ಶಿವಕುಮಾರ ಮಾವಲಿಯವರ ಈ ಪುಸ್ತಕ ನಾ ಕೇಳು ಮನಸೇ ಕಥಾ ವಾಚನ ಕಾರ್ಯಕ್ರಮದಲ್ಲಿ ಕೊಂಡದ್ದು. ಅವರ ಇನ್ನೊಂದು ಪುಸ್ತಕವನ್ನು ಕೊಂಡೆ, ಪ್ರೇಮ ಪತ್ರದ ಆಫೀಸು ಮತ್ತು ಅವಳು. ಇವರ ಈ ಎರಡು ಕಥೆಗಳ ಸಂಕಲನಗಳು ತುಂಬಾ ಚೆನ್ನಾಗಿವೆ. ಈಗಿನ plagiarism ಕಾಲದಲ್ಲೂ ಇವರು ಯಾರ ಕಥೆಯಿಂದ ಸ್ಪೂರ್ತಿ ಪಡೆದದ್ದು ಎಂಬುದನ್ನು ಕತೆಗಳ ಕೊನೆಯಲ್ಲಿ ನಮೂದಿಸಿದ್ದಾರೆ . ಯಾವ ಕಥೆಗಳು ನೀರಸ ಅನ್ನಿಸೋದಿಲ್ಲ. ಇಲ್ಲಿ ಬರುವ 30 ಕತೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿವೆ. ಮೂರು ಪ್ರತ್ಯೇಕ ಪತ್ರಗಳು ಇರಬಹುದು, ಹೂವು ಮಾರುವ ಹುಡುಗ ಎಂಬ ಕಥೆ ಇರಬಹುದು ಎಲ್ಲವು ಭಿನ್ನವಾಗಿ, ಚುಟುಕಾಗಿ, ಪ್ರಿಯವಾಗಿ ಇವೆ. ಶಿವಕುಮಾರರು ನಮ್ಮ ಊರಿನವರೆಂಬ ಸ್ವಾರ್ಥ ದಿಂದ ಈ ಹೊಗಳಿಕೆ ಅಲ್ಲ. ಕೊಂಡು ಓದಿ.