Jump to ratings and reviews
Rate this book

ಚಿತ್ರದುರ್ಗ ಇತಿಹಾಸ #3

ತಿರುಗುಬಾಣ | Tirugubaana

Rate this book

160 pages, Paperback

10 people are currently reading
244 people want to read

About the author

Tha Ra Su

92 books129 followers
'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
94 (66%)
4 stars
35 (24%)
3 stars
9 (6%)
2 stars
2 (1%)
1 star
1 (<1%)
Displaying 1 - 18 of 18 reviews
Profile Image for Soumya.
217 reviews48 followers
July 2, 2022
ದುರ್ಗದ ಕಥೆಗಳು seriesನ ಮೂರನೇ ಪುಸ್ತಕ.

ಮೊದಲ ಎರಡು ಪುಸ್ತಕ ಓದಿದಾಗ, ಒಳ್ಳೆದಕ್ಕೆ ಕಾಲ ಇಲ್ಲ ಅಂತ ಅನ್ಸಿದ್ದು ಹೌದು.
ಆದ್ರೆ ಈ ಪುಸ್ತಕ ಓದಿದಾಗ, ಎಲ್ಲವೂ ಆಗಬೇಕಾದ ಸಮಯಕ್ಕೆ ಆಗತ್ತೆ. ಒಳ್ಳೆದಕ್ಕೆ ತಕ್ಕ ಕಾಲ ಬರಬೇಕು ಅನ್ನೋ ಅಂಶ, ಮನಸ್ಸಿಗೆ ಸ್ವಲ್ಪ ಸಮಾಧಾನ ಕೊಡ್ತು.

ಇತಿಹಾಸದ ಒಂದು ಸಣ್ಣ ಎಳೆ ಹಿಡಿದು ಇಷ್ಟು ಒಳ್ಳೆಯ series ಬರೆದಿದ್ದಾರೆ ಸುಬ್ಬರಾಯರು.

ಗಿರಿಜವ್ವೆ ಪಾತ್ರ ಮನಸಿನಲ್ಲಿ ಉಳಿಯಿತು ನಂಗೆ.

Seriesನ ಮೊದಲ ಪುಸ್ತಕ ಕಂಬನಿಯ ಕುಯಿಲು ಶುರು ಮಾಡುವ ಮುನ್ನ, 8 ಪುಸ್ತಕ ಓದೋದು ಹೌದಾ ಅಂತ ಶುರು ಮಾಡಿದ್ದು.
ಆದ್ರೆ ಯಾವುದೇ additional efforts ಇಲ್ಲದೆ 3 ಪುಸ್ತಕ ಓದಿ ಮುಗಿಸಿದೆ. ಅಷ್ಟು ಚೆನ್ನಾಗಿದೆ!!

ಹೊಸ ಹಗಲು ಓದಲು ಶುರು ಮಾಡಬೇಕು.
Profile Image for Abhi.
89 reviews20 followers
January 2, 2021
||• ದುರ್ಗದ ದಂತಕಥೆಗಳು - ೩ •||

ತಿರುಗುಬಾಣ

...ಆಳಾಗಬಲ್ಲವನು ಅರಸನಾಗಬಲ್ಲ! ಆದರೇ ಅರಸನಂತೆಯೇ ಆಳಿದ ಎಂಬ ನಿದರ್ಶನಗಳು ಮಾತ್ರ ವಿರಳಾತೀವಿರಳ. ರಾಜ ತಾಂತ್ರಿಕತೆ ಮತ್ತು ರಾಜಕೀಯ ಎಲ್ಲರಿಗೂ ಅಲ್ಲ. ಅದು ಎಲ್ಲರಿಗೂ ಒಗ್ಗುವುದೂ ಇಲ್ಲ. ರಾಜಕೀಯಕ್ಕೆ ಬೇಕಾದ ಚಾಕಚಕ್ಯತೆಯು ಇರದಿದ್ದಾಗ ತನ್ನ ಕಂಡರೆ ಇಡೀ ರಾಜ್ಯ ನಡುಗುತ್ತದೆ ಎಂಬ ಭ್ರಮೆ ಆದಷ್ಟು ಬೇಗ ಮರೆಯಾಗುತ್ತದೆ. ತಿರುಗುಬಾಣದಲ್ಲಿ ನಡೆಯುವುದು ಅದೇ.

ಈ ಹಿಂದಿನ ಎರಡು ಕಾದಂಬರಿಗಳಂತೆ ಈ ಕಾದಂಬರಿಯೂ ಕೂಡ ಸಾವಿನೊಂದಿಗೆ ಪ್ರಾರಂಭವಾಗುತ್ತದೆ. ಮುದ್ದಣ್ಣ ಅವನ ಮೂವರು ಸಹೋದರರೊಂದಿಗೆ ಹಿಂದಿಗಿಂತ ಹೆಚ್ಚು ಶಕ್ತನಾಗುತ್ತಾನೆ. ವೈರಿಬಣವೊಂದು ಆತನೆಡೆಗೆ ಸಂಚು ಮಾಡುತ್ತಿರುವುದನ್ನು ಮನಗಂಡು ದುರ್ಗದ ಸರ್ವಾಧಿಕಾರ ತನ್ನ ಪಾಲಾಯಿತು ಎಂಬ ಸಂತಸಕ್ಕಿಂತ ಚಿಂತೆಯೇ ಹೆಚ್ಚಾಗಿರುತ್ತದೆ.

ದಳವಾಯಿಗಳ ಕೆಲಸವೇನಿದ್ದರೂ‌ ಯುದ್ಧಭೂಮಿಯಲ್ಲಿ ಎಂದುಕೊಂಡರೆ ತಪ್ಪಾದೀತು. ಮುದ್ದಣ್ಣ ಚತುರ, ಕ್ರೂರಿ ಮತ್ತು ಅಷ್ಟೇ ನಯವಂಚಕ. ತನ್ನ ಕೆಲಸ ಸಾಧಿಸಿಕೊಳ್ಳಲು ಮತ್ತಿವಂಶದವರ ಯಾವುದೋ ಒಂದು ತುಂಡನ್ನು ರಾಜನನ್ನಾಗಿಸಿ ಅವನ ಕಾರ್ಯಗಳಿಗೆ ಬಳಸಿಕೊಳ್ಳಲು ಯತ್ನಿಸುತ್ತಾನೆ.‌ ಆದರೆ ಶಿವನಿಚ್ಛೆ ಬೇರೆಯೇ ಇರುತ್ತದೆ. ಕಾದಂಬರಿಯ ಶುರುವಾತಿನಲ್ಲಿ ಮಠದ ಸ್ವಾಮಿಗಳು ಹೇಳುವ ಮಾತುಗಳು ಬಹುಶಃ ಜಗದೊಡೆಯನ ಕಿವಿ ಮುಟ್ಟಿತೇನೋ ಎಂದೆನಿಸುತ್ತದೆ.

ಅತ್ತ ಮುದ್ದಣ್ಣ ಚಿಂತಿತನಾಗಿದ್ದರೆ, ಇತ್ತ ಬಂಧಿಯಾಗಿದ್ದ ಭರಮಣ್ಣ ಮತ್ತು ಪರಶುರಾಮಪ್ಪ ಸೇಡಿಗಾಗಿ ಕಾಯುತ್ತಿರುತ್ತಾರೆ. ಜೊತೆಗೆ ಗಿರಿಜವ್ವೆಯ ಕುದಿಯುತ್ತಿರುವ ದ್ವೇಷ ಅವಳಲ್ಲಿ ಇನ್ನಷ್ಟು ಕ್ರೋಧವನ್ನುಂಟು ಮಾಡಿರುತ್ತದೆ. ಮುದ್ದಣ್ಣನ ಸಕಲ ಕಾರ್ಯಗಳನ್ನು‌ ಊರೂರಿಗೆ‌ ಹುಚ್ಚಿಯಂತೆ ಹರಡಿ ಊರಿನ ಜನರನ್ನು ಎತ್ತಿಕಟ್ಟಿ ಮುದ್ದಣ್ಣನ ವಿರುದ್ದ ಇನ್ನೊಂದು ಸಂಚು ಮಾಡುವ ಗಿರಿಜವ್ವೆಗೆ ಪರಶುರಾಮಪ್ಪ‌ ಮತ್ತು ಭರಮಣ್ಣನವರ ಸಹಕಾರ ಸಿಗುವುದಾ ಎಂಬ ಪ್ರಶ್ನೆಗೆ ಉತ್ತರಗಳು ಪುಸ್ತಕದಲ್ಲಿವೆ.

ಮಡಿಕೆಯನು ಕುಂಬಾರನೇ ಮಾಡಬೇಕು. ಮುದ್ದಣ್ಣನಿಗೆ ಬೊಕ್ಕಸದಲ್ಲಿ ಸಾಕಷ್ಟು ಸಂಪತ್ತಿಲ್ಲವೆಂದು ತಿಳಿದಾಗ ಅವನು ತೆಗೆದುಕೊಳ್ಳುವ ನಿರ್ಧಾರಗಳು ಈ ಲೇಖನದ‌‌ ಮೊದಲ ಪ್ಯಾರಾಗೆ ಸಾಕ್ಷಿಯಂತಿವೆ. ಈ ಕಾದಂಬರಿಯಲ್ಲಿ ಬರುವ ಗೌಡತಿಯ ಪಾತ್ರ ತುಂಬಾ ಹಿಡಿಸುತ್ತದೆ. ಸಾವಿರ ಸಾವಿರ ಬಾರಿ ಹೇಳಿರುತ್ತೇನೆ‌.‌ ಪ್ರೀತಿ ಭಗವಂತ ಎಂದು! ಪ್ರೀತಿಗೆ ಕರಗದ ಹೃದಯವಿರುವುದಿಲ್ಲ. ಕರಗದಿದ್ದರೇ ಅದು ಹೃದಯವೇ ಅಲ್ಲ. ಗೌಡತಿಯ ಪಾತ್ರ ಒಂದೈದು‌ ಪುಟಗಳಿಗೆ ಸೀಮಿತವಾದರೂ ಕಥೆಯ ಮೇಲೆ ಆಕೆಯ ಪಾತ್ರದ ಪರಿಣಾಮ ಅಗಾಧ.

ಪಂಜು ಉರಿದಷ್ಟು ಹಿಡಿಕೆ ಸುಡುತ್ತದೆ.‌ ಆರಂಭಗಳಿಗೆ ಅಂತ್ಯವಿರುತ್ತದೆ. ದುರ್ಗದ ಜನತೆ ಗಿರಿಜವ್ವೆಯ ಅಸಹಾಯಕ ಕ್ರೋಧಕ್ಕೆ, ಮತ್ತಿವಂಶದವರ ಮೇಲೆ ನಡೆದ ದೌರ್ಜನ್ಯಕ್ಕೆ, ಸಾಮಾನ್ಯರ ಮೇಲಿನ ಶೋಷಣೆಗೆ ಹೇಗೆ ಸ್ಪಂದಿಸುತ್ತದೆ ಎಂಬುದು ಕಾದಂಬರಿಯ ಒಂದು ಭಾಗವಾದರೇ, ಪರಶುರಾಮಪ್ಪ ಮತ್ತು ಭರಮಣ್ಣ ಅವರ ರಾಜತಾಂತ್ರಿಕತೆಯನ್ನು ಹೇಗೆ ಬಳಸುತ್ತಾರೆ ಎಂಬುದು ಕಾದಂಬರಿಯ ಇನ್ನೊಂದು ಭಾಗ.

ಇಷ್ಟು ಅನ್ಯಾಯ ಮಾಡಿ ದುರ್ಗದ ಸರ್ವಾಧಿಕಾರಿಯಾದ ಮುದ್ದಣ್ಣನ ಭವಿಷ್ಯವೇನು.‌ ದುರ್ಗ ನಿಟ್ಟುಸಿರು ಬಿಡುವುದಾ ಅಥವಾ ಮತ್ತೆ ಅಸಹಾಯಕತೆಯಿಂದ‌ ಕೈ ಕೈ ಹಿಚುಕಿಕೊಳ್ಳುವುದಾ ಎಂಬ ಜಿಜ್ಞಾಸೆಗಳು ಮೂಡಿದರೆ ಇದೊಂದು ಪುಸ್ತಕವನ್ನು ಓದಿಬಿಡಿ. ಓದಿದ್ದರೆ ಎಂದಿನಂತೆ‌ ನನ್ನೊಂದಿಗೂ ಹಂಚಿಕೊಳ್ಳಿ!

ತರಾಸುರವರ ಮೋಡಿಗೆ ಸಿಕ್ಕವರಂತೆ ಹೊಸಹಗಲು ಓದಲು ಶುರುವಿಟ್ಟಿದ್ದೇನೆ. ಸಿಗುತ್ತೇನೆ!!

ಅಭಿ...
69 reviews12 followers
September 18, 2020
ಇದು ತಾ.ರ.ಸು ಅವರ ಕಾದಂಬರಿತ್ರಿಯ (ಕಂಬನಿಯ ಕುಯಿಲು, ರಕ್ತ ರಾತ್ರಿ, ತಿರುಗು ಬಾಣ ) ಪೂರ್ತಿ review
ಮೊದಲು ನಾನು ದುರ್ಗಾಸ್ತಮಾನ ಓದಿದೆ ... ಅದು ಓದಿ ಬಹಳ ಇಷ್ಟ ಆಯಿತು .... ನಯಾಜ್ ಅವರು ಹೇಳಿ ಈ ಮೂರನ್ನು ಓದಿ ಮುಗುಸಿದೆ ... ಅದ್ಭುತ ವಾಗಿ ಬರಿದಾದರೆ ... ಪ್ರತಿ ಒಬ್ಬರಿಗೂ ಇಷ್ಟವಾಗುವ ಪಾತ್ರ ಅಂದ್ರೆ ಗಿರಿಜವ್ವೆ ನೇ ... ಒಬ್ಬ ಊಳಿಗದ ಹೆಂಗಸಾಗಿ ಸೇರಿ ಹೇಗೆ ಅವಳ ಜೀವನ ಬದಲಾಗತ್ತೆ ಅಂತ ಅದ್ಭುತವಾಗಿ ಬರ್ದಿದಾರೆ ... ಇದು ಓದ್ತಾ ಓದ್ತಾ ರಾತ್ರಿ ನನ್ನ ಮಕ್ಕಳಿಗೆ ಕಥೆ ಹೇಳ್ತಾಯಿದ್ದೆ ... ಅವರು ಬಹಳ enjoy ಮಾಡಿದ್ರು ಇದನ್ನ ... ಒಂದು ಬೇಜಾರು ಏನು ಅಂದ್ರೆ ಈ ಕೊರೊನ ತೊಂದ್ರೆ ಇಂದ ಚಿತ್ರದುಗಕ್ಕೆ ಹೋಗಲಾಗ್ತಿಲ್ಲ ... ಇದು ಮುಗಿದಮೇಲೆ ಪರಿವಾರ ಸಮೇತ ಖಂಡಿತ ಹೋಗಿ ಆ ಜಾಗಗಳನ್ನೆಲ್ಲ ನೋಡಿ ಬರಬೇಕು ... ನೀವು ಕನ್ನಡ ಕಾದಂಬರಿಪ್ರಿಯರಾದರೆ ಓದ್ಲೇ ಬೇಕಾದ ಕೃತಿ ಇದು ...
Profile Image for Abhiram's  Book Olavu.
104 reviews3 followers
April 27, 2025
ಕಂಬನಿಯ ಕುಯಿಲು, ರಕ್ತ ರಾತ್ರಿಗಳಲ್ಲಿ ಜರುಗುವ ಸಚ್ಚಾರಿತ್ರ್ಯದ ವಧೆಗೆ, ದುರುಳ ಕ್ರೂರ ಆಡಳಿತದ ಅಟ್ಟಹಾಸಕ್ಕೆ 'ತಿರುಗುಬಾಣ'ದಲ್ಲಿ ಉತ್ತರ ಲಭಿಸುವುದು. ಕುತಂತ್ರಿ ಮುದ್ದಣ್ಣನ ರಾಜಕೀಯ ತಂತ್ರಕ್ಕೆ ಪ್ರಧಾನಿ ಪರಶುರಾಮ ನಾಯಕರ ಹಾಗೂ ಭರಮಣ್ಣ ನಾಯಕರ ಪ್ರತಿತಂತ್ರ ಒಂದುಕಡೆಯಾದರೆ, ಧೀರೆ ಗಿರಿಜವ್ವೆಯ ಪ್ರತಿಜ್ಞೆ, ಛಲ, ದಿಟ್ಟತನ ಇನ್ನೊಂದುಕಡೆ. ಇವುಗಳ ಮಧ್ಯೆ, ಗ್ರಾಮಗೌಡ ದಂಪತಿಗಳ ಸ್ವಾಭಿಮಾನ, ಸ್ವಾಮಿನಿಷ್ಠೆ, ಗೌರವ, ಓದುಗರನ್ನು ಬೇರೆಯೇ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ತ. ರಾ. ಸು.ರವರು ಬಹಳ ಸೊಗಸಾಗಿ, ಮೈನವಿರೇಳಿಸುವಂತೆ ಈ ಕಾದಂಬರಿಯನ್ನ ರಚಿಸಿದ್ದಾರೆ. ರೋಚಕತೆ, ಭಾವನಾತ್ಮಕತೆಗಳಿಂದಲೂ ಕೂಡಿರುವ ಈ ಕೃತಿಯ ಅಂತ್ಯವು ರೌದ್ರ ರಮಣೀಯವಾಗಿ ಮೂಡಿ ಬಂದಿದೆ. ಮುದ್ದಣ್ಣ ಹಾಗೂ ಅವನ ಚೇಲಾಗಳನ್ನ ಗಿರಿಜವ್ವೆ ಮತ್ತು ಇನ್ನಿತರರು ಹೆಡೆಮುರಿ ಕಟ್ಟಿ ಬಗ್ಗುಬಡಿದುದು ನಾನೇ ಅವರುಗಳನ್ನ ಸಂಹಾರ ಮಾಡಿದಷ್ಟು ತೃಪ್ತಿ ನೀಡಿತು. ಸನ್ನಿವೇಶಗಳ ಹಾಗೂ ಸಂಭಾಷಣೆಗಳ ನಿರೂಪಣೆಗೆ ಸುಬ್ಬರಾಯರನ್ನ ಎಷ್ಟು ಹೊಗಳಿದರೂ ಸಾಲದು. ಈ ನಿಟ್ಟಿನಲ್ಲಿ 'ದುರ್ಗಕ್ಕೆ ಭೇಟಿ ಕೊಡಬೇಕು' ಅನ್ನೊ ತುಡಿತ ಹುಟ್ಟದೇ ಇರಲು ಸಾಧ್ಯವೇ ಇಲ್ಲ!
Profile Image for Sowmya K A Mysore.
40 reviews34 followers
June 10, 2020
ಈ ಸೀರಿಸ್ ನಲ್ಲಿಯೇ ಅತ್ಯಂತ ಇಷ್ಟವಾದ ಭಾಗ ಇದು. ಗಿರಿಜೆಯ ಧೈರ್ಯ ಸಾಹಸ ಬಹಳ ಇಷ್ಟವಾಗುತ್ತದೆ.
61 reviews
April 22, 2014
Loyalty. Bravery. Glory. Righteousness. These forgotten words form the core of the third volume of Ta.Ra.Su.'s third book in the eight part historical fiction series on the Chitradurga paleyagars. Part Two - Rakta Ratri ended with the brutal murder of Linganna Nayaka, the last scion of the House of Matti, established by Timmanna Nayaka and Dalavayi Muddanna establishing supreme control over Chitradurga. Tirugu Baana, which literally means 'boomerang', is exactly what the name suggests - a reversal of fortunes for the evil Muddanna whose past atrocities come back to haunt him.

Where the pace of Rakta Ratri had slacked in parts, Tirugu Baana more than makes up for it - it races ahead at break neck speed, carrying the reader on a whirlwind of vengeance, wreaked by a popular uprising against the tyrant. It is amazing how deftly Ta.Ra.Su. gives the pacifist of Rakta Ratri - Ugra Channaveera Swamiji a different avatar in the present volume. The Swamiji is at the centre of the plot to overthrow Muddanna, though he never exhorts violence. A very convincing portrayal that evokes respect for the far seeing swamiji.

Girija, who made a brief appearance in Rakta Ratri as the vengeful village girl evolves into a mastermind who pulls together the village heads to revolt against Muddanna. The scenes where Bhairappa, the Gowda (village head) of Bennur convinces the other dilly-dallying gowdas is powerfully etched.

Even more moving is the scene where Bhiarappa's wife cleverly confronts the Chitradurga soldiers who have come seeking her husband's head. Her moving words to the soldiers who she treats as her own children and the manner in which she convinces them that they are following the orders of a tyrant, without actually saying so, demonstrates Ta.Ra.Su.'s masterful storytelling. The words he puts in her mouth are so powerful that they would move even a heart of stone. It is no surprise then that the soldiers turn against their own leader who ultimately falls at her feet begging forgiveness.

Though the title of the volume reveals the direction that the storyline will take, Ta.Ra.Su. maintains the suspense and makes the book an edge of the seat page turner. The fear that takes root in the heart of Muddanna, the conviction of the gowdas, of Girija and Parashuramappa and Bharamanna, the lynchpins of the revolt are beautifully conveyed. How the headstrong and confident Muddanna gives in to fear, making mistakes along the way is skilfully woven into the narrative.

A tightly narrated story, evocative language, poetic wordplay, characters and events that come alive make this an un-put-downable must read. As with the previous books, there is enough bloodletting and violence in this volume as well. Though it culminates in the savage killing of Muddanna and his brothers, the book ends on a positive note, one of hope, of a new morning dawning on the hillocks of Chitradurga.

Profile Image for Prabhosha Acharya.
22 reviews12 followers
December 30, 2020
ವಿಶೇಷ ಸೂಚನೆ - ರಕ್ತ ರಾತ್ರಿ ಪುಸ್ತಕದ ಪರಿಚಯದ ಮುಂದಿನ ಭಾಗ.

ಹಾಗಾದರೆ ಮುದ್ದಣ್ಣನೆ ಮುಂದಿನ ನಾಯಕ ನಾಗುತ್ತನೆಯೇ?
ಗಿರಿಜಾ ಈಗಲಾದರೂ ಏನಾದರೂ ಮಾಡುವಳೆ?
ಮುದ್ದಣ್ಣ ನಿಂದ ಅರಮನೆ ಕಾಪಡುವರು ಯಾರು ಇಲ್ಲವೇ?

ಈ ಎಲ್ಲ ಸಂಶಯ ನಿವಾರಿಸಿಕೊಳ್ಳಲು ನಾನು ತ. ರಾ. ಸು ರವರ ಮುಂದಿನ ಪುಸ್ತಕ ವಾದ ತಿರುಗುಬಾಣ ಪ್ರಾರಂಭಿಸಿದೆ.

ಲಿಂಗಣ್ಣ ನಾಯಕರ ಕೊಲೆ ಇಂದ ಇಡೀ ರಾಜ್ಯವೇ ತಲ್ಲಣಿಸಿ ಹೋಯಿತು. ಮುದ್ದಣನ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಗಿದ್ದು. ಇಷ್ಟೆಲ್ಲ ಅಪಚಾರ ಮಾಡಿ ಅರಮನೆ ಅವನ ಕೈ ಯಲ್ಲಿದ್ರು ಅವನ ಮನಸ್ಸು ಯಾಕೋ ನೆಮ್ಮದಿ ಹುಡುಕುತ್ತಿತ್ತು. ಅರಮನೆ ಕೈವಶ ಆದ್ರೂ ಅವನೇ ರಾಜ ಎಂದು ಘೋಷಿಸಿ ಕೊಳ್ಳುವ ಹಾಗಿರಲಿಲ್ಲ. ಕಾರಣ ಎಲ್ಲ ಜನಗಳು ದಂಗೆ ಏಳಬಹುದು ಅನ್ನೋ ಅನುಮಾನ. ಅದಕ್ಕೋಸ್ಕರ ರಾಜ್ ಮನೆತನದ ಸಂಬಂಧಿ ಅಂದ್ರೆ ಲಿಂಗಣ್ಣ ನಾಯಕನ ಅತ್ತೆ ಯ ಮಗ ರಂಗಪ್ಪ ನಾಯಕನನ್ನು ಕರೆಸುತ್ತಾನೆ. ಅಕ್ಕ ಪಕ್ಕದ ಹಳ್ಳಿಯ ಗೌಡರು, ಗಿರಿಜಾ ಎಲ್ಲರೂ ಸೇರಿ ಮುದ್ದಣ್ಣ ವಿರುದ್ದ ಸಂಚು ರೂಪಿಸಿ ಎಲ್ಲ ಹಳ್ಳಿಯ ಹುಡುಗರನ್ನು ಸೈನಿಕರ ಮಟ್ಟಕ್ಕೆ ತರಬೇತಿ ನೀಡುತ್ತಾರೆ ಅದಕ್ಕೆ ಸಹಕಾರವಾಗಿ ಪರಶುರಾಮಪ್ಪ, ಭರಮಣ್ಣ ಇರುತ್ತಾರೆ. ಎಲ್ಲ ವಿರೋಧಗಳ ನಡುವೆ ಮುದ್ದಣ್ಣ ರಂಗಪ್ಪ ನಾಯಕನ ಪಟ್ಟಾಭಿಷೇಕ ಮಾಡಿಸುತ್ತಾನೆ. ಇದ್ರಿಂದ ಕೆರಳಿದ ಹಳ್ಳಿಯ ಗೌಡರು, ಗಿರಿಜಾ, ಪರಶುರಾಮಪ್ಪ, ಭರಮಣ್ಣ ಎಲ್ಲರೂ ಉಪಾಯದಿಂದ ಮುದ್ದಣ್ಣ ಅಂತ್ಯ ಗೊಳಿಸುತ್ತಾರೆ. ಈ ಕಾದಬರಿಯಲ್ಲಿ ಗಿರಿಜೆ ಯ ಸಾಹಸ ಮೆಚ್ಚುವಂತದ್ದು. ನಗತಿಯ ನೆರಳು ಅಂತವ್ಹೇಳಿ ಮುದ್ದಣನ ನಿದ್ದೆ ಕೆಡಿಸಿದ ಹೆಂಗಸು. ಅತ್ಯಂತ ಕ್ರೂರವಾಗಿ ಮುದ್ದಣ ಮತ್ತು ಅವನ್ ಸಹೋದರರನ್ನು ಸಾಯಿಸಿ ರಾಜ್ಯ ಕಾಪಾಡಿದ ಹೆಂಗಸು.
ಅದ್ಬುತ ಚಿತ್ರದುರ್ಗದ ಇತಿಹಾಸ ಕಾದಂಬರಿ. ಹೊಸಹಗಲು ಮುಂದಿನ ಭಾಗ ಓದಲು ಕಾದಿರುವೆ.
This entire review has been hidden because of spoilers.
Profile Image for Karthik.
61 reviews19 followers
December 21, 2021
ಚಿತ್ರದುರ್ಗದ ರುದ್ರಮನೋಹರ ಇತಿಹಾಸದ ಒಂದು ಭೀಷಣ ಘಟ್ಟದ ಆಧಾರದ ಮೇಲೆ ರಚಿಸಿರುವ ಕಾದಂಬರೀತ್ರಯದ ಮೂರನೆಯ ಮತ್ತು ಕೊನೆಯ ಅಧ್ಯಾಯ ‘ತಿರುಗುಬಾಣ'
-------------------------------------------------------------------------------------------
ರಕ್ತ ರಾತ್ರಿಯ ಮುದ್ದಣನ ನ್ನು ಮರೆಯುವುದು ಸಾಧ್ಯವೇ ?! ಲಿಂಗಣ್ಣ ನಾಯಕರನ್ನು ಹತೆಗೈದು ದುರ್ಗದ ಸರ್ವಾಧಿಕಾರಿಯಾಗಿ ಮೆರೆದವ ಮಣ್ಣು ಸೇರಲೇ ಬೇಕಲ್ಲವೇ ?! ಅವನ ಅಂತ್ಯದ ಕಥೆಯೇ ‘ತಿರುಗುಬಾಣ'.
-------------------------------------------------------------------------------------------

ಪ್ರತಿಭಟನೆ ! ಅಸಹಕಾರ ! ಒಗ್ಗಟ್ಟು

ಒಮ್ಮೆ ಪರಶುರಾಮಪ್ಪ ಭರಮಣ್ಣ ನಿಗೆ ಒಂದು ಮಾತು ಹೇಳುತ್ತಾನೆ - ‘ಕೊಡ ತುಳುಕುವ ಮೊದಲು ತುಂಬಬೇಕು ಭರಮಣ್ಣ, ಕೊಳ್ಳಿ ಎಸ್ಟು ಬೇಗ ಉರಿದರೆ ಅಷ್ಟು ಬೇಗ ಆರುತ್ತದೆ'. ಅಂತೆಯೇ, ಮುದ್ದಣ್ಣ ನ ಪಾಪದ ಕೊಡ ತುಂಬಿ, ತನ್ನ ರಕ್ತ ಪಾತದಿಂದ ಮೈ ಮರೆತು ಮೆರೆದವನು ಕೊಳ್ಳಿಯಂತೆಯೆ ಉರಿದು ಬೂದಿಯಾಗುತ್ತಾನೆ. ಗಿರಿಜವ್ವೆ - ಪರಶುರಾಮಪ್ಪ - ಭರಮಣ್ಣ ಹೆಣೆದ ವ್ಯೂಹದಲ್ಲಿ ಸಿಲುಕಿ, ಪ್ರತಿ ತಂತ್ರ ಹೂಡಲಾಗದೆ ಮಾಡಿದ ಪಾಪಗಳ ಸರಪಳಿಯನ್ನು ಧರಿಸಿ ಏಳಲಾಗದೆ ಘೋರ ಅಂತ್ಯ ಕಾಣುತ್ತಾನೆ.
-------------------------------------------------------------------------------------------

ಎಲ್ಲರಿಗಿಂತ ಮಿಗಿಲಾಗಿ ಕಾಡುವವಳು ಗಿರಿಜೆ. ಉಪ್ಪುಂಡ ಮನೆಗೆ ಅದೆಂತಾ ! ಅಬ್ಬಬ್ಬಾ!
‘ನಮ್ಮಂಥ ಗಂಡಸರೆಲ್ಲ ಬೆಚ್ಚಗೆ ಉಂಡು ಮಲಗಿರುವಾಗ, ಆ ಹೆಣ್ಣು ಮಗಳು ಹಗಲು ರಾತ್ರಿ ಎನ್ನದೆ ಕಾಡುಮೇಡು ಅಳೆಯುತ್ತಾಳೆ..' ಮಲ್ಲಭಟ್ಟರ ಹಳ್ಳಿಯ ಗೌಡ ಹೀಗೇ ಹೇಳುವಾಗ ಗಿರಿಜೆಯ ಮೇಲೆ ಅಭಿಮಾನ ಉಕ್ಕುತ್ತದೆ !
-------------------------------------------------------------------------------------------
ಪರಶುರಾಮಪ್ಪ ನ ಚಾಣಾಕ್ಷತನ , ತೊಂದರೆಗಳು ಭೋರ್ಗರೆವ ಸಾಗರದ ಅಲೆಯಂತೆ ಅಪ್ಪಳಿಸದರೂ ಧೃತಿಗೆಡದೆ ಯೋಜನೆ ರೂಪಿಸುವ ಅವರ ಬುದ್ಧಿವಂತಿಕೆ ಮೆಚ್ಚುವಂತದ್ದು. ಒಂದು ಹೆಣ ಉರುಳಿಸದೆ, ಒಂದು ಹನಿ ರಕ್ತ ಚೆಲ್ಲದೇ ದುರ್ಗದ ಕೋಟೆಯನ್ನು ವಶಪಡಿಸಿಕೊಂಡ ಅವರದ್ದು ಅದೆಂತಾ ರಾಜಕಾರಣ !
-------------------------------------------------------------------------------------------
'ಗುಂಪು ಒಡೆಯುವುದಕ್ಕೆ ಬಂಗಾರಕ್ಕಿಂತ ಬಲವಾದ ಅಸ್ತ್ರ ಬೇರೊಂದಿಲ್ಲ ' ಎಂದು ಮುದ್ದಣ್ಣ , ಗೌಡರಿಗೆ ಬಂಗಾರದ ಕಾಣಿಕೆ ಕೊಟ್ಟರೂ, ಅದನ್ನು ಕಾಲ ಕಸದಂತೆ ಕಂಡ ಗೌಡರದು ಅದೆಂತಾ ಒಗ್ಗಟ್ಟು !
-------------------------------------------------------------------------------------------
ಇದೆಲ್ಲವನ್ನೂ ಬಹಳ ರೋಚಕವಾಗಿ ನಮಗೆ ಉಣಬಡಿಸಿದ ತ ರಾ ಸು ಅವರು, ನಿಜಕ್ಕೂ ಸ್ಮರಣೀಯರು. ಸನ್ನಿವೇಶಗಳನ್ನು ಅವರು ವಿವರಿಸುವ ರೀತಿ, ಬಳಸುವ ಭಾಷೆ ! ಆಹಾ ! ಮುದ್ದಣ್ಣನ ಕೋಪದಿಂದ ಹಿಡಿದು, ಪರಶುರಾಮಪ್ಪ ರ ತಾಳ್ಮೆಯ ತನಕ , ಆಡುವ ಪ್ರತಿಯೊಂದು ಮಾತಿನಲ್ಲೂ ಪಾತ್ರದ ಅಂತರಾಳವನ್ನು ಸ್ಪಷ್ಟವಾಗಿ ನಿರೂಪಿಸುವಲ್ಲಿ ಲೇಖಕರ ಚತುರತೆ ಶ್ಲಾಘನೀಯ.
-------------------------------------------------------------------------------------------
'ಕಂಬನಿಯ ಕುಯಿಲಾ'ಗಿ ಆರಂಭವಾದ ದುರ್ಗದ ಕರಾಳ ದಿನಗಳು, 'ರಕ್ತ ರಾತ್ರಿ'ಯ ದುರಂತವ ಕಂಡು 'ತಿರುಗು ಬಾಣ' ದೊಂದಿಗೆ ಅಂತ್ಯಗೊಂಡಿದೆ.

'ಹೊಸ ಹಗಲು' ಮೂಡಿದಾಗ ಮತ್ತೆ ಸಿಗುತ್ತೇನೆ,

- ಕಾರ್ತಿಕ್ ಕೃಷ್ಣ
21/12/2021
18 reviews
April 20, 2024
ತ.ರಾ.ಸು ಅವರ ಚಿತ್ರದುರ್ಗ ಇತಿಹಾಸದ ಕುರಿತ ಕಾದಂಬರಿ ಮಾಲೆಯ ಮೂರನೆಯ ಕೃತಿ.

ಗಿರಿಜವ್ಯೆಯ ಚಾಣಾಕ್ಷ ಮತ್ತು ಅನಾಯಸ ಸಂಗ್ರಾಮ. ಮುದ್ದಣನ ಸೆರೆಯಿಂದ ತಪ್ಪಿಸಿಕೊಂಡ ಪರುಶುರಾಮಪ್ಪ, ಭರಮಣ್ಣ. ಅನ್ಯಾಯದ ವಿರುದ್ಧ ಒಗ್ಗಟ್ಟಾದ ಸುತ್ತಲಿನ ಹಳ್ಳಿಯ ಜನ. ��ುದ್ದಣ್ಣ ಮತ್ತು ಅವನ ತಮ್ಮಂದಿರ ಭಯಂಕರ ಸಾವಿನಿಂದ ದುರ್ಗಕ್ಕೆ ಕವಿದ ಕರಾಳ ದಿನಗಳ ಅಂತ್ಯವಾಗುತ್ತದೆ.

ಇಷ್ಟದ ಕೆಲ ಸಾಲುಗಳು:
ಸೇಡು ಮತ್ತು ಶಿಕ್ಷೆಯ ವ್ಯತ್ಯಾಸದ ಬಗ್ಗೆ:

ಭರಮಣ್ಣನ ಪ್ರಶ್ನೆ:
“ಏಕೆ ಪ್ರತೀಕಾರ ಸಮಯ ಸನ್ನಿಹಿತವಾದಾಗಲೂ ಉತ್ಸಾಹವಿರಬಾರದೆ?”(ಮುದ್ದಣ್ಣನನ್ನು ಕೊಲ್ಲುವ ವಿಚಾರದ ಸಂದರ್ಭ).

ಚನ್ನವೀರ ಸ್ವಾಮಿಗಳ ಉತ್ತರ:
“ಕೂಡದು ಭರಮಣ್ಣ, ಕೂಡದು. ಈ ಕೆಲಸವನ್ನು ಮಾಡಬೇಕೇ ಎಂದರೆ ಮಾಡಬೇಕು ಎಂದು ನಾನೂ ಒಪ್ಪುತ್ತೇನೆ. ಆದರೆ ಮಾಡಲೇಬೇಕಾಗಿ ಬಂದರೂ, ಇದು ಹೊಲೆಗೆಲಸ, ಆದ್ದರಿಂದ ಇದನ್ನು ಮಾಡುವಾಗ ಕರ್ತವ್ಯಪ್ರಜ್ಞೆ ಇರಬೇಕೇ ಹೊರತು, ಇಂಥಾ ಉತ್ಸಾಹ ಸಲ್ಲದು".
Profile Image for Skanda Prasad.
69 reviews2 followers
April 3, 2022
ಮುದ್ದಣ್ಣನ ಮತ್ತು ಆತನ ಮೂರು ಸಹೋದರರನ್ನು ಕೊಲ್ಲುವಲ್ಲಿಗೆ ಗಿರಿಜೆ, ಭರಮಣ್ಣ, ಪರಶುರಾಮಪ್ಪನ ಸೇಡು ತೀರಿಸಿದಂತಾಯಿತು. ನಾಯಕರ ವಂಶವನ್ನೇ ನಿರ್ವಂಶ ಮಾಡಿದ ಮುದ್ದಣ್ಣನಂತಹ ಪಿಶಾಚಿಯನ್ನು ಹೊಸಕಿ ಹಾಕಬೇಕೆನ್ನುವಷ್ಟು ಸಿಟ್ಟು ಬಂದರೆ ಅದರ ಸಂಪೂರ್ಣ ಕ್ರೆಡಿಟ್ ಲೇಖಕರಾದ ತ.ರಾ.ಸು ಅವರಿಗೆ ಸಲ್ಲಬೇಕು. ಮೂರು ಕಾದಂಬರಿಗಳ ಸರಣಿ ಇಲ್ಲಿಗೆ ಕೊನೆಗಾಣುವುದಿಲ್ಲ. ಹೊಸಹಗಲು ಎಂಬ ಮುಂದಿನ‌ ಕಾದಂಬರಿ ಓದಿಸಿಲು ಕುಳ್ಳಿರುಸುತ್ತದೆ.
1 review
Want to read
February 13, 2024
I just finished reading raktharatri and cannot get physical copies of the remaining books of the series as I am outside India, and I also cannot find any e-books of the series. Does anyone know if there are e-books available lying somewhere in the internet? I would appreciate any small help. Thanks in advance.
Profile Image for Karthik Jodangi.
18 reviews
July 16, 2025
ಪುಸ್ತಕ ಓದಲು ಶುರುಮಾಡಿದರೆ ಓದಿದ ಮೇಲೆಯೇ ಇದನ್ನು ಕೆಳಗಿಡಲು ಮನಸ್ಸು ಬರುವುದು, 'ರಕ್ತರಾತ್ರಿ' ಯನ್ನು ಓದಿ ಕೋದ್ರದಲ್ಲಿದ್ದ ಮನಸ್ಸು ಈ ಪುಸ್ತಕ ಓದಿದ ನಂತರ ಶಾಂತಗೊಳ್ಳುವುದು. ಮುದ್ದಣ್ಣನ ಮರಣದ ದೃಶ್ಯಾಂತ ಓದುವಾಗ ಆಗುವ ರೋಮಾಂಚನ ಅದ್ಭುತ.
Profile Image for Akshatha ⭐.
107 reviews15 followers
June 9, 2024
I didn't know this was a series when I randomly picked it up in a bookstore. Then I had to read the summaries of the first 2 books to catchup and continue this one. If only I had known earlier, I would have started from the first book.
I thoroughly enjoyed this book and it was very well written. Love the powerful character of Girija.
42 reviews8 followers
March 9, 2015
Amazing revenge..Thanks a lot Author for providing such a great novel series!!
Displaying 1 - 18 of 18 reviews

Can't find what you're looking for?

Get help and learn more about the design.