Tejaswi’s Missing Link is about the anthropological link that has remained elusive over the centuries. In the story, it is traced somewhere in the African continent and plays a crucial role in re-constructing the history of human evolution.
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.
Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.
He has won several awards for his contribution to literature such as the Rajyotsava and Kannada Sahitya Academy awards.
Poornachandra Tejaswi died of cardiac arrest at the age of 69
ಮಾನವ ವಿಕಾಸದ ಪಥವನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿ ಬರೆದಿರುವ ಪುಸ್ತಕ. ಹಲವು ಲಕ್ಷ ವರ್ಷಗಳಿಂದ ಹೇಗೆ ಆಧುನಿಕ ಮಾನವನ ವಿಕಾಸವಾಗಿದೆ ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ. ತೇಜಸ್ವಿಯವರ ಅಧ್ಯಯನದ ಅಗಾಧತೆಯು ಪುಸ್ತಕ ಓದಿದಾಗ ಮನವರಿಕೆಯಾಗುತ್ತದೆ.
ಜೀವ ವಿಕಾಸವಾದ ನನಗೇನು ಹೊಸದಲ್ಲ. ಅದರಲ್ಲೂ ಆಧುನಿಕ ಮನುಷ್ಯನ ವಿಕಾಸ ಕ್ರಿಯೆ, ಅದರ ವೈಜ್ಞಾನಿಕ ಹಿನ್ನಲೆ, ಅದರ ವಾಸ್ತವಗಳನ್ನು ನಾನು—ವಿಕಿಪೀಡಿಯಾದಲ್ಲಿ, ಯೌಟ್ಯೂಬಿನಲ್ಲಿ, ಇನ್ನೂ ಇತರೆ ಮಾಧ್ಯಮಗಳಿಂದ—ಓದಿ, ನೋಡಿ, ಕೇಳಿ ಹಲವಾರು ಘಂಟೆಗಳು ಕಳೆದಿರುವುದೇ ಸಾಕ್ಷಿ. ಆದರೆ ಇವೆಲ್ಲ ನಾನು ಅನುಭವಿಸಿದ್ದು Englishನಲ್ಲಿ. ವಿಜ್ಞಾನದಲ್ಲಿ ಅಪಾರ ಆಸಕ್ತಿ ಇರುವ ನನಗೆ, ನನ್ನ ಎಲ್ಲ ಅನುಭವಗಳು Englishನಲ್ಲೇ ದೊರೆತಿದೆ. ಇದು ನನ್ನ ಸೌಭಾಗ್ಯವೇ ಹೌದು. ಜಗತ್ತಿನ ಯಾವುದೇ ವೈಜ್ಞಾನಿಕ ಹಾಗು ಸಾಮಾಜಿಕ ವಿಷಯವು Englishನಲ್ಲಿ ಅತಿ ಸಲೀಸಾಗಿ ದೊರೆಯುತ್ತದೆ. ಮೂಲ ವಿಷಯವಲ್ಲದೆ ಅದರ ವಿಮರ್ಶೆ, ಅದರ ಸಾರಾಂಶ, ಎಲ್ಲಾ ಬಗೆಯ ತಿಳುವಳಿಕೆ ಇರುವವರಿಗೆ ಅನ್ವಯವಾಗುವಂತಹ ವಿವರಣೆಗಳೂ ಕೂಡ ದೊರೆಯುತ್ತದೆ. ಆದರೆ ಓರ್ವನಿಗೆ ಈ ಭಾಷೆ ಅರಿವಿಲ್ಲದಿದ್ದರೆ?
ತೇಜಸ್ವಿಯವರು ತಮ್ಮ ಪುಸ್ತಕದ ಆಶೆಯಾದಲ್ಲಿ "ಸಾಕ್ಷರತೆ, ಅಕ್ಷರ ಕಲಿತ ಕನ್ನಡಿಗರಿಗೆ ಜಗತ್ತಿನ ಜ್ಞಾನ ಭಂಡಾರಕ್ಕೆ ತೆರೆದ ಬಾಗಿಲಾಗಬೇಕು. ಎಂದರೆ ಜಗತ್ತಿನ ಜ್ಞಾನ ದಿಂಗಂತಗಳ ಇತ್ತೀಚಿನ ವಿಸ್ತರಣೆ ಸಹ ಓದಲು ಕನ್ನಡದಲ್ಲಿ ದೊರುಯುವಂತಾಗಬೇಕು. ಹೀಗಾಗದೇಹೋದರೆ ಅನಕ್ಶರತೆಗೂ ಸಾಕ್ಷರತೆಗೂ ವ್ಯತ್ಯಾಸವೇ ಇರುವುದಿಲ್ಲ. ಸಾಕ್ಷರತೆಯ ಉಪಯೋಗ ಮಾಡದ ಜನಸಮುದಾಯ ಬಹುಬೇಗ ಮತ್ತೆ ಅನಕ್ಶರತೆಗೆ ಮರಳುತ್ತಾರೆ. ಆದ್ದರಿಂದ ಸಾಕ್ಷರತೆಯ ಮುಂದಿನ ಹೆಜ್ಜೆ ನಮ್ಮ ಮುಂದಿರುವ ಅತಿ ದೊಡ್ಡ ಸವಾಲು" ಎಂದು ಬರೆದಿದ್ದರೆ. ಹೇಗೋ ಕಾಕತಾಳೀಯವಂತೆ ನನಗು ಇದೆ ರೂಪದ ಯೋಚನೆ (ಇಷ್ಟು ವಾಚಾಳವಾಗಿ ಇರಲಿಲ್ಲ) ಕೆಲವು ತಿಂಗಳ ಹಿಂದೆ ಬಂದಿತ್ತು.
ನನ್ನ @saak.sumne.iro instagram page ಶುರು ಮಡಿದ ಉದ್ದೇಶ ಕೂಡ ಸ್ವಲ್ಪ ಈ ಯೋಚನೆಯ ಪ್ರೇರಣೆಯೇ. ನಾನು ತೇಜಸ್ವಿಯವರಷ್ಟು ತೇಜಸ್ವಿ ಅಂತ ಈ ಮಾತು ಇಲ್ಲಿ ಹೇಳಲಿಲ್ಲ. ನಮ್ಮ ಕನ್ನಡ ಭಾಷೆಯಲ್ಲಿ ಈ ರೂಪದ ವೈಜ್ಞಾನಿಕ ಅರಿವು, ವೈಜ್ಞಾನಿಕ ಪ್ರಜ್ಞೆ, ಜ್ಞಾನ ವಿತರಿಸುವ ಕೃತಿಗಳು, ಬರಹಗಳು, ಸಿನೆಮಾಗಳು, ಸಾಕ್ಷ್ಯಚಿತ್ರಗಳು, etc, etc, etc ಎಷ್ಟಿವೆ? ಇಂತಹ ಜ್ಞಾನ ಉಳ್ಳವರು ಹಾಗು ನಮ್ಮ ಭಾಷೆ ಅರಿತವರು ಯಾಕೆ ಏನು ಮಾಡುತ್ತಿಲ್ಲ ಎಂಬ "ಲೋಕವೇ ಸರಿ ಇಲ್ಲ" ಎಂಬ ಯೋಚನೆ ಕೂಡ ಮೂಡಿತ್ತು. ಕಳೆದ ವರ್ಷ ನಾನು ತೇಜಸ್ವಿಯವರ ಕರ್ವಾಲೊ ಮೇಲೆ ಒಂದು ಪ್ರಬಂಧ ರೂಪದ ವಿಮರ್ಷೆ ಕೂಡ ಬರೆದೆ. ಇದು ಈ "ಲೋಕ ಸರಿ ಇಲ್ಲ." ... "ನಾನು ಸರಿ ಮಾಡ್ತಿನಿ" ಎಂಬ ಹುಚ್ಚುತನ ಹಾಗು ಅಹಂನಿಂದಲೂ ಕೂಡಿದ ಬರಹ. ಈ ಯವ್ವನದ ಉದ್ವೇಗಕ್ಕೆ ಹಾಗು ಅಹಂಕಾರಕ್ಕೆ ಸಿಕ್ಕ ತಕ್ಕ ಉತ್ತರವೇ "ಮಿಸ್ಸಿಂಗ್ ಲಿಂಕ್" ಪುಸ್ತಕ.
ತೇಜಸ್ವಿಯವರು ಜೀವ ವಿಕಾಸವಾದ, ಆ ವಾದ ಹೇಗೆ ಮೂಡಿಬಂದಿತು, ಅದಕ್ಕೆ ಯಾರು ಏನು ಸಂಶೋಧನೆ ಮಾಡಿದರು. ಅದಕ್ಕೆ ಬೇಕಾದ ಸಾಕ್ಷ್ಯಾಧಾರಗಳು ಏನು. ಅದರ ಪರಿಣಾಮಗಳೇನು. ಈ ವಿಜ್ಞಾನ ಕ್ಷೇತ್ರಕ್ಕೆ ಇನ್ನೂ ಎಷ್ಟು ಬೇರೆಬೇರೆ ವೈಜ್ಞಾನಿಕ, ಸಾಮಾಜಿಕ ಕ್ಷೇತ್ರಗಳ ಕೊಡುಗೆಗಳಿವೆ ಇವೆಲ್ಲವನ್ನೂ ಎಷ್ಟು ಸಲೀಸಾಗಿ 100 ಪುಟಗಳ ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ. ಇಷ್ಟು technicalities ಗಳನ್ನೂ ಎಷ್ಟು ಸುಗಮವಾಗಿ—ಕಥೆ ಹೇಳಿದಂತೆ, ಮನ ಮುಟ್ಟುವಂತೆ, ತಲೆಗೆ ಹತ್ತುವಂತೆ—ಹೇಳಿದ್ದಾರೆಯೆಂದರೆ, ನನ್ನ "ನಾನೇ ಲೋಕ ಸರಿ ಮಾಡುತ್ತೇನೆ" ಎಂಬ ಅಹಂ ಎಲ್ಲವು ಈ ಕೃತಿ ಓದುತ್ತಾ ಕರಗಿಹೋಯಿತು. ಇಂಥ "ಜನಪ್ರಿಯ ವಿಜ್ಞಾನಕ್ಕೆ" (Popular Science) ಸೇರುವ ಪುಸ್ತಕಗಳು ಹಲವಾರು ಕನ್ನಡದಲ್ಲಿ ಇದೆ ಎನ್ನುವುದು ತಿಳಿಯಿತು. ಆದರೆ ಇವೆಲ್ಲ ಬರೆದಿರುವುದು ಹಿಂದಿನ ಶತಮಾನದಲ್ಲಿ. ಆಗಿನಿಂದ ಈಗಿನವರೆಗೆ ನಾವು ಏನು ಹೊಸದು ತಿಳಿದಿಲ್ಲವೇ? ಅಥವಾ ಅದರ ಬಗ್ಗೆ ಜನರಿಗೆ ಹೇಳಬೇಕು ಅಂತ ಯಾರು ಯೋಚಿಸಿಲ್ಲವೇ? ಯಾವುದು ಸರಿ ಎಂದು ನಿಮಗೆ ಗೊತ್ತು.
ಮನುಷ್ಯನ ವಿಕಾಸವೃಕ್ಷವನ್ನು ನಮಗೆ ತಿಳಿಸಬೇಕಂಬ ಈ ಕೃತಿಯಲ್ಲಿ ನನಗೆ ವಿಚಾರದಲ್ಲಿ ಹೊಸತೇನು ಕಾಣಲಿಲ್ಲ. ಆಗಲೇ ಹೇಳಿದಂತೆ, ಇವೆಲ್ಲವನ್ನೂ ನಾನು ಯಾವೊದೋ ಇನ್ನೊಂದು ರೂಪದಲ್ಲಿ ಇಂಗ್ಲಿಷ್ನಲ್ಲಿ ಆಗಲೇ ತಿಳಿದಿದ್ದೆ. (ಆದರೂ ಕೆಲುವು ಹೊಸ ವಿಷಯಗಳು ಸ್ವಲ್ಪ ಆಳದಲ್ಲಿ ಅರ್ಥವಾಯಿತು). ಕೆಲವು ವಿಷಯಗಳು ತೇಜಸ್ವಿಯವರು ಬರೆದ 30 ವರ್ಷಗಳ ನಂತರ ಈಗ ಸ್ವಲ್ಪ ವಿಜ್ಞಾನಿಗಳ, ಜೀವಶಾಸ್ತ್ರಜ್ಞರ ತಿಳುವಳಿಕೆಯಲ್ಲಿ ಪ್ರಗತಿಗೊಂಡಿರುವುದು ನಿಜ. ಆದರೆ ಈ ವಿಷಯಗಳನ್ನು ಹೇಗೆ ತಿಳಿಸಿಕೊಡಬೇಕು ಎಂದು ಬಹಳ ಕಲಿತೆ. ಇನ್ನೊಮ್ಮೆ ಓದಿದರೂ boreಆಗದಂತೆ ಕಥಾ ರೂಪದಲ್ಲಿ ಬರೆದಿರುವು ಈ ಕೃತಿ ನಿಜವಾಗಿಯೂ ಕನ್ನಡ ಸಾಹಿತ್ಯದಲ್ಲಿ ಒಂದು ಉನ್ನತ ಸ್ಥಾನಕ್ಕೆ ಸೇರಬೇಕು.
If your are not patience enough to read 7-8 books about evolution. Better, Just read these 90 pages. You will know the whole timeline of evolution and even the struggles of scientists to workout these theories.
ಅಬ್ಬಾ...ಒಬ್ಬ ಲೇಖಕನ ಅಧ್ಯಯನಶೀಲತೆಗೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ. ತೇಜಸ್ವಿ ೯೦ ರ ದಶಮಾನ ದಲ್ಲಿ ಮೂಡಿಗೆರೆಯಲ್ಲಿ ಕುಳಿತು ಇಂತದ್ದೊಂದು ಪುಸ್ತಕ ಬರೆದದ್ದು ಅದ್ಭುತವೇ ಸರಿ. ಆ ಅದ್ಭುತದ ಹಿಂದಿನ ಅವರ ಅಧ್ಯಯನಶೀಲತೆ ಮತ್ತು ಕಠಿಣ ವಿಚಾರಗಳನ್ನು ಸರಳವಾಗಿ ತಿಳಿಸಿ ಹೇಳುವ ಅವರ ಪ್ರಯತ್ಕ್ಕೊಂದು ಸಾಷ್ಟಾಂಗ ಪ್ರಣಾಮ.
ಈಗಿನ ಕಾಲದ ಮಟ್ಟಿಗೆ ಹೇಳುವುದಾದರೆ, ಮಾನವ ವಿಕಾಸವಾದದ ಬಗ್ಗೆ ತಿಳಿಸಿಕೊಡುವ ಅನೇಕ ಪುಸ್ತಕಗಳಿವೆ. ಆದರೆ, ಅಂದಿನ ಕಾಲಕ್ಕೆ, ಹೊರ ಜಗತ್ತಿನ ಸಂಪರ್ಕ ಇರದ, ನಿಯಮಿತ ಮಾಧ್ಯಮಗಳಿದ್ದ ಕಾಲಕ್ಕೆ, ತೇಜಸ್ವಿ ಯವರ ಅವರ ಸರಳ ಸುಂದರ ಶೈಲಿಯಲ್ಲಿ, ವಿಕಾಸವಾದವನ್ನು ಓದುವುದು ಆಳವಾದ ಯೋಚನೆಗಳನ್ನು ಹುಟ್ಟು ಹಾಕುತ್ತದೆ.
A science writing by K.P.Purnachandra Tejaswi. Book is on Human evolution.Mainly focuses on various attempts by people across globe in explaining the human evolution.
Another masterpiece by K.P. Poornachandra Tejaswi. Often it is complex and tedious to read and understanding the bulky Books of Human evolution and it's too hard to remember tongue-twisting Paleontology terms.
In this Book, K.P. Poornachandra Tejaswi makes it very simple to understand Human evolution by starting the Book with a question "Who are we?".
This Book takes back us into the timeline of Human Evolution in chronological order and it is an interesting piece of Book in terms of both educational and in literary form.