Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.
ಪ್ರೀತಿ ಎಂದರೆ ಸಹನೆ, ಕಾಯುವಿಕೆ. ಪ್ರೀತಿಯೆಂದರೆ ಪ್ರೀತಿಸುವುದಷ್ಟೇ. ಪ್ರೀತಿಸುತ್ತಲೇ ಉಳಿದುಬಿಡುವುದಷ್ಟೇ. ತಿರುಗಿ ಪ್ರೀತಿಯನ್ನು ಬಯಸಬೇಕೆಂದಿಲ್ಲ. ಒಂದು ಅದಮ್ಯ ಪ್ರೀತಿ ಇಬ್ಬರ ನಡುವೆ ಹುಟ್ಟಿಕೊಂಡು, ಕಾಲಾಂತರದಲ್ಲಿ ಹಲವಾರು ಕಾರಣಗಳಿಗೆ ಸಿಕ್ಕು ಇಬ್ಬರೂ ಒಂದಾಗದೇ, ಬೇರೆ ಬೇರೆ ಬದುಕನ್ನು ಕಟ್ಟಿಕೊಂಡರೂ ಪ್ರೀತಿ ಸಾಯುವುದಿಲ್ಲ. ಪ್ರೀತಿ ಎಂದೆಂದಿಗೂ ಸಾಯುವುದಿಲ್ಲ. ಹೀಗೂ ಪ್ರೀತಿಸಬಹುದೇ ಎಂದು ಪ್ರಶ್ನೆಯುಳಿಸಿಯೇ ನಿಟ್ಟುಸಿರಿನೊಂದಿಗೆ ಕಾದಂಬರಿ ಮುಗಿದು ಹೋಗುತ್ತದೆ.
ಪ್ರೀತಿಗೆ ಇಂತಿಷ್ಟೇ ಪರಿಮಿತಿ ಪರಿಮಾಣಗಳಿರುವುದಿಲ್ಲ. ಪ್ರೀತಿ ಅದಮ್ಯ, ಅಮೂರ್ತ, ನಿರಂತರ, ನಿರಾಕಾರ! ಪ್ರೀತಿ ಭಗವಂತನ ಭಾಷೆ ಎನ್ನುತ್ತಾ ತೀವ್ರವಾಗಿ ಪ್ರೀತಿಗೊಳಪಟ್ಟು ಉಳಿದು ಹೋದ ಹೃದಯಗಳೆಲ್ಲಾ ಈ ಪ್ರೀತಿ ಸರಿ ಇಲ್ಲಪ್ಪ ಎಂದುಬಿಡುವಂತಹ ಒಂದು ಪುಸ್ತಕ "ಮಾಂಡೋವಿ". ಮಾಂಡೋವಿ ಒಂದು ನದಿಯ ಹೆಸರು. ಗೋವಾದಲ್ಲಿ ಹರಿಯುತ್ತದೆ. ಮಹದಾಯಿ ಇದೆಯಲ್ಲ ಅದೇ ಮಾಂಡೋವಿ. ಅದರದ್ದೇ ಹರಿವು ಅದರದ್ದೇ ಸೆಳೆತ, ಅದರದ್ದೇ ಮಿಳಿತ ಮತ್ತು ಅದರಷ್ಟೇ ತುಡಿತಗಳಿವೆ ಈ ಪುಸ್ತಕದಲ್ಲಿ.
ಬೆಳಗೆರೆ ಅವರು ಇಂದಿಗೂ ನನ್ನನ್ನು ಒಂದು ಓದಿನಲ್ಲಿ ಓದಿಸಿಕೊಂಡವರಲ್ಲ (ಕೆಲವನ್ನು ಹೊರತುಪಡಿಸಿ). ವಿಚಿತ್ರ ಕುತೂಹಲವನ್ನು ಮನೆ ಮಾಡಿಸಿ ಕಾಡುವ ಅಕ್ಷರ ಮಾಂತ್ರಿಕ ರವಿ ಬೆಳಗೆರೆ.
ಮಾಂಡೋವಿ ಸುಂದರಿ. ನದಿಯ ಸೆಳವು ಸೆಳಕು ಎರಡನ್ನು ಮೈಗೂಡಿಸಿಕೊಂಡು ಬೆಳೆದವಳು. ಹುಟ್ಟಿದಾಗಲೇ ಅಮ್ಮನ ಕಳೆದುಕೊಂಡು ಮುಕ್ತಾಯಿಯೊಡನೆ ಬೆಳೆಯುವ ಮಾಂಡೋವಿಗೆ ಪ್ರೀತಿಯಾಗುತ್ತದೆ. ಮದುವೆಯಾಗುತ್ತದೆ, ಎರಡೂ ಬೇರೆಯವರೊಂದಿಗೆ! ಅರವತ್ತರ ಅಂಚಿನಲ್ಲಿ ವೈಧವ್ಯದ ಹಿಂಸೆಯೂ ಸಿಗುತ್ತದೆ. "ಪ್ರೀತಿಯ ದಾರಿದ್ರ್ಯ ಮಿತಿಯಿರದ ಐಶ್ವರ್ಯಗಳ" ನಡುವೆ ತೊಳಲಾಡುವ ಮಾಂಡೋವಿ ಕಾದಂಬರಿ ಮಾಂಡೋವಿ, ಚಲಂ ಮತ್ತು ಡಾ. ಗೌಡರ ನಡುವೆ ಸುತ್ತುತ್ತದೆ.
ಎದೆ ಸುಟ್ಟುಕೊಂಡು ಪ್ರೀತಿಸುವ ಹುಡುಗನೊಬ್ಬ ಅಚಾನಕ್ ಆಗಿ ಕಾರಣಗಳನ್ನು ತಿಳಿಯದೆ ತಿರಸ್ಕೃತನಾಗಿ ಹೋಗುತ್ತಾನೆ. ವಿಷಣ್ಣನಾಗಿಬಿಡುತ್ತಾನೆ. ಅನಾಥನಾಗುತ್ತಾನೆ. ಹಲುಬುತ್ತಾನೆ, ಅಸಹಾಯಕನಾಗುತ್ತಾನೆ! ಆ ರೀತಿ ಉಳಿದು ಹೋದ ಮಾಂಡೋವಿಯ ಪ್ರೇಮಿ "ಚಲಂ" ಈ ಕಾದಂಬರಿಯಲ್ಲಿ ತುಂಬಾ ಕಾಡುವ ಪಾತ್ರ. ಮಾಂಡೋವಿಯ ಮದುವೆಯ ನಂತರ ಅವಳ ಶಪಿಸಿ ಅವಳ ಒಳಿತನು ಬಯಸಿ ಅವಳ ನೆನಪಿನಲ್ಲೇ ಉಳಿದು ಇಂದಲ್ಲ ನಾಳೆ ಅವಳು ಬಂದೇ ಬರುತ್ತಾಳೆ ಎಂದು ಕಾಯುವ ಅದಮ್ಯ ಪ್ರೇಮಿ ಚಲಂ. ಬರೋಬ್ಬರಿ ಅರ್ಧ ಶತಮಾನಗಳಷ್ಟು!
ನಾವು ಪ್ರೀತಿಸಿಕೊಂಡವರನ್ನು ಅವನ್ಯಾರೋ ಸೂಟು ತೊಟ್ಟ ಧೀರ ಅಹೋರಾತ್ರಿ ನಮ್ಮಿಂದ ದೂರ ಕರೆದುಹೋಗಿಬಿಡುತ್ತಾನೆ. ನಾವು ಪ್ರೀತಿಸಿದವಳು ಸಾಮಾಜಿಕ ಭದ್ರತೆಗೋ ಏಕೋ ಹಾದಿ ಮರೆತವಳಂತೆ ಹಿಂಬಾಲಿಸುತ್ತಾಳೆ. ಹಾಗೇ ಮಾಂಡೋವಿಯ ಕರೆದುಹೋದ ಚನ್ನಬಸವನಗೌಡ ಅವಳನ್ನೆಷ್ಟು ಪ್ರೀತಿಸುತ್ತಾನಾ? ಚಲಂನಷ್ಟು? ಅಥವಾ ಕಾರಣವಲ್ಲದ ಕಾರಣಕ್ಕೆ ಚಲಂನನ್ನು ತೊರೆದ ಮಾಂಡೋವಿ ಗಂಡನನ್ನು ಪ್ರೀತಿಸುತ್ತಾಳಾ? ಚಲಂನಂತೆ?
ಗೌಡನ ಸಂಬಂಧಗಳು, ಚಲಂನ ತುಡಿತಗಳು, ಮಾಂಡೋವಿಯ ಸುತ್ತಲೂ ಬರುವ ಶೇಷಿ, ಜುಲೇಖಾ, ಶಿವರಾಜಪ್ಪ, ಮಂಗಳಗೌರಿ ಪಾತ್ರಗಳೂ ಕೂಡ ಓದುಗನಿಗೆ ಒಂದು ವಿಲಕ್ಷಣ ಕುತೂಹಲಗಳ ನೀಡಿ ಓದಿಸಿಕೊಳ್ಳುತ್ತವೆ.
ಗೌಡನ ಮರಣಾನಂತರ ಮಾಂಡೋವಿಗೆ ಸಿಗುತ್ತಾಳಾ? ಸಿಕ್ಕರೂ ಎಷ್ಟು ಸಿಕ್ಕಾಳು? ಮುಟಿಗೆಯಷ್ಟು? ಮುಗಿಲಿನಷ್ಟು? ಎಲ್ಲ ಪ್ರಶ್ನೆಗಳಿಗೂ ಉತ್ತರಗಳಿವೆ! ಸಮಯ ಸಿಕ್ಕಾಗ ಓದಿ :)
ಭಯಂಕರ ಲವ್ ಸ್ಟೋರಿಯಿದು. ಪ್ರೀತಿಸಿದವರಿಗೋಸ್ಕರ ಕೊನೆಯವರೆಗೆ ಅಂದ್ರೆ ತಲೆಗೂದಲು ಹಣ್ಣಾಗಿ ಮಣ್ಣಾಗಿ ಕಾಯೋ; ಅಯ್ಯಯ್ಯೋ ಅನಿಸೋ ಕತೆ. ಇನ್ನು ಬೆಳಗೆರೆಯವರು ಇನ್ನೊಂದು ಲೆವೆಲ್‌ಗೆ ವರ್ಣಿಸಿಕೊಂಡು ಹೋಗಿರೊ ಕಾದಂಬರಿ, ಯಾವ್ ಮಟ್ಟಕ್ಕೆ ಅಂದ್ರೆ ಒಂದು ರೌಂಡು ತಲೆನೋವು, ಇನ್ನೊಂದು ರೌಂಡು ತಲೆನೋವು ಬಂದ್ಹೋಯ್ತು. ಗೇಬ್ರಿಯಲ್ ಗಾರ್ಸಿಯಾರ ಕರ್ನಲ್‌ಗೆ ಯಾರೂ ಬರೆಯುವುದಿಲ್ಲ ಓದಿದ್ದ ನನಗೆ, ಗೇಬ್ರಿಯಲ್ ಬರವಣಿಗೆಯ ಪರಿಚಯವಿದ್ದ ನನಗೆ ಈ ಕಾದಂಬರಿ ಅವರ ಇನ್ನೊಂದು ಕಾದಂಬರಿಯ ಪ್ರೇರಣೆಯಿಂದ ಹುಟ್ಟಿದ್ದು ಅಂತ ಗೊತ್ತಾದಾಗ ಒಂದಷ್ಟು ನಿರೀಕ್ಷೆಗಳು ಹುಟ್ಟಿದ್ದವು. ಹಾಗೆಯೇ ಇಲ್ಲಿ ನಡೆದವು ಸಹ. ಕೆಲವೊಂದು ಜಾಸ್ತಿಯಾಯ್ತು ವರ್ಣಸಿದ್ದು ನನಗೆ ಅನಿಸಿದ್ರೂ ಒಂದೇ ದಿನದಲ್ಲಂತು ಸತ್ಯ ಓದೋಕೆ ಆಗ್ತಾ ಇರ್ಲಿಲ್ಲ. ಬೇಗ ಬೋರಾಗ್ತಿತ್ತು ಸಹ. ಅದನ್ನೆಲ್ಲ ಬಿಟ್ರೆ ಒಟ್ರಾಸಿ ಮಜಾ ಅಂತು ಕಾದಂಬರಿ ಓದಿ ಮುಗಿಸಿದಾಗ. ಇನ್ನ ಬರೋ ಪಾತ್ರಗಳೆಲ್ಲ ಭರ್ಜರಿಯಾಗಿ ಇಷ್ಟವಾಗಿ ಹೋಗುತ್ತವೆ. ಓದಿಸಿಕೊಂಡು ಹೋಗುತ್ತೆ. ನೀವೊಂದು ಭಯಂಕರವಾದ, ನೆಕ್ಸ್‌ಟ್ ಲೆವಲ್ ಅಲ್ಲಿರೋ ಲವ್ವು, ಬ್ರೇಕಪ್ಪು ತರಹದ ಕತೆ ಓದಬೇಕು ಅಂತಿದ್ರೆ ಹೇಳಿಹೋಗು ಕಾರಣಕ್ಕಿಂತ ಸಣ್ಣದಿರೋ ಇದನ್ನ ಓದಿ; ಹಾಗೇನು ಇಲ್ಲ ಅನಿಸಿದ್ರು ಓದಿ, ಈಗಿನ ಕಾಲಕ್ಕೆ ಅತಿಯಾಯ್ತು ಅನಿಸಿದ್ರೂ, ಈತರದು ಇನ್ನೂ ಬೇಕು ಅನಿಸಬಹುದು ನಿಮಗೆ ಕಾದಂಬರಿ ಓದಿದಮೇಲೆ.
ತಾಳ್ಮೆ, ಸಹನೆ, ಕಠಿಣ ಪರಿಶ್ರಮ, ಗೌರವ ಮತ್ತು ಅಗಾಧವಾದ ಪ್ರೀತಿ….ಅಬ್ಬಾ...ಎಂಥಾ ಪ್ರೀತಿ... ನಾವು ಪ್ರೀತಿ ಮಾಡೋರು..ನಮ್ನ ಬಿಟ್ಟು ಹೋದ್ರು, ಬೇರೆ ಮದ್ವೆ ಆದ್ರು, ಮಕ್ಳ್ ಆದ್ರು, ಮುದುಕಿ ಆದ್ರು, ಇವತ್ ಅಲ್ಲಾ ನಾಳೆ ಮತ್ತೆ ಆ ಪ್ರೀತಿ ಸಿಗತ್ತೆ ಅಂತ 5 ದಶಕಗಳ ಕಾಲ, ಕಾಯೋದೆ ಸಾಧ್ಯನಾ…ನಿಜವಾಗ್ಲು ಅಷ್ಟೊಂದ್ ನಿಷ್ಕಲ್ಮಷವಾದ ಪ್ರೀತಿ ಮಾಡೋಕ್ ಸಾಧ್ಯನಾ… ಮಾಂಡೋವಿ ಜೊತೆ ಜೀವನ್ ಮಾಡ್ದೆ ಹೋದ್ರು ಪರ್ವಾಗಿಲ್ಲ...ಅವ್ಳು ಸತ್ತಾಗ ಅವ್ಳ್ ಹೆಣ್ಣ್ ಮೇಲೆ ಬಿದ್ದು ಅಳೋ ಹಕ್ಕು ನನಗ್ ಮಾತ್ರ ಅಂತ 50ವರ್ಷ ಆ ಒಂದು ಕನಸಿಗೋಸ್ಕರ ಕಾಯೋಕೆ...ಚಲಪತಿ ಬಿಟ್ರೆ ಬೇರೆ ಯಾರಿಂದ ಆಗಲ್ಲ ಅನ್ಸುತ್ತೆ... ಕಥೆಲಿ ಎಷ್ಟ್ ಮುಳುಗೋಗ್ತೀವಿ ಅಂದ್ರೆ…ಕೊನೆಗಾದ್ರು ಚಲಪತಿ ಅನ್ಕೊಂಡ್ ಹಂಗೆ ಆಗ್ಬಿಡ್ಲಿ... ಅವ್ನ್ ಅನ್ಕೊಂಡಿದ್ದು ಸಿಕ್ಬಿಡ್ಲಿ ಅಂತ ಅನ್ಸುತ್ತೆ… ಕಥೆ ಓದಿ ಮುಗಿಸಿದಾಗ ಒಂತರಾ ಖುಷಿ ಆಗತ್ತೆ…. ನಿಜವಾಗ್ಲು ತುಂಬಾ ಓಳ್ಳೆ ಕಥೆ…
I have many a times thought to myself that a writer, whatever be the story, portrays it in the way he sees the world rather than what it is meant to be. And having said that Ravi Sir has beautifully conveyed this story in its crude and raw form. Life is crude and raw.
This books sheds light on a man’s love and the extent of his love and his madness. Even though i felt it could’ve been better, this book does the job. Even though i am not happy with how some of the characters faded away in the book, including Kalyani, i can live with it.
This entire review has been hidden because of spoilers.
After reading "Mandovi" I just keep looking at the cover pic of this book! There is something about that photo! If they have printed a whole pic of that girl, I don't think it would have been that magical, But now it is!!
Pepole say love is eternal!! True that !!! You know that love does not get along with everyone easily, That just what happened with the charecters of this story!! Each and everyone of the charecters crumble through thier life to find the most beautiful thing called love. That's what intensifies readers mind with love,anger,Helplesness!! Can a person love someone so deeply?? Find out to read!
Mood and time of the story travel back to year 1970 or maybe 1960, Where phones were not there, This one element makes the complete story interesting! Why? Read to know:) You will be travelling back and forth from one place to another.
Ravi Belagere once again proved that he is a one amoung the great story tellers of Karnataka, His narration style is pretty awesome, He will never let you flip your mind while reading. Sometimes He gives us a hint of sudden story change, and we will have to keep reading to find out how that happend. He does that in all of his books, and he has done it in this book too.
If you want to get motivated and show pepole who have condemmed you, Than this book can truly inspire you! ( I mean if you take it in a right way!! Otherwise you will become a devdas for sure, Depends on how you perceive )
Good luck reading:) You will defnitely enjoy the read:)
when u r translating EPic novel "love in the time of cholera" to Kannada u need t knw its limitations as a regional language with a regional atmosphere mandovi seems to be good try... though fail to impress like love in cholera.