What do you think?

Nanna Tejaswi
Unknown Binding
First published January 1, 2011
Ratings & Reviews
Friends & Following
Create a free account to discover what your friends think of this book!
Community Reviews
Displaying 1 - 13 of 13 reviews
January 26, 2021
"ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಒಂದು ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವದಲ್ಲ" ಇದು ನಮ್ಮ ತೇಜಸ್ವಿರ ಮಾತು...
ಈ ಮಾತು ಎಷ್ಟು ನಿಜವೆಂಬುದು ತೇಜಸ್ವಿರ ಜೀವನ ಓದಿರುವರೆಲ್ಲರಿಗೂ ಗೊತ್ತೇ ಇದೆ... ಏಕೆಂದರೆ ತಂದೆ, ನಾಡಿನ ಪ್ರಖ್ಯಾತ ಕವಿಗಳು, ಪೂಜ್ಯರು.. ಇವರ ಜೇಷ್ಠ ಪುತ್ರರಾದ ತೇಜಸ್ವಿ ತಂದೆಯರ ನೆರಳಿನಲ್ಲಿ ಬದುಕದೆ ತಮ್ಮದೆ ಹಾದಿಯೊಂದನ್ನು ನಿರ್ಮಿಸಿ ಆನೆ ನಡೆದಿದ್ದೆ ದಾರಿ ಎಂಬಂತೆ ಬದುಕಿದರು....
ಇವರ ಜೀವನದ ಬೃಹತ್ ದರ್ಶನ ಅವರ ಮಡದಿ ಅಲ್ಲದೆ ಬೇರೆ ಯಾರೂ ಬರೆಯಲು ಸಾಧ್ಯ?... ಗೌರವಾನ್ವಿತರು ಗಂಡನ ಅಂತರಂಗವನ್ನಷ್ಟೇ ಅಲ್ಲ, ಮಾವ ಕುವೆಂಪುರ ವ್ಯಕ್ತಿತ್ವವನ್ನು ಬಹು ಮುದ್ದಾಗಿ ತೆರೆದಿಡುತ್ತಾರೆ...
ಮೊದಲೇ ಗಂಡ ಮಾವರಂತ ಅಕ್ಷರ ಭಗವಂತರ ಜೊತೆಯಲ್ಲಿ ಇದ್ದವರು, ಇವರ ಬರವಣಿಗೆಯೂ ಅಷ್ಟೇ ನುಣುಪಾಗಿ ಚಂದವಾಗಿ ಮೂಡಿ ಬಂದಿದೆ.
ತೇಜಸ್ವಿರ ಬದುಕಿನ dimensions ಒಂದಲ್ಲ ಅವು ಅನೇಕ ಉದಾ: ಕೃಷಿ, ಚಳುವಳಿ, ಫೋಟೋಗ್ರಫಿ, ಸಂಗೀತ ಇನ್ನೂ ಹಲವು.. ಇವೆಲ್ಲರ ಕಲಿಕೆ ಮತ್ತು ಅವರು ಕಂಡುಕೊಂಡಂತಹ ಪರ್ಫೆಕ್ಷನ್, ಮೇಡಂ ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ.
ಇನ್ನೂ ಒಂದ್ ಸಾವಿರ ಪುಟ ಇರಬಾರ್ದಿತ್ತ ಅನ್ನಿಸ್ತು ಕೊನೆಯ ಪುಟ ಕಂಡಾಗ.
ಕರ್ವಲೋ ಅನ್ನೋ ವ್ಯಕ್ತಿ ಇದ್ದನೇನೇ ಅಂತ ಕುವೆಂಪುರು ತಮ್ಮ ಅಂತಿಮ ದಿನಗಳಲ್ಲಿ ಸೊಸೆ ಬಳಿ ಕೇಳುವ ಸನ್ನಿವೇಶವಂತೂ ಹನಿಗಣ್ಣಗಿಸುತ್ತದೆ...

May 21, 2013
ರಾಜೇಶ್ವರಿ ತೇಜಸ್ವಿಯವರು ಬರೆದಿರುವ "ನನ್ನ ತೇಜಸ್ವಿ" ಪುಸ್ತಕ ಓದಿ ಮುಗಿಸುವಾಗ ಕನ್ನಡದ ಹೆಸರಾಂತ ಬರಹಗಾರ ಪೂರ್ಣಚಂದ್ರ ತೇಜಸ್ವಿ(೧೯೩೮-೨೦೦೭) ಯವರ ಬದುಕು ವ್ಯಕ್ತಿತ್ವಗಳ ಒಂದು ಆತ್ಮೀಯ ಪರಿಚಯದ ಅನುಭವವಾಗುತ್ತದೆ. ತೇಜಸ್ವಿಯವರ ಬಗ್ಗೆ, ಅವರ ವಿಶಿಷ್ಟ ಸ್ವಭಾವದ ಬಗ್ಗೆ ಮೊದಲೇ ಸಾಕಷ್ಟು ಕೇಳಿರುವವರಿಗೂ ಈ ಪುಸ್ತಕ ಹಲವು ಹೊಸ ಮಾಹಿತಿ ಸಂಗತಿಗಳನ್ನು ಒದಗಿಸುತ್ತದೆ. ಮೈಸೂರು ಮಾನಸಗಂಗೋತ್ರಿಯಲ್ಲಿ ಸ್ನಾತಕೋತ್ತರ ತರಗತಿಯಲ್ಲಿ ಅವರ ಸಹ ಶಿಕ್ಷಣಾರ್ಥಿಯಾಗಿ, ಸ್ನೇಹಿತೆಯಾಗಿ, ನಂತರದಲ್ಲಿ ಅವರ ಮಡದಿಯಾಗಿ ಅವರೊಂದಿಗಿನ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಸಾಂಗತ್ಯದ ಅನುಭವವನ್ನು ರಾಜೇಶ್ವರಿಯವರು ಈ ಪುಸ್ತಕದ ಮೂಲಕ ಕನ್ನಡದ ಓದುಗರೊಂದಿಗೆ ಹಂಚಿಕೊಂಡಿರುವ ಬಗೆ ಅನನ್ಯ.
ನಾನು ಮೊದಲನೇ ಸಲ ತೇಜಸ್ವಿಯವರ ಬಗ್ಗೆ ಕೇಳಿದ್ದು ಎಂಬತ್ತರ ದಶಕದಲ್ಲಿ ಪ್ರಕಟವಾದ ಅವರ ಕಾದಂಬರಿ "ಕರ್ವಾಲೋ" ದ ಲೇಖಕರೆಂದು. ನನ್ನದೇ ಜಿಲ್ಲೆಯ ಮೂಡಿಗೆರೆ ಈ ಕೃತಿಯ ಕೇಂದ್ರಸ್ಥಳ. "ಕರ್ವಾಲೋ" ಬಹಳ ಇಷ್ಟವಾಗಿದ್ದು ತೇಜಸ್ವಿಯವರ ಅತ್ಯಂತ ಸ್ವಾರಸ್ಯಪೂರ್ಣ ಬರವಣಿಗೆಯ ಶೈಲಿಯಿಂದ. ಕಾದಂಬರಿಕಾರನೇ ನಿರೂಪಕನಾಗಿರುವ ಈ ಕಾದಂಬರಿಯ ಒಂದೊಂದು ಪಾತ್ರವೂ ನೆನಪಿನಲ್ಲುಳಿಯುವಂತಹವು. ಪ್ಯಾರ, ಮಂದಣ್ಣ, ಕರ್ವಾಲೋ, ಕರಿಯಪ್ಪ, ಯಂಗ್ಟ, ಇವರೆಲ್ಲ ಇಂದಿಗೂ ನೆನಪಿನಲ್ಲಿದ್ದಾರೆ- ಬಾಲ್ಯಕಾಲದ ಊರ ಮಂದಿಯಂತೆ. ಈ ಕಾದಂಬರಿಯನ್ನು ಮುಂದೆ ಹಲವು ವರುಷಗಳ ನಂತರ ಮತ್ತೆ ಓದುವಾಗ ಮೊದಲನೇ ಓದಿನಲ್ಲಿ ಗ್ರಹಿಕೆಗೆ ಬಂದಿರದ ಇನ್ನೊಂದಿಷ್ಟು ಅರ್ಥವೂ ಹೊಳೆದಿದ್ದು ಸತ್ಯ. ಆದರೆ ಸುಮಾರು ಮೂವತ್ತು ವರುಷಗಳ ಹಿಂದಿನ ಆ ಮೊದಲ ಓದಿನಲ್ಲಿಯೂ, ಅನುಭವಗಳನ್ನು ಪದಗಳಲ್ಲಿ ಅದ್ಭುತವಾಗಿ ಹಿಡಿದಿಡುವ ಕಲೆ ವಿಸ್ಮಯಗೊಳಿಸಿದ್ದು ಇಂದಿಗೂ ನೆನಪಿದೆ. ಪಾತ್ರಗಳೂ ಸುತ್ತಮುತ್ತಲೆಲ್ಲ ಕಾಣಬಲ್ಲಂತಹವರವೇ ಆಗಿದ್ದರೂ ತಮ್ಮ ತಿಳಿಹಾಸ್ಯದ ಶೈಲಿಯಲ್ಲಿ ತೇಜಸ್ವಿ ಅವರನ್ನು ಚಿತ್ರಿಸುವ ರೀತಿ "ಕರ್ವಾಲೋ" ಕಾದಂಬರಿಯನ್ನು ಎಂದೆಂದಿಗೂ ನೆನಪಿನಲ್ಲುಳಿಯುವ ಕೃತಿಯನ್ನಾಗಿಸುತ್ತದೆ. ತೇಜಸ್ವಿಯವರ ಹಲವಾರು ಕೃತಿಗಳಲ್ಲಿ ಕಾಣಬರುವ ಒಂದು ಸಾಮಾನ್ಯ ಎಳೆಯೆಂದರೆ ಪ್ರಕೃತಿ ಮತ್ತು ಮನುಷ್ಯನ ಸಂಬಂಧ. "ನಿಗೂಢ ಮನುಷ್ಯರು", "ಪರಿಸರದ ಕತೆಗಳು", "ಜುಗಾರಿ ಕ್ರಾಸ್", ಹೀಗೇ ಪ್ರಕೃತಿ ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಬರುವ ಒಂದು ಬಹುಮುಖ್ಯ ಪಾತ್ರವೇ ಆಗಿಬಿಡುತ್ತದೆ.
ತೇಜಸ್ವಿಯವರ ವೈಯಕ್ತಿಕ ಜೀವನ, ಸ್ವಭಾವಗಳ ಬಗ್ಗೆ ತಿಳಿಯುವ ಕುತೂಹಲ ಅವರ ಓದುಗರಲ್ಲಿರುವುದು ಸಹಜವೇ. ಕನ್ನಡದ ಇತರ ಹಲವರು ಪ್ರಖ್ಯಾತ ಸಾಹಿತಿಗಳಂತೆ ತೇಜಸ್ವಿಯವರು ಆತ್ಮ ಕಥೆ ಬರೆಯಲಿಲ್ಲವಾದ್ದರಿಂದ ಅವರ ಜೀವನದ
ಕೆಲವು ಕಾಲಘಟ್ಟಗಳ ವಿವರಗಳು ಅಸ್ಪಷ್ಟವಾಗಿಯೇ ಉಳಿದಿದ್ದವು. "ಅಣ್ಣನ ನೆನಪು" ಎಂಬ ತೇಜಸ್ವಿಯವರ ಪುಸ್ತಕ ತಮ್ಮ ತಂದೆ ಕುವೆಂಪು ಅವರ ನೆನಪುಗಳ ಕುರಿತದ್ದಾದರೂ ಅದರಲ್ಲಿ ತೇಜಸ್ವಿಯವರ ಬಾಲ್ಯ, ಯೌವನಗಳ ಚಿತ್ರವೂ ಸಾಕಷ್ಟು ಸಿಗುತ್ತದೆ. ಇದೀಗ ಕಳೆದ ವರ್ಷ ಪ್ರಕಟವಾಗಿರುವ "ನನ್ನ ತೇಜಸ್ವಿ" ವಯಸ್ಕ ತೇಜಸ್ವಿ ಜೀವನದ ಹಲವಾರು ವಿವರಗಳನ್ನು ಒದಗಿಸುತ್ತದೆ.
ಪುಸ್ತಕದ ಮೊದಲಾರ್ಧದಲ್ಲಿ, ತೇಜಸ್ವಿಯವರು ತಮ್ಮ ಪ್ರೀತಿಯ "ರಾಜೇಶ್" (ರಾಜೇಶ್ವರಿ)ಗೆ ಬರೆದ ಅನೇಕ ಪತ್ರಗಳನ್ನು ಲೇಖಕಿಯವರು ಯಥಾವತ್ತಾಗಿ, ಕೆಲವೆಡೆ ತೇಜಸ್ವಿಯವರದೇ ಹಸ್ತಾಕ್ಷರದಲ್ಲಿ ಪ್ರಕಟಿಸಿರುವುದು ವಿಶೇಷ, ಹಾಗೆಯೇ ಈ ಪತ್ರಗಳು ಪುಸ್ತಕದ ಸ್ವಾರಸ್ಯವನ್ನು ಹೆಚ್ಚಿಸಿರುವುದರಲ್ಲಿ ಸಂಶಯವಿಲ್ಲ. ಮೈಸೂರಿನಲ್ಲಿ ಪರೀಕ್ಷೆಗಳನ್ನು ಮುಗಿಸಿ ಚಿಕ್ಕಮಗಳೂರಿನ ಭೂತನಕಾಡುವಿನಲ್ಲಿ ಅಣ್ಣನ ಮನೆಯಲ್ಲಿದ್ದ ತಮ್ಮ ಪ್ರಿಯತಮೆ ರಾಜೇಶ್ವರಿಯವರಿಗೆ, ಇನ್ನೂ ಮೈಸೂರಿನಲ್ಲಿಯೇ ಇದ್ದು ಭವಿಷ್ಯದ ಯೋಜನೆಯ ವಿಚಾರದಲ್ಲಿ ತಳಮಳದಲ್ಲಿದ್ದ ತೇಜಸ್ವಿಯವರು ಬರೆದ ಹಲವಾರು ಪತ್ರಗಳು ಕೇವಲ ತೇಜಸ್ವಿ ಬರೆಯಬಹುದಾದ ಶೈಲಿಯವು. ಒರಟೊರಟಾಗಿ ಆದರೂ ಪ್ರಾಮಾಣಿಕವಾಗಿ, ಬಯ್ಯುತ್ತ ಆದರೂ ಪುಟಪುಟದಲ್ಲೂ ಪ್ರೀತಿ ಚಿಮ್ಮಿಸುತ್ತಾ, ಒಮ್ಮೆ ದಾರ್ಶನಿಕನಂತೆ ಇನ್ನೊಮ್ಮೆ ಹುಚ್ಚು ಪ್ರೇಮಿಯಂತೆ, ಹೀಗೆ ಹರಯದ ತೀವ್ರ ಸಂವೇದನೆಗಳನ್ನು ಅತ್ಯಂತ ಪ್ರತಿಭಾವಂತ ಲೇಖಕನೊಬ್ಬ ಅಭಿವ್ಯಕ್ತಿಸಿದ್ದನ್ನು ಓದುವ ಅಪರೂಪದ ಅವಕಾಶ ಓದುಗರಿಗೆ. ಸಹಸ್ರಾರು ಅಭಿಮಾನಿ ಓದುಗರು ರಾಜೇಶ್ವರಿಯವರಿಗೆ thanks ಹೇಳಬೇಕು. ತಮ್ಮ ಮೆಚ್ಚಿನ ಲೇಖಕನ ತುಮುಲ, ತಳಮಳ, ಅಕ್ಕರೆ, ಒಲವು, ಕಾತರ, ಉದ್ವೇಗ, ಉನ್ಮಾದ, ಎಲ್ಲವನ್ನೂ ಒಳಗೊಂಡ ಪ್ರೀತಿಯ ಓಲೆಗಳನ್ನು ಹಂಚಿಕೊಂಡದ್ದಕ್ಕೆ. ಹಾಗೂ ತೇಜಸ್ವಿಯವರಂತಹ ವಿಶಿಷ್ಟ ವ್ಯಕ್ತಿಯ ಪ್ರೀತಿಯ, ಸ್ಫೂರ್ತಿಯ "ರಾಜೇಶ್" ಆಗಿದ್ದಕ್ಕೆ.
ಇದೇ ಪತ್ರಗಳಲ್ಲೇ ತೇಜಸ್ವಿಯವರ ಸ್ವತಂತ್ರ, ನಿರಂಕುಶ ವ್ಯಕ್ತಿತ್ವದ ಚಿತ್ರವೂ ಸಿಗುತ್ತದೆ. ಜೀವನ ವೃತ್ತಿಗಾಗಿ ಯಾರದೇ ಹಣಕಾಸು ಸಹಾಯವನ್ನೂ ಬಯಸದ ತೇಜಸ್ವಿ, ತಾವೇ ಒಂದು ಮುದ್ರಣ ಯಂತ್ರವನ್ನು ಖರೀದಿಸಿ ಕನ್ನಡಕ್ಕಾಗಿ ಒಂದು ಉತ್ತಮ ನಿಯತಕಾಲಿಕವನ್ನು ತರುವ ಪ್ರಯತ್ನ ಮಾಡುತ್ತಾರೆ. ಅದು ಯಶಸ್ವಿಯಾಗದಾಗ ವ್ಯವಸಾಯಗಾರ ಅಥವಾ ತೋಟಗಾರನಾಗಿ ತಮ್ಮ ವಿರಾಮ ಕಾಲವನ್ನು ಓದಲು ಬರೆಯಲು ಬಳಸಲು ನಿರ್ಧರಿಸುತ್ತಾರೆ. ಆದರೆ ತೋಟಗಾರನಾಗಿ ಒಂದು ನೆಲೆ ಕಂಡುಕೊಳ್ಳಲು ತೇಜಸ್ವಿಯವರಿಗೆ ಐದಾರು ವರುಷಗಳೇ ಹಿಡಿಯುತ್ತವೆ. ಈ ಅವಧಿಯಲ್ಲಿ ತೇಜಸ್ವಿ ಹಾಗೂ ರಾಜೇಶ್ವರಿಯವರು ಪರಸ್ಪರರಿಗೆ ಬರೆದುಕೊಳ್ಳುವ ಪತ್ರಗಳು ಈ ಇಬ್ಬರ ಗಟ್ಟಿ ವ್ಯಕ್ತಿತ್ವಗಳಿಗೆ ಸಾಕ್ಷಿ. ಬೇರೆ ಬೇರೆ ಜಾತಿಯವರಾದರೂ ಪ್ರೀತಿಸಿ, ಎದುರಾದ ಸವಾಲುಗಳನ್ನೆದುರಿಸಿ ತಮ್ಮ ಕನಸಿನ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಇಬ್ಬರೂ ಅನುಭವಿಸಿದ ಮಾನಸಿಕ ಯಾತನೆ, ಅಗಲಿಕೆಯ ವೇದನೆ ಪತ್ರಗಳಲ್ಲಿ ವ್ಯಕ್ತವಾಗುತ್ತವೆ. ಕೊನೆಗೂ ತೇಜಸ್ವಿಯವರು "ಚಿತ್ರಕೂಟ" ವೆಂಬ ತಮ್ಮದೇ ಆದ ತೋಟ, ತೋಟದ ಮಧ್ಯದಲ್ಲೊಂದು ಪುಟ್ಟ ಮನೆ ಇವನ್ನು ಹೊಂದಿಸಿಕೊಂಡ ಮೇಲೆ ವಿವಾಹದ ವಿಚಾರಕ್ಕೆ ಮುಂದಾಗುತ್ತಾರೆ. ಕುವೆಂಪು ಅವರೇ ಬೋಧಿಸಿದ "ಮಂತ್ರ-ಮಾಂಗಲ್ಯ"ದ ದೀಕ್ಷೆಯೊಂದಿಗೆ ಮದುವೆಯಾಗುತ್ತದೆ. ನಂತರದಲ್ಲಿ ಅವರ ಹಲವರು ಗೆಳೆಯರೂ ಮಂತ್ರ-ಮಾಂಗಲ್ಯದ ವಿವಾಹವನ್ನೇ ಆರಿಸಿಕೊಳ್ಳುತ್ತಾರೆ.
ತೇಜಸ್ವಿಯವರ ವೈವಿಧ್ಯಮಯ ಆಸಕ್ತಿ, ಹವ್ಯಾಸಗಳ ಬಗೆಗೂ ಪುಸ್ತಕದಲ್ಲಿ ಪ್ರಸ್ತಾಪವಿದೆ. ಅವರ ಛಾಯಾಚಿತ್ರಗ್ರಹಣ ಹವ್ಯಾಸ, ಪಕ್ಷಿಗಳ ಚಿತ್ರಗಳಿಗಾಗಿ ಅವರು ಗಂಟೆಗಟ್ಟಲೆ ಕಾದು ಕೂರುತ್ತಿದ್ದಿದ್ದು, ಅವರ ಮೀನು ಹಿಡಿಯುವ ಹವ್ಯಾಸ, ಅರಣ್ಯದಲ್ಲಿ ಸುತ್ತಾಟ, ಚಿತ್ರಕಲೆಯಲ್ಲೂ ಅವರು ಹೊಂದಿದ್ದ ಪರಿಣತಿ ಹೀಗೇ.
ರಾಜೇಶ್ವರಿಯವರು ಮೈಸೂರಿನಲ್ಲಿದ್ದ ತಮ್ಮ ಅತ್ತೆ-ಮಾವಂದಿರಾದ ಕುವೆಂಪು ದಂಪತಿಗಳ ಬಗೆಗೂ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾರೆ. ಒಟ್ಟಿನಲ್ಲಿ ತಮ್ಮ ಪ್ರಸಿದ್ಧ ಪತಿಯ ಬದುಕಿನ ವಿವರಗಳ ಜೊತೆಜೊತೆಗೇ ತಮ್ಮಿಬ್ಬರ ಜೀವನದಲ್ಲಿ ಪ್ರಮುಖವೆನಿಸಿದ ಇತರ ಘಟನೆಗಳು ಹಾಗೂ ವ್ಯಕ್ತಿಗಳ ಬಗೆಗೂ ವಿವರಗಳಿವೆ. ಸಾಹಿತ್ಯ ಚಳವಳಿ, ಭಾಷಾ ಚಳವಳಿ, ರೈತ ಚಳವಳಿ ಹೀಗೇ ಹಲವಾರು ಘಟನೆಗಳು ಪ್ರಸ್ತಾಪವಾಗುತ್ತವೆ.
ಕಡೆಯವರೆಗೂ, ತಮ್ಮ ಕೃತಿ ರಚನೆಗಳು, ಕಂಪ್ಯೂಟರ್ ತಂತ್ರಾಂಶ, ಹೀಗೆ ಚಟುವಟಿಕೆಯಿಂದಲೇ ಇದ್ದ ತೇಜಸ್ವಿಯವರು ೨೦೦೭ರಲ್ಲಿ ತಮ್ಮ ೬೯ನೇ ವಯಸ್ಸಿನಲ್ಲಿ ತೀರಿಕೊಂಡ ಮೇಲೆ ರಾಜೇಶ್ವರಿಯವರು ಕಾಡಿನ ಮಧ್ಯೆ ಇರುವ ಮನೆಯಲ್ಲಿ ಅನುಭವಿಸಬೇಕಾಗಿರುವ ಒಂಟಿತನದ ಚಿತ್ರ ಕಡೆಯ ಅಧ್ಯಾಯ "Sit-Out ಹೇಳುವ ಕಥೆ-ವ್ಯಥೆ" ಯಲ್ಲಿ ಇದೆ.
ರಾಜೇಶ್ವರಿ ತಮ್ಮ ಸರಳ, ನೇರ ಬರವಣಿಗೆಯಿಂದ ಗಮನ ಸೆಳೆಯುತ್ತಾರೆ. "ಲೋಹಿಯಾರ ತತ್ತ್ವ ಚಿಂತನೆ, ಕುವೆಂಪು ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಪ್ರಯೋಗಶೀಲತೆ" ಈ ಮೂರರಿಂದ ಪ್ರಭಾವಿತರಾಗಿದ್ದ ಸಾಹಿತಿ ತೇಜಸ್ವಿಯವರೊಂದಿಗೆ ನಗರದ ಸದ್ದು ಗದ್ದಲಗಳಿಂದ ದೂರವಾಗಿ ಕಾಡಿನ ನಿಶ್ಶಬ್ಧದಲ್ಲಿ ತಾವು ಕಳೆದ ದಿನಗಳ ಕಣ್ಣಿಗೆ ಕಟ್ಟುವ ಚಿತ್ರಣ ಈ ಕೃತಿಯಲ್ಲಿದೆ. ಅಪಾರ ಸಂಖ್ಯೆಯ ಓದುಗ ಸಮೂಹವನ್ನು ಹೊಂದಿದ್ದ "ನಿಗೂಢ ಮನುಷ್ಯ"ನ "ಚಿದಂಬರ ರಹಸ್ಯ" ಇದೀಗ ಒಂದಷ್ಟು ಬಯಲಾಗಿದೆ.
ತೇಜಸ್ವಿ ಕಡೆಯ ದಿನದ ಬಗ್ಗೆ ಅವರ ಮಗಳು ಈಶಾನ್ಯೆ ತಮ್ಮ ಬ್ಲಾಗ್ ಜೀವ ಜಾಲ ದಲ್ಲಿ ಬರೆದಿರುವ ಬರಹ ಆತ್ಮಾವಲೋಕನ ತೇಜಸ್ವಿಯವರ ಓದುಗರಿಗೆ ಇಷ್ಟವಾಗಬಹುದು.
For more reviews, see:
https://srikannadi.blogspot.com/

March 9, 2022
ಆತ್ಮಕಥನವನ್ನು ಯಾರು ಬೇಕಾದರೂ ಬರೆಯಬಹುದು. ಆದರೆ ಇದು ವಿಶಿಷ್ಟವಾದದ್ದು. ತಮ್ಮ ಅರ್ಧಾಂಗಿಯ ಕಣ್ಣಲ್ಲಿ ಅಪರೂಪವಾಗಿ ಕಾಣಸಿಗುವರು ತೇಜಸ್ವಿ. ಇದು ಹಲವರಿಗೆ ತೇಜಸ್ವಿಯ ಬಗೆಗೆ ತಿಳಿದುಕೊಳ್ಳುವುದಕ್ಕೆ ಇರುವ ಒಂದು ಸಾಧನವಾದರೆ, ನನಗೆ ಕಾಣಿಸಿದ್ದು ರಾಜೇಶ್ವರಿ ಅವರಿಗೆ ತಮ್ಮ ಪತಿಯ ಮೇಲಿದ್ದ ಅನಂತ ಒಲವು, ಆರಾಧನೆ! ಈ ಪುಸ್ತಕ ಬರೆದಿರುವ ಅವರಿಗೆ ಹಾಗು ಅದನ್ನು ನನ್ನ ಕೈಯಿಲಿತ್ತವರಿಗೆ ನನ್ನ ನಮನಗಳು!
Want to Read
June 12, 2021.
This entire review has been hidden because of spoilers.
December 10, 2023
It's not a literary masterpiece but a good read for Tejaswians.
May 29, 2013
I purchased this book because it was about my favourite author. Although it has some interesting trivia and unknown facts about Tejaswi, sadly the writing style is poor. As a collection of memories it is endearing, if not for the narration.
February 23, 2022
ಎಷ್ಟೋ ಸಲ ಒಬ್ಬ ಲೇಖಕ ಅವನ ಬರವಣಿಗೆಯ ಮೂಲಕ ಇಷ್ಟ ಆಗ್ತಾರೆ ಹಾಗೂ ನಮ್ಮ ಮನಸನ್ನ ಗೆಲ್ಲುತ್ತಾರೆ. ಆದರೆ ಒಬ್ಬ ಲೇಖನ ಅವನ ವ್ಯಕ್ತಿತ್ವದ ಮೂಲಕ ಬದುಕುವ ರೀತಿಯಿಂದ ಜನರ ಮನಸನ್ನ ಗೆಲ್ಲೋದು ತುಂಬಾ ಅಪರೂಪ. ತೇಜಸ್ವಿ ಆ ಅಪರೂಪದಲ್ಲಿ ಒಬ್ಬರು.
ತೇಜಸ್ವಿ ಜೀವನ ಪೂರ್ತಿ ತಾವು ಅಂದುಕೊಂಡ ಹಾಗೆ ತಮ್ಮ ನಂಬಿದ ತತ್ವಗಳನ್ನು ಪಾಲಿಸಿಕೊಂಡೇ ಜೀವನ ನಡೆಸಿದರು. ಎಷ್ಟೋ ವಿರೋಧಗಳ ನಡುವೆಯೇ. ಅವರ ವ್ಯಕ್ತಿತ್ವವೇ ಹಾಗೆ influential. ಅವರು ಜೀವನ ನೋಡಿದ ರೀತಿ ನಡೆಸಿದ ರೀತಿ ಎಲ್ಲವೂ unique, adventurous, fulfilled.
ನನ್ನ ತೇಜಸ್ವಿ ಅಲ್ಲಿ ತೇಜಸ್ವಿ ಹರೆಯದ ಪ್ರೇಮಿಯಾಗಿ, ಏನೋ ಒಂದು ಸಾಧಿಸಬೇಕು ಅನ್ನೋ ಛಲಗಾರನಾಗಿ, ಸಮಾಜ ಸುಧಾರಣೆಯ ಹೋರಾಟಗಾರನಾಗಿ, ಸಂಗೀತಾಸಕ್ತನಾಗಿ, ಫೋಟೋಗ್ರಾಫರ್ ಆಗಿ, ಅಪ್ಪನಾಗಿ, ಕೃಷಿಕನಾಗಿ, ಲೇಖಕನಾಗಿ ಮತ್ತು ಕುವೆಂಪು ಅವರ ಆದರ್ಶಗಳನ್ನು ಪರಿಪೂರ್ಣವಾಗಿ ಪಾಲಿಸಿದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ.
ಇಡೀ ಪುಸ್ತಕದಲ್ಲಿ ಹಲವಾರು ಬಾರಿ ಎದ್ದು ಕಾಣಿಸೋದು ತೇಜಸ್ವಿ ಅವರು ಒಂದು ವಿಷಯ ಕಲೀಬೇಕು ಅಂದ್ರೆ ಅದರ ಮೇಲೆ ಸಂಪೂರ್ಣವಾಗಿ ತೊಡಗಿಸಿಕೊಳ್ಳೋದು ಹಾಗೂ ಅದರ ಬಗ್ಗೆ ಆಳವಾದ ಅಧ್ಯಯನ ಮಾಡೋದು. ಪ್ರಿಂಟಿಂಗ್ ಪ್ರೆಸ್ ವಿಷಯದಲ್ಲಿ, ಕ್ಯಾಮೆರಾಗಳ ಬಗ್ಗೆ, ಫಿಶಿಂಗ್ ರೋಪ್ ಗಳ ಬಗ್ಗೆ, ವಾಹನಗಳ ಬಗ್ಗೆ, ಕಂಪ್ಯೂಟರ್ ಬಗ್ಗೆ ಆಗಲಿ ಎಲ್ಲವನ್ನೂ ಚೆನ್ನಾಗಿ ಅಭ್ಯಾಸ ಮಾಡಿ ಅದರ ಸಂಪೂರ್ಣ ಬಳಕೆ ಹಾಗೂ ರಿಪೇರಿಯ ಬಗ್ಗೆ ಆಸ್ಥೆ ವಹಿಸಿಕೊಳ್ಳೋರು. ಇದು ಎಷ್ಟೋ ಜನ ಯುವಕರಿಗೆ ಮಾದರಿ.
ಇನ್ನು ರಾಜೇಶ್ವರಿ ತೇಜಸ್ವಿಯವರು. ಇದು ಅವರ ಮೊದಲನೇ ಬರವಣಿಗೆ/ಪುಸ್ತಕ ಆದರೂ ಎಲ್ಲೂ ಸಹ ಅದು ಗೊತ್ತಾಗಲ್ಲ. ಅಷ್ಟು ಸುಂದರವಾಗಿ ಸರಳವಾಗಿ ತೇಜಸ್ವಿ ಬದುಕನ್ನ ಬರೆದಿದ್ದಾರೆ. ತುಂಬಾ ಸಲ ಅವರ ಬರವಣಿಗೆ ಶೈಲಿ ತೇಜಸ್ವಿ ಅವರ ಅಣ್ಣನ ನೆನಪು ಪುಸ್ತಕ ನೆನಪಿಸುತ್ತದೆ.
ಒಟ್ಟಿನಲ್ಲಿ ನನ್ನ ತೇಜಸ್ವಿ ಓದಿ ಮುಗಿಸುವಷ್ಟರಲ್ಲಿ ನಮ್ಮೆಲ್ಲರ ತೇಜಸ್ವಿ ಆಗಿರುತ್ತಾರೆ.

July 7, 2018
Rajeshwari Tejaswi madam has special style of writing. I liked it. I don't thing everybody will like it.
As a first time writer its superb achievement. I like the details.

September 2, 2018
ನೆಚ್ಚಿನ ಲೇಖಕರ ನೆನಪನ್ನು ಅವರ ನೆಚ್ಚಿನ ಜೀವವೊಂದು ವಿವರಿಸಿರುವುದು ತುಂಬ ಆತ್ಮೀಯತೆ ಮೂಡುವಂತೆ ಮಾಡುತ್ತದೆ... ಖಂಡಿತ ಒಳ್ಳೆ ಪುಸ್ತಕ..
July 6, 2024
ಕಾಡಿನ ಸಂತ ತೇಜಸ್ವಿ
May 28, 2025
ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಒಂದು ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವದಲ್ಲ - ತೇಜಸ್ವಿ
ಪೂಚಂತೆ ಅವರ ಬಗ್ಗೆ ಇದ್ದ ನೂರಾರು ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಟ್ಟ ಪುಸ್ತಕ.

May 13, 2014
Narration style is bad.
April 27, 2015
nice try by rajeshwari amma, and thanks for writting.
Displaying 1 - 13 of 13 reviews