What do you think?

ಚೋಮನ ದುಡಿ | Chomana Dudi
ಖ್ಯಾತ ಕಾದಂಬರಿಕಾರ ಶಿವರಾಮ ಕಾರಂತರ ಕಾದಂಬರಿ-ಚೋಮನ ದುಡಿ. ಈ ಕಾದಂಬರಿಯು ಕಾರಂತರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು. ಸ್ನೇಹಿತರೊಬ್ಬರ ಮನೆಯ ಜಗುಲಿಯ ಮೇಲೆ ಕುಳಿತು ಬರೆದಿದ್ದ ಈ ಕಾದಂಬರಿಯ ಹಸ್ತಪ್ರತಿಯನ್ನು ಅಲ್ಲೇ ಬಿಟ್ಟು , ಯಾವುದೋ ಕೆಲಸಕ್ಕಾಗಿ ಮನೆಯೊಳಕ್ಕೆ ತೆರಳಬೇಕಾಗಿ ಬಂದಾಗ, ಬೀದಿಯಲ್ಲಿ ಮೇಯುತ್ತಿದ್ದ ದನವೊಂದರ ಕಣ್ಣಿಗೆ ಚೋಮನದುಡಿ ಕಾದಂಬರಿಯ ಹಸ್ತಪ್ರತಿ ಹುಲ್ಲಿನಂತೆ ಕಂಡಿರಬೇಕು! ಅವರು ಮನೆಯೊಳಗಿಂದ ಹೊರ ಬರುತ್ತಿದ್ದಂತೆ, ಅದು ಹಸುವಿನ ಒಡಲು ಸೇರಿತ್ತು. ಮಾನಸಿಕ ಆಘಾತವಾದರೂ ಅದೇ ಮನಸ್ಥಿತಿಯಲ್ಲೇ ಕಾದಂಬರಿಯನ್ನು ಮತ್ತೆ ಬರೆದರು. ಅದೇ-ಚೋಮನ ದುಡಿ.
ಅಸ್ಪೃಶ್ಯತೆಯ ವಿರುದ್ಧ ಇಪ್ಪತ್ತರ ದಶಕದಿಂದಲೇ ನಾಟಕ, ಕವನ, ಭಾಷಣ, ಚಲನಚಿತ್ರಗಳನ್ನು ರಚಿಸುತ್ತಿದ್ದ ಕಾರಂತರು, ಸಾಮಾಜಿಕ ಅನ್ಯಾಯ, ಅಸಮಾನತೆಯ ವಿರುದ್ಧ ಧ್ವನಿ ಎತ್ತಿ, ಭಾರತದ ಜಾತಿವ್ಯವಸ್ಥೆಯನ್ನು ವಿರೋಧಿಸಿದ್ದರು. ಅಸ್ಪೃಶ್ಯರು ಎದುರಿಸುತ್ತಿದ್ದ ಅನ್ಯಾಯಗಳ ವಿರುದ್ಧ ಕಾದಂಬರಿ ಮೂಲಕ ಧ್ವನಿ ಎತ್ತಿದ್ದ ಮೊದಲಿಗರು ಎಂಬ ಖ್ಯಾತಿ ಈ ಕಾರಂತರಿಗೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಆರ್ಥಿಕ ಸಮೀಕ್ಷೆಯಲ್ಲಿ ತೊಡಗಿದ್ದ ಕಾರಂತರು, ಆ ಜಿಲ್ಲೆಯ ಹೊಲೆಯರ ದಾರುಣ ಬದುಕನ್ನು ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
ಚೋಮ ಒಬ್ಬ ಅಸ್ಪೃಶ್ಯ. ಐದು ಮಕ್ಕಳೊಂದಿಗೆ ಬದುಕು ಸಾಗಿಸುವ ಆತ ಹೆಂಡದ ಅಮಲಿನಲ್ಲಿ ದುಡಿಯುತ್ತಿದ್ದ. ಈ ವೇಳೆ ‘ದುಡಿ’ ಬಾರಿಸುತ್ತಿದ್ದ. ಬ್ರಾಹ್ಮಣ ಧನಿ ಸಂಕಪ್ಪಯ್ಯನವರ ಹೊಲದಲ್ಲಿ ಕೂಲಿಯೂ ಮಾಡುತ್ತಿದ್ದ. ತನ್ನದೇ ಜಮೀನು ಹೊಂದಿ, ಬೇಸಾಯ ಮಾಡುವದು ಆತನ ಕನಸು. ಹೊಲೆಯರು ಬೇಸಾಯ ಮಾಡುವಂತಿಲ್ಲ. ಆದರೆ, ಈ ಕುರಿತು ಸಂಕಪ್ಪಯ್ಯನವರಿಗೆ ಕೇಳಿ ಅವಮಾನ ಹೊಂದುವುದು ಬೇಡ ಎಂಬುದು ಮಗಳು ಬೆಳ್ಳಿಯ ಸಲಹೆ. ಆದರೂ, ಈ ವಿಷಯ ಹೇಳಿ ಧನಿಯಿಂದ ಬೈಸಿಕೊಳ್ಳುತ್ತಾನೆ. ಪರವೂರಿನಲ್ಲಿದ್ದ ಹಿರಿಯ ಮಗ ಚನಿಯ ಮಲೇರಿಯಾ ಜ್ವರಕ್ಕೆ ತುತ್ತಾಗಿ ಊರಿಗೆ ಬಂದು ಸಾಯುತ್ತಾನೆ. ಕಿರಿಯ ಮಗ ಗುರುವ, ಕ್ರಿಶ್ಚಿಯನ್ ಹುಡುಗಿಗೆ ಮದುವೆಯಾಗಿ ಆ ಧರ್ಮಕ್ಕೆ ಮತಾಂತರಗೊಳ್ಳುತ್ತಾನೆ. ಸಾಲದ ಹೊರೆ ಹೆಚ್ಚುತ್ತದೆ. ತೋಟದಲ್ಲಿ ಮನ್ವೆಲನ ಕಾಮದಾಸೆಗೆ ಮಗಳು ಬೆಳ್ಳಿ ಬಲಿಯಾಗುತ್ತಾಳೆ. ಮಗಳಿಗೆ ಮದುವೆ ಮಾಡಲಾಗದೇ, ತಾನು ಬೇಸಾಯ ಮಾಡಲಾಗದೇ ಚೋಮ ತತ್ತರಿಸುತ್ತಾನೆ. ಒಂದು ದಿನ, ಮಕ್ಕಳಾದ ಕಾಳ ಹಾಗೂ ನೀಲನನ್ನುಸ್ನಾನಕ್ಕಾಗಿ ತೋಡಿಗೆ ಕರೆದೊಯ್ಯುತ್ತಾನೆ. ನೀಲ ನೀರಿನಲ್ಲಿ ಮುಳುಗುತ್ತಿದ್ದಾಗ, ಜಾತಿ ಅಡ್ಡ ಬರುತ್ಬಂತದೆ. ನೀಲ ಸಾಯುತ್ತಾನೆ. .
ನಂತರ, ಚೋಮನ ಬೇಸಾಯದ ಕನಸು ಮರುಕಳಿಸುತ್ತದೆ. ಕ್ರೈಸ್ತ ಮತಕ್ಕೆ ಸೇರಲು ನಿರ್ಧರಿಸುತ್ತಾನೆ. ಆದರೆ, ಬೇಸಾಯದ ಆಸೆ ಕೈಗೂಡುವುದಿಲ್ಲ. ಮಗಳು ಬೆಳ್ಳಿ, ಮನ್ವೇಲನೊಂದಿಗೆ ಇದ್ದಿದ್ದು ತನಗೆ ಮಾಡಿದ ವಂಚನೆ ಎಂದು ತಿಳಿಯುತ್ತಾನೆ. ‘ಮಕ್ಕಳು ಹಾಗಾಗಲಿ...ಹೀಗಾಗಲಿ’ ಎಂದು ‘ಅವರು ಹೇಗಾದರೇನಂತೆ? ತನಗೇನು’ ಎಂದು ವಿಕಟವಾಗಿ ನಗುತ್ತಾ. ನಗುತ್ತಾ ‘ದುಡಿ’ಯನ್ನು ಜೋರು ಜೋರಾಗಿ ಬಾರಿಸುತ್ತಾನೆ. ಬೇಸಾಯಗಾರನಾಗುವ ಆಸೆಯೂ ಕಮರಿದ್ದ ಚೋಮನ ಮನಸ್ಥಿತಿ, ‘ದುಡಿ’ಯನ್ನು ಬಾರಿಸುತ್ತಲೇ ಜೀವ ಕಳೆದುಕೊಳ್ಳುತ್ತದೆ ಎಂಬ ಸಂಕೇತದೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. .

112 pages, Paperback
First published June 1, 1978
About the author
Kota Shivarama Karanth
108 books459 followersKota Shivaram Karanth was a Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been one of the finest novelists-activists since independence"by Ramachandra Guha. He was the third person among eight recipients of Jnanpith Award for Kannada the highest literary honour conferred by the Govt. of India.
Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.
Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.
He has received several literary awards,.Namely, Jnanpith Award, Padma Bhushan, Sahitya Academy award and Pampa Award.
He passed away on 9th December 1997 in Manipal, Karnataka.

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 30 of 98 reviews
July 4, 2015
ಮಹತ್ವಾಕಾಂಕ್ಷೆಗಳ ಬೆಲೆ ಏನು? ಅದರಲ್ಲಿ ನಿಮ್ಮ ಜನ್ಮಾದೃಷ್ಟದ ಬೆಲೆ ಎಷ್ಟು ಕಟ್ಟಬೇಕು? ಅದೃಷ್ಟದ ಪಾತ್ರ ಎಷ್ಟು?
ಕಾಡಿನಲ್ಲಿ ಎರಡು ಎತ್ತು ಕರುಗಳು ಚೋಮನಿಗೆ ಸಿಗುತ್ತವೆ, ಅಷ್ಟು ಅವನ ಅದೃಷ್ಟ. ಆ ಎತ್ತುಗಳು ಬೆಳೆಯುತ್ತಲೇ ಅವನ ಆಕಾಂಕ್ಷೆಗಳೂ ಬೆಳೆಯುತ್ತವೆ, ರೈತನಾಗಬೇಕೆಂದು, ಸ್ವಲ್ಪ ಜಮೀನು ಗೇಣಿಗೆ ಪಡೆದು ಬೇಸಾಯ ಮಾಡಬೇಕೆಂದು. ಆದರೆ ಅವನು ಕೇಳುಜಾತಿಯ ಹೊಲೆಯ, ಅದು ಅವನ ದುರಾದೃಷ್ಟ. ಇವೆಲ್ಲರ ಮೇಲೆ ಹೆಂಡದ ಪ್ರಭಾವ, ಅದರ ದುರಾದೃಷ್ಟ. ಹೀಗೆ ಅದೃಷ್ಟ ದುರಾದ್ರುಷ್ಟಗಳ ಲೇಲೆಯಾಟವೆ ಈ ಕಥೆ.
ಅವನ ಧಣಿ ಸಂಕಪ್ಪಯ್ಯ ಒಳ್ಳೆಯವರು, ಅವನ ಪರಿಸ್ಥಿತಿಯನ್ನೂ ಆಕಾಂಕ್ಷೆಗಳನ್ನೂ ಅರಿತವರು. ಚೆನ್ನಾಗಿ ದುಡಿಯುವ ಚೋಮನಿಗೆ ಗೇಣಿ ಕೊಟ್ಟರೆ ಒಳ್ಳೆಯದೇ ಎಂದು ಯೋಚಿಸುವವರು. ಆದರೆ ಅವರ ತಾಯಿ ಹೊಲೆಯರಿಗೆ ಬೇಸಾಯ ಮಾಡಬಿಡಲು ಒಪ್ಪುವುದಿಲ್ಲ. ಚೋಮನ ಮಗ ನದಿಯಲ್ಲಿ ಬಿದ್ದು ಮುಳುಗುತ್ತಾನೆ, ನೋಡುತ್ತಿರುವ ಬ್ರಾಹ್ಮಣರಲ್ಲಿ ಒಬ್ಬ ಯುವಕ ಕಾಪಾಡಲು ಮುಂಬರುತ್ತಾನೆ, ಆದರೆ ಅವನ ಹಿರಿಯರು ತಡೆದುಹಿಡಿಯುತ್ತಾರೆ. ಮತ್ತೆ ಜಾತಿಯ ಆಟ. ದೂರದ ತೋಟಕ್ಕೆ ಕಾಫಿ ಎಸ್ಟೇಟಿಗೆ ಹೋಗಿ ಮಾಡಿದ ಸಾಲ, ತೀರಿಸಲು ಹೋದ ಮಕ್ಕಳು ಏರಿಸಿ ಬರಲು, ಎರಡಕ್ಕೂ ಕಾರಣ ಹೆಂಡ. ಅದರದೇ ಪಕ್ಕದಲ್ಲಿ ಆಟ.
ಕಥೆ ೧೯೩೦ರ ಇಸವಿಗಳಲ್ಲಿ ನಡೆಯುತ್ತಿರುವುದು. ಆದರೆ ಈಗ ಎಷ್ಟು ಮುಂದೆವರಿದಿರುವೆವು ಎಂಬ ಪ್ರಶ್ನೆ ಕಾಡುತ್ತದೆ. ಪ್ರತಿ ಕೇರಳ ಕರ್ನಾಟಕಕ್ಕೂ ಯೂ.ಪೇ ಬಿಹಾರದಂಥ ಪ್ರದೇಶಗಳು ಇನ್ನೂ ಇವೆ. ಆದರು ಕಾರಂತರು ಭವಿಷ್ಯದಲ್ಲಿ ವಿಶ್ವಾಸ ಹುತ್ತಿಸುತ್ತಾರೆ - ಸಂಕಪ್ಪಯ್ಯ, ಮತ್ತು ಚೋಮನ ಮಗನನ್ನು ಕಾಪಾಡಲಾರದೆ ಅವನ ಶವವನ್ನಾದರು ತರಲು ತಡೆಹಿಡಿಯುವ ಹಿರಿಯರನ್ನು ತಿರಸ್ಕರಿಸುವ ಬ್ರಾಹ್ಮಣ ಯುವಕರ ಮೂಲಕ ಮುಂದಿನ ಯುವಪೇಡಿಗೆಯಲ್ಲಿ.
ಕಾರಂತರ ಬರಹ ಪಶ್ಚಿಮ ಗಟ್ತಗಳ ಸೌಂದರ್ಯದ ಜೊತೆ ಹೊಳೆಯರ ಹೊಟ್ಟೆಪಾಡಿನ ವ್ಯಂಗ್ಯವನ್ನು ಶ್ರಮವಿಲ್ಲದೆ ಎತ್ತಿಹಿಡಿಯುತ್ತದೆ. ಅದು ಅವರ ಪ್ರತಿಯೊಂದು ಪುಸ್ತಕದ ಲಕ್ಷಣ!
೧೨೦ ಪುಟಗಳಲ್ಲಿ ಇದು ಚಿಕ್ಕ ಪುಸ್ತಕ! ದುಃಖ್ಖದ ಬಾರದಿಂದ ತೂಗುವ ಕಥೆಯಾದರೂ ಬೇಗನೆ ಸಾಗುತ್ತದೆ! ಎಂದಿನ ಹಾಗೆ ಶಿಫಾರಿಸಲ್ಪಡುತ್ತದೆ!

December 12, 2024
ಇದು ನಾ ಓದುತ್ತಿರುವ ಶಿವರಾಮ ಕಾರಂತರ ಮೊದಲನೆಯ ಕಾದಂಬರಿ. ಹಿಂದೆ ಕೆಲವು ಕಥಾಸಂಕಲನಗಳ ವಿಮರ್ಶೆ ಮಾಡಿದ್ದೇನೆ, ಅಲ್ಲೇ ಗೊತ್ತಾಯಿತು ಕಾರಂತರ ಆಸಕ್ತಿ ಏನು ಅಂತ. ಈ ಪುಸ್ತಕ ಓದುವಾಗ ಅದು ನಿಖರವಾಯಿತು.
ಸಮಾಜದಲ್ಲಿರೋ ಏರುಪೇರುಗಳ ಚಿತ್ರಣ ಸೊಗಸಾಗಿ ಮನಸ್ಸು ಮುಟ್ಟುವಂತೆ ಹೃದಯ ತಟ್ಟುವಂತೆ ಗೀಚ್ತಾರೆ ಕಾರಂತರು. ಅಂತಹ ಒಂದು ಚಿತ್ರಣವೇ 'ಚೋಮನ ದುಡಿ'.
ಮೊದಲನೇ ಅಧ್ಯಾಯದಲ್ಲಿ ಭೋಗನಹಳ್ಳಿಯ ವಿವರಣೆ ರೋಮಾಂಚನಗೊಳಿಸಿತು. ಯಾಕೋ ಗೊತ್ತಿಲ್ಲ ಇನ್ನು ಎರಡು ಬಾರಿ ಮರು ಓದಿದೆ. ವಾತಾವರಣ ಕಣ್ಮುಂದೆ ಸೃಷ್ಟಿಸಿರೋ ಪರಿ ಅಂತಹದ್ದು.
ಜಾತಿ ಅನ್ನೋದು ಮನುಜನನ್ನು ಭೀಕರವಾಗಿ ಕಟ್ಟಿ ಹಾಕ್ದಾಗ ಅವನು ಕಾಲಕ್ಕೆ ತಕ್ಕಂತೆ ನಡೆಯೋಕ್ಕಾಗಲ್ಲ, ಮನಸ್ಸು ಬಯಸಿದಂತೆ ಮಾಡಕ್ಕಾಗಲ್ಲ, ಎಲ್ಲವೂ ಆ ಜಾತಿ, ಅದ್ರ ಜೊತೆ ಹುಟ್ಟಿರೋ ನೀತಿ ನಿಯಮಗಳಿಗೆ ಕೈಗೊಂಬೆಯಾಗುತ್ತಾನೆ. ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತವೆ, ಜೀವನ ಅಸ್ತವ್ಯಸ್ತವಾಗುತ್ತದೆ.
ಚೋಮ ಆಡೋ ದುಡಿ ಅವನ ಮನಸ್ಸಿನ ಪ್ರತಿಬಿಂಬ. ಆ ವಾದ್ಯಕ್ಕೆ ಯಾವ ರಾಗವೂ ಇಲ್ಲ, ಆದರೂ ಅವನು ಅದನ್ನು ನುಡಿಯೋವಾಗ ಅವನ ಮನಸ್ಸಿನ ಸ್ಥಿತಿ ಸೂಚಿಸುತ್ತದೆ. ಖುಷಿಯಾದಾಗ, ನೋವಿನಲ್ಲಿದ್ದಾಗ, ಸಿಟ್ಟಾದಾಗ, ಭರವಸೆಯ ಕಿರಣ ಚಿಮ್ಮಿದಾಗ, ಅದೇ ಕಿರಣ ಬಾಡಿಹೋದಾಗ, ಹೀಗೆ.
ದುಃಖ ಉಮ್ಮಳಿಸಿ ಪದೇ ಪದೇ ಸಂಭವಿಸುವುದೇ ಈ ಕತೆಯ ಮೂಲ. ಆ ದುಃಖವೆಂಬೋ ಸುರಂಗದ ಕೊನೆಯಲ್ಲಿ ಬೆಳಕಿದಿಯೋ ಇಲ್ಲವೋ ಅನ್ನೋದೇ ಈ ಕಾದಂಬರಿಯ ಮುಖ್ಯಾಂಶ.
ರೇಟಿಂಗ್ - ⭐⭐⭐⭐⭐

January 30, 2026
ಚೋಮನ ದುಡಿ ಎಂಬುದು ಕನ್ನಡ ಸಾಹಿತ್ಯದ ಒಂದು ಶ್ರೇಷ್ಠ ಚಿತ್ರಣವಾಗಿದೆ — ಅದು ಒಂದು ವ್ಯಕ್ತಿಯ ಬದುಕಿನ ವ್ಯಥೆ ಮಾತ್ರವಲ್ಲ, ಕಷ್ಟ , ಬಡತನ ಹಾಗೂ ಸಮಾಜದ ಮೂಲಭೂತ ಅಸಮಾನತೆಗಳ ಹಾಳೆಯೂ ಆಗಿದೆ.
ಈ ಕಾದಂಬರಿಯ ನಾಯಕ ಚೋಮ ಎನ್ನುವ ಒಬ್ಬ ಹೋಲೆಯ (ಅನ್ಸ್ಪರ್ಶ್ಯ ವರ್ಗ) ವ್ಯಕ್ತಿ, ರೈತನಾಗಿ ಬದುಕಬೇಕೆಂಬ ಕನಸು ಕಾಣುತ್ತಾನೆ. ಆದರೆ ಸಮಾಜದ ಪರಂಪರೆ ಮತ್ತು ಕೂಲಿಕೆಯ ಅಡ್ಡಿ ಅವನ ಕನಸನ್ನು ಒಪ್ಪಿಸಲು ಬಿಡುವುದಿಲ್ಲ.

September 11, 2023
ಶಿವರಾಮ ಕಾರಂತರು ದಕ್ಷಿಣ ಕನ್ನಡದಲ್ಲಿ ಬಾಳಿ ಬದುಕಿದ್ದರಿಂದ ಹೊಲೆಯರ ಆರ್ಥಿಕ, ಮಾನಸಿಕ, ಸಾಮಾಜಿಕ ಪರಿಸ್ಥಿತಿ ಅರಿತು ಪಾತ್ರಗಳನ್ನು ನೈಜವಾಗಿ ಸೃಷ್ಟಿಸಿರುವುದರಿಂದಲೇ ಇದೊಂದು ಅದ್ಭುತ ಕಾದಂಬರಿಯಾಗಲು ಕಾರಣ. ಮನೆಯಲ್ಲಿ ಬೇಜವಾಬ್ದಾರಿ ತಂದೆಯನ್ನು ಸಂಭಾಳಿಸಿಕೊಂಡು ಮನೆಯವರನ್ನು ಸಾಕಿ ಸಲಹುವ ಚೋಮನ ಮಗಳಾದ ಬೆಳ್ಳಿಯ ಬವಣೆಗಳು ಮನಸ್ಸನ್ನು ಕಲಕುವಂತಿದೆ. ಭೈರಪ್ಪನವರ ಗೃಹಭಂಗದ ಕಾದಂಬರಿಯು ಈ ಚೋಮನ ದುಡಿಗೆ ಸ್ವಲ್ಪ ಸ್ವಾಮ್ಯ ಇದ್ದಂತಿದೆ.
June 13, 2022
ಶಿವರಾಮ ಕಾರಂತರ "ಚೋಮನ ದುಡಿ" ನಾನು ಒಂದೇ ಗುಟುಕಿನಲ್ಲಿ ಓದಿ ಮುಗಿಸಿದ ಮೊದಲ ಕಾದಂಬರಿ. ಕಾರಣ, ಕಾದಂಬರಿಯ ಕಥಾವಸ್ತು ಮತ್ತು ಕಥಾನಾಯಕ "ಹೊಲೆಯರ ಚೋಮ". ಕಾದಂಬರಿಯ ಪುಟಗಳ ಸಂಖ್ಯೆಯೂ (೧೨೦) ಹೌದು.
ಕಾರಂತರು ದಕ್ಷಿಣಕನ್ನಡ ಜಿಲ್ಲೆಯ ಹೊಲೆಯರ ದಾರುಣ ಬದುಕನ್ನು, ೧೯೩೦-೪೦ರ ಸಾಮಾಜಿಕ ಸ್ಥಿತಿಗತಿಗಳನ್ನು, ಅಸ್ಪೃಶ್ಯತೆ ಹಾಗೂ ಜೀತಪದ್ಧತಿಯನ್ನು ಚೋಮನೆಂಬ ಹೊಲೆಯನ ಜೀವನ ಕಥೆಯ ರೂಪದಲ್ಲಿ ಚಿತ್ರಿಸಿದ್ದಾರೆ.
ಇದೊಂದು ೩ ಗಂಟೆಗಳಲ್ಲಿ ಓದಿ ಮುಗಿಸಬಹುದಾದ ಕಿರುಕಾದಂಬರಿ, ಆದರೆ ಚೋಮನಿಗಾಗುವ ಹತಾಶೆ ಹಾಗೂ ಅವನ ಅಸಹಾಯಕತೆ ನಿರಂತರವಾಗಿ ನಮ್ಮನ್ನು ಕಾಡುತ್ತದೆ.
"ನಿತ್ಯವೂ ಒಂದಲ್ಲ ಒಂದು ಆಪತ್ತು ಬರುವಾಗ, ಪ್ರತಿಯೊಂದನ್ನೂ ಮನಸ್ಸಿಗೆ ಹಚ್ಚಿಕೊಳ್ಳಲು ಬರುವಂತಿಲ್ಲ. ನಿತ್ಯ ಅಫೀಮನ್ನು ತಿನ್ನುವವರಿಗೆ ಸಾಧಾರಣ ಆಫೀಮಿನಿಂದ ಅಮಲು ತಗುಲುವುದಿಲ್ಲ. ದುಃಖವಾದರೂ ಅಷ್ಟೇನೆ."

January 26, 2025
போகனஹள்ளி கிராமத்தில் சங்கரய்யா பண்ணையில் கூலி அடிமையாக இருக்கும் தாழ்ந்த குடியை சேர்ந்த புலையன் சோமன் ஐந்து பிள்ளைகளோடு வறுமையோடு குடி இருக்கிறார். பண்ணை வேலைக்கு இருக்கும் சோமனுக்கு கிடைக்கக்கூடிய ஊதியம் ஒரு படி நெல் மட்டுமே அந்த ஒரு படி நெல்லை வைத்துக்கொண்டு ஆறு நபர்கள் பசியும் பட்டினியமாக வாழ்க்கையை கடத்துகிறார்கள். சோமன் தன் வாழ்நாளில் ஒரு துண்டு நிலத்தை யாவது உழுது விவசாயியாக ஆக வேண்டும் என்று பெரும் கனவே இருக்கிறான்.
" நான் கலப்பை பிடிக்கக் கூடாது என்றால் இன்னொருவருக்காக மட்டும் ஏன் கலப்பை படிக்க வேண்டும் ? "
ஆனால் சங்கரய்யா சோமனுக்கு நிலம் கொடுக்க நினைத்தாலும் ஊர் கட்டுப்பாடும் நடைமுறைகளும் அவரின் தாயாரும் அவரை தடுத்து விடுகிறார்கள். கிறிஸ்தவ மதத்திற்கு சென்றால் நிலம் கிடைக்கும் என்று நிலை வரும்போது தன் இனம் விட்டு போக சோமன் விரும்ப வில்லை. ஆனால் அவரின் மகன் கிருத்துவ மத பெண்ணை திருமணம் செய்த போது தன் சாதி விட்டு போனவன் செத்து போய்டான் என்னும் சோம தன் சாதியையும் அதே நேரம் சங்கரய்யாவையும் உதர முடியாமல் தவிக்கிறான். வாழ்வது தன் கொடூர முகத்தை காட்டும் போது சோமனுக்கு இருக்கும் ஒரே பற்று உடுக்கை. தனது இயலாமையையும் ஆற்றாமையும் உடுக்கையை வெறி கொண்டு அடித்து, பாடி சமாதானப்படுத்திக் கொள்கிறான். அவனுக்கு இருக்கும் ஒரே ஆறுதல் அவன் உடுக்கை தான். பிள்ளைகளின் இழப்பு ஒரு பக்கம் வறுமை ஒரு பக்கம் வாழ்வு தனது கோரத்தை காட்டுகிறது , சோம தன் மகனுக்கு திருமணம் செய்ய வேண்டும் என்று நினைக்கிறான் ஆனால் எல்லாவற்றையும் விட மூத்த மகள் பெள்ளி பற்றி எந்த நினைப்பும் இல்லை. பெள்ளி மன்வேல் உடன் பழக்கம் ஏற்பட்ட பின்பே தனது தவறை உணர்ந்து வருந்துகிறான். இறுதியில் சோமா தனது கலப்பையை எருதை வைத்து விவசாயி ஆனானா இல்லையா என்பது நாவல் இறுதி. இவ்வளவு வறுமையிலும் விட்டுக்கு வந்த விருந்தாளிகளை கவனிக்கும் இடம் சிறப்பாக இருந்தது. இது நம்மிடம் கூட இல்லாத ஒரு பண்பு இது..
சிவராம கரந்த கன்னட இலக்கியத்தின் மகத்தான படைப்பாளி.

November 13, 2024
"ನಿತ್ಯವೂ ಒಂದಲ್ಲ ಒಂದು ಆಪತ್ತು ಬರುವಾಗ, ಪ್ರತಿಯೊಂದನ್ನೂ ಮನಸ್ಸಿಗೆ ಹಚ್ಚಿಕೊಳ್ಳಲು ಬರುವಂತಿಲ್ಲ. ನಿತ್ಯ ಅಫೀಮನ್ನು ತಿನ್ನುವವರಿಗೆ ಸಾಧಾರಣ ಆಫೀಮಿನಿಂದ ಅಮಲು ತಗುಲುವುದಿಲ್ಲ. ದುಃಖವಾದರೂ ಅಷ್ಟೇನೆ."
ಮೂರು ಗಂಟೆಯ ಒಳಗೆ ಓದಿ ಮುಗಿಸಬಹುದಾದ 120 ಪುಟಗಳ ಒಂದು ಕಿರುಕಾದಂಬರಿ ’ಚೋಮನ ದುಡಿ‘. ಇಡೀ ಕಥೆ ಹತಾಶೆ ಮತ್ತು ಅಸಹಾಯಕತೆಗಳ ನಡುವೆ ಜೀವಿಸುವ ಚೋಮ ಹಾಗೂ ಚೋಮನ ಮಗಳು ಬೆಳ್ಳಿಯ ಸುತ್ತ ಸುತ್ತುತ್ತದೆ. ಒಲೆಯರ ಜೀವನ ಶೈಲಿಯ ಅನಾವರಣದ ಜೊತೆಗೆ ನೋವು ನಲಿವುಗಳ ಸಂಕೇತ ಹಾಗೂ ಚೋಮನ ಒಂದೇ ಒಂದು ಆಸರೆ ಚೋಮನ ದುಡಿ ಸದ್ದು ಇಡೀ ಕಥೆಯುದ್ದಕ್ಕೂ ಕೇಳಿ ಬರುತ್ತದೆ. ಇದು twist ಓದುಗನ ಸೆಳೆಯುವ ತಂತ್ರಗಳಿಲ್ಲದ, ಮನಕುಲುಕುವ ಕಥೆ. ಇಂದಿಗೂ ಜಾತಿ ಬಿಡದ ನಮ್ಮ ಸಮಾಜಕ್ಕೆ ನೂರು ವರ್ಷದಲ್ಲಿ ಏನೂ ಪ್ರಗತಿಯಿಲ್ಲ ಎಂದು ತೋರಿಸುವ ಒಂದು ಕನ್ನಡಿಯಂತೆ.

January 22, 2022
ಹಿಡಿದ ದುಡಿ, ಎತ್ತಿದ ಕೈ, ತುಂಬಿದ ಆವೇಶ! ಎಲ್ಲವೂ ಇದಕ್ಕಿದ್ದಂತೆಯೇ ಇವೆ, ಆದರೆ ಚೋಮನಿಲ್ಲ!
ಈ ಸಾಲು ಓದುವಾಗ ಮನಸ್ಸಿಗೆ ಒಂತರಹದ ನೋವಾಯಿತು, ಪುಸ್ತಕದ ಮೊದಲಿನಿಂದ ಕೊನೆಯವರೆಗೂ ಚೋಮ ಬೇಸಾಯ ಮಾಡಲು ಪಡುವ ಪ್ರಯತ್ನಗಳು, ನಡುವೆ ಮಕ್ಕಳ ಸಾವು, ಸಾಲ ತೀರಿಸಲು ಮಕ್ಕಳನ್ನು ತೋಟಕ್ಕೆ ಕಳುಹಿಸುವುದು, ಕೊನೆಗೆ ಕ್ರಿಶ್ಚಿಯನ್ ದರ್ಮಕ್ಕೆ ಸೇರಿದರೆ ಬೇಸಾಯ ಮಾಡಲು ಅವಕಾಶ ಸಿಗಬಹುದು ಎಂದು ನಂಬಿದವ ಮತ್ತೆ ಪಂಜುರ್ಲಿ ಬೂತಕ್ಕೆ ಅಂಜಿ ಮತ್ತೆ ತನ್ನ ಜಾತಿಗೆ ಸೇರುವ ಪ್ರತಿ ಗಟನೆಗಳು ತುಂಬಾ ಮನಸ್ಸಿಗೆ ಅಂಟುತ್ತವೆ.

May 19, 2024
"ಕುಲದ ದೇವರನ್ನು ನಂಬಿ, ತನ್ನ ಆಸೆ ಕೈಗೂಡದ ಮೇಲೆ, ಪ್ರಾದಿಯ ದೇವರನ್ನು ನಂಬಿದರೇನು ಹಾನಿ"
ಊರ ದಣಿಯರಿಗೆ ಕರುಣೆ ಅನುಕಂಪ ಕೊಟ್ಟ ದೇವರಿಗೆ. ಕಾಡಿನಲ್ಲಿ ಎತ್ತುಗಳನ್ನು ತೋರಿಸಿದ ದೇವರಿಗೆ; ಒಂದು ಗೇಣು ಬೇಸಾಯ ಮಾಡಲು ನೆಲ ಕೊಟ್ಟಿದ್ದರೆ ಅವನ ಶಕ್ತಿ ಕಳೆದುಹೋಗುತ್ತಿತ್ತೆ?
ಬೆಳ್ಳಿಯ ತ್ವಚೆಯನ್ನು ಹಿಂದುಮುಂದು ನೋಡದೆ ಆಲಿಸುವ ದೊರೆ, ದಣಿ, ಸೇರುಗಾರನಿಗೆ; ನೀರಲ್ಲಿ ಮುಳುಗುತ್ತಿರುವ ಮಗುವನ್ನು ಕಾಪಡಿವಾಗ ಮಾತ್ರ ತನ್ನ ಜಾತಿ ಜ್ಞಾಪಕವಾಗುತ್ತದಯೇ?
ಮನುಷ್ಯ ತನಗೆ ಬೇಕಾದ ನಿಯಮಗಳನ್ನು ರೂಪಿಸಿಕೊಂಡು, ದೌರ್ಜನ್ಯವನ್ನು ಪಾವಿತ್ರತೆಗೆ ಹೋಲಿಸಿ, ತನ್ನ ಹೊಟ್ಟೆ ತುಂಬೀಸ್ಕೊಳ್ಳುವ. ಹಾಗೂ ದೌರ್ಜನ್ಯಕ್ಕೆ ಒಳಗಾದ ಚೋಮನ ಕಥೆಯನ್ನು ಕಾರಂತರು ಬಹಳ ಸೂಕ್ಷ್ಮವಾಗಿ ನಮ್ಮ ಮುಂದೆ ಇಟ್ಟಿದಾರೆ.

October 21, 2018
ಓದು ಮುಗಿದ ಮೇಲೂ, ಚೋಮ ಪಕ್ಕದಲ್ಲೇ ಕೂತು ದುಡಿಯ ನುಡಿಸುತ್ತಿದ್ದಾನೆ ಅನ್ನಿಸ್ತಾ ಇದೆ.. ಕಿವಿಯ ತುಂಬೆಲ್ಲ ಬರಿಯ ಡಮ್ಮ ಢಮ್ಮ ಡಕ್ಕ ಢಕ್ಕ!
July 20, 2025
ಇಂದಿನ ಸಾಮಾಜಿಕ ಸ್ಥಿತಿಗೂ ಕೆಲವು ವರ್ಷಗಳ ಹಿಂದಿನ ಸಾಮಾಜಿಕ ಸ್ಥಿತಿಗೂ ಎಷ್ಟು ಅಜಗಜಾಂತರ ಇದೆ ಅಲ್ಲವೇ? ಈಗಿನ ಸಂದರ್ಭದಲ್ಲಿ ನಿಂತು ನೋಡುವುದಾದರೆ, ಹಲವು ಪರಿಸ್ಥಿತಿಗಳು ಸುಧಾರಿಸಿವೆ ಅಥವಾ ಸುಧಾರಣೆಗೊಳ್ಳುತ್ತಿವೆ ಅಂತ ಹೇಳಬಹುದು. ಹಾಗೆಯೇ ಈ ಸಮಾಜದ ಆಗುಹೋಗುಗಳ ಬಗೆಗೆ ಬರೀಬೇಕು ಅಂದರೆ ಅದು ಅಷ್ಟು ಸುಲಭವಿಲ್ಲ. ಅದರಲ್ಲಿ ಆಳಕ್ಕೆ ಇಳಿದು, ಕೆಲವು ಸಂದರ್ಭಗಳಲ್ಲಿ ಕೆಲವು ವ್ಯಕ್ತಿಗಳ ದೃಷ್ಟಿಯಿಂದ ವಿಶ್ಲೇಷಿಸಿ ಬರಹ ರೂಪಕ್ಕೆ ತರುವ ಪ್ರಯತ್ನ ಮಾಡ್ಬೇಕು! ಹಿಂದೆ ಇದ್ದಂತಹ ಅದೆಷ್ಟೋ ದೌರ್ಜನ್ಯ ದಬ್ಬಾಳಿಕೆಗಳಿರಬಹುದು, ಮೂಲಭೂತ ಹಕ್ಕುಗಳ ಕೊರತೆಗಳಿರಬಹುದು, ಅಸಮಾನತೆ ಅಸ್ಪೃಶ್ಯತೆಗಳಿರಬಹುದು; ಈ ಎಲ್ಲಾ ವಿಷಯಗಳನ್ನ ಮನಸ್ಸಿಗೆ ನಾಟುವಂತೆ ಬರೆದಿರುವುದರಲ್ಲಿ, ಕುವೆಂಪು ಹಾಗೂ ಕಾರಂತರು ಮುಂಚೂಣಿಯಲ್ಲಿ ನಿಲ್ಲುವರು (ನಾನಿನ್ನು ಹಲವು ಬರಹಾಗಾರನ್ನ ಓದಬೇಕಿದೆ!). ಈಗಿನ ಸಂದರ್ಭದಲ್ಲಿ ಕೆಲವರಿದ್ದಾರೆ, (ಸಮಾಜಸೇವಕರು, ಲೇಖಕರು, ಉನ್ನತ ಸ್ಥಾನದಲ್ಲಿ ನಲಿಯುತ್ತಾ ಇರುವವರು) ದೌರ್ಜನ್ಯ, ಶೋಷಣೆ, ಭ್ರಷ್ಟತೆ ಬಗೆಗೆ ಬರೇ ತೋರಿಕೆಯ ಬೂಟಾಟಿಕೆಯ ಬಣ್ಣದ ಮಾತುಗಳೇ! ವಿಪರ್ಯಾಸವೆಂದರೆ, ನೊಂದವರ ಮನದ ಇಂಗಿತವನ್ನ ಎಳ್ಳಷ್ಟೂ ಅರ್ಥೈಸಿಕೊಂಡಿರುವುದಿಲ್ಲ.
ಯಾವುದೇ ಒಂದು ಗಹನವಾದ ವಿಷಯದ ಬಗ್ಗೆ ಬರೆಯಲು ನೂರಾರು ಪುಟಗಳು ಬೇಕಾಗಿರುವುದಿಲ್ಲ, ಬದಲಿಗೆ ಹೇಳಬೇಕಾದ್ದನ್ನ ಚಿಕ್ಕದಾಗಿಯಾದರೂ ಪರಿಣಾಮಕಾರಿಯಾಗಿ ಹೇಳಿ ಮುಗಿಸಬಹುದು. ಇದರಲ್ಲಿ, ಕಾರಂತರು ಎಂದಿಗೂ ಸಫಲರೆ. ಇದು ಅವರಿಗಿದ್ದ ಜಾಣ್ಮೆಯೂ ಹೌದು. ಕುವೆಂಪುರವರು ಹೇಳುವ ಹಾಗೆ, 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು' ಎನ್ನುವುದು ಈ ಕಾದಂಬರಿಯಲ್ಲಿ ಧ್ವನಿತವಾಗಿದೆ. ಕಾರಂತರ ಮುಖೇನ ಚೋಮನ ದನಿ, ಎಂತಹ ಕಲ್ಲೆದೆಯನ್ನೂ ಮೀಟುವುದು. ಇನ್ನು ಈ ತಾರತಮ್ಯಗಳು ಎಷ್ಟು ಘೋರ ರೂಪ ಪಡೆದುಕೊಂಡಿದುದ್ದರ ಬಗೆಗೆ ಕೆಲವೊಮ್ಮೆ ವಿಪರ್ಯಾಸವೂ ಎನಿಸುವುದು. ನಾಗರೀಕತೆಗಳ ಶುರುವಿನಿಂದ ಈಗಿನ ವರೆಗೂ ಒಂದಲ್ಲ ಒಂದು ರೀತಿಯಲ್ಲಿ, ಆಳುವವರ ಆಳಿಸಿಕೊಳ್ಳುವವರ ಗುಂಪುಗಳು ಇದ್ದೆ ಇರುವುದು ಮಾನವ ಸಮಾಜದ ದುರಂತವೇ ಸರಿ. ಪುಸ್ತಕವನ್ನು ಓದಿದ ಬಳಿಕವೂ ಮನದಾಳದಲ್ಲಿ ಅಚ್ಚಳಿಯದಂದೆ ಉಳಿಯುವ ಪುಸ್ತಕಗಳಲ್ಲಿ, ಈ ಕಾದಂಬರಿಯೂ ಒಂದು.

November 30, 2018
"ಇದೇನೀಗ ದೊಡ್ಡ ದುರಂತದಲ್ಲೇ ಕೊನೆಗೊಳ್ಳಲಿಕ್ಕಾ?" ಪುಸ್ತಕದ ಸುಮಾರು ಮೂರನೇ ಅಧ್ಯಾಯಯಕ್ಕೆ ಬಂದಾಗಲೇ ಅಪ್ಪನನ್ನು ಕೇಳಿಯಾಗಿತ್ತು. "ಇಡೀ ಕಥೆಯೇ ಒಂದು ದುರಂತ, ಕೊನೆ, ಮಧ್ಯ, ಮೊದಲು ಅಂತ ಇಲ್ಲ" ಎಂದು ಉತ್ತರಿಸದ್ದ ಅಪ್ಪ.
ಯಾವುದೂ ಹೊಸದೇನಲ್ಲ, ಎಲ್ಲವೂ ಕೇಳಿ, ಓದಿ ಗೊತ್ತಿದ್ದದ್ದೇ - ದಲಿತರ ಪಾಡು, ಜಮೀನ್ದಾರಿ ಪದ್ಧತಿ, ಎಂದೂ ತೀರಿಸಲಾಗದಂತ ಆಸೆಗಳು ಹಾಗೂ ಸಾಲಗಳು, ಕಣ್ಣು- ಮುಚ್ಚಿ ಬಿಡುವುದರ ನಡುವೆ, ಹೇಳದೇ ಕೇಳದೇ ಸಮೃದ್ಧವಾಗಿ ಬರುವಂತ ಸಾವುಗಳು. ಇದನ್ನಾವುದನ್ನೂ ಸ್ಷಲ್ಪವೂ ರೋಮಾಂಚನೀಯವಾದ ವಿವರಣೆಗಳ ಹಿಂದೆ ಮುಚ್ಚಿಡದೆ, ಕಡ್ಡಿ ತುಂಡು ಮಾಡುವಂತಿರುವ ನಿರೂಪಣೆ! ಮುಂದುವರಿಸುವುದೇ ಬೇಡವೆಂದು ಅನಿಸಿತು.
ಎಷ್ಟೋ ಸಮಯದ ನಂತರ ಕನ್ನಡ ಓದುತ್ತಿರುವುದು. ಮನಸ್ಸು ಹೇಗೆಯಾದರೂ ಪುಸ್ತಕವನ್ನು ಕೆಳಗಿಡಿಸಲು ಬಿಟ್ಟೀತು? ಭಾಷೆಯ ಸೊಬಗು, ಪರಿಚಿತತೆ, ದಕ್ಷಿಣ ಕನ್ನಡ, ಮಲೆನಾಡುಗಳ ನೆನಪು, ಓದಿಸಿಕೊಂಡೇ ಹೋಯಿತು. ಶಿವರಾಮ ಕಾರಂತರ ಹೆಸರು ಹೊಸತಲ್ಲ. ನಮ್ಮ ಅಪ್ಪನ ಬಾಯಲ್ಲೋ, ಅಥವಾ ಚಿಕ್ಕವಳಿರುವಾಗ ಯಕ್ಷಗಾನ ಕಲಿಯುತ್ತಿರವಂತಹ ಸಂದರ್ಭದಲ್ಲಿ ಅವರ ಬಗ್ಗೆ ಎಷ್ಟೋ ಕೇಳಿದ್ದೆ. ಅವರ ಸಿಂಹದಂತ ಹಾಗೂ ಅಷ್ಟೇ ಅಪರೂಪದ ವ್ಯಕ್ತಿತ್ವದ ಸುತ್ತ ಹೆಣೆದಿರುಂತಹ ಎಷ್ಟೋ ಕಥೆಗಳು! ಚೋಮನ ದುಡಿ ನನ್ನನ್ನು ಈ ವ್ಯಕ್ತಿಯ ಬದುಕಿನೊಂದಿಗೆ ಒಂದು ಸಣ್ಣ ರೀತಿಯಲ್ಲಿ ಜೋಡಿಸಿದಂತೆ ಅನಿಸಿತು.
ಓದುತ್ತಾ ಓದುತ್ತಾ ಹೋದಂತೆ, ಕಾರಂತರ ಧ್ವನಿ ಹೆಚ್ಚು ಹೆಚ್ಚು ಪರಿಚಿತವಾಗುತ್ತಾ ಹೋಯಿತು. ನನ್ನ ಬದುಕಿನಲ್ಲಿ ನಾನು ನೋಡಿರುವ ಎಷ್ಟೋ ಮಂದಿ ಚೋಮ, ಬೆಳ್ಳಿಯರ ನೆನಪಾಯಿತು. ಎಲ್ಲವೂ ಗೊತ್ತಿದ್ದ ವಿಷಯವಾದರೂ, ಇನ್ನೂ ಈ ಪುಸ್ತಕ ಇಷ್ಟು ಪ್ರಸ್ತುತವೆನಿಸುವುದು ಯಾಕೆ? ಬದಲಾವಣೆಗಾಗಿ ಕೋಪ, ಆಕ್ರೋಶ, ಬಲವಾದ ಆಕಾಂಕ್ಷೆ, ತಮ್ಮಲ್ಲಿರುವ ಎಲ್ಲಾ ಶಕ್ತಿಯನ್ನು ಒಟ್ಟು ಹಾಕಿ, ತಮ್ಮ ಎಷ್ಟೋ ಹಳೆ ನಂಬಿಕೆಗಳನ್ನು ಎದುರಿಸಿಕೊಂಡು, ದುಡಿಯವುದು ಮುಖ್ಯವೇ, ಅಥವಾ ಇದನ್ನೆಲ್ಲಾ ಬಿಟ್ಟು ಬುದ್ಧನಾಗುವ ಕಡೆಗೆ ಶ್ರಮವಹಿಸುವುದು ಮೇಲೇ? ಈ ನಿಟ್ಟಿನಲ್ಲಿ ಯೋಚಿಸಿದರೆ, ಚೋಮನ ಜೀವನ, ಬೆಳ್ಳಿ ಅವನ ಮಕ್ಕಳ ಜೀವನಗಳಿಗಿಂತಲೂ ದುರಂತವಾಗಿ ಕಾಣಿಸುತ್ತದೆ. ಅವನ ತೀರದ ಆಸೆಯ ಕಾರಣ. ಆದರೆ ಚೋಮನ ತೀರದೇ ಇರುವ ಆಕಾಂಕ್ಷೆ, ಅವನ ದುಡಿಯ ಭಾವೋದ್ರೇಕ ಧ್ವನಿಯೇ, ಎಷ್ಟೋ ವರುಷ ಪಾಲಿಸಿಕೊಂಡ ಬಂದ ಪದ್ಧತಿಗಳಿಗೆ, ಹಿಂಸೆಗಳಿಗೆ, ಸಣ್ಣ ರೀತಿಯಲ್ಲಾದರೂ ಸವಾಲೊಡ್ಡುವ ಒಂದು ಶಕ್ತಿಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಶಾಂತಿಯೇ ಎಲ್ಲದಕ್ಕಿಂತಲೂ ಮೇಲು ಎಂದು ಪ್ರತಿಪಾದಿಸುವುದಾದರೋ ಹೇಗೆ?

March 13, 2020
Holy Moly what an epic book for 2 reasons.
1. It transpiled into my ancestral home story. Like Choma in this book, we had a person named Taniyappa Mera who according to Karanth belonged to the same community as Choma which is Holeya. He worked all the day in my ancestral home since he was 9 years old sacrificing his body and sweat. End of the day he was given the rice and curry in a big vessel to feed his family as salary. I guess he never saw a penny until late 1990s because there was no concept of paying daily wages through money. I couldn't think but wonder how can the story of Choma fall in place with Taniyappa. I couldn't think but wonder how could my ancestors, I don't know if I should use the word exploit but yeah to me it looks no less than exploitation. The food was served to him outside the house in the corner in an areca nut leaf and buttermilk in a coconut shell and I have never seen him entering our ancestral home.
2. How glamorously my village Belthangady is glorified by Karanth.

July 1, 2017
Simply brilliant book! This is the first book from Shivaram Karanth I have read and I am sure I will read many more of his. What a treat it has been to read it daily this week. The author portrays the nuances of Oleya, his name Choma's life with utmost skill. The book is about a dream of Choma to be a farmer instead of being a labourer in other's farm. And how he pays for it because of his simple dream due to discrimination by untouchability, society maintaining status quo etc.
The brilliance is in the story telling and when you read you start feeling for characters at a very early stage. In the times of simplifying complex things to a simple sentence or a number, this book captures the life of choma with very good emotional detail.
I highly recommend this book!

October 24, 2019
chomana dudi depicts the dreary realities in the life of choma, a bonded labor in the farm of sankapayya. being a lowercaste man, he is unable to get a piece of land from sankapayya.
choma's story can be interpreted in two different ways, one is that, choma lived a miserable life worrying about his children and died heartbroken, another understanding is that his children found a better living (by converting into christianity and running away) eventhough Choma did not approve of it.
chomana dudi focuses on bringing out the struggles of being a lowercaste in the Indian society during the 18th century.

This entire review has been hidden because of spoilers.
February 17, 2015
Shivaram Karanth is a giant in Kannada literature, although Mukkajiya Kansugalu will be his eponymous work and would remain one of the prominent Kannada works, Chomana Dudi poignant allusion to Dalit lives immediately after Indian independence. Narrated like a story you hear in a train by an elderly person this story is more of conservation where you just nod to the narrator. The story is a typical Karanth subject dealt earnestly.
December 6, 2013
No doubt that Shivarama Karanth is a Gnanapith awardee (the highest literary award in India). The flow of story is so gentle and smooth, one would want to go back and read it again and again. The episodes of the story are neatly intertwined which preserve the continuity.
May 25, 2014
Excellent book.Emotions have been potrayed very well.One would burst into tears after reading this story.Such an emotional story.One would like to visit Charmudi ghats after reading this book.
Dr.Shivaram Karanth proves his ditinction of having won the "Jnanapita' award.

April 14, 2026
ಅಸ್ಪೃಶ್ಯನಾಗಿ, ಅನಕ್ಷರಸ್ಥನಾಗಿ, ಅಸಹಾಯಕತೆಯ ಬಡತನದಿಂದಾಗಿ ಬದುಕಿನ ಭರವಸೆಯನ್ನೇ ಕಳೆದುಕೊಳ್ಳುವ ಚೋಮ ತನ್ನ ದುಡಿಯ ಮೂಲಕ ಓದುಗನ ಎದೆಯನ್ನು ಹಿಂಡುತ್ತಾನೆ. ತದನಂತರ ಮತಾಂತರದ ಕೂಪದೊಳಗೆ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ.
ಬಿ.ವಿ ಕಾರಂತರ ನಿರ್ದೇಶನದಲ್ಲಿ ಮೂಡಿಬಂದಿರುವ ಚಲನಚಿತ್ರವೂ ಅಷ್ಟೇ ಯಶಸ್ವಿಯಾಗಿದೆ.

September 17, 2024
இந்நூலினை "Internet Archive" தளத்தில் பதிவேற்றியுள்ளேன். ஆர்வமுள்ளவர்கள் பயன்படுத்திக் கொள்ளவும்.
April 3, 2026
ಇಪ್ಪತ್ತನೆಯ ಶತಮಾನದ ಮೊದಲಾರ್ಧದದಲ್ಲಿ ಬರೆದ ಇಂತಹ ಕತೆಗಳನ್ನ, ಕಾದಂಬರಿಗಳನ್ನ ಓದಿದಾಗಲೆಲ್ಲ, ಕನ್ನಡ ಸಮಾಜ ಅಂದಿನಿಂದ ಇಂದಿನವರೆಗೆ ಮುಂದೆ ಸಾಗುವ ಬದಲು ಎಷ್ಟು ಹಿಂದೆ ಸಾಗಿ ಬಂದಿದೆ ಅನಿಸುತ್ತದೆ.
ಕುವೆಂಪು, ಕಾರಂತರ ಕತೆಗಳಲ್ಲಿ, ಪಾತ್ರಗಳಲ್ಲಿ, ಕೆಲವು ನಿಲುವುಗಳಲ್ಲಿ ತೊಡಕುಗಳಿರಬಹುದು, ಇಲ್ಲವೆಂದಲ್ಲ. ಆದರೆ ಅವರ ಅಂತರಂಗ ಪ್ರಗತಿಪರತೆಯಿಂದ ಕೂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅದು ಇಂದಿನ ಕನ್ನಡ ಸಮಾಜಕ್ಕೆ ಹೋಲಿಸಿದರೆ ಕ್ರಾಂತಿಕಾರಿಯಾಗಿಯೇ ಕಾಣುತ್ತದೆ.
ಏಕೆ ಹೀಗಾಯಿತು ನಮ್ಮ ಸಮಾಜ, ಎಲ್ಲಿ ತಪ್ಪಾಯಿತು ಎಂಬ ಚಿಂತೆ ಬರದೇ ಇರದು.

December 18, 2023
ನಾನು ಈವರೆಗೆ ಓದಿದ ಕಾರಂತರ ೩ ಕಾದಂಬರಿಗಳ್ಳಲ್ಲಿ ಇದು ತುಂಬಾ ವಿಭಿನ್ನ ಹಾಗೂ ಇಲ್ಲಿ ಕಥೆ ತುಸು ವೇಗವಾಗಿ ಸಾಗುತ್ತದೆ ಎನ್ನಬಹುದು..
ಸ್ವಾತಂತ್ರ್ಯ ಪೂರ್ವದ ದಕ್ಷಿಣ ಕನ್ನಡ ಜಿಲ್ಲೆಯ ನನ್ನ ಊರಿನ ಆಸುಪಾಸಿನಲ್ಲಿ ಈ ಕಥೆ ಹಾದು ಹೋದದ್ದು ನನಗೆ ಆ ಕಾಲದ ಚಿತ್ರಣವನ್ನು ತೋರಿಸಿತು ಹಾಗೂ ಅಂದಿನ ಸಾಮಾಜಿಕ ವ್ಯವಸ್ಥೆ, ನೊಂದ ವರ್ಗದವರ ನರಕ ಯಾತನೆಯ ಅರಿವಾಯಿತು..
ಚೋಮ ಹಾಗೂ ಅವನ ದುಡಿಯಿಂದ ಬಂದ "ಡಮ್ಮ ಢಕ, ಢಮ ಡಕ್ಕ" ಸಂಗೀತ ಮಾತ್ರ ಅಮರ

July 28, 2026
ದುಡಿ ಕೇವಲ ಒಂದು ವಾದ್ಯವಲ್ಲ, ಅದು ಚೋಮನ ಹೃದಯದ ಬಡಿತ; ಅವನ ನೋವಿನ ನಾದ; ಅವನ ಮೌನದ ಪ್ರತಿಭಟನೆ.
ಒಟ್ಟಾರೆಯಾಗಿ, "ಚೋಮನ ದುಡಿ" ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ; ಅದು ಬಡತನ, ದಾರಿದ್ರ್ಯ, ಸಾಮಾಜಿಕ ಅನ್ಯಾಯ ಮತ್ತು ಜಾತಿ ವ್ಯವಸ್ಥೆಯ ವಿರುದ್ಧದ ಪ್ರಬಲ ಧ್ವನಿಯಾಗಿದೆ.
ತನ್ನೊಡೆಯನಿಗೆ ನೇಗಿಲು ಕೊಡಲಾಗದ "ಎತ್ತುಗಳು",
ಹೇಳಿಕೊಳ್ಳಲಾಗದ ಬೆಳ್ಳಿಯ ವ್ಯಥೆ,
ಗುರುವನಿಗೆ ಲಭಿಸಿದ ವ್ಯವಸಾಯದ ನೋವು,
"ಕಷ್ಟ ಮರೆಯುವ ಸೇಂದಿ ಅಂಗಡಿ" "ಅದೇ ಅವರ ದೇವರಗುಡಿ"
ತನ್ನೊಡೆಯನಿಂದ ದೂರವಾದ ದುಡಿ...
"ನನ್ನನ್ನು ಬಾರಿಸುವವರು ಯಾರು?" ಎಂದು
ಇಂದಿಗೂ, ಎಂದೆಂದಿಗೂ ಕಾಯುತ್ತಲೇ ಇದೆ.
🌹 ಧನ್ಯವಾದಗಳು ಶಿವರಾಮ ಕಾರಂತ ಸರ್. 🌹 ಚೋಮನ ದುಡಿಯ ನಾದ ಇಂದಿಗೂ ನಮ್ಮ ಮನಸ್ಸಿನಲ್ಲಿ ಮೊಳಗುತ್ತಲೇ ಇದೆ. 📚🙏

November 29, 2020
ಚೋಮನದುಡಿ ಓದಿದ ಮೇಲೆ ನನ್ನ ಅನುಭವಕ್ಕೆ ಬಂದಿದ್ದು ಎಂದರೆ,ಎಲ್ಲರಿಗೂ ಅವರ ಹಣೆಯಲ್ಲಿ ಬರೆದಿದ್ದರೆ ಮಾತ್ರ ದಕ್ಕುವುದು ಎಂದು. ಚೋಮನ ಕಥೆಯೂ ಅಷ್ಟೇ. ಅವನು ಎಷ್ಟೇ ಆಸೆಪಟ್ಟರು ಪ್ರಯತ್ನಪಟ್ಟರು ಅವನ ಆಸೆ ನೆರವೇರುವುದಿಲ್ಲ. ಒಂದಾದಮೇಲೊಂದರಂತೆ ಸಾವು ಮನಸ್ಸಿಗೆ ನೋವುಂಟು ಮಾಡುತ್ತದೆ. ಅದರಲ್ಲೂ ಚಿಕ್ಕ ಮಕ್ಕಳ ಸಾವು. ದಣಿ ಒಳ್ಳೆಯವನಾದರೆ ತಾಯಿಯ ಮಾತಿಗೆ ಕಟ್ಟುಬಿದ್ದು ಕೆಟ್ಟವನಾಗಿ ಕಾಣಿಸಿಕೊಳ್ಳುತ್ತಾನೆ. ಚೋಮನ ಮಗಳ ಅನುಭವಸ್ಥ ಮಾತುಗಳು ಗಮನಸೆಳೆಯುತ್ತವೆ. ಒಟ್ಟಿನಲ್ಲಿ ಒಂದು ಅದ್ಭುತ ಕನ್ನಡ ಕಾದಂಬರಿ.
December 17, 2011
good book
January 15, 2015
Super fiction
May 21, 2025
🔸ಚೋಮನ ದುಡಿ ~ ಶಿವರಾಮ ಕಾರಂತರು. ||
ಶಿವರಾಮ ಕಾರಂತರ "ಚೋಮನ ದುಡಿ" ಕನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿ.ಈ ಕಾದಂಬರಿಯು ಸ್ವಾತಂತ್ರ್ಯ ಪೂರ್ವ ಕಾಲದ ದಲಿತರ ಬದುಕಿನ ವಾಸ್ತವ ಚಿತ್ರಣವನ್ನು ನೀಡುತ್ತದೆ, ಜಾತಿ ವ್ಯವಸ್ಥೆಯ ಕ್ರೌರ್ಯ, ಬಡತನ ಮತ್ತು ಶೋಷಣೆಯನ್ನು ಲೇಖಕರು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇದು 1933 ರಲ್ಲಿ ಪ್ರಕಟವಾಯಿತು.ಕಾದಂಬರಿಯು ಭೋಗನ ಹಳ್ಳಿಯಲ್ಲಿ ವಾಸಿಸುವ ಚೋಮ ಮತ್ತು ಅವನ ಕುಟುಂಬದ ಸುತ್ತ ಸುತ್ತುತ್ತದೆ.ಕಥಾನಾಯಕ ಚೋಮನು ಸಮಾಜದ ಕಟ್ಟುಪಾಡುಗಳಿಂದಾಗಿ ಬಹಳ ನೋವನ್ನು ಅನುಭವಿಸುತ್ತಾನೆ.ಚೋಮನಿಗೆ ಐದು ಜನ ಮಕ್ಕಳಿದ್ದಾರೆ - ಚನಿಯ, ಗುರುವ, ನೀಲ, ಕಾಳ ಮತ್ತು ಬೆಳ್ಳಿ.ಕಾದಂಬರಿಯಲ್ಲಿ ಬರುವ ಮಾನವೀಯ ಸಂಬಂಧಗಳು, ತಂದೆ-ಮಕ್ಕಳ ಬಾಂಧವ್ಯ, ಪ್ರೀತಿ, ನೋವುಗಳನ್ನು ಸ್ಪರ್ಶಿಸುವಂತೆ ಚಿತ್ರಿಸಲಾಗಿದೆ. ಅವನಿಗೆ ದುಡಿ (ಡೋಲು) ಮತ್ತು ಸೇಂದಿ (ಕಳ್ಳು) ಎಂದರೆ ಅಚ್ಚುಮೆಚ್ಚು. ಅವನ ಹೆಂಡತಿ ತೀರಿಕೊಂಡಿರುತ್ತಾಳೆ. ಚೋಮನು ಸಂಕಪ್ಪಯ್ಯ ಎಂಬ ಜಮೀನ್ದಾರನ ಬಳಿ ಕೆಲಸ ಮಾಡುತ್ತಿರುತ್ತಾನೆ. ಚೋಮನಿಗೆ ಸ್ವಂತ ಜಮೀನು ಮಾಡಬೇಕೆಂಬ ತೀವ್ರ ಆಸೆ ಇರುತ್ತದೆ.ಅವನು ದುಡಿಯುವ ವರ್ಗಕ್ಕೆ ಸೇರಿದವನಾಗಿದ್ದು, ಸ್ವಂತ ಭೂಮಿಯನ್ನು ಹೊಂದುವ ಆಸೆ ಅವನಿಗೆ ಇದ್ದರೂ ಅದು ನೆರವೇರುವುದಿಲ್ಲ ಅದಕ್ಕಾಗಿ ಅವನು ಬಹಳ ಪ್ರಯತ್ನಿಸುತ್ತಾನೆ, ಆದರೆ ಅವನ ಜಾತಿಯ ಕಾರಣದಿಂದ ಅದು ಸಾಧ್ಯವಾಗುವುದಿಲ್ಲ. ಅವನ ಮಕ್ಕಳು ಕೂಡ ಕಷ್ಟಪಟ್ಟು ದುಡಿಯುತ್ತಾರೆ. ಒಂದು ಹಂತದಲ್ಲಿ ಸಾಲ ತೀರಿಸಲು ತನ್ನ ಮಕ್ಕಳನ್ನು ದೂರದ ಕಾಫಿ ತೋಟಕ್ಕೆ ಕೆಲಸಕ್ಕೆ ಕಳುಹಿಸುತ್ತಾನೆ. ಅಲ್ಲಿ ಅವನ ಮಗಳು ಬೆಳ್ಳಿಯು ಜಮೀನ್ದಾರನಿಂದ ಶೋಷಣೆಗೆ ಒಳಗಾಗುತ್ತಾಳೆ. ಕೊನೆಗೆ, ಚೋಮನು ತನ್ನ ಧರ್ಮವನ್ನು ತೊರೆಯುವ ನಿರ್ಧಾರಕ್ಕೆ ಬರುತ್ತಾನೆ, ಏಕೆಂದರೆ ಅಂದಿನ ಕಾಲದಲ್ಲಿ ಕೆಳವರ್ಗದವರು ಭೂಮಿ ಉಳುಮೆ ಮಾಡುವಂತಿರಲಿಲ್ಲ, ಆದರೆ ಅವನ ಮನಸ್ಸು ಅದಕ್ಕೆ ಒಪ್ಪುವುದಿಲ್ಲ. ತನ್ನ ಆಸೆಗಳು ಈಡೇರದೇ, ಮಕ್ಕಳನ್ನು ಕಾಣದೇ ಕೊನೆಗೆ ದುಡಿ ಬಾರಿಸುತ್ತಲೇ ಏಕಾಂಗಿಯಾಗಿ ಸಮಾಜದ ಕ್ರೌರ್ಯಕ್ಕೆ ಬಲಿಯಾಗುತ್ತಾನೆ.
ದುಡಿ, ಈ ಕಥೆಯಲ್ಲಿ ಕೇವಲ ಒಂದು ನಾದಯಂತ್ರವಲ್ಲ. ಅದು ಚೋಮನ ಶ್ರಮ, ನೋವು, ಅಸಹಾಯಕತೆ, ತನ್ನ ಅಂತರಂಗದ ವಿಲಾಪ ಎಲ್ಲವನ್ನು ಹೊರಹಾಕುವ ಮಾಧ್ಯಮವಾಗಿದೆ. ದುಡಿಯ ಶಬ್ದದಲ್ಲಿ ಅವನು ತನ್ನ ಜೀವನದ ಎಲ್ಲ ದ್ವಂದ್ವಗಳನ್ನು ತೋರಿಸುತ್ತಾನೆ. ಈ ರೀತಿಯಾಗಿ, ದುಡಿ ಚೋಮನ ವ್ಯಕ್ತಿತ್ವವನ್ನು ಸಂಕೇತಿಸುವ ಪ್ರಮುಖ ಎಳೆಗಾರಿಕೆಯಾಗಿ ಕಾಣಿಸುತ್ತದೆ. ಅದು ಅವನ ಸಂಕಟಗಳನ್ನು ಬಲವಾಗಿ ವ್ಯಕ್ತಪಡಿಸುವಂತೆ ಮಾಡುತ್ತದೆ, ಹಾಗಾಗಿ ಇದು ಶೋಷಿತನ ನಿಗೂಢ ಘೋಷಣೆಯೂ ಹೌದು.
ಒಟ್ಟಾರೆಯಾಗಿ, "ಚೋಮನ ದುಡಿ" ಕೇವಲ ಒಂದು ಕಥೆಯಲ್ಲ, ಬದಲಿಗೆ ಅಂದಿನ ಸಮಾಜದ ಕನ್ನಡಿ. ಇದು ಓದುಗರನ್ನು ಚಿಂತನೆಗೆ ಹಚ್ಚುವ ಮತ್ತು ಸಂವೇದನಾಶೀಲರನ್ನಾಗಿಸುವ ಶಕ್ತಿ ಹೊಂದಿದೆ. ಕನ್ನಡ ಸಾಹಿತ್ಯವನ್ನು ಪ್ರೀತಿಸುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ ಇದು.
ಚೋಮನ ದುಡಿ
"ಹಿಡಿದ ದುಡಿ,ಎತ್ತಿದ ಕೈ,ತುಂಬಿದ ಆವೇಶ ! ಎಲ್ಲವೂ ಇದ್ದಕ್ಕಿದ್ದಂತೆಯೇ ಇವೆ.ಆದರೆ ಚೋಮನಿಲ್ಲ"..
~ವಿನಯ್

January 14, 2024
ಬೇಸಾಯದ ಆಸೆ ಹೊತ್ತು, ತನ್ನ ಹೊಲೆಯ ಜಾತಿಯ ಕಾರಣದಿಂದ ಬೇಸಾಯ ಮಾಡುವುದಕ್ಕೆ ಅವಕಾಶ ಸಿಗದ "ಚೋಮನ" ಕತೆಯೇ "ಚೋಮನ ದುಡಿ". ಚೋಮ ಒಬ್ಬ ಹೊಲೆಯ ಜಾತಿಯವ, ಅವನ ಜಾತಿಯವರಿಗೆ ಬೇರೆ ಅವರ ಹೊಲದಲ್ಲಿ ಕೆಲ್ಸ ಮಾಡಲು ಅವಕಾಶ ಇದೇ ಹೊರೆತು, ಅವರಾಗಿಯೇ ಮಾಡುವ ಅಧಿಕಾರವಿಲ್ಲ. ಆದರೂ ಒಂದಲ್ಲ ಒಂದು ದಿನ ಬೇಸಾಯ ಮಾಡೇ ಮಾಡುತ್ತೇನೆ ಎಂದು ಹಟ ಹಿಡಿದು ಚೋಮ ಜೀವನ ಸಾಗಿಸುತ್ತಾನೆ. ತನ್ನ ಜೀವನ ಉದಕ್ಕೂ ಹೆಂಡವೆ ಅವನಗೆ ಪ್ರಾಣ. ಅವನ ಮನೆಯ ಕಷ್ಟಗಳು ಅವನು ಸಾಕಿದ ಎತ್ತುಗಳನ್ನು ಮಾರಲು ಅವಕಾಶ ಕೊಟ್ಟರು ಒಂದಲ್ಲ ಒಂದು ದಿನ ಬೇಸಾಯ ಮಾಡುತ್ತೇನೆ ಎಂಬ ಆಸೆ ಚೋಮನಿಗೆ. ಅದರಿಂದ ಎತ್ತುಗಳನ್ನು ಕೊಟ್ಟು ಅವನ ಸಾಲ ತೀರಿಸ ಬಹುದಾಗಿದ್ದರೂ, ಅವನ ಮನಸ್ಸು ಒಪ್ಪಲಿಲ್ಲ. ಕೊನೆಗೆ ಅವರ ಮಕ್ಕಳೇ ಎಲ್ಲ ಮನೆಯ ಜವಾಬ್ದಾರಿ ಮತ್ತು ಸಾಲಗಳನ್ನು ಹೊರುತ್ತಾರೆ. ತನ್ನ ಮಗಳು ಮನೆಯ ಸಂಪೂರ್ಣ ಜವಾಬ್ದಾರಿ ತಗೊಂಡು ಮನೆ ನೆಡೆಸುತ್ತಾಳೆ. ತಂದೆಯ ಸಾಲ ತೀರಿಸಲು ಹೋಗಿ ಅಲ್ಲೇ ತನ್ನ ಯವ್ವನದ ರುಚಿ ಅನುಭವಿಸಿ ಊರಿಗೆ ಮರಳುತ್ತಾಳೆ. ತನ್ನ ಒಬ್ಬ ಮಗ ತೀರಿ ಹೋಗಿ ಇನ್ನೊಬ್ಬ ಮಗಾ ಕ್ರಿಸ್ತಮತದ ಮಾರಿಯನ್ನು ಮದುವೆಯಾಗಿ, ಮನೆಯಿಂದ ದೂರ ಆಗುತ್ತಾನೆ. ಇನ್ನೊಬ್ಬ ಮಗ ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಾನೆ. ಈ ಎಲ್ಲ ನೋವುಗಳು ಇದ್ದರೂ ಅವನಗೆ ಬೇಸಾಯ ಮಾಡುವ ಮನಸ್ಸು. ಕೊನೆಗೆ ತಮ್ಮ ಧಣಿ ಮನೆಗೆ ಭೂಮಿ ಕೇಳಲು ಅಲೆದಾಡಿ, ಸಿಗದೆ ಕ್ರಿಸ್ತ ಮತಕ್ಕೆ ಮತಾಂತರ ನಿರ್ದರಿಸುತ್ತಾ ಹೋಗಬೇಕಾದಾಗ, ದಾರಿಯಲ್ಲಿ ಸಿಗುವ ದೈವಗಳಿಗೆ ಕೈ ಮುಗಿಯುತ್ತಾ ಹೊರಟಾಗ ತಾನು ಮಾಡಲು ಹೊರಟ ಕೆಲ್ಸ ಸರಿ ಅಲ್ಲವೆಂದು ತಿಳಿದು ಮನೆಗೆ ಬಂದಾಗ ಮಗಳು ತೋಟಕ್ಕೆ ಕೆಲ್ಸಕ್ಕೆ ಹೋದ ದಣಿಯ ಜೋಡಿ ಇದ್ದಿದು ಕಂಡು, ಕೋಪಗೊಂಡ ಅವನು ಮಗಳು ಮತ್ತು ಮಗನನ್ನು ಮನೆ ಇಂದ ಹೊರಕ್ಕೆ ಹಾಕಿ ಒಬ್ಬನೇ ತನ್ನ ದಣಿಯ ಹೊಲದ ಕೆಲ್ಸ ಮುಗಸಿ ಬಂದು ದಣಿದು, ದುಡಿಯನ್ನು ಬಾರಿಸುತ್ತಾ ಜೀವನದ ಕೊನೆ ಕಾಣುತ್ತಾನೆ.
ಈ ಕತೆಯಲ್ಲಿ ಚೋಮನ "ದುಡಿ"ಗೆ ಒಂದು ಮಹತ್ವ ಇದೇ. ಅವನ ಎಲ್ಲ ಭಾವನೆಗಳನ್ನು ಆದರ ಮೂಲಕವೇ ಹೊರಗೆ ಹಾಕುತ್ತಾನೆ. ತನಗೆ ಬೇಜಾರು ಆದಾಗ ಅವನ ದುಡಿಯ ಆರ್ಭಟ ಎಂತವರಿಗೂ ಎದೆ ಝಲ್ ಎಣ್ಣಿಸುತ್ತದೆ. ಕೊನೆಗೆ ಅವನ ಕೊನೆಯ ಕ್ಷಣದಲ್ಲಿ ತಾನು ಎಂದು ಅಷ್ಟೊಂದು ರೋಷಬರಿತ ಬಾರಿಸದ ಹಾಗೆ ಬಾರಿಸಿ ತನ್ನ ಕೊನೆ ಉಸಿರು ಎಳೆಯುತ್ತಾನೆ.
ಈ ಕತೆಯಲ್ಲಿ ಚೋಮನ "ದುಡಿ"ಗೆ ಒಂದು ಮಹತ್ವ ಇದೇ. ಅವನ ಎಲ್ಲ ಭಾವನೆಗಳನ್ನು ಆದರ ಮೂಲಕವೇ ಹೊರಗೆ ಹಾಕುತ್ತಾನೆ. ತನಗೆ ಬೇಜಾರು ಆದಾಗ ಅವನ ದುಡಿಯ ಆರ್ಭಟ ಎಂತವರಿಗೂ ಎದೆ ಝಲ್ ಎಣ್ಣಿಸುತ್ತದೆ. ಕೊನೆಗೆ ಅವನ ಕೊನೆಯ ಕ್ಷಣದಲ್ಲಿ ತಾನು ಎಂದು ಅಷ್ಟೊಂದು ರೋಷಬರಿತ ಬಾರಿಸದ ಹಾಗೆ ಬಾರಿಸಿ ತನ್ನ ಕೊನೆ ಉಸಿರು ಎಳೆಯುತ್ತಾನೆ.
This entire review has been hidden because of spoilers.
September 5, 2026
ಚೋಮನ ದುಡಿ
ತುಂಬಾ ಕಡಿಮೆ ಸಮಯದಲ್ಲಿ ಓದಿ ಮುಗಿಸಬಹುದಾದ ಪುಸ್ತಕ
ಚೋಮ ಈ ಕಥೆಯ ಪ್ರಮುಖ ಪಾತ್ರಧಾರಿ, ತನ್ನ ನೋವು, ನಲಿವು, ಎಲ್ಲವನ್ನು ತನ್ನಲ್ಲಿರುವ ದುಡಿಯ ಮೂಲಕ ತಿಳಿಸುತ್ತಿದನು.
ಆಗಿನ ಕಾಲದ ಜಾತಿ ವ್ಯವಸ್ಥೆಯ ಕಟ್ಟುಪಾಡುಗಳು ಹೇಗೆ ಚೋಮನ ಜೀವನ ಮೇಲೆ ಪರಿಣಾಮ ಬೀರಿದವು ಇವೆಲ್ಲವನ್ನೂ ಇಲ್ಲಿ ಲೇಖಕರು ತಿಳಿಸಿದ್ದಾರೆ.
ಮೂಲತಃ ಕೆಳ ಜಾತಿಯವನಾದ ಚೋಮನಿಗೆ ಇರುವ ಈ ಒಂದು ಜೀವನದಲ್ಲಿ ಬೇಸಾಯ ಮಾಡಬೇಕೆಂದು ಆಸೆ ಅದಕ್ಕಾಗಿ ಕಾಡಿನಲ್ಲಿ ಸಿಕ್ಕ ಎತ್ತುಗಳನ್ನು ಪ್ರೀತಿಯಿಂದ ಸಾಕಿರುತ್ತಾನೆ. ಅವನ ಈ ಆಸೆಯನ್ನು ತನ್ನ ಧಣಿಗಳ ಬಳಿಯೂ ಹೇಳಿಕೊಂಡಿರುತ್ತಾನೆ. ಧಣಿಗಳು ಒಪ್ಪಿದರು ಅವರ ತಾಯಿ ಒಪ್ಪಿರುವುದಿಲ್ಲ. ಇದರಿಂದ ಅವನ ಕನಸು ಕನಸಾಗಿಯೇ ಉಳಿಯಿತು.
ಇನ್ನು ಅವನ ಸಂಸಾರ ವಿಷಯಕ್ಕೆ ಬಂದರೆ ತನ್ನ ಐವರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ. ಮಕ್ಕಳು ಕೂಡ ಚೋಮನಿಗೆ ಅಷ್ಟು ಕಷ್ಟ ಕೊಡದಿದ್ದರು ಅವರ ಕೆಲಸಗಳು ಚೋಮನಿಗೆ ಹೇಳಲಾರದಷ್ಟು ನೋವು ತಂದು ಕೊಟ್ಟವು. ಮೊದಲ ಮಗನ ಸಾವು, ಎರಡನೇ ಮಗ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದ, ಇನ್ನೂ ಮಗಳು ತನ್ನ ಅಪ್ಪನ ಸಾಲ ತೀರಿಸಲು ಹೋಗಿ ಅಡ್ಡ ದಾರಿ ಹಿಡಿದದ್ದು, ಇನ್ನೂ ಒಬ್ಬ ಮಗ ಈಜು ಬರದೆ ಸತ್ತದ್ದು ಈ ಜಾತಿ ಒಂದು ಇಲ್ಲದಿದ್ದರೆ ಅಂದು ಬ್ರಾಹ್ಮಣ ಹುಡುಗ ಇವನ ಮಗನನ್ನು ಬದುಕಿಸಬಹುದಿತ್ತು.
ಹೀಗೆ ಈ ಎಲ್ಲ ಘಟನೆಗಳು ಚೋಮನ ಮನಸನ್ನು ಘಾಸಿಗೊಳಿಸುತ್ತಾ ಹೋದವು, ಕೊನೆಗೆ ಚೋಮ ತನ್ನ ದುಡಿಯನ್ನು ಜೋರಾಗಿ ಬಾರಿಸುತ್ತಾ ಹಸುನಿಗಿದ.
ಚೋಮನ ದುಡಿ ಯು ಸಂಕೇತದ ರೂಪದಲ್ಲಿ ವಾಸ್ತವವಾಗಿ ಪ್ರತಿಭಟನೆ. ಬಂಡಾಯದ ಮನೋಭಾವದ ಸಾಂಕೇತಿಕವಾಗಿ ಸೂಚಿಸುತ್ತದೆ.
ಈ ಕಾದಂಬರಿಯಲ್ಲಿ ಸಾಮಾಜಿಕ ಸ್ಥಿತಿಗತಿ. ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದ ಜನರ ಹತಾಶೆ.ಅಸಹಾಯಕತೆ. ಬಡತನ. ದುರ್ಬಲ ಬದುಕಿನ ಬವಣೆ ಕಾಣಬಹುದು.

March 15, 2026
ABSOLUTE MASTERPIECE.....I ADORE THIS BOOK VERY MUCH..WHEN I STARTED READING I FELT HYPNOTIZED BY SRI KARANTA'S LINES....PROSE WAS AMAZING...WHEN CHOMA'S FAMILY MEMBERS STARTED DIE ONE BY ONE I HAD A FEEL TO ASK KARANTA LIKE "WHY ARE YOU DOING THIS? I CAN'T HANDLE ANY MORE"....A 100 PAGE BOOK COULD MAKE THIS EMOTIONAL EFFECTS....I NEVER EXPECTED...AND HE WRITES LIKE PAINTING IN CANVAS.... I ABSOLUTELY ADMIRE HIS WRITING...WHILE I AM READING I FOUND A BRIDGE TOWARDS UNTOUCHABLE BY MULK RAJ ANAND WHICH I HIGHLY RECOMMEND EVERYONE....CHOMA AND BHAKHA TWO SIDES OF SAME COIN....ALSO WHEN I WAS READING I HAD BEST IMAGINATIVE SERIES....I LIKED THE MOOD AMBIENCE OF BOOK...I NEVER CAME ACROSS PEOPLE WITH THAT MUCH POVERTY BUT I CAME ACROSS HIS LIFE STYLE....WHEN I WAS ABOUT 10 YEARS OLD(NOW 19),THERE WAS WORKERS CAME TO HOUSE DAILY....I LIKED THEM VERY MUCH....THEY ARE NOT HERE TODAY...ONE PASSED AWAY TWO YEARS BACK AND ANOTHER 3 YEARS BACK ( BY SUICIDE)...I AM GRIEVING FOR THEM TILL TODAY ALSO...WHEN I AM READING THAT BOOK, IT REMINDED MY GOLD POLISHED CHILDHOOD...