'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.
ಐತಿಹಾಸಿಕ ಕಾದಂಬರಿಗಳು ಎಂದರೆ ತಪ್ಪದೆ ನೆನಪಿಗೆ ಬರುವ ಹೆಸರು ತ.ರಾ.ಸು ಅವರ ದುರ್ಗದ ಕಥೆಗಳು, ಅಮೋಘವರ್ಷನ "ನೃಪತುಂಗ" ಮುಂತಾದವು. ಅವರ ರಚಿಸಿದ ಮತ್ತೊಂದು ಐತಹಾಸಿಕ ಎಲೆ ಮರೆಯ ಕಾಯಿಯಂತೆ ಇರುವ ಪುಸ್ತಕ.ತುಂಬಾ ಹುಡುಕಿ ಹುಡುಕಿ ಸಿಕ್ಕಿದಂತಾ ಪುಸ್ತಕ. ಕರ್ನಾಟಕ ರಾಜ್ಯವನ್ನು ಒಗ್ಗೂಡಿಸಲು ತನ್ನ ಅಣ್ಣನಿಗ ಕೊಟ್ಟ ಮಾತಿನಂತೆ ಚೋಳರ ಹುಟ್ಟು ಅಡಗಿಸಿ ಗೆದ್ದು ಪಣ ತೊಟ್ಟು ಕೀರ್ತಿನಾರಾಯಣ ದೇಗುಲವನ್ನು ಕಟ್ಟಿಸಿದ. ಕನ್ನಡಿಗರಿಗೆ "ಧರ್ಮಕ್ಕೆ ಶರಣಾಗಿ ನಡೆದುಕೊಳ್ಳಿ ಕೀರ್ತಿಕಾಮಿಗಳಾಗಿ ಬಾಳಿ, ಕನ್ನಡತಾಯ್ ಬಾಳ್ಗೆ- ಸಿರಿಗನ್ನಡಂ ಗೆಲ್ಗೆ' ಎಂದು ಅದೇಶವಿತ್ತ. ಹೊಯ್ಸಳ ಸಾಮ್ರಾಜ್ಯದ ಚಕ್ರವರ್ತಿ ವಿಷ್ಣುವರ್ಧನನ ಕಥೆ. ಅತ್ಯುತ್ತಮ ಐತಿಹಾಸಕ ಪುಸ್ತಕಗಳಲ್ಲೊಂದು.. ಸಮಯ ಸಿಕ್ಕರೆ ಓದಿ..
ತ.ರಾ.ಸು. ರವರು ತಮ್ಮ ಸಾಹಿತ್ಯ ಕೌಶಲ್ಯವನ್ನು ಈ ಕೃತಿಯಲ್ಲಿ ಮೆರೆದಿದ್ದಾರೆ. ಘಟನೆಗಳನ್ನು ಓದುಗರ ಕಟ್ಟಿಗೆ ಕಟ್ಟುವಂತೆ ವರ್ಣಿಸಿದ್ದಾರೆ.
ಹೊಯ್ಸಳ ಸಾಮ್ರಾಜ್ಯದ ವಿಷ್ಣುವರ್ಧನ ಚೋಳರನ್ನು ಸೋಲಿಸಿ, ಕನ್ನಡ ತನವನ್ನು ತಲಕಾಡಿನಲ್ಲಿ ಸ್ಥಾಪಿಸಿದ ರೀತಿಯನ್ನು ಲೇಖಕರು ಅದ್ಭುತವಾಗಿ ವರ್ಣನೆ ಮಾಡಿದ್ದಾರೆ. ರಾಜನ ಬಲಕ್ಕಿಂತಲೂ, ಸೈನ್ಯದ ಬಲಕ್ಕಿಂತಲೂ ಹೆಚ್ಚಾಗಿ ಪ್ರಜೆಗಳಿಂದ ಮಾತ್ರ ರಾಜ್ಯ ಉಳಿಯುತ್ತದೆ ಎಂಬುದು ಚೆನ್ನಾಗಿ ವ್ಯಕ್ತವಾಗಿದೆ. ಜನ ಸಹಕರಿಸದ್ದಿದ್ದರೆ ಸಾಮ್ರಾಜ್ಯ ಏನಾಗುತ್ತದೆ ಎಂಬುದಕ್ಕೆ ಕಾವೇರಿ ನದಿ ತಟದಲ್ಲಿ ಆಳುತ್ತಿದ್ದ ಚೋಳರು ಉತ್ತಮ ಉದಾಹರಣೆ.
ಶತ್ರುತ್ವ ಇದ್ದದ್ದು ಚೋಳರ ಜೊತೆಗೆ ಹೊರತು ಜನಸಾಮಾನ್ಯರ ಮೇಲಲ್ಲ. ಆದ್ದರಿಂದ, ಜನರನ್ನು ಸುಲಿಗೆ ಮಾಡದೆ, ಗೆದ್ದು, ರಾಜ್ಯವನ್ನು ಹೇಗೆ ವಿಸ್ತರಿಸಬಹುದು ಎಂಬುದಕ್ಕೆ ವಿಷ್ಣುವರ್ಧನ ಉತ್ತಮ ಉದಾಹರಣೆ.
ವಿಜ್ಞಾನಿಗಳನ್ನು, ಹಿರಿಯರನ್ನು, ಮೇಧಾವಿಗಳನ್ನು ಗೌರವಿಸಿದರೆ ಅದು ನಮಗೆ ಪುಣ್ಯವಾಗಿ ಮಾರ್ಪಾಡಾಗುತ್ತದೆ ಎಂಬುದನ್ನು ರಾಜ ವಿಷ್ಣುವರ್ಧನ ತನ್ನ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾನೆ.
ರಾಜ ವಿಷ್ಣುವರ್ಧನನ ಇಡೀ ಬದುಕಲ್ಲದಿದ್ದರೂ ಒಂದು ಘಟ್ಟವನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.
ಕನ್ನಡ ನಾಡಿನ ಹಿರಿಮೆಯನ್ನು ಐತಿಹಾಸಿಕ ಕಾದಂಬರಿಗಳ ಮೂಲಕ ಕನ್ನಡಿಗರನ್ನು ತಲುಪುವಂತೆ ಮಾಡಿದವರಲ್ಲಿ ತ. ರಾ. ಸು ಅವರ ಕೊಡುಗೆ ಅಪಾರ. ದುರ್ಗದ ಕುರಿತು ಬರೆದ ಅವರ ದುರ್ಗಾಸ್ತಮಾನ, ಕಂಬನಿಯ ಕುಯಿಲು, ತಿರುಗುಬಾಣ ಮುಂತಾದ ಪುಸ್ತಕಗಳು ಜನಮಾನಸದಲ್ಲಿ ಹಸಿರಾಗಿವೆ. ಇದಲ್ಲದೆ ಶಿಲ್ಪಶ್ರೀ, ಹಂಸಗೀತೆ, ನೃಪತುಂಗ ಮತ್ತಿತರ ಇತಿಹಾಸದ ಸ್ಪರ್ಶವಿರುವ ಕಾದಂಬರಿಗಳನ್ನು ರಚಿಸಿದ್ದಾರೆ. ಹೊಯ್ಸಳೇಶ್ವರ ವಿಷ್ಣುವರ್ಧನ ಇವರ ಇನ್ನೊಂದು ಕಿರು ಕಾದಂಬರಿ. ಹೊಯ್ಸಳ ರಾಜ ಎರೆಯಂಗನ ಮಗ ಬಲ್ಲಾಳದೇವ ರುಗ್ಣಶಯ್ಯೆಯಲ್ಲಿ ಮರಣಿಸಿದಾಗ ಅವನ ನಂತರದಲ್ಲಿ ಪಟ್ಟಾಭಿಷಿಕ್ತನಾದ ನಾಡು ಕಂಡ ಅತ್ಯಂತ ಪರಾಕ್ರಮಿ ಹೊಯ್ಸಳ ರಾಜ ಬಿಟ್ಟಿದೇವನ (ವಿಷ್ಣುವರ್ಧನ) ಕುರಿತು ರಚಿತವಾದ ಹೊತ್ತಗೆ ಇದು. ಚೋಳರಿಂದ ತಲಕಾಡನ್ನು ಗೆದ್ದ ಸಂದರ್ಭ ಇಲ್ಲಿ ಕಥೆಯಾಗಿದೆ. ಗಂಗರ ಸಾಮ್ರಾಜ್ಯವನ್ನೇ ಕೊನೆಗೊಳಿಸಿ ತಲಕಾಡಿನ ಸುತ್ತಮುತ್ತಲ ಪ್ರದೇಶವನ್ನು ಆಕ್ರಮಿಸಿದ್ದ ಚೋಳರ ವಿರುದ್ದ ಸೇಡು ತೀರಿಸಿಕೊಳ್ಳಲು ಗಂಗರಾಜರು ಹೊಂಚುಹಾಕುತ್ತಿರುತ್ತಾರೆ. ಹೊಯ್ಸಳ ರಾಜ ವಿಷ್ಣುವರ್ಧನನ ಬಳಿ ಸೇನಾಧಿಪತಿಯಾಗಿ ಸೇರಿ ಗಂಗರಾಜರು ಚೋಳರನ್ನು ಸೋಲಿಸಿ ಹೊಯ್ಸಳ ಪತಾಕೆಯನ್ನು ಹಾರಿಸುವ ಸಂದರ್ಭ ಮನೋಜ್ಞವಾಗಿ ಚಿತ್ರಿತವಾಗಿದೆ. ತ. ರಾ. ಸು ಅವರೇ ಹೇಳುವಂತೆ ಇದು ಕೇವಲ ಒಂದು ಭಾಗ ಮಾತ್ರ. ಅವರಿಗೆ ಇನ್ನೊಂದಷ್ಟು ಆಯುಷ್ಯವಿದ್ದಿದ್ದರೆ ಬಹಳಷ್ಟು ರಸವತ್ತಾದ ಐತಿಹಾಸಿಕ ಕಾದಂಬರಿಗಳು ಕನ್ನಡಿಗರ ಕೈಸೇರುತ್ತಿದ್ದವೋ ಏನೋ?
Ta Ra Su writes about one of the most underrated rulers of India, "Vishnuvardhana". This novel is about claiming back the land which is captured by the ChoLa kings who would've imposed Hinduism and tamizh in these land. It basically shows Hoysala's journey to become the political center of the southern india. For a kannadiga this novel would give goosebumps with the king's one-liners and his way of leading the army & the kingdom. "kannaDa thaay baaLge, sirigannaDam gele"
ಐತಿಹಾಸಿಕ ಕಾದಂಬರಿಗಳ ಮೂಲಕ ಕನ್ನಡಿಗರನ್ನು ತಲುಪುವಂತೆ ಮಾಡಿದವರಲ್ಲಿ ಗದ್ಯ ಶಿಲ್ಪಿ ತ. ರಾ. ಸು ಅವರ ಕೊಡುಗೆ ಅಪಾರ. "ಹೊಯ್ಸಳೇಶ್ವರ ವಿಷ್ಣುವರ್ಧನ" ಇವರ ಕಿರು ಕಾದಂಬರಿ ಅತ್ಯುತ್ತಮ ಐತಿಹಾಸಕ ಪುಸ್ತಕಗಳಲ್ಲೊಂದು.ಚೋಳರಿಂದ ತಲಕಾಡನ್ನು ಗೆದ್ದ ಸಂದರ್ಭ ಇಲ್ಲಿ ಕಥೆಯಾಗಿದೆ. ಕನ್ನಡಿಗರಿಗೆ "ಧರ್ಮಕ್ಕೆ ಶರಣಾಗಿ ನಡೆದುಕೊಳ್ಳಿ ಕೀರ್ತಿಕಾಮಿಗಳಾಗಿ ಬಾಳಿ, ಕನ್ನಡತಾಯ್ ಬಾಳೆ- ಸಿರಿಗನ್ನಡಂ ಗೆಲೆ' ಎಂದು ಅದೇಶವಿತ್ತ. ತಲಕಾಡುಗೊಂಡ, ಹೊಯ್ಸಳ ಸಾಮ್ರಾಜ್ಯದ ಚಕ್ರವರ್ತಿ ವಿಷ್ಣುವರ್ಧನನ ಕಥೆ.
I picked this book immediately after reading ta.ra.su's masterpiece durgastamaana. Durgastamaana was written in Early 80s whereas this book was written in 1956. So when the author wrote Durgastamaana he had 25 more years of writing experience! And that shows!
While this book by itself makes a good read, I guess my yardstick had changed after reading this author's magnum opus. Which is probably reflected in my rating of this book also.
I recommend you read this book, but do not expect another masterpiece and you will not disappointed. The book is a nice easy read and the author takes us back to early 12th century (900 years ago!) and gives us an overview of the fight between the Hoysala king vishnuvardhana and the Chola vassal king adiyamana ...
ನಾನು ಇದೆ ಮೊದಲನೆಯ ಬಾರಿ ತ.ರಾ.ಸು ಅವರ ಪುಸ್ತಕ ಓದಿದ್ದು. ಕನ್ನಡ ಪುಸ್ತಕದ ಓದಿನ ಪರಿಚಯವೂ ಕೂಡ ಅಷ್ಟಾಗಿ ಇಲ್ಲ. ಅಲ್ಲಿ-ಇಲ್ಲಿ ಪೂರ್ಣ ಚಂದ್ರ ತೇಜಸ್ವಿ ಅವರ ಒಂದ್-ಎರಡು ಪುಸ್ತಕ ಒದ್ದಿದೆ. ಆದರಿಂದ ನನ್ನ ಕನ್ನಡ ಬರೆಯುವ ಶೈಲಿಯಲ್ಲಿ ತಪ್ಪಿದರೆ ಕ್ಷಮೆ ಇರಲಿ.
ನಾನು 'ಹೊಯ್ಸಳೇಶ್ವರ ವಿಷ್ಣುವರ್ಧನ' ಪುಸ್ತಕದ ಬೆಗ್ಗೆ ಮೊದಲು ಟ್ವಿಟ್ಟರ್ ನಲ್ಲಿ ಓದಿದೆ. ಏಕೋ-ಏನೋ ಗೊತ್ತಿಲ್ಲ, ಪುಸ್ತಕ ಖರೀದಿಸಿ ಓದಬೇಕು ಅನ್ನಿಸಿತ್ತು. ಹಾಗೆ ಮಾಡಿದೆ ಕೂಡ.
ತ.ರಾ.ಸು ಅವರು ನಿಜವಾಗಿಯೂ ಸರಸ್ವತಿಯ ಪುತ್ರ. ಇದು ಅವರ ಬರವಣಿಗೆ ರೂಪದಲ್ಲಿ ಎದ್ದು ತೋರುತ್ತದೆ. ಬಳ್ಳಾಲರಾಯನ ಆ ಛಲ ವರ್ಣಿಸುವ ಶೈಲಿ, ಬಿಟ್ಟಿ ದೇವ - ಬಳ್ಳಾಲರಾಯನ ಬಾತೃ ವಾತ್ಸಲ್ಯ. ಗಂಗರಾಜ-ಬಿಟ್ಟಿದೇವನ ನಡುವಿನ ತಂದೆ-ಮಗನಂತಹ ಪ್ರೇಮ, ರಾಜ-ಸೇನಾಪತಿಯ ಸಂಬಂಧ.
ಇಡೀ ಪುಸ್ತಕವೇ ಕನ್ನಡಿಗರಿಗೆ ಒಂದು ರೋಮಾಂಚನದ ಇತಿಹಾಸ. ನಮ್ಮೆ ಪೂರ್ವಜರು ಕನ್ನಡ ನಾಡಿಗೋಸ್ಕರ ತೆತ್ತ ಬಲಿದಾನಗಳು ಅಪಾರ. ನಂಗೆ ಬಹಳ ಇಷ್ಟವಾದ ಸಂಗತಿ ಈ ಪುಸ್ತಕದಲ್ಲಿ ಗೌರಚಾರಿ ಎಂಬ ಅಕ್ಕಸಾಲಿಗ, ಕನ್ನಡಿಗರಲ್ಲಿಯೂ ಕೂಡ ಹಿಂದಿನ ಕಾಲದಲ್ಲೇ ವಿಜ್ಞಾನ/engineering ಬಗ್ಗೆ ಇದ್ದ ಆಸಕ್ತಿ, strategic planning ಇವೆಲ್ಲದರ ಬಗ್ಗೆ ಓದುವಾಗ ಮೈಮೇಲಿನ ಕೂದಲು ಎದ್ದು ನಿಲ್ಲುತ್ತದೆ. ಇಂಗ್ಲಿಷ್ ನಲ್ಲಿ ಹೇಳಬೇಕಾದರ್ರೆ goosebumps. ಕನ್ನಡಿಗರು ಒಮ್ಮೆಯಾದರು ಓದಬೇಕು ಈ ಪುಸ್ತಕವನ್ನ, ಆವಾಗಲೇ ನಮ್ಮ ಶೌರ್ಯ, ವಿಶಾಲ ಹೃದಯತನ ಎಲ್ಲವೂ ತಿಳಿಯುವುದು.
ವಿಷ್ಣುವರ್ಧನ ಚೋಳರ ಮೇಲೆ ದಂಡೆತ್ತಿ ಹೋಗುವ ಸನ್ನಿವೇಶದ ಸುತ್ತ, ಈ ಪುಸ್ತಕ ಗಿರಕಿ ಹೊಡೆಯುತ್ತದೆ. ವಿಷ್ಣುವರ್ಧನನ ಅಣ್ಣ, ಬಲ್ಲಾಳರಾಯನ ಮರಣಾನಂತರ, ಚಾಲುಕ್ಯ ಸಾಮ್ರಾಜ್ಯದ ಅಧಿಕಾರ ವಹಿಸಿಕೊಳ್ಳುವ ವಿಷ್ಣುವರ್ಧನ, ಅಣ್ಣನಿಗೆ ಕೊಟ್ಟ ಮಾತಿನಂತೆ, ಚೋಳರ ಹುಟ್ಟಡಗಿಸುವ ದೀಕ್ಷೆ ಕೈಗೊಳ್ಳುತ್ತಾನೆ. ಅದಕ್ಕೆ ತಕ್ಕ ತಯಾರಿ ಮಾಡಿಕೊಳ್ಳುವ, ದಂಡೆತ್ತಿ ಹೋಗುವ ದೃಶ್ಯಗಳನ್ನ ರೋಮಾಂಚನಗೊಳ���ಳುವಂತೆ ವರ್ಣಿಸಲಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಆಸಕ್ತಿ ಉಳ್ಳವರು, ಕನ್ನಡಿಗರ ಕ್ಷಾತ್ರ ತೇಜಸ್ಸಿನ ಬಗ್ಗೆ ಹೆಮ್ಮೆಯುಳ್ಳವರು ಖಂಡಿತ ಓದಲೇಬೇಕಾದ ಪುಸ್ತಕ.
ತ. ರಾ. ಸು ಅವರ ಕೀರ್ತಿ ನಾರಾಯಣ ಎಂಬ ಪುಸ್ತಕ ಓದಿದ್ದೆ. ಇದು ಅದೇ ಪುಸ್ತಕ ಬದಲಾದ ಶೀರ್ಷಿಕೆಯಲ್ಲಿ. ತಲಕಾಡಿನಲ್ಲಿದ್ದ ಚೋಳರನ್ನು ಸದೆಬಡಿದ ಹೊಯ್ಸಳೇಶ್ವರ ವಿಷ್ಣುವರ್ಧನನ ಯುದ್ಧದ ಕಥೆ. ವಿಜಯೋತ್ಸವದ ಪ್ರಯುಕ್ತ ರಾಜಾ ವಿಷ್ಣುವರ್ಧನ ಕೀರ್ತಿ ನಾರಾಯಣ ಎಂಬ ದೇವಸ್ಥಾನ ಕಟ್ಟಿದ ಕಥೆ. ವಿಷ್ಣುವರ್ಧನ ಪಂಚ ನಾರಾಯಣ ದೇವಸ್ಥಾನಗಳ ನಿರ್ಮಾತೃ, ಚೆಲುವ ನಾರಾಯಣ, ಮೇಲುಕೋಟೆ ವೀರ ನಾರಾಯಣ, ಗದಗ ಕೀರ್ತಿ ನಾರಾಯಣ, ತಲಕಾಡು ನಂಬಿ ನಾರಾಯಣ, ತೊಂಡನೂರು ವಿಜಯ ನಾರಾಯಣ(ಚೆನ್ನಕೇಶವ ದೇವಸ್ಥಾನ), ಬೇಲೂರು
ಹೊಯ್ಸಳ ಸಾಮ್ರಾಜ್ಯದ ಬಗ್ಗೆ ಮತ್ತಷ್ಟು ತಿಳಿಯುವ ತುಡಿತ ಹೆಚ್ಚಿಸುವಲ್ಲಿ ಈ ಕೃತಿ ಗೆಲ್ಲುತ್ತದೆ.
*ಕಥೆಯ ಸಾರಾಂಶ*: ಹೊಯ್ಸಳರನ್ನು ನೆನೆದರೆ ನಮಗೆ ನೆನಪಾಗುವುದೇ ಹೊಯ್ಸಳೇಶ್ವರ ವಿಷ್ಣುವರ್ಧನ. ವಿಷ್ಣುವರ್ಧನನು ತನ್ನ ಅಣ್ಣನಾದ ಬಲ್ಲಾಳರಾಯನಿಗೆ, ಚೋಳರ ರಾಜನಾದ ಅದಿಯಮನ ಆಳ್ವಿಕೆಯಲ್ಲಿ ಆಕ್ರಮಿಸಲ್ಪಟ್ಟಿದ್ದ ತಲಕಾಡನ್ನು (ತಲವನಪುರ) ವಶಪಡಿಸಿಕೂಳ್ಳುತ್ತೇನೆಂದು ಹಾಗೂ ಯುದ್ಧ ಸಮಯದಲ್ಲಿ ಶತ್ರುಗಳ ಮಹಿಳೆಯರನ್ನು ಅತ್ಯಾಚಾರಗೊಳಿಸದೆ, ಸಂಪತ್ತನ್ನು ದೋಚದೇ ಪ್ರೀತಿಯಿಂದ ಜನರನ್ನು ಗೆದ್ದು ತಲವನಪುರವನ್ನು ವಶಪಡಿಸಿಕೂಳ್ಳುತ್ತೇನೆಂದು ತನ್ನ ಮಡದಿ ಶಾಂತಲಾದೇವಿಗೆ ವಚನ ಕೂಟ್ಟಿರುತ್ತಾನೆ.
ಆ ವಚನವನ್ನು ಪೂರಯಿಸಲು ದಂಡನಾಯಕರಾದ ಗಂಗಾರಜರ ಸಹಾಯದಿಂದ ತನ್ನ ಸೈನ್ಯದೊಂದಿಗೆ *ಹೊಯ್ಸಳ ರಾಜಧಾನಿಯಾದ ದ್ವಾರಸಮುದ್ರದಿಂದ* ಹೊರಟು ಹೃದವಿನಕೆರೆಗೆ ತಲುಪಿ ಅಲ್ಲಿ ಎಲ್ಲ ಜನರನ್ನು ಪ್ರೀತಿಯಿಂದ ಗೆದ್ದು, ಕನ್ನಡ ರಾಜ್ಯದಲ್ಲಿ ಸುಮಾರು ೧೧೫ ವರ್ಷಗಳ ಕಾಲ ಆಳ್ವಿಕೆಯಲ್ಲಿದ್ದ ಚೋಳರನ್ನು ಹೇಗಾದರೂ ಓಡಿಸಿ ತಲಕಾಡನ್ನು ಆಕ್ರಮಿಸಿಕೊಳ್ಳಲು ಅಲ್ಲಿರುವ ಜನರ ಸಹಾಯದಿಂದ ಜನನಾಥಪುರ ಕೋಟೆಗೆ ಮುತ್ತಿಗೆ ಹಾಕಿ, ಯುದ್ಧದಲ್ಲಿ ಜನನಾಥಪುರವನ್ನು ವಶಪಡಿಸಿಕೊಳ್ಳುತ್ತಾರೆ. ಚೋಳರ ರಾಜ ಅದಿಯಮನು ತಮ್ಮ ಬಲದಮುಂದೆ ಹೊಯ್ಸಳರ ಬಲವು ಒಂದು ತೃಣವೆಂದು ಭಾವಿಸಿರುತ್ತಾನೆ, ಆ ನಿರ್ಲಕ್ಷ್ಯದಿಂದಲೇ ಹೃದವಿನಕೆರೆ, ಜನನಾಥಪುರ, ತಲಕಾಡನ್ನು ಕಳೆದುಕೂಂಡು ವಿಷ್ಣುವರ್ಧನಿಗೆ ಶರಣಾಗತನಾಗುತ್ತಾನೆ. ವಿಷ್ಣುವರ್ಧನನು ತಲಕಾಡನ್ನು ಆಕ್ರಮಿಸಿಕೂಂಡು, ಕನ್ನಡ ಜನರನ್ನು ಪ್ರೀತಿಯಿಂದ ಗೆದ್ದು *ಕೀರ್ತಿನಾರಾಯಣ*ನಾಗಿ ಪ್ರಸಿದ್ಧಿ ಹೂಂದುತ್ತಾನೆ.
ಈ ಕಥೆಯ ಸಾರಾಂಶವನ್ನು ಆಧಾರವಾಗಿಟ್ಟುಕೊಂಡು , ಐತಿಹಾಸಿಕ ಕಾದಂಬರಿಗಳಿಗೆ ಪ್ರಸಿದ್ಧರಾದ *ತ.ರಾ.ಸು* ರವರು ಸುಮಾರು ೧೫೨ ಪುಟಗಳಷ್ಟು ಸುಂದರವಾಗಿ ಚಿತ್ರಿಸಿದ್ದಾರೆ,ಅವರ ಬರಹ ಶೈಲಿಯು ಅಮೋಘವಾದುದು. ಸಮಯ ದೊರಕಿದಾಗ ತಪ್ಪದೇ ಓದಿ. *ಕಾರ್ತಿಕ್*
After ಕಂಬನಿಯ ಕುಯಿಲು , I picked up ರಕ್ತ ರಾತ್ರಿ second book in the series. Finishing it left me with the same mixed emotions — not dissatisfaction with the writing, but disappointment with the fate of the story. I had hoped for a more positive ending, yet once again, the hero dies.
Somehow, Lingana Nayaka, who was living in grief and devotion, performing puja to his mother, was drawn into politics. People expected him to be a king, convinced him to take the throne, and made him a ruler. But that very step sealed his fate and ultimately led to his tragic death.
While reading, I often found myself wondering how people can be that cruel. You can’t help but pity Lingana Nayaka and his struggles, while at the same time you come to hate Muddanna even more. It’s not a story that comforts you, but one that unsettles you and lingers in your mind.
Though it leaves you wishing for a happier conclusion, the power of the storytelling is undeniable. And above all, I feel blessed that Tarasu, a proud Kannadiga, wrote this in Kannada. It is a privilege to be able to read and experience his writings in our language.
This book just shows only a small portion of Vishnuvardhana's life - that of defeating Cholas and capturing Gangawadi (present Mysore region). No mention of Belur Halebid temples. No mention of Ramanujacharya. This book is like part of the series on Vishnuvardhana (just like series on Chitradurga's history), but sadly there is no such series. That is what has disappointed me on this historical novel by Ta.Ra.Su.
The build up to conquest of Talakadu is finely crafted in the novel. The contrast in court behaviour of the Cholas and the Hoysalas while preparing for the battle is interestingly portrayed . Ideas of acceptance, tolerance, democracy, scientific temper, military strategy spring up in conversations of historical characters - immersing a Kannadiga with pride.
This is one of the best historical novel till date. Loved the book. The way Tarasu describes the events are beyond words. Its about the rise of Hoysala empire under King Vishnuvardhana, Defeating Cholas and taking control of Talakadu.
Picked up soon after Ta Ra Su 's masterpiece "Durgastamana"...and it didn't disappoint me again..Wish he had written some more series on Hoysalas..especially Shantala Devi..