Jump to ratings and reviews
Rate this book

ಒಂದು ಕೋಪಿಯ ಕಥೆ [Ondu Kopiya Kathe]

Rate this book

176 pages, Paperback

Published January 1, 2022

40 people want to read

About the author

Kowshik Koodurasthe

15 books16 followers
ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ.

‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ನಾನು’ ಹಾಗೂ ‘ಬಿಸಿನೆಸ್ ಚಾಣಕ್ಯ’ ಎಂಬ ಪುಸ್ತಕಗಳನ್ನು ನಿರೂಪಣೆ ಮಾಡಿಕೊಟ್ಟಿದ್ದಾರೆ. ಇವರು ‘ದಾನವ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ‘ಆಟೋಶಂಕ್ರಿ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.

ತಾನು ಬರೆದ ಕಾದಂಬರಿಗಳನ್ನು ಸಿನಿಮಾರೂಪಕ್ಕೆ ತಂದು ನಿರ್ದೇಶಕನಾಗೇಕೆಂಬುದು ಇವರ ಗುರಿ. ಇವರ ಪತ್ತೇದಾರಿಯ ಕಾದಂಬರಿಗಳಾದ ‘ಕಾಲಯ ತಸ್ಮೈ ನಮಃ’, ಮತ್ತು ‘ಸ್ವಪ್ನದ ಬೆನ್ನೇರಿ’ಯನ್ನು ಸ್ನೇಹ ಬುಕ್ ಹೌಸ್ ನವರು ಪ್ರಕಟಿಸಿದ್ದಾರೆ. ಜೊತೆಗೆ ಮತ್ತೊಂದು ಪತ್ತೇದಾರಿಯ ಕಾದಂಬರಿ ‘ತ್ಯಾಗರಾಜ್ ಕಾಲೋನಿ’ ಪ್ರಕಟಗೊಂಡಿದೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
14 (37%)
4 stars
22 (59%)
3 stars
1 (2%)
2 stars
0 (0%)
1 star
0 (0%)
Displaying 1 - 13 of 13 reviews
Profile Image for Sanjay Manjunath.
197 reviews10 followers
November 25, 2025
"ಅದು (ಕೋಪಿ) ಬರ್ತಾನೇ ಸಾವನ್ನು ಹೊತ್ಕೊಂಡು ಬಂದಿದೆ ಅನ್ಸುತ್ತೆ" ಅಂತ ಒಂದು ಕಡೆ ಕೃತಿಯಲ್ಲಿ ಬರುತ್ತೆ. ಆದರೆ ಸಾವನ್ನು ಹೊತ್ತುಕೊಂಡು ಬಂದಿದ್ದು ಮಾನವನ ದುರಾಸೆ ಅಲ್ಲದೆ ಕೋಪಿ ಅಲ್ಲ ಎಂಬುದು ಓದುಗನಿಗೆ ಅರಿವಾಗುತ್ತೆ.

ಬೇರೆ ದೇಶದಿಂದ ಮಂಗಳೂರಿಗೆ ಬಂದು ಅಲ್ಲಿಂದ ಕೊಡಗಿನ ಒಂದು ಸಣ್ಣ ಹಳ್ಳಿಗೆ ತಲುಪಿದ ಕೋಪಿಯು ತಪ್ಪು ಕಲ್ಪನೆಗಳಿಂದ ಮತ್ತು ಅನೇಕ ಊಹಾಪೋಹಗಳಿಂದ ಜನರ ಕಣ್ಣಲ್ಲಿ ಸಾವು ಹೊತ್ತುಕೊಂಡು ಬಂದಿರುವ ಪ್ರಾಣಿಯಾಗಿ, ಕೊನೆಗೆ ನಿಸರ್ಗದೊಳಗೆ ಕಣ್ಮರೆಯಾಗುತ್ತದೆ.

ಪತ್ತೇದಾರಿ ಕಾದಂಬರಿ ಬಗ್ಗೆ ಹೆಚ್ಚು ಬರೆದಷ್ಟು ಅದರ ರೋಚಕತೆ ಹಾಳಾದ ಹಾಗೇನೇ. ಈ ಕೃತಿಯು ಪತ್ತೆದಾರಿ ಕಾದಂಬರಿಗೆ ಇರಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಅದನ್ನು ಓದಿಯೇ ಸವಿಯಬೇಕು. ಈ ಕಾದಂಬರಿಯನ್ನ 'ಪೈಸಾ ವಸೂಲ್' ಎನ್ನಬಹುದು. ಎಲ್ಲೂ ಹದ ತಪ್ಪದೆ, ಓದುಗನು ಮಾಡಿಕೊಂಡ ಊಹೆಗಳನ್ನೆಲ್ಲಾ ತಲೆಕೆಳಗಾಗಿಸಿ ಅಚ್ಚರಿಯನ್ನುಂಟು ಮಾಡುತ್ತಾ ಒಂದೇ ಓಟದಲ್ಲಿ ಸರಾಗವಾಗಿ ಓದಿಸಿಕೊಳ್ಳುತ್ತದೆ.

ಖಂಡಿತ ಒಮ್ಮೆ ಓದಬಹುದು ಉತ್ತಮ ಕೃತಿ.
Profile Image for Soumya.
217 reviews49 followers
January 8, 2024
4.5/5
Brilliant.

ಒಂದು ಪತ್ತೇದಾರಿ film ನೋಡಿದ ಅನುಭವ ಆಗತ್ತೆ.
ಒಂದಷ್ಟು ಕೊಲೆಗಳು, ಆ ಕೊಲೆಯ ರಹಸ್ಯ ಕಂಡುಹಿಡಿವ ರೀತಿ ಎಲ್ಲ super.
Profile Image for Mallikarjuna M.
51 reviews14 followers
December 16, 2023
ಪ್ರಾಯಶಃ ಲೇಖಕರು ಅವರೇ ಹೇಳಿರುವಂತೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿ ಇರುವುದರಿಂದ, ಒಂದು ಪತ್ತೇದಾರಿ ರೋಚಕ ಸಿನಿಮಾ ನೋಡಿದ ಅನುಭವವನ್ನು ಈ ಕಾದಂಬರಿ ನೀಡುತ್ತದೆ. ಒಂದೇ sittingನಲ್ಲೇ ಮುಗಿಸಬಹುದಾದ ಕೃತಿ.
Profile Image for Abhiram's  Book Olavu.
102 reviews3 followers
July 27, 2025
ನಾನು ಓದಿದ ಕೌಶಿಕ್ ರವರ ಕಾದಂಬರಿಗಳಲ್ಲಿ ಇದು ಮೊದಲನೇಯದು. ಒಂದು Thriller ಫಿಲಂ ಧಾಟಿಯಲ್ಲಿ ಶುರುವಿನಿಂದ ಅಂತ್ಯದ ವರೆಗೂ ಹಲವು ಆಯಾಮಗಳಲ್ಲಿ ತಿರುವು ಪಡೆದು ಓದುಗರನ್ನ ಕೆರಳಿಸುತ್ತಾ ಸಾಗುವ ಈ ರೋಚಕ ಕಥೆಗೆ ಹಾಗೂ ಒಂದು ವಿಭಿನ್ನ ಬರವಣಿಗೆ ಶೈಲಿಯಲ್ಲಿ ನಮ್ಮೆಲ್ಲರ ತಲೆಯಲ್ಲಿ ಹುಳ ಬಿಡುವ ಲೇಖಕರ ಶೈಲಿಗೆ ಮರುಳಾಗದೆ ಇರಲು ಸಾಧ್ಯವೇ ಇಲ್ಲ!. ಕೇವಲ ಒಂದೇ ದಿನದಲ್ಲಿ ಕೂತು ಮುಗಿಸಿದೆ ಅಂತ ಅನ್ನಿಸ್ಲೇ ಇಲ್ಲ! ಇನ್ನು ಸುತ್ತಲೂ ಕಾಫಿ ತೋಟವೇ ಇದ್ದರೆ ಮತ್ತಿನ್ನೇನು ಬೇಕು? ಕೋಪಿ ಮರಿ ನಮ್ಮ ತೋಟದಲ್ಲಿಯೇ ಓಡಿ ಹೋದ ಹಾಗೇ ಅನ್ನಿಸಿದ್ದುಂಟು!. ಒಟ್ಟಾರೆ ಇಲ್ಲಿ, ಅಮಾಯಕತೆಯೂ ಇದೆ, ಕ್ರೌರ್ಯವೂ ಇದೆ, ಸ್ವಾರ್ಥವೂ ಇದೆ, ಹಾಸ್ಯವೂ ಇದೆ! ಇನ್ನು ಮಾನವನ ದುರಾಸೆಗೆ ಕಾಡೇನು, ಕಾಡಾಡಿಗಳೇನು, ಅಲ್ಲವೇ?!
Profile Image for Akshatha ⭐.
107 reviews15 followers
February 26, 2025
A suspense filled writing. Almost every chapter ends with the last line revealing something interesting, so you want to continue to the next chapter.

The only thing I didn't like is that, things get revealed one after another quickly after the Police start investigating. I wish there was some more chapters where the reader could sort of go along with the investigating. The people revealed all the truth one after the other pretty quickly.

All the characters were important and somehow involved in the mystery. So no information was written just for the sake of it. It all seemed well thought out.
It was a great read and kept me interested the whole time.
Profile Image for Aadharsha Kundapura.
59 reviews
December 18, 2023
ಒಂದು ಭಯಾನಕ, ನಿಗೂಢ, ಕುತೂಹಲ, ರಹಸ್ಯಗಳನ್ನೊಳಗೊಂಡ ಪತ್ತೆದಾರಿ ಕಾದಂಬರಿ. ಓದಲು ಶುರುಮಾಡಿದೊಂದು ಗೊತ್ತು ಅಂತ್ಯದ ಪರಿವೆ ಆಗಲಿಲ್ಲ, ಮೊದಲ ಪುಟದಿಂದ ಕೊನೆಯೊರೆಗು ಎಲ್ಲೂ ಕುತೂಹಲ ಬಿಟ್ಟು ಕೊಡದೆ ಅಷ್ಟೇ ಅಚ್ಚುಕಟ್ಟಾಗಿ ಕತೆ ಸಾಗುತ್ತದೆ. ಕೊಡಗಿನ ಒಂದು ಹಳ್ಳಿಯಲ್ಲಿ ನಡೆವ ನಿಗೂಢ ಕೊಲೆಗಳಿಗೆ ಕಾರಣ ಏನು? ಹಾಗೆ ಕಾರಣ ಯಾರು? ಎನ್ನುವ ರಹಸ್ಯಗಳು ಕ್ಷಣಕ್ಕೊಂದು ತಿರುವು ಪಡೆಯುತ್ತವೆ. ಒದುತ್ತಾ ಹೋದಂತೆ ನಮ್ಮ ಊಹೆಗಳೆಲ್ಲ ಸುಳ್ಳಾಗಿ ಎಲ್ಲಾ ಗೊಂದಲಗಳಿಗೆ ಪೂರ್ಣ ವಿರಾಮವನ್ನು ಕೊಟ್ಟು ಒಂದು ಪರಿಪೂರ್ಣ ಅಂತ್ಯದೊಂದಿಗೆ ಕತೆ ಮುಗಿಯುತ್ತದೆ.
ಒಂದು ಹಾರರ್, ಸಸ್ಪೆನ್ಸ್ ಸಿನಿಮಾ ನೋಡಿದಂತಹ ಅನುಭವ.
Profile Image for Kanarese.
133 reviews19 followers
December 23, 2024
Ondu Kopiya Kathe by Kowshik Koodurasthe

Ondu Kopiya Kathe by Kowshik Koodurasthe is an exciting and suspenseful novel that keeps you hooked from start to finish. The story is about a Kabbekku (Civet Cat) and how it disturbs the peaceful village of Bettadamane, leading to unexpected murders and chaos.

Kowshik has done a fantastic job with the writing, filling the story with twists and turns that feel like watching a movie. The suspense is maintained throughout, and every character has a meaningful role, making the story flow smoothly.

The way Kowshik connects all the dots shows his skill as a writer, and the story feels polished and well-edited. This kind of novel is essential to keep Kannada literature alive and thriving. If you enjoy thrilling stories, Ondu Kopiya Kathe is a must-read!
29 reviews1 follower
June 13, 2024
ಪತ್ತೇದಾರಿ ಕಾದಂಬರಿ ಓದುವವರಿಗೆ ಈ ಪುಸ್ತಕ ಖಂಡಿತ ಇಷ್ಟ ಆಗುತ್ತದೆ...
Profile Image for Ashwini.
35 reviews2 followers
September 11, 2025
ಒಂದು ವೇಗವಾದ ಓದು ಬೇಕು ಅಂದ್ರೆ ಈ ಪುಸ್ತಕ ಒಳ್ಳೆಯ ಆಯ್ಕೆ... ಚನ್ನಾಗಿ ಓದಿಸಿಕೊಂಡು ಹೋಗುತ್ತದೆ. ಲೇಖಕರಿಗೆ ಕತೆ ಕಟ್ಟುವಿಕೆಯಲ್ಲಿ ಹಿಡಿತ ಅಂತೂ ಇದೆ.
ಮನಸ್ಸಿಗೆ , ಮೆದುಳಿಗೆ ತರ್ಕ ಹಚ್ಚುವಂತ ಗಹನವಾದ ವಿಷಯ ಏನೂ ಈ ಪುಸ್ತಕದಲ್ಲಿ ಇಲ್ಲ... ಆದ್ರೆ ಓದುವಾಗ ಖುಷಿ ಅಂತೂ ಸಿಕ್ಕಿದೆ. ಹೊಸ ಓದುಗರಿಗೆ ಸೂಕ್ತ ಪುಸ್ತಕ.
Profile Image for milton.reads.
59 reviews1 follower
November 9, 2023
"ಅದು ಬರ್ತಾನೇ ಸಾವನ್ನು ಹೊತ್ಕೊಂಡು ಬಂದಿದೆ ಅನ್ಸುತ್ತೆ, ಅದಿನ್ನು ಆ ಊರಲ್ಲಿದ್ದುಕೊಂಡು ಇನ್ನೆಷ್ಟು ಜನರ ಪ್ರಾಣ ತೆಗ್ಯುತ್ತೋ ಏನೋ??"

An amazing thrilling detective novel by Kowshik Koodurasthe. I had so much fun reading this one, particularly reading at night enhanced the thrills. A series of murders occur when an animal sets its foot in an environment unknown to it. Hats off to the writer for interconnecting not one but multiple murders, conveying them with much perfection.

When there are multiple events, particularly a series of killings, a writer faces the challenge to explain each aspect from everyone's perspective, be it the killer, the killed, or an eye witness. Kowshik has beautifully explained the chain of events without leaving any questions unanswered.
Profile Image for Sanjota Purohit.
Author 3 books41 followers
January 5, 2025
ಮೇಲ್ನೋಟಕ್ಕೆ ಪತ್ತೇದಾರಿ ಕಾದಂಬರಿಗಳನ್ನು ಬರೆಯುವುದು ಸುಲಭ ಎನ್ನಿಸುತ್ತದೆ. ಒಂದು ಕೊಲೆ, ಅದರ ಮೂಲ ಹುಡುಕಿಕೊಂಡು ಹೋದಾಗ ಸಿಗುವ ಇನ್ನಷ್ಟು ರಹಸ್ಯಗಳು, ವಿಚಿತ್ರವೆನ್ನಿಸುವ ಇನ್ನೊಂದಿಷ್ಟು ಕೊಲೆಗಳು, ಅಪರಹರಣಗಳು.. ಇವೆಲ್ಲವನ್ನು ಸರಕಾಗಿ ತುಂಬಿ ಬಿಟ್ಟರೆ ಮುಗಿಯಿತು ಎಂದುಕೊಳ್ಳುತ್ತೇವೆ. ಆದರೆ ನಿಜವಾದ ಪತ್ತೇದಾರಿಯ ಘಮ ಇರುವುದು ಅದರ ಪಾತ್ರ ಪೋಷಣೆಯಲ್ಲಿ, ಕಥಾ ಹಂದರದಲ್ಲಿ, ಪ್ರತಿ ಪುಟದ ನಡುವೆ ಹುಟ್ಟಿಕೊಳ್ಳುವ ಕುತೂಹಲದಲ್ಲಿ, ನನಗೆಲ್ಲ ಗೊತ್ತಾಯಿತು ಎಂದು ಓದುಗ ಬೀಗುವ ಹಂತದಲ್ಲಿ ಫಟ್ ಎಂದು ಇನ್ನೊಂದು ರಹಸ್ಯದ ಪತ್ತೆಯಾಗಿ ಇಲ್ಲಿಯವರೆಗೆ ಅಂದುಕೊಂಡಿದ್ದೆಲ್ಲ ಸುಳ್ಳಾಗಿ ಮುಂದೇನು ಎಂಬ ವಿಸ್ಮಯದಲ್ಲಿ ಕಾದಂಬರಿಯನ್ನು ಕೆಳಗಿಡದಂತೆ ಓದಿಸಿಕೊಂಡು ಹೋಗುವುದರಲ್ಲಿ.. ಇದೆಲ್ಲವನ್ನು ಹದವಾಗಿ ಬೆರೆಸಿ ಕಾದಂಬರಿಯನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಅದರಲ್ಲೂ ಒಂದಾದ ಮೇಲೊಂದರಂತೆ ಪತ್ತೇದಾರಿ ಕಾದಂಬರಿಗಳನ್ನು ಹೊರತರುವ ಲೇಖಕರಿಗೆ ತಮ್ಮ ಓದುಗರನ್ನು ನಿರಾಸೆಗೊಳಿಸದಂತಹ ಹಲವು ಜವಾಬ್ದಾರಿಗಳಿರುತ್ತವೆ.

ಇದು ನಾನು ಓದಿದ ಕೌಶಿಕ್ ಅವರ ಮೊದಲ ಪುಸ್ತಕ. ಎರಡೇ ದಿನದಲ್ಲಿ ಓದಿ ಮುಗಿಸಿದೆ ಎಂದರೆ ಈ ಮೇಲೆ ಹೇಳಿದ ಎಲ್ಲವೂ ಈ ಪುಸ್ತಕದಲ್ಲಿವೆ ಎಂದರ್ಥ. ಅವರೇ ಹೇಳಿಕೊಂಡಂತೆ ಈ ಕಾದಂಬರಿ ದಿನಪತ್ರಿಕೆಗಳಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರೆಪಿತ. ಆ ಸುದ್ದಿಯನ್ನು ನಾನು ಸಹ ಓದಿದ್ದೆ. ಬರಿ ಸುದ್ದಿಯಾಗಿದ್ದ ಮಾಹಿತಿಗೆ ಲೇಖಕರು ಕಣ್ಣು ಮೂಗು ಬಾಯಿ ��ತ್ತು ವಿಚಿತ್ರ ಧ್ವನಿಯನ್ನು ಕೊಟ್ಟು ಕಾದಂಬರಿಯನ್ನಾಗಿಸಿದ ಜಾಣತನಕ್ಕೆ ನಮಸ್ಕಾರ. ಇದು ಒಂದು ಸಣ್ಣ ಊರಿನಲ್ಲಿ ನಡೆಯುವ ಕತೆ. ಮಂಗಳೂರಿನಿಂದ ಬರುವ ಕೋಪಿಯಿಂದ ಶುರುವಾಗುವ ಕತೆ ಅದರ ಸುತ್ತಲೇ ಹಬ್ಬಿ ಅದರೊಂದಿಗೆ ಕೊನೆಯಾಗುತ್ತದೆ. ಒಂದು ಸಣ್ಣ ಪ್ರಾಣಿ ಜನರ ಊಹಾಪೋಹಗಳಿಂದ, ತಪ್ಪು ಕಲ್ಪನೆಗಳಿಂದ ಮಹಾಗಾತ್ರದಲ್ಲಿ ಬೆಳೆದು ಅನೇಕ ಕೊಲೆಗಳಿಗೆ ಮೂಲ ಕಾರಣವಾಗುತ್ತದೆ.
ಕಾದಂಬರಿಯ ತುಂಬ ಕಾಣಿಸುವುದು ಮನುಷ್ಯನ ದುರಾಸೆ. ಯಾವುದೋ ಒಂದು ಸುದ್ದಿಯಲ್ಲಿದೆ, ಅದರಿಂದ ದುಡ್ಡು ಮಾಡಬಹುದು ಎಂದು ಗೊತ್ತಾದರೆ ಸಾಕು ಎಲ್ಲರೂ ಅದರ ಹಿಂದೆ ಬೀಳುತ್ತಾರೆ. ಅದು ತಮಗೆ ನೀಗುತ್ತದೋ ಇಲ್ಲವೋ ಎಂಬುದನ್ನೆಲ್ಲ ನೋಡದೇ ಕುರಿಯ ಹಿಂಡಿನಂತೆ ಎಲ್ಲರೂ ಅದರ ಬೆನ್ನತ್ತಿ ಸಿಕ್ಕವರಲ್ಲಿ ಹಲವರು ಅದನ್ನು ಮುಂದುವರೆಸಿಕೊಂಡು ಹೋಗಲಾಗದೇ ಒದ್ದಾಡುತ್ತ, ಸಿಕ್ಕದವರು ತಮ್ಮ ದುರಾದೃಷ್ಟಕ್ಕೆ ಕರುಬುತ್ತ ಬದುಕುತ್ತಾರೆ. ಒಟ್ಟಿನಲ್ಲಿ ಯಾರೂ ನೆಮ್ಮದಿಯಿಂದಿರುವುದಿಲ್ಲ. ಎಷ್ಟೋ ಜನರನ್ನು ಬಲಿ ತೆಗೆದುಕೊಂಡು ತಾನು ಬಲಿಯಾಗುತ್ತಾನೆ ದುರಾಸೆಯ ಮನುಷ್ಯ. ಈ ಸಂದೇಶವನ್ನು ಸಾರುತ್ತದೆ 'ಒಂದು ಕೋಪಿಯ ಕತೆ'.

ಬಹಳ ದಿನಗಳ ನಂತರ ಕನ್ನಡದ ಪತ್ತೇದಾರಿ ಕಾದಂಬರಿಯೊಂದನ್ನು ಓದಿದೆ. ಮಧ್ಯದಲ್ಲಿ ಬರುವ 'ನಡೆದಿದ್ದಷ್ಟು' ಎಂಬುದು ಸುದ್ದಿಪತ್ರಿಕೆಗಳಲ್ಲಿ ಬರುವ ವರದಿಯಂತೆ ಎನ್ನಿಸಿತು. ಅದೊಂದನ್ನು ಬಿಟ್ಟರೆ ಉಳಿದದ್ದೆಲ್ಲವೂ ಸೊಗಸಾಗಿತ್ತು. ಪತ್ತೇದಾರಿಗೆ ಸಂಬಂಧಪಟ್ಟ ಘನವಾದ ಕಾದಂಬರಿಯೊಂದನ್ನು ಕೌಶಿಕ್ ಅವರು ಬರೆಯಲಿ ಎಂದು ಹಾರೈಸುತ್ತ...

- ಸಂಜೋತಾ ಪುರೋಹಿತ
Profile Image for ಲೋಹಿತ್  (Lohith).
89 reviews1 follower
March 29, 2024
ಒಂದು ಒಳ್ಳೆ ಟೈಮ್ ಪಾಸ್ ಪತ್ತೇದಾರಿ ಕಾದಂಬರಿ..
ಇದು ನನ್ನ ಕೌಶಿಕ್ ರವರ ಏರಡನೆ ಕೃತಿ.,ಅವರು ಹೆಣೆಯುವ ಕಥೆ,ಪಾತ್ರಗಳು ಕೌತುಕವನ್ನು ಹುಟ್ಟಿಸುತ್ತವೆ..ಆದಷ್ಟು ಬೇಗ ಅವರ ಬೇರೆ ಎಲ್ಲಾ ಕೃತಿಗಳನ್ನು ಓದಿ ಮುಗಿಸಬೇಕು..
Profile Image for Megha N.
1 review
February 20, 2025
ಒಂದು ಅದ್ಭುತ ಪತ್ತೆದಾರಿ ಕಾದಂಬರಿ
Displaying 1 - 13 of 13 reviews

Can't find what you're looking for?

Get help and learn more about the design.