'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.
ತರಾಸು ಎಂಬ ಹೆಸರು ಪರಿಚಯವಿದ್ದರೂ ಅವರ ಬರವಣಿಗೆಯ ಕಡೆ ಗಮನ ಕೊಡದೆ ತುಂಬಾ ದೊಡ್ಡ ತಪ್ಪು ಮಾಡಿದೆ ಎಂಬ ಅನಿಸಿಕೆ ಹುಟ್ಟಿತು. ಆದರೂ "ಕಾಲಾಯ ತಸ್ಮೈ ನಮಃ" ಎಂದೆಂದುಕೊಂಡು ಸಮಾಧಾನ ಪಟ್ಟೆ. ದುರ್ಗದ ಇತಿಹಾಸದ ಸುತ್ತ ತರಾಸು ಅವರು ಬರೆದಿರುವ ಎಲ್ಲ ಕಾದಂಬರಿಗಳನ್ನು ಈ ವರುಷ ಓದಲೇಬೇಕೆಂಬ ಪಣತೊಟ್ಟು ಕಂಬನಿಯ ಕುಯಿಲು ಶುರು ಮಾಡಿದೆ.
ತರಾಸು ಅವರದು ಚಿತ್ರಮಯವಾದ ಭಾಷೆಯುಳ್ಳ ಕಲೆಗಾರಿಕೆ, ಕಣ್ಣಿಗೆ ಕಟ್ಟುವಂತೆ ನೋಟವನ್ನಾಗಲಿ ವ್ಯಕ್ತಿಗಳನ್ನಾಗಲಿ ಅವರು ವರ್ಣಿಸಬಲ್ಲರು. ಸಕ್ಕರೆಗೆ ಇರುವೆ ಅಂಟಿದಂತೆ ಭಾವುಕತೆ ಅಂಟುತ್ತದೆ ಇವರ ಕಾದಂಬರಿಗಳಲ್ಲಿ. ಕಾದಂಬರಿಯ ಉದ್ದಕ್ಕೂ ಇರುವ ರಾಜಕೀಯ ಒಳತಂತ್ರಗಳನ್ನು ಚಿಕ್ಕ ಚಿಕ್ಕ ಕತೆಗಳ ಮೂಲಕ ಹೇಳಿಕೊಂಡು, ಓದುಗನನ್ನು ಮುಖ್ಯ ಕಥಾವಸ್ತುವಿನಿಂದ ಹೊರ ಹೋಗದಂತೆ ಹಿಡಿದಿಡುವುದು ಕಾದಂಬರಿಯ ವಿಶೇಷ. ಪೂರ್ಣ ಕಾದಂಬರಿಯಲ್ಲಿ ನನಗೆ ತುಂಬಾ ಹಿಡಿಸಿದ್ದು - ದುರ್ಗದ ಪ್ರಧಾನಿ ಮತ್ತು ಹಿರಿಯ ದಳವಾಯಿಗಳ ನಡುವಿನ ಸಂಭಾಷಣೆ. ನನಗನಿಸಿದ್ದು - Diplomacy is at it's best.
ಚಿತ್ರದುರ್ಗದ ಮದಕರಿ ನಾಯಕರ ಮರಣದಿಂದ ಆರಂಭವಾದ ಪುಸ್ತಕ ಮುಗಿಯುವುದು ಅವರ ನಂತರ ಬರುವ ರಾಜನ ಪಟ್ಟಾಭಿಷೇಕ ಮತ್ತು ಅದರ ಪರಿಣಾಮಗಳಿಂದ. ಮುಂದೇನು ಅಂತ ತಿಳಿಯುವುದಕ್ಕೆ ರಕ್ತ ರಾತ್ರಿ ಓದಬೇಕು.
ಆಗಿನ ಕಾಲದ ರಾಜರ ಜೀವನ, ಹಲವಾರು ರಾಣಿಯರು, ಸಹಗಮನ, ಮಂತ್ರಿಮಂಡಲ, ಪಾಳೆಗಾರರು ಮುಂತಾದ ಹಲವು ವಿಷಯಗಳನ್ನ ತುಂಬಾ ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ. ಇತಿಹಾಸದ ಒಂದು ಪುಟ್ಟ ಹೆಳೆ ತೆಗೆದುಕೊಂಡು ಅದರ ಸುತ್ತ ಇಂತ ಭಯಂಕರ ಕಥೆ ರಚಿಸಿ ಕೊಟ್ಟಿದಾರೆ ತ.ರಾ.ಸು ಅವರು.
ಗೌರವ್ವ ನಾಗತಿ, ಒಬ್ಬವ್ವ ನಾಗತಿ, ಲಿಂಗಣ್ಣ ನಾಯಕ, ಭುವನಪ್ಪ, ದೇಸಣ್ಣ, ಗಿರಿಜವ್ವ, ಕಸ್ತೂರಿ ನಾಯಕ ಇವರೆಲ್ಲ ತಲೇಲಿ ಬಹಳ ಸಮಯ ಉಳಿದಂತಹ ಪಾತ್ರಗಳು.
ತ.ರಾ.ಸುರವರನ್ನು ಇಲ್ಲಿಯವರೆಗೂ ಓದಲೇ ಇಲ್ಲವಲ್ಲ ಎಂಬ ಕೊರಗು ಕಾಡುತ್ತಿದೆ. ದುರ್ಗದ ಇತಿಹಾಸಕ್ಕೆ ಸಂಬಂಧಪಟ್ಟ ಒಟ್ಟು ಎಂಟು ಕಾದಂಬರಿಗಳಲ್ಲಿ "ಕಂಬನಿಯ ಕುಯಿಲು" ಮೊದಲನೆಯದು. ಯಾವುದೋ ಪಳೆಯುಳಿಕೆಗಳಿಗೆ ಸುಬ್ಬರಾಯರು ಅವರ ಕಲ್ಪನೆಗಳನ್ನು ಬೆರೆಸಿ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.
...ಮದಕರಿನಾಯಕರ ಅಕಾಲಿಕ ಮರಣದೊಂದಿಗೆ ಶುರುವಾಗುವ ಕಾದಂಬರಿಯಲ್ಲಿ ಪ್ರಾಯಶಃ ಇದು ಇದ್ದಿದ್ದರೆ ಇನ್ನೂ ಚಂದಗಾಣುತ್ತಿತ್ತು ಎಂದು ಹೇಳುವ ಎಲಿಮೆಂಟುಗಳೇ ನನಗೆ ಸಿಗಲಿಲ್ಲ. ರಾಜರ ಆಳ್ವಿಕೆಯ ಕಲ್ಪನೆ, ಬಹುಪತ್ನಿತ್ವ, ಸಹಗಮನದ ಬಗ್ಗೆ ಮುಕ್ತವಾಗಿ ಕಾಣಸಿಗುತ್ತದೆ. ರಾಜನ ಮರಣಾನಂತರ ಮುಂದಿನ ರಾಜನಾರು ಎಂಬ ವಸ್ತುವನ್ನು ೨೦೦ ಪುಟಗಳಷ್ಟು ಓದಿಕೊಂಡರೂ ಅಯ್ಯೋ ಮುಗಿದು ಹೋಯಿತಾ ಎಂದು ಉದ್ಗರಿಸಿದೇ ಇರಲಾರಿರಿ.
ಮದಕರಿನಾಯಕರು ಅವರ ಅಣ್ಣ ಸರ್ಜೇನಾಯಕರ ಮರಣಾನಂತರ ಅವರ ಮಕ್ಕಳು ಇನ್ನೂ ಚಿಕ್ಕ ವಯೋಮಾನದವರು ಎಂಬ ಕಾರಣಕ್ಕೆ ಅಧಿಕಾರಕ್ಕೆ ಬರುತ್ತಾರೆ. ಗಂಡು ಸಂತಾನವಿರದ ಅವರೂ ಕಾಲನ ವಶರಾದ ಯಾರೂ ಅಧಿಕಾರ ವಹಿಸಿಕೊಳ್ಳಬೇಕು ಎಂಬ ರಾಜಕೀಯ ಜಿಜ್ಞಾಸೆಯೊಂದಿಗೆ ಕಾದಂಬರಿ ಹೊಸದೊಂದು ತಿರುವು ಪಡೆಯುತ್ತದೆ.
ಅಣ್ಣ ಸರ್ಜೇನಾಯಕರ ಮಕ್ಕಳಿಗೆ ಅಧಿಕಾರ ಹೋಗಬೇಕು ಎನ್ನುವುದು ನ್ಯಾಯಯುತವೇ ಆದರೂ ದಳವಾಯಿಗಳ ಯೋಜನೆಗಳನರಿತ ಮದಕರಿನಾಯಕರ ಮನದಿಂಗಿತ ಬೇರೆಯೇ ಆಗಿರುತ್ತದೆ. ಹಾಗೂ ಆ ಕೊನೆಯ ನಾಗತಿ ಗೌರವ್ವನ ಬಳಿ ಮರಣದ ಮುನ್ನ ಈ ವಿಷಯವನ್ನು ಹಂಚಿಕೊಂಡಿರುತ್ತಾರೆ. ನಾಯಕರು ಸೂಚಿಸಿದ ವ್ಯಕ್ತಿಯನ್ನು ದತ್ತು ತೆಗೆದುಕೊಳ್ಳುವ ಹಕ್ಕಿರುವುದು ನಾಯಕರಿಗೆ ಅಥವಾ ಅವರ ಮೊದಲ ನಾಗತಿಗೆ. ಮೂವತ್ತು ನಾಗತಿಯರು ಸಹಗಮನ ಮಾಡಿದರೆ ನಾಯಕರ ಆಸೆಯೂ ಈಡೇರದು ಎಂದು ಕೊನೆಯ ನಾಗತಿ ಹೇಳಿದಾಗ ಮೊದಲ ನಾಗತಿ ಉಳಿದುಕೊಂಡು ಹಲವು ವಿರೋಧಗಳಿದ್ದರರೂ ಮಿಕ್ಕ ವಿಧಿವಿಧಾನಗಳನ್ನು ಪೂರೈಸುತ್ತಾಳೆ.
ಇದರ ನಂತರ ಕಾದಂಬರಿ ತೆರೆದುಕೊಳ್ಳುತ್ತದೆ ಇನ್ನೂ ವೇಗವಾಗುತ್ತದೆ. ಈ ವಿರೋಧಗಳ ನಡುವೆ ನಾಗತಿಯು ಹೊಸದಾಗಿ ಪಟ್ಟಕ್ಕೆ ಬಂದ ರಾಜಕುಮಾರನನ್ನು ಹೇಗೆ ಕಾಯುತ್ತಾಳೆ, ತಾಯಿಮನದ ತೊಳಲಾಟ, ಸಾವಿನಲ್ಲಿ ಗಂಡನನ್ನು ಸೇರಲಾಗಲಿಲ್ಲವಲ್ಲ ಎಂಬ ಕೊರಗುಗಳ ನಡುವೆ ನಾಯಕರ ಕೊನೆಯಾಸೆಯನ್ನು ಹೇಗೆ ಉಳಿಸುತ್ತಾಳೆ ಅಥವಾ ಉಳಿಸುತ್ತಾಳಾ ಎಂಬುದು ಕಾದಂಬರಿಗೆ ಒಂದು ಕುದುರೆಯಾದರೆ ಅರಮನೆಯ ಅನ್ನವುಂಡು ಅರಮನೆಗೆ ದ್ರೋಹ ಬಗೆವ ದಳವಾಯಿಗಳು, ಸರ್ಜೇನಾಯಕನ ಎರಡನೇ ಮಗ ಚಿಕ್ಕಣ್ಣನಾಯಕರೂ ಮುಂದಿನ ನಡೆಯೇನು ಎಂಬುದು ಇನ್ನೊಂದು ಕುದುರೆ.
ಕಾದಂಬರಿಯಲ್ಲಿ ತ್ಯಾಗವಿದೆ, ಪ್ರೇಮವಿದೆ, ಕ್ರೌರ್ಯವಿದೆ, ಕುತಂತ್ರವಿದೆ ರಾಜಕೀಯವಿದೆ, ರಾಜ್ಯದಾಹವಿದೆ, ರಾಜ್ಯದ್ರೋಹವಿದೆ. ಓದುವಾಗ ಮನಸ್ಸಿನಲ್ಲಿ ಪುಸ್ತಕದೊಂದಿಗೆ ಮನಸ್ಸಿನಲ್ಲೂ ಆ ಐತಿಹಾಸಿಕ ಚಿತ್ರಣ ಮೂಡುತ್ತದೆ. ಓದಿಲ್ಲವಾದಲ್ಲಿ ಆದಷ್ಟೂ ಬೇಗ ಓದಿ! ಓದಿದ್ದರೇ ಎಂದಿನಂತೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ಮರೆಯದಿರಿ..! ತ.ರಾ.ಸುರವರಿಗೆ ನಮಿಸುತಾ ಪುನಃ ಬರುವೆ
ಇತಿಹಾಸದ ಒಂದು ಸಣ್ಣ ಎಳೆಯನ್ನು ಬಳಸಿಕೊಂಡು ಇಷ್ಟೊಂದು ಸೊಗಸಾದ ಕಾದಂಬರಿಯನ್ನು ಸೃಜಿಸುವುದು ಸುಲಭದ ಮಾತಲ್ಲ. ಮಾನ್ಯ ತ ರಾ ಸು ಅವರು ಆ ಕಾರ್ಯವನ್ನು ಸಾಧಿಸಿ, ಚಿತ್ರದುರ್ಗದ ಇತಿಹಾಸದ ಕುರಿತಾಗಿ 8 ಕಾದಂಬರಿಗಳ ಮೂಲಕ ಇಂಥಾ ಅದ್ಭುತವಾದ ಕುಸುರಿಯನ್ನು ರಸವತ್ತಾಗಿ ಸೃಷ್ಟಿಸಿದ್ದಾರೆ. ಈ ಸರಮಾಲೆಯ ಮೊದಲ ಮುತ್ತು ‘ಕಂಬನಿಯ ಕುಯಿಲು’.ವಾರಿಸುದಾರನಿಲ್ಲದ ಇಮ್ಮಡಿ ಮದಕರಿ ನಾಯಕರ ಸಾವಿನಿಂದ ಆರಂಭವಾಗುವ ಈ ಕಥೆ , ನಂತರ ಪಟ್ಟಕ್ಕೆ ಬಂದ ಅವರ ಸಾಕು ಮಗ ಓಬಣ್ಣ ನಾಯಕರ ಕೊಲೆಯೊಂದಿಗೆ ಅಂತ್ಯವಾಗುತ್ತದೆ.
ಉಪಮೆಗಳನ್ನು ಯಥೇಚ್ಛವಾಗಿ ಬಳಸಿ ಸನ್ನಿವೇಶಗಳನ್ನು ಮನಸ್ಸಿಗೆ ನಾಟುವಂತೆ, ನೆನಪಿನ ಪುಟದಲ್ಲಿ ಅಚ್ಚೊತ್ತುವಂತೆ ವಿವರಿಸುವುದು ತ ರಾ ಸು ಅವರ ವಿಶೇಷತೆ. ಈ ಕಾದಂಬರಿಯಲ್ಲೂ ಅಂತಹ ಹಲವು ಸಂಗತಿಗಳು ಹುಬ್ಬೇರಿಸುವಂತೆ ಮಾಡುತ್ತದೆ.ಇಲ್ಲಿ ತ್ಯಾಗವಾಗಿದೆ, ಮಾತೃ ಪ್ರೇಮವಿದೆ, ಕ್ರೋಧವಿದೆ, ಅಸೂಯೆ - ಸ್ವಾರ್ಥಗಳ ಕ್ರೂರ ರಾಜಕಾರಣವಿದೆ, ನಿಷ್ಠೆಯ ಅನಾವರಣವಿದೆ.
ಇಮ್ಮಡಿ ಮದಕರಿ ನಾಯಕರ ಅಣ್ಣ ಸರ್ಜೆ ನಾಯಕರ ಮಕ್ಕಳನ್ನು ನಾಯಕರನ್ನಾಗಿ ಮಾಡಬೇಕೆಂದು, ಅವರ ಮೂಲಕ ತಮ್ಮ ಕಾರ್ಯ ಸಾಧನೆ ಮಾಡಿಸಿಕೊಳ್ಳಬೇಕೆಂಬ ಆಸೆಯನ್ನು ಹೊಂದಿದ ದಳವಾಯಿಗಳು, ಮದಕರಿ ನಾಯಕರ ಇಚ್ಛೆಯಂತೆ ಸಾಕು ಮಗ ಓಬಣ್ಣ ನಾಯಕರನ್ನು ಪಟ್ಟಕ್ಕೆ ತರಬೇಕೆಂಬ ಅಭಿಲಾಷೆ ಹೊಂದಿದ ನಾಗತಿ ಹಾಗೂ ಅವರ ಇಚ್ಛೆಯನ್ನು ಸಾಧಿಸಲು ಶ್ರಮ ಪಡುವ ಪ್ರಧಾನಿ ಭುವನಪ್ಪನವರು - ಈ ಎರಡು ಬಣಗಳ ಆಂತರಿಕ ಕಲಹವೇ ಕಂಬನಿಯ ಕುಯಿಲು.
ಲಿಂಗಣ್ಣ ನಾಯಕ ತನ್ನ ತ್ಯಾಗದ ಮೂಲಕ ಹತ್ತಿರವಾಗುತ್ತಾನೆ, ಕಸ್ತೂರಿ ನಾಯಕ ತನ್ನ ನಿಷ್ಠೆಯಿಂದ ಅಮರನಾಗುತ್ತಾನೆ, ಭುವನಪ್ಪ ನವರು ತಮ್ಮ ಪ್ರಚಂಡ ರಾಜಕಾರಣದಿಂದ ಮಾದರಿಯಾಗುತ್ತಾರೆ. ಗಂಗವ್ವನ ಪಾತ್ರ ಮನಸಿಗೆ ಹತ್ತಿರವಾಗುತ್ತದೆ,ಹನುಮವ್ವ ತನ್ನ ಕರುಣಾಜನಕ ಜೀವನದ ಮೂಲಕ ಕಣ್ಣು ತೇವಗೊಳಿಸುತ್ತಾಳೆ, ದಳವಾಯಿ ಮುದ್ದಣ್ಣ ಗಹಗಹಿಸುವ ನಗು ಕಿವಿಯಲ್ಲಿ ಪ್ರತಿಧ್ವನಿಸುತ್ತದೆ.
Ta.Ra.Su. as he is popularly known is Taluku Ramaswami Subba Rao's pen name. A giant in kannada literature, he has penned over 60 works, many of which have been made into critically acclaimed and commercially successful movies. Naagarahaavu, Hamsageethe, Chakrateertha, Chandavalliya Thota are just a few of his novels that have been made into popular movies.
Hailing from Chitradurga district in Karnataka, a place with a long history, many of Ta.Ra.Su's novels are based in Chitradurga. A prominent writer of the pragathisheela style of writing started by Aa.Na.Kru., Ta.Ra.Su. was an early master of the historical fiction genre. The pinnacle of his writing career was Durgastamana, based on the last Madakari Nayaka who died defending Chitradurga against Haider Ali. That novel got Ta.Ra.Su. the Sahitya Akademi Award posthumously. Durgastamana is the culmination of a 8 volume series on the poleydars of Chitradurga. The first in the series is Kambaniya Kuyilu.
Literally meaning 'Harvest of Tears', Kambaniya Kuyilu narrates the events that occur after the death of the second Madakari Nayaka in 1674 C.E. The events that follow the death of Madakari Nayaka II occupy about four lines in the chronicles of Chitradurga's history. Ta.Ra.Su. himself mentions in the foreword that he has used this little information to weave the tale narrated in Kambaniya Kuyilu.
In line with the pragatisheela style of writing, Ta.Ra.Su. uses simple language in an almost poetical way. The text and narrative is crisp and evokes the emotions that the characters undergo. For example though they all agree that it is proper for Linganna to ascend the throne, their anxiety to see Obanna ascend the throne in fulfilment of the last king's wishes, is portrayed in a convincing manner. The conversation that Gauravva, the youngest queen has with Obavva, the chief queen convincing her not to commit sati, but instead live on to fulfil the dead king's wishes is poignant. Obavva's seeking Linganna's promise to forfeit his right to the throne and Linganna's promise are heart-touching. Kasturi Nayaka, Obanna's personal bodyguard and Girija, Obavva's hand maiden entrusted with the task of protecting Obanna, the bravery with which they carry out their task, Kasturi Nayaka's disappointment at having failed in his task of protecting Obanna, ultimately driving him to commit suicide, are heart rending scenes. The calm demeanour with which Obavva single handedly accosts the rebelling army and humbles them when they ask for more gifts makes one wonder at the sagacity of the woman who grew into her role so well, even without any prior exposure to politics! The savagery of Muddanna, even when he is having an apparently normal conversation with Desanna, is blood curdling.
All this is the magic woven by the pen of Ta.Ra.Su. He recreates the scenes so vividly, without resorting to extensive descriptions, that the reader is transported to the world of Chitradurga, in the sixteenth century! He makes the reader experience every event, the emotions, the fears and the anxieties that the characters go through. Character construction is excellent - the author brings out the inner strengths and frailties of each character, in a manner that the reader understands and empathises with. The plot itself is taut and does not sag at any point, a sure page turner.
A must read for every lover of kannada literature. Unfortunately, there are no translations available. Hopefully someone inspired by the magic of Ta.Ra.Su.'s pen will take up the onerous task. Until then, this treasure will unfortunately be limited only to the kannada readers, who I hope, will re-discover this classic.
ಕನ್ನಡಿಗರು ತರಾಸುರವರನ್ನ 'ಆಧುನಿಕ ಗದ್ಯ ಶಿಲ್ಪಿ' ಅಂತ ಬಿರುದುಗೊಟ್ಟು ಕೊಂಡಾಡುವುದು ಯಾಕೆ ಅಂತಾ ತಿಳಿಯಬೇಕು ಅಂದರೆ, ಈ ಸರಣಿಯನ್ನ ಒಮ್ಮೆ ಓದಲೇ ಬೇಕು. ದುರ್ಗದಲ್ಲಿ ಗತಿಸಿದ ಒಂದು ಪುಟ್ಟ ಕಾಲಘಟ್ಟವನ್ನ ಆಯ್ದು, ತಮ್ಮ ಕಲ್ಪನಾ ಸಂಯ್ಯೋಜನೆಯೊಂದಿಗೆ ಒಂದು ಅದ್ಭುತವಾದ ಇತಿಹಾಸಗಾತೆಯನ್ನ ನಿರ್ಮಾಣ ಮಾಡಿರುವರು. ಒಂದು ಐತಿಹಾಸಿಕ ಕಾದಂಬರಿಯನ್ನ ರಚಿಸಿ, ಅದರಲ್ಲಿ ಬರುವ ಪ್ರತಿಯೊಂದು ಪಾತ್ರಗಳ ಚಿಂತನೆ, ಸಂಭಾಷಣೆಗಳಾಗಿರಬಹುದು; ರಾಜಕೀಯಕ್ಕೆ ಸಂಬಂಧಿಸಿದ ಚಾತುರ್ಯತೆ, ಷಡ್ಯಂತ್ರಗಳಾಗಿರಬಹುದು; ದ್ವಂದ್ವ ಸನ್ನಿವೇಶಗಳಾಗಿರಬಹುದು; ಇನ್ನು ಕ್ರೌರ್ಯ, ಅಂತಃಕರಣ, ರಾಜ್ಯಾಧಾಹ, ರಕ್ತಾಧಾಹಗಳಾಗಿರಬಹುದು; ಇವೆಲ್ಲವನ್ನೂ ಓದುಗನ ಮುಂದಿರಿಸಿ ಜಿಜ್ಞಾಸೆಗೆ ಎಳೆಯುವ ತರಾಸುರವರ ಚಾತುರ್ಯವನ್ನ ಮೆಚ್ಚಲೇಬೇಕು. 'ಕಂಬನಿಯ ಕುಯಿಲು'ನಿಂದ ಶುರುವಾಗಿ, 'ದುರ್ಗಾಸ್ತಮಾನ'ದಲ್ಲಿ ಕೊನೆಗೊಳ್ಳುವ ೮ ಪುಸ್ತಕಗಳ ಚಿತ್ರದುರ್ಗೇತಿಹಾಸ ಸರಣಿ, ನಿಜಕ್ಕೂ ಓದುಗನ ಮನಹೊಕ್ಕು, ಕಾಡುವ, ಮೈ ನವಿರೇಳಿಸುವ, ಮನಕಲಕುವ, ಒಂದು ರೋಚಕ ರಂಜಕ ಸರಣಿ. ಮುಂದೇನಾಗುವುದೋ? ಅಂತ ಕಾತುರತೆಯಿಂದ ಓದಿಸಿಕೊಂಡು ಸಾಗುವ ರೋಮಾಂಚಕ ಸರಣಿ!
ಇಮ್ಮಡಿ ಮದಕರಿನಾಯಕರು ಕಾಲವಾದ ಸಂದರ್ಭದಲ್ಲಿ ಎದುರಾಗುವ ಉತ್ತರಾಧಿಕಾರಿಯ ಆಯ್ಕೆಯ ಗೊಂದಲದಿಂದ 'ಕಂಬನಿಯ ಕುಯಿಲು' ಶುರುವಾಗುವುದು. ಇಲ್ಲಿ ದಿವಂಗತ ನಾಯಕರ ಅಣ್ಣಂದಿರಾದ ಸರ್ಜೇ ನಾಯಕರ ಮಕ್ಕಳಿಗೆ ದುರ್ಗದ ಸಿಂಹಾಸನ ಸಿಗಬೇಕೆನ್ನುವ ಮುದ್ದಣ್ಣ ಮತ್ತವನ ತಂಡಕ್ಕೆ ಎದುರಾಗಿ ನಾಯಕರ ಆಶಯದಂತೆ ತಮ್ಮ ಮಕ್ಕಳಿಗೆ ಪಟ್ಟವಾಗಬೇಕೆನ್ನುವ ಪ್ರಧಾನಿ, ದಳವಾಯಿಯವರ ತಂಡ ನಿಲ್ಲುವುದು. ಈ ಹೋರಾಟದಲ್ಲಿ ಅದೆಷ್ಟೋ ರಾಜಕೀಯ ಬಿರುಗಾಳಿಗಳೇಳುವವು, ಎಷ್ಟೋ ಜೀವ-ಬದುಕುಗಳು ಅಸುನೀಗುವವು, ಎಷ್ಟೋ ಸಂಸಾರಗಳು ಸೊರಗುವವು, ಯುವರಾಜನಿಂದ ಹಿಡಿದು ಬಿಚ್ಚುಗತ್ತಿಗಳ ಕಗ್ಗೊಲೆಗಳಾಗುವವು, ಕುತಂತ್ರಿಗಳ ಕೈ ಮೇಲಾಗಿ ಪ್ರಾಮಾಣಿಕರ ವಧೆಯಾಗುವುದು. ಇವೆಲ್ಲದಕ್ಕೂ, ಸ್ವಾಮಿನಿಷ್ಠೆಯಿಂದ ಪ್ರಾರಂಭವಾದ ಮುದ್ದಣ್ಣನ ಹೋರಾಟವು ಬದಲಾಗಿ ಅಧಿಕಾರದ ಅಮಲುನಿಂದಾಗಿ ಕುರುಡಾದ, ಸ್ವಾರ್ಥಚಿತ್ತದಿಂದ ದ್ವೇಷದ ಕ್ರೌರ್ಯದ ದುರುಳಾಡಳಿತ ನೆಡೆಸಿದುದೇ ಮುಖ್ಯ ಕಾರಣ.
ಇಲ್ಲಿ ಕೆಲವು ಪ್ರಸ್ತಾಪಾರ್ಹ ಸಂಗತಿಗಳೆಂದರೆ; ಹಿರಿಯ ನಾಗತಿಯವರ ಮುಂದಾಲೋಚನೆ ಹಾಗೂ ಮಾತೃಪ್ರಧಾನ ಸತ್ವ ನಿಜಕ್ಕೂ ಸ್ಪೂರ್ತಿದಾಯಕ, ದೇಸಣ್ಣನಾಯಕ ಮತ್ತು ಭುವನಪ್ಪ ನಾಯಕರ ರಾಜಕೀಯ ಮುತ್ಸದ್ದಿ ಮತ್ತು ಹಿತಾಸಕ್ತಿಗಳು ಆದರ್ಶನೀಯ. ಲಿಂಗಣ್ಣ ನಾಯಕನ ತ್ಯಾಗ ಮತ್ತು ಕಸ್ತೂರಿ ರಂಗಪ್ಪನ ಸ್ವಾಮಿನಿಷ್ಠೆ ಎಂಥವರನ್ನೂ ಹನಿಗಣ್ಣಾಗಿಸುವುದು. ಗಂಗವ್ವ, ಹನುಮವ್ವ ಹಾಗೂ ಗಿರಿಜೆಯ ಪಾತ್ರಗಳೂ ಅಷ್ಟೇ ತೂಕದಾಯಕವಾಗಿ ಮೂಡಿಬಂದಿವೆ. ಒಟ್ಟಿನಲ್ಲಿ, ಈ ಪುಸ್ತಕವು ಮದಕರಿನಾಯಕರ ಸಾಕುಮಗನಾದ ಪಟ್ಟಾಭಿಷಿಕ್ತ ಓಬಣ್ಣ ನಾಯಕನು ಹತ್ಯೆಗೊಂಡು ಹೃದಯ ವಿದ್ರಾವಕವಾದ ಅಂತ್ಯದೊಂದಿಗೆ ಕೊನೆಗೊಳ್ಳುವುದು.
This entire review has been hidden because of spoilers.
ತ.ರಾ.ಸು ಅವರ 'ಕಂಬನಿಯ ಕುಯಿಲು' ನಾನು ಓದಿದ ಅವರ ಮೊದಲ ಕಾದಂಬರಿ. ಅವರ ಬರವಣಿಗೆಯ ಭೋರ್ಗರೆತಕ್ಕೆ ಬೆರಗಾಗಿ ಹೋದೆ. ಪಾತ್ರಗಳ ಪ್ರತಿಯೊಂದು ಭಾವನೆಯನ್ನು ಅಲಂಕಾರಗಳ ಬಳಕೆಯ ಮೂಲಕ ಓದುಗನ ಮನದಾಳಕ್ಕೆ ಇಳಿಸಿ,ಪಾತ್ರಗಳೊಂದಿಗೆ ಓದುಗನ ಬಂಧ ಬೆಸದಿದ್ದಾರೆ.
ದುರ್ಗದ ವೈಭವ, ಅರಮನೆ,ಕೋಟೆ,ಕೊತ್ತಲಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಕಾದಂಬರಿ ಓದುತ್ತಾ ನಾವು ದುರ್ಗದ ಪ್ರಜೆಗಳೇನೋ? ಪ್ರತಿಯೊಂದು ಸನ್ನಿವೇಶಕ್ಕೂ ಮೂಕ ಸಾಕ್ಷಿ ಆಗುತ್ತಿದ್ದೇವೆನೋ? ಎಂದು ಭಾಸವಾಗುವಂತೆ ಅಕ್ಷರಗಳನ್ನು ಹೆಣೆದಿದ್ದಾರೆ.
ರಾಜ ಮದಕರಿ ನಾಯಕನ ಅಂತ್ಯದಿಂದ ಆರಂಭವಾಗುವ ಕಥೆ ಇದು! ರಾಜನ ಸಾವಿನ ನಂತರ ಹಿರಿಯ ನಾಗತಿ ಓಬ್ಬವ್ವ ಸತಿ ಸಹಗಮನಕ್ಕೆ ಸಿದ್ಧತೆ ನಡೆಸುತ್ತಿದ್ದರೆ, ಕಿರಿಯ ನಾಗತಿ ಗೌರವ್ವ ತನ್ನ ತಮ್ಮನಾದ ಓಬ್ಬಣ್ಣ ನಾಯಕನನ್ನು ಮುಂದಿನ ರಾಜನಾಗಿಸುವ ಸಿದ್ಧತೆ ನಡೆಸಿರುತ್ತಾಳೆ. ಹಿರಿಯ ನಾಗತಿಯ ವೈರಾಗ್ಯ ಕಿರಿಯ ನಾಗತಿಯ ಅಧಿಕಾರ ದಾಹ ಕಂಡು ಇದೆಂಥಾ ವೈರುಧ್ಯ! ಎಂದು ಎನಿಸುವಾಗಲೇ ವಿಧಿ ಅವರಿಬ್ಬರ ಜೀವನವನ್ನು ಸ್ಥಾನಪಲ್ಲಟಗೊಳಿಸಿ, ಅನಿರೀಕ್ಷಿತ ತಿರುವು ನೀಡಿ ಅಚ್ಚರಿಗೊಳಿಸುತ್ತೆ.
ಇತ್ತ ಮದಕರಿ ನಾಯಕರ ಆಸೆಯಂತೆ ಅವರ ಸಾಕು ಮಗ ಓಬ್ಬಣ್ಣ ನಾಯಕನನ್ನು ರಾಜನನ್ನಾಗಿಸಬೇಕೆಂದು ರಾಜ ಕುಟುಂಬ ಮತ್ತು ಹಿತೈಷಿಗಳು ನಿರ್ಧರಿಸಿ, ಅದಕ್ಕಾಗಿ ಎಲ್ಲರ ವಿಶ್ವಾಸನವನ್ನು ಗಳಿಸಲು ಸಿದ್ಧತೆಯಲ್ಲಿದ್ದರೆ, ಅತ್ತ ಸರ್ಜೆ ನಾಯಕರ ಮಕ್ಕಳನ್ನು ರಾಜನನ್ನಾಗಿಸಿ ಪರೋಕ್ಷವಾಗಿವಾಗಿ ರಾಜಾಡಳಿತ ಹೊಂದಬೇಕೆಂದು ದಳವಾಯಿಗಳ ಗುಂಪು ತೀರ್ಮಾನಿಸಿ, ರಕ್ತವನ್ನು ಹರಿಸಲು ಕೂಡ ಸನ್ನಧರಾಗಿರುತ್ತಾರೆ. ಹೀಗೆ ದುರ್ಗದಲ್ಲೇ ಎರಡು ಒಳ ಬಣಗಳಾಗಿ ವೈರತ್ವ ಚಿಗುರುತ್ತದೆ.
ಸೈನ್ಯದಲ್ಲಿರುವ ಸಂಸಾರದ ಆತಂಕ ,ಭಯ,ಮಾನಸಿಕ ತೊಳಲಾಟಗಳನ್ನು ಗಂಗವ್ವ ಪ್ರತಿನಿಧಿಸಿದರೆ, ಯುದ್ಧದ ದುಷ್ಪರಿಣಾಮಗಳು, ಸಾವು-ನೋವುಗಳು ಹನುಮವ್ವನ ಹುಚ್ಚುತನದಲ್ಲಿ, ಅವಳ ಹಾಡು,ಮಾತುಗಳಲ್ಲಿ ವ್ಯಕ್ತವಾಗಿದೆ. ರಾಜನಾದ ಓಬ್ಬಣ್ಣ ನಾಯಕನ ಮಾತುಗಳು ಎಲ್ಲೂ ಕೇಳಿಬರುವುದಿಲ್ಲ. ಇಡೀ ದುರ್ಗಕ್ಕೆ ಕ��ಂದ್ರ ಬಿಂದುವಾದರೂ ಆತನ ವ್ಯಕ್ತಿತ್ವದ ಪರಿಚಯವಾಗದೆಯೇ, ಆತನ ಕೊಲೆಯೊಂದಿಗೆ ಕಾದಂಬರಿ ಅಂತ್ಯವಾಗುತ್ತದೆ.
ಓಬವ್ವ ನಾಗತಿಯ ಗಾಂಭೀರ್ಯ ಹಾಗೂ ಆತಂಕ, ಪ್ರಧಾನಿ ಭುವನಪ್ಪನವರ ಸರಳತೆ ಹಾಗೂ ರಾಜತಂತ್ರ, ಲಿಂಗಣ್ಣ ನಾಯಕ ತಾಯಿಗಾಗಿ ಮಾಡುವ ಪಟ್ಟದ ತ್ಯಾಗ ಆತನ ಧೈರ್ಯ, ಕಸ್ತೂರಿ ನಾಯಕ ಮತ್ತು ಗಿರಿಜೇಯ ರಾಜನಿಷ್ಠೆ, ಗಂಗವ್ವ-ವೀರಣ್ಣನ ತಾಯಿ ಮಗನ ವಾತ್ಸಲ್ಯ, ದಳವಾಯಿ ದೇಸಣ್ಣರ ತಪ್ಪುಗಳನ್ನು ತಿದ್ದಿಕೊಳ್ಳುವಂತ ಸದ್ಬುದ್ದಿ, ದಳವಾಯಿ ಮುದ್ದಣ್ಣ ಮತ್ತು ಚಿಕ್ಕನಾಯಕನ ���ಳಸಂಚು, ರಕ್ತದಾಹ,ಅಧಿಕಾರದ ಲಾಲಾಸೆ, ಇಂತಹ ಹಲವಾರು ಅಂಶಗಳೆಲ್ಲವೂ ಸೇರಿ ಇದು ರೋಚಕವಾದ ಐತಿಹಾಸಿಕ ಕಾದಂಬರಿ ಎನಿಸಿ ಓದುಗನಿಗೆ ರಸದೌತನ ನೀಡುತ್ತೆ.
ತುಂಬಾ ಚೆನ್ನಾಗಿ ಮೂಡಿಬಂದಿರುವ ಕಾದಂಬರಿ. ದಾವಣಗೆರೆ ಹಾಗು ಚಿತ್ರದುರ್ಗ ಸೀಮೆ ಇಂದ ಬಂದಿರುವ ನಾನು ಈ ಪುಸ್ತಕ ಓದುವಾಗ ವಿಶಿಷ್ಟವಾದ ಅನುಭವ ನೀಡಿತು.
ನಾನು ಯಾವಾಗಲೂ ನನ್ನ ಅತ್ತೆ ಊರಿಗೆ ವರುಷಕ್ಕೆ ಒಮ್ಮೆ ಹೋಗುತಿದ್ದೆ. ಊರಿನ ಹೆಸರು ‘ಓಬ್ಬವ್ವನಗತಿಹಳ್ಳಿ’ . ಈ ಹಳ್ಳಿ ಚಿತ್ರದುರ್ಗ ಜಿಲ್ಲೆಯಲ್ಲಿದೆ . ಬಹುಶ್ಯಹಾ ಕಥೆಯಲ್ಲಿ ಬರುವ ಓಬ್ಬವ್ವ ನಾಗತಿ ಈ ಹಳ್ಳಿಯವರಾಗಿರಬೇಕು . ಎಲ್ಲ ಒಂದಕ್ಕೆ ಒಂದು ಸೇರಿಕೊಂಡು ವಿಶಿಷ್ಟವಾದ ನೈಜ ಅನುಭವ ಕಥೆ ಈವಾಗ ಕಣ್ಣಮುಂದೆ ನಡಿಯುತ್ತಿದೆಯೇನೋ ಎಂಬ ಅನುಭವ ತಂದಿತು .
ಓಬ್ಬವ್ವ ನಾಗತಿ ಬದಲು ಗೌರವ್ವ ನಾಗತಿ ಬದುಕಿ ಉಳಿದಿದ್ದರೆ ಕೊನೆಯಲ್ಲಿ ಆಗಬಾರದ್ದು ಆಗುತ್ತಿರಲಿಲ್ಲವೆಂದು ಅನಿಸುತ್ತದೆ. ಮುಂದಿನ ರಕ್ತರಾತ್ರಿ ಕಾದಂಬರಿ ಯಾವಾಗ ಓದುತ್ತೇನೋ ಅನ್ನಿಸುತ್ತಿದೆ.
ತ.ರಾ.ಸು ವಿರಚಿತ ದುರ್ಗದ ಎಂಟು ಪುಸ್ತಕಗಳಲ್ಲಿ ಮೊದಲ ಪುಸ್ತಕ ಮುಗಿಸಿ ಮುಂದಿನ ಪುಸ್ತಕ ಕೈಯಲ್ಲಿ ಹಿಡಿದು ಕುಳಿತಿದ್ದೇನೆ. ಶೀರ್ಷಿಕೆಯಂತೇ ಕಾದಂಬರಿಯುದ್ದಕ್ಕೂ ಕಂಬಿನಿ ಮಿಡಿವಂತಹುದೇ ಸನ್ನಿವೇಶ. ದುರ್ಗದ ನಾಯಕರ ಸಾವಿನ ನಂತರ ದುರ್ಗದ ಆಂತರಿಕ ಕಲಹದ ಕಥೆ. ಆಂತರಿಕ ಕಲಹವೇ ಇಷ್ಟೊಂದು ಭಯಾನಕವಾಗಿದ್ದರೆ, ಶತ್ರುಗಳು ದಾಳಿಯಿಟ್ಟಲ್ಲಿ ಎಂತಹ ಪರಿಸ್ಥಿತಿದೋರಬಹುದು ಎಂಬುದು ಗ್ರಹಿಸಲೂ ಎದೆನಡುಗುತ್ತದೆ. ಕೊನೆಯ ಕ್ಲೈಮಾಕ್ಸ್ ಅಂತೂ ಮಿಂಚಿನ ವೇಗದಲ್ಲಿ ಕಂಬನಿಯ ಕೆರೆ ಕಟ್ಟೆ ಒಡೆಯುವಲ್ಲಿಗೆ ಕಥೆ ಕೊನೆಯಾಗುತ್ತದೆ.
ನಾನು ಮೊದಲಿಗೆ ದುರ್ಗಾಸ್ತಮಾನ ಪುಸ್ತಕ ಖರೀದಿಸಿದೆ ಅದಾದ ನಂತರ ನನಗೆ ತಿಳಿದದ್ದು ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದ ಕಾದಂಬರಿಗಳಲ್ಲಿ ಇದು ಕೊನೆಯದು ಎಂದು. ಹಾಗಾಗಿ ನಾನು ಕಂಬನಿಯ ಕುಯಿಲು ಮೊದಲನೇ ಪುಸ್ತಕದಿಂದ ಚಿತ್ರದುರ್ಗದ ಇತಿಹಾಸದ ಬಗ್ಗೆ ಓದಲು ಪ್ರಾರಂಭಿಸಿದೆ. ತರಾಸು ಅವರ ಮೊದಲನೇ ಪುಸ್ತಕ ನಾನು ಓದುತ್ತಿರುವುದು. ಮೊದಲನೇ ಪುಟದಿಂದ ಕೊನೆಯ ಪುಟದವರೆಗೂ ಕುತೂಹಲ ಕೆರಳಿಸಿ ಓದಿಸಿಕೊಂಡು ಹೋಗುತ್ತದೆ. ಮದಕರಿನಾಯಕನ ಅಂತ್ಯದಿಂದ ಪ್ರಾರಂಭವಾಗುವ ಕಂಬನಿಯ ಕುಯಿಲು ಆಗತಾನೆ ಪಟ್ಟಾಭಿಷೇಕ ಮಾಡಿಸಿಕೊಂಡ ಓಬಣ್ಣ ನಾಯಕನ ಅಂತ್ಯದಲ್ಲಿ ಮುಗಿಯುತ್ತದೆ. ಗೌರವ ನಾಗತಿ, ಓಬವ್ವ ನಾಗತಿ ಅವರ ತ್ಯಾಗ ಅಪ್ರತಿಮ. ರಾಜನಾದವನು ಹಲವಾರು ಪತ್ನಿಯರನ್ನು ಹೊಂದಬಹುದು ಆದ್ರೆ ಅದರಲ್ಲಿ ಒಬ್ಬರಿಗೊಬ್ಬರು ಸವತಿಯರಾಗುವ ರಾಣಿಯರ ಮನದ ನೋವು ಲೇಖಕರು ಎತ್ತಿ ತೋರಿಸಿದ್ದಾರೆ. ಲಿಂಗಣ್ಣ ನಾಯಕರ ಚಿಕ್ಕಮ್ಮನ ಮೇಲಿನ ಅತಿಯಾದ ಪ್ರೀತಿ ರಾಜ್ಯದ ರಾಜನಾಗು ಆಸೆಯನ್ನೇ ತೋರೆಯುತ್ತಾನೆ. ನಾಗತಿಯ ನೆಚ್ಚಿನ ದಾಸಿಯಾದ ಗಿರಿಜವ್ವ ನಾಯಕರನ್ನು ರಕ್ಷಣೆಮಾಡುವುದಕ್ಕೋಸ್ಕರ ಮದುವೆಯಾಗಬೇಕೆಂದು ಇರುವ ವೀರಣ್ಣ ನಿಂದ ನಾಯಕರಿಗೆ ತೊಂದರೆ ಇದೆ ಎಂದು ತಿಳಿದಾಗ ತಾನೆ ಅವನನ್ನು ಹಿಡಿದು ಕೊಡಲು ಮುಂದಾಗುತ್ತಾಳೆ. ದಳವಾಯಿ ಮುದ್ದಣ್ಣನ ಕುತಂತ್ರ ಕೊನೆಗೂ ಕೈಗೂಡಿದ್ದು ಏನು ಅರಿಯದ ಒಬಣ್ಣ ನಾಯಕ್ ಕೊಲೆಯಾಗುತ್ತನೆ, ನಾಯಕನನ್ನು ಕಾಪಾಡಲಾಗದೇ ಅಂಗರಕ್ಷಕ ಕಸ್ತೂರಿ ನಾಯಕ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ. ಕಸ್ತೂರಿ ನಾಯಕನ ಸೋದರ ವೀರಣ್ಣ ದಳವಾಯಿಗಳ ಜೊತೆ ಸೇರಿ ಕೆಟ್ಟವನಾಗಿ ದ್ದರೂ ಕೊನೆಯಲ್ಲಿ ಬುದ್ಧಿ ಕಲಿತು ಒಳ್ಳೆಯ ದಾರಿಯಲ್ಲಿ ನಡೆಯುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿರುತ್ತದೆ. ಇವೆಲ್ಲದರ ನಡುವೆ ಹನುಮಂತಅವ್ವ ಕಥೆ ಮರುಕ ಹುಟ್ಟಿಸುತ್ತದೆ.
ದಳವಾಯಿ ಮುದ್ದಣ್ಣ ಹೇಳಿದ ಮಾತಿನಂತೆ ಲಿಂಗಣ್ಣ ನಾಯಕನ ಸೋದರ ಚಿಕ್ಕಣ್ಣ ನನ್ನು ರಾಜ್ಯದ ರಾಜನನ್ನಾಗಿ ಮಾಡುತ್ತಾನೆಯೇ? ಚಿಕ್ಕಮ್ಮನ ಮೇಲಿನ ಅತಿಯಾದ ಪ್ರೀತಿಯಿಂದ ಗೌರವದಿಂದ ರಾಜನ ಸ್ಥಾನವನ್ನು ತ್ಯಾಗಮಾಡಿ ಪ್ರಧಾನಿಯಾದ ಲಿಂಗಣ್ಣ ನಾಯಕ ಮುಂದೆ ರಾಜ್ಯವನ್ನು ಕಾಪಾಡುತ್ತಾನೆ? ನಾಗತಿ ಗೋಸ್ಕರ ಪ್ರಾಣವನ್ನೇ ಕೊಡಲು ತಯಾರಾಗಿದ್ದ ಗಿರಿಜವ್ವ ಮುಂದೇನು ಮಾಡುತ್ತಾಳೆ?
ಇದನ್ನೆಲ್ಲಾ ತಿಳಿದುಕೊಳ್ಳಲು ನಾನು ಮುಂದಿನ ಪುಸ್ತಕವಾದ ರಕ್ತರಾತ್ರಿ ಯನ್ನು ಪ್ರಾರಂಭ ಮಾಡಿದ್ದೇನೆ.
This entire review has been hidden because of spoilers.
ಈ ಪುಸ್ತಕದ ಹಿನ್ನುಡಿಯಲ್ಲಿ ತಾ ರಾ ಸು ಅವರನ್ನ ಆಧುನಿಕ ಗಧ್ಯ ಶಿಲ್ಪಿ ಎ೦ದು ಸಂಭೋದಿಸಿದ್ದಾರೆ. ದುರ್ಗದ ದಂತಕಥೆಗಳು ಸರಣಿ ಪುಸ್ತಕಗಳು ಈ ಮಾತನ್ನು ಅಕ್ಷರಸಹ ನಿಜ ಮಾಡಿದೆ.
ತಾ ರಾ ಸು ಐತಿಹಾಸಿಕ ಕಥೆಗಳನ್ನು ಹೇಣೆಯುವುದರಲ್ಲಿ ನಿಸ್ಸೀಮರು. ದುರ್ಗಾಸ್ತಮಾನ ಅದಕ್ಕೆ ಒಂದು ಸಾಕ್ಷಿ.
ಲೇಖಕರೇ ಹೇಳಿದಂತೆ ಚರಿತ್ರೆಯ ಪುಟಗಳಲ್ಲಿ ಸಿಕ್ಕ ಒಂದಷ್ಟು ಎಳೆಗಳನ್ನು ತೆಗೆದುಕೊಂಡು, ಲೇಖಕರ ಕಲ್ಪನೆಗಳನ್ನು ಧಾರಾಳವಾಗಿ ಸೇರಿಸಿ ಬರೆದ ಕಾದಂಬರಿಗಳು. ಕಂಬನಿಯ ಕುಯಿಲು, ಪುತ್ರ ಸಂತನವಿಲ್ಲದೆ ಅಕಾಲಿಕ ಮರಣ ಹೊಂದುವ ಇಮ್ಮಡಿ ಮದಕರಿ ನಾಯಕ ನೊಂದಿಗೆ ಕಥೆ ಶುರುವಾಗುತ್ತದೆ. ಅವನ ಉತ್ತರಾಧಿಕಾರಿ ಯಾರಾಗಬೇಕು, ಯಾರಾಗುತ್ತಾರೆ ಅನ್ನೋದು ಕಥೆಯ ಸಾರ.
ಪಟ್ಟದ ನಾಯಕನನ್ನು ಆರಿಸುವಾಗ ನಡೆಯುವ ರಾಜಕೀಯ, ಕ್ರಾರ್ಯ, ದ್ವೇಷ, ಪ್ರೀತಿ, ನಂಬಿಕೆ, ಸ್ವಾಮಿನಿಷ್ಠೆ ಎಲ್ಲವೂ ಕಥೆಯಲ್ಲಿ ಹಾಸು ಹೊಕ್ಕಾಗಿದೆ.
ಇದೆಲ್ಲದರ ಜೊತೆಗೆ ತಾ ರಾ ಸು ಅವರು ಒಂದೆರಡು ಜನಸಾಮಾನ್ಯರ ಪಾತ್ರಗಳನ್ನು ಸೇರಿಸಿ ಅವರ ಕಥೆಗಳನ್ನೂ ಅರಮನೆಯ ರಾಜಕೀಯದ ಕಥೆಯ ಜೊತೆ ನವಿರಾಗಿ ಸೇರಿಸಿದ್ದಾರೆ.
ಒಟ್ಟಾರೆ ಇತಿಹಾಸದ ಹಂದರ ಓದುವ ಓಘ ಹತ್ತಿಸಿಕೊಂಡವರಿಗೆ ಒಂದು ಉತ್ತಮ ಓದು. ಮೊದಲನೇ ಭಾಗ ಓದಿ ಮುಗಿಸುವುದರಲ್ಲೇ ಎರಡನೇ ಭಾಗ ಓದುವ ಹಂಬಲ ಮೂಡಿಸುವಷ್ಟು ರೋಚಕತೆ ಇದರಲ್ಲಿ ಇದೆ.
ಸಾಮಾನ್ಯವಾಗಿ ಐತಿಹಾಸಿಕ ಕಥೆ ಕಾದಂಬರಿಗಳನ್ನು ಓದುವಾಗ ಸತ್ಯ ಮಿತ್ಯಗಳ ಪರಮವರ್ಷೆ ಮಾಡದೆ ಓದುವುದು ಒಳ್ಳೆಯದು.
ಕೃತಿ : ಕಂಬನಿಯ ಕುಯಿಲು ಲೇಖಕರು : ತ.ರಾ.ಸು ಪ್ರಕಾಶನ : ಹೇಮಂತ ಸಾಹಿತ್ಯ ಬೆಲೆ : ೧೧೦ ಪುಟಗಳು : ೨೧೬
ನಾನು ಚಿಕ್ಕವನಿದ್ದಾಗ ಕನ್ನಡದ ಎಲ್ಲ ಸಾಹಿತಿಗಳ ಪೂರ್ಣ ಹೆಸರನ್ನಓದಿ ಕಂಠಪಾಠ ಮಾಡಿಕೊಂಡು ನೆನಪು ಇಟ್ಟುಕೊಳ್ಳುತ್ತಿದ್ದೆ . ಶಾಲೆಯಲ್ಲಿ ಒಂದು ಸಲ ಕನ್ನಡದ ಶಿಕ್ಷಕರು ಕೆಲವು ಸಾಹಿತಿಗಳ ಪೂರ್ಣ ಹೆಸರು ಕೇಳುವ ಸಮಯದಲ್ಲಿ ತ.ರಾ.ಸು ಹೆಸರು ಬಂದಾಗ 'ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್' ಎಂದು ಖುಷಿಯಿಂದ ಹೇಳಿ ಕನ್ನಡ ಶಿಕ್ಷಕರ ಮೆಚ್ಚಿನ ವಿಧ್ಯಾರ್ಥಿಯಾಗಿದ್ದೆ ! ತ.ರಾ.ಸು ಹೆಸರು ಪರಿಚಯವಾದದ್ದು ಹೀಗೆ .
ಚಂದವಳ್ಳಿಯ ತೋಟ, ನಾಗರಹಾವು,ಬೆಂಕಿಯ ಬಲೆ,ಗಾಳಿಮಾತು ಮತ್ತು ಚಂದನದ ಗೊಂಬೆ ಮುಂತಾದ ಸಿನಿಮಾಗಳನ್ನು ನೋಡಿದ ನಾನು , ಅವೆಲ್ಲ ತ.ರಾ.ಸು ಕಾದಂಬರಿಯಾದಾರಿತ ಸಿನಿಮಾಗಳು ಅಂತ ಗೊತ್ತಿತ್ತು . ಒಬ್ಬ ಸಾಹಿತಿಯ ಯಾವದೋ ಒಂದು ಪುಸ್ತಕ ಇಷ್ಟವಾದರೆ ಅವರ ಎಲ್ಲ ಪುಸ್ತಕಗಳನ್ನು ಓದುವ ಬಯಕೆ ಅಥವಾ ಚಟ ನನಗಿರುವುದರಿಂದ , ಎಸ ಎಲ್ ಭೈರಪ್ಪ , ಶಿವರಾಮ ಕಾರಂತ , ಪೂರ್ಣಚಂದ್ರ ತೇಜಸ್ವಿ , ಕುವೆಂಪು , ಬೀಚಿಯವರ ಬಹುತೇಕ ಪುಸ್ತಕಗಳನ್ನ ಓದಿದ ನಾನು ತ.ರಾ.ಸು ಅವರ ಯಾವದೇ ಕಾದಂಬರಿ ಓದಿಯೇ ಇರಲಿಲ್ಲ ! 'ಹಂಸಗೀತೆ' ಓದಿದ ನಂತರ ತ.ರಾ.ಸು ಅವರ ಎಲ್ಲ ಪುಸ್ತಕ ಕೊಂಡುತಂದು ಓದಿದರೆ ಆಶ್ಚರ್ಯವೆನಿಲ್ಲಾ !
'ಕಂಬನಿಯ ಕುಯಿಲು ' ನ ಕಥಾವಸ್ತು ಚಿತ್ರದುರ್ಗ ಇತಿಹಾಸಕ್ಕೆ ಸಂಬಂಧಿಸಿದುದು. ಈ ಘಟನೆಯ ಬಗ್ಗೆ ದೊರೆಯುವ ವಿವರ ತೀರಾ ಅಲ್ಪ . ತ.ರಾ.ಸು ಅವರೇ ಹೇಳಿದಂತೆ ಅಷ್ಟು ಕಥಾವಸ್ತುವಿಗೆ ಅವರ ಕಲ್ಪನೆಯನ್ನ ಧಾರಾಳವಾಗಿ ಬೆ���ೆಸಿ ಈ ಕಾದಂಬರಿಯನ್ನ ಹೆಣೆದಿದ್ದಾರೆ.
ಕಥೆ ಆರಂಭವಾಗುವುದು ಇಮ್ಮಡಿ ಮದಕರಿನಾಯಕನ ಸಾವಿನಿಂದ . ಅರಸನನ್ನು ನೆಚ್ಚಿ ಕೈ ಹಿಡಿದ ಮೂವ್ವತ್ತು ನಾಗತಿಯರು ದುಃಖದಲ್ಲಿ ಮುಳುಗಿದ್ದರು ಎಂದು ಹೇಳುವ ಮೂಲಕ ಆ ಕಾಲದಲ್ಲಿದಿದ್ದ ಬಹುಪತ್ನಿತ್ವ ಸಂಪ್ರದಾಯದ ಬಗ್ಗೆ ಸೂಕ್ಮವಾಗಿ ತಿಳಿಸುತ್ತಾರೆ . ಮದಕರಿನಾಯಕರಿಗೆ ಗಂಡು ಸಂತಾನವಿಲ್ಲದ ಕಾರಣ ಅವರ ಅಂತ್ಯಕ್ರಿಯೆ ಯಾರು ಮಾಡಬೇಕು ಎಂಬ ಪ್ರಶ್ನೆ ? ಆ ಪ್ರಶ್ನೆಯ ಜೊತೆಯಲ್ಲಿಯೇ ಅವರ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಸಮಸ್ಯೆಯೂ ಹಾಸುಹೊಕ್ಕಾಗಿ ಬೆರೆತಿದ್ದುದರಿಂದ ಆ ಪ್ರಶ್ನೆಗೆ ಉತ್ತರ ಕ್ಲಿಷ್ಟವಾದುದು .
ನಾಯಕನ ಕಿರಿಯ ಹೆಂಡತಿ ಗೌರವ್ವ ನಾಗತಿ, ದೊರೆಗಳ ಮನಸ್ಸಿನಲ್ಲಿದ್ದ ಮಾತು ನೆರೇರಬೇಕೆಂದು , ಅವಳ ತಮ್ಮ ಓಬಣ್ಣನಾಯಕನು ಪಟ್ಟಕ್ಕೆ ಬರಬೇಕೆಂದು ತಿಳಿಸುತ್ತಾಳೆ . ಮದಕರಿ ನಾಯಕನ ಅಣ್ಣ ಸರ್ಜೆನಾಯಕರ ಮಗ ಲಿಂಗಣ್ಣನಾಯಕ ಪಟ್ಟಕ್ಕೆ ಬರಬೇಕೆಂದು ದಳವಾಯಿ ದೇಸಣ್ಣ ಹೇಳುತ್ತಾನೆ . ಪ್ರಧಾನ ಮಂತ್ರಿ ಭುವನಪ್ಪನವರು ಇವರಿಬ್ಬರೂ ಹೇಳಿದ್ದನ್ನ ಕೇಳಿಸಿಕೊಂಡು ಸಧ್ಯಕ್ಕೆ ಯಾವ ಉತ್ತರ ಕೊಡಲು ನನಗೆ ಸಾಧ್ಯವಿಲ್ಲ ಅಂತ ಹೇಳಿ , ಮೊದಲಿಗೆ ನಾಯಕರ ಉತ್ತರಕ್ರಿಯೆ ಮುಗಿಸಿ ಆಮೇಲೆ ಈ ಸಮಸ್ಸೆಯ ಬಗ್ಗೆ ತೀರ್ಮಾನ ಮಾಡೋಣ ಅಂತ ಹೇಳುತ್ತಾರೆ . ಅಲ್ಲಿಂದ ಮುಂದೆ ಸಾಗವ ಕಥೆಯು, ಪುಸ್ತಕವನ್ನ ಕೆಳಗಿಡಲೂ ನಿಮಗೆ ಅವಕಾಶ ಕೊಡದಂತೆ ರೋಚಕವಾಗಿ ಮುಂದುವರೆಯುತ್ತೆ! ಒಂದೇ ದಿನದಲ್ಲಿ ಓದಿ ಮುಗಿಸಿದ ಪುಸ್ತಕ ಇದು .
ಹಿರಿಯ ನಾಗತಿ ಓಬವ್ವ ಪತಿಯೊಡನೆ ಅಗ್ನಿಕುಂಡದಲ್ಲಿ ಸಹಗಮನ ಮಾಡಬೇಕೆಂದು ನಿರ್ಧರಿಸದವಳು , ಹಾಗೆ ಮಾಡುವುದಿಲ್ಲ ! ಕಿರಿಯ ನಾಗತಿ ತನ್ನ ತಮ್ಮ ಓಬಣ್ಣನಾಯಕನು ಪಟ್ಟಕ್ಕೆ ತರಬೇಕೆಂದು ನಿರ್ಧಾರ ಮಾಡಿದವಳು , ಸಹಜವಾಗಿ ಸಹಗಮನ ಮಾಡುವುದಿಲ್ಲ ಅಂತ ನಾವು ಭಾವಿಸಿದರೆ ಅದು ತಪ್ಪು ! ಲಿಂಗಣ್ಣನಾಯಕ ತನಗೇ ಬರಬೇಕಿದ್ದ ಪಟ್ಟ ತಾನೇ ಬೇಡ ಅಂತ ಯಾಕೆ ಹೇಳ್ತಾನೆ ? ದಳವಾಯಿ ದೇಸಣ್ಣನ ತಲೆಯನ್ನ ಅವನ ಕಡೆಯವನೇ ಆದ ದಳವಾಯಿ ಮುದ್ದಣ್ಣ ಕತ್ತರಿಸಿ ಹಾಕಿದ್ದು ಯಾಕೆ ? ನಾಗತಿ ಓಬವ್ವ ಕೊನೆಗೂ ನಾಯಕನ ಆಸೆ ಈಡೇರಿಸುತ್ತಾಳಾ ? ಇವೆಲ್ಲ ತಿಳಿದುಕೊಳ್ಳಬೇಕು ಅಂದ್ರೆ ಪುಸ್ತಕ ಒಂದು ಸಲ ಓದಿ ಆನಂದಿಸಿ .
ಗೌರವ್ವ ನಾಗತಿ, ಒಬ್ಬವ್ವ ನಾಗತಿ, ಲಿಂಗಣ್ಣ ನಾಯಕ ಇವರಲ್ಲದೇ ಭುವನಪ್ಪ, ದೇಸಣ್ಣ, ಗಿರಿಜವ್ವ, ಕಸ್ತೂರಿ ನಾಯಕನ ಪಾತ್ರಗಳು ಬಹಳಷ್ಟು ಹೊತ್ತು ಕಾಡದಿರುವುದಿಲ್ಲ .
ನನಗಿಷ್ಟವಾದ ಸಾಲುಗಳು : ೧. ರಕ್ತದಲ್ಲಿ ಕಟ್ಟಿದ ಕೋಟೆ ರಕ್ತದಲ್ಲಿ ಮುಳುಗುತ್ತದೆ ೨. ಮಾಡಿದವರ ಪಾಪ ಆಡಿದವರ ಬಾಯಲ್ಲಿ ೩. ಹಣತೆ ಎಷ್ಟು ಉರಿದರೂ ಸೂರ್ಯನಿಗೆ ಸಮವೇ ? ೪. ಬರಿದಾದ ಸಿಂಹಾಸನ ಒಳಸಂಚುಗಳ ತಾಯಿ ೫. ಖಂಡಿತವಾದಿ ಲೋಕವಿರೋಧಿ ೬. ತಮ್ಮ ಮಾತಿಗೆ ಬೆಲೆ ಬರಬೇಕೆಂದು ಬಯಸುವ ಜನ ಬೆಲೆ ಬರುವಂಥ ಮಾತಾಡಬೇಕು ೭. ವಿವೇಚನೆ ಇಲ್ಲದ ಪ್ರೀತಿ ನಾಶಕ್ಕೆ ದಾರಿ ೮. ದ್ರೋಹ ಉದ್ಧಟತನಕ್ಕಿಂತ ಹೆಚ್ಚಿನ ಪಾಪ ೯. ನಂಬಿಕೆ ತಾನೇ ಲಭಿಸಬೇಕಾದಂಥ ವಸ್ತು . ಕೇಳಿ ಪಡೆಯಬಹುದಾದುದಂಥದಲ್ಲ. ೧೦.ದುಡುಕಿದ ಬಳಿಕ ಎಷ್ಟು ಪಶ್ಚಾತಾಪ ಪಟ್ಟರೂ ಪ್ರಯೋಜನವಾಗವುದಿಲ್ಲ. ೧೧. ಅವರ ಹುಚ್ಚು ಅವರಿಗೆ ಹಿತ . ೧೨. ಗುಪ್ತ ಮುನಿಸು , ಪ್ರಕಟ ಕ್ರೋಧಕ್ಕಿಂತ ಹೆಚ್ಚು ಅಪಾಯಕಾರಿ .
It has been a long time since I read novels in Kannada. This series consists of eight books, this being the first amongst them. It took me a while to read, but it was worth it.
The story of the politics of Chitradurga regarding the successor to the throne after the death of Madakari Nayaka. The storyline is partly fictional based on the real events. It is written very beautifully.
Even though I enjoyed the book, I was slightly disappointed with the ending. Otherwise, it was a great read.
ಚಿತ್ರದುರ್ಗ ಇತಿಹಾಸದಲ್ಲಿ ದೊರಕುವ ಅಲ್ಪ ವಿವರದ ಜೊತೆ ತಮ್ಮ ಕಲ್ಪನೆಯನ್ನು ಬೆರಸಿ ಕಾದಂಬರಿಯ ಮಾಲೆಯನ್ನು ರಚಿಸಿದ್ದಾರೆ ತ.ರಾ.ಸು. ಈ ಕೃತಿಯಿಂದ ಆದಿಯಾಗಿ, 'ದುರ್ಗಾಸ್ತಮಾನ'ದವರೆಗು ಒಟ್ಟು ೮ ಕಾದಂಬರಿಗಳಿವೆ.
ಚಿತ್ರದುರ್ಗದ ದೊರೆ ಇಮ್ಮಡಿ ಮದಕರಿನಾಯಕ ದಿವಂಗತರಾದಾಗ, ದುರ್ಗದಲ್ಲಿನ ಆಂತರಿಕ ಬಿಕ್ಕಟ್ಟು ಮತ್ತು ಅದರ ಪರಿಣಾಮಗಳನ್ನು ಈ ಕಾದಂಬರಿಯಲ್ಲಿ ಸಜೀವವಾಗಿ ಚಿತ್ರಿಸಿದ್ದಾರೆ ಲೇಖಕರು.
ಇಷ್ಟದ ಕೆಲ ಸಾಲುಗಳು: ಸೇಡಿನ ಭಾವನೆಯ ಬಗ್ಗೆ - "ಈ ಕೊಲೆ ರಕ್ತಬೀಜಾಸುರನ ರಕ್ತವಿದ್ದಂತೆ. ಒಂದು ಹನಿ ಬಿದ್ದಲ್ಲಿ, ಮತ್ತೊಂದು ಕೊಲೆ ಹುಟ್ಟಿಕೊಳ್ಳುತ್ತದೆ. ಎಲ್ಲಾದರೂ ಇದು ಕೊನೆಗಾಣದೆ ನಾವಾರು ಉಳಿಯಲು ಸಾಧ್ಯವಿಲ್ಲ."
1. This book came out in 1953. It is largely a work of fiction since the historical records at the time had only a few sentences about this period. I don’t know if we have more recorded information now.
2. The story has everything you expect in a historical novel— palace intrigue, succession war, betrayal, & contrasting characters.
3. ಓಬವ್ವ ನಾಗತಿ in ದುರ್ಗಾಸ್ತಮಾನ was wise & politically astute. The one in ಕಂಬನಿಯ ಕುಯಿಲು is naive & perennially afraid of conflict.
4. Unlike in ನೃಪತುಂಗ, an ambitious, bloodthirsty villain keeps things interesting from start to finish.
5. If I have to nitpick, the ending felt a bit rushed.
Sooper novel of historical genre .First volume about Chitradurga history . All emtions are held tight with each of the character being presented well with an awsome narration.