ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಜಾನಪದ ಸೊಗಡನ್ನು ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಹಾಡುಗಾರ, ಅಧ್ಯಾಪಕ, ಜಾನಪದ ತಜ್ಞ ಹೀಗೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸಾಹಿತ್ಯಕ್ಕೆ ೨೦೧೦ ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ಚಿಕ್ಕ ವಯಸ್ಸಿನಲ್ಲಿ ಸಿಂಗಾರವ್ವ ಚಲನಚಿತ್ರವನ್ನ ನೋಡಿದ ಮಸುಕು ನೆನಪು. ಆ ಚಲನಚಿತ್ರವೆಂದರೆ ಮೂಗು ಮುರಿಯುತ್ತಿದ್ದೆ. ಕಾರಣ, ನೋಡಲು ಇಷ್ಟವಾಗದ ಚಲನಚಿತ್ರವೆಂದು ನನ್ನ ಮನಸ್ಸಿನಲ್ಲಿ ಕುಳಿತುಬಿಟ್ಟಿತ್ತು. ಈಗ ಪುಸ್ತಕ ಓದಿಯಾದ ಮೇಲೆ ಆ ಚಲನಚಿತ್ರವನ್ನು ನೋಡಲೇಬೇಕೆಂಬ ಹಂಬಲದಿಂದ ಇಂಟರ್ನೆಟ್ ನಲ್ಲಿ ಹುಡುಕಿದರೂ ಸಿಗುತ್ತಿಲ್ಲ. ಇದನ್ನೆ ಏನೋ ಪೂರ್ವಾಗ್ರಹ ಪೀಡಿತ ಮನಸ್ಸು ಎನ್ನುವುದು.!
ತುಂಬಾ ದೊಡ್ಡ ಕಥೆಯೇನಲ್ಲ, ತುಂಬಾ ಚೆಂದದ ಕಥೆ ಅನ್ನೋದಕ್ಕಿಂತ ಬೇಗಬೇಗನೆ ಒದಿಸಿಕೊಂಡು ಹೋಗುವ ಇಷ್ಟವಾಗುವ ಕಥೆ. ಶೀನಿಂಗಿ ಹೇಳುವ, ತನ್ನ ಸ್ನೇಹಿತೆ ಮತ್ತು ಯಜಮಾನ್ತಿ ಸಿಂಗಾರೆವ್ವನ ಆತ್ಮಕಥೆಯೂ ಎನ್ನಬಹುದು ಅಥವಾ ಶಿವಪುರದ ಸರಗಂ ದೇಸಾಯಿಯ ಅರಮನೆಯ ಕಥೆಯೂ ಎನ್ನಬಹುದು.
ಸಿಂಗಾರೆವ್ವ, ಸರಗಂ ದೇಸಾಯಿ, ಗೌಡ, ಮರ್ಯಾ ಪಾತ್ರಗಳು ಮುಖ್ಯಪಾತ್ರಗಳಾದರೂ ಇಡೀ ಕಥೆಯ ಸೂತ್ರಧಾರಿಣಿ ಎಂದರೆ ಶೀನಿಂಗೀ ಪಾತ್ರ. ಆ ಪಾತ್ರವೇ ಕಥೆಯನ್ನು ಹೇಳುತ್ತಾ, ಪಾತ್ರಗಳನ್ನು ಪರಿಚಯಿಸುತ್ತಾ, ಮತ್ತು ಇಡೀ ಕಥೆಯ ಪಾತ್ರಗಳ ವಿಮರ್ಶೆಯನ್ನು ಕೂಡ ಮಾಡುತ್ತದೆ.
ಇಡೀ ಕಥೆ ಆವರಿಸಿರುವ ಸಿಂಗಾರೆವ್ವನ ಬಗ್ಗೆ ಶೀನಿಂಗಿ ಹೇಳಿದ
"ಏನಪ್ಪಾ, ಗೌಡನಿಗೆ ಮಗಳಾಗಿ ಹುಟ್ಟಿದ್ದು ತಪ್ಪೆ? ಹೆಣ್ಣಾಗಿ ಹುಟ್ಟಿ ಹಾಳುಸುರಿವ ಅರಮನೆಗೆ ಆಡುವ ಮಕ್ಕಳನ್ನು ಕೊಡಬೇಕೆಂದದ್ದು ತಪ್ಪೆ? ಅದಕ್ಕಾಗಿ ಪೂಜಾ ವ್ರತ ಮಾಡಿದ್ದು ತಪ್ಪೇ? ಅದೇನೋ ಕಥೆ ಹೇಳುತ್ತಾರಲ್ಲ, ರಾಜಕುಮಾರಿಗೆ ರಾಕ್ಷಸರು ಗಂಟುಬಿದ್ದರು ಅಂತ, ಹಾಗೆ ಗೌಡ, ದೇಸಾಯಿ, ಮರ್ಯಾ - ಒಬ್ಬರಾದ ಮೇಲೋಬ್ಬರು ಕಡೆಕಡೆಗೆ ಮೂವರೂ ಕೂಡಿ ಗಂಟು ಬೀಳುವುದೆಂದರೇನು? ಆದರೆ ರಾಜಕುಮಾರೀನ ಬಿಡಿಸೋದಕ್ಕೊಬ್ಬ ರಾಜ ಕುಮಾರನಾದರೂ ಇದ್ದ. ಇಲ್ಲಿ ಅವನೂ ಇಲ್ಲ. ಚಿಕ್ಕಂದಿನಿಂದ ನಾನೇ ಕಂಡಿದ್ದೀನಲ್ಲ ಒಂದು ಪಾಪ ಮಾಡಿದವಳಲ್ಲ. ಆದರೆ ಅವಳಂಥ ಯಮಯಾತನೆ ಪಟ್ಟವರೇ ಇಲ್ಲ. ಅಥವಾ ಅವಳು ಮಾಡಿದ ಒಂದೇ ಒಂದು ಪಾಪವೆಂದರೆ: ಅವಳು ಗೌಡನಿಗೆ ಹುಟ್ಟಿದ್ದೇ."
ಈ ಮೇಲಿನ ಮಾತುಗಳು ನಿಜ ಎನಿಸುತ್ತದೆ.
ಇನ್ನಾ ಕೃತಿಯ ಬಗ್ಗೆ ಹೆಚ್ಚೇನೂ ಹೇಳುವುದಂತದ್ದು ಇಲ್ಲ. ಒಮ್ಮೆ ಖಂಡಿತವಾಗಿಯೂ ಓದಬಹುದು. ಉತ್ತಮ ಕೃತಿ.
"ಸಿಂಗಾರೆವ್ವ ಮತ್ತು ಅರಮನೆ" ಕಾದಂಬರಿಯನ್ನು ಓದುವುದಕ್ಕೂ ಮೊದಲು, ಈ ಶೀರ್ಷಿಕೆ ಒಂದು ತೆರನಾದ ಕುತೂಹಲ ಮತ್ತು ಪುಳಕ ಹುಟ್ಟಿಸುತ್ತಿತ್ತು. ಒಳಅರಿವು ಸೂಚಿಸಿದ್ದರಲ್ಲಿ, ಎರಡು ಮಾತಿಲ್ಲ. ಇದನ್ನು ಓದುತ್ತಿರುವಂತೆಲ್ಲಾ, ಈ ಲೋಕದ ಅರಿವು ಅನುಭವಕ್ಕೆ ಬಾರದೆ, ಅರಮನೆಯಲ್ಲಿ ಮತ್ತು ಪಾತ್ರಗಳೊಡನೆ ಜೀವಿಸಿದಂಥ ಅನುಭವ ನಮ್ಮದಾಗುತ್ತದೆ.
ಈ ಕಾದಂಬರಿಯು ಶೇಕ್ಸ್'ಪಿಯರನ ಕಥೆಗಳಲ್ಲಿ ತೋರುವ ಪಾತ್ರ ಶ್ರೀಮಂತಿಕೆ ಹಾಗೂ ಅವನ ಬರಹದಲ್ಲಿನ ಅಗಾಧ ಕೈಚಳಕವನ್ನು ಬಹಳವಾಗಿ ನೆನಪಿಸುತ್ತದೆ(ವೈಯುಕ್ತಿಕವಾಗಷ್ಟೇ, ಹೋಲಿಕೆ ಉದ್ದೇಶವಲ್ಲ). ಶೇಕ್ಸ್'ಪಿಯರನ ಕಥೆಗಳಲ್ಲಿ ಕಂಡು ಬರುವಂತೆ ಅಸಂಖ್ಯ ಪಾತ್ರಗಳಿರದಿದ್ದರೂ, ಮುಖ್ಯ ಪಾತ್ರಗಳಾದ - ಸಿಂಗಾರೆವ್ವ, ಶೀನಿಂಗಿ, ಮರ್ಯಾ ಹಾಗೂ ದೇಸಾಯಿ ಮುಂತಾದ ಪ್ರತಿ ಪಾತ್ರವೂ ವೈಶಿಷ್ಟ್ಯ ಪೂರ್ಣವಾಗಿದ್ದು, ಪಾತ್ರಗಳ ವೈವಿಧ್ಯತೆ ಚಿತ್ತಭಿತ್ತಿಯನ್ನು ತುಂಬಿಹೋಗುತ್ತದೆ. ಆದರೆ ಕಥೆಯ ಮುಂದಿನ ಕೊಂಡಿಯಾದ ರವಿಚಂದ್ರನ ಇರುವು, ಕಾದಂಬರಿಯಲ್ಲಿ ಪೇಲವವೆನಿಸುತ್ತದೆ. ಇದರಲ್ಲಿನ ಖಳಪಾತ್ರಗಳ ದುಷ್ಟವ್ಯಕ್ತಿತ್ವವು ಶೃಂಗಕ್ಕೇರಿ ಮಿಂಚುತ್ತವೆ. ಅಲ್ಲದೆ, ಇಲ್ಲಿ ಬರುವ ಪಾತ್ರವೊಂದರ ವ್ಯಕ್ತಿತ್ವವನ್ನು ನಿಖರವಾಗಿ ಊಹಿಸಲಸಾಧ್ಯವಾಗಿಸಿ, ನಮ್ಮ ವಿವೇಚನೆಗೆ ಸವಾಲನ್ನೆಸೆಯುತ್ತದೆ.
ಕಥಾನಾಯಕಿ ಸಿಂಗಾರೆವ್ವನ ಮನಸು ಸೂಕ್ಷ್ಮ, ಕೋಮಲ ಹಾಗೂ ಉಲ್ಲಾಸಶೀಲ. ಅತಿ ಪ್ರೀತಿಯವಳಾದ ಅವಳು, ಅದನ್ನು ವ್ಯಕ್ತ ಪಡಿಸುವಲ್ಲೂ ಹಿಂದೆ ಬೀಳಳು. ಅತ್ತೆಯು(ಗಂಡನ ತಾಯಿ) ಸಾವಿನಂಚಿನಲ್ಲಿದ್ದಾಗ, ಕಣ್ಣೇರು ತುಂಬಿಕೊಂಡು ತಬ್ಬಿ ಅಳುವವಳು. ಶೋಷಿತ ಆಳು ಮರ್ಯಾನಿಗೆ ತನ್ನ ಪಾಲಿನ ರೊಟ್ಟಿ ಕದ್ದು ಕೊಡುವವಳು...ಹೀಗೆ ಸಿಂಗಾರೆವ್ವ ನಮ್ಮ ಎದೆಯೊಳಗಿಳಿದು ಭಾವಕೋಶವನ್ನು ತುಂಬುತ್ತಾ ಹೋಗುತ್ತಾಳೆ.... ಮತ್ತು ಕಥೆಯ ಏರಿಳಿತದಂತೆಯೇ ಸಿಂಗಾರೆವ್ವಳ ಮನಸ್ಥಿತಿ ಕೂಡ ತುಯ್ದಾಡುತ್ತಾ ಸಾಗುತ್ತದೆ.
ಎರಡೇ ಮಾತಿನ ಮರ್ಯಾನ ವ್ಯಕ್ತಿತ್ವಕ್ಕೆ, ಬಗೆಬಗೆಯ ಭಾವ ಕಲ್ಪಿಸಿಕೊಡುವ ಕಥೆಯು, ಕೊನೆಯಲ್ಲಿ ನಾಯಕನ ರೂಪವನ್ನು ಮೂಡಿಸುವುದು ಮನಸಿಗೆ ಗೋಚರವಾಗುತ್ತದೆ. ಹಾಸಿಗೆ ಹಿಡಿದು ನಿಷ್ಕ್ರಿಯಳಾದ ನೂರರ ಮುದುಕಿಯ ಪಾತ್ರಕ್ಕೆ, ಲೇಖಕರು ಜೀವ ತುಂಬಿರುವ ಪರಿ ಬೆಚ್ಚನೆಯ ಭಾವವನ್ನುಂಟು ಮಾಡುತ್ತದೆ.
ಕಾದಂಬರಿಯಲ್ಲಿ ಬರುವ ಹುಣಸೆಮೆಳೆಯ ವರ್ಣನೆ ನಮ್ಮ ಕಲ್ಪನಾಶಕ್ತಿಯನ್ನು ಅಪರಿಮಿತವಾಗಿ ವಿಸ್ತರಿಸುವುದಲ್ಲದೆ, ರೋಮಾಂಚಕ ಭಯವನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗುತ್ತದೆ. ಈ ಕೃತಿಯು ಓದುಗರನ್ನು ಗಾಢವಾಗಿ ಕಾಡಿ, ಹಿಡಿದಿಡುತ್ತದೆ, ಅನೂಹ್ಯ ರಸಾನುಭವಕ್ಕೆ ಒಳಮಾಡುತ್ತದೆ. ಕಾದಂಬರಿಯ ಒಂದೊಂದು ಅಧ್ಯಾಯವೂ ಸಿಡಿಲಿನಂಥ ಸನ್ನಿವೇಶಗಳಿಂದ ತುಂಬಿದ್ದು, ಓದುಗರಿಗೆ ಅಚ್ಚರಿ, ಆಘಾತಗಳನ್ನುಂಟು ಮಾಡುತ್ತಾ ಹೋಗುತ್ತವೆ.
ಲೇಖಕರಂತೂ ಕಥೆಯ ಉದ್ದಕ್ಕೂ ಮಿಂಚಿನ ಖೋಡಿ ಹರಿಸಿದ್ದಾರೆ. ಪಾತ್ರಗಳ ಒಳಗನ್ನು ಬಿಡಿಬಿಡಿಯಾಗಿ ಹರವಿರುವುದು, ಓದುಗರಿಗೆ ಪೂರ್ಣಸ್ವಾದವನ್ನು ದೊರಕಿಸುವಲ್ಲಿ ನೆರವಾಗುತ್ತದೆ. ನನಗೆ ಗಾಢವಾಗಿ ಹಿಡಿಸಿದ ಅಮೋಘ ಕೃತಿಗಳಲ್ಲಿ, ಇದು ಎತ್ತರದ ಸ್ಥಾನವನ್ನು ಪಡೆಯುತ್ತದೆ.
ಸ್ವಾರ್ಥ ತುಂಬಿದ ಮನುಷ್ಯನ ಕಾರ್ಯಗಳು , ಹೆಣ್ಣಿನ ಬಗ್ಗೆ ಅನುಕಂಪ ವಿಲ್ಲದ ಜನರು, ಗೆಳತಿಯರ ಒಡನಾಟ ಎಲ್ಲವನ್ನೂ ಕಂಬಾರರು ಅದ್ಬುತವಾಗಿ ಹೇಳಿದ್ದಾರೆ. ಸಿಂಗಾರೆವ್ವ ನಮ್ಮಲ್ಲೇ ಒಬ್ಬಳಾಗಿ ಬೆರೆತು ಹೋಗುತ್ತಾಳೆ. ಅವಳ ಭಾವನೆ, ಕಷ್ಟ, ಆಸೆ ಎಲ್ಲವೂ ಕಣ್ಣಿಗೆ ಕಟ್ಟಿದಂತಾಗುತ್ತದೆ. ದೇಸಾಯಿ ನಾಟಕದ ಹುಚ್ಚು ಗಮನಸೆಳೆಯುತ್ತದೆ. ಮರಿಯಾನಾ ಭಂಡತನ ಭಯ ಹುಟ್ಟಿಸುತ್ತದೆ. ಶೇನಿಂಗೆವ್ವ ಕಥೆ ಹೇಳುವ ವೈಖರಿ ಅದ್ಬುತ. ದೇಸಾಯಿಯ ಬಯಲಾಟದ ಸಂಭಾಷಣೆ ಕೇಳಲು ತಮಾಷಯಾಗಿದೆ. ಗೌಡನ ಮನೆಯಿಂದ ನಾಪತ್ತೆಯಾದ ಮರಿಯ ಆಕಸ್ಮಿಕ ವಾಗಿ ದೊರೆಸನಿಯ ಮನೆಗೆ ಅದು ಶೇನಿಂಗೇವ್ವ ಕರೆತಂದಿದ್ದು. ದೇಸಾಯಿ ಅಮ್ಮನ ನಡುಪಟ್ಟಿ ಹಾಡು ಮತ್ತು ಅವಳ ಸಾವು ಕಥೆ ಮುಗಿದರೂ ಕಾಡುತ್ತದೆ. ಹುಣಷೆ ಕಾಡು, ರಹಸ್ಯ ತುಂಬಿದ ಅರಮನೆ ಓದುಗನನ್ನು ಯಾವುದೋ ಲೋಕಕ್ಕೆ ಎಳೆದೋಯುವುದು. ಸಿಂಗಾರೆವ್ವನ ತಾಯ್ತನದ ಹಂಬಲ ಹೆಣ್ಣ ಮನಸನ್ನು ಸೆಳೆಯುತ್ತದೆ. ಸಿಂಗಾರೆವ್ವ ಬಗ್ಗೆ ತಿಳಿಯುವ ಕುತೂಹಲ ನಿಮ್ಮನು ಕಥೆಯ ಕೊನೆವರೆಗೂ ಎಳೆದೊಯುತದೆ. ಒಂದು ಅದ್ಭುತ ಕನ್ನಡ ಕಾದಂಬರಿ. ಪುಸ್ತಕ ಪ್ರೇಮಿ ಓದಲೇಬೇಕಾದ ಕಾದಂಬರಿ.
In *Singarevva Mattu Aramane*, Sheeningi's narration vividly captures the struggles of Singarevva, a woman who endures immense hardship, first at the hands of her father and later her husband, Sargam Desai. The novel beautifully portrays the desires and challenges faced by women across different stages of life, weaving their stories with emotional depth and realism.
The younger Singarevva and Sheeningi are depicted as naive and oblivious to life's difficulties, contrasting sharply with the Doresani, Singarevva's mother-in-law, who longs for a male child. Meanwhile, Singarevva herself, now married, yearns for her husband's love, evoking deep empathy from the reader. The narration is so compelling and immersive that it holds the reader's attention until the very end, delivering a conclusion that feels truly deserving and impactful.