Jump to ratings and reviews
Rate this book

HUCHHU MANASINA HATHU MUKAGALU

Rate this book
By a Kannada author.

Unknown Binding

First published January 1, 2000

50 people are currently reading
906 people want to read

About the author

Kota Shivarama Karanth

95 books451 followers
Kota Shivaram Karanth was a Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been one of the finest novelists-activists since independence"by Ramachandra Guha. He was the third person among eight recipients of Jnanpith Award for Kannada the highest literary honour conferred by the Govt. of India.

Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.

Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.

He has received several literary awards,.Namely, Jnanpith Award, Padma Bhushan, Sahitya Academy award and Pampa Award.

He passed away on 9th December 1997 in Manipal, Karnataka.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
107 (49%)
4 stars
60 (27%)
3 stars
24 (11%)
2 stars
9 (4%)
1 star
15 (6%)
Displaying 1 - 13 of 13 reviews
Profile Image for Prashanth Bhat.
2,159 reviews139 followers
September 20, 2025
ಶಿವರಾಮ ಕಾರಂತರ ಬದುಕಿನ ಸಾಹಸಗಳ‌ ಬಗ್ಗೆ,ಅವುಗಳ ವಿಸ್ಕೃತ ರೂಪದ ಬಗ್ಗೆ ತಿಳಿಯಲು ಇದೊಂದು ಝಲಕ್ ಅಷ್ಟೇ.
ಸ್ವಗತದ ಧಾಟಿಗಿಂತ ಉಪನ್ಯಾಸದ ಧಾಟಿಯಿದೆ.
Profile Image for mahesh.
271 reviews26 followers
November 12, 2021
What is life?
Why am I here?
Who am I?.
There are so many questions filed up in my consciousness as I was exposed meaningful and meaninglessness of life. Read so many books from Upanishad to Kama sutra, Pursued passion from painting to Photography. But life was still a big question, with an endless loop. There were no easy answers because every answer layer had more questions. Entering the corporate world intensified the burning pain inside me, Only the silence of nights soothed me. I was not unhappy, But surviving to die one day seems so meaningless to me.
But everything changed when my close friend introduced me to "Betada Jiva". I didn't find an answer to complex question marks of life but Karanta's writing added color and magic to unlabeled burning pain inside me. Life and its complexities felt like an essential experience to get drunk in the plays of life. After that, I have read many works of Karanta and introduced his works to a few of my friends.

After reading "Biti" by S.L Bhyrappa, I wanted to know the inner and outer plays in Karanta life which inspired Karanta to write sensational and
celebrated literature of Kannada.

As a reader, I knew Karanta just as a writer. But after started reading this book, His other ten faces surfaced in each chapter. How can someone be an artist, thinker, freedom fighter, writer, Environmentalist, education reformer, filmmaker, and drama artist in one life?

The book is not written in chronological order, it is written chapter-wise by choosing specific topics which give us a glimpse of the vivid experience of Karanta. Sometimes reading experience can be daunting due to repetition. Since I have read multiple novels of the author, I expected to learn the history behind the inspiration. Unfortunately, the book is focused more on his social life than his personal life. That's bothered me a little since I didn't get to know the inner realms of the author.

We often have this idea that Writers have everything figured out. But truthful exposure to all failures and shortcomings in this book doubled the respect I had for Karanta. Karanta's life path and choices are purely based on his experience rather than on certain ideologies. So it makes him ordinary among ordinary people. His consistent effort and never-ending zeal to reform the education system and society deserved international recognition. After reading this work, you will realize he is not just a writer, he is something more.

More than 80% of the book is about Yakshagana, Drama, Film creation, traveling, politics, and social activism. Of course, you will fall asleep sometime. But it's worth an effort to get to know the "Kadala Thirada Bhargava".

Overall it's a pleasant read. Maybe "Kota shiv ram karat" left this small world, But his writings will leave a lasting impression on everyone struggling to stay human in this insane world.



Profile Image for Deekshitha.
7 reviews11 followers
October 30, 2021
" ಹುಚ್ಚು ಮನಸಿನ ಹತ್ತು ಮುಖಗಳು "

"ಮೂಕಜ್ಜಿಯ ಕನಸುಗಳು" ಕಾದಂಬರಿ ಓದಿದ ಮೇಲೆ ಕಾರಂತರ ಬದುಕಿನ ಬಗೆಗಿನ ದ್ರಷ್ಠಿ ಕೋನ ವನ್ನು ಮೆಚ್ಚಿ ಅವರ ಬದುಕನ್ನೇ ಯಾಕೆ ಒಮ್ಮೆ ಓದಬಾರದು ಅನಿಸಿತ್ತು.. ಹೀಗೆ ಕೈಗೆತ್ತಿಕೊಂಡದ್ದು ಅವರ ಆತ್ಮ ಕಥನ "ಹುಚ್ಚು ಮನಸ್ಸಿನ ಹತ್ತು ಮುಖಗಳು". ಬರೋಬ್ಬರಿ ಮೂರು ತಿಂಗಳು ಹಿಡಿದು ಪುಸ್ತಕವನ್ನು ಓದಿ ಮುಗಿಸಿದ್ದೇನೆ. ಕಾರಣ ಅದರಲ್ಲಿ ಅಡಗಿರುವ ಅಷ್ಟೊಂದು ವಿಷಯಗಳು. ಕಾರಂತರು ಬಡತನದಲ್ಲಿ ಬೆಳೆದು ಬಂದವ್ರೇನಲ್ಲ ಆದರೆ ಬದುಕು ಅವರಿಗೆ ಎಷ್ಟೊಂದು ಕಷ್ಟಗಳ ದಾರಿಗಳನ್ನು ನೀಡಿದರೂ ಅವೆಲ್ಲವನ್ನು ಸಹಿಸಿ ಮತ್ತೊಂದು ದಾರಿ ಹಿಡಿವ ಅವರ ಧೈರ್ಯ ಸ್ಥೈರ್ಯ ಮೆಚ್ಚುವಂತದ್ದು. ಅವರು ಕೇವಲ ಒಬ್ಬ ಸಾಹಿತಿ ಅಲ್ಲ, ರಂಗಕರ್ಮಿ, ವೈಜ್ಞಾನಿಕ ಬರಹಗಾರ, ಚಿಂತಕ ಹೀಗೆ ಹೇಳಿದಷ್ಟು ಮುಗಿಯದು.
ಅದೆಷ್ಟೋ ಕಾದಂಬರಿಗಳು, ಕಥೆಗಳು,ನಾಟಕಗಳು,ಕವನ,ಕಾವ್ಯ,ಯಕ್ಷಕಾವ್ಯ, ಮತ್ತೆ ದೇಶ ವಿದೇಶ ಸುತ್ತಾಟ,ಕಲೆಗಳ ಬಗೆಗೆ ಬರಹ, ಸ್ವಲ್ಪ ರಾಷ್ಟ್ರೀಯತೆ. ಆಸ್ತಿಕತನವು ನಾಸ್ತಿಕತನವು ಅಲ್ಲದ ಜೀವನ. ಇವೆಲ್ಲವನ್ನೂ ಒಬ್ಬರೇ ಸಾಧಿಸಿದ್ದಾರೆ ಅಂದರೆ ನನ್ನ ಮಟ್ಟಿಗೆ ಅದೊಂದು ಅಚ್ಚರಿಯೇ ಆಗಿತ್ತು. ಪುಟ ತಿರುವಿದಂತೆ ಬದುಕು ಇನ್ನೇನು ಕೊಡುವುದೋ ಎಂಬ ಕಾತರತೆ ಕಾದಿತ್ತು.
ಕಾರಂತಜ್ಜನ ಬದುಕಿನಲ್ಲಿ ತುಂಬಾ ಹತ್ತಿರದವರ ಸಾವುಗಳು ಮೇಲೆ ಮೇಲೆ ಅವರನ್ನು ಘಾಸಿಗೊಳಿಸಿದರೂ ಅದನ್ನೂ ಅರಗಿಸಿ ೮೦ ವರ್ಷದ ವರೆಗೆ ಆದಷ್ಟು ಸಂತೃಪ್ತಿಯ ಬದುಕು ಬದುಕಿದ್ದರೆ, ಅದು ನಿದರ್ಶನವೇ ಅಲ್ಲದೆ ಇನ್ನೇನು?
ಈ ಪುಸ್ತಕದಲ್ಲಿ ಓದುವುದಕ್ಕೆ ಸಾಕಷ್ಟಿದೆ, ಒಂದು ಪುಸ್ತಕ ಅನ್ನುವದಕ್ಕೂ ಹೆಚ್ಚು ಒಬ್ಬರ ಬದುಕನ್ನು ಓದಿ ,ತಿಳಿದುಕೊಳ್ಳುವ ಖುಷಿಯೇ ಹೆಚ್ಚಿದೆ. ಒಂದಷ್ಟು ನೋವುಗಳು,ನಲಿವುಗಳು, ಯೋಚನೆಗಳು ,ವಿವೇಚನೆಗಳು, ಬಂಧಗಳು,ಭಾವನೆಗಳು, ಏಳುಗಳು ,ಬೀಳುಗಳು, ನಿನ್ನೆಗಳು ,ನಾಳೆಗಳು ಇವೇ," ಹುಚ್ಚು ಮನಸಿನ ಹತ್ತು ಮುಖಗಳು "
Profile Image for Karthikeya Bhat.
109 reviews13 followers
June 9, 2022
ಹುಚ್ಚು ಮನಸ್ಸಿನ ಹತ್ತು ಮುಖಗಳು
ಡಾ. ಕೆ. ಶಿವರಾಮ ಕಾರಂತ

ಕಾರಂತರ ಜೀವನವೃತ್ತವನ್ನು ಅವರ ಕೆಲವು ಮಿತ್ರರಿಗೆ ಕುತೂಹಲಕಾರಿಯಾಗಿ ಕಂಡುದರಿಂದ ಅವರು ಅದನ್ನು ಬರೆಯುತ್ತೇವೆಂದು ಉತ್ಸುಕತೆ ತೋರಿಸಿದಾಗ “ನೀವು ನನ್ನನ್ನು ಕೊಲ್ಲಬೇಕಿಲ್ಲ, ನನ್ನ ಆತ್ಮಹತ್ಯೆಯನ್ನು ನಾನೇ ಮಾಡಿಕೊಳ್ಳುತ್ತೇನೆಂದು “ ಕಾರಂತರು ಪರಿಹಾಸ್ಯಮಾಡಿದರಂತೆ. ನಂತರ ಕಾರಂತರು ಬರೆದದ್ದೇ ಹುಚ್ಚು ಮನಸ್ಸಿನ ಹತ್ತು ಮುಖಗಳು ಆತ್ಮಕಥನ. ಇದರಲ್ಲಿ ಬಾಲ್ಯದಿಂದ ತೊಡಗಿ (1902 ರಿಂದ) ಸರಿ ಸುಮಾರು 1994ರ ತನಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. “ತಂತಮ್ಮ ಮನಸ್ಸು ಹುಚ್ಚೆಂಬ ಅರಿವು ಎಲ್ಲ ಗಳಿಗೆಯಲ್ಲಿಯೂ ಉಂಟಾಗುವುದಿಲ್ಲ, ಇನ್ನೊಬ್ಬರ ಹುಚ್ಚುತನ ತಮಗೆ ಕಾಣಿಸುವಷ್ಟು ಸುಲಭವಾಗಿ ತಮ್ಮದೇ ಹುಚ್ಚುತನ ತಮಗೆ ಕಾಣಿಸುತ್ತದಯೇ?ಕಾಣಬೇಕೆಂಬ ಆಸೆಯೂ ತಮಗಿದ್ದ ಕಾರಣ ಈ ಆತ್ಮಕಥನಕ್ಕೆ ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಶೀರ್ಷಿಕೆ ಕಾರಂತರು ಕೊಟ್ಟರು”. ತಮ್ಮ ನಿತ್ಯ ಜೀವನವನ್ನು ರೂಪಿಸಿಕೊಂಡಾಗ, ಮಾನವನಲ್ಲಿ ಬದುಕಬೇಕು, ಚೆನ್ನಾಗಿ ಬದುಕಬೇಕೆಂಬ ಹಟವಿದ್ದು, ಆ ಹಟಕ್ಕೆ ತಕ್ಕಂತೆ ದುಡಿಯುವ ಶಕ್ತಿಯಿದ್ದುದಾದರಮ ಏನೆಲ್ಲಾ ಸಾಧಿಸಬಹುದೆಂದು ಅವರು ತೋರಿಸಿಕೊಟ್ಟಿದ್ದಾರೆ.

ಕೋಟ ಎಂಬ ಗ್ರಾಮದಲ್ಲಿ ಬ್ರಾಹ್ಮಣರ ಮನೆಯಲ್ಲಿ ಜನಿಸಿದ ಕಾರಂತರು ಅಲ್ಲಿರುವ ಜನರ ಬಡತನ, ನಡೆ, ಆಚಾರಗಳನ್ನು ಕಂಡು ಅನುಭವಿಸಿರುವುದನ್ನು ತಮ್ಮ ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಸವಿಸ್ತಾರವಾಗಿ ಚಿತ್ರಿಸಿದ್ದಾರೆ. ಮೊದಲಿಗೆ ಸೇರಿದ್ದು ಸರಕಾರಿ ಶಾಲೆಗೆ, ಅದೂ ತಮ್ಮ ಮನೆಯ ಸಮೀಪದಲ್ಲಿದ್ದ ಶಿವಾಲಯದಲ್ಲಿದ್ದ ಯಾಗ ಶಾಲೆಯಲ್ಲಿ, ನೆಲದ ಮೇಲೆ ಕುಳಿತು ಪಾಠ ಓದುತ್ತಿದ್ದು ನಂತರ ೧೦ನೆ ತರಗತಿ ವರೆಗೂ ತಮ್ಮ ವಿದ್ಯಾಭ್ಯಾಸದ ಬಗ್ಗೆ ಆ ಆ ಶಾಲೆಯ ಅನುಭವಗಳನ್ನು ವಿವರವಾಗಿ ಚಿತ್ರಿಸಿದ್ದಾರೆ. ಅಲ್ಲಿಗೇ ತಮ್ಮ ವಿದ್ಯಾಭ್ಯಾಸಕ್ಕೆ ನಾಂದಿ ಹಾಡಿ ಅಸಹಕಾರ ಚಳುವಳಿಯಲ್ಲಿ ಧುಮುಕಿ ಗಾಂಧೀಜಿಯವರ ಆದರ್ಶವನ್ನು ಪರಿಪಾಲಿಸಿದರು. ಕೆಲವು ಉಪನ್ಯಾಸಗಳನ್ನು ಕೊಡಲು ನಿರ್ಧರಿಸಿ ಊರೂರು ಅಲೆದಾಡಿ ಜನಗಳನ್ನು ಕೂಡಿಸುವ ಪ್ರಯತ್ನಮಾಡಿ ಕಾಂಗ್ರೇಸ್ ಕಮಿಟಿಯನ್ನು ಸ್ಥಾಪಿಸಲು ಕಷ್ಟಪಟ್ಟರು. ಅವರ ಈ ವಯಸ್ಸಿನ ರಾಜಕೀಯ ಅನುಭವಗಳನ್ನು *ಔದಾರ್ಯದ ಉರುಳಲ್ಲಿ* ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ತಮ್ಮ ಊರಿನ ದೊಡ್ಡ ಮದುವೆಗಳಲ್ಲಿ ವೇಶ್ಯೆಯರನ್ನು ಕರೆಸಿ ನರ್ತನವನ್ನು ಮಾಡುವ ರೂಢಿಯಿತ್ತಂತೆ, ಇದರ ಕುರಿತು ಅಪಪ್ರಚಾರ ಮಾಡಿದಾಗ ಆ ಊರಲ್ಲಿ ವೇಶ್ಯಾಪದ್ಧತಿ ಅಲ್ಲ ಅವರ ನರ್ತನ ಪದ್ಧತಿ ನಿಂತಿತು. ಬಸರೂರು, ಬಾರಕೂರುಗಳಲ್ಲಿ ಗೆಜ್ಜೆಕಟ್ಟುವ ಮನೆತನಗಳು ಕೆಲವಿವೆ, ಅವರ ಮೋಹಕ್ಕಾಗಿ ಮನೆ ಕಳೆದುಕೊಂಡವರೂ ಇದ್ದಾರೆ, ಇಂತ ವೇಶ್ಯೆಯರ ಸಮಸ್ಯೆ ಹತ್ತಿರದಿಂದ ನೋಡಿದ ಕಾರಂತರು *ಕನ್ಯಾಬಲಿ, ಮೈ ಮನಗಳ ಸುಳಿಯಲ್ಲಿ* ತಮ್ಮ ಅನುಭವಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ.

*ಪತ್ರಿಕೋದ್ಯಮದಲ್ಲಿ:* 1924ರಲ್ಲಿ ತಮ್ಮದೇ ಆದ “ವಸಂತ” ಮಾಸಪತ್ರಿಕೆ ಹೊರಡಿಸುತ್ತಾರೆ, ಹೊರಡಿಸಿದ ಮೇಲೆ ಅದರಲ್ಲಿ ಲೇಖನ ತುಂಬಬೇಡವೇ? ಕೆಲವು ಕವನಗಳನ್ನು ನಂತರ ಕಾದಂಬರಿಯನ್ನು ಪ್ರಕಟಿಸಲು ತೊಡಗುತ್ತಾರೆ. ಕ್ರಮೇಣ ಪತ್ರಿಕೋದ್ಯಮದಲ್ಲಿ ನಷ್ಟವಾಗಿ ಸಾಲಮಾಡಿಕೊಂಡು ನಡೆಸುತ್ತಿದ್ದ ವಸಂತ ಮಾಸಪತ್ರಿಕೆಯನ್ನು ನಿಲ್ಲಿಸುವ ಪ್ರಸಂಗ ಬಂದಾಗ ಅವರಿಗಾದ ನಿರಾಶೆ ಹೇಳತೀರದು.

*ರಂಗಭೂಮಿಯಲ್ಲಿ*: ತಮ್ಮ ಜೀವನ ಅನುಭವಗಳಿಂದ ಹಲವಾರು ನಾಟಕಗಳನ್ನು ಬರೆದು ಅದನ್ನು ಪ್ರದರ್ಶಿಸಲು ತೊಡಗಿದರು. ನಾಟಕಗಳಿಂದ ದೊರೆತ ಅಲ್ಪಸ್ವಲ್ಪ ಹಣದಿಂದ ಊರೂರು ಪ್ರವಾಸ ಮಾಡುತ್ತಾರೆ, ಆ ಸಮಯದಲ್ಲಿ ಗುಬ್ಬಿವೀರಣ್ಣ, ಗುರು ಸಮರ್ಥ ನಾಟಕ ಕಂಪನಿಯೊಂದು ಪರಿಚಯವಾಗುತ್ತದೆ. ನಿಷಾ ಮಹಿಮೆ,ಹೊಣೆ ಯಾರು, ಸಿಡಿಲು ಮಿಂಚು, ವಿಜಯದಶಮಿ, ಗೋಮಾತೆ ನಾಟಕಗಳನ್ನು ಪ್ರದರ್ಶಿಸುವ ಅವಕಾಶವೂ ದೊರೆಯುತ್ತದೆ.

*ಸಂಚಾರಿ ಜೀವನ*: ಜೀವನದಲ್ಲಿ ಅವರಿಗಿದ್ದ ಧ್ಯೆಯ ದೇಶ ತಿರುಗುವುದು ಘೋಷ ಓದುವುದು. ಸಂಚಾರಿ ಜೀವನದಲ್ಲಿ ಆಸಕ್ತಿಯಿದ್ದ ಕಾರಂತರಿಗೆ ಪ್ರವಾಸ ಹೊಗುವುದೆಂದರೆ ಆಸೆ, ಪೋಟೋ ತೆಗೆಯುವ ಹುಚ್ಚು ಬೇರೆ. ಹಲಸಂಗಿ, ನವಿಲೂರು, ಬಾದಾಮಿ, ಸಾಬರ್ಮತಿ, ಅಜಂತ, ಎಲ್ಲೋರ ಕೆಲವು ಸ್ಥಳಗಳ ಹಾಗು ಅಲ್ಲಿರುವ ವೈಶಿಷ್ಟ್ಯಗಳನ್ನು ಹಾಗು ವಾಸ್ತುದರ್ಶನ, ಪಲ್ಲವರ ಆದರ್ಶ, ಶಿಲ್ಪದ ವಿಚಾರ, ಸಾಂಚಿಯಲ್ಲಿರುವ ಬುದ್ಧನ ಸ್ಮಾರಕ, ಸಾರನಾಥ, ಅಬುವಿನ ಸೂಚಿ ಶಿಲ್ಪ, ಮಹಾಬಲಿಪುರ, ಫತ್ತೇಪುರ ಸ���ಕ್ರಿ, ಕೇದದಿಗೆಯ ಬನ, ಹೆಮ್ಮೆಯ ಸ್ಮಾರಕ ಗೋಲ್ ಗುಂಬಜ್, ಅವರ ಈ ಪ್ರವಾಸಗಳ ಕುರಿತು * ಅಬೂವಿನಿಂದ ಬರಾಮಕ್ಕೆ* ಪ್ರವಾಸ ಕಥನದಲ್ಲಿ ಸುಂದರವಾಗಿ ವಿನರಿಸಿದ್ದಾರೆ.

*ಧಾರ್ಮಿಕ ವಿಚಾರಗಳಲ್ಲಿ ಮನಸ್ಸು:* ತನ್ನ ಸುತ್ತಮುತ್ತಲಿನ ಜನರಲ್ಲಿದ್ದ ವೈದಿಕ ವಾತಾವರಣ, ಸಂಪ್ರದಾಯ, ಧರ್ಮದಲ್ಲಿ ಹೆಚ್ಚಿನ ಶ್ರದ್ಧೆ, ಅಂದಶ್ರದ್ಧೆಯಂದರೂ ಸರಿಯೆ ಅದರ ಕುರಿತು ಹಲವಾರು ನಿದರ್ಶನಗಳನ್ನು ಕೊಟ್ಟಿದ್ದಾರೆ, ಅವರು ಆಸ್ತಿಕನೂ ಅಲ್ಲ, ನಾಸ್ತಿಕನೂ ಅಲ್ಲ, ಅವರ ಪ್ರಕಾರ ಅವರು ಅನಾಸ್ತಿಕರು. ಬಾಳು ತಮಗೆ ಮುಖ್ಯ, ಬಾಳನ್ನು ತಿಳಿಯಲು ಬೇಕಾಗುವ ಸಾಧನೆಗಳೂ ಅಷ್ಟೇ ಪ್ರಾಮುಖ್ಯ. ಇಂದ್ರಿಯಗಳು ವೈರಿಯಲ್ಲ, ಅದರಿಂದ ಬೆಳೆಯುವ ಮನಸ್ಸು, ಬುದ್ಧಿಗಳೂ ವೈರಿಗಳಾಗವು, ಇಂತಹ ದೃಷ್ಟಿಕೋನ ಕುರಿತು *ಬಾಳ್ವೆಯೇ ಬೆಳಕು* ಕಾದಂಬರಿಯಲ್ಲಿ ಇದನ್ನು ಚಿತ್ರಿಸಿದ್ದಾರೆ.

*ಗ್ರಾಮೋದ್ಧಾರ*: ಪುತ್ತೂರಿಗೆ ಬಂದು ನೆಲಸಿ, ಶಾಂತಿ ಶಿಬಿರಗಳು, ನೀರಿನ ಪೂರೈಕೆ, ಹಳ್ಳಿಗಳ ಉದ್ಧಾರ, ಗ್ರಾಮೋದ್ಧಾರಣ ಮಾಡಲು ತೊಡಗಿದರು. ಅದೇ ಸಮಯದಲ್ಲಿ ದೇವದೂತರು ಎಂಬ ಕಾದಂಬರಿ ಹಾಗು ಕೆಲವು ನಾಟಕಗಳನ್ನೂ ಬರೆಯುತ್ತಾರೆ. ಈ ಪ್ರವಾಸ ಫಲದಿಂದ *ಚೋಮನ ದುಡಿ* ಕಾದಂಬರಿ ಬರೆಯಲು ಅವಕಾಶ ದೊರೆಯಿತು.

*ಶಿಕ್ಷಣ ಪ್ರಯೋಗಗಳು*: ಮಕ್ಕಳ ಕೂಟ ಒಂದು ಆಟದ
ರೂಪದಲ್ಲಿರಬೇಕೆಂದು ನಿರ್ಧರಿಸಿ ಅದಕ್ಕೆ ಪೂರ್ವಭಾವಿಯಾಗಿ ಕೆಲವೊಂದು ಪ್ರಯೋಗಗಳನ್ನು ಮಾಡಿದರು. 1935 ರಲ್ಲಿ ಬಾಲವನವನ್ನು ನಿರ್ಮಿಸಿ ಮಕ್ಕಳಿಗಾಗಿ ಶಾಲೆ ಪ್ರಾರಂಭಿಸಿದರು. ಆದರೆ ಮೂರು ವರ್ಷದ ಒಳಗೆ ನಷ್ಟವಾಗಿ ಶಾಲೆ ಮುಚ್ಚುವ ಪ್ರಸಂಗವೂ ಬಂತು. ಮಕ್ಕಳಿಲ್ಲದೆ, ಮಿತ್ರರ ನೆರವಿಲ್ಲದೆ, ಸಾಲ ಮಾಡಿಕೊಂಡು ನಿರ್ಮಿಸಿದ ಬಾಲವನದ ಸಾಲವನ್ನು ತೀರಿಸಲಾಗದೆ ಶಾಲೆಯನ್ನು ಮುಚ್ಚಿಬಿಟ್ಟರು.

*ಶಿಕ್ಷಣ ಅನ್ಯ ವಿಷಯಗಳಲ್ಲಿ*: ಹಲವಾರು ವಿಷಯಗಳನ್ನು ಸಂಗ್ರಹಿಸಿ, ಚಿತ್ರಹಳ ಸಮೇತ ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ ಬರೆದಾಗ, ಆ ಬರವಣಿಗೆಗೆ ಹಾಗು ಅವರ ಪಟ್ಟ ಶ್ರಮಕ್ಕೆ ಅವರಿಗಿದ್ದ ಕೀರ್ತಿ ಹೆಚ್ಚಿತು. ಕೆಲವೇ ತಿಂಗಳಲ್ಲಿ ಹೆಚ್ಚು ಪ್ರತಿಗಳು ಅಚ್ಚಾಗಿ ಜನರು ಕೊಂಡು ಓದುತ್ತಿರುವುದನ್ನು ಕಂಡ ಕಾರಂತರಿಗೆ ಅತ್ಯಾನಂದವಾಗುತ್ತದೆ.

*ನಾಟಕ ರಂಗದಲ್ಲಿ ಹಾಗು ಸಂಗೀತದಲ್ಲಿ*: ಗೀತ ನಾಟಕಗಳು, ಯಕ್ಷಗಾನ, ನಾಟ್ಯರೂಪ, ಚೀನಿ ನಾಟಕವನ್ನು ನೋಡಲು ಅವಕಾಶ ದೊರೆಯುತ್ತದೆ. ಯಕ್ಷಗಾನದಲ್ಲಿ ಆಸಕ್ತಿಯಿದ್ದ ಕಾರಂತರು ಯಕ್ಷಗಾನದ ಕುರಿತು ಅಧ್ಯಯನ ಮಾಡಿ * ಯಕ್ಷಗಾನ ಬಯಲಾಟ* ಕೃತಿಯನ್ನು ರಚಿಸಿದಾಗ, ಯಕ್ಷಗಾನ ಕುರಿತು ಅವರಿಗಿದ್ದ ಜ್ಞಾನಕ್ಕೆ ಜನರು ತಲೆದೂಗುತ್ತಾರೆ. ನಂತರ ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದಾಗ ಕಾರಂತರು ಸಂತೋಷಪಟ್ಟರು. ಬಹುಮಾನಕ್ಕೆ ಬಂದ ಕೊಂಚ ಹಣದಿಂದ ತಾವು ಮಾಡಿದ ಕೊಂಚ ಸಾಲವನ್ನು ತೀರಿಸುತ್ತಾರೆ. ರಾಷ್ಟ್ರಗೀತೆ, ಗೀತ ಸಾಹಿತ್ಯದಲ್ಲಿ, ಯಕ್ಷಗಾನ ಸಂಗೀತದಲ್ಲಿ ಅವರ ಆಸಕ್ತಿ ಹೆಚ್ಚು. ಆ ಅನುಭವದಿಂದ *ಕೀಚಕ ಸೈರಂಧ್ರ*ಯನ್ನು ರಚಿಸಿದ ಕೆಲವು ಸಮಯದಲ್ಲೇ ಆ ನಾಟಕವನ್ನು ಹಲವಾರು ಕಡೆ ಪ್ರದರ್ಶಿಸಲು ಅವಕಾಶ ದೊರೆಯುತ್ತದೆ. ಕೀಚಕ ಸೈರಂಧ್ರ ನಾಟಕವೂ ಪ್ರಸಿದ್ಧಿಗೊಳ್ಳುತ್ತದೆ.

*ಗದ್ಯೋದ್ಯಾನದಲ್ಲಿ*: ಸರಿ ಸುಮಾರು ೫೦ ಕಾದಂಬರಿಗಳನ್ನು ರಚಿಸುತ್ತಾರೆ. ಅದರಲ್ಲಿ ಎಲ್ಲವೂ ತಮ್ನ ಜೀವನದಲ್ಲಾದ ಆಯಾ ಅನುಭವಗಳಿಂದ ಪ್ರೇರಣೆಯಾದವುಗಳೆ.
ಉದಾಹರಣೆಗೆ:
೧. ತಮ್ಮ ಗ್ರಾಮ ಜೀವನದ ಸುತ್ತಾಟದಲ್ಲಿ, ಹತ್ತಾರು ಹೊಲೆಯರ ಮನೆಗಳನ್ನು ಕಂಡು ಜೀವನವನ್ನು ಸಾಕಷ್ಟು ನೋಡಿ, ಅದರ ಕುರಿತು ಚೋಮನ ದುಡಿ ಕಾದಂಬರಿಯನ್ನು ಬರೆಯುತ್ತಾರೆ.
೨. ಕಡಲಿನ ತಡಿಯಾದ ಕೋಟದಲ್ಲಿ ನಲಿದಾಡುವ ಜನರ ಬಾಳ್ವೆಯಿಂದ ಹಾಗು ಅಲ್ಲಿನ ಸುಂದರವಾದ ನಿಸರ್ಗ ಸೊಬಗನ್ನು, ಆ ತೀರದಲ್ಲಿ ವಾಸಿಸುವ ಕುಟುಂಬಗಳು ಪಡುವ ಸುಖ ದುಃಖಗಳನ್ನು ಹತ್ತಿರದಿಂದ ನೋಡಿ ಪ್ರೇರಿತರಾಗಿ ಮರಳಿ ಮಣ್ಣಿಗೆ ಕಾದಂಬರಿ ರಚಿಸುತ್ತಾರೆ.
೩. ಬಡ ಶಾಲಾ ಉಪಾಧ್ಯಾಯರ ಕಥೆ, ಪುತ್ತೂರಿನಲ್ಲಿ ನೆಲಸಿ, ಉಪಾಧ್ಯಾಯರ ಜೊತೆ ಬಾಳಿ ಅವರ ಸುಖ ದುಃಖಗಳನ್ನು ಕಂಡು ಪ್ರೇರಿತಗೊಂಡು ಹೊರಬಂದ ಕಾದಂಬರಿಯೇ ಮುಗಿದ ಯುದ್ಧ.
೪. ಅಸಹಕಾರ ಚಳುವಳಿಯಲ್ಲಿ ಧುಮುಕಿ ಗಾಂಧೀಜಿಯವರ ಆದರ್ಶವನ್ನು ಪರಿಪಾಲಿಸಿದರು. ಕೆಲವು ಉಪನ್ಯಾಸಗಳನ್ನು ಕೊಡಲು ನಿರ್ಧರಿಸಿ ಊರೂರು ಅಲೆದಾಡಿ ಜನಗಳನ್ನು ಕೂಡಿಸುವ ಪ್ರಯತ್ನಮಾಡಿ ಕಾಂಗ್ರೇಸ್ ಕಮಿಟಿಯನ್ನು ಸ್ಥಾಪಿಸಲು ಕಷ್ಟಪಟ್ಟರು. ಅವರ ಈ ವಯಸ್ಸಿನ ರಾಜಕೀಯ ಅನುಭವಗಳನ್ನು *ಔದಾರ್ಯದ ಉರುಳಲ್ಲಿ* ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
೫. ತನ್ನ ವಸ್ತು ವಿಸ್ತಾರಕ್ಕಾಗಿ ಲೈಂಗಿಕ ಜೀವನದ ಚಾರಿತ್ರಿಕ ಸಾಕ್ಷಿಗಳನ್ನು ಹೇಗೆ ತೀರ ಪುರಾತನ ಕಾಲಕ್ಕೆ ಒಯ್ದಿತೋ ಹಾಗೆಯೇ ಅಂಥ ಪುರಾತವೃನ ದೇವಾನುದೇವತೆಗಳ ಕಲ್ಪನೆಗಳು ಸಹ ಹೇಗೆ ವಿಕೃತಗೊಂಡು ಬಂದಿವೆ ಎಂದು ಮೂಕಜ್ಜಿಯ ಕನಸುಗಳು ಕಾದಂಬರಿಲ್ಲಿ ಕಾಣಬಹುದು.

ನಂತರ 1936ರಲ್ಲಿ ಲೀಲಾ ಜೊತೆ ವಿವಾಹ, ನಾಲ್ಕು ಮಕ್ಕಳ ತಂದೆಯಾಗುತ್ತಾರೆ. ಹರ್ಷ, ಕ್ಷಮಾ, ಮಾಲವಿಕ, ಉಲ್ಲಾಸ ಅವರ ಹೆಸರುಗಳು. ಲೀಲಾ ಬ್ರಾಹ್ಮಣರಲ್ಲ, ಮದುವೆಯಾದ ಹೊಸತರಲ್ಲಿ ಕುಟುಂಬವು ತಮ್ಮನ್ನು ದೂರಿದರು ಕ್ರಮೇಣ ಒಪ್ಪಿಕೊಂಡರು, ಆದರೆ ಸಮಾಜದ ದೃಷ್ಟಿಯಲ್ಲಿ ತಾನು ತಪ್ಪು ಕೆಲಸ ಮಾಡಿರುವನೆಂಬ ಭಾವನೆ. ಹೀಗೆ ಕೆಲವು ಸಂದರ್ಭಗಳಲ್ಲಿ ಕೆಲವು ಸನ್ನಿವೇಶಗಳಲ್ಲಿ ಅವಮಾನಿತರಾಗಿ ದುಃಖ ಪಟ್ಟದ್ದೂ ಉಂಟು, ಅವರ ಕುಟುಂಬದ ಕುರಿತು, ಮಕ್ಕಳ ವಿಧ್ಯಾಭ್ಯಾಸ ಕುರಿತು, ತಮ್ಮ ಅಣ್ಣ, ತಮ್ಮಂದಿರ, ತಂಗಿಯರ ಕುರಿತು. ತಮ್ಮ ಕುಟುಂಬದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ. ಮಗ ಹರ್ಷ ಸಾವು, ನಂತರ ತನ್ನ ಪತ್ನಿ ಲೀಲಾ ಸಾವಿನಿಂದ ತಮಗಾದ ಆಘಾತವನ್ನೂ ಹಂಚಿಕೊಂಡಿದ್ದಾರೆ.

ನಂತರ ಯುನೆಸ್ಕೊ, ಪರ್ಸಿಯಾ, ಕಾಬುಲ್, ಬಾಮಿಯಾ,ಬುಂದೆ ಅಮೀರ್, ನೇಪಾಲ, ಪೂರಿ, ಭುವನೇಶ್ವರ ದೇಗುಲ, ದಿಲ್ಲಿ, ಕಾಶಿ, ಗಯಾ, ಪ್ರಯಾಗ, ಖುಜರಾಹೋ, ನರ್ಮದೆಯ ದಂಡ ಜಬ್ಬಲಪುರ, ಕರ್ನಾಟಕದ ಹಂಪಿ, ಬಾದಾಮಿ, ಐಹೊಳೆ ಗಳ ಸ್ಥಳಗಳ ಕುರಿತು, ಸ್ಥಳದ ಮಹತ್ವ, ಅಲ್ಲಿರುವ ದೇವಾಲಯ, ನದಿಗಳ ಕುರಿತು ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ, ಅವರ ಪ್ರವಾಸ ಅನುಭವವನ್ನು ಓದಲು ಖುಷಿಯಾಗುತ್ತದೆ.

ಯಕ್ಷಗಾನ ನಾಟಕ(ಬ್ಯಾಲೆ) ಪ್ರದರ್ಶನಕ್ಕಾಗಿ ಭಾರತದಲ್ಲಿ, ವಿದೇಶದಲ್ಲಿ (ಇಂಗ್ಲೆಂಡ್, ಪೇರು, ಇಂಕಾ,ಲೀಮಾ,ಬ್ರೇಜಿಲ್,)ಯಕ್ಷಗಾನ ನಡೆಸಲು ಅವಕಾಶಗಳು ದೊರಕುತ್ತದೆ, ತಮ್ಮ ಕೀರ್ತಿಯೂ ಬೆಳೆಯುತ್ತದೆ. 1969ರಲ್ಲಿ ಪದ್ಮಭೂಷಣ ಲಭಿಸಿದಾಗ ಖುಷಿಪಟ್ಟ ಕಾರಂತರು, ಕಾಂಗ್ರೇಸ್ಸಿಗರ ರಾಜಕೀಯದಿಂದ ಬೇಸತ್ತು, ಗಾಂಧಿ ನಂತರ ಬಂದ ಹಲವಾರು ರಾಜಕಾರಣಿಗಳು ಕಾಂಗ್ರೇಸ್ ಪಕ್ಷದಲ್ಲಿದ್ದು ಭಾರತವನ್ನು ನಿರ್ನಾಮ ಮಾಡಲು ಹೊರಟಿರುವುದನ್ನು ಕಂಡು ಹಾಗು ಇಂದಿರಾಗಾಂಧಿ ನೇತೃತ್ವದಲ್ಲಿ ತುರ್ತು ಪರಿಸ್ತಿತಿ ಒದಗಿದಾಗ ಜನರ ಸಂಕಷ್ಟಗಳನ್ನು ಕಣ್ಣಾರೆ ಕಂಡು ಬೇಸತ್ತು ಪದ್ಮಭೂಷಣವನ್ನು ಹಿಂದಿರುಗಿಸುತ್ತಾರೆ, ಆ ಪ್ರಸಂಗ ಓದಿದಾಗ ಕಾರಂತರು ನಮಗೆ ಖಂಡಿತ ರೋಲ್ ಮಾಡಲ್ ಆಗುತ್ತಾರೆ.

ಇದೇ ಸಮಯದಲ್ಲಿ 1978ರಲ್ಲಿ ಪುತ್ತೂರಿನಿಂದ ಸಾಲಿಗ್ರಾಮಕ್ಕೆ ಬಂದು ನೆಲಸಿದಾಗ ರಮಾಬಾಯಿ ಜೈನ್ ಎಂಬ ಮಹಿಳೆ ಸ್ಥಾಪಿಸಿದ ಜ್ಞಾನಪೀಠ ಸಂಸ್ಥೆಯವರು ಕಾರಂತರು ಬರೆದ *ಮೂಕಜ್ಜಿಯ ಕನಸುಗಳಿಗೆ* ಪ್ರಶಸ್ತಿ ಕೊಡುತ್ತಾರೆ, ಸಾಹಿತಿಗಳಿಗೆ ಇದು ಭಾರತದಲ್ಲಿ ಕೊಡುತ್ತಿರುವ ಅತಿ ದೊಡ್ಡ ಪ್ರಶಸ್ತಿ. ಆ ಮೂಲಕ ಜನರಿಂದ ಹಲವಾರು ಶುಭಕಾಮನೆಯ ಪತ್ರಗಳು ಬಂದಾಗ ಓದುಗರಿಗೆ ತಮ್ಮ ವಿಷಯದಲ್ಲಿದ್ದ ಅಭಿಮಾನ ಎಷ್ಟಿತ್ತೆಂಬುದು ಮನವರಿಕೆಯಾಗುತ್ತದೆ.

ನಂತರ ರಾಜಕೀಯಕ್ಕೆ ಸಂಬಂಧ ಪಟ್ಚ ಗೂಂಡಾರಣ್ಯ ಮೂಜನ್ಮ, ಅದೇ ಊರು ಅದೇ ಮರ, ಕಾದಂಬರಿ ಬರೆಯುತ್ತಾರೆ. ಕಣ್ಣಿದ್ದೂ ಕಾಣರು, ಅಂಟಿದ ಅಪರಂಜಿ ಕಾದಂಬರಿಯಲ್ಲಿ ಒಬ್ಬ ವ್ಯಕ್ತಿ ತನ್ವ ಸ್ವಾರ್ಥವನ್ನು ಸಾಮಾಜಿಕ ಮನೋವಿಲಾಸದ ಶೋಷಣೆಗಾಗಿ ಬಳಸುವ,ನಿತ್ಯ ಜೀವನದ ತಮ್ಮದೇ ಹಲಕೆಲವು ಕಹಿ ಅನುಭವಗಳ ವಸ್ತುವಾಗಿದೆ.

ಯಕ್ಷಗಾನ ಪ್ರದರ್ಶನ ಅವಕಾಶದಿಂದ ಹಲವಾರು ದೇಶಗಳು ಸುತ್ತಿ, ಬ್ಯಾಲೆ ಪ್ರದಶನಕೊಟ್ಟು, ಆ ಪ್ರವಾಸದ, ಪ್ರದರ್ಶನದ ಅನುಭವಗಳನ್ನು ಪೂರ್ವದಿಂದ ಅತ್ಯಪೂರ್ವಕ್ಕೆ, ಪಾತಾಳಕ್ಕೆ ಪಯಣ, ಅರಸಿಕರಲ್ಲ ಎಂಬ ಪ್ರವಾಸ ಕಥನಗಳಲ್ಲಿ ಕಾಣಬಹುದು. ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ ತಂದು ಕೊಟ್ಟ ಕೀರ್ತಿಯಿಂದ ನಂತರ ಪ್ರಾಣಿ ಪ್ರಪಂಚವನ್ನೂ ಬರೆಯುತ್ತಾರೆ.

ಹೀಗೆ ತಮ್ಮ ಜೀವನದ ಅನುಭವಗಳನ್ನು ಸರಿಸುಮಾರು ೬೦೦ ಪುಟಗಳಲ್ಲಿ ಈ ಹುಚ್ಚು ಮನಸ್ಸಿನ ಹತ್ತು ಮುಖಗಳು (ಸಾಹಿತಿ, ಪತ್ರಿಕೋದ್ಯಮ, ಉಪಾಧ್ಯಾಯ, ರಾಜಕೀಯ, ಸಮಾಜ ಸೇವೆ, ಯಕ್ಷಗಾನ, ನಾಟಕ, ಸಂಚಾರಿ ಜೀವನ, ಛಲಚಿತ್ರ ಒಂದಾ ಎರಡಾ ಇವರಲ್ಲಿ ಹತ್ತು ಮುಖಗಳನ್ನು ಕಾಣಬಹುದು). ಕೃತಿಯಲ್ಲಿ ವಿವರಿಸಿದ್ದಾರೆ. ತಮ್ಮ ಜೀವನದ ವಿವಿಧ ಸಮಸ್ಯೆಗಳನ್ನು ಹೇಗೆ ಇದಿರಿಸಿದರೆಂದು, ಆಕರ್ಷಣೆಗಳು ಹೇಗೆ ಕಾದು ಬೆಳೆಯಿಸಿದರೆಂದು ವಿವರವಾಗಿ ಹೇಳಿದ್ದಾರೆ, ಸಾಹಿತ್ಯ, ರಂಗಭೂಮಿ, ರಾಜಕೀಯ ಇನ್ನು ಹಲವು ಕ್ಷೇತ್ರಗಳಲ್ಲಿ ತಮ್ಮ ಕೊಡುಗೆಯನ್ನು ನೀಡಿರುವ ಬಗ್ಗೆ, ಅದರಿಂದ ತಮ್ಮ ಜೀವನದಲ್ಲಾದ ಅನುಭವಗಳ ಕುರುತೂ ವಿವರಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿ, ಕರ್ನಾಟಕ ಜ್ಯೋತಿ ಬಿರುದು ಪಡೆದುದು ಹಾಗು ಕೆಲವು ಕಾರಣಗಳಿಂದ ಅವನ್ನು ಹಿಂದಿರುಗಿಸಿದ ಸಂದರ್ಭಗಳನ್ನು ಓದಿದಾಗ ಅವರು ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ.

*ಕಾರ್ತಿಕೇಯ*
Profile Image for ಸುಶಾಂತ ಕುರಂದವಾಡ.
424 reviews25 followers
February 4, 2023
ಪುಸ್ತಕ: ಹುಚ್ಚು ಮನಸ್ಸಿನ ಹತ್ತು ಮುಖಗಳು
ಲೇಖಕರು: ಶಿವರಾಮ ಕಾರಂತ

ಕರ್ನಾಟಕ ಕಂಡ ಅದ್ಭುತ ಪ್ರತಿಭೆ ಕಾರಂತರು. ಕೇವಲ ಕಾದಂಬರಿ ಸಾಹಿತ್ಯವಲ್ಲದೇ ವಿಜ್ಞಾನ, ನಾಟಕ, ಯಕ್ಷಗಾನ, ಪತ್ರಿಕೋದ್ಯಮ, ಸ್ವಾತಂತ್ರ್ಯ ಹೋರಾಟ, ಗ್ರಾಮೋದ್ಧಾರ ಹೀಗೆ ಹಲವಾರು. ಅವರು ಹಾಕದ ವಸ್ತುವೇ ಇಲ್ಲ.
ಕೋಟದಲ್ಲಿ ಜನಿಸಿದ ಕಾರಂತರು ಚಿಕ್ಕಂದಿನಿಂದಲೇ ಓದಿನ ಮೇಲೆ ಒಲವಿಟ್ಟವರು. ಅಂದರೆ ತರಗತಿಯ ಓದಲ್ಲ, ಕಥೆ ಕಾದಂಬರಿ ವಿಜ್ಞಾನ ಹೀಗೆ ಬೇರೆ ವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳು. ಬಹಳ ಜನರ ಒತ್ತಾಯದ ಮೇರೆಗೆ ತಮ್ಮ ಆತ್ಮವೃತಾಂತವನ್ನು ಬರೆಯಲು ಪ್ರಾರಂಭಿಸಿದರು. ಅದಕ್ಕೆ ತಕ್ಕ ಶೀರ್ಷಿಕೆ. ಕಾರಂತರೆಂದರೆ ಹುಚ್ಚು ಮನಸು. ಕಾರಣ ಮೇಲೆ ಹೇಳಿದಂತೆ ಅವರು ಮಾಡಿದ ಪ್ರಯೋಗಗಳು. ಒಂದಾದ ಮೇಲೆ ಒಂದು, ಅದಕ್ಕೆ ತಕ್ಕಂತೆ ಪ್ರಯಾಣ. ಆ ಮನಸ್ಸಿಗೆ ಹತ್ತು ತರಹವಾದ ಮುಖಗಳು, ಅಂದರೆ ಪ್ರತಿಯೊಂದು ಪ್ರಯೋಗದ ಮುಖಗಳು. ಹಾಗೆಯೇ ಕಾರಂತರ ಮನಸ್ಥಿತಿ ಅಂದಾಜಿಸಲಾಗದು. ಒಂದು ಸಲ ನಗುತ್ತಿದ್ದರೆ ಒಮ್ಮೆಲೇ ಕೋಪಿಸಿಕೊಳ್ಳುವರು. ಅಂತಹ ಕೆಲವು ಪ್ರಸಂಗಗಳನ್ನು ನಾನು ಹಲವಾರು ಅನ್ಯರ ಲೇಖನಗಳಲ್ಲಿ ಓಡಿದ್ದುಂಟು.
ಅಪ್ಪಟ ಗಾಂಧಿವಾದಿಯಾಗಿದ್ದರಿಂದ ಖಾದಿ ಉಡುಗೆಯಲ್ಲಿರುತ್ತಿದರು. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ.
ಮುಂದೆ ಪತ್ರಿಕೋದ್ಯಮಕ್ಕೆ ಕೈಹಾಕಿ ಮಾಸಪತ್ರಿಕೆ ಪ್ರಾರಂಭಿಸಿದರು. ಅಲ್ಲಿ ಕಥೆಗಳು ಲೇಖನಗಳನ್ನು ಬರೆದರು, ಬರೆಸಿದರು. ಶುರುವಾದ ಕೆಲವು ದಿನಗಳು ಚೆನ್ನಾಗಿ ನಡೆದು ನಂತರ ಅವನತಿಯತ್ತ ಮುಖಮಾಡುತ್ತದೆ. ಕಾರಣ ಹಳ್ಳಿಯಲ್ಲಿ ಓದುಗ ರಸಿಕರ ಸಂಖ್ಯೆ ವಿರಳ. ಕೆಲದಿನಗಳ ತರುವಾಯ ಮಾಸ ಪತ್ರಿಕೆಯನ್ನು ಮುಚ್ಚುವ ನಿರ್ಧಾರ ಮಾಡುತ್ತಾರೆ. ಮುಚ್ಚಿದ ಮೇಲೂ ಒಳ್ಳೆಯದಾಗಿ ನಡೆಸುತ್ತಿದ್ದೀರಿ ಯಾಕೆ ನಿಲ್ಲಿಸಿದಿರಿ ಅಂತ ತಮ್ಮ ಅಭಿಪ್ರಾಯವನ್ನು ತೋಡಿಕೊಂಡಿದ್ದರು. ಇದರಿಂದ ಸಾಲದಲ್ಲಿ ಬಿದ್ದರು ಕಾರಂತರು, ಹೇಗೋ ಗೆಳೆಯರ ಸಹಾಯದಿಂದ ಪಾರಾದರು.
ಈ ಸಾಲದಿಂದ ಪಾರಾಗಲು ಕಾದಂಬರಿ ನಾಟಕ ಬರೆದು ಅವುಗಳನ್ನು ಆಡಿಸಿ ಜೀವನಕ್ಕೆ ಒಂದು ದಾರಿಯನ್ನು ಕಂಡುಕೊಳ್ಳುತ್ತಾರೆ. ಅದೇ ಹಣದಿಂದ ತಮ್ಮ ಸಂಚಾರಕ್ಕೆ ಉಪಯೋಗಿಸುತ್ತಾರೆ. ತಮ್ಮ ಜೀವನದುದ್ದಕ್ಕೂ ಸಂಚಾರ-ಪ್ರವಾಸಕ್ಕೆ ಪ್ರಾಮುಖ್ಯತೆ ಕೊಟ್ಟು ಬಗೆಬಗೆಯ ಸಂಸೃತಿಯನ್ನು ಕಂಡರು. ಅಂತಹ ಕೆಲವು ತಮ್ಮ ಸಂಚಾರ ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಅವರು ಅಷ್ಟು ವೈವಿಧ್ಯಮಯ ಕಾದಂಬರಿಗಳನ್ನು ಬರೆಯಲು ಅವರ ಸಂಚಾರಗಳೇ ಕಾರಣ ಅಂತ ಹೇಳಬಹುದು. ಕೇವಲ ಭಾರತವಲ್ಲದೇ ವಿದೇಶ ಪ್ರಯಾಣ ಮಾಡಿ ಬಂದು ಅಲ್ಲಿಯ ಜನತೆಯ ಬಗ್ಗೆಯೂ ಹೇಳಿದ್ದಾರೆ.
ಪ್ರಯೋಗಗಳೆಂದರೆ ಕಾರಂತರಿಗೆ ಎಲ್ಲಿಲ್ಲದ ಪ್ರೀತಿ. ಅದಕ್ಕೆಂದೇ ಬಾಲವನ ಎಂಬ ಶಾಲೆ ನಿರ್ಮಿಸಿ ಅಲ್ಲಿ ಮಕ್ಕಳಿಗೆ ಹೊಸ ರೀತಿಯ ಪಾಠಗಳನ್ನು ಹೇಳತೊಡಗಿದರು. ಆಗಲೇ ಚಿಣ್ಣರ ಕುರಿತಾಗಿ ಹಲವಾರು ಲೇಖನಗಳು ಮತ್ತು ಕಥೆಗಳನ್ನು ಬರೆದರು, ಅವರಿಗೆ ವಿಜ್ಞಾನ ಅರಿವು ಪ್ರಾಪ್ತವಾಗಲೆಂದು ಸರಳ ಭಾಷೆಯಲ್ಲಿ ಲೇಖನಗಳನ್ನು ಬರೆಯುತ್ತಾರೆ. ಮುಂದೆ ಈ ಅನುಭವವೇ ಅವರಿಗೆ ಶಿಕ್ಷಣ ಇಲಾಖೆಯಲ್ಲಿ ಸಲಹೆಗಾರರಾಗಿ ಅವಕಾಶ ಸಿಗುವಂತಾಯಿತು.
ವೈವಾಹಿಕ ಜೀವನದ ಬಗ್ಗೆ ಸ್ವಲ್ಪವೇ ಬರೆದಿರುವ ಕಾರಂತರು, ಕುಟುಂಬಕ್ಕೆಂದು ಸಮಯ ನೀಡಿದ್ದು ಬಹಳ ಕಮ್ಮಿ. ಸದಾಕಾಲ ಸಂಚಾರ, ಅನುಭವಗಳನ್ನು ಆಸ್ವಾದಿಸುವ ಅವರಿಗೆ ಒಂದೇ ಸ್ಥಳದಲ್ಲಿ ಹೆಂಡತಿ ಮಕ್ಕಳ ಎದುರು ಕೂಡು ಎಂದರೆ ಹೇಗೆ ಒಪ್ಪಿಕೊಂಡಾರು?! ಆದರೆ ವಯಸ್ಸಾಗುತ್ತ ಬಂದಂತೆ ಸಾಲಿಗ್ರಾಮದಲ್ಲಿ ತಮ್ಮ ಗೆಳೆಯ ನೀಡಿದ ಮನೆಗೆ ಬಂದ ಮೇಲೆ ಮಗನ ವಿಯೋಗ ಅವರ ಮೇಲೆ ಬಹಳ ಪ್ರಭಾವ ಬೀರಿತು. ಅದಕ್ಕೆ ದೇವರನ್ನು ಅವರು ಶಪಿಸಿದ್ದುಂಟು. ತಮ್ಮನ್ನು ನಾಸ್ತಿಕರು ಎಂದುಕೊಳ್ಳುವ ಅವರು ಹಾಗೆ ನೋಡಿದರೆ ದೇವರ ಅಸ್ತಿತ್ವದಲ್ಲೂ ಪ್ರಯೋಗ ಮಾಡಿದವರು ಮತ್ತು ಅದರ ಬಗ್ಗೆ ಜನರ ಜೊತೆಗೆ ಚರ್ಚಿಸಿದ್ದೂ ಉಂಟು.
ಮೊದಲಿನಿಂದಲೂ ವೈವಿಧ್ಯಮಯ ಲೇಖನಗಳನ್ನು ಬರೆಯುತ್ತಿದರೂ ಕಾರಂತರನ್ನು ಜನರು ಗೌರವಿಸಿದ್ದು ಕಮ್ಮಿ. ಕಾರಣ ಅವರ ಸ್ವಭಾವ ಮತ್ತು ದೇವರ ಬಗ್ಗೆ ಅವರ ಅನಿಸಿಕೆಗಳು. ಆದರೆ ಅವರಿಗೆ ಜ್ಞಾನಪೀಠ ಸಿಕ್ಕಾಗ ಜನರಿಂದ ಅಭಿನಂದನೆಗಳ ಮಹಾಪೂರವೇ ಬಂದಿತು. ಇದರಿಂದ ಅವರ ಲೇಖನಿಯಲ್ಲಿ ಎಷ್ಟು ಶಕ್ತಿಯಿದೆ ಅಂತ ಅರಿವಾಗಿದ್ದು ಮತ್ತು ಸಂತೋಷವೂ ಆಗಿದ್ದು.
ಕೊನೆಯದಿನಗಳಲ್ಲಿ ಸಾಲಿಗ್ರಾಮದಲ್ಲಿದ್ದು ಕೊನೆಯತನಕ ಬರವಣಿಗೆ ಮತ್ತು ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಾವಾಗಲೂ ಕಾರ್ಯನಿರತರಾದವರು.
Profile Image for Bharath Manchashetty.
126 reviews3 followers
January 2, 2026
ಕಾರಂತರ ಜೀವನ ಇಷ್ಟು ಸ್ವಾರಸ್ಯಕರ ಕಷ್ಟ ಕೋಟಲೆಗಳಿಂದ ಕೂಡಿದರೂ ಎಂದಿಗೂ ಎದೆಗುಂದದ, ಹತಾಶೆ ಕಳೆದುಕೊಳ್ಳದ ವ್ಯಕ್ತಿತ್ವ ಪ್ರತೀ ಓದುಗನಿಗಲ್ಲದೆ ಎಲ್ಲರಿಗೂ inspiration.

ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಮಾಡದೇ ಇರುವ ಕೆಲಸವಿಲ್ಲ ಎನ್ನಬಹುದು.

ಇವರ ಹಲವು ಕೃತಿಗಳನ್ನು ಓದಿ ನಂತರ ಇದನ್ನು ಓದಿದರೆ ಖಂಡಿತವಾಗಿಯೂ ಕಾರಂತರನ್ನು ಇಷ್ಟ ಪಡದೇ ಇರಲು ಸಾಧ್ಯವಿಲ್ಲ.

MUST READ TO EVERYONE.
Profile Image for Prashanth Bhat.
2,159 reviews139 followers
March 9, 2014
autobiography of shivaram karanth..his thoughts and journey
1 review
Currently reading
March 31, 2019
I Want to read Huchchu manassina hattu mukhagalu by shivarama karanth
Displaying 1 - 13 of 13 reviews

Can't find what you're looking for?

Get help and learn more about the design.