Jump to ratings and reviews
Rate this book

ಸನ್ಯಾಸಿ ಮತ್ತು ಇತರೆ ಕತೆಗಳು | Sanyasi Mattu Itara Kathegalu

Rate this book

Paperback

24 people are currently reading
542 people want to read

About the author

Kuvempu

65 books559 followers
Kuppali Venkatappa Puttappa widely known by the pen name Kuvempu was a Kannada writer and poet, widely regarded as the greatest poet of 20th century Kannada literature. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He has penned the Karnataka State anthem Jaya Bharata Jananiya Tanujate.

He has written several Poems, stories and plays. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm.

He has received several awards for his works in the field of literature such as, Jnanpith Award, Sahitya Akademi Award , Pampa Award , Karnataka Ratna. He has also received The Padma Bhushan, the third highest civilian award in the Republic of India and Padma Vibhushan, the second highest civilian award in the Republic of India. He is the second among Kannada poets to be revered as Rashtrakavi

His son K P Poornachandra Tejaswi was a famous writer as well.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
64 (42%)
4 stars
53 (34%)
3 stars
23 (15%)
2 stars
7 (4%)
1 star
5 (3%)
Displaying 1 - 13 of 13 reviews
Profile Image for mahesh.
271 reviews26 followers
July 24, 2022
After a prolonged gap, I have picked this work from literary giant "Kuvempu". I couldn't read any of his works after "Kannura Hegadati" because he hasn't written more than 2 novels. Every time I go to the Kuvempu novel corner in a bookshop, Wishing he has written a few more novels so I could feel the disguised feelings journeying through his words to our sealed inner sanctum. Found this short book after going through all books for nearly an hour in Sapna.

This is not a big novel, But it's sweetly tangled pearls of stories within 78 pages. The stories range from spirituality to superstition through intricate characters and settings. Each story is impressive in its way of digging deep into unsettled human questions, prevalent superstitions, and the confusing web of life through these stories. The magnificence of Kuvempu's words always reaches in the way he fuses the intensity of the situation with a profoundness of nature to make us feel the weight of it. Kuvempu is the only person among all the literary giants, who can shape sensuality, darkness, bliss, and despair in the spiritual framework. it's always a delight to read Kuvempu's works. Finished reading it within 2 hours, Great way to end a weekend with a memorable book by Kuvempu.
Profile Image for Madhu B.
105 reviews10 followers
April 7, 2023
ಕುವೆಂಪು ರವರ ಪದತಲಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರ. ಇವರ ಈ ಸನ್ಯಾಸಿ ಮತ್ತು ಇತರಕಥೆಗಳು ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸುವಷ್ಟು ದೊಡ್ಡವ ನಾನಲ್ಲ ಅನ್ನಿಸುತ್ತೆ..ಇದರಲ್ಲಿ ಬರುವ ಕತೆಗಳಲ್ಲಿ ಹಾಸ್ಯವಿದೆ, ಭಯವಿದೆ, ಕರುಣೆಯಿದೆ, ಪ್ರೀತಿಯಿದೆ, ದುಃಖವಿದೆ.
ಕೆಲವೊಂದು ಸಾಲು ಗಮನಿಸಿ..ಒಡೆದ ಹಡಗಿಗೆ ದಡವೇನು ಕಡಲೇನು ?. ನನಗೀಗ ಹಾಳಿನ ದುಮ್ಮಾನವೇ ಬಾಳಿನ ಸಂಮಾನಕ್ಕಿಂತಲೂ ಹಿತಕರ...
ಬೈಗಾಗುತ್ತಿತ್ತು. ಕಾರ್ಮುಗಿಲಿನ ಕರ್ವೆಳಗಿನೊಡನೆ ಸಂಗಮವಾಗುತ್ತಿದ್ದ ಕಗ್ಗತ್ತಲೆಯು ಮುಂಗಪ್ಪು ಮಲೆನಾಡಿನ ಬೆಟ್ಟಗಳ ಮೇಲೆ ಮೆಲ್ಲಮೆಲ್ಲನೆ ಕವಿಯುತಿತ್ತು...
ನಿಮ್ಮನ್ನು ಪಡೆದ ಕರುನಾಡು ಧನ್ಯ .....
181 reviews23 followers
February 18, 2022
#ಅಕ್ಷರವಿಹಾರ_೨೦೨೨

ಕೃತಿ: ಸನ್ಯಾಸಿ ಮತ್ತು ಇತರ ಕಥೆಗಳು

ಲೇಖಕರು: ಕುವೆಂಪು

ಪ್ರಕಾಶಕರು: ಉದಯರವಿ ಪ್ರಕಾಶನ ಮೈಸೂರು


ಇದು ನಾನೋದಿದ ಕುವೆಂಪು ಅವರ ಎರಡನೆಯ ಕಥಾಸಂಕಲನ. ಇಲ್ಲಿ ಒಟ್ಟು ಒಂಬತ್ತು ಕಥೆಗಳಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಕಥಾಸಂಕಲನ ನನಗೆ ಅಷ್ಟು ಹಿಡಿಸಲಿಲ್ಲ. ಬಹುಶಃ ಕುವೆಂಪು ಅವರ ಕಾದಂಬರಿಗಳಲ್ಲಿ ಬರುವ ವಿವರಗಳನ್ನು ಓದಿದ ಮೇಲೆ ಇದು ಸ್ವಲ್ಪ ಸಪ್ಪೆ ಅನಿಸಿತು. ಇವುಗಳು ಸಣ್ಣ ಕಥೆಗಳಾದ್ದರಿಂದ ಲೇಖಕರಿಗೂ ಒಂದು ಮಿತಿಯೊಳಗೆ ಕಥೆಗಳನ್ನು ಮುಗಿಸ ಬೇಕಾದ ಅನಿವಾರ್ಯತೆ ಇದ್ದಿರಬಹುದು ಮತ್ತು ಬೃಹತ್ ಕಾದಂಬರಿಗಳ ಕುವೆಂಪು ಅವರನ್ನು ಇಲ್ಲಿ ಕಾಣುವ ನನ್ನ ಹಂಬಲವೂ ನಿರಾಸೆಯನ್ನುಂಟು ಮಾಡಿರಬಹುದು……


#ಸನ್ಯಾಸಿ

ಸಂಸಾರವನ್ನು ತ್ಯಜಿಸಿ ಸನ್ಯಾಸವನ್ನು ಸ್ವೀಕರಿಸಿದ ಯೋಗಿಯನ್ನು ಮರಳಿ ಸಂಸಾರ ಬಂಧನಕ್ಕೆ ಒಳಪಡಿಸಿದ ಮಡದಿಯ ಕಥೆ. ಗಂಗೆ ಯಮುನೆಯರ ಸಂಗಮದ ತಟದಲ್ಲಿ ನಡೆಯುವ ಕಥೆಯಲ್ಲಿ ಯೋಗಿ ಮತ್ತು ಅವನ ಮಡದಿಯ ಸಂಭಾಷಣೆ ಇಷ್ಟವಾಯಿತು. ಕಥೆಯ ಕೊನೆಯಲ್ಲಿ ಸನ್ಯಾಸವನ್ನು ತ್ಯಜಿಸಿ ಮರಳಿ ಗೃಹಸ್ಥಾಶ್ರಮ ಪ್ರವೇಶಿಸದ ಗಂಡನನ್ನು ಅಪ್ಪಿಕೊಂಡು ಈಗ ನಿಜವಾಗಲೂ ನೀವು ಸನ್ಯಾಸಿಯಾದಿರಿ ಎಂದು ಹೇಳುವುದು ಬಹಳ ಅರ್ಥಪೂರ್ಣವಾಗಿ ಕಂಡಿತು…..


#ಆರಾಣೆ ಮೂರು ಕಾಸು

ಜಹಗೀರುದಾರನಾಗಿದ್ದ ಹೈದರಾಬಾದಿನ ನವಾಬನು ದಿವಾಳಿಯಾದ ಕಥೆ. ಸಹಾಯ ಹಸ್ತವನ್ನು ಚಾಚುವಾಗ ಪ್ರತಿಫಲಾಪೇಕ್ಷೆ ಇರಬಾರದು ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಬಹುತೇಕ ಸಹಾಯ ಮಾಡುವವರ ಮನಸ್ಸು ಯಾವತ್ತೂ ತನ್ನ ಅಹಂಕಾರವನ್ನು ಅಥವಾ ತಾನು ಸಹಾಯ ಮಾಡಿದೆ ಎಂಬ ಹೆಮ್ಮೆಯನ್ನು ಅನುಭವಿಸುತ್ತದೆ. ಆದರೂ ತನ್ನ ಸ್ವಾರ್ಥಕ್ಕೆ ಮಾಡಿದ ಸಹಾಯ ಕೂಡ ಪ್ರತಿಫಲವನ್ನು ನೀಡುತ್ತದೆ‌. ಪೂರ್ತಿಯಾಗಿ ಅಲ್ಲದಿದ್ದರೂ ತಮ್ಮ ತಮ್ಮ ಯೋಗ್ಯತೆಗೆ ತಕ್ಕಷ್ಟು ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೆ.


#ಶ್ರೀಮನ್ಮೂಕವಾಗಿತ್ತು

ಮಕ್ಕಳ ಮತ್ತು ಹೆತ್ತವರ ನಡುವಿನ ಸಂಬಂಧ ಅತ್ಯಂತ ಗಾಢವಾದುದು. ಅದು ಮನುಷ್ಯ ಜೀವಿಯಲ್ಲದೇ ಪ್ರಾಣಿಗಳಲ್ಲಿ ಸಹ ಅಷ್ಟೇ ನಿಜ. ಮರಣಶಯ್ಯೆಯಲ್ಲಿ ಮಲಗಿರುವ ತನ್ನ ಕರುವೊಂದನ್ನು ತಾಯಿ ಮತ್ತೆ ಸೇರಿಕೊಂಡು ಅನುಭವಿಸುವ ಮೂಕ ಸಂತೃಪ್ತಿಯ ಕಥೆ.


ನಮಸ್ಕಾರ,

ಅಮಿತ್ ಕಾಮತ್
32 reviews1 follower
December 28, 2022
೧೯೩೬ರಲ್ಲಿ ಪ್ರಕಟವಾದ ೯ ಕಥೆಗಳ ಪುಟ್ಟ ಸಂಕಲನ. ಕುವೆಂಪು ಅವರ ಭಾಷೆಯಲ್ಲಿ ಎಲ್ಲಾ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ಹೃದಯಸ್ಪರ್ಶಿ. ನನಗೆ ಇಷ್ಟವಾದ ಕಥೆಗಳೆಂದರೆ ಸನ್ಯಾಸಿ, ಈಶ್ವರನೂ ನಕ್ಕಿರ ಬೇಕು ಮತ್ತು ಯಾರೂ ಅರಿಯದ ವೀರ.
Profile Image for Karthik.
61 reviews22 followers
January 14, 2022
ಸನ್ಯಾಸಿ ಮತ್ತು ಇತರ ಕಥೆಗಳು (1936)

ಕುವೆಂಪು ವಿರಚಿತ ಈ ಕೃತಿ, ೯ ಕಥೆಗಳ ಸಂಕಲನ. ಮಲೆನಾಡಿನ ಮಳೆಯಿಂದ ಹಿಡಿದು, ಕರ್ನೂಲಿನ ನವಾಬನ ವರೆಗೂ ವಿಶಿಷ್ಟವಾದ ಕಥೆಗಳು ಈ ಕಥಾ ಸಂಕಲದಲ್ಲಿ ಅಡಕವಾಗಿದೆ. ಒಂದೆರಡು ದೆವ್ವ(?) ದ ಕಥೆಯೂ ಕಾಣಿಸಿ ಓದುಗನಿಗೆ ವೈವಿಧ್ಯದ ಓದನ್ನು ನೀಡುತ್ತದೆ.
ಕುವೆಂಪು ಅವರ ಇತರ ಬರೆವಣಿಗೆಗಳಂತೆ ಇಲ್ಲಿಯೂ ಪ್ರಕೃತಿಯ ವಿವರಣೆ ಮನಸ್ಸಿಗೆ ನಾಟುವಂತಿದೆ.

ಸನ್ಯಾಸಿ

ವೈರಾಗ್ಯ ಸಹಜ. ಅಂತೆಯೇ ಸಂಸಾರಿಯಾದ ಮೇಲೆ ಸನ್ಯಾಸದ ಹಿಂದೆ ಬೀಳುವುದಕ್ಕಿಂತ ದೊಡ್ಡ ಪಾಪ ಬೇರೊಂದಿಲ್ಲ !
ಪುಟ್ಟಪ್ಪನವರು "ಸನ್ಯಾಸಿ” ಕಥೆಯಲ್ಲಿ ಈ ಜಟಿಲತೆ ಯನ್ನು ಸಾಕಷ್ಟು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಇಲ್ಲಿ ಬರುವ ಗುರುಗಳು ಹೀಗನ್ನುತ್ತಾರೆ -
“ಸನ್ಯಾಸಿಯಾದವನು ಪುನಃ ಸಂಸಾರಿಯಾಗುವುದು ಮಹಾ ಪಾಪ ! ಚೈತನ್ಯ ನಿಗೆ ಅನಿಷ್ಟ". ಅದಕ್ಕೆ ಮುಕುಂದ ಅರ್ಥಾತ್ ಇಂದಿರೆ ಹೀಗೆ ಉತ್ತರಿಸುತ್ತಾಳೆ “ಕೈ ಹಿಡಿದವಳನ್ನು ದುಃಖ ಸಾಗರಕ್ಕೆ ಕಲ್ಲು ಕಟ್ಟಿ ಎಸೆಯುವುದಕ್ಕಿಂತ ಮಹಪಾಪವೆ ? ಅದಕ್ಕಿಂತ ಹೆಚ್ಚಿನ ಅನಿಷ್ಟವುಂಟಾಗುವುದೆ ?!” - ಎಂಥಾ ಮಾತು !

ಕ್ರಿಸ್ತನಲ್ಲ, ಪಾದ್ರಿಯ ಮಗಳು

‘ಉಪದೇಶ ಜಯಿಸದವರನ್ನು ಸೌಂದರ್ಯ ಜಯಿಸುತ್ತದೆ’ !! -
ಕಾಲೇಜು ದಿನಗಳಲ್ಲಿ ಯಶಸ್ಸಿನ ಉತ್ತುಗಕ್ಕೇರಿದ ಓರ್ವ ವಿದ್ಯಾರ್ಥಿಯ ಕರುಣಾಜನಕ ಕಥೆಯಿದು. ಮತಾಂತರದ ವಿರೋಧಿಯಾಗಿದ್ದ ಆತ ಕಡೆಗೆ ಅದರ ಬಲೆಗೆ ಬಿದ್ದು ಸರ್ವಸ್ವವನ್ನೂ ಕಳೆದುಕೊಳ್ಳುವ ರೀತಿ ಹೃದಯ ಹಿಂಡುತ್ತದೆ.

ಈಶ್ವರನೂ ನಕ್ಕಿರಬೇಕು

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬುದು ಮಾತು. ಹಾಗೇ ಈ ಕಥೆಯಲ್ಲಿ ಗಂಡು ಹಾಗೂ ಹೆಣ್ಣು ತಮಗಿರುವ ಒಂದು ಅವಲಕ್ಷಣವನ್ನು ಮುಚ್ಚಿಟ್ಟು ಮದುವೆ ಆಗುವ ಪ್ರಸಂಗ ಬರುತ್ತದೆ. ಕಥೆ ಮಜವಾಗಿದೆ ! ಕೊನೆಗೆ ದೇಹದ ನ್ಯೂನ್ಯತೆ ಗಳಿಗಿಂತ ಮನಸಿನ ಪ್ರೀತಿ ಮೇಲು ಎಂಬ ಸತ್ಯವನ್ನು ತಿಳಿ ಹಾಸ್ಯದ ಜೊತೆಜೊತೆಗೆ ಪುಟ್ಟಪ್ಪನವರು ಸಾರಿದ್ದಾರೆ.

ಆರಾಣೆ ಮೂರು ಕಾಸು

ಕೆಲವೊಮ್ಮೆ ನಮ್ಮ ಸ್ವಾರ್ಥಕ್ಕೆ ಪರೋಪಕಾರ ಮಾಡಿದರೂ, ದೈವೇಚ್ಛೆ ಯಿಂದ ಅದಕ್ಕೂ ದ್ವಿಗುಣವಾಗಿ ನಮಗೇ ಉಪಕಾರವಾಗುತ್ತದೆ. ಕಾಯಬೇಕಷ್ಟೇ ! ಷಡ್ಯಂತ್ರಕ್ಕೆ ಸಿಲುಕಿ ಭಿಕಾರಿಯಾದ ಕರ್ನೂಲಿನ ನವಾಬನಿಗೆ ತಮ್ಮ ಹೆಮ್ಮೆಗೋಸ್ಕರವೇ ಸಹಾಯ ಮಾಡಿದ ಮಧವರಾಯರ ಕಥೆ ಇದು. ಮಜವಾಗಿದೆ !

ಯಾರೂ ಅರಿಯದ ವೀರ !

ಕೆಲವರು ಹಾಗೆಯೇ ! ಉಪ್ಪಿಟ್ಟ ಮನೆಯ ಋಣವ ತೀರಿಸಲು ಯಾವ ಮಟ್ಟಕ್ಕೂ ಇಳಿಯಲು ಸಿದ್ಧರಾಗಿರುತ್ತಾರೆ. ಅವಕಾಶ ಸಿಕ್ಕಾಗ ಅನ್ನದ ಋಣ ವ ತೀರಿಸುತ್ತಾರೆ ! ಆದರೆ ತಾನು ಮಾಡಿದ ತ್ಯಾಗವನ್ನು ಮಾತ್ರ ಬಚ್ಚಿಡುತ್ತಾರೆ. ಯಾರೂ ಅರಿಯದ ವೀರ - ಅಂತಹ ಎಳೆಯನ್ನು ಹೊಂದಿದ ಸುಂದರ ಕಥೆ.

ಹೋಳಿಗೆ ಪ್ರತಿಜ್ಞೆ

ದೊಡ್ಡ ಮನಸ್ಸಿನಿಂದ ಮಾಡಿದ ಸಣ್ಣ ಕಾರ್ಯಗಳು , ಸಣ್ಣ ಮನಸ್ಸಿನಿಂದ ಮಾಡಿದ ದೊಡ್ಡ ಕಾರ್ಯಗಳಿಗಿಂತಲೂ ಎಷ್ಟೋ ಶ್ರೇಷ್ಠವಾದುದು. ಮಹಿಮೆ ಕಾರ್ಯಗಳಲಿಲ್ಲ. ಕಾರ್ಯ ಮಾಡಿಸುವ ಚಿತ್ತವೃತ್ತಿಯಲ್ಲಿದೆ.

ಕ್ಲಾಸಿನಲ್ಲಿ ಕದ್ದು ಹೋಳಿಗೆ ತಿಂದು, ಶಿಕ್ಷೆಯ ತಪ್ಪಿಸಲು ಹೋಳಿಗೆಯನ್ನು ಪಕ್ಕದಲ್ಲಿ ಕೂತಿದ್ದ ಹುಡುಗನ ಜೇಬಿಗೆ ತುರುಕಿ, ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಂಡು, ಕೊನೆಗೆ ಹೋಳಿಗೆ ತಿನ್ನುವುದೇ ಇಲ್ಲ ಎಂದು ಪ್ರತಿಜ್ಞೆ ಮಾಡಿದವನ ಕಥೆ ಇದು. ಸೊಗಸಾಗಿದೆ.


ಮಾಯದ ಮನೆ

ಫೀಸು ಇಲ್ಲದೆ ರೋಗಿಯ ಶುಶ್ರೂಷೆ ಮಾಡದ ವೈದ್ಯನಿಗೆ, ದೆವ್ವಗಳು ಪಾಠ ಕಲಿಸಿದ ಕತೆ ಇದು. ಅತಿಯಾಗಿ ಫೀಸು ಚಾರ್ಜು ಮಾಡುವ ವೈದ್ಯರನ್ನು ಈ ಕಥೆಯ ಮೂಲಕ ಮಾರ್ಮಿಕವಾಗಿ ಟೀಕಿಸಿದ್ದಾರೆ ಪುಟ್ಟಪ್ಪನವರು !

ದೆವ್ವದ ಕಾಟ

ದೆವ್ವದ ಕಥೆಗಳನ್ನು ಕೇಳಿ ಆನಂದಿಸಿ.ಆದರೆ,ಅದನ್ನು ಕೆದಕಿಕೊಂಡು ಹೋದಿರೋ, ಅದರ ಹಿಂದೆ ಮನುಷ್ಯನ ಕೈವಾಡ ಇರುವುದಂತೂ ಖಂಡಿತ ! ಈ ಕಥೆಯಲ್ಲಿ, ತನ್ನ ಅಧಿಕಾರ ಎಲ್ಲಿ ಮಣ್ಣು ಪಾಲಾಗುವುದೋ ಎಂಬ ಭಯದಿಂದ , ಮನೆಗೆ ಕಲ್ಲು ಎಸೆಯುವ ಪಿತೂರಿ ಮಾಡಿ, ಅದಕ್ಕೆ ದೆವ್ವದ ಕಾಟದ ಬಣ್ಣ ಹಚ್ಚುವ ಸಂದರ್ಭ ಬರುತ್ತದೆ. ಮ���ಟ ಮಂತ್ರದ ಬೂಟಾಟಿಕೆಯೂ ಇದೆ !

ಶ್ರೀಮನ್ಮೂಕವಾಗಿತ್ತು

ಮನುಷ್ಯ ಹಾಗೂ ತಾನು ಸಾಕಿದ ಪ್ರಾಣಿಯ ನಡುವಿನ ಸಂಬಂಧದ ಅನಾವರಣವಿದೆ ಈ ಕಥೆಯಲ್ಲಿ. ಕಾಣೆಯಾದ ಎಮ್ಮೆ , ಕೊಟ್ಟಿಗೆಯಲ್ಲಿ ತಾಯಿಯ ನೆನಪಲ್ಲಿ ಸೊರಗಿದ ಕರು,ಎಮ್ಮೆಯ ಹುಡುಕುತ್ತಾ ಅಲೆದ ಯಜಮಾನ , ನಿಮಿತ್ತ ಹೇಳುವ ಜ್ಯೋತಿಷಿ - ಹೀಗೆ ಹಲವು ಆಯಾಮಗಳು ತೆರೆದುಕೊಂಡು ಓದುಗನಿಗೆ ಪ್ರಿಯವೆನಿಸುತ್ತದೆ.

ಕಾರ್ತಿಕ್ ಕೃಷ್ಣ
ಸಂಕ್ರಮಣ ಕಾಲ, ೧೪ ಜನವರಿ ೨೦೨೨
Profile Image for Vasanth.
120 reviews25 followers
March 20, 2023
ಕನ್ನಡದ ಕಥೆ ಕಾದಂಬರಿಗಳನ್ನು ಓದೋಕೆ ಶುರುಮಾಡಿ ಒಂದು ವರ್ಷ ಆದ್ರೂ, ನನ್ನ ಮೊದಲ ಕನ್ನಡ ಪುಸ್ತಕಗಳ ಖರೀದಿಯಲ್ಲಿ ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಪುಸ್ತಕವೂ ಒಂದಾಗಿದ್ರೂ ಅವರ ಯಾವ ಪುಸ್ತಕವನ್ನೂ ಇದುವರೆಗೂ ನಾನು ಓದಿರಲಿಲ್ಲ. ಮಲೆಗಳಲ್ಲಿ ಮದುಮಗಳು ಕಾದಂಬರಿಯಿಂದ ಕುವೆಂಪು ಅವರ ಕೃತಿಗಳನ್ನು ಓದೋಕೆ ಆರಂಭ ಮಾಡೋಣ ಅಂದುಕೊಂಡಿದ್ದೆ ಆದರೆ ಸ್ನೇಹಿತರೊಬ್ಬರ ಶಿಫಾರಸ್ಸಿನ ಮೇಲೆ "ಸನ್ಯಾಸಿ ಮತ್ತು ಇತರೆ ಕಥೆಗಳು" ಕಥಾಸಂಕಲನವನ್ನು ಕೈಗೆತ್ತಿಕೊಂಡೆ. ಕುವೆಂಪು ಅವರ ಬರವಣಿಗೆಯನ್ನು ಅರ್ಥ ಮಾಡಿಕೊಳ್ಳುವಷ್ಟು ಸಾಹಿತ್ಯ ಜ್ಞಾನ ಇನ್ನೂ ನಂಗೆ ಇಲ್ವೇನೋ ಅನ್ನೋ ಅಂಜಿಕೆಯಿಂದಲೇ ಓದೋಕೆ ಶುರು ಮಾಡಿದೆ ಆದರೆ ಇದೊಂದು ಪುಟ್ಟ ಪುಸ್ತಕವಾದ್ದರಿಂದಲೋ ಅಥವಾ ಸರಳ ಕಥೆಗಳು ಇರುವುದರಿಂದಲೋ ಒಂದೇ ದಿನದಲ್ಲಿ ಓದಿ ಮುಗಿಸಿದೆ.

ಮೇಲ್ನೋಟಕ್ಕೆ ಒಂಬತ್ತೂ ಕಥೆಗಳು ಸರಳ. ದಾಂಪತ್ಯ ತ್ಯಜಿಸಿದ ಸನ್ಯಾಸಿಯೊಬ್ಬನಿಗೆ ಸೃಷ್ಠಿಯ ನಿಜ ಸಮಸ್ಯೆಯ ಅರಿವಾಗುವುದು ಮೊದಲ ಕಥೆ. ಉನ್ನತಾದರ್ಶಗಳನ್ನು ಒಗ್ಗೂಡಿಸಿಕೊಂಡು ದೇಶಸೇವೆಗಾಗಿ ಜೀವಮಾನವೆಲ್ಲ ಧಾರೆ ಎರೆಯುವುದಾಗಿ ಪಣ ತೊಟ್ಟ ಹಿಂದೂ ಧರ್ಮದ ಯುವಕನೊಬ್ಬ ಬೇರೆ ಧರ್ಮದ ಯುವತಿಗೆ ಮನಸೋತು ಸೌಂದರ್ಯ ಜಯಿಸದೆ ಅವನತಿ ಹೊಂದುವ ಕಥೆ ನನಗೆ ಬಹಳ ಹಿಡಿಸಿತು. ಮತ್ತಷ್ಟು ಮಾನವೀಯ ಮೌಲ್ಯಗಳನ್ನು ಸಾರುವ ಕಥೆಗಳಿವೆ, ಓದಿಯೇ ಅನುಭವಿಸಬೇಕು.

ಧನ್ಯವಾದ.
Profile Image for Bhumika Rao.
17 reviews2 followers
June 29, 2023
ಕುವೆಂಪು ಎಂದರೆ ಅವರ ಬಗ್ಗೆ ಗೊತ್ತಿಲ್ಲದಿರುವ ಕನ್ನಡಿಗ ಯಾರಿದ್ದಾರೆ ಹೇಳಿ? ಆದರೆ ಅವರ ಪುಸ್ತಕಗಳನ್ನು ಅದೆಷ್ಟು ಜನ ಓದಿರುವರು?
ಅತಿ ಅನವಶ್ಯಕವಾಗಿ ಪಾಶ್ಚ್ಯಾತಿಕರಣ ನಮ್ಮ ಯುವ ಪೀಳಿಗೆಗೆ ನೀತಿ ನಿಯಮಗಳೇ ಇಲ್ಲದ ಆಡು ಭಾಷೆಯೇ ಹಿತವಾಗಿ, ಸಾಹಿತ್ಯದ ಭಾಷೆ ಅಹಿತವಾಗುತ್ತಿದೆ. ಇಂತಹದರಲ್ಲಿ ಕುವೆಂಪು ಅವರ ಪದ ಬಳಕೆ ಅರ್ಥ ಮಾಡಿಕೊಳ್ಳಲು ಹಲವರಿಗೆ ಕಬ್ಬಿಣದ ಕಡಲೆಯಾಗಿದೆ.

'ದೇವರು ರುಜು ಮಾಡಿದನು' ಎಂಬ ಅವರ ಪದ್ಯ ನಾನು ಶಾಲೆಯಲ್ಲಿದ್ದಾಗ ಓದಿ ಅವಲ ಬರಹ ಶೈಲಿಗೆ ಆಕರ್ಷಿತಳಾಗಿದ್ದೆ. ಅವರ ದೀರ್ಘ ಕಾದಂಬರಿಗಳು ಮತ್ತು ಕವನಗಳನ್ನು ಓದುವ ಮುಂಚೆ ಕೆಲ ಸಣ್ಣ ಕಥೆಗಳನ್ನು ಓದಿ ಅವರ ಬರವಣಿಗೆಯ ಪರಿಚಯ ಮಾಡಿಕೊಳ್ಳುವ ಆಶೆ ನನ್ನದಾಗಿತ್ತು. ಇದರಂತೆ ನಾನು ಮೊದಲು ಕೈಗೆತ್ತಿಕೊಂಡದ್ದು 'ಸನ್ಯಾಸಿ ಮತ್ತು ಇತರ ಕಥೆಗಳು'.

ಮೊದಲ ಪುಟದಿಂದಲೇ ಕುವೆಂಪುರವರ ಭಾಷಾಜ್ಞಾನಕ್ಕೆ ನಾನು ಮಂತ್ರ ಮುಗ್ಧಳಾದೆ.

ಈ ಪುಸ್ತಕವು ೯ ಸಣ್ಣ ಕಥೆಗಳಿಂದ ಕೂಡಿದೆ. 'ಸನ್ಯಾಸಿ' ಕಥೆಯ ಅನಿರೀಕ್ಷಿತ ತಿರುವು, 'ಕ್ರಿಸ್ತನಲ್ಲ, ಪಾದ್ರಿಯ ಮಗಳು'ವಿನ ಮನುಷ್ಯ ನೈಜ ಗುಣ, 'ಈಶ್ವರನೂ ನಕ್ಕಿರಬೇಕು'ವಿನಲ್ಲಿನ ಅಸಹಾಯಕ ಸಂದರ್ಭದ ಹಾಸ್ಯ, 'ಆರಾಣೆ ಮೂರು ಕಾಸು'ದಲ್ಲಿನ ಸ್ವಾರ್ಥ/ಸಹಾಯದ ದ್ವಂದ್ವತೆಯ ಚರ್ಚೆ, 'ಯಾರು ಅರಿಯದ ವೀರ'ನಲ್ಲಿನ ನಿಸ್ವಾರ್ಥತೆ, 'ಹೋಳಿಗೆ ಪ್ರತಿಜ್ಞೆ'ಯ ದೃಢ ಸಂಕಲ್ಪ, 'ಮಾಯದ ಮನೆ'ಯ ಭಯ ಹುಟ್ಟಿಸುವ ವಿಚಿತ್ರ ಕಥೆ, 'ದೆವ್ವದ ಕಾಟ'ದ ತನಿಖೆಯ ಸ್ಪೋಟಕ ಫಲಿತಾಂಶ, 'ಶ್ರೀಮನ್ಮೂಕವಾಗಿತ್ತು'ವಿನ ಹೆತ್ತ ಕರುಳಿನ ಬಾಂಧವ್ಯದ ಕಥೆ, ಎಲ್ಲವೂ ಅನನ್ಯ. ಅವರು ಬಳಸುವ ಹಲವಾರು ಪದಗಳು ಇಂದಿನ ನಿಘಂಟಿನಲ್ಲಿ ಸಿಗದಿರಬಹುದು ಆದರೆ ಪದಗಳನ್ನು ಬಿಡಿಸಿ ಓದಿದರೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಮಿತವಾದ ಪದಗಳಲ್ಲಿ ಒಂದು ವಿಭಿನ್ನ ಲೋಕದ ಪರಿಚಯ ಮಾಡಿಸುವ ಕುವೆಂಪುರವರ ಬರಹ ಶೈಲಿ ಅಮೋಘ.

ಈ ಪುಸ್ತಕದಲ್ಲಿರುವ ಮಲೆನಾಡಿನ ಘಮ ಎಲ್ಲರನ್ನೂ ಸೆಳೆಯುತ್ತದೆ. ಪ್ರತಿ ಸಣ್ಣ ಕಥೆಯೂ ಆದರ ವಿಶಿಷ್ಟ ಶೈಲಿಯಲ್ಲಿ ನನಗೆ ಇಷ್ಟವಾಯಿತು.

ಕುವೆಂಪುರವರ ಅನರ್ಘ ಬರಹದ ಪರಿಚಯ ಪಡೆಯಲು ಇಚ್ಛಿಸುವರಿಗೆ ನನ್ನ ಸಲಹೆ 'ಸನ್ಯಾಸಿ ಮತ್ತು ಇತರ ಕಥೆಗಳು'.
Profile Image for Bharath Manchashetty.
174 reviews3 followers
November 20, 2025
“ಮನುಷ್ಯ ಪರೋಪಕಾರ ಮಾಡುವುದು 99% ತನ್ನ ಹೆಮ್ಮೆಗಾಗಿಯೇ ಹೊರತು ಪರರ ಉಪಕಾರಕ್ಕಾಗಿ ಅಲ್ಲ”

“ಸನ್ಯಾಸಿ ಮತ್ತು ಇತರ ಕತೆಗಳು-ಕುವೆಂಪು, ೮೦ ಪುಟಗಳ ಅವರ ಸಣ್ಣ ಕೃತಿ. ಲೇಖಕರ ಮನೋವೈಶಲ್ಯತೆ, ವಿಚಾರವಂತಿಕೆ, ಒಳ್ಳೆಯತನ, ಲಂಚದ ಪರಿಣಾಮ ಇತ್ಯಾದಿ ಎಲ್ಲವನ್ನೂ ಸಣ್ಣ ಕಥೆಗಳಾಗಿ ಹೇಳುತ್ತಾರೆ.”

-ಸನ್ಯಾಸಿ
-ಕ್ರಿಸ್ತನಲ್ಲ, ಪಾದ್ರಿಯ ಮಗಳು
-ಈಶ್ವರನು ನಕ್ಕಿರಬೇಕು
-ಆರಾಣೆ ಮೂರು ಕಾಸು
-ಯಾರೂ ಅರಿಯದ ವೀರ
-ಹೋಳಿಗೆ ಪ್ರತಿಜ್ಞೆ
-ಮಾಯದ ಮನೆ
-ದೆವ್ವದ ಕಾಟ
-ಶ್ರೀಮನ್ಮೂಕವಾಗಿತ್ತು.

“ಕುವೆಂಪುರವರ ಕೃತಿ ಓದಬೇಕೆನ್ನುವರು ಇದರಿಂದ ಪ್ರಾರಂಭ ಮಾಡಬಹುದು, ಸಲೀಸಾಗಿ ಕತೆಗಳು ಸಾಗುತ್ತ ಹೋಗುತ್ತವೆ “

“ಕುವೆಂಪು ಅವರ ಬರವಣಿಗೆಗೆ ಕುವೆಂಪು ಅವರೇ ಸಾಟಿ”

-ಭರತ್ ಎಂ.
ಓದಿದ್ದು ೦೬.೦೨.೨೦೨೫
Profile Image for Ranjan.
16 reviews2 followers
January 21, 2022
beautiful 2 page stories, with lot of context per page
25 reviews
October 11, 2023
Compilation of small stories of Kuvempu. A good read. It is not less than any novel.
Profile Image for Vasuki  CG.
26 reviews
January 16, 2026
First of all reading his prose is a treat in and of itself. However, I felt many of the stories were too simplistic? I think you can't really blame anyone because it's a product of its time.
Displaying 1 - 13 of 13 reviews

Can't find what you're looking for?

Get help and learn more about the design.