ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು. ಅನೇಕ ಸಣ್ಣ ಕಥೆಗಳನ್ನು ಬರೆದ ಮಾಸ್ತಿ 'ಸಣ್ಣ ಕಥೆಗಳ ಜನಕ' ಎಂದು ಕರೆಯಲ್ಪಡುತ್ತಿದ್ದರು. ಅವರು ತಮ್ಮ ಅಪ್ರತಿಮ ಸಾಹಿತ್ಯ ಕೃಷಿಯಿಂದಾಗಿ 'ಮಾಸ್ತಿ ಕನ್ನಡದ ಆಸ್ತಿ' ಎಂದು ಪ್ರಚಲಿತರಾಗಿದ್ದರು. ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತು ಬರೆದ 'ಚಿಕವೀರ ರಾಜೇಂದ್ರ' ಎಂಬ ಕೃತಿಗೆ ೧೯೮೩ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು.