' ಪೆಸಿಫಿಕ್ ದ್ವೀಪಗಳು '
ಸಹಸ್ರಾರು ಮೈಲುಗಳ ಮಹಾಸಾಗರದಿಂದ ಸುತ್ತುವರಿದಿರುವ ಪೆಸಿಫಿಕ್ ದ್ವೀಪಗಳ ಪಾಲಿನೇಷ್ಯನ್ನರು ಜಗತ್ತಿನ ಮೊಟ್ಟಮೊದಲ ಮಹಾ ನಾವಿಕರೂ ಅನ್ವೇಷಕರೂ ಆದವರು. ಅಂಥ ಒಂದು ಶೂರ ಮತ್ತು ಸಾಹಸಪ್ರಿಯ ಜನಾಂಗ ಆಧುನಿಕ ನಾಗರಿಕತೆಯ ಸಂಪರ್ಕ ಬರುತ್ತಲೇ ಕುಸಿಯುತ್ತಾ ಹೋದುದು ಬೆಚ್ಚಿಬೀಳಿಸುವ ವಿಚಾರ. ಹಡಗುಗಳ್ಳರು, ದುರಾತ್ಮರು, ಗುಲಾಮ ವ್ಯಾಪಾರಿಗಳು, ಎಲ್ಲರೂ ಇವರನ್ನು ಶೋಷಿಸಿ ಘಾಸಿಗೊಳಿಸಿದ್ದಲ್ಲದೆ, ಜಪಾನಿಗೂ ಅಮೆರಿಕನ್ನರಿಗೂ ನಡುವೆ ನಡೆದ ಮಹಾಯುದ್ಧದ ಮಧ್ಯೆ ಈ ಸುಂದರ ದೀಪಗಳು ಸಿಕ್ಕಿ ನುಗ್ಗುನುರಿಯಾದುವು, ಭೂಮಿಯ ಸ್ವರ್ಗವೆನ್ನಿಸಿದ ಈ ಸುಂದರ ದ್ವೀಪಗಳು ಅನಂತರ ಶಕ್ತ ರಾಷ್ಟ್ರಗಳ ಅಣುಸ್ಫೋಟಗಳಿಗೆ ಪ್ರಯೋಗಪಶುವಾಯ್ತು.
ಈ ಪುಸ್ತಕವು 108 ಪುಟಗಳನ್ನು ಒಳಗೊಂಡಿದ್ದು ಆರು ಸಣ್ಣಕತೆ ಮತ್ತು ಕೊನೆಯಲ್ಲಿ ಒಂದು 'ರೈಟೇಯಾ ' ಎಂಬ ಕಾದಂಬರಿಯನ್ನು ಒಳಗೊಂಡಿದೆ.
1) ಅಟಾಲ್, ಮೊದಲ ಕತೆಯಾಗಿದ್ದು, ಪೆಸಿಫಿಕ್ ದ್ವೀಪದ ರಚನೆ ಹಾಗೂ ಅಲ್ಲಿಯ ಪಾಲಿನೇಷ್ಯನ್ನರ ಜೀವನಶೈಲಿಯ ಬಗ್ಗೆ ವಿವರಿಸಲಾಗಿದೆ.
2)ಚಿನ್ನದ ವರಹಗಳು ಕತೆಯಲ್ಲಿ ಆ ದ್ವೀಪದಲ್ಲಿ ಮರೆಯಾಗಿದ್ದ ಅಪಾರ ಚಿನ್ನದ ಸಂಪತ್ತಿನ ಖೋಜನೆಯಲ್ಲಿ ಎಷ್ಟೆಲ್ಲಾ ಯುರೋಪಿಯನ್ನರು ಶ್ರಮಿಸಿದರು ಎಂಬ ವಿವರಣೆಯಿದೆ. ಅವರಲ್ಲಿ ಸುಮಾರು ಸಂಪತ್ತನ್ನು ವ್ಯಾಗ್ನರ್ ಕಂಪನಿ ಇಪ್ಪತ್ತು ವರ್ಷಗಳ ಕಾಲ ಸಂಶೋಧನೆ ನಡೆಸಿ ಯಶಸ್ವಿಯಾಯಿತು.
3)ನರಭಕ್ಷಕ ಫಿಜಿ ದ್ವೀಪ, ಈ ಕತೆಯಲ್ಲಿ ಫಿಜಿಯನ್ನರ ಅನಾಗರಿಕ ನಡವಳಿಕೆ ಹಾಗೂ ಅವರು ಹೇಗೆ ನರಭಕ್ಷಕರಾಗಿದ್ದರು ಎಂಬುದನ್ನು ತೇಜಸ್ವಿಯವರು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ.
4)ಅಟಾಲಿನ ಮುತ್ತುಗಳು ಈ ಕತೆಯಲ್ಲಿ ಮುತ್ತುಗಳು ಹೇಗೆ ಕಪ್ಪೆಚಿಪ್ಪಿನಲ್ಲಿ ತಯಾರಾಗುತ್ತವೆ ಎಂಬುದರ ಸಂಪೂರ್ಣ ವಿವರವಿದೆ.
5) ಪಫರ್ ಮೀನು ಎಂಬ ವಿಷಕಾರಿ ಮೀನಿನ ಕೇವಲ ಅರ್ಧ ಮಿಲಿಗ್ರಾಮ್ ವಿಷವು ಮಾನವನನ್ನು ಕೊಲ್ಲಬಹುದು ಹಾಗೂ ಜಪಾನಿನ ಜನರು ತಮ್ಮ ಜೀವವನ್ನೂ ಲೆಕ್ಕಿಸದೆ ಈ ಮೀನಿನ ಖಾದ್ಯ ತಿನ್ನುತ್ತಾರೆ ಎಂಬುದನ್ನು ತಿಳಿದು ನನಗೆ ಅಚ್ಚಾರಿಯ ಜೊತೆ ಭಯವೂ ಆದದ್ದು ಸುಳ್ಳಲ್ಲ.
6) ಧೀರ ನಾವಿಕರು ಕತೆಯು ಪೆಸಿಫಿಕ್ ದ್ವೀಪದ ಜನರ ಧೈರ್ಯ ಹಾಗೂ ಸಾಹಸವನ್ನು ವಿವರಿಸುತ್ತದೆ.
7) ರೈಟೇಯಾ ಎಂಬ ಕಾದಂಬರಿ ಪಾಲಿನೇಷ್ಯನ್ನರು ಅಮೇರಿಕದ ಬಿಳಿಯರ ಸಂಪತ್ತಿನ ಆಸೆಗೆ ತಮ್ಮ ಪರಂಪರೆ, ಮರ್ಯಾದೆ ಹಾಗೂ ಸಂಸ್ಕೃತಿಯನ್ನು ಮಾರಾಟ ಮಾಡಿದರು ಎಂಬುದನ್ನು ಒಳಗೊಂಡಿದ್ದು ಅಲ್ಲಿಯ ಜನರ ಅನಾಗರಿಕ ನಡವಳಿಕೆಯನ್ನು ಎತ್ತಿ ತೋರಿಸುತ್ತದೆ.