Jump to ratings and reviews
Rate this book

ಚಿತ್ರದುರ್ಗ ಇತಿಹಾಸ #2

ರಕ್ತರಾತ್ರಿ | Raktaratri

Rate this book

192 pages, Paperback

First published January 1, 1962

33 people are currently reading
472 people want to read

About the author

Tha Ra Su

92 books129 followers
'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
97 (53%)
4 stars
64 (35%)
3 stars
13 (7%)
2 stars
5 (2%)
1 star
1 (<1%)
Displaying 1 - 15 of 15 reviews
Profile Image for Soumya.
217 reviews48 followers
June 23, 2022
ರಾಜಕೀಯ ಎಂದೂ ಸೀದಾ ಸಾದಾ ಅಲ್ಲ.
ಅಯ್ಯಬ್ಬ ಅನ್ನಿಸ್ತು ಓದಿ ಮುಗಿಸುವಾಗ.

ಮುಂದೇನು ಅಂತ ತಿಳಿಯೋದಕ್ಕೆ next book start ಮಾಡಬೇಕು.
Profile Image for Abhi.
89 reviews20 followers
January 2, 2021
||• ದುರ್ಗದ ದಂತಕಥೆಗಳು - ೨ •||

ರಕ್ತರಾತ್ರಿ

"ಹರ ಕೊಲ್ವೊಡೆ ಪರ ಕಾಯ್ವನೆ"

ಥೂ! ರಾಜದ್ರೋಹಿ ಕ್ರೂರಿ ಮುದ್ದಣ್ಣ ಎಂದು ಎದೆಯಲಿರುವ ಬೆಂಕಿಯನ್ನೆಲ್ಲ ಹೊರಗೆಡವಿದೆ. ದುರ್ಗದ ನಾಯಕರ ವಂಶವೇ ನನ್ನದೇನೋ, ಆ ದ್ರೋಹವೆಲ್ಲಾ ನನ್ನವರ ಮೇಲೆ ನಡೆಯಿತೇನೋ ಎಂದು ಕುದಿಯುತ್ತಿದ್ದೆ. ಆ ರೀತಿಯ ಕ್ರೌರ್ಯ, ಅಷ್ಟು ಕುಟಿಲತೆಯನ್ನು ಸಹಿಸಲಾರದೇ ಹಲ್ಲು ಹಲ್ಲು ಕಡಿಯುತ್ತಿದ್ದೆ. ಛೀ! ಮುದ್ದಣ್ಣ!

ಕಂಬನಿಯ ಕುಯಿಲು ಓದಿದ ನಂತರ ಎರಡು ಮೂರು ದಿನಗಳಲ್ಲಿ ದುರ್ಗದ ಕುರಿತು ತ.ರಾ.ಸುರವರು ಬರೆದ ಮಿಕ್ಕ ಏಳು ಪುಸ್ತಕಗಳೂ ಕೈ ಸೇರಿದವು.‌ ಕಾತುರತೆಯಿಂದಲೇ ಮುಂದಿನ ಪುಸ್ತಕವಾದ ರಕ್ತರಾತ್ರಿಯನ್ನು ಓದಲು ಶುರುವಿಟ್ಟೆ! ನಿರೀಕ್ಷೆಗಳಾವು ಸುಳ್ಳಾಗಲಿಲ್ಲ. ರಾಜದ್ರೋಹದ ರಾಜ್ಯದಾಹದ ಹತ್ತು ಹಲವು ದಾರಿಗಳನ್ನು ಎಳೆಎಳೆಯಾಗಿ ಬರೆದಿರುವ ಈ ಕಾದಂಬರಿಯೂ ಕೂಡ ಮೊದಲಾಗುವುದು ಸಾವಿನಿಂದಲೇ. ಯಾರಿಗೆ ಪಟ್ಟಾಭಿಷೇಕವಾಗಬೇಕು ಎಂಬ ದ್ವಂದ್ವಗಳಿಂದಲೇ..!

ಸಜ್ಜೇರಾಯರ ಇಬ್ಬರು ಮಕ್ಳಳಲ್ಲಿ ಒಬ್ಬನಾದ ಚಿಕ್ಕಣ್ಣನಾಯಕ‌ನ ಅಧಿಕಾರಕ್ಕೆ ಬಂದ ನಂತರ ಸಾವಿಗೀಡಾಗುತ್ತಾನೆ.‌ ಅನಂತರ ಯಾರು ಅಧಿಕಾರಕ್ಕೆ ಬರಬೇಕು ಎಂಬ ಪ್ರಶ್ನೆಗಳು ಬರುತ್ತವೆ.‌ ತಾಂತ್ರಿಕವಾಗಿ ಅಧಿಕಾರವು ಇನ್ನೊಂದು ಗಂಡು‌ ಸಂತಾನವಾದ ಲಿಂಗಣ್ಣನಾಯಕನಿಗೆ ಹೋಗಬೇಕು ಎಂಬುದು ಎಷ್ಟು ಸತ್ಯವೋ, ಅದು ಘಟಿಸಿದರೆ ಎಲ್ಲರೂ ಆ ನಿರ್ಧಾರಕ್ಕೆ ಮನಃಪೂರ್ವಕವಾಗಿ ಒಪ್ಪುತ್ತಾರೆ ಎಂಬುದು ಅಷ್ಟೇ ಅಸತ್ಯ. ಲಿಂಗಣ್ಣನಾಯಕನಿಗೆ ಅಧಿಕಾರದಲ್ಲಿ ಇಷ್ಟವಿರದಿದ್ದರೂ ಭುವನಪ್ಪ ಮತ್ತು ದೇಸಣ್ಣನವರ ಮಕ್ಕಳ‌ ಮಾತಿಗೆ ರಾಜಗುರುಗಳ ಮಾತಿಗೆ ಹಾಗೂ "ಗಿರಿಜವ್ವೆಯ" ಮಾತಿಗೆ ಕಟ್ಟುಬಿದ್ದು ಅಧಿಕಾರ ವಹಿಸಲು ಒಪ್ಪುತ್ತಾನೆ. ಕಂಬನಿಯ ಕುಯಿಲು ಓದಿದ ನಂತರ ಈ ಪುಸ್ತಕ ಓದಿದರೇ, ಗಿರಿಜವ್ವೆಯ ಪಾತ್ರದ ಆಗಮನವಾದ ಕೂಡಲೇ‌ ನೀವು ರೋಮಾಂಚಿತರಾಗುತ್ತೀರಿ.

ಒಂದು ಕ್ಷಣಕ್ಕೆ‌ ವೈಭವೀಕರಿಣ ಎನಿಸಿದರೂ ಕೂಡ ಕಾದಂಬರಿಯ ವಸ್ತುವಿಗೆ ಬಹಳ ಅವಶ್ಯವೆನಿಸುತ್ತದೆ. ರಾಜ್ಯದ ಮೇಲಿನ ಮೋಹಕ್ಕೆ ಸಕಲ ದುಷ್ಟ ದಾರಿಗಳನ್ನು ಹಿಡಿದ ಮುದ್ದಣ್ಣನ ರಾಜಕಾರಣ ಎಂಥ ರಾಜಕೀಯ ಮುತ್ಸದ್ದಿ ಎಂದು ನವಿರೇಳಿಸಿದರೂ ರಾಜದ್ರೋಹ, ಅಹಂ ಮತ್ತು ಗರ್ವಗಳು ಅವನ ಮೇಲೊಂದು ವಿಲಕ್ಷಣ ಹೇಯ ಭಾವವನ್ನು ಉಂಟು‌ ಮಾಡಿಸುತ್ತದೆ.

ನಾಲ್ಕು ಅಧ್ಯಾಯಗಳಿವೆ. ನಾಗತಿಯ ನೆರಳು, ಕೆರಳಿದ ಹುಲಿ, ಆರುವ ದೀಪ ಮತ್ತು ರಕ್ತರಾತ್ರಿ. ಒಂದೊಂದು ಅಧ್ಯಾಯದಲ್ಲೂ ರಾಜಕೀಯ ತಿರುವುಗಳು ಕಾಣಸಿಗುತ್ತವೆ. ಲಿಂಗಣ್ಣನಾಯಕನ ಅಧಿಕಾರವೆನಿಸಿಕೊಳ್ಳದ ಅಧಿಕಾರ, ಮುದ್ದಣ್ಣ ಮತ್ತು ತಮ್ಮಂದಿರ ರಾಜಕಾರಣ, ದುರ್ಗದ ಜನರ ಸೇಡಿನ ಕಿಡಿ, ಭುವನಪ್ಪ‌‌ ಮತ್ತು ದೇಸಣ್ಣನವರ ಮಕ್ಕಳ ರಾಜ ನಿಷ್ಠೆ, ಕಸ್ತೂರಿ ನಾಯಕರ ಕುಟುಂಬದವರ ಅಸಹಾಯಕತೆ ಎಲ್ಲವೂ ಸೇರಿ ಕಾದಂಬರಿಯ ಒಟ್ಟಂದವನ್ನು ಹೆಚ್ಚು ಮಾಡಿವೆ.

ಲಿಂಗಣ್ಣನಾಯಕನ ಅಧಿಕಾರದಲ್ಲಿ ದುರ್ಗವೆಷ್ಟು ಪ್ರಕಾಶಿಸಿತು ಎಂದು ತಿಳಿಯಲು ಈ ೧೯೨ ಪುಟಗಳನ್ನು ಮಿಂಚು‌ ಸೋಕಿದವರಂತೆ ಒಂದೇ ಉಸಿರಿನಲ್ಲಿ ಓದಿ. ಓದಿದ್ದರೆ ನಿಮ್ಮ‌ ಅಭಿಪ್ರಾಯವನ್ನು ನನ್ನೊಂದಿಗೂ ಹಂಚಿಕೊಳ್ಳಿ. ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವಂತೆ ಮುದ್ದಣ್ಣನ ಅಂತ್ಯವೂ ಸನ್ನಿಹಿತವಾಗಿದೆ ಎಂದು ತಿರುಗುಬಾಣವನ್ನು ಶುರುಮಾಡಿದ್ದೇನೆ. ಬರುತ್ತೇನೆ!!

ಅಭಿ...
Profile Image for Mallikarjuna M.
51 reviews14 followers
August 28, 2022
ಕಾದಂಬರಿಯ ಕೊನೆಯಲ್ಲಿ ಮುದ್ದಣ್ಣನ ಬಗ್ಗೆ ಓದುಗರೇ ಅಸಹ್ಯ ಪಟ್ಟು, ಸೇಡಿಗಾಗಿ ಹವಣಿಸುವುದು ತ. ರಾ.ಸು ಅವರ ಗೆಲುವು...ಈ series ನ ಮುಂದಿನ ಕಾದಂಬರಿಯನ್ನು ಧಾವಂತದಲ್ಲಿ ಕೊಂಡು ಓದಬೇಕಾಗಿದೆ 🤗😍
61 reviews
April 22, 2014
Rakta Ratri is the second book in the historical fiction series written by Ta.Ra.Su. on the palyeagars of Chitradurga. The first in the series is Kambaniya Kuyilu, reviewed here.

Kambaniya Kuyilu ended with the murder of the newly crowned Obanna Nayaka. Rakta Ratri picks up the story from the death of Chikkanna Nayaka, who was crowned after the murder of Obanna and ruled for 12 years.

After the racy pace of the first book, Rakta Ratri is a bit slow and sags in the middle. A lot of space is dedicated to the philosophical thoughts (discourses by the Swamiji to Linganna and others), excellently portrayed, as espoused by Basavanna. This takes away the edgy pace of the narrative. There are also more descriptive passages - the decorations for the coronation ceremony (an entire chapter) etc., Though poetic, for a story that is suspenseful and racy, this seems like a distraction.

There are also certain aspects of the plotline that are not convincing. For example, why Linganna insists that the treacherous Muddanna continue as prime minister is not very clear. Stripping him of his powers would have been a surefire way to reclaim authority over the state. Parashuramappa's excuse refusing the chief ministership also appears weak.

The character construction however, is as solid as ever. The disintegration of the formerly brave and noble Linganna into a disinterested, broken man is marvellous. The portrayal of the malicious Muddanna as a vicious, scheming, savage man is chilling. Ta.Ra.Su.'s magic is visible even in the characters who make a brief appearance: the brave Horake Nayaka, the vengeful Girija, the noble Gowda who refuses to be cowed down by a threatening Muddanna... Ta.Ra.Su. demonstrates his dexterity in character portrayal. This indeed is the highlight of the book.

Even though it sags in the middle, the plot picks up pace in the last part, exciting the reader's interest. It is to Ta.Ra.Su.'s credit that he creates a masterful tale from less than half a page of historical record and keeps the reader engaged enough to want to pick up the next book!
Profile Image for Abhiram's  Book Olavu.
104 reviews3 followers
August 15, 2025
ಮುದ್ದಣ್ಣ ಹಾಗೂ ಅವನ ತಮ್ಮಂದಿರ ವಿಕೃತ ಅಟ್ಟಹಾಸ ಅಥಿರೇಕಕ್ಕೆರಿದುದು, 'ರಕ್ತ ರಾತ್ರಿ' ಪುಸ್ತಕದಲ್ಲಿ ನೋಡಬಹುದು. ಚಿಕ್ಕಣ್ಣ ನಾಯಕನ ಅಕಾಲಿಕ ಮರಣದ ನಂತರ, ದುರ್ಗದ ರಾಜಕೀಯದಲ್ಲಿ ಮತ್ತೊಂದು ಬಿರುಗಾಳಿ ಏರುತ್ತದೆ. ಉಗ್ರಚೆನ್ನವೀರ ಸ್ವಾಮಿ, ಭರಮಣ್ಣ ಮತ್ತು ಪರಶುರಾಮ ನಾಯಕರ ಪ್ರತಿತಂತ್ರದಿಂದ ಲಿಂಗಣ್ಣ ನಾಯಕರೆನೋ ಪಟ್ಟವರು. ಆದರೆ ದುರ್ಗದ ನಾಯಕರಿಂದಾದಿಯಾಗಿ, ಮುಂದೆ ಮುದ್ದಣ್ಣನ ಅಮಾನುಷ ತಂತ್ರಕ್ಕೆ ಬಲಿಯಾಗುವರು. ನನಗೆ, ಕೊನೆಯ ಮಡಕರಿ ನಾಯಕರನ್ನು ಹೊರತುಪಡಿಸಿ ಇನ್ನೊಬ್ಬ ನಾಗಕನಿಗೆ ಮನ ಮರಗುವುದು ಎಂದರೆ ಅದು ಈ ಲಿಂಗಣ್ಣ ನಾಯಕರಿಗೆ. ತಮಗೆ ಇಷ್ಟವಿಲ್ಲದಿದ್ದರೂ ದುರ್ಗದ ನಾಯಕರಾಗಿ, ಜನತೆಯ ಮೆಚ್ಚುಗೆ ಗಳಿಸಿ, ಸದಾ ದುರ್ಗದ ಏಳಿಗೆಯನ್ನೇ ಬಯಸಿ, ಅಂತಹಾ ಅಮಾನುಷ ಅಂತ್ಯದಲ್ಲಿಯೂ ಪೌರುಷ ಮೆರೆದ ಧೀಮಂತ ನಾಯಕ. ಈ ಸರಣಿಯಲ್ಲಿಯೇ ಅತ್ಯಂತ ಕಠೋರ ಸಮಯವನ್ನು ತ. ರಾ. ಸು. ರವರು ಅತ್ಯಂತ ಭಾವನಾತ್ಮಕವಾಗಿಯೂ ಮತ್ತು ರೌದ್ರವಾಗಿಯೂ ಚಿತ್ರಿಸಿರುವರು.
This entire review has been hidden because of spoilers.
Profile Image for Prabhosha Acharya.
22 reviews12 followers
December 30, 2020
ವಿಶೇಷ ಸೂಚನೆ - ಕಂಬನಿಯ ಕುಯಿಲು ಪುಸ್ತಕದ (ರಿವ್ಯೂ) ಪರಿಚಯದ ಮುಂದಿನ ಭಾಗ.

ದಳವಾಯಿ ಮುದ್ದಣ್ಣ ಹೇಳಿದ ಮಾತಿನಂತೆ ಲಿಂಗಣ್ಣ ನಾಯಕನ ಸೋದರ ಚಿಕ್ಕಣ್ಣ ನನ್ನು ರಾಜ್ಯದ ರಾಜನ���್ನಾಗಿ ಮಾಡುತ್ತಾನೆಯೇ?
ಚಿಕ್ಕಮ್ಮನ ಮೇಲಿನ ಅತಿಯಾದ ಪ್ರೀತಿಯಿಂದ ಗೌರವದಿಂದ ರಾಜನ ಸ್ಥಾನವನ್ನು ತ್ಯಾಗಮಾಡಿ ಪ್ರಧಾನಿಯಾದ ಲಿಂಗಣ್ಣ ನಾಯಕ ಮುಂದೆ ರಾಜ್ಯವನ್ನು ಕಾಪಾಡುತ್ತಾನೆ?
ನಾಗತಿ ಗೋಸ್ಕರ ಪ್ರಾಣವನ್ನೇ ಕೊಡಲು ತಯಾರಾಗಿದ್ದ ಗಿರಿಜವ್ವ ಮುಂದೇನು ಮಾಡುತ್ತಾಳೆ?

ಇದನ್ನೆಲ್ಲಾ ತಿಳಿದುಕೊಳ್ಳಲು ನಾನು ಮುಂದಿನ ಪುಸ್ತಕವಾದ ರಕ್ತರಾತ್ರಿ ಯನ್ನು ಪ್ರಾರಂಭ ಮಾಡಿದ್ದೇನೆ

ನನ್ನ ಎಲ್ಲಾ ಪ್ರಶ್ನೆಗೂ ಉತ್ತರ ಸಿಕ್ಕಿತು, ಆದ್ರೆ ಮತ್ತೆ ಮುದ್ದಣ್ಣ ನಿಗೆ ಗೆಲುವಾಗಿದ್ದು ಮನಸಿಗೆ ಸಮಾಧಾನ ತಂದಿಲ್ಲ. ಕೊಟ್ಟ ಮಾತಿನಂತೆ ಮುದ್ದಣ್ಣ ಚಿಕ್ಕಣ್ಣ ನನ್ನು ನಾಯಕನನ್ನಾಗಿ ಮಾಡಿ ತಾನು ಪ್ರಧಾನಿ ಪಟ್ಟವನ್ನು ಏರುತ್ತಾನೆ, ಹಾಗೆ ರಾಜ್ಯದಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿ ಕೊಳ್ಳುತ್ತಾನೆ. 12ವರುಷ ಅಧಿಕಾರ ಮಾಡಿದ ಚಿಕ್ಕಣ್ಣ ಮಾಡಿಯುತ್ತ್ತನೆ ಅದು ತನ್ನ ಉತ್ತರಾಧಿಕಾರಿ ಇಲ್ಲದೆ. ಆಗ ಎಲ್ಲರೂ ಕಣ್ಣಿಗೂ ಕಾಣುವುದು ಲಿಂಗಣ್ಣ ನಾಯಕ, ಬುವನಪ್ಪ ನವರ ಮಕ್ಕಳಾದ ಪರಶುರಾಮಪ್ಪ, ಬರಮಣ್ಣ ಹಾಗೂ ಮಟದ ಸ್ವಾಮಿ ಗಳು ಸೇರಿ ಲಿಂಗಣ್ಣ ನಾಯಕ್ ಪಟ್ಟಾಭಿಷೇಕ ಮಾಡಿಸುತ್ತಾರೆ ಅದು ಮಾತ್ರ ನಾಮಕಾವಸ್ತೆ, ಎಲ್ಲ ಅಧಿಕಾರ ನಡಿಯುತ್ತಿದ್ದಿದ್ದು ಮುದ್ದಣ್ಣ ನದೆ. ಇವೆಲ್ಲದರ ಮದ್ಯೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಕಾಶವೇ ಇಲ್ಲದೆ ಹುಚ್ಚಿಯ ಹಾಗೆ ತಿರುಗುತ್ತಿರುವ ಗಿರಿಜಾ.

ನಾಮಕಾವಸ್ತೆ ಅಧಿಕಾರದಿಂದ ಆಚೆ ಬಂದು ತನ್ನ ಪ್ರತೀಕಾರ ಸೇಡನ್ನು ತೀರಿಸಿಕೊಳ್ಳಬೇಕು ಅಂದು ಸಜ್ಜಾಗಿರುವ ಲಿಂಗಣ್ಣ ನಾಯಕ್ ಮುದ್ದಣ್ಣ ನನ್ನು ಅವಮಾನ ಮಾಡಿ ಅವನ ಸ್ಥಾನ ಏನು ಎಂದು ತಿಳಿಸುತ್ತಾನೆ. ಅದಕ್ಕೆ ಉದ್ರೇಕ ಗೊಂಡ ಮುದ್ದಣ್ಣ ತನ್ನ ತಮ್ಮಂದಿರ ಜೊತೆ ಸೇರಿ ಅರಮನೆ ಆಕ್ರಮಿಸಿ ಲಿಂಗಣ್ಣ ನಾಯಕ ನನ್ನು ಬಂಧಿ ಯಾಗಿಸುತ್ತನೆ. ಹಾಗೆ ಅವನನ್ನು ಚಿತ್ರಹಿಂಸೆ ಪಡಿಸಿ ಕೊನೆಗೂ ನಾಯಕನನ್ನು ಕೊನೆಗಣಿಸುತಾನೆ. ಯಾರು ದಿಕ್ಕಿಲ್ಲದ ಅರಮನೆ ಈಗ ನಾನೇ ಮುಂದಿನ ನಾಯಕ ಅರಮನೆ ನನ್ನದೇ ಎನ್ನುವ ಸಂಭ್ರಮದಲ್ಲಿ ಮುದ್ದಣ್ಣ.

ಹಾಗಾದರೆ ಮುದ್ದಣ್ಣನೆ ಮುಂದಿನ ನಾಯಕ ನಾಗುತ್ತನೆಯೇ?
ಗಿರಿಜಾ ಈಗಲಾದರೂ ಏನಾದರೂ ಮಾಡುವಳೆ?
ಮುದ್ದಣ್ಣ ನಿಂದ ಅರಮನೆ ಕಾಪಡುವರು ಯಾರು ಇಲ್ಲವೇ?

ಈ ಎಲ್ಲ ಸಂಶಯ ನಿವಾರಿಸಿಕೊಳ್ಳಲು ನಾನು ತ. ರಾ. ಸು ರವರ ಮುಂದಿನ ಪುಸ್ತಕ ವಾದ ತಿರುಗುಬಾಣ ಪ್ರಾರಂಬಿಸಲಾಗುವುದು.

ತ. ರಾ. ಸು ರವರ ಅಧ್ಬುತ ಬರವಣಿಗೆ ಗೆ ನನ್ನದೊಂದು ನಮನ.
This entire review has been hidden because of spoilers.
Profile Image for Karthik Jodangi.
18 reviews
July 2, 2025
ಸೇಡಿನ ಕಿಚ್ಚು ,
ಸಿಂಹಾಸನದ ಹುಚ್ಚು,
ಬರಿದಾದ ದುರ್ಗದ ಕಿರೀಟ,
ನರಪಿಶಾಚಿ ದಳವಾಯಿ ಮುದ್ದಣ್ಣನ ದುರಾಸೆಯ ಆರ್ಭಟದ ರಕ್ತರಾತ್ರಿ
Profile Image for Karthik.
61 reviews19 followers
December 19, 2021
|•ರಕ್ತ ರಾತ್ರಿ•|

ಅರಮನೆಯಲ್ಲಿ ಓಬಣ್ಣ ನಾಯಕರ ಹತ್ಯೆಯ ನಂತರ ದುರ್ಗದ ಚುಕ್ಕಾಣಿ ಹಿಡಿದ ಚಿಕ್ಕಣ್ಣ ನಾಯಕರು ೧೨ ವರುಷಗಳ ಕಾಲ ರಾಜ್ಯವನ್ನಾಳಿ, ವಾರಿಸುದಾರನಿಲ್ಲದೆ ಅಕಾಲಿಕ ಮರಣ ಹೊಂದುತ್ತಾರೆ. ಈ ವಿಷಮ ಘಳಿಗೆಯಲ್ಲಿ ಮುಂದಿನ ನಾಯಕರನ್ನಾಗಿ ಲಿಂಗಣ್ಣ ನಾಯಕರನ್ನು ಪಟ್ಟಕ್ಕೆರಿಸುವ ಘಟ್ಟದಿಂದ ಅವರ ಅಂತ್ಯದವರೆಗಿನ ಘಟನಾಳಿಗಳನ್ನು ನಾವು "ರಕ್ತ ರಾತ್ರಿ" ಯಲ್ಲಿ ಕಾಣಬಹುದು.

ಲಿಂಗಣ್ಣ ನಾಯಕರನ್ನು ಪಟ್ಟಕ್ಕೆರಿಸಲು ದಳವಾಯಿ ಭರಮಣ್ಣ ( ದೇಸಣ್ಣ ನವರ ಮಗ) ಹಾಗೂ ಪರಶುರಾಮಪ್ಪ (ಭುವನಪ್ಪನವರ ಮಗ) ಪ್ರಯತ್ನಿಸುವುದು, ದುರ್ಗದ ರಾಜಕಾರಣದಲ್ಲಿ ಕಲ್ಲು ಮಠದ ಉಗ್ರಚೆನ್ನವೀರ ಸ್ವಾಮಿಗಳು ಗಮನಾರ್ಹ ಪಾತ್ರವಹಿಸುವುದು, ಹುಚ್ಚಿಯ ವೇಷದಲ್ಲಿ ಗಿರಿಜವ್ವೆ ದುರ್ಗದ ಜನರ ಮನಸಿನಲ್ಲಿ ದೊಂಬಿಯ ಬೀಜ ಬಿತ್ತುವುದು, ಲಿಂಗಣ್ಣ ನಾಯಕರ ಪಟ್ಟಾಭಿಷೇಕ, ಅರಮನೆಯಲ್ಲಿ ಒಬ್ಬಂಟಿಯಾಗಿದ್ದ ನಾಯಕರಿಗೆ ಹೊರಕೆ ನಾಯಕರ ರಕ್ಷಣೆ, ಸಜ್ಜೆಯ ದಾಸಿ ಉಪ್ಪುಂಡ ಮನೆಗೆ ದ್ರೋಹವೆಸಗದೆ ಮುದ್ದಣ್ಣ ನ ಬೇಟೆ ನಾಯಿಗಳ ಬಾಯಿಗೆ ಸಿಕ್ಕು ಸತ್ತಿದ್ದು, ಸ್ವಾಮಿಗಳನ್ನು ಗೃಹಬಂಧನದಲ್ಲಿಟ್ಟಿದ್ದು, ಪರಶು ರಾಮಪ್ಪ ಹಾಗೂ ಭರಮಣ್ಣ ರನ್ನು ಮೋಸ ಮಾಡಿ ಬಂಧಿಸಿದ್ದು, ಸೆಟೆದು ನಿಂತ ನಾಯಕರನ್ನು ಅಮಾನುಷವಾಗಿ ಕೊಂದದ್ದು... ಹೀಗೆ ಪ್ರತಿಯೊಂದು ಸನ್ನಿವೇಶಗಳೂ ಮನಸಿನಲ್ಲಿ ಅಚ್ಚಾಗುತ್ತಾ ಮುದ್ದಣ್ಣ ನ ಮೇಲೆ ಒಂದು ರೀತಿಯ ಕ್ರೋಧ ನಮ್ಮನ್ನೂ ಆವರಿಸುತ್ತದೆ.ನಾಯಕರ ಅಂತ್ಯವಂತೂ ಕಣ್ಣ ಮುಂದೆಯೇ ನಡೆದಂತೆ ಭಾಸವಾಗಿ ಹೃದಯ ಮರುಗುತ್ತದೆ. ಒಂದೇ ಕೈ ಇದ್ದರೂ, "ಕತ್ತಿ ಕೊಡು, ನಾನು ಹೊರಡಿ ಪ್ರಾಣ ಬಿಡುತ್ತೇನೆ" ಎಂಬ ಮಾತು ಕೇಳಿ ನರನಾಡಿಗಳು ಕಂಪಿಸುತ್ತದೆ.

ಹಿಂಸೆಯ ಉತ್ತುಂಗದಲ್ಲಿರುವ ಮುದ್ದಣ್ಣ ನ ಅಂತ್ಯವಾಗಬೇಕಿದೆ, "ತಿರುಗು ಬಾಣ"ದಲ್ಲಿ ರಕ್ತ ರಾತ್ರಿಗೆ ತಕ್ಕ ಶಾಸ್ತಿಯಾಗುವುದೇ?

See you soon :)

- ಕಾರ್ತಿಕ್ ಕೃಷ್ಣ
(19.12.2021)
18 reviews
April 20, 2024
ತ.ರಾ.ಸು ಅವರ ಚಿತ್ರದುರ್ಗ ಇತಿಹಾಸದ ಕುರಿತ ಕಾದಂಬರಿ ಮಾಲೆಯ ಎರಡನೆ ಕೃತಿ.

ದಳವಾಯಿ ಮುದ್ದಣ್ಣನ ಮುಂದುವರೆದ ಅಟ್ಟಹಾಸ, ಲಿಂಗಣ್ಣನಾಯಕನ ಕರಾಳ ಕೊಲೆ, ಇದರೊಂದಿಗೆ ಮತ್ತಿವಂಶದ ಮುಕ್ತಾಯದಿಂದ ಕೊನೆಯಾಗುತ್ತದೆ.

ಇಷ್ಟದ ಕೆಲ ಸಾಲುಗಳು:
ಕಹಿ ನಿತ್ಯಸತ್ಯ:
"ಯಾವುದು ನಮಗೆ ಪ್ರಿಯವಾಗಬೇಕಾದರೂ, ಯಾವುದರಲ್ಲೂ ನಮಗೊಂದು ಆಸಕ್ತಿ ಮೂಡಬೇಕಾದರೂ ಅದಕ್ಕೊಂದು ಸ್ವಾರ್ಥದ ಕಾರಣ ದೊರೆತರೆ, ಅದು ನಮಗೆ ಬೇಗ ಪ್ರಿಯವಾಗುತ್ತದೆ."
Profile Image for Skanda Prasad.
69 reviews2 followers
March 24, 2022
ಯಬ್ಬಾ ದುರ್ಗದ ಗದ್ದುಗೆಗಾಗಿ ಮುದ್ದಣ್ಣ ನಡೆಸುವ ಪೈಚಾಚಿಕತೆಯನ್ನು ಹೃದಯ ಇರಿವಂತೆ ಹೇಳಿದ್ದಾರೆ ಲೇಖಕರು. ಗಟ್ಟಿ ಹೃದಯದವರು ಮಾತ್ರ ಈ ಪುಸ್ತಕ ಓದಬೇಕು. ತ‌.ರಾ.ಸು ಅವರು ಕಟ್ಟಿದ ದುರ್ಗದ ಕತೆ ಬಹಳ ರೋಚಕವಾಗಿದೆ. ಅವರ ಪದ ಗುಚ್ಛ ಅಂತೂ ಅತ್ಯದ್ಭುತ.
Profile Image for Ranga B.
86 reviews
October 5, 2025
Amazing story on Chitrdurga Nayakas. What great writer was Ta Ra Su. We need such writer in Kannada. Political tactics of that is clearly explained through the grips of Muddanna and unfortunate end of Lingappanayaka.
Displaying 1 - 15 of 15 reviews

Can't find what you're looking for?

Get help and learn more about the design.