Kuppali Venkatappa Puttappa widely known by the pen name Kuvempu was a Kannada writer and poet, widely regarded as the greatest poet of 20th century Kannada literature. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He has penned the Karnataka State anthem Jaya Bharata Jananiya Tanujate.
He has written several Poems, stories and plays. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm.
He has received several awards for his works in the field of literature such as, Jnanpith Award, Sahitya Akademi Award , Pampa Award , Karnataka Ratna. He has also received The Padma Bhushan, the third highest civilian award in the Republic of India and Padma Vibhushan, the second highest civilian award in the Republic of India. He is the second among Kannada poets to be revered as Rashtrakavi
His son K P Poornachandra Tejaswi was a famous writer as well.
ಜೀವನದಲ್ಲಿ ಅತ್ಯಂತ ಬೇಸರವಾದಾಗ, ಪರಿಸರದ ಮಧ್ಯೆ ಸಮಯ ಕಳೆಯಬೇಕು, ಇಲ್ಲಾ ಅಂದ್ರೆ ಈ ಪುಸ್ತಕವನ್ನು ಹಿಡಿದು ಕೂತರೆ ಸಾಕು. ಎಲ್ಲವೂ ನಿರಾಳ ಎನ್ನುವ ಭಾವ ಕಾಡುತ್ತದೆ.
ಮಲೆನಾಡಿನ ಚಿತ್ರಗಳು ಹೆಸರಿಗೆ ತಕ್ಕ ಪುಸ್ತಕ, ಪುಸ್ತಕಕ್ಕೆ ತಕ್ಕ ಬರವಣಿಗೆ, ಬರವಣಿಗೆಗೆ ತಕ್ಕ ಕವಿ, ಕವಿಗೆ ತಕ್ಕ ಜೀವನ ಶೈಲಿ ಅಬ್ಬಾ! ಹೇಳ್ತಾ ಹೋದ್ರೆ ಒಂದಾ ಎರಡಾ?? ಪ್ರತಿಯೊಂದು ಪುಸ್ತಕ ಓದುವ ನಾವು, ಮುನ್ನುಡಿಯನ್ನು ದೀರ್ಘವಾಗಿ ಓದಿ, ಅರ್ಥೈಸಿಕೊಳ್ಳವ ಗೋಜಿಗೆ ಹೋಗುವುದಿಲ್ಲ. ಆದರೆ ಈ ಪುಸ್ತಕವು ನನಗೆ ಮುನ್ನುಡಿ ಮಹತ್ವವನ್ನು ಸಾರುತ್ತದೆ. ಮುನ್ನುಡಿ ನನಗೆ ಅತ್ಯಂತ ಪ್ರಿಯವಾದ ಭಾಗ. ಕುವೆಂಪು ಅವರು ಸಾಮಾನ್ಯ ವ್ಯಕ್ತಿಗೆ ಹಾಗೂ ಕಲಾತ್ಮಕ ವ್ಯಕ್ತಿಗೆ ಇರುವ ವ್ಯತ್ಯಾಸವನ್ನು ಅತ್ಯಂತ ಪ್ರಿಯವಾಗಿ ಹೇಳಿದ್ದಾರೆ. ಜೀವನಕ್ಕೆ passion ಎಷ್ಟು ಮುಖ್ಯ ಅಂತ ಅನ್ನಿಸುತ್ತದೆ. ಪ್ರತಿಯೊಂದು ಪ್ರಬಂಧವೂ ಅರ್ಥಪೂರ್ಣವಾಗಿ ಹಾಗೂ ಕಲಾತ್ಮಕವಾಗಿ ಬರೆದಿದ್ದಾರೆ. ಅಜ್ಜನ ಅಭ್ಯಂಜನ ಓದಿ, ನನ್ನ ಅಜ್ಜ ಯಾಕೆ ಯಾವಾಗಲೂ ಬಿಸಿ ಬಿಸಿ ನೀರು ಬೇಕೆಂದು ಸಿಡಿಮಿಡಿ ಮಾಡುವರೆಂದ; ಕಾಡಿನಲ್ಲಿ ಒಂದಿರುಳು ಓದಿದ ಮೇಲೆ ಕುವೆಂಪು ಅವರ ಬರವಣಿಗೆ ನಾ ಕಲಿತ ವಿಷ್ಣು ಸಹಸ್ರನಾಮ ತರದ ಸ್ಪಷ್ಟವಾಗಿದೆ ಎಂದು; ಅಪ್ಪಣ್ಣನ ರೇಶ್ಮೆ ಕಾಯಿಲೆ ಓದಿ ಭಾವುಕಳಾಗಿ, ಕತೆಗಾರ ಮಂಜಣ್ಣ ಓದಿ ವಿಸ್ಮಯವಾಗಿ, ಕೊನೆಗೆ ರಾಮರಾವಣರ ಯುದ್ಧ ಓದಿ ಬಿಕ್ಕಿ ಬಿಕ್ಕಿ ನಕ್ಕು ಹೊಟ್ಟೆ ತುಂಬಾ ಹುಣ್ಣಾಗಿ ಮಲಗಿದೆ.
ನನ್ನಿಷ್ಟದ ಭಾಗ: ಮುನ್ನುಡಿ. ನನ್ನಿಷ್ಟದ ಸಾಲು: ಸಾಮಾನ್ಯ ವ್ಯಕ್ತಿಗೆ ಕವಿಶೈಲ ಒಂದು ಕಾಡು, ಆದರೆ ಒಬ್ಬ ಕಲೆಗಾರನಿಗೆ ಅದು ಸಗ್ಗವೀಡು.
ಒಟ್ಟಾರೆಯಾಗಿ ಈ ಪುಸ್ತಕ ನನಗೆ ಅತ್ಯಂತ ಪ್ರಿಯವಾಗಿ ಮೈಮನ ಸೆಳೆದು ಆತ್ಮ ತೃಪ್ತಿ ನೀಡಿತು.
ನೀವು ಒಮ್ಮೆ ಕೊಂಡು ಓದಿ. ಮಲೆನಾಡಿಗೆ ಕೂತಲ್ಲೇ ಹೋಗಿ ಬರುವಿರಿ
ಕೆಲವು ತಿಂಗಳ ಹಿಂದೆ ನಾನು ನನ್ನ ಗೆಳೆಯರೊಂದಿಗೆ ಬೇಲೂರಿನಿಂದ ತೀರ್ಥಹಳ್ಳಿ ಮಾರ್ಗವಾಗಿ ಮಂಗಳೂರಿಗೆ ಹಿಂತಿರುಗುವಾಗ,"ಓ ಕುವೆಂಪು ರವರ ಜನ್ಮಸ್ಥಳ ಇಲ್ಲೇ ಕುಪ್ಪಳಿ ಯಲ್ಲಿ ಅಲ್ಲವೇ,ಅಲ್ಲಿ ಕುವೆಂಪು ರವರ ಮನೆ ಒಂದು ಪ್ರವಾಸಿತಾಣವಲ್ಲವೇ,ಅಲ್ಲಿಗೆ ಒಮ್ಮೆ ಭೇಟಿ ನೀಡಿದರೆ ಹೇಗೆ" ಎಂದು ಯೋಚಿಸಿ ಎಲ್ಲರನ್ನೂ ಒಪ್ಪಿಸಿ, ಗೂಗ್ಲ್ ಮಾಪ್ಸ್ ಮೂಲಕ ಹೇಗಾದರೂ ಹುಡುಕಿ "ಕವಿ ಮನೆ" ಮುಂದೆ ಬಂದು ನಿಂತೆವು..
ಅಂದು ಅಲ್ಲಿ ನಾ ಕಂಡ ದೃಶ್ಯಾವಳಿಗಳು ಇಂದಿಗೂ ನನ್ನ ಕಣ್ಣ ಮುಂದಿದೆ.. ಅಲ್ಲಿನ ಸುತ್ತಮುತ್ತಲಿನ ಪರಿಸರವನ್ನು ನಾನು ಆಗಲೇ ಅವರ "ಮಲೆಗಳಲ್ಲಿ ಮದುಮಗಳು" "ಕಾನೂರು ಹೆಗ್ಗಡತಿ" ಮಹಾಕಾವ್ಯಗಳಲ್ಲಿ ಓದಿದ್ದೆ,ಪುಸ್ತಕದ ಬರವಣಿಗೆಯಲ್ಲಿ ಕಂಡ ಆ ಜಗತ್ತನ್ನು ಕಣ್ಣಾರೆ ಕಂಡದ್ದು ಹಾಗೂ ಕವಿಮನೆ, ಕವಿಮನೆಯೊಳಗಿನ ಇತಿಹಾಸ:ಅಲ್ಲಿದ್ದ ಛಾಯಾಚಿತ್ರಗಳು,ಪುರಾತನ ಜೀವನಶೈಲಿಯ ಉಪಕರಣಗಳು,ಪುಸ್ತಕ ಭಂಡಾರ, ಉಡುಗೆ ಗಳು ಹಾಗೂ ಹೊರಗಿನ ಗುಡ್ಡದ ಮೇಲಿದ್ದ ಕವಿಶೈಲ ಒಂದು ಮರೆಯಲಾರದ ಅನುಭವವನ್ನು ತರಿಸಿತು..
ನಾನು ಆವಾಗ ಈ ಕೃತಿಯನ್ನು ಓದಿರಲ್ಲಿಲ್ಲ,.. ಆ ಪರಿಸರವನ್ನು ಎಲ್ಲ ಸುತ್ತಿದ ಮೇಲೆ ಈ ಪುಸ್ತಕವನ್ನು ಓದಿದ್ದು ಒಂದು ರೀತಿಯಲ್ಲಿ ಒಳ್ಳೆದಾಯಿತು ಎನ್ನಬಹುದು,ಓದಿ ಮುಗಿಸಿದ ಮರುಕ್ಷಣವೇ ಆ ಸುಂದರವನಕ್ಕೆ ಮತ್ತೊಮ್ಮೆ ಹಿಂತಿರುಗಿ ಅಲ್ಲಿನ ಜಗತ್ತಿನಲ್ಲಿ ಮತ್ತೊಮ್ಮೆ ಬೆರೆಯಬೇಕೇನಿಸುತ್ತಿದೆ...🏞️
Beautiful and Poetic !! This is a collection of few stories of lives of people around the Authors native place on the gateway of hills of the Western Ghat or in native tongue Kannada we call as Malenadu. The Authors descriptions of Malenadu and inhabitants of these hill regions are so mesmerizing that you will crave to live in these places forever. The author's style of writing very captivating like he is reading you the bed time stories sitting beside you.
Humbled would be the right word to describe how this book made me feel. Kuvempu is such a master of his art, and I cannot help but simply submit to his brilliance. Every story is suffused with magical descriptions and superlative writing. I found myself re-reading passages in awe.
ಕುವೆಂಪು ಕುರಿತು ನಾನೇನು ಹೇಳಲಿ? ಮನಸ್ಸಿಗೆ ಆನಂದ ನೀಡುವ ಕಥೆಗಳು. ಮಲೆನಾಡಿನ ಅಂದವನ್ನು ಎಷ್ಟು ಸೊಗಸಾಗಿ ಬಣ್ಣಿಸಿದ್ದಾರೆ. ತಪ್ಪದೆ ಓದಿ..
ಪ್ರತಿಯೊಂದು ಕಥೆಯು ಉತ್ತಮ ಅನುಭವವಾಗಿದೆ, ನಿಮ್ಮ ಜೀವನದಲ್ಲಿ ಪ್ರತಿ ಕಥೆಯ ನಾಯಕನೂ ನಿಮಗೆ ಸಿಗಬಹುದು ಅಥವಾ ಇಲ್ಲದಿರಬಹುದು, ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರು ಕುವೆಂಪು ಅವರ ಮಗ ಎಂದು ನೀವು ನೋಡಬಹುದು, ಅಪ್ಪನಂತೆ ಮಗ (each story is a great experience... You May or may not Find each Story's Protagonist in Your Life...)
ಪಟ್ಟಣದ ಜೀವನ ಬೇಸರವಾದಾಗ ಮಲೆನಾಡಿನ ಪ್ರಶಾಂತ ಹಳ್ಳಿಗೆ ಕರೆದುಕೊಂಡು ಹೋಗುವ ಪುಟ್ಟ ಪುಟ್ಟ ಕಥೆಗಳು, ಪಶ್ಚಿಮ ಘಟ್ಟಗಳ ಕಾಡನ್ನು, ಮಲೆನಾಡಿನ ಜೀವನ ಶೈಲಿಯನ್ನು ಪರಿಚಯಿಸುವ ಸುಂದರವಾದ ಬರವಣಿಗೆ, ಶತಮಾನವಾದರೂ ಪ್ರಸ್ತುತವಾಗಿರುವ ಕುವೆಂಪುರವರ ಅದ್ಭುತ ಚಿಂತನೆಗಳು, 🦚✍️
ನಾನು ಓದಿದ ಕುವೆಂಪು ರವರ ಮೊದಲ ಪುಸ್ತಕ. ಕುಪ್ಪಳ್ಳಿಯಲ್ಲಿರುವ ಕವಿ ಮನೆಗೆ ಹೋಗಿದ್ದಾಗ ಈ ಪುಸ್ತಕವನ್ನು ಖರೀದಿಸಿದೆವು. ಕುವೆಂಪುರವರ ಬಾಲ್ಯದ ಕಥೆಗಳು ನನಗೆ ಬಹಳ ಇಷ್ಟವಾಯಿತು. ಅದರಲ್ಲೂ ರಾಮ ರಾವಣರ ಯುದ್ಧ ನನ್ನ favourite ಅನ್ನಬಹುದು. ನಮ್ಮ ಮಲೆನಾಡಿನ ಚಿತ್ರಗಳನ್ನು ತುಂಬಾ ವಿವರವಾಗಿ ವರ್ಣಿಸಿದ್ದು, ಓದಲು ನನಗೆ ತುಂಬಾ ಸಮಯವಾಯಿತು.
ಮಲೆನಾಡಿನ ಚಿತ್ರಗಳು ಹೆಸರೆ ಹೇಳುವಂತೆ ಮಲೆನಾಡನ್ನು ಸೊಗಸಾಗಿ ಚಿತ್ರಿಸಿದ್ದಾರೆ ಕುವೆಂಪು. ಅವರ ಬರವಣಿಗೆ, ಪದ ಬಳಕೆ, ವರ್ಣನೆಗಳು ಉಳಿದೆಲ್ಲರ ಬರವಣಿಗೆಗಿಂತ ವಿಭಿನ್ನವಾದುದು. ಅಂದಿನ ಮಲೆನಾಡಿನ ಜೀವನ ಶೈಲಿ, ಮನುಷ್ಯನ ಯೋಚನಾ ಶೈಲಿ, ಮಲೆನಾಡಿನ ಸೊಬಗು, ದಟ್ಟ ಕಾಡು, ಮಳೆ, ಬೇಟೆ ಎಲ್ಲವೂ ನಗರ ಜೀವನಕ್ಕೆ ತದ್ವಿರುದ್ಧವಾದುದು. ಕುವೆಂಪುರವರ ಬಾಲ್ಯ ಜೀವನದಿಂದ ಹಿಡಿದು ತನ್ನ ಸುತ್ತ ಮುತ್ತಲಿನ ಘಟನೆಗಳನ್ನು, ಅನುಭಗಳನ್ನು ಚಿತ್ರಿಸಿದ್ದಾರೆ. ಬೇಟೆಯ ವಿಧಗಳು, ವಿಧಾನಗಳು, ಬಾಲ್ಯದ ಶಿಕ್ಷಣ, ಬಾಲ್ಯದ ಗೆಳೆಯರು, ಊರಿನ ಮುಗ್ಧ ಮನಸ್ಸಿನ ವಿಭಿನ್ನ ವ್ಯಕ್ತಿಗಳ ಸಾಧನೆಗಳನ್ನು ತುಸು ಹಾಸ್ಯ ಬೆರಸಿ ನಮ್ಮ ಮುಂದೆ ಇರಿಸಿದ್ದಾರೆ. ಇದು ಕುವೆಂಪುರವರ ಪ್ರಪಂಚ. ಮಲೆನಾಡನ್ನು ಕಣ್ಕಟ್ಟುವಂತೆ ವರ್ಣಿಸಿದ್ದಾರೆ. ಮೊದಲ ಪುಟದಿಂದ ಕೊನೆಯ ಪುಟದೊರೆಗೆ ಮಲೆನಾಡಿನಲ್ಲಿ ಕಳೆದು ಹೋಗುವುದಂತು ನಿಜ. ಒಂದು ಕವಿತೆ, ಹನ್ನೆರಡು ಸಣ್ಣ ಸಣ್ಣ ಕತೆಗಳಲ್ಲಿ ಎಲ್ಲವು ಇಷ್ಟವಾಗುವಂತವು..
ಮಲೆನಾಡಿನ ಚಿತ್ರಗಳು ಕುವೆಂಪುರವರ ಕವಿತ್ವ, ಮಲೆನಾಡು ಮತ್ತು ಕನ್ನಡ ಭಾಷೆ, ಈ ಮೂರರ ಸಮ್ಮಿಲನ. ಕುವೆಂಪು ಬರಹಕ್ಕೆ ಅವರೇ ಸಾಟಿ. ನನ್ನ ಅನಿಸಿಕೆಯ ಪ್ರಕಾರ ಮಲೆನಾಡಿನ ಸೌಂದರ್ಯವನ್ನು ಈ ಪರಿಯಾಗಿ ಬಣ್ಣಿಸುವ ಮತ್ತೊಬ್ಬ ಕವಿ ಇರಲಿಕ್ಕಿಲ್ಲ. ಕುವೆಂಪು ಎಂಥಹ ರಸಿಕ ಎಂಬುದು ಪುಸ್ತಕದಲ್ಲಿ ಬಿಂಬಿತವಾಗುತ್ತದೆ. ಅಂತೆಯೇ ಮಲೆನಾಡಿನ ಮಡಿಲಿನಲ್ಲಿ ಜನಿಸಿಲ್ಲದಿದ್ದರೆ ಕುವೆಂಪು ಕೂಡ ಒಬ್ಬ ಮಹಾಕವಿಯಾಗುತ್ತಿರಲಿಲ್ಲವೇನೋ. ಅದೇ ರೀತಿ ಈ ಪುಸ್ತಕ ಓದುತ್ತಾ ಕನ್ನಡ ಭಾಷೆಯ ಶ್ರೀಮಂತಿಕೆಯ ದರ್ಶನವಾಯಿತು ಮತ್ತು ನಮ್ಮ ಈಗಿನ ಭಾಷಾ ಮಟ್ಟದ ಬಗ್ಗೆ ನಾಚಿಕೆಯು ಕೂಡ. ಇನ್ನು ಲೇಖಕರು ಮಲೆನಾಡಿನ ವ್ಯಕ್ತಿ, ಸಂಸ್ಕೃತಿ ಹಾಗೂ ಪ್ರಕೃತಿಯ ಚಿತ್ತರವನ್ನು ಬರಹದ ಮುಖಾಂತರ ಉಣಬಡಿಸಿದ್ದಾರೆ. ಎಲ್ಲಿಯೂ ನಿಧಾನ ಗತಿಯಲ್ಲಿ ಸಾಗದೇ ಓದಿಸಿಕೊಂಡು ಹೋಗುವ ಪುಸ್ತಕವನ್ನು ಚಪ್ಪರಿಸಿ ಸವಿಯಬಹುದು. ಬೆಳಗಿನ ಮತ್ತು ಕತ್ತಲಿನ ದೃಶ್ಯಗಳನ್ನು ಅನೇಕ ರೀತಿಗಳಲ್ಲಿ ವರ್ಣಿಸಿರುವುದು ಮನೋಹರವಾಗಿದೆ. ನನಗೆ ಅತ್ಯಂತ ಪ್ರಿಯವಾದ ಪ್ರಬಂಧ "ಕಾಡಿನಲ್ಲಿ ಕಳೆದ ಒಂದಿರುಳು". ಕೊನೆಗೆ ಮತ್ತಷ್ಟು ಕುವೆಂಪುರವರ ಕಾದಂಬರಿ ಹಾಗೂ ಇನ್ನಿತರ ಬರಹಗಳನ್ನು ಓದಲು ಈ ಪುಸ್ತಕ ಪ್ರೇರೇಪಿಸಿದೆ.
“ಕೆಲವು ಕೃತಿಗಳನ್ನು ಓದಿದಾಗ ಜೀವದ ದೃಷ್ಟಿಕೋನವೇ ಬದಲಾಗುತ್ತದೆ, ಜೀವನದ ಹುಮ್ಮಸ್ಸು ಇಮ್ಮಡಿಯಾಗುತ್ತದೆ. ಈ ಕೃತಿ ಮುಗಿಸಿದಾಗ ಅನಿಸಿದ್ದು ಪರಿಸರ ಪ್ರಕೃತಿಯನ್ನು ಈ ರೀತಿಯಾಗೂ ನೋಡಬಹುದು ಮತ್ತು ನೋಡುವ ನೋಟವೆಲ್ಲವೂ ಮನೋಹರ ಸೌಂದರ್ಯದ ರಮಣೀಯ ದರ್ಶನವೇ ಎನಿಸುವುದರಲ್ಲಿ ಸಂದೇಹವಿಲ್ಲ.”
“ಕಾನೂರು ಹೆಗ್ಗಡಿತಿ ಮತ್ತು ಮಲೆಗಳಲ್ಲಿ ಮದುಮಗಳು ಓದಿದಾಗ ಇಡೀ ಪ್ರಕೃತಿಯ ಮಧ್ಯೆ ಮನುಷ್ಯ ಎಷ್ಟರವ ಎನಿಸುತ್ತದೆ. ಮಲೆನಾಡಿನ ಚಿತ್ರಗಳು ಇವೆರಡೂ ಮೇರು ಕೃತಿಗಳ ಚಿಕ್ಕ ತುಣುಕು ಎಂದರೆ ತಪ್ಪಾಗಲಾರದು. ಪ್ರಕೃತಿಯ ಮಧ್ಯೆ ಮನುಷ್ಯ ಮಿಂದು ಒಬ್ಬನಾಗಿಬಿಟ್ಟರೆ ವಿರಾಟ್ ದರ್ಶನ ಕ್ರಿಯೆಯಲ್ಲಿ ತೇಲಿ ತನ್ನದೇ ಪ್ರಪಂಚದಲ್ಲಿ ದಿವ್ಯ ಮೂರ್ತಿಯಾಗುತ್ತಾನೆ ಮತ್ತು ಸ್ಮೃತಿ ಪಟಲದ ಚಿತ್ರಗಳು ನೆನಪಿನ ಬಾಹುವಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ.”
“ಕೃತಿಯಲ್ಲಿ ಹಾಸ್ಯವಿದೆ, ನೆನಪುಗಳಿವೆ, ಬೇಟೆಗಾರನ ಮನಸ್ಥಿತಿ ಇದೆ, ಹಿರಿಯರ ಅಭ್ಯಂಜನದ ಕಾರ್ಯದ ಜೊತೆಗೆ ಜೀವನದ ನೆಮ್ಮದಿಯಿದೆ..! ಇನ್ನೂ ಅನೇಕ ಸಂದರ್ಭಗಳು ಮಲೆನಾಡಿನ ಸೊಬಗಲ್ಲಿ ಕಂಗೊಳಿಸಿವೆ.”
“ಕುವೆಂಪುವಿನ ಬರಹಕ್ಕೆ ಕುವೆಂಪು ಬೆಳೆದ ವಾತಾವರಣವೇ ಸಾಕ್ಷಿ ಎನ್ನುವುದು ಇದರಲ್ಲಿ ಪ್ರಸ್ತುತವಿದೆ ಮತ್ತು ಎಲ್ಲರೂ ಓದಬಹುದಾದ ಓದಲೇಬೇಕಾದ ಕೃತಿ.”
ಮಲೆನಾಡು ಎಂದಿಗೂ ಸೋಜಿಗವೇ ! ಸುತ್ತಲೂ ಪಸರಿಸಿರುವ ಹಸಿರು ಸಿರಿ ವನ, ಚಂದದ ಜೀವನ ಶೈಲಿ, ಆಹಾರ ಪದ್ಧತಿ,ಕೃಷಿ.. ಹೀಗೆ ಹಲವು ಸಂಗತಿಗಳು ಮಲೆನಾಡನ್ನು ಚಂದಗಾಣಿಸುತ್ತದೆ. ಅಲ್ಲಿನ ಸೊಬಗನ್ನು ಕೆಲ ಕಾಲ ಮಲೆನಾಡಲ್ಲಿ ವಿಹರಿಸಿಯೇ ಅನುಭವಿಸಬೇಕು.
ಮಾನ್ಯ ಕುವೆಂಪು ಅವರ ‘ಮಲೆನಾಡಿನ ಚಿತ್ರಗಳು’, ಮಲೆನಾಡಿನ ಜೀವನವನ್ನು ಪರಿಚಯಿಸುವ ಕೈಪಿಡಿ ಎಂದರೆ ತಪ್ಪಾಗಲಾರದು. ಸನ್ಮಾನ್ಯರು ಮೈಸೂರಿಗೆ ಬಂದು ನೆಲೆಸಿದ ಮೇಲೆ ಕಾಡಿದ ಮಲೆನಾಡಿನ ನೆನಪುಗಳನ್ನೂ,ದೃಶ್ಯಗಳನ್ನೂ,ವ್ಯಕ್ತಿಗಳನ್ನೂ,ಸನ್ನಿವೇಶಗಳನ್ನೂ ನೆನೆದು ತನ್ನ ಆಪ್ತರಿಗೆ ಹೇಳುತ್ತಾ ಸಂಭ್ರಮಿಸುತ್ತಾರೆ. ಅದರ ಪರಿಣಾಮವೇ ಈ ‘ಮಲೆನಾಡಿನ ಚಿತ್ರಗಳು’. . ೧೦೮ ಪುಟಗಳ ಈ ಹೊತ್ತಿಗೆಯಲ್ಲಿ ಒಂದು ಕವಿತೆಯ ಜೊತೆ ೧೩ ಸಣ್ಣ ಬರಹಗಳಿವೆ. ಮಲೆನಾಡಿನ ಪ್ರಕೃತಿ ಸೌಂದರ್ಯ, ಜೇನು ಹಿಡಿಯುವುದು , ಬೇಟೆಯ ರೀತಿ- ರಿವಾಜುಗಳು, ಮನೆ ಪಾಠ, ಅಭ್ಯಂಜನ ಸಂಬ್ರಮ, ಭೂತದ ಮೇಲಿನ ನಂಬಿಕೆ, ದನ ಕಾಯುವವರ ಜೀವನ - ಎಲ್ಲವನ್ನೂ ಲೇಖಕರು ಸೊಗಸಾಗಿ ವರ್ಣಿಸಿದ್ದಾರೆ. . ಬೆಟ್ಟ ಗುಡ್ಡಗಳು, ಬೆಳಗು-ಬೈಗುಗಳು,ಕಾಡು - ಹಳ್ಳಿಗಳು ಕುವೆಂಪು ಅವರ ಲೇಖನಿಯಲ್ಲಿ ಚಿತ್ರಿತವಾಗಿದೆಯೆಂದರೆ, ಅದನ್ನು ಓದಿಯೇ ಕಣ್ತುಂಬಿಕೊಳ್ಳಬಹುದು ! . ಕಾರ್ತಿಕ್ ಕೃಷ್ಣ 1/11/2021
ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕವನ್ನು ಓದಿದಾಗಲೆಲ್ಲಾ ಯಾವಾಗಲೂ ಆಶ್ಚರ್ಯವಾಗುತ್ತಿತ್ತು, ಪ್ರಕೃತಿಯ ಬಗ್ಗೆ ಹೇಗೆ ಇಷ್ಟು ಸುಂದರವಾಗಿ ವಿವರಿಸುತಾರೆ ಎಂದು. ಆದರೆ ಶ್ರೀ ಕುವೆಂಪು ಅವರ "ಮಲೆನಾಡಿನ ಚಿತ್ರಗಳು" ಪುಸ್ತಕವನ್ನು ಓದಿದ ನಂತರ ತೇಜಸ್ವಿ ಅವರ ಬರವಣಿಗೆಯ ಮೂಲ ಸ್ಫೂರ್ತಿ ತಿಳಿಯಿತು.
ಈ ಪುಸ್ತಕವು ಕುವೆಂಪು ಅವರ ಬಾಲ್ಯದಲ್ಲಿ ನಡೆದ ಸಂಗತಿಗಳ ಸಣ್ಣ ಕಥೆಗಳ ಸಂಕಲನ.ಈ ಪುಸ್ತಕದ ಸೌಂದರ್ಯವು ಗದ್ಯವನ್ನು ನಿರೂಪಿಸುವ ಕಾವ್ಯಾತ್ಮಕ ವಿಧಾನದ ಬಗ್ಗೆ. ಇದು 11 ಸಣ್ಣ ಕಥೆಗಳನ್ನು ಒಳಗೊಂಡಿದೆ ಮತ್ತು ಪ್ರತಿ ಕಥೆಗಳು ತನ್ನದೇ ಆದ ಸೌಂದರ್ಯವನ್ನು ಹೊಂದಿವೆ.
ಪುಸ್ತಕವು ಮಾಲೆನಾಡಿನ ಮಾಂತ್ರಿಕ ಜಗತ್ತಿನ ದರ್ಶನ ಮಾಡಿಸುತದೆ ಹಾಗು ಅದರ ನೈಸರ್ಗಿಕ ಸೌಂದರ್ಯಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.
ಭಾವಪರವಶವಾಗುವಂತಹ ಬರವಣಿಗೆ ಹಾಗೂ ಸೂಕ್ಷ್ಮಸಂವೇದನಾ ವಿಷಯಗಳ ಮೂಲಕ ಮನುಷ್ಯ ಪ್ರಕೃತಿಯ ಒಂದು ಭಾಗ ಎಂಬುದನ್ನು ಮನವರಿಕೆ ಮಾಡಿಸುತ್ತಾರೆ.
ಕುವೆಂಪುರವರು ಮೈಸೂರಿನಲ್ಲಿದ್ದಾಗ ಬರೆದ ಪುಸ್ತಕವಿದು. ಹಾಗಾಗಿ ಒಂದು ಕಥೆಯಲ್ಲಿ ಅವರ ಮೈಸೂರಿನ ಸ್ನೇಹಿತರು ಬಂದು ಹೋಗುತ್ತಾರೆ. ಮತ್ತು ಕುವೆಂಪುರವರು ತುಂಬಾ ಉಲ್ಲಾಸದಲ್ಲಿದ್ದಾಗ ಬರೆದ ಸಂಕಲನವಿರಬೇಕು ಇದು. ಯಾಕೆಂದರೆ ಮಲೆನಾಡಿನ ತಮ್ಮ ಬಾಲ್ಯ ಮತ್ತು ಇತರ ವಯೋಮಾನಗಳ ತುಂಬ ಮೋಜಿನ ಘಟನೆಗಳನ್ನು ಸೆರೆ ಹಿಡಿದಿದ್ದಾರೆ. ಮಲೆನಾಡು, ಕುವೆಂಪುರವರ ಬಾಲ್ಯ, ಸ್ನೇಹಿತರು, ಸಹೋದರರು, ಅವರ ಅಜ್ಜ, ಭೇಟೆ, ಮನೆಯ ಗುರುಗಳು ಹೀಗೆ ಅನೇಕ ಸಂಗತಿಗಳನ್ನು ತುಂಬ ಉತ್ಸಾಹದಿಂದ ನಮೂದಿಸಿದ್ದಾರೆ.
ಈ ಪುಸ್ತಕದ ಸುಮಾರು ಆರು ಪ್ರತಿಗಳು ನನ್ನ ಬಳಿ ಇವೆ. ಕಾರಣ ನನ್ನ ಹುಟ್ಟುಹಬ್ಬಕ್ಕೆ ಪುಸ್ತಕಗಳನ್ನು ಉಡುಗೊರೆ ಕೊಡುವ ಹವ್ಯಾಸ ಹೊಂದಿರುವ ನನ್ನ ಸಂಬಂಧಿಗಳು ತಿರುಗಿಸಿ ಮುರುಗಿಸಿ ಬಹು ಬಾರಿ ಒಂದೇ ಪುಸ್ತಕವನ್ನು ನನಗೆ ಉಡುಗೊರೆ ನೀಡಿದ್ದು !
It is a collection of early-stage stories of Kuvempu. As the caption states that, it pictures 60's and 70's environment of Malenadu (Sahyadri). The book comprises senses of humour, naughtiness, innocence, brave-courage stories (11 stories). This book will take the reader to their early childhood and unlock the memories.
Such beautiful prose, almost like some ethereal poetry. Kannada has never been treated better than by Kuvempu’s pen. He paints such an exquisite picture of Malenadu, you’re instantly transferred to those forests, hills and streams, even when you’re thick in the middle of city traffic, on its rain-drenched mucky roads!
ಕುವೆಂಪುರವರ ಈ ಪುಸ್ತಕ ನಿಜಕ್ಕು ನಮ್ಮನು ಮಲೆನಾಡಿಗೆ ಕರೆದೊಯ್ಯುವುದು. ಮಲೆನಾಡಿನ ಸೌಂದರ್ಯವನ್ನು ಪದಗಳಲಿ ವರ್ಣಿಸುವಾಗ, ಮಲೆನಾಡಿನ ಜನ ಎಷ್ಟು ಪುಣ್ಯವಂತರು, ಎಂದೆನಿಸದೆ ಇರುವುದು. ಕುವೆಂಪುರವರ ಭಾಳ್ಯದ ಕಥೆ ಓದುತ್ತ ನಾವು ಅವರಲ್ಲಿ ಒಬ್ಬರಾಗುವುದು ಖಂಡಿತ. ಪುಸ್ತಕ ಓದಿ ಮುಗಿದರು ಮಲೆನಾಡಿನ ಗುಂಗು ನಿಮ್ಮನು ಬಿಡುವುದಿಲ್ಲ...
If your looking for a quick trip to malenadu...read this book..
ಮಲೆನಾಡಿನ ಮಣ್ಣಿನ ಅದ್ಭುತ ಕಥೆಗಳ ಸಂಗ್ರಹ. ಪ್ರಕೃತಿ ಮಾತೆಯ ಮಡಿಲಲ್ಲಿ ಅಚ್ಛಾದಿತ ಮಲೆಗಳು , ಕಣಿವೆಗಳು , ಗ್ರಾಮಗಳು ಓದುವವರ ಮನದಲ್ಲಿ ಕಥೆಗಳನ್ನು ಪೋಣಿಸುತ್ತವೆ. ಮಲೆನಾಡು ಸ್ವರ್ಗ ಎಂಬಂತೆ ಬಿಂಬಿಸಿದ ಪುಸ್ತಕ, ಉತ್ತಮ ಓದು 😍