Jump to ratings and reviews
Rate this book

ಪರಿಸರದ ಕತೆ | Parisarada Kathe

Rate this book
An illustrated collection of real life stories related to Ecology and Environment

141 pages, Paperback

First published January 1, 1991

100 people are currently reading
1391 people want to read

About the author

K.P. Poornachandra Tejaswi

58 books1,100 followers
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.

Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.

He has won several awards for his contribution to literature such as the Rajyotsava and Kannada Sahitya Academy awards.

Poornachandra Tejaswi died of cardiac arrest at the age of 69

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
437 (63%)
4 stars
181 (26%)
3 stars
43 (6%)
2 stars
10 (1%)
1 star
19 (2%)
Displaying 1 - 30 of 53 reviews
Profile Image for Akhila.
79 reviews30 followers
August 15, 2015
never knew Kannada books would be this interesting ! now an avid fan of KP Tejaswi...
Thank you to my husband for introducing these books to me...

Loved every word of it. Mara pyara and Kivi are all entertaining thruout
after reading this, I feel it's way better to live in the woods observe nature and it's wonderful creations!
Profile Image for Vasanth.
113 reviews22 followers
October 6, 2024
ದಿನನಿತ್ಯ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಬಹಳ ಸೂಕ್ಷ್ಮ ವಿಷಯಗಳು ನಡೆಯುತ್ತವೆ, ಬೇರೆ ಬೇರೆ ರೀತಿಯ ವ್ಯಕ್ತಿತ್ವಗಳು ನೋಡುವುದಕ್ಕೆ ಸಿಗುತ್ತವೆ, ಅಪುರೂಪದ ಅನುಭವಗಳು ಕೂಡ ಆಗುತ್ತವೆ. ಆದರೆ ಅವೆಲ್ಲ ಅಷ್ಟು ಸುಲಭವಾಗಿ ನಮ್ಮ ಅರಿವಿಗೆ ಬರುವುದಿಲ್ಲ. ಕಾರಣ, ನಮ್ಮ ಪರಿಸರವನ್ನು ನಾವು ಅಷ್ಟು ಗಂಭೀರವಾಗಿ ಪರಿಗಣಿಸದೆ ಇರುವುದು.

ತೇಜಸ್ವಿಯವರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡಂತ ಸೂಕ್ಷ್ಮ ವಿಷಯಗಳನ್ನು ಕತೆಗಳ ರೂಪದಲ್ಲಿ ನಮ್ಮ ಮುಂದೆ ಇಟ್ಟಿದ್ದಾರೆ. ಶೀರ್ಷಿಕೆ "ಪರಿಸರದ ಕತೆ" ಆದ ಮಾತ್ರಕ್ಕೆ ಇಲ್ಲಿ ಬರೀ ಪ್ರಾಣಿ,ಪಕ್ಷಿ ಮತ್ತು ಸಸ್ಯಗಳ ಬಗ್ಗೆ ಮಾತ್ರ ವಿವರಣೆ ಇದೆ ಅಂದುಕೊಳ್ಳಬೇಡಿ, ಅವುಗಳ ಜೊತೆ ಅವರ ಸುತ್ತಮುತ್ತಲಿನ ವಿಚಿತ್ರ ವ್ಯಕ್ತಿತ್ವಗಳನ್ನು, ಅವರ ಮೌಢ್ಯಗಳನ್ನು ಮತ್ತೆ ಕೆಲವು ಕಟ್ಟು ಕಥೆಗಳನ್ನೂ ಕೂಡ ದಾಖಲಿಸಿದ್ದಾರೆ.

ಕತೆಗಳು ಕೇವಲ ಮನರಂಜನೆಗೆ ಸೀಮಿತವಾಗಿರದೆ, ಇದೂವರೆಗೂ ತಿಳಿಯದಿರುವ ಕೆಲವು ಅಚ್ಚರಿಯ ಮಾಹಿತಯನ್ನೊಳಗೊಂಡಿದ್ದವು.
7 reviews4 followers
September 19, 2018
ಅಪ್ಪಟ ತೇಜಸ್ವಿ ಅಭಿಮಾನಿಗಳಿಗಾಗಿಯೇ ಈ ಪುಸ್ತಕ ಎಂದರೆ ತಪ್ಪಾಗಲಾರದು. ನಾವು ಕಾಣುವ ಹಲವಾರು ಪುಸ್ತಕಗಳಲ್ಲಿ ಒಂದು ಕಥೆಯನ್ನೋ, ಲೇಖಕರ ಅನುಭವಗಳನ್ನು ಹಲವಾರು ಸೃಷ್ಟಿತ ಪಾತ್ರಗಳ ಮೂಲಕ ತಿಳಿಸುವ ಬರಹಗಳು, ಯಾವುದೋ ಉದ್ದೇಶ ಸುತ್ತುವರಿದ ಬರಹಗಳು ಹೀಗೆ ನಾನಾರೀತಿಯ ಪುಸ್ತಕಗಳು ಸಿಗುತ್ತವೆ.
ಆದರೆ ತಮ್ಮದೇ ಜೀವನದಲ್ಲಿ ನಡೆದ ಅನುಭವಗಳನ್ನು ತಮ್ಮದೇ ನೈಜ ಪಾತ್ರ ಪುಸ್ತಕದೊಳು ಹೊಕ್ಕು ಅದನ್ನು ತಿಳಿಸುವ ಪರಿಸರದ ಕತೆ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಶೈಲಿಯ ಪುಸ್ತಕವೆಂದರೆ ತಪ್ಪಾಗಲಾರದು. ತೇಜಸ್ವಿಯವರೇ ಇಡೀ ಪುಸ್ತಕದ ಸೂತ್ರಧಾರಿ ಹಾಗು ಪಾತ್ರಧಾರಿ ಆಗಿರುವುದರಿಂದ ಅವರ ಮನಸ್ಸೇ ಓದುಗರೊಂದಿಗೆ ಬೆರೆಯುತ್ತದೆ. ತೇಜಸ್ವಿ ಒಬ್ಬ ವ್ಯಕ್ತಿಯಾಗಿ ಎಲ್ಲರೂ ತಿಳಿದಿರುತ್ತಾರೆ. ಆದರೆ ಒಂದು ವ್ಯಕ್ತಿತ್ವವಾಗಿ ತಿಳಿಯಲು ಪರಿಸರದ ಕತೆ ಓದಲೇಬೇಕು. ಪರಿಸರವೆಂದರೆ ನಮ್ಮ ಸುತ್ತಲಿನ ಪ್ರಪಂಚ ಮಾತ್ರವಲ್ಲ. ಪರಿಸರವೆಂದರೆ ನಮ್ಮ ಹೊರಗಿನ ಮನಸ್ಸು, ನಮಗೇ ತಿಳಿಯದೆ ನಮ್ಮಲ್ಲಿ ಸದಾಯಕಾಲ ಒಡನಾಡಿಯಾಗಿ ಬೆರೆತಿರುವ ಮನಸ್ಸು ಎಂದು ಪುಸ್ತಕ ಓದಿದಮೇಲೆ ತೇಜಸ್ವಿ ಅನುಭವಗಳಿಂದ ಓದುಗರ ಅನುಭವವಾಗಿ ಪರಿವರ್ತನೆಯಾಗುತ್ತದೆ. ಇಂದು ತೇಜಸ್ವಿಯವರು ನಮ್ಮೊಂದಿಗಿಲ್ಲ ಎಂದು ನಿನ್ನೆವರೆಗೂ ಭಾವಿಸಿದ್ದ ನಾನು, ಪುಸ್ತಕ ಓದಿದ ಮೇಲೆ ಅವರಿಲ್ಲವೆಂದು ನಾನೇ ನುಡಿದರೂ ಅದು ನನಗೆ ಹಾಸ್ಯವೆನಿಸುತ್ತಿದೆ. ಸತ್ಯವಾಗಿ ಹೇಳುತ್ತೇನೆ, ಅವರೇ ನನ್ನ ಬಳಿ ತಮ್ಮ ಜೀವನದುದ್ದಕ್ಕೂ ಕೂಡಿದ ಪರಿಸರದ ಅನುಭವವನ್ನು ಹಂಚಿಕೊಂಡರು. ಈ ಒಂದು ಸಾಲು ಸಾಕಲ್ಲವೇ ಪರಿಸರದ ಕತೆ ಪುಸ್ತಕದ ಏಕೆ ಓದಬೇಕೆಂದು ತಿಳಿಯಲು.
Profile Image for Kanarese.
136 reviews19 followers
July 20, 2022
A set of beautiful, innocent & hilarious stories 😊
Profile Image for Karthikeya Bhat.
109 reviews13 followers
September 14, 2023
ಪರಿಸರದ ಕತೆ
ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಇದರಲ್ಲಿ ೧೪ ಕತೆಗಳಿವೆ, ಒಂದೊಂದು ಕತೆಯೂ ಅತ್ಯದ್ಭುತವಾಗಿವೆ. ಕರ್ವಾಲೋ ಕಾದಂಬರಿಯಲ್ಲಿದ್ದ ನಾಯಿ ಕಿವಿ ಇಲ್ಲಿ ಎಲ್ಲಾ ಕತೆಗಳಲ್ಲಿಯೂ ತೇಜಸ್ವಿರವರೊಡನೆ ಕಾಣಿಸಿಕೊಂಡು ಆ ಕತೆಗಳನ್ನು ಓದುತ್ತಾ ಹೋದಹಾಗೆ ಅದು ಮಾಡುವ ಚೇಷ್ಟೆಗಳು ಅಲ್ಲಿಲ್ಲಿ ಹಾಸ್ಯೋಸ್ಪದವಾಗಿ ಕಂಡುಬರುತ್ತದೆ. ಪರಿಸರವೆಂದರೆ ತೇಜಸ್ವಿಯವರಿಗೆ ತುಂಬಾ ಇಷ್ಟ, ಅದರಲ್ಲೂ ಕೋವಿಯನ್ನು ಹೆಗಲಮೇಲೆ ಹಾಕಿಕೊಂಡು ಶಿಕಾರಿ ಮಾಡುವುದೆಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿ, ಅವರನ್ನು ಕಂಡು ಅಲ್ಲಿರುವ ಜನರು ಎಂಥವರಿಗೆ ಎಂಥಾ ಮಗ ಹಾಗು ಈ ನಾಯಿ ಕಿವಿಯ ಸಹವಾಸದಿಂದಲೇ ಹಾಳಾದರು ಎಂದು ವಿಷಾದಪಟ್ಟಿದ್ದರು, ಪ್ರಕೃತಿ ಮತ್ತು ಪರಿಸರದ ಬಗ್ಗೆ ಅವರಿಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕ್ಕೆ ಮುಖ್ಯಕಾರಣ ಅವರ ತಂದೆಯವರು. ಅವರ ಮನೆ ಕಿಟಕಿ ಬಳಿ ಗೂಡಿನಲ್ಲಿ ಮರಿಮಾಡಿದ ಪಿಕಳಾರ ಹಕ್ಕಿ, ಎಲೆಗಳನ್ನು ಹೊಲಿದು ಗೂಡು ಮಾಡಿದ ಟುವ್ವಿ ಹಕ್ಕಿ, ನುಗ್ಗೆ ಮರಕ್ಕೆ ಪ್ರತಿವರ್ಷ ಹತ್ತಿಕೊಳ್ಳುತ್ತಿದ್ದ ಕಂಬಳಿ ಹುಳುಗಳನ್ನು ಕಂಡಿದ್ದರು, ಚಿಕ್ಕ ವಯಸ್ಸಿನಲ್ಲಿ ಅವರ ತಂದೆಯ ಬಳಿ ಹೋಗಿ ವರದಿ ಒಪ್ಪಿಸಿ ಅವುಗಳ ಕುರಿತು ತಿಳಿದುಕೊಳ್ಳುತ್ತಿದ್ದರು. ಅಂತೂ ಕೋವಿ ಹಿಡಿದು ಕಿವಿ ಜೊತೆ ಪ್ರತಿನಿತ್ಯ ಕಾಡೊಳಗೆ ಅಲೆಯುವುದರಿಂದ ಮನಸ್ಸಿಗೆ ಸಮಾಧಾನವಾಗುತ್ತಿತ್ತು.

ಇಲ್ಲಿ ಬರುವ ಸುಸ್ಮಿತ ಮತ್ತು ಹಕ್ಕಿ ಮರಿ ಕತೆ ತುಂಬಾ ಚೆನ್ನಾಗಿದೆ. ಹಕ್ಕಿಗಳ ಚಿತ್ರಗಳನ್ನು ತೆಗೆಯುವುದು ಅಷ್ಟು ಸುಲಭವೆಲ್ಲವಂದು ಬೇಗನೆ ತಿಳಿದುಕೊಂಡರು, ಹಕ್ಕಿಗಳ ಚಿತ್ರಗಳನ್ನು ತೆಗೆಯಲು ಹೋದಾಗ ಛಾಯಾಗ್ರಾಹಕನಿಗೆ ತನ್ನ ಕ್ಯಾಮರ ಒಂದನ್ನುಳಿದು ಬೇರೆ ಯಾವುದರ ಮೇಲೂ ಗಮನವಿರಕೂಡದು. ಪೇಟೆಗಳಲ್ಲಿ ಗುಬ್ಬಚ್ಚಿಗಳು ಅಸಂಖ್ಯಾತವಾಗಿ ಹೇಗೆ ಇರುವುದೋ ಹಾಗೆ ಅವರ ತೋಟದಲ್ಲಿ ಬುಲ್ ಬುಲ್ ಹಕ್ಕಿಗಳು ಅಸಂಖ್ಯಾತವಾಗಿದ್ದವು. ಅದರಲ್ಲೂ ಸಹ ಚೊಟ್ಟಿ ಇರುವ ಬುಲ್ ಬುಲ್, ಕೆಂಪು ಮೀಸೆಯ ಬುಲ್ ಬುಲ್, ಹಳದಿ ಕಪಾಲದ ಬುಲ್ ಬುಲ್, ಹೊಂಬಣ್ಣದ ತಲೆಯ ಹಸಿರು ಬುಲ್ ಬುಲ್, ಬಿಳಿಯ ಕುತ್ತಿಗೆಯ ಬುಲ್ ಬುಲ್ ಅವರ ತೋಟದಲ್ಲಿದ್ದವು. ಇವುಗಳ ಗೂಡುಗಳಿಗೆ ಸದಾ ಕೇರೆ ಹಾವು,ಕೆಂಬೂತ,ಬೆಕ್ಕು, ಕೋಗಿಲೆಗಳು,ಗೂಬೆಗಳು ಕಾಟ ಕೊಡುತ್ತಿದುದು ಕಂಡಿದ್ದರು. ಒಮ್ಮೆ ಪಿಳಕಾರ ಹಕ್ಕಿ ಗೂಡು ಕಟ್ಟಿತ್ತು ಅಲ್ಲಿ ಮೊಟ್ಟೆಗಳಿತ್ತು ಆದರೆ ತಾಯಿ ಹಕ್ಕಿ ಇರಲಿಲ್ಲ. ತಾಯಿ ಹಕ್ಕಿಗೇ ಏನೋ ತೊಂದರೆಯಾಗಿರಬಹುದೆಂದು ಅನುಮಾನಿಸಿದ್ದರು. ಎರಡು ದಿನವಾದರೂ ತಾಯಿ ಹಕ್ಕಿಯ ಸುದ್ಧಿ ಇಲ್ಲ, ಮೊಟ್ಟೆಗಳನ್ನು ಮುಟ್ಟಿದಾಗ ಸಾಧಾರಣವಗಿ ಬೆಚ್ಚಗಿರಬೇಕಾಗಿದ್ದ ಮೊಟ್ಟೆಗಳು ತಣ್ಣಗಾಗಿದ್ದವು. ಆಚೆ ಈಚೆ ನೋಡಿದಾಗ ಹಕ್ಕಿಯ ಪುಕ್ಕೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಮೊಟ್ಟೆಗೆ ಕಾವು ಕೊಡದೆ ಮರಿಗಳಾಗುವುದಿಲ್ಲವೆಂದು ಮಗಳು ಸುಸ್ಮಿತಾಳಿಗೆ ವಿವರಿಸಿದಾಗ ತಾವೇ ಶಾಖ ಕೊಡೋಣವೆಂದಾಗ ಆಕೆಯ ಮುಗ್ಧತೆಯನ್ನು ಕಂಡು ನಕ್ಕರು, ಶಾಖ ಕೊಡುವುದೆಂದರೆ ಬೆಂಕಿಯಲ್ಲಿ ಬಿಸಿ ಮಾಡುವುದಾಗಿ ತಿಳಿದುಕೊಂಡಿದ್ದಳು ಸುಸ್ಮಿತಾ.

ಸುಸ್ಮಿತಾಳ ಆಸೆ ಪ್ರಕಾರ ಮನೆಗೆ ಗೂಡು ಸಮೇತ ಮೊಟ್ಟೆಗಳನ್ನು ತಂದು ಹೇಗೆ ಶಾಖ ಕೊಡಬಹುದೆಂದು ಯೋಚಿಸಿದರು, ಪಿಕಳಾರದ ಮೈ ಶಾಖ ಬೇರೆ ತಿಳಿಯದು, ಅಂತೂ ಏನಾದರಾಗಲಿ ನೋಡೋಣ ಎಂದು ೪೦ ಕ್ಯಾಂಡಲಿನ ದೀಪದ ಅಡಿ ದಾರ ಕಟ್ಟಿ ಅವುಗಳನ್ನು ನೇತುಹಾಕಿದರು, ಮೊಟ್ಟೆಗಳು ಒಡೆದು ಮರಿಯಾಗುತ್ತದೆಂಬ ಆಸೆಯಿರಲಿಲ್ಲ ಸುಸ್ಮಿತಾಳ ಸಮಾಧಾನಕ್ಕೋಸ್ಕರ ಮಾತ್ರವೆ, ಪ್ರತಿದಿನ ಮೊಟ್ಟೆಗಳನ್ನು ನೋಡುವುದೇ ಅವಳ ಕೆಲಸವಾಗಿತ್ತು. *ಜೀವವಿಕಾಸದಲ್ಲಿ ಜಲಚರಗಳು ಇಡುವ ಮೊಟ್ಟೆಗಳು ಅಸಂಖ್ಯಾತ, ಹಾವು, ಹಲ್ಲಿ, ಓತಿಕ್ಯಾತ, ಆಮೆ ನೂರು ಮೊಟ್ಟೆಗಳನ್ನಿಡುತ್ತವೆ, ಮೀನುಗಳು ಒಂದೊಂದು ಸಾರಿಗೆ ಎಪ್ಪತ್ತು, ಎಂಬತ್ತು ಸಹಸ್ರ ಮೊಟ್ಟೆಗಳನ್ನಿಡುತ್ತವೆ, ಕಪ್ಪೆಚಿಪ್ಪುಗಳು ಲಕ್ಷ ಮೊಟ್ಟೆಗಳನ್ನಿಡುತ್ತವೆ, ಅದರಲ್ಲಿ ಬದುಕುವುದು ಶೇಕಡ ಒಂದೋ ಎರಡೋ ಮಾತ್ರ*. ಇವುಗಳಲ್ಲಿ ಬಿಸಿ ಮರಳಿನ ಶಾಖಕ್ಕೆ ಮರಿಗಳು ಹೊರಬರುತ್ತವೆ, ಆದರೆ ಹಕ್ಕಿಗಳು ಮೂರೋ ನಾಲ್ಕೋ ಮೊಟ್ಟೆಗಳನ್ನಿಡುತ್ತವೆ, ವಾತವಾರಣದ ಶಾಖವನ್ನು ಅವಲಂಬಿಸದೆ ತಮ್ಮ ಮೈ ಶಾಖದಿಂದಲೇ ಮರಿಗಳು ಹೊರಬರುವಂತೆ ಶಾಖ ಕೊಡುತ್ತವೆ. ಮರಿಯಾಗಿ ಬಂದನಂತರ ಹಾರುವುದನ್ನು, ಆಹಾರ ಸಂಪಾದನೆಯನ್ನು ಕಲಿಸಿ ಅವುಗಳನ್ನು ತ್ಯಜಿಸಿ ತಾಯಿ ಹಕ್ಕಿ ಹೊರಟುಹೋಗುತ್ತದೆ.

ಒಂದು ದಿನಾ ಸುಸ್ಮಿತಾ ಬಂದು ಮೊಟ್ಟೆ ಒಡೆದು ಮರಿ ಬಂದಿದೆ ಎಂದಾಗ ಆಕೆಯ ಖುಷಿಯನ್ನು ನೋಡಿ ಸಂತೋಷವಾದರು ಅವುಗಳಿಗೆ ಏನು ಆಹಾರ ಕೊಡಬೇಕೆಂದು ಯೋಚನೆಯಾಗುತ್ತದೆ. ಹಕ್ಕಿಗಳು ಅನೇಕ ತರಹದ ಆಹಾರಗಳನ್ನು ತಿನ್ನುತ್ತವೆ, ಕೆಲವು ಹಣ್ಣುಗಳನ್ನು, ಕೆಲವು ಕೀಟಗಳನ್ನು, ಕೆಲವು ಭತ್ತ, ಗೋಧಿ ಇತ್ಯಾದಿ ಕಾಳುಗಳನ್ನು ��ಿನ್ನುತ್ತವೆ, ಈ ಪಿಕಳಾರದ ಮರಿಗಳು ಏನು ತಿನ್ನುತ್ತಾವೋ ತಿಳಿಯದು,ಅವರ ಬಳಿ ಇದ್ದ ಸಲೀಂ ಅಲಿ ಪುಸ್ತಕವನ್ನು ಓದಿದಾಗ ಆಹಾರದ ಮಾಹಿತಿ ದೊರಕಲಿಲ್ಲ, ಪಿಕಳಾರಗಳು ಲಾಂಟನ ಹಣ್ಣನ್ನು ತಿನ್ನುವುದನ್ನು ಕಂಡಿದ್ದರು, ಆದರೆ ಅವರ ತೋಟದಲ್ಲಿ ಹಣ್ಣಾಗಿರುವವು ಯಾವುದೂ ಕಾಣಲಿಲ್ಲ, ಕಡೆಗೆ ಬಾಳೆಹಣ್ಣನ್ನು ಹಿಚುಕಿ ಆ ಮರಿಗಳನ್ನು ಮುಟ್ಟದೆ ಚಮಚದಲ್ಲಿ ಕೊಂಚ ಕೊಂಚವನ್ನೇ ಬಾಯಿಗೆ ಹಾಕಿದ ಕೆಲ ಸಮಯಕ್ಕೆ ಅವುಗಳ ಮೂಗಿನಿಂದ ಬಾಳೆಹಣ್ಣು ಹೊರಬಂದು ಉಸಿರಾಡಲಾಗದೇ ಸತ್ತೇಹೋದವು, ಸುಸ್ಮಿತಾಳಿಗಾದ ದುಃಖ ಅಷ್ಟಿಷ್ಟಲ್ಲ. ಕೋಳಿ, ಪಾರಿವಾಳ ಮುಂತಾದುವನ್ನು ಸಾಕಲು ಸುಲಭ ಆದರೆ ಇತರೆ ಹಕ್ಕಿಗಳನ್ನು ಸಾಕುವುದು ಕಷ್ಟದಕೆಲಸವಂದು ಯೋಚಿಸತೊಡಗಿದರು.

ಇದನ್ನೆಲ್ಲಾ ನೋಡಿದರೆ ತಾಯಿ ಹಕ್ಕಿ ಮರಿ ಹುಟ್ಟಿದಾಗಿನಿಂದ ದೊಡ್ಡದಾಗುವವರೆಗೆ ದಿನದಿಂದ ದಿನಕ್ಕೆ ಆಹಾರ ಬದಲಿಸುತ್ತಾ ಬರುತ್ತದೆ, ರೆಕ್ಕೆ ಬಲಿತ ಮೇಲೆ ಗೂಡುಬಿಟ್ಟು ಬರುವಂತೆ ತೋರಿಸಿಕೊಡುತ್ತದೆ, ಹೇಗೆ ಕೀಟಗಳನ್ನು ಹಿಡಿಯಬೇಕು, ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬುದನ್ನು ತೋರಿಸಿಕೊಡುತ್ತವೆ, ಈ ವಿದ್ಯೆಗಳಲ್ಲಿ ಯಾವೊಂದು ತಿಳಿಯದಿದ್ದರೂ ಅವು ಬದುಕುವುದು ಅಸಾಧ್ಯ. ಹೀಗೆ ಕಾಡಿನಲ್ಲಿ ತಾಯಿ ಬಿಟ್ಟುಹೋದ ಮೊಟ್ಟೆಗಳನ್ನು ಕಂಡರೂ ಅದರ ಸಹವಾಸಕ್ಕೆ ಮತ್ತೆ ಅವರು ಹೋಗುವುದಿಲ್ಲ. ಹೀಗೆ ಕೋವಿ ಹಿಡಿದುಕೊಂಡು ಕಿವಿಯ ಜೊತೆ ಶಿಕಾರಿಯನ್ನು ಮಾಡುತ್ತಾ ಹಾಗು ಬಗೆಬಗೆಯ ಹಕ್ಕಿಗಳ ಚಿತ್ರಗಳನ್ನು ತೆಗೆಯುವದರಲ್ಲಿ ಹಾಗು ಬರೆಯುವುದರಲ್ಲೇ ತಮ್ಮ ಜೀವನ ಸಾಗಿಸುತ್ತಿದ್ದರು.

ಎಂಗ್ಟನ ಪುಂಗಿ, ಕಾಳಪ್ಪನ ಕೋಬ್ರ, ಕುಕ್ಕಟ ಪಿಶಾಚ ಇನ್ನೂ ಇತರೆ ಕತೆಗಳೂ ಸುಂದರವಾಗಿವೆ. ಕಾಡಿನಲ್ಲಿ ಉಡವನ್ನು ಕಿವಿಯ ಜೊತೆಗೆ ಹಿಡಿಯಲು ಹೋದಾಗ ಪಟ್ಟ ಪಾಡುಗಳನ್ನು ವಿವರಿಸಿದ್ದಾರೆ ಅದಕ್ಕೆ ಮಾನೀಟರ್ ಎಂದು ಹೆಸರು ಸಹ ಇಟ್ಟಿದ್ದರು, ಅದರ ಆಹಾರ ಪದ್ಧತಿ ಹಾಗು ಅವುಗಳನ್ನು ಹಿಡಿಯುವ ಬಗೆ, ಅವುಗಳ ಶಕ್ತಿ ಸಾಮರ್ಥ್ಯವನ್ನು ತಮಗಾದ ಅನುಭವದ ಮೂಲಕ ವಿವರಿಸಿದ್ದಾರೆ, ನಂತರ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಾರ ಹಾಗು ಬೈರನ ಜೊತೆ ಕಾಡು ಹಂದಿಯ ಶಿಕಾರಿಗೆ ಹೋದಾಗ ಆದ ಅನುಭವಗಳನ್ನೂ ಚಿತ್ರಿಸಿದ್ದಾರೆ.

*ಕಾರ್ತಿಕೇಯ*
Profile Image for Abhi.
89 reviews20 followers
January 2, 2021
|!• ಪರಿಸರದ ಕತೆ •!|

ಪ್ರಕೃತಿ ನಮ್ಮ‌ ಪಾಲಿಗೆ ಕೊಟ್ಟಿರುವ ಅಚ್ಚರಿಗಳನ್ನು ಗಮನಿಸದೇ, ಅನುಭವಿಸದೇ ನಾವು ಯಾಂತ್ರಿಕ ಬದುಕಿನಲ್ಲಿ ಉಳಿದುಹೋದರೇ ಅದೆಂಥ ಅಪೂರ್ಣತೆ ಮನೆಮಾಡುತ್ತದೆ ಎಂದು ತಿಳಿಯಬೇಕಾದಲ್ಲಿ ಈ ಪುಸ್ತಕ ಓದಿ. ಇದರಲ್ಲಿ ಕರುಳು ಕಿವುಚುವಂತಹ ಕಥೆ ಏನೇನೂ ಇಲ್ಲ. ಪ್ರತಿ ಪುಟದಲ್ಲೂ ಅಂತ್ಯಕ್ಕೆ ಸಣ್ಣ ಮುಗುಳ್ನಗು ಮೂಡುತ್ತದೆ. ಪ್ರಕೃತಿಯ ಕುರಿತ ಕತೆ ಎಂದ ಮಾತ್ರಕ್ಕೆ ಕೇವಲ ಹಸಿರು, ಹೂವು,‌ ಹಕ್ಕಿಗಳು ಮಾತ್ರವಲ್ಲ. ಅವುಗಳು ನಮಗೆ ಹೇಳ ಹೊರಟಿರುವ ಬದುಕಿನ ಸತ್ಯಗಳನ್ನು ತೇಜಸ್ವಿಯವರು ಅಮೋಘವಾಗಿ‌ ತಿಳಿಸಿದ್ದಾರೆ.

ಈ ಪುಸ್ತಕದ ‌ಅತಿ‌ಮುಖ್ಯ ವಿಶೇಷತೆ, ಬರೆದಿರುವ ಪ್ರತಿ ಕತೆಯೂ ತೇಜಸ್ವಿಯವರ ದೈನಂದಿನ ಬದುಕಿನಲ್ಲಿ ಬಂದು ಹೋದಂಥವು.‌ ಎಳ್ಳಷ್ಟು ವೈಭವೀಕರಿಸದೇ ನಡೆದದ್ದನ್ನು ಹಾಸ್ಯಮಯವಾಗಿ ಚಿತ್ರಿಸಿ ಓದುಗ ಕೂಡ ಕತೆಯ ಭಾಗವಾಗವೇನೋ ಎಂಬಂತೆ ಭಾಸವಾಗುತ್ತದೆ. ಹದಿನಾಲ್ಕು ಸಣ್ಣ ಕತೆಗಳ ಸಂಗ್ರಹವಾದ ಈ ಪುಸ್ತಕದಲ್ಲಿ ಬರುವ ಪಾತ್ರಗಳ ಹೆಸರುಗಳೂ ನಗು ಹುಟ್ಟಿಸುತ್ತವೆ. ಎಂಗ್ಟ ಕಿವಿ‌ ಮಾರ‌ ಪ್ಯಾರ ಗಾಡ್ಲಿ‌ ಸೀನಪ್ಪ‌ ಮುಂತಾದ ಪಾತ್ರಗಳು ಎಷ್ಟು ಹಾಸ್ಯಮಯವೋ ಅಷ್ಟೇ ‌ತೆರನಾದ‌ ಗಂಭೀರವಾದದ್ದನ್ನು ಹೇಳಿವೆ. ಮನುಷ್ಯರೊಂದಿಗೆ ನಾಯಿಯನ್ನು ಕೂಡ ಪಾತ್ರವಾಗಿಸಿರುವುದು ಗಮನಾರ್ಹ!!!

"ವಿಜ್ಞಾನ-ತಂತ್ರಜ್ಞಾನಗಳು ಅದೆಷ್ಟು ಬೆಳೆದರೂ ಪ್ರಕೃತಿಯೆಂಬ ಅದ್ಭುತದ ಅಂತರಾಳವನ್ನು ಅರಿಯಲು ಸಾಧ್ಯವಿಲ್ಲ‌" ಎಂಬ ಮಾತಿಗೆ ಅನೇಕ‌‌‌‌ ನಿದರ್ಶನಗಳನ್ನು ಪೂಚಂತೇರವರು ಬರೆದಿದ್ದಾರೆ. ಉಡದಿಂದ ಶುರುವಾಗಿ ಕಾಳಿಂಗ ಸರ್ಪದವರೆಗೂ ಒಂದು ಅಚ್ಚರಿಯಿದೆ. ಮಡಿವಾಳ ಹಕ್ಕಿಗೂ ಪದ್ದತಿಗಳಿವೆ. ಅದು ಮನುಷ್ಯನ ಪದ್ದತಿಗಳಿಗಿಂತ ಶುದ್ದವಾದದ್ದು ಎಂದು ಓದುತ್ತಾ ಓದುತ್ತಾ ಸ್ಫುರಿಸುತ್ತದೆ.‌ ಹದಿನಾಲ್ಕು ಕಥೆಗಳು, ಒಂದಕ್ಕೊಂದು ತಳುಕು ಹಾಕಿಕೊಂಡಿಲ್ಲ. ಎಲ್ಲವೂ ಬಿಡಿಯಾಗಿವೆ. ಆದರೂ ಹೇಳುತ್ತಿರುವ ಸತ್ಯವೊಂದೇ! ಪ್ರಕೃತಿಯ ಅದಮ್ಯತೆಯನ್ನು ನೋಡಿ ಸವಿಯಬೇಕು. ನಮ್ಮ ಪರಿಸರದಲ್ಲಿ ‌ನಡೆಯುವ ಬಹುಪಾಲು ಸಂಗತಿಗಳನ್ನು ಬೆರಗುಗಣ್ಣಿಂದ‌‌‌ ನೋಡಬೇಕು.‌ ಪ್ರಶ್ನಿಸಬೇಕು.‌ ಪಕ್ವರಾಗುತ್ತಾ ಹೋಗಬೇಕು.

ಪ್ರಕೃತಿಯ ಕತೆಗಳೊಂದಿಗೆ, ಗಾರೆ ಸೀನಪ್ಪ ಮತ್ತು ಎಂಗ್ಟನ‌ ಕತೆಗಳು ನಗು ತರಿಸುವುದು ಮಾತ್ರವಲ್ಲದೇ ನಮ್ಮ ನಡುವೆ ನಡೆಯುವ ವ್ಯವಹಾರ ತಂತ್ರಗಾರಿಕೆಗಳ ಬಗ್ಗೆಯೂ ಮಾತನಾಡಿವೆ. ಅಂದಹಾಗೇ, "ಶಿವಪೂಜೆಯಲ್ಲಿ ಕರಡಿ ಬಿಟ್ಟರಂತೆ" ಗಾದೆಯನ್ನು ನಾವು ಬಳಸಿಯೇ ಇರುತ್ತೇವೆ. ಆದರೇ, ಕರಡಿಯೇ ಯಾಕೆ? ಹುಲಿ ಯಾಕಿಲ್ಲ? ಸಿಂಹ ಚಿರತೆಗಳು ಯಾಕಿಲ್ಲ? ಯಾವತ್ತಾದರೂ ಪ್ರಶ್ನಿಸಿಕೊಂಡಿದ್ದೀರಾ? ಪೂಚಂತೇ ಉತ್ತರ ನೀಡಿದ್ದಾರೆ. ಒಮ್ಮೆ ಪುಸ್ತಕ ಓದಿ.

ಪರಿಸರದ ಕತೆ ಕಲಿಸಿದ ಬಹುದೊಡ್ಡ ಪಾಠ ಈ ಸಾಲುಗಳಲ್ಲಿವೆ.

"ಫುಕವೋಕಾ ಹೇಳಿದ ಹಾಗೆ ಇದನ್ನೆಲ್ಲಾ ಸಂಪೂರ್ಣ ತಿಳಿಯುತ್ತೇನೆಂದು ಹೋಗುವುದು ಮೂರ್ಖತನವೇ ಸರಿ. ಸುಮ್ಮನೆ ನಮಗೆ ಅಗತ್ಯ ಇದ್ದಷ್ಟನ್ನು ಮಾತ್ರ ತಿಳಿದುಕೊಂಡು ಮಿಕ್ಕದನ್ನು ನೋಡಿ ಅಚ್ಚರಿಪಡುತ್ತ ಇದ್ದು ಬಿಡುವುದು ಒಳ್ಳೆಯದು" - ಈ ಸಾಲುಗಳು ಸಾರ್ವಕಾಲಿಕ ಮತ್ತು ಸರ್ವಾನ್ವಯ

ಹೀಗೆ ಪುಟ ಪುಟದಲ್ಲೂ ನಗುವಿನೊಂದಿಗೆ ಗೊತ್ತಿಲ್ಲದೇ ಒಂದಷ್ಟು‌ ಬದುಕಿನ‌ ಬೆರಗುಗಳನ್ನು ಬಿಚ್ಚಿಡುತ್ತಾ‌ ಪೂಚಂತೇಯವರು ಇಷ್ಟವಾಗಿಬಿಡುತ್ತಾರೆ. ಸಮಯ ಮಾಡಿಕೊಂಡು ಓದಿ.

ಎಂದಿನಂತೆ, ಈಗಾಗಲೇ ಓದಿದ್ದರೆ ನಿಮ್ಮ‌ ನಗುವನ್ನು ನನ್ನೊಂದಿಗೂ ಹಂಚಿಕೊಳ್ಳಿ!!!

ಅಭಿ...
Profile Image for Anand.R  ನೇರಳಕಟ್ಟೆ.
15 reviews22 followers
January 20, 2022
ಕನ್ನಡದಲ್ಲಿ ಪರಿಸರ , ಪಕ್ಷಿಗಳು ಅಂದರೆ ತಲೆಯಲ್ಲಿ ತಟ್ಟನೆ ಬರುವ ಹೆಸರು ತೇಜಸ್ವಿ , ನಾವು ಬದುಕಿರುವ , ಬದುಕುತ್ತಿರುವ ಪರಿಸರದಲ್ಲೇ ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮ ವಿವರಗಳು ಇವರ ಕಣ್ಣಿಗೆ ಕಾಣುವುದು ಹೇಗೆ ಅನ್ನುವ ಯೋಚನೆ ಯಾವಾಗಲೂ ಇದ್ದದ್ದೇ. ಕಿವಿ, ಮಾರ , ತೋಟ, ಮಲೆನಾಡು ಇಲ್ಲೂ ಇದೆ . ಆದರೆ ತೇಜಸ್ವಿ ಮಾತಿನಲ್ಲಿ ಅದನೆಲ್ಲಾ ಕಾಣುವ ಮಜವೇ ಬೇರೆ.
Profile Image for Sampat Badiger.
28 reviews
July 6, 2023
ತೇಜಸ್ವಿಯವರ ಪುಸ್ತಕಗಳೇ ಹಾಗೆ ಒಮ್ಮೆ ಓದಲು ಕುಳಿತರೆ ಸಾಕು ಪುಸ್ತಕದ ಪುಟಗಳು ಮುಗಿದು ಹೋದದ್ದೆ ಗೊತ್ತಾಗುವುದಿಲ್ಲ. ನಮ್ಮ ಸುತ್ತ ಮುತ್ತ ಇರುವ ಬದುಕು- ಪರಿಸರದಲ್ಲೆ ಸೂಕ್ಷ್ಮ ವಿವರಗಳನ್ನು ಕಾಣುವ , ಅದರ ಮೂಲಕ ಅರಿವಿನ ಮಿಂಚನ್ನು ತೋರಿಸುವ ಕಥೆಗಳು ಪರಿಸರದ ಕಥೆ ಪುಸ್ತಕದಲ್ಲಿ ಮೂಡಿಬಂದಿವೆ. ಪರಿಸರ ಜ್ಞಾನದ ಬಗ್ಗೆ ಹಾಗೂ ಜನರ ಅಂಧಕಾರ ( ಮೂಢನಂಬಿಕೆಗಳು) ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ತೇಜಸ್ವಿಯವರು.
ಇಲ್ಲಿ ನನಗೆ ತುಂಬಾ ಇಷ್ಟವಾದ ಲೇಖನ ಅಂದರೆ ಸುಷ್ಮಿತಾ ಮತ್ತು ಹಕ್ಕಿ ಮರಿ 🐦 . ಇದೂ ನನ್ನ ಬಾಲ್ಯದ ದಿನಗಳನ್ನು ನೆನಪಿಸುವಂತೆ ಹಾಗೂ ನಾವು ಹಕ್ಕಿ ಮರಿ 🐦 ಸಾಕುವ ವಿಚಾರದಲ್ಲಿ ಸೋತು ಹೋದದ್ದು ನೆನಪಿಗೆ ಬಂತು. ಈ ಪುಸ್ತಕ ಒಂದು nostalgia ಇದ್ದಂಗೆ.
Profile Image for Dr. Arjun M.
17 reviews8 followers
May 20, 2023
A collection of short sweet stories of everyday life in Malenadu. It depicts the superstitious beliefs and innocence of villagers.

The book is lush green with forests , animals , innocent villagers. It's feast to read!
5 reviews
November 17, 2025
ಈ ಪ್ರಕೃತಿ ತನ್ನೊಳಗೆ ಎಷ್ಟೋ ಅದ್ಭುತಗಳನ್ನು ಮತ್ತು ವಿಚಿತ್ರಗಳನ್ನು ಹುದಗಿಸಿಟ್ಟಿದೆ, ಅದನ್ನು ಹುಡುಕುವುದಕ್ಕೆ ನಮ್ಮೊಳಗೆ ಕುತೂಹಲದ ಅವಶ್ಯಕತೆ ಇದೆ

 ಪ್ರಕೃತಿ ಒಳಗೆ ನಡೆಯೋ ವಿಷಯಗಳನ್ನು ನಾವು ನೋಡಿಯೂ ನೋಡದ ರೀತಿ ಇರುತ್ತೇವೆ. ಆದರೆ ಇಲ್ಲಿ ತೆಜಸ್ವೀ ಅವರು ಕುತೂಹಲದಿಂದ ನೋಡಿ ಅದನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ

     ಹಾಗೆ ತೇಜಸ್ವಿ ಅವರು ತಮ್ಮ ಸುತ್ತಲು ಇದ್ದ ಎಷ್ಟೋ ವಿಶಿಷ್ಟ ವ್ಯಕ್ತಿತ್ವಗಳನ್ನು ಇಲ್ಲಿ ಪರಿಚಯಿಸಿದ್ದಾರೆ.
Profile Image for devu dilip.
3 reviews5 followers
July 23, 2019
Thejaswi is my Discovery, Encyclopedia, General Knowledge, Story teller.
Profile Image for Vignesh ವಿಮರ್ಶೆ.
36 reviews
November 20, 2022
Amazing writing by Tejasvi Sir. He has blended experience from his farming days with Malnad’s environmental treasure. In every short story, he narrates either a new reasoning or information on origin of nature’s various living creatures.
Profile Image for ಲೋಹಿತ್  (Lohith).
90 reviews1 follower
July 31, 2023
ಇಲ್ಲಿ ಬರುವ ಪ್ರತಿಯೊಂದು ಕಥೆಯೂ ತುಂಬಾ ಇಷ್ಟವಾಯ್ತು..

ಮಾರ,ಪ್ಯಾರಾ,ಕಿವಿಯನ್ನು ಮರೆಯಲು ಸಾಧ್ಯವಿಲ್ಲ..
ಯೆಂಗ್ಟನ ಪುಂಗಿ ಹಾಗೂ ಸುಶ್ಮಿತಾ ಮತ್ತು ಹಕ್ಕಿ ಮರಿಗಳು ತುಂಬ ಕಾಡಿದ ಕಥೆಗಳು..

ಪ್ರಾಣಿ,ಪಕ್ಷಿ,ಕೀಟ,ಜಲ, ಜೀವಜಂತು ಹಾಗೂ ಹಸಿರುಮಯವಾದ ಮಲೆನಾಡಿನ ಸೊಬಗನ್ನು
ಎಳೆ ಎಳೆಯಾಗಿ ವರ್ಣಿಸಿದ್ದಾರೆ ತೇಜಸ್ವಿಯವರು..
Profile Image for Girish Shenoy.
20 reviews1 follower
July 25, 2021
Simple Funny Incident happening around our daily life
October 8, 2024
ನನಗೆ ಈ ಪುಸ್ತಕವನ್ನು ಓದಿ ನಕ್ಕು ನಕ್ಕು ಹೊಟ್ಟೆ ಹಿಡಿದು ಕೊಂಡಿದೆ,
ಮಾರ, ಪ್ಯಾರ,ಕಿವಿ ಮತ್ತು ತೇಜಸ್ವಿಯವರ ಕಾಂಬಿನೇಶನ್ ಎಂತವರಿಗೂ ಒಂದು ಕ್ಷಣನಾದರೂ ನಗು ತರಿಸುತ್ತದೆ.
Profile Image for Shruthi S.
8 reviews6 followers
March 17, 2022
Real life short stories have been very well narrated with light comedy here and there.

The most amazing part is how author pauses once he gets to know a rumour/situation/superstition. Most of the time there will be a scientific explanation behind them. He demonstrates patience, curiosity to find out that explanation for all rumour/situation/superstition. Personally, I loved susmita mattu hakkimari (ಸುಸ್ಮಿತ ಮತ್ತು ಹಕ್ಕಿಮರಿ) chapter.
Profile Image for Harini  S T.
28 reviews9 followers
August 3, 2021
.
ಪರಿಸರ ಕಥೆಯಲ್ಲಿ ಬರುವ ಕಾಡು ಪ್ರಕೃತಿ ಶಿಕಾರಿ ತೋಟ ಕಾಯೋ ಮಾರ ತೇಜಸ್ವಿಯವರು ಸಾಕಿರೋ ನಾಯಿ ಕಿವಿ ,ಹಾಗೆ ಸುಮಾರು ಪಾತ್ರಗಳು ಕಥೆಯಲ್ಲಿ ಬರುತ್ತವೆ ಇದೊಂದು ತೇಜಸ್ವಿಯವರ ಡೈರಿ ಕಥೆ ಅಂತ ಹೇಳಬಹುದು ಊಟದ ತಾಪತ್ರೆ ,ಕಿವಿ ನಾಯಿ ಮತ್ತು ತೇಜಸ್ವಿಯವರು ಕಳೆದ ದಿನಗಳು ..ಶಿಕಾರಿ ಕಥೆ ,ಮಾಸ್ತಿ ಮತ್ತು ಬೈರಣ್ಣ ಸ್ನೇಹ ,ಕೆರೆಯ ದಂಡೆಯ ವಿಶ್ರಾಂತಿ ,ನಾವೆಲ್ಲಾ ನೋಡಿದರೂ ಕಾಣದ ನಮ್ಮ ಸುತ್ತಲಿನ ಬದುಕು ಸೂಕ್ಷ್ಮ ವಿವರಗಳು.
ತಮ್ಮ ಎಂದಿನ ವಿಶೇಷ ಶೈಲಿಯ ಮೂಲಕ ತೇಜಸ್ವಿಯವರ ಪರಿಸರದ ಕಥೆ
Profile Image for Vaidya.
259 reviews80 followers
January 7, 2015
Hilarious!
A collection of some 14 'stories', most of them episodes from his life living in the Western Ghats, farming. Absolutely love his narration style.
8 reviews7 followers
January 31, 2014
ತೇಜಸ್ವಿ ಅವರು ಅನುಭವಗಳನ್ನು ತಿಳಿ ಹಾಸ್ಯದೊಂದಿಗೆ ಓದುಗರಿಗೆ ವರ್ಣಿಸಿರುವ ರೀತಿ ಬಹಳ ಚೆನ್ನಾಗಿದೆ.
ಎಂದಿನಂತೆ ಅವರ ಸಾಹಿತ್ಯ ಶೈಲಿ ಅತ್ಯದ್ಭುತ. ಕಣ್ಣಿಗೆ ಕಟ್ಟುವಂತೆ ಎಲ್ಲವನ್ನು ವಿವರಿಸುವ ಪರಿ ತುಂಬಾ ಇಷ್ಟವಾಯಿತು.
63 reviews9 followers
January 19, 2021
ಪರಿಸರದ ಕತೆಗಳು, ಒಂದೊಂದು ಕತೆಯೂ ಅನುಭವಗಳ ಸರಮಾಲೆ. ಪರಿಸರದಲ್ಲಿನ ಅನೇಕಾನೇಕ ಸಣ್ಣ ವಿಷಯಗಳನ್ನು ಎಲ್ಲರೂ ಗಮನಿರುವುದಿಲ್ಲ. ಗಮನಿಸಿದರೂ, ಅವನ್ನು ಅಕ್ಷರರೂಪಕ್ಕಿಳಿಸಿ ಶಾಶ್ವತ ನೆನಪುಗಳನ್ನಾಗಿ ಉಳಿಸಿವ ಪ್ರಯತ್ನ ತುಂಬಾ ವಿರಳ.

ಅಕ್ಷರರೂಪಕ್ಕಿಳಿಸಿದ ಪರಿಸರದ ಜೊತೆಗಿನ ಅನುಭವಗಳು ಮತ್ತು ಒಡನಾಟಗಳೇ "K.P. Poornachandra Tejaswi ತೇಜಸ್ವಿಯವರ ಪರಿಸರದ ಕತೆ".
ಒಂದೊಂದು ಕತೆಯೂ ಅಕ್ಷರಸಹ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ.

ಪರಿಸರದ ಕತೆ, ಕಿವಿಯೊಡನೆ ಒಂದು ದಿನ, ಸುಸ್ಮಿತ ಮತ್ತು ಹಕ್ಕಿ ಮರಿ, ಕುಕ್ಕುಟ ಪಿಶಾಚ, ಕೆರೆಯ ದಡದಲ್ಲಿ, ಮೂಲಿಕೆಯ ಬಳ್ಳಿ ಸುತ್ತ, ಪ್ಯಾರನಿಗೆ ಸೈತಾನ್ ಕಾಟ ಓದಲೇ ಬೇಕು.
2 reviews3 followers
Read
December 14, 2021
ಸರಳವಾಗಿ ಓದಿಸಿಕೊಂಡು ಹೋಗುವ ಪುಸ್ತಕ. ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ತಮ್ಮ ಸುತ್ತ ಮುಟ್ಟಲು ನಡೆಯುವ ಸಂಗತಿಗಳನ್ನು ಅವಲೋಕನೆ ಮಾಡುವ ಮತ್ತು ಅವುಗಳನ್ನು ಕಥಗಳ ರೂಪದಲ್ಲಿ ನಿರೂಪಿಸುವ ಕೌಶಲ್ಯವನ್ನು ಹೊಗಳಲು ಸಾಧ್ಯವೇ ಇಲ್ಲ. ಚಿಕ್ಕ ಚಿಕ್ಕ ಸಂಗತಿಗಳನ್ನು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ ಎನ್ನುವಂತೆ ಕಥೆಗಳನ್ನು ಹೆಣೆಯುವ
ಕಲೆ ವಿಶಿಷ್ಠವಾದ್ದದ್ದು. ಮತ್ತೆ ಮತ್ತೆ ಓದಲೇಬೇಕಾದ, ಮಲೆನಾಡಿನಲ್ಲಿ ನಡೆಯುವ ಅನೇಕ ಕಥೆಗಳನ್ನು ಹೊಂದಿರುವ ಪುಸ್ತಕ ಇದು.
Profile Image for Anagha S Jahgirdar.
76 reviews
April 30, 2023
Did these stories originate from ಕುವೆಂಪು?(kuvempu)
Reminds me about Corbett's and Anderson's stories about the jungle. Also reading Ruskin Bond's! Who else? i hunt about such story books on jungle from India, few are there. Need more story books for any person who loves jungle stories. It is possible only if many try to write more and keep educating people about losing or learning.
Profile Image for Apeksha.
17 reviews
February 10, 2019
Very well written. It was surprisingly very easy to read considering I haven't read kannada in years. It has a very blithe feel to it which makes the book easy to read but failed to capture my attention throughout the whole book or leave any lasting impression on me.
Profile Image for Rz.
14 reviews1 follower
July 26, 2019
The first-ever book I read. This got me into reading. A lot of familiar aspects from rural, close to the jungle, childhood life. Poornachandra Tejaswis books and interactions have shaped my thinking while growing up.
This is a must-read for anyone who can read Kannada.
5 reviews
March 13, 2020
Quite interesting book .

Author tries to make a point about his relation which nature through series of disconnected annectodal stories enclosed within a common theme . I like his way of conveying message to the reader.
Profile Image for Manoj Manu.
1 review
July 7, 2022
ಬಹಳ ಚೆನ್ನಾಗಿದೆ. ೧೧ ನೇ ತರಗತಿ ಪಠ್ಯಪುಸ್ತಕದಲ್ಲಿ ಈ ಕಥಾಸಂಕಲನ ದಿಂದ ಆಯ್ದ 'Around a medicine creeper' (ಮೂಲಿಕೆ ಬಳ್ಳಿಯ ಸುತ್ತ) ಯೆಂಬ ಗದ್ಯವನ್ನು ಓದಿ ತುಂಬಾ ಇಷ್ಟವಾದ ಕಾರಣ ಪೂರ್ಣ ಪುಸ್ತಕ ಒದಿದೆ, ಪುಸ್ತಕ ತುಂಬಾ ಚೆನ್ನಾಗಿದೆ. 😍😍
Profile Image for Prajwla Shetty.
5 reviews1 follower
August 6, 2024
Tejaswi avara books are pretty straight forward. He holds your hand and takes you around the serenity of malnad and at the end leaves you with a feeling of why am I in the midst of this concrete jungle when I could be chilling somewhere in the western ghats 🌄.
3 reviews
September 11, 2017
Its a light read. But takes you into a different world! Tejawi talks about his life being inspired by nature and narrates various incidents / stories which brought him closer to nature.
Displaying 1 - 30 of 53 reviews

Can't find what you're looking for?

Get help and learn more about the design.