್ಯಾಣಿ, ನಂತರ ಆನಂದಭೈರವಿ ಹಾಡಿತ್ತಾನೆ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ, ಇದ್ದಕ್ಕಿದ್ದ ಹಾಗೆ ಪೂರ್ವೀ ಹಾಡಲು ಶುರುಮಾಡಿದ, ಲಕ್ಷ್ಮಣನ ಕಣ್ಣುಗಳಲ್ಲಿ ಧಾರೆ, ರಾಗ ಮುಗಿಯುವ ಹೊತ್ತಿಗೆ ತಂಬೂರಿಯ ತಂತಿ ಮುರಿಯುತ್ತದೆ, ತಂಬೂರಿ ಲಕ್ಷ್ಮಣನ ಕೈಯ್ಯಿಂದ ಜಾರುತ್ತದೆ, ಆತನೂ ನೆಲಕ್ಕುರುಳಿ ಸುಖ ನಿದ್ರೆಗೆ ಜಾರುತ್ತಾನೆ. ಸಂಧ್ಯಾರಾಗದಲ್ಲಿ ತನ್ನ ಆತ್ಮ ಪ್ರಣತಿಯನ್ನು ತೇಲಿಬಿಡುತ್ತಾನೆ, ತನ್ನ ಜೀವನ ಸಂಧ್ಯಾರಾಗವನ್ನು ಹಾಡಿ ಮುಗಿಸುತ್ತಾನೆ. ಸಂಧ್ಯಾರಾಗ ಎಲ್ಲರ ಕಿವಿಗೂ ಕೇಳುತ್ತದೆ, ಆದರೆ ಉದಯರಾಗ ಕೇಳಿಬಂದುದು ಲಕ್ಷ್ಮಣನಿಗೆ ಮಾತ್ರ.

*ಕಾರ್ತಿಕೇಯ*
Profile Image for Soumya.
217 reviews48 followers
January 1, 2022
ನಾ ಕೇಳಿದ ಮೊದಲ audiobook.
ತುಂಬಾ ಇಷ್ಟ ಆಯ್ತು. ಪುಸ್ತಕದ ಹೆಸರೇ ಹೇಳುವಂತೆ ಸಂಗೀತ ಆಧಾರಿತ ಕಾದಂಬರಿ, ಹಾಗಾಗಿ audio book ಆದರಿಂದ ಮಧ್ಯದಲ್ಲಿ ಹಾಡು ಕೇಳುವ ಹಾಗೂ ಆಯ್ತು 😂

ಒಂದು ಮೇರು ಕೃತಿ!!
Profile Image for Rathish Kumar.
53 reviews3 followers
March 10, 2025
ಬಹಳ ವರ್ಷಗಳ ಹಿಂದೆ ಅನಕೃ ಅವರ ರತ್ನದೀಪ ಎಂಬ ಕಾದಂಬರಿ ಓದಿದ ನೆನಪಿದೆ. ಅಸ್ಪಷ್ಟವಾಗಿ ನೆನಪಿದೆಯಾದರೂ ನನ್ನ ಭಾವನೆಗಳ ಮೇಲಿನ ಹಿಡಿತ ಆ ಕಥೆಯಲ್ಲಿ ಬಲವಾಗಿತ್ತು. ಕೊನೆಯಲ್ಲಿ ಕಣ್ಣೀರು ತಾನಾಗೆ ಹರಿದಿತ್ತು.

ಸಂಧ್ಯಾರಾಗ ಬಹಳಷ್ಟು online (reddit) ಓದುಗರ ಸಲಹೆಯ ಮೇರೆಗೆ ವಿಧಾನಸೌಧ ಪುಸ್ತಕ ಮೇಳದಿಂದ ಕೊಳ್ಳಿಸಿಕೊಂಡಿತು.. ಕಥೆ ಓದುಗನನ್ನು ಹಿಡಿದಿಡುವಲ್ಲಿ ವಿಫಲವಾಗಿದೆ. ಇದುವರೆಗೂ ನಾನಾ ಚಲನಚಿತ್ರಗಳಲ್ಲಿ ಇದೇ ರೀತಿಯ ಕಥೆಗಳನ್ನು ತಿರುವಿ ಹಾಕಿ ಹೇಳುತ್ತಾ ಬಂದಿದ್ದಾರೆ.

ಈ ಕಾದಂಬರಿ ನನಗೆ ಇಷ್ಟವಾಗದ ಕಾರಣ ನಾನೇ ಇರಬಹುದು. ಭೈರಪ್ಪನವರ ಎಲ್ಲಾ ಕಥೆಗಳನ್ನು ಓದಿ ಸಂಧ್ಯಾರಾಗ ಎತ್ತಿಕೊಂಡರೆ ನನಗೆ compare ಮಾಡಬೇಕೆಂದೆನಿಸುವುದು ಸ್ವಾಭಾವಿಕ. ಆ ನಿಟ್ಟಿನಲ್ಲಿ ಇದು ಭೈರಪ್ಪನವರ ಕೃತ���ಗಳ ಹತ್ತಿರಕ್ಕೆ ಸುಳಿಯುವಲ್ಲಿಯೂ ಸಹ ವಿಫಲವಾಗಿವೆ.

ಇದನ್ನು ಧಾರಾವಾಹಿ ನೋಡುವ ladies, ಈಗತಾನೇ ಓದಲು ಶುರುಮಾಡಿದ ಸಾಹಿತ್ಯ beginners ಗೆ suggest ಮಾಡುತ್ತೇನೆ.

ಕಥೆಯ ಮುಖ್ಯ ಪಾತ್ರಗಳಾದ ರಾಮ ಲಕ್ಷ್ಮಣರು ರೋಮಾಂಚನ, ಗಾಬರಿ, ಆಶ್ಚರ್ಯ, ಕರುಣೆ, ದಯೆ ಇತರೆ ಯಾವುದೇ ಭಾವನೆಗಳನ್ನು ಸೃಷ್ಟಿ ಮಾಡುವಲ್ಲಿ ಸೋತಿವೆ. ಸ್ವಲ್ಪ ಮಟ್ಟಿಗಿನ ಗಟ್ಟಿ ಪಾತ್ರವೆಂದರೆ ಮೀನಾಕ್ಷಮ್ಮನವರದು.

Profile Image for Amogha Udupa.
14 reviews16 followers
January 17, 2021
ಕಾದಂಬರಿ ಓದುವಾಗ ಅದರ ಬರವಣಿಗೆಯ ಶೈಲಿ ಹಾಗೂ ಕಥೆಯ ಎಳೆ ಸ���್ಪೆ ಅನ್ನಿಸಿತು. ಮಂದ್ರ ಕಾದಂಬರಿಗೆ ಇದನ್ನು ಹೋಲಿಸುವುದು ಸಹಜ. ಹೋಲಿಸಿದರೆ ಸಂಗೀತದ ವಿಷಯದಲ್ಲಿ ಸಂಧ್ಯಾರಾಗದ ಆಳ ಕಡಿಮೆ. ಸಂಗೀತದ ಉಪಮೆಗಳು, ಸಂಗೀತಗಾರನ ಹೃದಯಾಂತರ್ಯದ ಚಿತ್ರ, ಕಥೆ ನಿರೂಪಣೆಯಲ್ಲಿ ರಾಗಾ ತಾಳಗಳ ಉಲ್ಲೇಖಗಳು ಸಂಧ್ಯಾರಾಗದಲ್ಲಿ ವಿರಳಾತಿವಿರಳ. ಆದರೆ ಆ ಕಾಲದ ಕೌಟುಂಬಿಕ ಕೆಲಹಗಳನ್ನು ಈ ಕೃತಿ ಚೆನ್ನಾಗಿ ಚಿತ್ರಿಸಿದೆ. ವಿದ್ಯಾವಂತರಲ್ಲಿ ಸಂಗೀತದ ಬಗೆಗಿನ ತಾತ್ಸಾರವನ್ನೂ ಸುಂದರವಾಗಿ ಚಿತ್ರಿಸಿದ್ದಾರೆ ಅ.ನ.ಕೃ. ರಾಮಚಂದ್ರ ಹಾಗೂ ಲಕ್ಷ್ಮಣ ಪಾತ್ರಗಳ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ, ಮೀನಾಕ್ಷಮ್ಮನವರ ವ್ಯಕ್ತಿತ್ವ ಚಿತ್ರಣವು ಹೃದಯಕ್ಕೆ ಹತ್ತಿರವಾಗುವ ರೀತಿಯಲ್ಲಿ ಮೂಡಿಬಂದಿದೆ.

ಈ ಕೃತಿಯ ಜನಪ್ರಿಯತೆಗೆ ಕಾರಣ ಏನೆಂದು ಹೇಳುವುದು ಕೃಷ್ಟ. ಅದು ೧೯೩೫ಕ್ಕೇ ಸಂಗೀತಗಾರ ನಾಯಕನಾಗಿ ಇರುವ ಕೃತಿ ಎಂಬ ಹಿರಿಮೆ ಇರಬಹುದೇನೋ. ಕಾದಂಬರಿಗಿಂತ ಚಲನಚಿತ್ರವು ಹೆಚ್ಚು ಪರಿಣಾಮಕಾರಿಯಾಗಿದೆ. ಡಾ. ರಾಜ್ ಅಭಿನಯದೊಂದಿಗೆ ಮುರಳಿ+ಗಂಧರ್ವ ಗಾನವು ಸೇರಿ ಒಂದು ಅಪೂರ್ವ ಚಲನಚಿತ್ರ ಕನ್ನಡಕ್ಕೆ ನೀಡಿದ್ದಕ್ಕೆ ಈ ಕೃತಿಗೆ ಒಂದು ನಮಸ್ಕಾರ ಸಲ್ಲುತ್ತದೆ🙏🏾
Profile Image for Anusha.
251 reviews20 followers
September 2, 2023
I enjoyed the story and most of the characters. The writing is beautiful and depicts a realistic picture of a society back in the day.
It tells the story of a family over a generation. I enjoyed the varied characters of each of the children of Rayaru, some inducing instant aversion and others fondness. The musical and the artistic journey of the characters was fascinating, and some of the songs mentioned are the ones I know and enjoy.
Overall, the story was entertaining, and I loved reading this book.
Profile Image for Rakesh Raj.
2 reviews1 follower
July 28, 2017
wow.... must read book, hats off to author.....
25 reviews
October 14, 2023
ಜೀವನದ ಕಠಿಣ ಸಮಸ್ಯೆಗಳನ್ನು ಎದುರಿಸಿ, ತನ್ನ ಪ್ರಗತಿಯಲ್ಲಿ ಅಡ್ಡ ಬರುವ ಶಕ್ತಿಗಳೊಂದಿಗೆ ಹೋರಾಟ ನಡೆಸಿ ಕೊನೆಗೆ ತನ್ನ ಕಲೆಯಲ್ಲಿ ಪೂರ್ಣತೆಯನ್ನು ಕಾಣುವ ಒಬ್ಬ ಕಲಾವಿದನ ಕತೆಯೇ "ಸಂಧ್ಯಾರಾಗ".

ಇಲ್ಲಿ ಕಲಾವಿದ ತನ್ನ ಕಲೆಯನ್ನು ಆಶ್ರಯಿಸುವುದಿಲ್ಲ, ಬದಲಾಗಿ ಕಲೆಯೇ ಕಲಾವಿದನನ್ನು ಅಶ್ರಯಿಸುತ್ತದೆ. ಜೀವನದ ಕೊನೆಯವರೆಗೂ ಕಲಾವಿದ ತನ್ನ ಪರಿಪೂರ್ಣತೆಯನ್ನು ಕಾಣುತ್ತಾ, ಗುರು ಭಾವನೆಯನ್ನು ಮನದಲ್ಲಿಟ್ಟು, ಹಣಕ್ಕಾಗಿ ಕಲೆಯನ್ನು ಬಳಸದೆ, ಕೊನೆಗೆ ಅವನ್ನಲ್ಲಿ ತನ್ನ ಕಲೆಯ ಬಗ್ಗೆ ಇದ್ದ ಬಿನ್ನಹ ಪರಿಪೂರ್ಣತೆಯನ್ನು ಕಾಣಿಸುತ್ತದೆ. ಲಕ್ಷ್ಮಣ ತನ್ನ ಕಚೇರಿಯನ್ನು ನಡೆಸುವಾಗ ಅಮ್ನಲ್ಲಿ ಅಲ್ಲಿಯವರೆಗೂ ಇದ್ದ ತನ್ನ ಕಲೆಯ ಬಿನ್ನಹ ತನಗೆ ಅರಿವಿಲ್ಲದೆ ತನ್ನೊಳಗಿಂದ ಉಂಟಾದ ಯಾವುದೋ ಅಪೂರ್ವ ಶಕ್ತಿಯೊಂದು ಪ್ರವೇಶಿಸಿದಂತೆ ಆಗಿ, ಸಾಕ್ಷಾತ್ ಸರಸ್ವತಿ ತಾಯಿಯೇ ಮೆಚ್ಚುವಂತೆ "ಪೂರ್ವಿ" ಅನ್ನು ಹಾಡಿ, "ಜಯಾ” ಎನ್ನುತ್ತಾ ತನ್ನ ಆತ್ಮಪ್ರಣತಿಯನ್ನು ತೆಲಿಸಿದ ದೃಶ್ಯವನ್ನು ಬಹು ಅನಂದಮಯವಾಗಿ ವರ್ಣಿಸಿ ಬರೆದ "ಅ.ನ. ಕೃ” ಅವರ ಬರವಣಿಗೆ ಓದುಗರ ಮನದಲ್ಲಿ ಆನಂದ ಭೈರವಿ ತಾಂಡವಾಡಿಸುತ್ತದೆ.
This entire review has been hidden because of spoilers.
1 review
November 10, 2024
ಇ ಪುಸ್ತಕ ಜೀವನವನ್ನೇ ಅರ್ಥೈಸುತ್ತದೇ. ಹಲವಾರು ಸುಂದರ ಮನಸುಳ್ಳವರನ್ನು ನಮಗೆ ಪರಿಚಯ ಮಾಡಿ ಜೀವನದ ಅಲವು ಅಂಶಗಳನ್ನು ಅವರ ನಡತೆಯ ಮೂಲಕ ಅರ್ಥಮಾಡಿಸುತ್ತದೆ. ಈ ಕಾದಂಬರಿಯಲ್ಲಿ ನಾನು ಜೇವಿಸುವ ಸುಂದರ ಬಗೆಯನ್ನು ಕಂಡೆ. ಜೇವನದ ಗುರಿಯನ್ನು ಕಂಡೆ. ನನಗೇ ಅಚ್ಚುಮೆಚ್ಚದ ಪಾತ್ರಗಳಲ್ಲಿ ಪ್ರಮುಖವಾದವರು ಮೀನಾಕ್ಷಮ್ಮ, ಜಯ ಮಾತು ಕಲಾವಿದರು(ಲಕ್ಷ್ಮಣರಾಯರು). ಇವರೆಲ್ಲರಲ್ಲು ನಾನು ಒಂದೊಂದು ಸುಂದರ ಜೀವನದಹಂಸವನ್ನು ಕಲೆತೆ. ಅವರು ಜೀವಿಸಿದ ಜೀವನ ಎಲ್ಲಾ ಓದುಗರಿಗೂ ಸ್ಪೂರ್ತಿದಾಯಕ ಎಂದು ಬವಿಸುವೆ.
9 reviews1 follower
July 11, 2023
ಕನ್ನಡಕ್ಕೆ ಬೀಚಿಯಂತ ಹಸ್ಯಬ್ರಹ್ಮನ ಕೊಡುಗೆ ಕೊಟ್ಟ ಕೃತಿ ಇದು 🙏
3 reviews
September 25, 2023
ನಾನು ಓದಿದ ಅನಕೃ ರವರ ಮೊದಲ ಕಾದಂಬರಿ ಇದು. ಓದುತ್ತಿದ್ದಂತೇ ಕಥೆಯ ಹಲವಾರು ಪಾತ್ರಗಳು ನಾವು ಜೀವನದಲ್ಲಿ ಕಂಡ ಅನುಭವವಾಗುತ್ತದೆ. ಮೀನಕ್ಷಮ್ಮನವರಲ್ಲಿ ಸೀತೆಯನ್ನು ನೋಡುತ್ತೇವೆ, ಅದೆಷ್ಟೋ ಸನಿವೇಶಗಳಲ್ಲಿ ಕಣ್ಣು ಒದ್ದೆಯಾಗುತ್ತವೆ.
1 review
December 23, 2025
One of few best books I ever read. It’s a must read for all Kannada people
32 reviews1 follower
December 27, 2022
ಸಂಧ್ಯಾರಾಗ ಶೀರ್ಷಿಕೆ ಹೇಳುವಂತೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಹಿನ್ನೆಲೆಯುಳ್ಳ ಸಾಮಾಜಿಕ ಕಾದಂಬರಿ. ಸಂಗೀತಗಾರ ಲಕ್ಷ್ಮಣ ಮುಖ್ಯ ಭೂಮಿಕೆ ನಿರ್ವಹಿಸುತ್ತದೆ. ೧೯೩೫ರಲ್ಲಿ ಪ್ರಕಟವಾದ ಈ ಪುಸ್ತಕ ಅಂದಿನ ಕಾಲದ ಸಾಮಾಜಿಕ ಸ್ಥಿತಿಗತಿಗನ್ನು ತೆರೆದಿಡುತ್ತದೆ. ಅತ್ಯಂತ ಗಮನಾರ್ಹವಾದ ಅಂಶವೆಂದರೆ ಇಲ್ಲಿ ಬರುವ ಪಾತ್ರಗಳ ಸಂಗೀತ ಜ್ಞಾನ. ಸುಮಾರು ೯೦% ಪಾತ್ರಗಳು ಸಂಗೀತದಲ್ಲಿನ ರಾಗಗಳ ಪರಿಚಯ ಮತ್ತು ಅದನ್ನು ಹಾಡಿದಾಗ ಗುರುತಿಸುವಷ್ಟು ಜ್ಞಾನಿಗಳಾಗಿದ್ದರೆ. ಆ ವಿಚಾರದಲ್ಲಿ ನಾವು ಅವನತಿ ಹೊಂದಿದ್ದೇವೆ - ಇಂದು ಸಾಮಾನ್ಯ ಜನರಿಗೆ ಶಾಸ್ತ್ರೀಯ ಸಂಗೀತದ ಜ್ಞಾನ ಇಲ್ಲವೇ ಇಲ್ಲ ಎಂದು ಹೇಳಬಹುದು.
Displaying 1 - 25 of 25 reviews

Can't find what you're looking for?

Get help and learn more about the design.