ಶಿಕಾರಿ
ಯಶವಂತ ಚಿತ್ತಾಲ
ಚಿತ್ತಾಲರು ಸೃಷ್ಟಿಸಿರುವ ನಾಗನಾಥನ ಪಾತ್ರ ಅತ್ಯದ್ಭುತ. Mr. Naganath, you are my inspiration after reading this novel. ಇದು ನಾನು ಓದಿದ ಚಿತ್ತಾಲರ ಮೊದಲ ಕಾದಂಬರಿ, ಶಿಕಾರಿ ನಾಗನಾಥನ ಕಥೆಯನ್ನು ಹೇಳುತ್ತದೆ. ಕಾದಂಬರಿ ಶುರುವಾಗುವುದೇ ಒಂದು ಗಂಭೀರ ಆಪಾದನೆಯಿಂದ ತನ್ನನ್ನು ಕೆಲಸದಿಂದ ಸಸ್ಪೆಂಡ್ ಮಾಡಬೇಕಾಗಿ ಬಂದಿದೆ ಎಂಬ ಪತ್ರದಿಂದ. ೨ ತಿಂಗಳಲ್ಲೇ ಅಮೇರಿಕಾಗೆ ಹೋಗುವ ಸಿದ್ಧತೆಯಲ್ಲಿದ್ದಾಗಲೇ ಈ ಸುದ್ಧಿಯಿಂದ ಆಶ್ಚರ್ಯವಾಗುತ್ತದೆ. ಸಸ್ಪೆಂಡಿಗೆ ಕಾರಣವಾದರೂ ಏನಿರಬಹುದು, ಇದು ತನ್ನ ಸುತ್ತ ಮುತ್ತಲಿನವರ ಒಳಸಂಚೆ ಇರಬಹುದೇ?, ಅಷ್ಟಕ್ಕೂ ತನ್ನ ಮೇಲೆ ಆರೋಪವಾದರೂ ಏನು, ಕಾರಣ ಯಾರು ಎಂದು ತಾನು ತನಿಖೆ ಮಾಡಲು ಶುರುಮಾಡುತ್ತಾನೆ. ಹೈದರಾಬಾದ್ ಕಾರ್ಖಾನೆಯಲ್ಲಿ ಬೆಂಕಿಯ ಆಹುತಕ್ಕೆ ೩ ಜನ ಪ್ರಾಣ ಕಳೆದುಕೊಂಡಿರುವ ಘಟನೆ ತನಗೆ ಸಂಬಂಧವಿಲ್ಲದಿದ್ದರೂ ಎಲ್ಲರೂ ಸೇರಿ ಆ ಘಟನೆಯನ್ನು ತನ್ನ ಮೇಲೆ ಆರೋಪ ಮಾಡಲು ಹೊರಟಿರಬಹುದೇ ಇದರಲ್ಲಿ ತಾನು ನಂಬಿದವರೇ ಇದ್ದಾರೆಯೇ ಎಂದು ಎಲ್ಲೂ ತನ್ನ ಧೈರ್ಯವನ್ನು ಕಳೆದುಕೊಳ್ಳದೆ ಈ ಸುಳ್ಳು ಆಪಾದನೆಯ ಕುರಿತು ಶಿಕಾರಿ ಮಾಡಲು ಸಜ್ಜಾಗುತ್ತಾನೆ.
ತನಿಖೆ ಮುಗಿಯುವವರೆಗೂ ಹೇಗೆ ೨ ತಿಂಗಳು ಕಳೆಯಬೇಕೋ ಎನ್ನುವುದನ್ನು ನೆನೆದರೇ ಭಯವಾಗುತ್ತದೆ - One of the greatest problems of human mind is the structuring of the time. ಹೀಗೆ ಕಾದಂಬರಿ ಮಧ���ಯೆ ಹಲವಾರು ಕಡೆ English abbreviations ಬಳಸಿಕೊಂಡಿರುವ ರೀತಿ ಕಾದಂಬರಿ ಓದುವುದಕ್ಕೇ ಒಂದು ಉಲ್ಲಾಸಕರವಾದ ಸಂಗತಿ..
ಸಾರಸ್ವತ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ನಾಗನಾಥ್ ತನ್ನ ಕುಟುಂಬದವರನ್ನು ಕಳೆದುಕೊಂಡು ಅನಾಥನಾಗಿದ್ದರೂ ವಿದ್ಯಾರ್ಥಿವೇತನದಿಂದ ಓದಿ, ರಾಸಾಯನಿಕ ಇಂಜಿನಿಯರ್ ಆಗುತ್ತಾನೆ ಈತ ಮೂಲತಃ ಉತ್ತರ ಕರ್ನಾಟಕದವನು, ಮೇಧಾವಿ, ಬಾಂಬೆಯಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಒಳ್ಳೆಯ ಹುದ್ಧೆಯಲ್ಲಿರುತ್ತಾನೆ. ಶ್ರೀನಿವಾಸನು ಬಾಲ್ಯದಿಂದಲೇ ಸ್ನೇಹಿತನಾಗಿರುತ್ತಾನೆ. ನಾಗನಾಥ್ ತನ್ನ ಬಗ್ಗೆ ಕಾದಂಬರಿ ಬರೆಯಲು ಹೊರಟಿರುವನೆಂದು ನಾಗನಥನಿಗೆ ತಿಳಿದವರೆಲ್ಲರಿಗೂ ಹೇಳಿರುತ್ತಾನೆ. ೨೧ ವರ್ಷದ ನೇತ್ರಾವತಿಯಲ್ಲಿ ಶ್ರೀನಿವಾಸನು ಅನುರಾಗ ಹುಟ್ಟಿಸಿ ಅವಳನ್ನು ಮದುವೆಯಾಗುವ ಉದ್ದೇಶವನ್ನು ಜಾಹೀರುಪಡಿಸಿ ಅವಳೊಡನೆ ತಿರುಗಾಡಿಹತ್ತಿದಮೇಲೆ ಕಡೆಯಲ್ಲಿ ಅವಳನ್ನು ತಿರಸ್ಕರಿಸಿ ಆಕೆಯ ಆತ್ಮಹತ್ಯೆಗೆ ಕಾರಣನಾಗುತ್ತಾನೆ, ಇದನ್ನು ನಾಗನಾಥ್ ತನ್ನ ಕಾದಂಬರಿಯಲ್ಲಿ ವಿವರಿಸಿ ಹೊರಟಿರುವನೆಂದು ತಿಳಿದು ತನ್ನ ಬಗ್ಗೆ ಕಾದಂಬರಿ ಬರೆಯುವುದನ್ನು ನಿಲ್ಲಿಸಲು ಕಾಲಿಗೆ ಬಿದ್ದು ಕೇಳಿಕೊಳ್ಳುತ್ತಾನೆ, ಕಾರಣ ಶ್ರೀನಿವಾಸನಿಗೆ ಸಾರಸ್ವತ ಸಮಾಜದಲ್ಲಿ ತನಗಾಗಲೇ ಒಳ್ಳೆಯ ಹೆಸರಿದೆಯಂದು ಮುಂಬರುವ ಚುನಾವಣೆಯಲ್ಲಿ ಭಾಗವಹಿಸುವುದಾಗಿ, ಈ ನೇತ್ರಾವತಿಯ ವಿಷಯ ತಿಳಿದಲ್ಲಿ ತನ್ನ ಗೌರವಕ್ಕೆ ಕುಂದುಂಟಾಗುತ್ತೆಂಬ ಭಯ. ಆದರೂ ಶ್ರೀನಿವಾಸ ಇದರಿಂದ ಕೆರಳಿ ನಾಗನಾಥನ ಮೇಲೆ ಹಗೆ ಸಾಧಿಸಲು ಸಂಚುಹೂಡುತ್ತಾನೆ, ನಾಗನಾಥನ ತಂದೆ ತಾಯಿಯರು ಸಾರಸ್ವತ ಕುಟುಂಬಕ್ಕೆ ಸೇರದೇ ಇರುವುದು, ತಾನು ಸಾರಸ್ವತನೆಂದು ಹೇಳಿಕೊಂಡು ವಿಧ್ಯಾರ್ಥಿವೇತನವನ್ನು ಪಡೆದು ಓದಿ ಮೋಸಮಾಡಿದುದಲ್ಲದೇ, ನಾಗನಾಥನ ತಂದೆಯ ಆತ್ಮಹತ್ಯೆ, ತಾಯಿಯ ಸಾವು, ಅಣ್ಣ ತಂಗಿಯರ ಕಳವು ಇದೆಲ್ಲವೂ ಗುಟ್ಟಾಗಿಟ್ಟಿದ್ದರೂ ಶ್ರೀನಿವಾಸನು ಕಂಡುಹಿಡಿಯುತ್ತಾನೆ. ಮತ್ತೊಂದು ಕಡೆ DMD ಫಿರೋಜ್ ಬಂದೂಕವಾಲ, ಖಂಬಾಟ, ಹಾಗು ಇತರೆ ಕಾರ್ಖಾನೆ ಸದಸ್ಯರು ನಾಗನಾಥನು ಒಳ್ಳೆಯ ಸ್ಥಾನದಲ್ಲಿರುವುದು ಹಾಗು ಆತನಿಗೆ ಅಮೇರಿಕ ಹೋಗುವ ಅವಕಾಶ ದೊರತಿರುವ ಸಂಗತಿ ತಿಳಿದು ಸಹಿಸಲಾರದೇ, ಈತನು ಎಲ್ಲಿ ತಮ್ಮನ್ನು ಮೀರಿಸಿ ಬೆಳೆದುಬಿಡುತ್ತಾನೆಂಬ ಸಂಕಟದಿಂದ ಹೇಗಾದರೂ ಸೇಡು ತೀರಿಸಿಕೊಳ್ಳಬೇಕೆಂದು, ತಾನು ನಂಬಿರುವ ಫಿರೋಜ್(DMD), ಖಂಬಾಟ, ಮೇರಿ(Girl friend and colleague), ಪಟೇಲ್(MD), ಜಲಾಲ್ (Assistant) ಥ್ರೀಟಿ, ಡಯಾನ, ಎಲ್ಲರೂ ಸೇರಿ ಒಂದು ಸುಳ್ಳು ಆಪಾದನೆಯಿಂದ ಈತನನ್ನು ಸಿಕ್ಕಿಸಿ ಮಾನಸಿಕ ಕ್ಷೋಬೆಗೆ ಒಳಗಾಗುವ ಹಾಗೆ ಮಾಡುತ್ತಾರೆ. ಒಂದು ಕಡೆ ತನ್ನ ಕುಟುಂಬದ ಘಟನೆ, ಅನ್ಯಜಾತಿಯವನು, ಸುಳ್ಳು ಹೇಳಿ ಸಾರಸ್ವತ ಸಮಾಜಕ್ಕೆ ಸೇರಿರುವನೆಂದು ಹೇಳಿಕೊಂಡು ವಿದ್ಯಾರ್ಥಿವೇತನ ಪಡೆದದ್ದು ನಾಗನಾಥನ ಮೇಲೆ ಹೂಡಿರುವ ಶ್ರೀನಿವಾಸನ ಕೈವಾಡವಾದರೆ ಮತ್ತೊಂದು ಕಡೆ ತಾನು ನಂಬಿರುವ ವ್ಯಕ್ತಿಗಳೇ ತನ್ನನ್ನು ಮೋಸಮಾಡಿ, ನಂಬಿಕೆ ದ್ರೋಹ ಮಾಡಿದ ಮೇರಿ, ಹಾಗು ತೀರ ಹತ್ತಿರದವರಾದರೂ ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಅರ್ಥಮಾಡಿಕೊಳ್ಳದೇ ಇರುವುದು ತನ್ನ ಮೂರ್ಖತನವೆಂದು ದುಃಖಪಡುತ್ತಾನೆ. ಆದರೂ ಇದ್ಯಾವುದಕ್ಕೂ ಹೆದರದೆ ತನಿಖೆ ದಿವಸಕ್ಕೆ ಧೈರ್ಯದಿಂದಲೇ ಕಾಯುತ್ತಿರುತ್ತಾನೆ.
DMD ಫಿರೋಜ್, ದಸ್ತೂರ್, ಪಟೇಲ್ ತನಿಖೆಯಲ್ಲಿ ಈತನಿಗೆ ಬಿಯರಿನ ಅಮಲೆಚ್ಚಿಸಿ ತನ್ನ ಕುಟುಂಬದ ಘಟನೆಯನ್ನಿಟ್ಟುಕೊಂಡು ಬ್ಲಾಕ್ಮೇಲ್ ಮಾಡತ್ತಾರೆ. “Some horrible incident in childhood made you grow under suspicion that you were a part of a suicide pact, this is shameful and criminal implications also with false proof and eligible for scholarship eventhough you aware of you are from anti brahmin community”. ಇದರಿಂದ ನಾಗನಾಥನು ಮಾನಸಿಕವಾಗಿ ಕುಗ್ಗಿಹೋಗುತ್ತಾನೆ. ಆ ಮೂವರು ಪಾರ್ಸಿಯವರೇ ಕಡೆಗೆ ಹೈದರಾಬಾದ್ ಕಾರ್ಖಾನೆಯಲ್ಲಿ ಬೆಂಕಿಯ ಆಹುತಕ್ಕೆ ೩ ಜನ ಪ್ರಾಣ ಕಳೆದುಕೊಂಡಿರುವ ಘಟನೆ ತಾನೆ ಕಾರಣನೆಂದು ಒಪ್ಪಿಕೊಳ್ಳಲು ಬಲವಂತ ಪಡಿಸಿದಾಗ ಈತ ತನ್ನ ಉದ್ಯೋಗಕ್ಕಲ್ಲದೇ, ಇಂತಹ ಕೆಟ್ಟ ಮನಸ್ಸುಳ್ಳ ಮನುಷ್ಯರ ಸುತ್ತ ಇರಲು ಇಷ್ಟವಾಗದೇ ರಾಜೀನಾಮೆ ನೀಡುತ್ತಾನೆ. ತಾನು ನಂಬಿರುವ MD ಪಟೇಲ ತನ್ನ ರಾಜೀನಾಮೆ ಹಿಂತೆಗೆದುಕೊಳ್ಳಲು ಹಾಗು ತನಗೆ ಡೈರಕ್ಟರ್ ಆಗಿ ಪ್ರಮೋಷನ್ ಆಗಿದೆಯಂಬ ಸುದ್ದಿ ಮೇರಿ ಮೂಲಕ ಹೇಳಿ ಕಳುಹಿಸಿದಾಗ ಇದೆಲ್ಲ ತಾನು ಮಾಡದೆ ಇರುವ ತಪ್ಪನ್ನು ಒಪ್ಪಿಕೊಳ್ಳುವ ಹಾಗೆ ಮಾಡಿರುವ ಸಂಚೆಂದು ನಿರಾಕರಿಸುತ್ತಾನೆ, ಅದು ನಿಜವೂ ಹೌದು. ಕಡೆಯಪಕ್ಷ ತನಗೆ ಹಲವಾರು ಸಲ ದೇಹಸುಖಕೊಟ್ಟ ರಾಣಿಯನ್ನಾದರೂ ಭೇಟಿ ಮಾಡಿ ತನ್ನನ್ನು ಅರ್ಥ ಮಾಡಿಕೊಂಡಿರುವ ವ್ಯಕ್ತಿಯಂದರೆ ರಾಣಿ ಮಾತ್ರ ಆಕೆಯನ್ನು ಭೇಟೆಯಾಗಲು ಹೋದಾಗ ರಾಣಿ ಮುಂಬಯಿ ಬಿಡುವವಳಿದ್ದಾಳೆಂದು, ಶ್ರೀಮಂತ ಶೇಠಜೀ ಅವಳನ್ನು ಅಹಮ್ಮದಬಾದಿಗೆ ಕರೆದೊಯ್ಯುತ್ತಾನೆಂದು ತಿಳಿದು ದುಃಖಪಡುತ್ತಾನೆ.
“ನಾಗನಾಥನ ವನವಾಸ ಈಗಷ್ಟೇ ಮುಗಿದಿದೆ, ಅಜ್ಞಾತವಾಸವಿನ್ನೂ ತೊಡಗಲಿದೆ. ಇನ್ನು ಸಿಕ್ಕಿರದ ಅಣ್ಣ ತಂಗಿಯರನ್ನು ಹುಡುಕಲು ಹೊರಟಿದ್ದಾನೆ. ಈ ಶಿಕಾರಿ ಇನ್ನು ಪ್ರಾರಂಭ ಮಾಡುತ್ತಾನೆ”.
*ಶಿಕಾರಿ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು*
*ಕಾರ್ತಿಕೇಯ*