"ಪಾಕ ಕ್ರಾಂತಿ" - ಓದಲೇ ಬೇಕಾದ ಕತೆ. ಪುಸ್ತಕದಲ್ಲಿ ಇನ್ನೂ ಹಲವು ಕತೆಗಳಿವೆ. ಮುಖ್ಯವಾಗಿ "ಪಿಶಾಚಿಗಳು", "ವನ ವರಾಹಗಳು", "ದನಗಳು", "ಮೂಡಿಗೆರೆ ಎಂಬ ಊರು", "ಸಂತೆ", 'ಸಿತಾರ್ ವಾಧ್ಯದ ಕತೆ".
"ಪಾಕ ಕ್ರಾಂತಿ" - ಪ್ರತೀ ಸಾರಿ ಕುಕ್ಕರ್ ಇಡಲು ಒಲೆಯ ಮುಂದೆ ಹೋದಾಗ, ಇರುವೆಗಳನ್ನು ಕಂಡಾಗ, ಸೀಮೆ ಎಣ್ಣೆಯ ವಾಸನೆ ಮೂಗಿಗೆ ಬಡಿದಾಗ, ರೇಷನ್ ಕಾರ್ಡ ಹೆಸರು ಕಿವಿಗೆ ಬಿದ್ದಾಗ , ಯಾರಾದರೂ ಮಗುವಿಗೆ ಒಂದು ಹೆಸರು ಸೂಚಿಸುವಂತೆ ಕೇಳಿದಾಗ ತಕ್ಷಣಕ್ಕೆ ನೆನಪಾಗುವ ಕತೆ. ತೇಜಸ್ವಿಯವರು ಪ್ರಕೃತಿಯೊಂದಿಗಿನ ಒಡನಾಟದ ನೈಜ ಅನುಭವಗಳ ಚಿತ್ರಿಸುವಿಕೆಯ ಬಗೆಯನ್ನು ಎಷ್ಟು ಹೇಳಿದರೂ ಸಾಲದು. ನೀವೇ ಓದಿಕೊಳ್ಳಿ.