Jump to ratings and reviews
Rate this book

ಅಲೆಮಾರಿಯ ಅ೦ಡಮಾನ್ ಮತ್ತು ಮಹಾನದಿ ನೈಲ್ | Alemaariya Andamaan Mattu Mahaanadi Nile

Rate this book
A travel literature-
First part of Book is on authors journey to Andaman islands in India.
Second part of the book is on river Nile. Author has provided information on discovery of Nile rivers origin in last century.

220 pages, Paperback

First published January 1, 2012

21 people are currently reading
667 people want to read

About the author

K.P. Poornachandra Tejaswi

58 books1,100 followers
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.

Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.

He has won several awards for his contribution to literature such as the Rajyotsava and Kannada Sahitya Academy awards.

Poornachandra Tejaswi died of cardiac arrest at the age of 69

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
185 (50%)
4 stars
128 (34%)
3 stars
44 (11%)
2 stars
5 (1%)
1 star
5 (1%)
Displaying 1 - 24 of 24 reviews
Profile Image for Karthik.
61 reviews19 followers
February 7, 2022
ಅಲೆಮಾರಿಯ ಅಂಡಮಾನ್
-----------------------------------

ಅಲೆಮಾರಿಯ ಅಂಡಮಾನ್ - ತೇಜಸ್ವಿಯವರ ಪ್ರವಾಸ ಕಥನ. ಇದು ಬರೀ ಅನುಭವದ ಸಂಕಲನವಾಗದೇ, ಅಂಡಮಾನಿನ ಪ್ರಕೃತಿಯ ಕುರಿತಾದ ಅಮೂಲ್ಯ ಮಾಹಿತಿಯುಳ್ಳ ಅಪೂರ್ವ ಕೋಶವೂ ಹೌದು! ತೇಜಸ್ವಿಯವರು ಹಡಗಲ್ಲಿ ಪ್ರಯಾಣಿಸುವಾಗ ಕಂಡ ಹಾರುವ ಮೀನುಗಳು, ಅಂಡಮಾನಿನ ದಂಡೆಯಲ್ಲಿದ್ದ ಕೋರಲ್ ಗಳು, ರೋಸ್ ಐಲ್ಯಾಂಡ್ (ಈಗಿನ ಸುಭಾಷ್ ಚಂದ್ರ ಬೋಸ್ ಐಲ್ಯಾಂಡ್),ಮೀನು ಹಿಡಿಯಲು ಹೋದಾಗ ಕಂಡ ಟೊರ್ನಾಡೊ,ಮ್ಯಾಂಗ್ರೋವ್ ಕಾಡುಗಳ ಮಹತ್ವ, ಅಲ್ಲಿ ಹಬ್ಬಿದ್ದ ಮಲೇರಿಯಾ ರೋಗ ( ಜಸ್ಟ್ ೪ ಟ್ಯಾಬ್ಲೇಟ್ಸ್, ಮಲೇರಿಯಾ ವಿಲ್ ವ್ಯಾನಿಷ್ ! ) , ಅಂಡಮಾನಿನ ಮಡ್ ಕ್ರ್ಯಾಬ್ ( ಇವುಗಳು ತೆಂಗಿನ ಮರ ಹತ್ತಿ , ಕಾಯಿಯನ್ನು ಕಿತ್ತು, ತನ್ನ ಕೊಂಬಿಗಳಿಂದ ಅದರ ಸಿಪ್ಪೆ ತೆಗೆಯುತ್ತದೆ ಅಂತೇ!!) , ಸ್ಕ್ವಿಡ್ ಒಂದನ್ನು ಗಾಳಕ್ಕೆ ಬೀಳಿಸಿದ್ದು- ಹೀಗೆ ಹಲವು ಅಂಡಮಾನಿನ ವಿಶೇಷತೆಗಳನ್ನು ಹತ್ತಿರದಿಂದ ಕಂಡು, ಅದರ ಬಗೆಗಿನ ಸ್ವಾರಸ್ಯಕರ ಮಾಹಿತಿಗಳನ್ನು ನೀಡಿದ್ದಾರೆ.

ಅಂಡಮಾನಿಗೆ ಹೋದರೂ , ತಮ್ಮ ಗಾಳ - ರೀಲ್ ಗಳನ್ನು ಮರೆಯದ ತೇಜಸ್ವಿಯವರ ಫಿಶಿಂಗ್ ಹುಚ್ಚು ಖುಷಿ ಕೊಟ್ಟಿತು. ಅದರಲ್ಲೂ ಪ್ರವಾಸದ ಕೊನೆಗೆ ಅಜ್ಞಾತವಾಗಿ ಕಾಡಿದ ಜಲಚರ ಜೀವಿಯನ್ನು ನೋಡಲು ಅವರು ಪಟ್ಟ ಶ್ರಮ ಓದುಗನನ್ನೂ ಬೆವರಿಳಿಸುವಂಥದ್ದು !
ಒಟ್ನಲ್ಲಿ, ಇದೊಂದು ಸುಂದರವಾದ ಪ್ರವಾಸ ಕಥನ, ಓದಿದ ಮೇಲೆ ಅಂಡಮಾನ್ ನಲ್ಲಿ ಅಲೆಮಾರಿಯಂತೆ ಅಲೆಯಬೇಕೆಂಬ ಬಯಕೆ ಹೆಚ್ಚಾಗಿದೆ.

ಮಹಾನದಿ ನೈಲ್
---------------------

ಪ್ರಪಂಚದ ಅತ್ಯಂತ ಉದ್ದವಾದ ನೈಲ್ ನದಿ ಸುಮಾರು ೪೧೨೫ ಮೈಲುಗಳಷ್ಟು ದೂರ ಬೆಟ್ಟಗಳ ತಪ್ಪಲುಗಳಿಂದ ತೊಟ್ಟಿಕ್ಕಿ ಚಿಕ್ಕ ಝರಿಯಾಗಿ ಹರಿದು ಹಳ್ಳಕೊಳ್ಳಗಳನ್ನು ಸೇರಿ ಹಳ್ಳವಾಗಿ, ನದಿಯಾಗಿ ಕೊನೆಗೆ ಮಹಾನದಿಯಾಗಿ ಮೆಡಿಟರೇನಿಯನ್ ಸಮುದ್ರ ಸೇರುತ್ತದೆ. ಇಂಥಾ ಮಹಾ ನದಿಯ ಉಗಮ ಸ್ಥಾನದ ಕುರಿತಾಗಿ ನಡೆದ ಅನ್ವೇಷಣಾ ಯಾತ್ರೆಗಳು ಒಂದೆರಡಲ್ಲ ! ಕೆಲವೇ ದಶಕಗಳಿಗೆ ಸೀಮಿತವಾಗಿದ್ದೂ ಅಲ್ಲ ! ಕ್ರಿಸ್ತ ಪೂರ್ವದಿಂದ ತೀರಾ ೧೯ ನೇ ಶತಮಾನದ ವರೆಗೂ ನೈಲ್ ನದಿ ನಿಗೂಢವಾಗಿ ಹಲವು explorers ಗಳನ್ನು ಕಾಡಿದೆ. ಹಲವರು ಈ ನಿಗೂಢತೆಯ ಬೆನ್ನಟ್ಟಿ ಕಾಡಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಲೇಖನದಲ್ಲಿ ತೇಜಸ್ವಿಯರು ಅಂತಹ ಅನ್ವೇಷಕರಲ್ಲಿ ಪ್ರಮುಖರಾದ ಡೇವಿಡ್ ಲಿವಿಂಗ್ ಸ್ಟೋನ್, ಬೇಕರ್ ದಂಪತಿಗಳು, ಸ್ಟಾನ್ಲಿ, ಸ್ಪೀಕೆ - ಇವರು ಕೈಗೊಂಡ ಯಾತ್ರೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹಾಗೆ, ಆ ಕಾಲದಲ್ಲಿ ವ್ಯಾಪಕವಾಗಿದ್ದ ಗುಲಾಮ ವ್ಯಾಪಾರದ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.

- ಕಾರ್ತಿಕ್ ಕೃಷ್ಣ
೭-೨-೨೦೨೨
1 review
September 23, 2018
ಪುಸ್ತಕ : ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್
ಲೇಖಕರು : ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಪ್ರವಾಸ ಹೋಗೋದಂದ್ರೆ ಯಾರಿಗೆ ತಾನೇ ಇಷ್ಟ ಇರೋಲ್ಲ ಹೇಳಿ! ನಂಗಂತೂ ಭಯಂಕರ ಇಷ್ಟ.. ಒಂದು ಸಲ ತಲೆಗೆ ಅಂತಹ ವಿಚಾರ ಬಂದ್ರೆ ಸಾಕು, ಹೋಗಲೇಬೇಕು ಅನ್ನೋ ಛಲ ಹುಟ್ಟುತ್ತೆ.. ಅದಕ್ಕಾಗಿ ಭರ್ಜರಿ ತಯಾರಿ ಶುರುವಾಗುತ್ತೆ, ಗೂಗಲ್ ಮಾಡಿ ಎಲ್ಲಿಗೆ ಹೋಗೋದು, ಹೇಗೆ ಹೋಗೋದು, ಹೋಗಿ ಏನು ಮಾಡೋದು, ಆಮೇಲೆ ಇಲ್ಲಿ ಶಾಪಿಂಗ್ ಮಾಡುವುದೋ ಮಾಡುವುದು, ಖರ್ಚು ವೆಚ್ಚಗಳ ಲೆಕ್ಕಾಚಾರ, ಹೀಗೆ ಪೂರ್ವಭಾವಿ ಸಿದ್ಧತೆಗಳು.. ಆದರೆ ಆ ಸ್ಥಳಗಳ ಹಿನ್ನಲೆ, ಇತಿಹಾಸ, ಮಹತ್ವವನ್ನೆಲ್ಲ ಎಷ್ಟು ಜನ ತಿಳ್ಕೊಂಡು ಪ್ರಯಾಣ ಮಾಡುತ್ತಾರೆ!

ಪೂರ್ಣಚಂದ್ರ ತೇಜಸ್ವಿಯವರು ತಮ್ಮ ವಿಶಿಷ್ಟ ಬರವಣಿಗೆಗೆ ಸುಪ್ರಸಿದ್ಧರು.. ಅವರ ಪ್ರತಿಯೊಂದು ಪುಸ್ತಕದಲ್ಲೂ ಎಲ್ಲಾ ವಿಧವಾದ ಶೈಲಿ ಇರುತ್ತೆ.. ಇಲ್ಲಿಯವರೆಗೆ ಅವರ ಮೂರು ಪುಸ್ತಕಗಳನ್ನು ಮಾತ್ರ ಓದಿರುವ ನಾನು ಅವರ ಬಗ್ಗೆ ಹೇಳೋದಾದರೆ, ಅವರು ಯಾವುದನ್ನೇ ಆಗಲಿ ಇದ್ದದ್ದನ್ನು ಇದ್ದ ಹಾಗೆ ಹೇಳ್ತಾರೆ, ಯಾವುದರಲ್ಲೂ ಅತಿಶಯೋಕ್ತಿ ಮಾಡೋಲ್ಲ ಹಾಗೂ ಎಲ್ಲಾ ವಿಷಯಗಳನ್ನು ತುಂಬಾ ಚೆನ್ನಾಗಿ ಅಧ್ಯಯನ ಮಾಡಿ ಬರೆಯುತ್ತಾರೆ..

ನಾನು ನನ್ನ ಪತಿ ಮೊನ್ನೆ ಏಪ್ರಿಲಲ್ಲಿ ಅಂಡಮಾನಿಗೆ ಹೋಗಿ ಬಂದ್ವಿ.. ಈಗಿನ ಮೊಬೈಲ್, ಅಂತರ್ಜಾಲ ಯುಗದಲ್ಲಿ ಅವುಗಳ ಸಹಾಯದಿಂದ ಪ್ರವಾಸದ ಸಿದ್ಧತೆ ಮಾಡಿದ ನಾನು, ಸ್ಕ್ಯೂಬಾ ಡೈವಿಂಗ್, ಸ್ನೋರ್ಕೆಲ್ಲಿಂಗ್, ಸೀ ವಾಕಿಂಗ್, ಕಯಾಕಿಂಗ್ ಹೀಗೆ ಸುಮಾರು ಜಲಕ್ರೀಡೆಗಳ ಬಗ್ಗೆ ತಿಳ್ಕೊಂಡು, ಆಟ ಆಡಿ ಖುಷಿ ಅನುಭವಿಸಿದೆವು.. ಆದ್ರೆ ಅಲೆಮಾರಿಯ ಅಂಡಮಾನ್ ಓದಿದ ಮೇಲೆ, ಅಲೆಮಾರಿಯಾಗಿ ಹೋಗಿ ಬಂದಿದ್ದು ನಾನೇ ಹೊರತು ಖಂಡಿತ ತೇಜಸ್ವಿಯವರು ಅಲ್ವೇ ಅಲ್ಲ ಅಂತ ಅನಿಸ್ತು!!

ಅವರ ಜನ್ಮದಿನ ಈ ಪುಸ್ತಕದ ಬಗ್ಗೆ ಬರೆಯೋ ಖುಷಿ ಒಂದೆಡೆಯಾದರೆ, ನಾನು ನೋಡಿದ್ದ ಸ್ಥಳಗಳೆಲ್ಲವೂ ಕಣ್ಣ ಮುಂದೆ ಮತ್ತೊಮ್ಮೆ ಬಂದು ಮಹದಾನಂದವಾಯಿತು.. ಅಂಡಮಾನಿಗೆ ಹೋಗೋ ಪ್ಲಾನ್ ಮಾಡ್ತಾ ಇರೋರು ಅಥವಾ ಹೋಗಿ ಬಂದೋರು ಅಥವಾ ಪ್ಲಾನ್ ಮಾಡದೆ ಇರೋರೂ ಕೂಡ ಓದಲೇಬೇಕಾದ ಒಂದೊಳ್ಳೆಯ ಪ್ರವಾಸ ಕಥನ.. ಈ ಅದ್ಭುತ ಪುಸ್ತಕ ಓದಿ ನೋಡಿದ್ರೇನೇ ಮಜಾ, ಅದಿಕ್ಕೆ ಅದರ ಸಾರಾಂಶ ಮಾತ್ರ ಬರೀತಾ ಇದ್ದೀನಿ..

ತೇಜಸ್ವಿಯವರು ಅವರ ಅಂಡಮಾನ್ ಪ್ರವಾಸ ಒಂದು ಆಕಸ್ಮಿಕ ಎಂದು ಹೇಳುತ್ತಾರೆ.. ಅವರು ಅವರ ಮಂಗಳೂರು, ಬೆಂಗಳೂರು ಗೆಳೆಯರ ಜೊತೆಗೂಡಿ ಮೂಡಿಗೆರೆಯಿಂದ ಮದ್ರಾಸಿಗೆ ಹೋಗುತ್ತಾರೆ.. ಅಲ್ಲಿಂದ ಹಡಗಲ್ಲಿ ಅಂಡಮಾನ್ ನತ್ತ ಪಯಣ.. ಹಡಗಿನ ಪ್ರಯಾಣದ ಅನುಭವ, ರೀಲು ರಾಡು ಗಾಳ ಹಿಡ್ಕೊಂಡು ಮೀನು ಬೇಟೆ ಮಾಡಲು ಹೊರಟಿದ್ದು ಎಲ್ಲವನ್ನೂ ರಸವತ್ತಾಗಿ ವಿವರಿಸಿದ್ದಾರೆ.. ಮುಂದೆ ಪೋರ್ಟ್ ಬ್ಲೇರ್ ಅಲ್ಲಿ ನಡುಕ ಹುಟ್ಟಿಸಿದ ಸೈಕೊಲೊಜಿಕಲ್, ಫಿಸಿಕಲ್ ಮಲೇರಿಯಾ ಕಥೆಗಳು.. ಅಲ್ಲಿ ನೋಡಿದ ಕರಿಯ ಮೀನು, ತೆಂಗಿನಕಾಯಿ ಸಿಪ್ಪೆಯನ್ನು ತನ್ನ ಕೊಂಬಿನಿಂದ ಸೀಳುವ ಮಡ್ ಕ್ರ್ಯಾಬ್, ದೈತ್ಯ ಕಪ್ಪೆಚಿಪ್ಪುಗಳು, ನೀಲಿಯ ಮೀನು, ಗಪೂಕ್ ಎಂದು ಶಬ್ದ ಮಾಡುವ ಹಕ್ಕಿ, ಸಮುದ್ರದ ದಡದಲ್ಲೇ ಆರಾಮವಾಗಿ ಬಂದ ಅಕ್ಟೋಪಸ್!! ವಂಡೂರಿನ ಹವಳದ ದಂಡೆಗಳು ಹೀಗೆ ಪ್ರತಿಯೊಂದನ್ನೂ ನೋಡುವುದೂ ಮಾತ್ರವಲ್ಲದೆ ಅವುಗಳ ಬಗ್ಗೆ ಆಳವಾಗಿ ವರ್ಣಿಸಿದ್ದಾರೆ.. ದಿಗ್ಲಿಪುರದಲ್ಲಿ ಅವರ ಗಾಳಕ್ಕೆ ಸಿಕ್ಕ ಸ್ಕ್ವಿಡ್, ಈ ಭಯಾನಕ ಸಮುದ್ರ ಜೀವಿ ಬಗ್ಗೆ ಅವರು ಬರೆದಿದ್ದನ್ನೂ ನೋಡಿ, ಜಲಕ್ರೀಡೆ ಆಡಿದ್ದ ನಂಗೆ ಒಂದೇ ಸಲ ಮೈ ಛಳಿ ಬಂದಂಗಾಯ್ತು!

ಹಾಗೆಯೇ ಪುಸ್ತಕದ ಕೊನೆಯ ಕೆಲವು ಪುಟಗಳಲ್ಲಿ, ಮಹಾನದಿ ನೈಲ್ ಬಗ್ಗೆ ಅತ್ಯಂತ ಸವಿಸ್ತಾರವಾಗಿ ತಿಳಿಸಿದ್ದಾರೆ.. ಅದರ ಉಗಮ, ಅದರ ಮೇಲೆ ನಡೆದ ಸಂಶೋಧನೆಗಳು, ಅಲ್ಲಿನ ಜನ ಜೀವನ ಹೀಗೆ ಹಲವು ವಿಷಯಗಳನ್ನು ಬರೆದಿದ್ದಾರೆ..

ಸರಿ ಸರಿ ಇಷ್ಟಕ್ಕೆ ನಿಲ್ಲಿಸ್ತೇನೆ.. ಇನ್ನು ಜಾಸ್ತಿ ಹೇಳಿದ್ರೆ, ಓದುವಾಗಿನ ಸ್ವಾರಸ್ಯ ಕಡಿಮೆಯಾಗ್ಬೊದೇನೋ.. ಎಲ್ಲರೂ ಆದಷ್ಟು ಬೇಗ ಈ ಪುಸ್ತಕ ತಗೊಂಡು ಓದಿ..
Profile Image for Rekha Her Spirit.
34 reviews28 followers
January 1, 2022
ಅಂಡಮಾನ್ (ಅಥವಾ ಅಂತಹ ಬೇರೆಯದ್ದೂ) ನೋಡ ಬಯಸೋರು ಈ ಪುಸ್ತಕ ಓದಲೇಬೇಕು,
ಕನಿಷ್ಠ ಅಲ್ಲಿನ ಅಪಾಯಗಳ ಅರಿವಿಗಾಗಿ.
ಇನ್ನೊಂದು ಕಾರಣ ಈ ಮಾಯಾಲೋಕದ ಅದ್ಭುತಗಳನ್ನ ನೋಡುವ, ಅನುಭವಿಸುವ ರೀತಿಯ ತಿಳುವಳಿಕೆಗಾಗಿ..

ಇದನ್ನೋದಿದ ಮೇಲೆ ಅಂಡಮಾನನ್ನ ಇನ್ನಷ್ಟು ತಿಳಿಯುವ ಬಯಕೆ ಆಗುತ್ತೆ, ಅದಕ್ಕೆ ಸಂಬಂಧಿಸಿದ
ಮತ್ತಷ್ಟು ಪುಸ್ತಕಗಳನ್ನೂ ಸಾಕ್ಷ್ಯಚಿತ್ರಗಳನ್ನೂ ನೋಡುವ ಆಸೆ ಮೊಳೆಯುತ್ತೆ, ಅಂಡಮಾನ್ ಇರುವ ಚಲನಚಿತ್ರಗಳನ್ನೆಲ್ಲಾ ನೋಡಬೇಕೆನಿಸುತ್ತೆ,
ಅಂಡಮಾನ್ ನ ಮೇಲೆ ಭಯವೂ ಹುಟ್ಟುತ್ತೆ, ಅದನ್ನರಿಯುವ ಆಸೆ ಅದಮ್ಯವಾಗುತ್ತೆ!

ನನಗಂತೂ ಅಂಡಮಾನ್ ಪ್ರವಾಸಕ್ಕೇ ಹೋದ ಅನುಭವವಾಯ್ತು, ಹೇಗಿತ್ತು ವೀಕೆಂಡ್ ಅಂತ ಕೇಳಿದರೆ ಅಂಡಮಾನ್ ಗೆ ಹೋಗಿದ್ದೆ ಎನ್ನಲಡ್ಡಿಯಿಲ್ಲ...

ತೇಜಸ್ವಿಯವರ ಪುಸ್ತಕಗಳಲ್ಲಿ
ಮೊದಲು ಓದಬೇಕಾದವೆಂದರೆ ಹಾಗೂ ಓದಲೇ ಬೇಕಾದವೆಂದರೆ,
ಏರೋಪ್ಲೇನ್ ಮತ್ತು ಚಿಟ್ಟೆಗಳು, ಬೆಳ್ಳಂದೂರಿನ ನರಭಕ್ಷಕ ಮತ್ತು ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ (ನಾ ಓದಿರುವ ಅವರ ಪುಸ್ತಕಗಳಲ್ಲಿ)
Profile Image for Karthikeya Bhat.
109 reviews13 followers
October 7, 2022
ಅಲೆಮಾರಿನ ಅಂಡಮಾನ್ ಮತ್ತು ಮಹಾನದಿ ನೈಲ್
ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಅಲೆಮಾರಿನ ಅಂಡಮಾನ್:
ಇದೊಂದು ತೇಜಸ್ವಿಯವರ ಪ್ರವಾಸ ಕಥನ.

ಹೇಗಿತ್ತು ಅಂಡಮಾನ್ ಎಂದು ಯಾರಾದರು ಕೇಳಿದರೆ ಎಲ್ಲರೂ ಹೇಳುವ ಹಾಗೆ ಪರವಾಗಿಲ್ಲ, ಚೆನ್ನಾಗಿತ್ತು ಎಂದು ಉತ್ತರ ಕೊಡುವುದು ತೇಜಸ್ವಿಯವರಿಗೆ ಇಷ್ಟವಿರಲಿಲ್ಲ, ಅದರ ಬದಲು ಅವರ ಅನುಭವಗಳನ್ನು ಬರಹದ ಮೂಲಕ ವ್ಯಕ್ತಪಡಿಸಬೇಕೆಂದು ಅವರು ಅಂಡಮಾನಿಗೆ ಹೋದಾಗ ವೀಕ್ಷಿಸಿದ ಸ್ಥಳಗಳು ಹಾಗು ಅಲ್ಲಿ ಅವರಿಗಾದ ಹಲವಾರು ಅನುಭವಗಳ ಬಗ್ಗೆ ಸುಂದರವಾಗಿ ವಿವರಿಸಿದ್ದಾರೆ. ಅಂಡಮಾನಿಗೆ ಹೋದಾಗ ಹಡುಗಿನಲ್ಲ��� ಹೋದಾಗಿದ್ದ ಲವಲವಿಕೆ ತಾವು ಮರಳಿ ಮದ್ರಾಸಿಗೆ ವಿಮಾನದಲ್ಲಿ ಬಂದಾಗ ಇರುವುದಿಲ್ಲ, ಹೋಗುವಾಗ ಹಡುಗಿನಲ್ಲಿ ತಮ್ಮ ಮಿತ್ರರ ಜೊತೆ ನಾಲ್ಕು ದಿನ ಸಮುದ್ರದಲ್ಲಿ ಪ್ರಯಾಣ ಮಾಡಿದ ಅನುಭವ ಖುಷಿಕೊಟ್ಟದ್ದು, ಬರಿ ೨ ತಾಸಿನಲ್ಲಿ ಅಂಡಮಾನ್ ಬಿಟ್ಟು ಮದ್ರಾಸಿಗೆ ಬಂದಾಗ ಖುಷಿಕೊಡಲಿಲ್ಲ.

ಅಂತೂ ಪ್ರವಾಸ ಹೊರಡಲು ಸಿದ್ಧರಾದರು, ತಾವೆಲ್ಲ ಅಂಡಮಾನಿಗೆ ಹೋಗುವುದಾಗಿ ಊರೆಲ್ಲಾ ಸುದ್ಧಿಯಾಯಿತು, ಇವರನ್ನು ಕಂಡಾಗಲೆಲ್ಲಾ ಇದೇನ್ರಯ್ಯ ಇಲ್ಲೇ ಇದ್ದೀರಿ?ಅಂಡಮಾನಿಗೆ ಹೋಗಿ ಬಂದ್ರೋ ಏನು ಕತೆ? ಎಂದು ಕೇಳತೊಡಗಿದವರಿಗೆ ಉತ್ತರಕೊಟ್ಟು ಕೊಟ್ಟು ಬೇಸೆತ್ತು ಹೋಗಿದ್ದರು. ಅಲ್ಲೇನಿದೆ ಬರಿ ಕಾಡು, ಸಮುದ್ರ ಎಂದು ಕೆಲವರು ಹಾಸ್ಯಮಾಡಿದವರುಂಟು ಹಾಗು ಅಲ್ಲಿ ನರಭಕ್ಷಕ ಕಾಡುಜನರಿದ್ದಾರೆ ಅವರ ಕೈಗೆ ಸಿಕ್ಕರೆ ಏನು ಗತಿ ಎಂದು ಕೆಲವರು ಹೆದರಿಸಿದ್ದುಂಟು. ತೇಜಸ್ವಿಯವರ ಜೊತೆ ಚಂದ್ರು, ರಾಮದಾಸ್, ಶಾಂತ, ಬಸವರಾಜು, ನಿರ್ಮಲಾ ಇನ್ನಿತರರು ಹೊರಡಲು ಸಿದ್ಧರಾದರು ಹಾಗು ಅವರೆಲ್ಲರೂ ಸೇರಿ ಅಂಡಮಾನಿನ ಅಧಿಕಾರಿಗಳಿಗೆ ಮೊದಲು ಪತ್ರ ಬರೆದು, ಫೋಟೋ ಬಯೋಡೇಟಾ ಕಳಿಸಿ ತಮ್ಮ ಪ್ರವಾಸದ ಉದ್ಧೇಶವನ್ನು ತಿಳಿಸಿ ಅವರಿಂದ ವೀಸಾ ಮಾದರಿಯ ಪರವಾನಗಿ ಪಡೆಯಬೇಕಿತ್ತು. ಅಲ್ಲಿಂದ ಒಪ್ಪಿಗೆ ಬಂದ ನಂತರವೇ ಹಡಗಿನಲ್ಲಿ ಟಿಕೆಟ್ ದೊರೆಯುತ್ತಿದ್ದಿದು. ಕಾದೂ ಕಾದೂ ಒಂದು ದಿನ ಮೂಡಿಗೆರೆಯಲ್ಲಿದ್ದ ತಮಗೆ ಮದ್ರಾಸಿನಿಂದ ಫೋನ್ ಕಾಲ್ ಬಂದು ಇನ್ನೆರೆಡು ದಿನದಲ್ಲಿ ಹೊರಡಬೇಕೆಂದು ಟಿಕೆಟ್ ದೊರಕಿದೆಯಂದು ತಿಳಿದಾಗ ಹೇಗೋ ಎಲ್ಲರೂ ಸೇರಿ ಕಷ್ಟಪಟ್ಟು ಹಣ ಒದಗಿಸಿಕೊಂಡು, ಕೆಲಸ ಮಾಡುವಲ್ಲಿ ರಜೆ ಪಡೆದು ಮದ್ರಾಸಿಗೆ ಹೊರಟರು.

ತಾವು ಹೋಗಲಿರುವ ಹರ್ಷವರ್ಧನ ಹಡಗು ತಪ್ಪಿಹೋದಾಗ ತಮಗೆ ನಾನ್ ಕೌರಿ ಹಡಗಿನಲ್ಲಿ ಹೋಗಲು ಅನುಮತಿ ದೊರಕಿತು. ಆ ಹಡಗಿನ ಸ್ಥಿತಿಯನ್ನು ಕಂಡು ಭಯವಾಯಿತು ಆದರೆ ಅಧಿಕಾರಿಗಳಿಂದ ನಾನ್ ಕೌರಿ ಹಡಗೇ ಇರೋದ್ರಲ್ಲಿ ಉತ್ತಮ ಎಂದು ತಿಳಿದಾಗ ಸಮಾಧಾನವಾಯಿತು. ಮೊದಲೆಲ್ಲಾ ವಿದೇಶಕ್ಕೆ ಹೋಗುವವರು ಹಡಗಿನಲ್ಲೇ ಪ್ರಯಾಣ ಮಾಡುತ್ತಿದ್ದರು, ಇಲ್ಲಿ ಓಡಾಡಲು ವಿಶಾಲವಾದ ಜಾಗವಿರುವುದನ್ನು ಕಂಡು ಖುಷಿಯಾಯಿತು ಅಂತೂ ಭಾರತ ದೇಶವನ್ನು ಬಿಟ್ಟು ಹೊರಟಾಗ ಅವರಿಗಾದ ಅನುಭವ ಹೇಳತೀರದ್ದು. ನಾಲ್ಕು ದಿನ ಪ್ರಯಾಣ ಮಿತ್ರರ ಜೊತೆ ಮಾತನಾಡಿಕೊಂಡು, ಹರಟೆ ಹೊಡೆಯುತ್ತಾ, ಆಟವಾಡುತ್ತಾ ಆನಂದದಿಂದ ಕಳೆದರು. ಒಂದು ದಿನ ಸಮುದ್ರದಲ್ಲಿ ಹಾರುವ ಮೀನುಗಳನ್ನು ಕಂಡಾಗ ಆಶ್ಚರ್ಯವಾಗುತ್ತದೆ, ಮೊದಲು ಯಾವುದೋ ಹಕ್ಕಿಯಂದು ಭಾವಿಸಿ ಈ ಸಮುದ್ರದ ಮಧ್ಯದಲ್ಲಿ ಹಕ್ಕಿಯಾದರೂ ಹೇಗೆ ಬರಲು ಸಾಧ್ಯವೆಂದು ಹಾಗು ಇವು ಕಿಲೋಮೀಟರ್ ದೂರದವರೆಗೆ ಹಾರುತ್ತಿದ್ದಿದನ್ನು ಕಂಡು ಇದು ಹಾರುವ ಮೀನೆಂದೇ ಧೃಢಪಡಿಸಿಕೊಳ್ಳುತ್ತಾರೆ. ಅದೊಂದನ್ನು ಬಿಟ್ಟರೆ ಅವರಿಗೆ ಮತ್ಯಾವ ಜೀವಿಗಳೂ ಕಂಡುಬರಲಿಲ್ಲ, ಬೆಳಕಿಗೆ ಒಮ್ಮೆ ಶಾರ್ಕುಗಳು ಗುಂಪುಗುಂಪಾಗಿ ಬರುತ್ತವೆಂದು ಟಾರ್ಚ್ ಹಾಕಿ ನೋಡಿದರು ಏನೂ ಪ್ರಯೋಜನವಾಗಲಿಲ್ಲ. ಪ್ರಯಾಣದಲ್ಲಿರುವಾಗ ತಾವು ಬಿಟ್ಟ ಗಾಳಗಳಿಗೆ ಯಾವ ಮೀನೂ ದೊರಕಲಿಲ್ಲ. ಅಂತೂ ಪೋರ್ಟ್ ಬ್ಲೇರ್ ಬಂದು ಇಳಿದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ, ಅವರನ್ನು ಅಂಡಮಾನಿನಲ್ಲೇ ಇದ್ದ ತಮ್ಮ ಮಿತ್ರರಾದ ಪ್ರಶಾಂತ್ ಹಾಗು ಬೆಳವಾಡಿ ಬರಮಾಡಿಕೊಂಡರು.

ಯೂತ್ ಹಾಸ್ಟಲ್ ನಲ್ಲಿ ಇಳಿದು, ವಿಶ್ರಾಂತಿ ಪಡೆದು ನಂತರ ಯಾವ ಯಾವ ಪ್ರದೇಶಗಳಿಗೆ ಹೋಗಬೇಕೆಂದು ಚರ್ಚಿಸಿ ಎಲ್ಲರು ಕಡೆಗೆ ತೀರ್ಮಾನಿಸಿ ವೀಕ್ಷಿಸಲು ಹೊರಟರು. ಹಾಸ್ಟಲ್ಲಿನ ಎದುರೇ ನೇತಾಜಿ ಸುಭಾಷ್ ರವರ ಪ್ರತಿಮೆ ಕಂಡುಬಂದಿತು, ೨ನೆ ಮಹಾಯುದ್ಧ ಸಮಯದಲ್ಲಿ ನೇತಾಜಿಯವರು ಜಪಾನರೊಡಗೂಡಿ ಬ್ರಿಟೀಷರಿಂದ ವಿಮೋಚನೆ ಮಾಡಿದ ಮೊದಲ ಭಾರತದ ಭಾಗವೇ ಅಂಡಮಾನ್, ಅದರ ನೆನಪಿಗಾಗಿ ಆ ಪ್ರತಿಮೆ ಇಟ್ಟಿದ್ದರು. ಅಲ್ಲಿ ಜಿಂಕೆಗಗಳ ಶಿಕಾರಿ ಮಾಡುವ ಅವಕಾಶವಿತ್ತು ಕಾರಣ ಭಾರತದಿಂದ ಜಿಂಕೆಗಳನ್ನು ಅಂಡಮಾನಿಗೆ ತಂದುಬಿಟ್ಟಾಗ ಇವುಗಳನ್ನು ತಿಂದು ಬದುಕುವ ಮತ್ಯಾವ ಪ್ರಾಣಿಗಳೂ ಇಲ್ಲದ್ದರಿಂದ ಇವುಗಳ ಸಂಖ್ಯೆ ಹೆಚ್ಚಿದ್ದಿತು ಹಾಗು ಇವುಗಳ ಚರ್ಮವನ್ನು ಮಾರ್ಕೇಟಿನಲ್ಲಿ ರಾಶಿ ರಾಶಿ ಮಾರುವುದನ್ನು ಕಂಡು ಆಶ್ಚರ್ಯವಾಗುತ್ತದೆ. ದಕ್ಷಿಣ ಭಾರತದಲ್ಲಿ ಸಮುದ್ರ ಕಂಡು ಒಮ್ಮೆಲೆ ಅಂಡಮಾನಿನ ಸಮುದ್ರ ನೋಡಿದಾಗ ಆಶ್ಚರ್ಯವಾಗುತ್ತದೆ, ಅಂಡಮಾನಿನ ಸಮುದ್ರದಲ್ಲಿ ತುಂಬ ಆಳದವರೆಗೂ ತಳದ ಪ್ರತಿಯೊಂದು ಕಲ್ಲೂ ಮರಳಿನ ಕಣಗಳು ಕಾಣುತ್ತಿದ್ದವು ಹಾಗು ತಿಳಿಯಾದ ಹಸಿರು ಬಣ್ಣ ಮತ್ತೂ ಆಳದಲ್ಲಿ ನೀಲಿಯ ಬಣ್ಣ ರೀತಿ ಕಾಣುತ್ತಿತ್ತು. ಆ ತಿಳಿನೀರಿನಲ್ಲಿ ಬಗೆ ಬಗೆಯ ಮೀನುಗಳನ್ನೂ ಕಾಣುತ್ತಾರೆ. ಇತರರೆಲ್ಲರೂ ಅಂಡಮಾನ್ ಜೈಲು ನೋಡಲು ಹೋದಾಗ ತಾನು ಹಾಗು ಚಂದ್ರು ಮೀನನ್ನು ಹಿಡಿಯುವಲ್ಲಿ ಆಸಕ್ತರಾದಾಗ ಅವರ ಗಾಳಕ್ಕೆ ದೊರಕಿದ ಕಪ್ಪು ಮೀನು ಹಾಗು ಟಾರ್ನೆಡೋ ಕಂಡು ಅದರ ಬಗ್ಗೆ ಸಂಶೋಧನೆ ಮಾಡಲು ತೊಡಗಿದರು.

ಮರುದಿನ ಯೂತ್ ಹಾಸ್ಟೆಲ್ ಎದುರಿದ್ದ ರಾಸ್ ಐಲ್ಯಾಂಡ್ ವೀಕ್ಷಿಸಿದರು, ಅಲ್ಲಿ ಬ್ರಿಟೀಷರು ಕಟ್ಟಿಸಿದ ವಠಾರಗಳು, ಚರ್ಚು ಇನ್ನೂ ಕೆಲವು ಕಟ್ಟಡಗಳನ್ನು ನೋಡಿ ಅದ್ಭುತವಾಗಿದೆಯೆಂದು ಹೊಗಳಿದರು. ನಂತರ ವಂಡೂರಿಗೆ ಹೊರಟರು, ವಂಡೂರನ್ನು ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಿ ಅಲ್ಲಿ ಹವಳದ ಬಳ್ಳಿಗಳನ್ನು ಕೀಳುವುದು ಹಾಗು ಮೀನುಗಾರಿಕೆಯನ್ನು ನಿಷೇಧಿಸಿದ್ದರು. ಅಲ್ಲೇ ಸಮೀಪದಲ್ಲಿರುವ ಝರವಾ ಜನಾಂಗಗಳ ಬಗ್ಗೆಯೂ ತಿಳಿದುಕೊಂಡರು. ಇಡೀ ಅಂಡಮಾನು ಬರಿ ಕಗ್ಗಾಡು ಅಲ್ಲಿ ಒಂದೇ ಒಂದು ಕೃಷಿ ಕ್ಷೇತ್ರವೂ ಕಾಣುವುದಿಲ್ಲ. ಅಲ್ಲಿ ಪ್ರಮುಖರಾಗಿರುವವರೆಂದರೆ ಬಂಗಾಳಿಗಳು, ತಮಿಳರು, ಮಲಯಾಳಿಗಳು. *ಅಂಡಮಾನ್ನಲ್ಲಿ ಒಂದು ವಿಚಿತ್ರವಾದ ಏಡಿ ಇದೆ ಅದು ತೆಂಗಿನ ಮರ ಹತ್ತಿ ಕಾಯಿಗಳನ್ನು ಬೀಳಿಸಿ ಕೊಂಬಿನಿಂದ ತೆಂಗಿನ ಕಾಯಿಯನ್ನು ಕತ್ತರಿಸಿ ಅದರೊಳಗಿರುವ ತಿರುಳನ್ನು ತಿನ್ನುತ್ತದೆ, ಅದೇ ಅಂಡಮಾನ್ ಮಡ್ ಕ್ರ್ಯಾಬ್.* ಆ ತಿಳಿ ನೀರಿನಲ್ಲಿ ಹಲವಾರು ಲಾಬ್ ಸ್ಟರ್ ಗಳು ಕಂಡಾಗ ಆಶ್ಚರ್ಯವಾಗುತ್ತದೆ.

ನಂತರ ಚಿರಿಯಾ ಟಾಪುವಿಗೆ ಭೇಟಿ ನೀಡುತ್ತಾರೆ, ಅಲ್ಲಿ ಅಂತಹದ್ದು ಏನು ಇಲ್ಲದೆ ಬರಿ ರಾಜಕಾರಣಿಗಳ ವಸತಿಗಳನ್ನು ಕಂಡು ಬೇಸರವಾಗುತ್ತದೆ. ಆದರೆ ಮೀನು ಹಿಡಿಯಲು ಹೊರಟಾಗ ಅಲ್ಲಿ ವಿಚಿತ್ರವಾದ ನೀಲಿ ಮೀನು, ಶಾರ್ಕ್ ಹಾಗು ಅಕ್ಟೋಪಸ್ ಗಳನ್ನು ಕಂಡಾಗ ಅತ್ಯಾಶ್ಚರ್ಯವಾಗುತ್ತದೆ, ನಂತರ ವಂಡೂರಿಗೆ ಭೇಟಿ ನೀಡುತ್ತಾರೆ, ಅಲ್ಲಿರುವ ಸಮುದ್ರ ದಂಡೆಗಳು ಕೋರಾಲ್ ಅಥವಾ ಹವಳ ದಂಡೆಗಳಿಂದ ಕೂಡಿರುವುದನ್ನು ಕಾಣುತ್ತಾರೆ, ಈ ಹವಳದ ದಂಡೆಗಳು ಒಂದು ಬಗೆಯ ಸೂಕ್ಷ್ಮ ಜೀವಿಗಳಿಂದ ರೂಪಿಸಲ್ಪಡುತ್ತವೆ, ಸಮುದ್ರದಲ್ಲಿ ದೊರೆಯುವ ಕ್ಸಾಲ್ಸಿಯಂ ನಿಂದ ಕೋಶಗಳನ್ನು ನಿರ್ಮಿಸುತ್ತವೆ. ಅಲ್ಲಿ ಕಡಲಾಮೆಗಳನ್ನು, ಬಗೆ ಬಗೆಯ ಕೊರಾಲ್ ಗಳನ್ನು ಕಂಡು ಆನಂದ ಪಡುತ್ತಾರೆ.

ನಂತರ ಮಾಯಾಬಂದರ್ ಗೆ ಭೇಟಿ ನೀಡುತ್ತಾರೆ, ಇಲ್ಲಿ ಒಂದು ಕೆಸರಿನ ಜ್ವಾಲಾಮುಖಿ ಇದೆಯಂತೆ, ಅದರಲ್ಲಿ ಬೆಂಕಿ, ಲಾವಾ ಬರುವುದರ ಬದಲು ಬರೀ ಕೆಸರೇ ಉಕ್ಕುತ್ತಂತೆ ಎಂದು ತಿಳಿದುಕೊಳ್ಳುತ್ತಾರೆ. ಅಲ್ಲಿ ದೊಡ್ಡ ದೊಡ್ಡ ಮ್ಯಾಂಗ್ರೂ ಮರಗಳನ್ನೂ ಕಾಣುತ್ತಾರೆ ಇದು ಉಪ್ಪು ನೀರಲ್ಲೇ ಬೆಳೆಯುವ ಅದ್ಭುತವಾದ ಮರ, ಮ್ಯಾಂಗ್ರೋ ಮರಗಳು ನೀರಿಗಿಂತ ಎಷ್ಟೋ ಮೇಲೆ ಕಾಂಡ ಕವಲು ಕವಲಾಗಿ ಬೇರುಗಳಾಗಿ ರೂಪಗೊಂಡಿರುವುದನ್ನೂ ಕಾಣುತ್ತಾರೆ. ನಂತರ ದಿಗ್ಲಿಪುರಕ್ಕೆ ಭೇಟಿ ನೀಡುತ್ತಾರೆ, ಇಲ್ಲಿ ಪೆಕಾಡ್ ಎನ್ನುವ ಮರವನ್ನು ಕಾಣುತ್ತಾರೆ, ಇದು ಅಂಡಮಾನಿನ ಕಾಡುಗಳಲ್ಲಷ್ಟೇ ಬೆಳೆಯುವ ಮರ. ಅಲ್ಲಿ ಹಲವಾರು ಸಮುದ್ರದ ಜೀವಿಗಳನ್ನು ಕಾಣುತ್ತಾರೆ, ಅದರಲ್ಲಿ ವಿಷೇಶವಾದುದು ಸ್ಕ್ವಿಡ್ ಇದು ಅಕ್ಟೋಪಸ್ನಂತೆ ಜೋಳಿಗೆಯಂತೆ ಗುಂಡಗಿರುವುದಿಲ್ಲ ಉದ್ದವಾಗಿ ಈಟಿಯಂತಿದ್ದು ಅದರ ಎರಡು ತುದಿಗಳಲ್ಲೂ ಎರಡು ಪಾರದರ್ಶಕ ರೆಕ್ಕೆಗಳಿರುವುದನ್ನು ಕಾಣುತ್ತಾರೆ. ನಂತರ ಓಂಗೇ ಬೋಟಿನಲ್ಲಿ ಪೋರ್ಟ್ ಬ್ಲೇರ್ ಗೆ ತೆರಳುತ್ತಾರೆ, ಆ ಸಮಯದಲ್ಲಿ ಹಲವಾರು ಡಾಲ್ಫಿನ್ಗಳನ್ನು ಕಾಣುತ್ತಾರೆ. ಇಲ್ಲಿಗೆ ಅವರ ಪ್ರವಾಸ ಮುಕ್ತಾಯಗೊಳ್ಳುತ್ತದೆ.

ಸ್ನೇಹಿತರ ಜೊತೆ ಅಂಡಮಾನಿನಲ್ಲಿ ಕೆಲವು ಪ್ರದೇಶಗಳು, ಬಗೆ ಬಗೆಯ ಸಮುದ್ರ ಜೀವಿಗಳು, ಝರವಾ ಜನಾಂಗ ರೀತಿ ನೀತಿಗಳು, ಅಲ್ಲೇ ಬೆಳೆಯುವ ಕೆಲವು ಮರಗಳು, ಸ್ಥಳಗಳ ಬಗ್ಗೆ ಹಲವಾರು ಮಾಹಿತಿಗಳು, ತಿಳಿನೀರಿನ ಸಮುದ್ರದಲ್ಲಿ ತಮಗಾದ ಅನುಭವಗಳು, ಮೀನುಗಾರಿಕೆಯ ಬಗ್ಗೆ ತಮ್ಮ ಅನುಭವಗಳನ್ನು ತೇಜಸ್ವಿಯವರು ಸುಂದರವಾಗಿ ವಿವರಿಸಿದ್ದಾರೆ.

ಮಹಾನದಿ ನೈಲ್:
ನೈಲ್ ನದಿಯು ಬೆಟ್ಟಗಳ ತಪ್ಪಲಿನಿಂದ ಹರಿದು ಹಳ್ಳಕೊಳ್ಳಗಳನ್ನು ಸೇರಿ ಹಳ್ಳವಾಗಿ ನದಿಯು ಕೊನೆಗೆ ಮಹಾನದಿಯಾಗಿ ಮೆಡಿಟರೇನಿಯನ್ ಸಮುದ್ರಕ್ಕೆ ಸೇರುತ್ತದೆ. ಇದು ಸರಿ ಸುಮಾರು ೪೧೨೫ ಮೈಲುಗಲಷ್ಟು ದೂರ ಹರಿಯುತ್ತದೆ, ಈ ನದಿ ಎಲ್ಲಿಂದ ಹುಟ್ಟುತ್ತದೆಂದು ತಿಳಿಯಲು ಹಲವಾರು ಸಂಶೋಧಕರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಎಷ್ಟೋ ವರ್ಷ ಸಂಶೋಧನೆ ಮಾಡುತ್ತಾರೆ. ೧೭೭೦ ರಿಂದ ೧೮೫೬ ರವರಗೆ ನೈಲ್ ನದೀ ಮೂಲ ತಿಳಿಯಲು ತುಂಬಾ ಜನ ಸಾಹಸ ಮಾಡುತ್ತಾರೆ. ಹುಡುಕಲು ಹೊರಟಾಗ ಎದುರಾಗುವ ಅಡೆತಡೆಗಳು ಹಲವಾರು, ಆ ಅರಣ್ಯದಲ್ಲಿ, ಆ ನರಭಕ್ಷಕ ಕಾಡು ಜನರ ಮಧ್ಯದಲ್ಲಿ, ವಿಷಸರ್ಪಗಳಿಗೆ ಕ್ರಿಮಿಕೀಟಗಳಿಗೆ ತುತ್ತಾಗಿ ರೋಗ ಬಂದು ಕೆಲವರು ಪ್ರಾಣ ಕಳಕೊಂಡು ಇನ್ನು ಕೆಲವರು ಪ್ರಾಣಾಪಾಯದಿಂದ ಪಾರಾಗಿ ಹುಡುಕುತ್ತಾರೆ. ಮೊದಲು ಬರ್ಟನ್ ಹಾಗು ಸ್ಪೀಕೆ ಇಬ್���ರೂ ಸೇರಿ ಸಂಶೋಧನೆ ನಡೆಸುತ್ತಾರೆ. ಜಾಂಜಿಬರ್ ಆಫ್ರಿಕಾದಲ್ಲಿರುವ ಒಂದು ಚಿಕ್ಕ ದ್ವೀಪ ಅಲ್ಲಿಂದ ಹುಡುಕಲು ಶುರುಮಾಡುತ್ತಾರೆ, ಆ ಸಮಯದಲ್ಲಿ ಟಾಂಗಾನೀಕಿಯಾ ಮತ್ತು ನ್ಯಾನ್ಯಾ ಎಂಬ ೨ ಮಹಾಸರೋವರಗಳನ್ನು ಪತ್ತೆ ಹಚ್ಚಿ ಕಡೆಗೆ ಸ್ಪೀಕೆ ಎನ್ನುವವನು ನ್ಯಾನ್ಯಾ ಸರೋವರವೆ ನೈಲ್ ನದಿಯ ಮೂಲವೆಂದು ಪ್ರಚಾರ ಮಾಡಿ ಹೆಸರು ಗಳಿಸುತ್ತಾನೆ. ಆದರೆ ಅಷ್ಟು ಸುಲಭವಾಗಿ ಈತನ ಮಾತನ್ನು ಪರಿಗಣಿಸದಿದ್ದಾಗ ಸ್ಪೀಕೆ ಗ್ರಾಂಟ್ ಜೊತೆ ಸೇರಿ ಪುನಃ ಸಂಶೋಧನೆ ನಡೆಸುತ್ತಾನೆ ಆ ಸಮಯದಲ್ಲಿ ಖರಾಗ್ವೆ, ಬುಗಾಂಡಾ, ಬೊನ್ಯಾರೋ ಎಂಬ ೩ ಕಗ್ಗತ್ತಲೆ ರಾಜ್ಯಗಳನ್ನು ಪತ್ತೆ ಹಚ್ಚುತ್ತಾರೆ, ಅಲ್ಲಿ ಬೇಕರ್ ಎನ್ನುವವನನ್ನು ಭೇಟಿಯಾಗುತ್ತಾರೆ. ಬೇಕರ್ ತನ್ನ ಸ್ವಂತ ಹಣದಿಂದಲೇ ಆತನೂ ನೈಲ್ ನದಿಯ ಮೂಲವನ್ನು ಹುಡುಕುತ್ತಿರುತ್ತಾನೆ ನೈಲ್ ನದಿ ನ್ಯಾನ್ಯಾ ಸರೋವರದಿಂದ ಹೊರಟು ರಿಪ್ಪನ್ ಜಲಪಾತದಲ್ಲಿ ನೆಗೆದು ಕರಮ್ಮ ಎಂಬ ಜಲಪಾತಕ್ಕೆ ಸೇರುತ್ತದೆಂದು ಪತ್ತೆ ಹಚ್ಚುತ್ತಾನೆ, ಅಲ್ಲಿಂದ ದಿಕ್ಕನ್ನು ಬದಲಾಯಿಸಿ ಪಶ್ಚಿಮಕ್ಕೆ ಹರಡುತ್ತೆಂದು ಕಂಡುಕೊಳ್ಳುತ್ತಾನೆ.

ಪಶ್ಚಿಮ ದಿಕ್ಕಿನಲ್ಲಿ ಚಂದ್ರಪರ್ವತಗಳು ಟಾಂಗನೀಕಾ ಜಲಾಶಯ ಪ್ರದೇಶದಲ್ಲಿರುವುದರಿಂದ ಟಾಂಗನೀಕ ಸರೋವರದ ಪಶ್ಚಿಮದಲ್ಲಿ ಉತ್ತರಕ್ಕೆ ಹರಿಯುವ ಲುಲಾಬಾ ನದಿಯೇ ನೈಲ್ ನದಿಯ ಮೂಲವಿರಬಹುದೆಂಬುದು ಬೇಕರ್ ಹೇಳುತ್ತಾನೆ. ನಂತರ ಡೇವಿಡ್ ಲಿವಿಂಗ್ ಸ್ಟೋನ್ ಈ ಸಂಶೋಧನೆಯನ್ನು ಮುಂದುವರೆಸುತ್ತಾನೆ. ಆತನಿಗೂ ಕಂಡು ಹಿಡಿಯಲು ಸಾಧ್ಯವಾಗದಾಗ ಅಮೇರಿಕನ್ ಪತ್ರಕರ್ತನಾದ ಸ್ಟಾನ್ಲಿ ಸಂಶೋಧನೆ ಮುಂದುವರೆಸುತ್ತಾನೆ. ಆದರೆ ಲಿವಿಂಗ್ ಸ್ಟೋನ್ ಆಫ್ರಿಕಾದಲ್ಲಿ ಬರ್ಬರ ಗುಲಾಮ ವ್ಯಾಪಾರದ ಗುಟ್ಟನ್ನು ಕಂಡುಕೊಳ್ಳುತ್ತಾನೆ, ತನ್ನ ಪುಸ್ತಕಗಳಲ್ಲೂ ಬರೆದಿಡುತ್ತಾನೆ. ಕಡೆಯಲ್ಲಿ ಸ್ಟಾನ್ಲಿ ನೈಲ್ ನದಿಯ ಮೂಲದ ಬಗ್ಗೆ ಹಲವಾರು ವಾದ ವಿವಾದವನ್ನು ಬಗೆಹರಿಸುತ್ತಾನೆ, ಸ್ಪೀಕೆ ಊಹಿಸಿದ್ದೇ ನಿಜವೆಂದು ಸಾಬೀತುಪಡಿಸುತ್ತಾನೆ. ಅದು ನ್ಯಾನ್ಯಾ ಸರೋವರ ಅನೇಕ ಸರೋವರಗಳಿಂದ ಗುಂಪಾಗಿರದೆ ಒಂದೇ ಒಂದು ಮಹಾನ್ ಸರೋವರವಾಗಿತ್ತು ಆ ಸರೋವರದಿಂದ ನೀರು ರಿಪ್ಪನ್ ಜಲಾಶಯದಲ್ಲಿ ಮಾತ್ರ ಹರಿದುಹೋಗುತ್ತಿತ್ತು, ನ್ಯಾನ್ಯಾ ಸರೋವರವೇ ನೈಲ್ ನದಿಯ ಮೂಲ ಎಂದು ಸಾಬೀತುಪಡಿಸುವ ಸಮಯದಲ್ಲೇ ತನಗೆ ಅರಿವಿಲ್ಲದೇನೆ ಲುಲಬಾ ನದಿ, ಕಾಂಗೋ ನದಿಯ ಮೂಲವನ್ನೂ ಕಂಡುಕೊಂಡಿರುತ್ತಾನೆ. ಅಂತೂ ಎಷ್ಟೋ ವಾದ ವಿವಾದಗಳ ತರುವಾಯ ಅಮೇರಿಕನ್ ಪತ್ರಕರ್ತ ಸ್ಟಾನ್ಲಿ ನೈಲ್ ನದಿಗೆ ಸಂಬಂಧಪಟ್ಟ ಸಂದೇಗಳನ್ನ ಮುಕ್ತಿಗೊಳಿಸುತ್ತಾನೆ.

*ಕಾರ್ತಿಕೇಯ*



Profile Image for mahesh.
271 reviews26 followers
November 28, 2020
I really want to catch sea fish in the yellow sea, say hi to the happy blue dolphin in the middle of the sea, and share all my thoughts with the silence of the ancient sea after exploring the Tejawsi Travel story

Author Tejaswi has narrated a euphoric and satiating travel story around Andaman with his wittiness and adventurousness. 75% of the book revolves around Andaman(Union territory of India) and Tejawsi love for wilderness, the remaining 25 % is an essay on the Great river Nile revolving around the journey and saga of adventurers to find the birthplace of nile.

I enjoy Tejawsi works on nature, However, he continuously discredits everything about India and Hinduism in most of his book. There is nothing wrong with addressing the problem, But most of Tejaswi views have emerged from a Nehruvian socialistic ideology which boiled Indian under poverty even after independence. Tejawsi cynical thoughts about poverty might have erupted with compassion, But most of his views lack research and understanding of the root and cause.

Tejawsi is just like modern English educated youth who are trained to look down on everything about an indigenous culture which indirectly propagates the false idea of colonizers being a harbinger of civilization to hide their atrocities.

If you read his works on the Great river Nile in the book, Where he tried so hard to portray the English government as civilized culture, and the African community as barbaric and uncivilized.

Apart from his prejudice, I do like the rawness in his writings about nature, it takes me on a personal adventure in vivid imagination. Most of my traveling adventures are inspired by Tejaswi, He has shaped an adventurous mind in me with his love for nature and wilderness.

If I ever visit Andaman(I will for sure), I would like to immerse myself in the exploration of the never-ending ocean as Tejaswi did in his journey.
41 reviews
July 26, 2021
'Alemaariya Andaman Mattu Mahanadi Nile' is yet another fascinating book in Kannada by K.P. Poornachandra Tejaswi. The first part of the book is a travelogue on Andaman island where the author has also included some of Andaman's rich biodiversity making it all the more interesting. The second part is an essay on the history of discovery of the source of river Nile by various european explorers in the 19th century.

The vivid explanation of Andaman island along with anecdotes from writer's trip to the place kept me glued from page 1. The second part of the book touches upon living conditions in Africa in the 19th century when slavery and slave teade were rampant. Being in 21st century, it's hard to believe that hundreds of lives were lost in a quest on finding the source of a river! Reading about it was a reminder of the privileges we enjoy, be it better health care system or high speed internet connection or independence and democracy that we seem to have taken for granted.

The book deals with history, geography, biodiversity, human behaviour and ample humour filled stories on fishing. Highly highly highly reccommend this book to everyone.
April 16, 2024
ತೇಜಸ್ವಿ ಅವರ ಇತರ ಕಥೆಗಳಿಗಿಂತ ಬಹಳ ಭಿನ್ನವಾದ, ಅನ್ಯಮನಸ್ಕರಾಗಿ ಪ್ರಯಾಣಕ್ಕೆ ಹೋಗಿ, ಅಷ್ಟೇ ಅನ್ಯಮನಸ್ಕಾರಾಗಿ ಯಾರದೋ ಒತ್ತಾಯಕ್ಕೆ ಜೋತು ಬಿದ್ದು ಬರೆದ ಅನುಭವ ಲೇಖನದಂತೆ ಭಾಸವಾಯಿತು. ಅಂಡಮಾನಿನ ಸುಂದರ ಪರಿಸರವನ್ನು ಕಟ್ಟಲಾಗದೇ ವಿಫಲಗೊಂಡ ಒಂದು ಪ್ರಯಾಣದ ಅಧ್ಯಾಯವನ್ನು ದಾಖಲಿಸಿದಂತೆ ಬರೆದಂತೆ ಅನಿಸಿತು.
ಇನ್ನು ನೈಲ್ ನದಿಯ ವಿವರಗಳಂತೂ, ಸಮಾಜ ವಿಜ್ಞಾನದ ಕ್ಲಾಸಿನ ಆಕಳಿಸುವ ಮಧ್ಯಾಹ್ನಗಳ ನೆನಪನ್ನು ಮರುಕಳಿಸಲು ಅಷ್ಟೇ ಶಕ್ತವೆನಿಸಿತು.
3 reviews
April 25, 2019
Nice travel and discovery stories. Had great fun while reading.
1 review1 follower
August 3, 2020
ಕನ್ನಡದಲ್ಲಿ ಪ್ರವಾಸದ ಬಗ್ಗೆ ಬಂದಿರುವ ಕಾದಂಬರಿಗಳಲ್ಲಿ ಅದ್ಭುತವಾದ ಕೃತಿ
Profile Image for Punith Gc.
1 review
December 4, 2020
Am very excited to read this one.
This entire review has been hidden because of spoilers.
Profile Image for Ashwini.
35 reviews2 followers
December 22, 2022
ತೇಜಸ್ವಿಯವರ ಈ ಪುಸ್ತಕ ಕನ್ನಡ ಪ್ರವಾಸ ಕಥನ ಸಾಹಿತ್ಯದಲ್ಲೇ ಒಂದು ಮೈಲಿಗಲ್ಲು... ಪ್ರವಾಸ ಹೋಗುವವರ ದೃಷ್ಟಿಕೋನವನ್ನೇ ಬದಲಾಯಿಸಬಲ್ಲ ಶಕ್ತಿ ಈ ಪುಸ್ತಕಕ್ಕಿದೆ...
Profile Image for Sampat Badiger.
28 reviews
January 14, 2023
ತೇಜಸ್ವಿ ಅವರು ಯಾವುದೇ ವಿಷಯ ತೆಗೆದುಕೊಂಡರು ಅದರ ಬಗ್ಗೆ ಅದ್ಭುತವಾಗಿ ಬರೆಯುತ್ತಾರೆ. ನೈಲ್ ನದಿಯ ಬಗ್ಗೆ ಕೂತೂಹಲ ಕುರಿತು ತುಂಬಾ ಚೆನ್ನಾಗಿ ಬರೆದಿದ್ದಾರೆ....
10 reviews
December 7, 2025
ತೇಜಸ್ವಿ ಅವರ ಪ್ರವಾಸ ಕಥನ... ನಿರೂಪಣೆ ಎಂದಿನಂತೆ ಸೊಗಸಾಗಿದೆ...ನಾವೇ ಹೋಗಿ ಬಂದಂತಹ ಅನುಭವವಾಗುತ್ತದೆ....ಅಂಡಮಾನಿನ ಮತ್ತು ಮಹಾನದಿ ನೈಲ್ ತನ್ನೊಡಲಲ್ಲಿ ಇಟ್ಟುಕೊಂಡ ಹಲವು ವಿಸ್ಮಯ ಸಂಗತಿಗಳು ನಮ್ಮನ್ನು ಬೆರಗುಗೊಳಿಸುತ್ತವೆ.
4 reviews2 followers
November 15, 2015
Its a superb book gives knowledge about andaman and nile......
Profile Image for Vageesha.
54 reviews29 followers
April 12, 2017
[Rating: 5/4.5]

Being an adherent fan of K.P.P.T writings and his thoughts, I couldn't get from which point of the Book I have to start reviewing this Book.

Everything about this Book is beautiful; The way author narrates his experiences of his journey to Andaman and parallelly he links his journey experiences to some social issues we Indians have to get rid off - This Book surely inspires readers to visit Andaman.

"ಯಾರಿಗೆ ತಾವಿರುವಲ್ಲೇ ಸಂತೋಷ, ಉತ್ಸಾಹ, ಕೂತುಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದು ವ್ಯರ್ಥ"

"It's a waste of time to go places for one who doesn't to know how to find happiness, how to be curious in the place where he is"
-K.P. Poornachandra Tejaswi ಕೆ. ಪಿ. ಪೂರ್ಣಚಂದ್ರ ತೇಜಸ್ವಿ
-
Displaying 1 - 24 of 24 reviews

Can't find what you're looking for?

Get help and learn more about the design.