K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.
Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.
He has won several awards for his contribution to literature such as the Rajyotsava and Kannada Sahitya Academy awards.
Poornachandra Tejaswi died of cardiac arrest at the age of 69
ತೇಜಸ್ವಿಯವರು, ತಮ್ಮ ಪರಿಸರದೊಡನೆ ತಮಗಿದ್ದ ಒಡನಾಟದ ಅನುಭವಗಳನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಮೈಸೂರು ಹಾಗೂ ಮೂಡಿಗೆರೆಯ ಪರಿಸರದಲ್ಲಿ ತಾವು ಕಂಡ ಹಾಗೂ ಅನುಭವಿಸಿದ ಸೊಗಸಿನ ಅಕ್ಷರ ರೂಪ- ಈ ಸಂಕಲನ. ತೇಜಸ್ವಿಯವರ ಇಂತಹ ಬರಹಗಳನ್ನು ಎಷ್ಟಿದ್ದರೂ ಓದಬಹುದು ಅನಿಸುವುದು ಸುಳ್ಳಲ್ಲ.
ಬಾವಲಿಯ ಸಂವಹನದ ಬಗೆಗಿನ ಮಾಹಿತಿ ತಿಳಿದು ಅಚ್ಚರಿಯಾಯಿತು. ಜಗತ್ತಿನಾದ್ಯಂತ ಅದರ ಬಗೆಗಿನ ಸಂಶೋಧನೆಗಳ ಬಗ್ಗೆ ಚಿಕ್ಕವಾಗಿ ಚೊಕ್ಕವಾಗಿ ಹೇಳಿದ್ದರೆ. ಓದಲೇ ಬೇಕಾದ ಉಪಯುಕ್ತ ಮಾಹಿತಿ ಉಳ್ಳ ಪುಸ್ತಕ. ಪ್ರತಿಯೊಂದು ಶಾಲಾ ಲೈಬ್ರೆರಿಯಲ್ಲಿ ಇರಲೇ ಬೇಕಾದ ಪುಸ್ತಕವಿದು.
ಇಂದಿನ ಯುವ ಪೀಳಿಗೆಗೆ ಕಾಡಿನ ಬಗ್ಗೆ ಕುತೂಹಲ ಮೂಡಿಸಿದರೆ ಮಾತ್ರ ನಮ್ಮ ಕಾಡು ಉಳಿಯಲು ಸಾಧ್ಯ ಎನ್ನುವ ಅದ್ಭುತ ಚಿಂತನೆಯನ್ನು ಮುಂದಿಟ್ಟು... ಸರ್ವಕಾಲಕ್ಕೂ ಪ್ರಸ್ತುತ ಎನಿಸುವ ಸಮಗ್ರ ಪರಿಸರ ಸಾಹಿತ್ಯವನ್ನು ನಮ್ಮ ಮುಂದಿಟ್ಟ ಲೇಖಕ ಅಂದ್ರೆ ತೇಜಸ್ವಿ... ಈ ಪ್ರಕೃತಿಯ ಮುಂದೆ ನಾವು ಮನುಷ್ಯರು ಏಷ್ಟು ಕ್ಷುಲ್ಲಕ, ಪ್ರಕೃತಿಯ ಪ್ರೋಯೋಗ ಶಾಲೆಯಲ್ಲಿ ನಾವೂ ಒಂದು ಪ್ರಯೋಗಕ್ಕೆ ಒಳಪಟ್ಟಿರುವ ಜೀವಿಗಳು ಅಷ್ಟೇ.... ಪ್ರಕೃತಿ ಒಂದು ಚಿಕ್ಕ ಜೀವಿಗೂ ಕೂಡ ಬದುಕುವ ಸಮಾನ ಹಕ್ಕನ್ನು ನೀಡಿದೆ. ಅದರ ರಕ್ಷಣೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿದೆ.. ಮನುಷ್ಯ ಪರಿಸರ ಉಳಿಸಲು ಶ್ರಮ ಪಡಬೇಕಾದ ಅಗತ್ಯವಿಲ್ಲ... ಅದನ್ನು ಹಾಳು ಮಾಡದೇ, ಅದರ ವ್ಯವಸ್ಥೆಯಲ್ಲಿ ಕೈ ಆಡಿಸದೆ ಇದ್ದರೆ ಸಾಕು... ಎನ್ನುವ ಭಾವನೆಯನ್ನು ಮೂಡಿಸುತ್ತದೆ... ಇದು ಪರಿಸರ ಮತ್ತು ತೇಜಸ್ವಿಯವರ ನಡುವಿನ ಅನುಭವ ಕಥನ... ಕನ್ನಡ ಪುಸ್ತಕಗಳ ಹೊಸ ಓದುಗರಿಗೆ ಸೂಕ್ತವಾದ ಪುಸ್ತಕ...
ವಿಜ್ಞಾನ ಮತ್ತು ಸಾಹಿತ್ಯವನ್ನು ಬೇರೆ ಬೇರೆ ಎಂದು ಪರಗಣಿಸದೆ ಅವರ ಅನುಭವನ್ನೆ ಸಾಹಿತ್ಯ ರೂಪಕ್ಕೆ ಇಳಿಸಿದ್ದಾರೆ. ಕನ್ನಡಕ್ಕೆ ಹೊಸ ತರಹದ ಸಾಹಿತ್ಯ.typical tejaswi style.definitely good read.for children its awesome book to gift.
Please read it in your mother language it is all about the author's own experience with nature I feel worthy to spend time and money to read this book I prefer Google play book for e book .
ನಮ್ಮ ಸುತ್ತ-ಮುತ್ತಲ ಪರಿಸರದಲ್ಲಿನ ಸೂಕ್ಷ್ಮ ಜೀವಿಗಳಿಂದ ಹಿಡಿದು ಪಕ್ಷಿ, ಪ್ರಾಣಿಗಳ ವೈಶಿಷ್ಟ್ಯತೆಗಳು ಮತ್ತು ಅವುಗಳ ಅದ್ಭುತ ಜೀವನ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ತೇಜಶ್ವಿ ಪುಸ್ತಕಗಳನ್ನು ಓದಬೇಕು. ಇದರಲ್ಲಿ ಒಂಟೆ ಹುಳು, ಏರೋಪ್ಲೇನ್ ಚಿಟ್ಟೆ, ಬಾವಲಿಗಳ ವಿಶಿಷ್ಟವಾದ ಅಂಗಾಂಗಗಳು, ಸರ್ಪದ್ರಷ್ಠಿ, ಹಾವುಮೀನು, ಟ್ರೋಜನ್ ಹಕ್ಕಿ ಮತ್ತು ಸಂತಾನೋತ್ಪತ್ತಿಗಾಗಿ ದೂರ ದೇಶಗಳಿಂದ ವಲಸೆ ಬರುವ ಹಕ್ಕಿಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ ತೇಜಶ್ವಿ.
ಅನಂತವೆನಿಸುವ ಅಗಾಧವಾದ ಪ್ರಕೃತಿ ಮನುಷ್ಯನಿಗೆ ಯಾವತ್ತಿದ್ದರೂ ರಹಸ್ಯವೇ; ಇಂತಹ ಹಲವಾರು ರಹಸ್ಯಗಳಿಗೆ ಬಹಳಷ್ಟು ಸಾರಿ ಸಿಗುವ ವೈಝ್ನಾನಿಕ ಉತ್ತರಗಳು/ವಿವರಣೆಗಳು ಮನುಷ್ಯನಿಗೆ ಅರ್ಥ ಮಾಡಿಕೊಳ್ಳಲು ಕ್ಲಿಷ್ಟಕರ. ತೇಜ್ಸಸ್ವಿ ಈ ಪುಸ್ತಕದಲ್ಲಿ ತಮ್ಮದೇ ಶೈಲಿಯಲ್ಲಿ, ಅತಿ ಸರಳವಾಗಿ ( In literal sense) ವಿರಾವರಿಸುತ್ತಾ ಹೋಗುತ್ತಾರೆ. ತುಂಬಾ ಗ್ರಾಂಥಿಕವೆನಿಸದ ಭಾಷೆ, ಕಥೆನ ಶೈಲಿಯಲ್ಲಿ ವಿವರಿಸುವ ಪ್ರಕೃತಿಯ ರಹಸ್ಯಗಳು - ಓದಲು ಮುದ ನೀಡುತ್ತವೆ.
ಇದನ್ನು ಓದುವಾಗ ತೇಜಸ್ವಿಯವರ ಮಾತು ನೆನೆಪಿಗೆ ಬರುತ್ತದೆ.
"ಪ್ರಕೃತಿಯನ್ನು ನಾವು ಪೂರ್ತಿಯಾಗಿ ಆರ್ಥ ಮಾಡಿಕೊಳ್ಳುತ್ತೇವೆ ಎಂದು ಹೊರಡುವುದು ದಡ್ಡತನವಾದೀತು. ಪ್ರಕೃತಿಯನ್ನು ನಮಗೆ ಎಷ್ಟು ಬೇಕೋ ಅಷ್ಟು ಅರ್ಥ ಮಾಡಿಕೊಂಡು ಸಂತೋಷ ಪಡುವುದು ಓಳ್ಳೆಯದು"