Shantinath Desai (ಶಾಂತಿನಾಥ ದೇಸಾಯಿ, 1929–1998) was one of the leading modern authors of the Navya (modernist) movement in Kannada Literature.
In most of his novels, short stories, and essays, Desai explores the challenges of a changing society and its drift from traditional values. His first novel, Mukti (1961), narrates the protagonist's quest for an independent identity, liberation from the influence of a friend and his infatuation with the friend's sister. The second novel, Vikshepa (1971), tells the story of a village youth from northern Karnataka, who attempts to flee from his traditional environment by studying English in Bombay and later relocating to England. He was one of the best known writers in the genre of short stories in Kannada literature, which includes other prominent writers like U. R. Anantha Murthy, Yashwant Chittal, P. Lankesh, Ramachandra Sharma, Rajalakshmi Rao, and K. Sadashiva.
His novel Om Namo (Obeisance) won the Sahitya Akademi Award. Desai's important works include Mukti (Liberation) and Beeja (The Seed).
Shantinath Desai was also a professor of English at Shivaji University in Kolhapur, and later became the first vice chancellor of the then newly founded Kuvempu University in Shimoga. He has written seven novels and eight short story collections of which Rakshasa (1977) received the Karnataka Sahitya Academy Award. His novels and stories have been frequently translated into various regional languages. He also published a book of critical works in English.
Shantinath Desai is remembered for his works such as Mukti, Om Namo, Srishti and Beeja (Novels) and short stories like Kshitija, Naanan Tirthayatre, Ganda Satta Mele, Manjugadde, Dande, Parivartane, Kurmavatara, Rakshasa, Nadiya Neeru, Hero, Bharamya Hogi Nikhilanagiddu, Digbhrame and other works. His readers and admirers feel that he deserved more honours and recognition than he actually received. He got Sahitya Akademi Award posthumously for his novel Om Namo in 2000. He is considered as one of the important writers in modern Kannada literature.
ದೀರ್ಘ ಮತ್ತು ಆಳವಾದ ವಿಚಾರಗಳನ್ನು ಹೊಂದಿರುವ ಕಾದಂಬರಿ. ಇಬ್ಬರ ಗೆಳೆಯರ ನಡುವಿನ ದೀರ್ಘ ಮತ್ತು ಅವ್ಯಕ್ತ ಗೆಳೆತನದಿಂದ ಒಬ್ಬರು ಮತ್ತೊಬ್ಬರಂತೆಯೇ ಆಗುತ್ತಾರೆ. ಅಂದರೆ - ಮನಸ್ಸೊಂದು ದೇಹ ಎರಡು. ಅದರ ಜೊತೆ ಪ್ರೀತಿ, ಮುಕ್ತಿಯ ಪಥಕ್ಕೆ ಸಾಗುವ ಹುನ್ನಾರ ಇವು ಈ ಕಾದಂಬರಿಯ ಪ್ರಮುಖ ಅಧ್ಯಾಯಗಳು. ಕಾದಂಬರಿಯ ಹೆಸರು ಮುಕ್ತಿ ಇರುವ ಮಾತ್ರಕ್ಕೆ ಇದು ಸತ್ತ ನಂತರ ದೇಹಕ್ಕಿರುವ ಮುಕ್ತಿ ಎಂದು ತಿಳಿಯಬಾರದು. ಸತ್ತ ನಂತರ ದೇಹಕ್ಕೆ ಮುಕ್ತಿ ಇದೆಯೋ ಇಲ್ಲವೋ ಆದರೆ ದೇಹವನ್ನು ಆಕ್ರಮಿಸಿರುವ ವಿಚಾರಧಾರೆಗಳು. ಅವಕ್ಕೆ ಮುಕ್ತಿ ಇದೆಯೋ ಇಲ್ಲವೋ ಅದು ಈ ಕಾದಂಬರಿಯಲ್ಲಿಯ ಹುಡುಕಾಟ.
ಚಿತ್ತಾಲರು ಬೆನ್ನುಡಿಯಲ್ಲಿ ಹೇಳಿದಂತೆ , “ತನ್ನ ಬದುಕನ್ನು ತಾನೇ ಬದುಕಬೇಕು. ತನ್ನ ಅನುಭವಗಳ ಶಿಲುಬೆಯ ಭಾರವನ್ನು ಬಾಳಿನುದ್ದಕ್ಕೂ ತಾನೇ ಹೊರಬೇತು. ತನ್ನ ರೀತಿ ನಿಯಮಗಳನ್ನು, ಮೌಲ್ಯಗಳನ್ನು ತನ್ನ ಇರುವಿಕೆಯೇ ನಿಶ್ಚಯಿಸಬಲ್ಲದೇ ಹೊರತು, ಪರರಿಂದ ಎರವಲು ತಂದ ಮೌಲ್ಯಗಳು ತನಗೆ ಸಾಲವು ಎಂಬ ಪ್ರಜ್ಞೆಯುಳ್ಳ ವಿಶಿಷ್ಟ ಕಾದಂಬರಿ ಮುಕ್ತಿ, ಗೌರೀಶ ತನಗೆ ಬಂದ ಪ್ರಚಂಡ ಅನುಭವಗಳಿಂದ , ರೂಪ ಆಕಾರವಿಲ್ಲದೆ ಘಾಸಿಗೊಳಿಸುವ ಭೂತಕಾಲದ ಭೂತದಿಂದ ಬಿಡುಗಡೆ ಪಡೆಯಲು ನಡೆಸಿದ ಹೋರಾಟವೆ ಈ ಕೀದಂಬರಿಯ ವಸ್ತು”.
ನೌಕರಿ ಒಳ್ಳೆಯದೋ ? ಕೆಟ್ಟದ್ದೋ ? ನೈರೋಬಿ ಎಂಥ ಊರೋ ಏನೋ ಅಂತೂ ತನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಎಲ್ಲರನ್ನು ತ್ಯಜಿಸಿ, ಎಲ್ಲವನ್ನೂ ತ್ಯಜಿಸಿ ಪರದೇಶಕ್ಕೆ ಮುಕ್ತಿ ಪಡೆಯಲು ಹೊರಟ ಗೌರೀಶನ ಕಥೆ ಇಲ್ಲಿ ಕಾಣಬಹುದು. ತನ್ನ ಜೀವನದಲ್ಲಿ ಶ್ರೀಕಾಂತ, ಕಾಮಿನಿ,ಡಾಲಿಯರ ಪಾತ್ರಗಳು ಆತನ ಮೇಲೆ ಯಾವ ರೀತಿ ಪರಿಣಾಮ ಬೀರಿತೆನ್ನುವುದು ಇಲ್ಲಿ ಕಾಣಬಹುದು.
ಶಿರ್ಸಿಯಿಂದ ಕಾಲೇಜು ವಿದ್ಯಾಭ್ಯಾಸಕ್ಕೆ ಧಾರವಾಡಕ್ಕೆ ಹೋದ ಗೌರೀಶನಿಗೆ ಮೊದಲು ತನಗೆ ಅನುಕೂಲ ಮಾಡಿಕೊಟ್ಟಿದ್ದೇ ತನ್ನ ಬಾಲ್ಯ ಸ್ನೇಹಿತ ಸತ್ಯೇಂದ್ರ. ಸತ್ಯೇಂದ್ರನ ಮೂಲಕ ಪರಿಚಯವಾದ ಶ್ರೀಕಾಂತ ತನ್ನ ಬಾಳಿನಲ್ಲಿ ಆದರ್ಶ ವ್ಯಕ್ತಿಯಾದ, ಕಾರಣ ಹಲವು: ನೋಡುವುದಕ್ಕೆ ಸುಂದರ, ಒಳ್ಳೆಯ ವ್ಯಕ್ತಿತ್ವ, ಬುದ್ಧಿವಂತ, ಆತನಿಗಿದ್ದ ಲೋಕಾನುಭವ. ಅಂತೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಶ್ರೀಕಾಂತನ ಸಲಹೆಗಳಿಗೇ ಮಾರುಹೋಗುತ್ತಿದ್ದ. ಓದುವಾಗ ಕೆಲವೊಮ್ಮೆ ನನಗೆ ಅನಿಸುದ್ದುಂಟು ಪ್ರತಿ ಬಾರಿಯೂ ಶ್ರೀಕಾಂತ ಶ್ರೀಕಾಂತ ಅಂದರೆ ಆತನ ಪ್ರಭಾವವೂ ಗೌರೀಶನ ಜೀವನದಲ್ಲಿ ಎಷ್ಟು ಮಹತ್ವದ್ದು ಎಂದು ಓದುತ್ತಾ ಅರಿವಾಗ ತೊಡಗಿತು. ಕ್ರಮೇಣ ಅವರ ಸ್ನೇಹ ಗಟ್ಟಿಯಾಗತೊಡಗಿತು, ಸದಾ ಪುಸ್ತಕದ ಬಗ್ಗೆ, ಜೀವನದ ಬಗ್ಗೆ, ಇನ್ನಿತರೆ ವಿಷಯಗಳ ಬಗ್ಗೆ ಕಾಲೇಜಿನಲ್ಲಿ, ಶ್ರೀಕಾಂತನ ಮನೆಯಲ್ಲಿ ಅದರ ಕುರಿತೇ ಚರ್ಚೆ. ಹೀಗೆ ಶ್ರೀಕಾಂತನ ಮನೆಯಲ್ಲಿ ಕಾಮಿನಿಯನ್ನು ಕಂಡು ಆಕೆಯ ಸೌಂದರ್ಯಕ್ಕೆ ಮಾರುಹೋಗುತ್ತಾನೆ, ಪ್ರೀತಿ ಹುಟ್ಟುತ್ತದೆ, ಆದರೆ ವ್ಯಕ್ತಪಡಿಸಲು ಧೈರ್ಯ ಸಾಲದು ಕಾರಣ ಶ್ರೀಕಾಂತನ ಸ್ನೇಹವನ್ನು ಎಲ್ಲಿ ಕಳೆದುಕೊಳ್ಳುವನೆಂದು ಭಯ. ಕ್ರಮೇಣ ಗೌರೀಶ ಕಾಮಿನಿ ಹತ್ತಿರವಾಗುತ್ತಾರೆ, ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದಾಗ ಆಕೆ ನಿರಾಕರಿಸುತ್ತಾಳೆ. ತಾಯಿ ತಂಗಿಯರ ಬಗ್ಗೆ ಹೆಚ್ಚು ಯೋಚನೆಯಿಲ್ಲದ ಶ್ರೀಕಾಂತನು ತನ್ನ ಲೋಕದಲ್ಲೇ ವಿಹರಿಸುತ್ತಾ ಹೆಚ್ಚು ಗಮನ ಕೊಡದೆ ಕಾಮಿನಿಯನ್ನು ಸ್ವಾತಂತ್ರವಾಗಿ ಓಡಾಡಲು ಬಿಟ್ಟಿರುತ್ತಾನೆ, ಹೆಣ್ಣಿಗೂ ಸ್ವಾತಂತ್ರ ಮುಖ್ಯ ಎಂಬುದು ಶ್ರೀಕಾಂತನ ತತ್ವ, ಆದರೆ ಆ ಸ್ವಾತಂತ್ರ ಕಾಮಿನಿ ದುರುಪಯೋಗ ಪಡಿಸಿಕೊಳ್ಳುತ್ತಾಳೆ, ಗಂಡಸರ ಜೊತೆ ತಿರುಗುತ್ತಾಳೆಂಬ ಸುದ್ದಿ ಹರಡುತ್ತಾ ಶ್ರೀಕಾಂತನ ಹಾಗು ಗೌರೀಶನ ಕಿವಿಗೂ ಮುಟ್ಟುತ್ತದೆ, ಶ್ರೀಕಾಂತ ಅವಳ ವರ್ತನೆಯನ್ನು ಕಂಡು ಆಕೆಯನ್ನು ತ್ಯಜಿಸಿಯೇ ಬಿಟ್ಟಿರುತ್ತಾನೆ. ಆದರೆ ಗೌರೀಶನಿಗೆ ದುಃಖವಾಗುತ್ತದೆ. ಆಕೆಯ ಮೇಲೆ ಅನುಮಾನಗಳಿಂದ ಹಲವು ಚುಚ್ಚು ಮಾತುಗಳಿಂದ ಆಕೆಯನ್ನು ನಿಂದಿಸ ತೊಡಗುತ್ತಾನೆ. ಅವಳನ್ನು ತಾನೇ ಮದುವೆಯಾಗಬೇಕು ತನಗೆ ಸೇರಿದ್ದು ಎಂಬ ಭಾವನೆ, ಆದರೆ ತಾನು ನಿಸ್ಸಹಾಯಕ ಕಾಮಿನಿಗೆ ಬುದ್ಧಿವಾದ ಹೇಳಿದರೂ ಆಕೆಯು ತಿದ್ದುಕೊಳ್ಳದೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದೆ ತನ್ನನ್ನು ಸ್ನೇಹಿತನಂತೆಯೇ ಕಾಣುತ್ತಾಳೆ. ಅಂತೂ ತಮ್ಮ ಸಂಬಂಧ ಸತ್ಯೇಂದ್ರನ ದೃಷ್ಟಿಯಲ್ಲಿ ಬರಿಯ ಭಾನಗಡಿ ಯಾಗಿತ್ತು.
ಶ್ರೀಕಾಂತನ ಪ್ರಭಾವ ತನ್ನನ್ನು ಸೋಶಿಯಲಿಸ್ಟನನ್ನಾಗಿ ಮಾಡಿತು, ಜನ ಸೇವೆ, ದಲಿತ ಜನತೆಯ ಉದ್ಧಾರ, ಸ್ವಾತಂತ್ರ್ಯ ಮುಂತಾದ ಆದರ್ಶಗಳನ್ನು ಜನರಿಗೆ ಹೇಗೆ ತಲುಪಿಸಬೇಕೆಂಬುದೇ ತಮ್ಮ ಧ್ಯೇಯ. ನಂತರ ಶ್ರೀಕಾಂತ ಸಾಯುವನೆಂದು ತಿಳಿಯಿತು, ಅವನಿಗೆ ಟೀ.ಬೀ ಯಾಗಿತ್ತು, ಮೊದಲಿನ ಹಂತದಲ್ಲೇ ಡಾಕ್ಟರರು ಅದನ್ನು ಗೊತ್ತು ಮಾಡಿ ಚಿಕಿತ್ಸೆ ಕೊಟ್ಟರು, ಕೆಲವು ವರ್ಷಗಳ ಕಾಲ ಚಿಕಿತ್ಸೆಯಿಂದ ಚೇತರಿಸಿಕೊಂಡನು ಆದೇ ಸಮಯದಲ್ಲಿ ತನ್ನ ತಂದೆಯ ಆಜ್ಞೆಯಂತೆ ಶ್ರೀಕಾಂತ ಕಾಮಿನಿಯನ್ನು ಬಿಟ್ಟು ಓದಲು ಮುಂಬಯಿಗೆ ಹೋಗುತ್ತಾನೆ. ಮುಂಬಯಿಗೆ ಹೋದ ಕೆಲವು ದಿನಗಳಲ್ಲೇ ಇತ್ತ ಶ್ರೀಕಾಂತನ ಸಾವಾಗುತ್ತದೆ,ಆತನ ಮೃತ್ಯು ವಿಚಾರ ಬಂದಾಗ ತನ್ನ ಶಕ್ತಿಯೇ ಉಡುಗಿಹೋಗುತ್ತದೆ. ಏನೋ ವೇದನೆ, ದುಃಖ, ತನ್ನ ಆತ್ಮೀಯನನ್ನು ಕಳೆದುಕೊಂಡು ತಾನು ಬದುಕಿದ್ದು ಪ್ರಯೋಜನವೇನು ತಾನು ಏಲ್ಲಿಯಾದರೂ ಓಡಿ ಹೋಗಬೇಕೆಂದು ನಿರ್ಧರಿಸಿ ನೈರೋಬಿಗೆ ಹೋಗಲು ಸಿದ್ಧನಾಗುತ್ತಾನೆ. ಗಂಡಸರ ಸಂಪರ್ಕವಿದ್ದ ಕಾಮಿನಿ ಒಮ್ಮೆಲೆ ಒಂದು ದಿನ ತನ್ನ ಪ್ರೀತಿಯನ್ನು ಒಪ್ಪಿಕೊಂಡಾಗ ಆಕೆಯು ಮಾಡಿದ ತಪ್ಪಗಳನ್ನು ತನ್ನನ್ನು ಮದುವೆಯಾಗಿ ಸರಿಪಡಿಸಿ ಕೊಳ್ಳುಲೆಂದು ಆಕೆ ಹುನ್ನಾರ ಹೂಡುತ್ತಿರುವನೆಂದು ಅನುಮಾನ ಪಟ್ಟು ಆಕೆಯನ್ನು ತ್ಯಜಿಸುತ್ತಾನೆ. ಹೀಗೆ ಶ್ರೀಕಾಂತನ ಸಾವು, ಕಾಮಿನಿಯ ನಿರಾಕರಣೆ, ತಾಯಿ ತಂದೆಯರ ಅಸಮಾಧಾನ ತನ್ನನ್ನು ದುಃಖಕ್ಕೀಡು ಮಾಡುತ್ತದೆ.
ನಂತರ ಕೆಲಸಕ್ಕೆ ಸೇರಿಕೊಳ್ಳುತ್ತಾನೆ, ಡಾಲಿಯ ಪರಿಚಯವಾಗುತ್ತದೆ, ಆಕೆಯ ಸ್ನೇಹದಲ್ಲಿ ಕಾಮಿನಿಯನ್ನು ಮರೆಯಲು ಯತ್ನಿಸುತ್ತಾನೆ. ತನ್ನ ಬಾಳಿನಲ್ಲಿ ಶ್ರೀಕಾಂತ ಕಾಮಿನಿಯರ ಪಾತ್ರದ ಮಹತ್ವವನ್ನು ಡಾಲಿಗೆ ವಿವರಿಸುತ್ತಾನೆ. ಕ್ರಮೇಣ ತನ್ನ ನೈರೋಬಿಗೆ ಹೋಗಲು ನಿರ್ಧಾರ ಗಟ್ಟಿಯಾಗುತ್ತದೆ ಆದರೆ ಒಂಟಿಯಾಗಿ ಅಲ್ಲ. ತನ್ನ ಜೀವನದಲ್ಲಿ ನಡೆದ ಕಹಿ ಪ್ರಸಂಗಗಳನ್ನು ಮರೆತು ಹೊಸ ಜೀವನ ನಡೆಸಲು ನಿರ್ಧರಿಸುತ್ತಾನೆ. ಆದರೆ ತನ್ನ ಜೀವನದಲ್ಲಿ ಯಾರಿಗೆ ಸ್ಥಾನ ಕೊಡಬೇಕೆಂದು ಚಿಂತೆಗೀಡಾಗುತ್ತಾನೆ. ತನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಕೋರಿದ ಕಾಮಿನಿಗಾ ಅಥವಾ ತನ್ನ ಒಂಟಿ ಬಾಳಿನಲ್ಲಿ ಬಂದು ತನ್ನನ್ನು ಸದಾ ಪ್ರೋತ್ಸಾಹಿಸಿದ ಡಾಲಿಗಾ?.
“ಬದುಕಿನಿಂದ ಪಾಲಾಯನ ಹೇಳಬೇಕು ಎಂಬ ನಿಶ್ಚಯದಿಂದ ಆರಂಭವಾದ ಕತೆ, ಅದೇ ತಾನೇ ಜೀವ ತಳೆಯತ್ತಿರುವ ಆರೋಗ್ಯವಂತ ಸದೃಢ ಹೊಸ ಸಂಬಂಧದ ಸೂಚನೆಯೊಂದಿಗೆ ಮುಗಿಯುತ್ತದೆ.”
#ಅಕ್ಷರವಿಹಾರ_೨೦೨೩ ಕೃತಿ: ಮುಕ್ತಿ ಲೇಖಕರು: ಶಾಂತಿನಾಥ ದೇಸಾಯಿ ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಕಾದಂಬರಿಯನ್ನು ಓದಿ ಮುಗಿಸಿದ ನಂತರ ಒಂದು ಮೌನ ನನ್ನಲ್ಲಿ ನೆಲೆಸಿದೆ. ಮೌನ ಹುಟ್ಟಿತು ಎಂದೆನಲ್ಲ, ಆ ಮೌನದ ಹಿಂದೆ ಒಂದಲ್ಲ ಎರಡಲ್ಲ,ಹತ್ತಾರು ಮಡುಗಟ್ಟಿದ ಪ್ರಶ್ನೆಗಳಿವೆ. ಮುಗಿಯದ ಜಿಜ್ಞಾಸೆಗಳಿವೆ. ಸಾಗರವು ಪ್ರಶಾಂತವಾಗಿರುವಂತೆ ಕಂಡರೂ ಸಾಮಾನ್ಯರ ನಿಲುಕಿಗೆ ಸಿಗದಂತಹ ರಹಸ್ಯಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವಂತೆ ಗಹನವಾದ ವಿಚಾರಗಳನ್ನು ಕಾದಂಬರಿಯು ತನ್ನೊಡಲಲ್ಲಿ ಹೊತ್ತುಕೊಂಡಿದೆ. ಬಹಳ ತಾಳ್ಮೆಯಿಂದ ಒಂದೊಂದೇ ಸಾಲನ್ನು ಆಸ್ವಾದಿಸಿಕೊಂಡು ಓದಿದರೆ ಪುಸ್ತಕದ ತಿರುಳು ನಿಧಾನವಾಗಿ ಒಳಗಿಳಿಯುತ್ತದೆ.
ತನ್ನ ಗತ ಜೀವನದಿಂದ ಮುಕ್ತಿಯನ್ನು ಬಯಸುತ್ತಾ ಆಫ್ರಿಕಾಗೆ ಹೊರಟು ನಿಂತ ಗೌರೀಶನ ಸ್ವಗತದೊಂದಿಗೆ ಕತೆಯು ಆರಂಭವಾಗುತ್ತದೆ. ಇಡೀ ಕಾದಂಬರಿಯುದ್ದಕ್ಕೆ ಅವನ ಮೂಲಕವೇ ಸ್ನೇಹಿತರಾದ ಶ್ರೀಕಾಂತ, ಸತ್ಯೇಂದ್ರ ಕಾಮಿನಿ ಡಾಲಿ ಪಾತ್ರಗಳು ನಮ್ಮ ಮುಂದೆ ಅನಾವರಣಗೊಳ್ಳುತ್ತವೆ. ಅವರುಗಳ ಗೆಳೆತನ, ಗೌರೀಶ ಕಾಮಿನಿಯರು ಪ್ರೇಮ ಪ್ರಕರಣ, ಸತ್ಯೇಂದ್ರನ ಸ್ಥಿತಪ್ರಜ್ಞತೆ, ಶ್ರೀಕಾಂತನ ತತ್ವಜಿಜ್ಞಾಸೆ, ಗೌರೀಶನ ವೃತ್ತಿ ಜೀವನದಲ್ಲಿ ಬರುವ ಡಾಲಿಯವರ ಪರಸ್ಪರ ಕಥಾನಕಗಳಲ್ಲಿ ಕಂಡುಬರುವ ತಳಮಳಗಳು,ಆ ಪಾತ್ರಗಳ ಮನೋಭಾವಗಳು ಓದುಗರಲ್ಲಿಯೂ ಹತ್ತಾರು ತಲ್ಲಣಗಳನ್ನು ಉಂಟುಮಾಡುತ್ತದೆ.
ತನ್ನ ಭೂತಕಾಲವನ್ನು ಮರೆತು ಹೊಸ ಜೀವನವನ್ನು ಕಂಡುಕೊಳ್ಳುವ ಉದ್ದೇಶದಿಂದ ಆಫ್ರಿಕಾಗೆ ಹೊರಟ ಗೌರೀಶನಿಗೆ ಸತ್ಯೇಂದ್ರ ಹೇಳುವ ಮಾತುಗಳನ್ನು ಗಮನಿಸಿ, “ ನಿನ್ನ ಆತ್ಮದಿಂದ ನೀನು ದೂರ ಹೋಗಲಾರೆ. ಸ್ಮರಣವಿರುವ ತನಕ ಆದದ್ದನ್ನು ಮರೆಯುವುದು ಶಕ್ಯವಿಲ್ಲ… ಯಾವುದನ್ನೂ ಮರೆಯದೆ ಭೂತಕಾಲವನ್ನು ಅರಗಿಸಿಕೊಂಡು ಅದರ ಮೇಲೆ ವಿಜಯವನ್ನು ಸಾಧಿಸುವುದರಲ್ಲಿಯೇ ಜೀವನದ ಸಾರ್ಥಕ್ಯವಿದೆ”. ಏನು ಆಗಿ ಹೋಗಿದೆಯೋ ಅಥವಾ ಏನು ಆಗಿ ಬೇಕಿರುವುದೋ ಅದು ಆಗಿಯೇ ತೀರುತ್ತದೆ. ಅದರಿಂದ ಪಲಾಯನ ಸಾಧ್ಯವಿಲ್ಲ. ಅದನ್ನು ಎದುರಿಸಿ ನಿಂತಾಗ ಮಾತ್ರ ಅದರಿಂದ “ಮುಕ್ತಿ” ಸಾಧ್ಯ ಎಂಬ ಮಾತುಗಳು ಇಂದಿಗೂ ಎಷ್ಟು ಪ್ರಸ್ತುತ ಅಲ್ಲವೇ… ಇನ್ನೊಂದು ಸಂದರ್ಭದಲ್ಲಿ ಬರುವ ಮಾತುಗಳಿವು. “ಒಬ್ಬ ಮನುಷ್ಯ ಮತ್ತೊಬ್ಬನಾಗಲು ಶಕ್ಯವಿಲ್ಲ. ಈ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನ-ತತ್ವ ಅವನಲ್ಲಿಯೇ ಅಡಗಿದೆ.ಅದನ್ನು ಸಹಜವಾಗಿ ಆತ ಮೀರಲಾರ… ನಾವೆಲ್ಲ ನಮ್ಮ ಕಕ್ಷೆಯಲ್ಲಿಯೇ ತಿರುಗುವ ಗ್ರಹಗಳು”... ನಾವುಗಳು ಎಂದೆಂದಿಗೂ ನಾವೇ ಆಗಿರುತ್ತೇವೆ. ಎಂತಹಾ ಸಂದರ್ಭ ಸನ್ನಿವೇಶಗಳಿಗನುಗುಣವಾಗಿ ನಾವು ನಮ್ಮ ಸಹಜತೆಯನ್ನು ಮೀರಿ ವರ್ತಿಸಲು ಸಾಧ್ಯವಿಲ್ಲ ಎಂಬಂತಹ ಸಾಲುಗಳು ಪ್ರತಿಯೊಬ್ಬ ಮನುಷ್ಯನೂ ವಿಶಿಷ್ಠನೇ ಆದರೆ ಅದನ್ನು ಅರಿತುಕೊಳ್ಳಲು ಆತ ವಿಫಲನಾಗಿದ್ದಾನೆ ಎಂದು ಸಾರುತ್ತವೆ. ನಾವು ಎಷ್ಟೋ ಸಲ ಅವನಂತಾಗಬೇಕು,ಮತ್ತೊಬ್ಬನಂತಾಗಬೇಕು ಅಂದುಕೊಂಡಿರುತ್ತೇವೆ. ಕಾದಂಬರಿಯ ಈ ವಾಕ್ಯದ ಪ್ರಕಾರ “ನಾನು” ‘ನೀನಾ’ಗಬೇಕೆಂಬ ಇಚ್ಛೆಯ ಮೂಲ ‘ನನ್ನ’ ವ್ಯಕ್ತಿತ್ವದ ಬಗ್ಗೆ ಇರುವ ಅಜ್ಞಾನದಲ್ಲಿದೆ. ನಾನು ಯಾರೆನ್ನುವುದರ ಅರಿವು ಪೂರ್ಣವಿದ್ದರೆ ‘ನಾನು’ ‘ನೀನಾ’ಗಲು ಏಕೆ ಹವಣಿಸಬೇಕು?.... ಇಂತಹ ಹತ್ತು ಹಲವು ವಿಚಾರಪೂರ್ಣ ವಾಕ್ಯಗಳನ್ನು ಮತ್ತೆ ಮತ್ತೆ ಓದಿ ಮನನ ಮಾಡಿಕೊಂಡಿದ್ದೇನೆ.
ಲೌಕಿಕದ ಕಡೆಗೆ ಹೆಚ್ಚು ಗಮನ ಕೊಡದ ಶ್ರೀಕಾಂತ ತನ್ನ ಜೀವನದ ಕೊನೆಯ ಅವಧಿಯಲ್ಲಿ ಲೈಂಗಿಕ ವಿಷಯಗಳಲ್ಲಿ ಆಸಕ್ತಿ ತಳೆಯುವುದು, ದುರ್ಬಲ ಮನಸ್ಸಿನವನೆನಿಸಿಕೊಂಡ ಗೌರೀಶ ಹಲವು ಕಡೆ ಪ್ರೀತಿಯನ್ನು ಹುಡುಕುತ್ತಾ ಕೊನೆಗೊಮ್ಮೆ ಹತಾಶನಾಗಿ ಪಲಾಯನ ಮಾಡುವಾಗ ಮತ್ತೆ ಬದುಕಿನ ಬಂಧನಕ್ಕೆ ಸಿಲುಕಿಕೊಳ್ಳುವುದು, ಅತ್ತ ತೀರ ಲೌಕಿಕವು ಅಲ್ಲದ ಇತ್ತ ವೈರಾಗ್ಯವೂ ಅಲ್ಲದ ಸಮಚಿತ್ತದ ಜೀವನವನ್ನು ನಡೆಸುವ ಸತ್ಯೇಂದ್ರರಂತಹವರು ಬಾಳಿನುದ್ದಕ್ಕೂ ನಮಗೆ ಮುಖಾಮುಖಿಯಾಗುತ್ತಾರೆ ಅಥವಾ ಇವರಲ್ಲಿ ಒಬ್ಬರು ನಾವೇ ಆಗಿರುತ್ತೇವೆ. ಆದರೆ ನಮ್ಮ “ಮುಕ್ತಿ”ಯ ದಾರಿಯನ್ನು ನಾವೇ ಕಂಡುಕೊಳ್ಳಬೇಕು. ಬದುಕಿನಿಂದ ಓಡಿ ಹೋಗುವುದರಿಂದ ಯಾವುದಕ್ಕೂ ಮುಕ್ತಿ ಎಂಬುದಿಲ್ಲ. ಏನೇ ಆಗಲಿ ಅದನ್ನು ಎದುರಿಸಿ ನಿಂತು ಅದನ್ನು ಮತ್ತು ಅದರ ಪರಿಣಾಮಗಳನ್ನು ಅನುಭವಿಸಿದಾಗ ಮಾತ್ರ “ಮುಕ್ತಿ”ಯ ದಾರಿಯನ್ನು ಹುಡುಕಿಕೊಳ್ಳುವುದು ಸುಲಭ ಸಾಧ್ಯವಾಗುತ್ತದೆ ಎಂಬುದು ಕೃತಿಯಿಂದ ನಾನು ಗ್ರಹಿಸಿದ ಅಂಶ.
ಒಂದೇ ಓದಿಗೆ ಈ ಕೃತಿಯು ಅಷ್ಟು ಸುಲಭವಾಗಿ ದಕ್ಕುವಂತಹದಲ್ಲ. ಮತ್ತೆ ಮತ್ತೆ ಓದಬೇಕಾದೀತು. ಎಷ್ಟೇ ಘನವಾದ ಕೃತಿಯಾಗಿದ್ದರೂ ಯಾವುದೇ ಓದುಗನನ್ನು ಹಿಡಿದಿಟ್ಟುಕೊಂಡು ಓದಿಸಿಕೊಳ್ಳುವ ಗುಣ ಈ ಕೃತಿಯ ವೈಶಿಷ್ಟ್ಯ…
ತನ್ನ ಗತಜೀವನದ ಕೊಂಡಿ ಕತ್ತರಿಸಿಕೊಂಡು, ಜೀವನಕ್ಕೆ ಹೊರತಾಗಿ ಆಸಕ್ತಿಯಿಂದ ಎಲ್ಲಿ ಇರಲು ಸಾಧ್ಯವೋ ಅಲ್ಲಿಗೆ ಹೋಗಬೇಕು. ತನ್ನ ಭೂತಕಾಲದ ಭೂತಕ್ಕೆ ಯಾವುದಾದರೊಂದು ಆಕಾರ ಕೊಟ್ಟು, ಪೆಟ್ಟಿಗೆಯ ಮೂಲೆಯಲ್ಲಿಟ್ಟು, ತಾನು ಪರದೇಶದ ಯಾವುದೋ ಮೂಲೆಯಲ್ಲಿ ನಿರ್ವಿಕಾರವಾಗಿ ಜೀವಿಸಬೇಕು ಎಂದು ಹೋರಾಟ ನೆಡೆಸುವ ಚಂಚಲ ಮನಸ್ಸಿನ ತೊಳಲಾಟವೇ "ಮುಕ್ತಿ" ಕಾದಂಬರಿಯ ವಸ್ತು.
ಕೆಲವೊಮ್ಮೆ ಜೀವನದ ಅನುಭವಗಳು, ವಿಚಾರಗಳು ಮತ್ತು ಮೌಲ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಉದಾಹರಣೆಗೆ, ನಾವೆಲ್ಲರೂ ಪುಸ್ತಕಳನ್ನು ಓದುತ್ತೇವೆ ಅದರಿಂದ ಲೇಖಕರ ಅನುಭವಗಳು ಮತ್ತು ವಿಚಾರಗಳ ಪರಿಚಯ ಆಗುತ್ತೆ, ಅವುಗಳು ನಮ್ಮ ಮೇಲೆ ಕೆಲವೊಮ್ಮೆ ಪ್ರಭಾವ ಬೀರುತ್ತವೆ ಕೂಡ. ಆದರೆ ಇಷ್ಟು ಸಾಲದು, ಮನುಷ್ಯ ತನ್ನ ಬದುಕನ್ನು ತಾನೇ ಬದುಕಬೇಕು. ಸ್ಪಷ್ಟವಾಗಿ ವಿಚಾರ ಮಾಡುವುದನ್ನು ಕಲಿಯಬೇಕು. ಜೀವನವನ್ನು ವಸ್ತುನಿಷ್ಠವಾಗಿ ನೋಡುವ ದೃಷ್ಟಿಯನ್ನು ಸೃಷ್ಟಿಸಿಕೊಳ್ಳಬೇಕು. ತನ್ನ ಅನುಭವಗಳ ಭಾರದ ಹೊರೆ ತಾನೇ ಹೊರಬೇಕು. ಜೀವನಕ್ಕೆ ಬೇಕಾದ ರೀತಿನಿಯಮಗಳನ್ನು, ಮೌಲ್ಯಗಳನ್ನು ಯಾವಾಗಲೂ ಎರವಲು ಪಡೆಯುವುದು ತರವಲ್ಲ - ಎಂಬುದನ್ನು ಪ್ರತಿಪಾದಿಸುವ ವಿಶೇಷವಾದ ಕಾದಂಬರಿ "ಮುಕ್ತಿ".
ಅನೈಸರ್ಗಿಕ ಸಮಲೈಂಗಿಕತೆ, ಸ್ತ್ರೀ-ಸಹಾನುಭೂತಿ, ಮಾನವನ ಬೆಳವಣಿಗೆ, ಮರಣ, ಪ್ರೇಮ, ಅಸೂಯೆ, ಮಾನಸಿಕ ಮತ್ತು ದೈಹಿಕ ಉತ್ಕಟತೆಗಳ ಅವಲಂಬನೆ, ಏಕಾಂತತೆ, ಸಾಹಿತ್ಯ, ಕಾವ್ಯ, ಸೊಷಿಯಲಿಸ್ಮ್, ಕಮ್ಯುನಿಸ್ಮ್ -- ಇಂತಹ ಎಷ್ಟೋ ವಿಷಯಗಳನ್ನು ಬಳಸಿಕೊಂಡು ರಚನೆಯಾಗಿರುವ ಸೃಜನಶೀಲ ಕೃತಿ ಇದು.
“ಮುಕ್ತಿ-ಶಾಂತಿನಾಥ ದೇಸಾಯಿ, 1961ರಲ್ಲಿ ಪ್ರಕಟವಾದ ಕಾದಂಬರಿ. “ಓದಿದ ನಂತರ ವಿಚಿತ್ರ ಮೌನ ಮನಸ್ಸಿನ ಆಳ ಆಳಕ್ಕೆ ನುಗ್ಗಿ ಬದುಕಿನ ಎಷ್ಟೋ ಪ್ರಶ್ನೆಗಳ ಮೂಲಭೂತ ಉತ್ತರವನ್ನು ಹುಡುಕುವ ಹಂಬಲ ಹೆಚ್ಚಾಗಿದೆ. ಒಂದು ಓದಿಗೆ ದೊರೆಯುವ ಕೃತಿಯಲ್ಲ ಎನ್ನಿಸಿದ್ದು ನಿಜ.”
“ಗೆಳೆತನ + ಸೃಜನಶೀಲ ವಿಚಾರವಂತಿಕೆ + ಎರವಲು ಪಡೆದ ವಿಚಾರಧಾರೆ + ಪ್ರೇಮ + ಕಾಮ + ಅನೈಸರ್ಗಿಕ ಲೈಂಗಿಕತೆ + ಶಾರೀರಿಕ ಧರ್ಮ + ಪಾಶ್ಚಾತ್ಯ ಸಾಹಿತ್ಯಧಾರೆ + ವಸ್ತುನಿಷ್ಠೆ + ಮಾನಸಿಕ ಭಾವನೆ +ಸಾವು = ಮುಕ್ತಿ”
“ಎರಡು ಗೆಳೆಯರ ಪಾತ್ರಗಳ ವಿಚಾರಧಾರೆಯೇ ಕೃತಿಯ ಉದ್ದಕ್ಕೂ ಚಾಚಿದೆ. ಶ್ರೀಕಾಂತನ ವಿಚಾರವಾದಗಳು ದೇಶದ ಪ್ರಗತಿ, ವಿದ್ಯಾಭ್ಯಾಸ, ಜನಸೇವೆ, ದಲಿತ ಉದ್ಧಾರ, ಸಾಹಿತ್ಯ ಕ್ಷೇತ್ರದಲ್ಲಿ ಆರಂಭವಾಗಿ ಅವನ ಆರೋಗ್ಯ ಟಿ.ಬೀ ಇಂದ ಕ್ಷೀಣಿಸತೊಡಗಿದಂತೆ ಸಾಹಿತ್ಯವೆಲ್ಲವೂ ಬೇರೆಯವರ ಕಲ್ಪನದೃಷ್ಟಿಯಿಂದಲೇ ಕೂಡಿ ಒಬ್ಬೊಬ್ಬರ ವಿಚಾರಗಳು ಬೇರೆ ಬೇರೆಯಾಗಿ ಕಾಣಿಸಿದಂತೆ ಅಲ್ಲಿಯವರೆಗೂ ಲೈಂಗಿಕ ವಿಷಯದ ಆಸಕ್ತಿಯ ಬಗ್ಗೆ ಇಲ್ಲದ ಒಲವು ಒಬ್ಬ ಶುಶ್ರೂಷಕಿ ನರ್ಸ್ ನಿಂದ ಹೆಚ್ಚಾಗುತ್ತದೆ, ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಾನೆ.”
“ಇಡೀ ಕಾದಂಬರಿ ರೂಪುಗೊಳ್ಳುವುದು ಗೌರೀಶನ ಆತ್ಮಕಥೆಯ ಬರವಣಿಗೆಯಿಂದ, ಶ್ರೀಕಾಂತನ ಗೆಳೆತನ ಸತ್ಯೇಂದ್ರನಿಂದ ಲಭಿಸಿದರೂ ಹೆಚ್ಚು ಶ್ರೀಕಾಂತನ ಮಾತಿನ ವೈಖರಿಗೆ ಗೆಳೆತನದ ಪ್ರೇಮ ಹೆಚ್ಚಾಗುತ್ತದೆ. ಗೆಳೆತನದ ಹುಚ್ಚು ಗೆಳೆಯನ ತಂಗಿ ಕಾಮಿನಿಯ ಮೇಲೆ ಪ್ರೇಮಕ್ಕೆ ತಿರುಗಿ ಹುಚ್ಚನಾಗುತ್ತಾನೆ. ಕಾಮಿನಿಯ ವಯಸ್ಸಿಗೆ ಮೀರಿದ ತಿಳುವಳಿಕೆಯು ಕಾಮದ ಮುಚ್ಚಿದ ಕೆಂಡದಂತಿರುತ್ತದೆ. ಸ್ನೇಹ, ಆದರ್ಶವ್ಯಕ್ತಿ, ಗೌರವಯುತರೆಲ್ಲರೂ ಕಾಮಿನಿಯನ್ನು ಕಾಮಿಸುವವರೇ, ಇದೆಲ್ಲ ತಿಳಿದು ತನ್ನನ್ನೊಪ್ಪಿಸಿಕೊಂಡು ಗೌರೀಶನ ಪ್ರೇಮ ಕಣ್ಣಿಗೆ ಕಾಣಿಸುವುದಿಲ್ಲ. ಬದುಕಿನ ಕಾಮ ಜೀವನವನ್ನು ತಿಂದು ತೇಗಿದಮೇಲೆ ಬದುಕನ್ನು ಕಟ್ಟಿಕೊಳ್ಳಲು ನಿಸ್ಸಹಾಯಕಳಾಗುತ್ತಾಳೆ.”
“ಡಾಲಿಯ ಪಾತ್ರ ನಿಜಕ್ಕೂ ಸ್ವಾಮಿ ನಿಷ್ಠೆಯಂತಿರುತ್ತದೆ, ಎಲ್ಲ ಪ್ರೇಮವೂ ಮಾತಿನಿಂದ ಶುರುವಾಗಿ ದೇಹವನ್ನು ಸವಿದು ಉಂಡಮೇಲೆ ಅಂತ್ಯವಾಗುತ್ತದೆ. ಇವರ ಪ್ರೇಮ ಇದಕ್ಕೆ ತದ್ವಿರುದ್ಧ, ದೇಹದ ಕರ್ಮವನ್ನು ಕಳೆಯಲು ಜೊತೆಯಾದ ಸ್ನೇಹ ಯಾವ ಜವಾಬ್ದಾರಿಗಳಿಗೂ ನಿಲುಕದೆ ಓಡುತ್ತಿರುತ್ತದೆ, ಭೂತಕಾಲದ ಭೂತದ ನೆನಪಿನ ಅಂಗಳದಲ್ಲಿದ್ದ ಕಾಮಿನಿಯಿಂದ ಮುಕ್ತಿ ಪಡೆಯುವುದಕ್ಕೆ ಆಫ್ರಿಕಾ ಹೊರಟು ನಿಂತಮೇಲೆ ನಿಜವಾದ ಪ್ರೇಮ ಪುಟಿದು ದಂಪತಿಗಳಾಗುತ್ತಾರೆ”
Is liberation achieved through death, or by following specific ideologies? Can we find freedom by abandoning our true selves? Do we become liberated by solving the puzzle of life, and is it even solvable? In the face of death, do our dreams, quests, adventures, service, and passions hold any significance? Does anything matter at all? The main character grapples with the existential questions of liberation: whether it is achieved through death, by adhering to certain ideologies, or by abandoning one's true self. They ponder if solving the puzzle of life brings freedom and if such a puzzle is even solvable. They also question the significance of dreams, quests, and passions in the face of death. Throughout the narrative, characters adopt various prevalent ideologies like socialism and communism, shaping their realities with preconceived notions in the name of a higher cause and freedom. In doing so, they become mere imitations, far removed from their true selves. As they realize this disconnection, they seek liberation through multiple paths to escape the web in which they’ve lost themselves. The book presents a wealth of philosophical thoughts, offering both profound reflections and disturbing provocations. It serves as a mirror for young individuals struggling to find themselves in a world that constantly curtails their freedom. The highlight of the book is the notion that while fighting the darkness, we may become the darkness ourselves. It explores topics such as love, relationships, women's liberation, Moksha, ideologies, friendship, and unnatural relationships with great intensity.