ಅಜಂತದ ಗುಹೆಗಳಲ್ಲಿರುವ ಪ್ರಪಂಚ ಪಸಿದ್ದವಾದ ಪದ್ಮಪಾಣಿಯ ಚಿತ್ರವು ಬೋದಿಸತ್ವನ ಪ್ರತಿರೂಪವಾದರೆ ಅದರಲ್ಲೇಕೆ ಹೆಣ್ಣಿನ ಸೌಂದರ್ಯ ತುಂಬಿಕೊಂಡಿದೆ?
ಕೋಲಾರದ ಬಳಿಯ ಒಂದು ಹಳ್ಳಿಯ ವಂಶದ ಕುಡಿಯನ್ನು ಉಳಿಸುವ ಸಲುವಾಗಿ ಅಲ್ಲಿನ ಮೂಲದೇವತೆ ನಿಜಕ್ಕೂ ಬೆಂಕಿ ಇಲ್ಲದೆ ಹಾಲನ್ನು ಉಕ್ಕಿಸಿದಳೆ?
ಒಂದು ಕಾಲದಲ್ಲಿ ಹೊಯ್ಸಳರ ಅರ್ಥಿಕ ಹಾಗೂ ಧಾರ್ಮಿಕ ಕೇಂದ್ರವಾಗಿದ್ದ ತಲಕಾಡು ನಗರ ಅಲಮೇಲಮ್ಮನ ಶಾಪದಿಂದಾಗಿಯೆ ಮರಳಿನಿಂದ ತುಂಬಿಕೊಂಡಿತೆ? ಮೈಸೂರು ಅರಸರನ್ನೂ ಅಕೆಯ ಶಾಪ ತಟ್ಟಿದ್ದು ಎಷ್ಟು ಸತ್ಯ?
ಕಿತ್ತೂರು ವಂಶದ ಪಟ್ಟಿಯಲ್ಲಿ ಮುಸ್ಲಿಂ ರಾಜ ಬರಲು ಹೇಗೆ ಸಾಧ್ಯ?
ಬೇಲೂರು ದೇವಾಲಯದ ಶಿಲಾಬಾಲಿಕೆಯರಿಗೆ ಶಾಂತಲೆ ಮಾದರಿಯಾಗಿದ್ದಳೆ ಎಂಬ ಪ್ರಶ್ನೆಯ ಬಗ್ಗೆ ಪಿಹೆಚ್ ಡಿ ಮಾಡುತ್ತಿದ್ದ ಮಾಧವಿ ಕಂಡುಕೊಂಡ ಸತ್ಯ ಏನು?
ಸಸ್ಯಗಳಲ್ಲೂ ತಾಯಿ ಮಕ್ಕಳ ಕಲಹ ಇದೆ ಎಂದು ಪುರಾವೆ ಸಹಿತ ತೋರಿಸಿದ ಪ್ರೊಫ಼ೆಸರ್ ಅವರನ್ನು ಅದೇ ಬಗೆಯ ಸಮಸ್ಯೆ ತಮ್ಮ ಸಂಸಾರದಲ್ಲೂ ಕಾಡಲು ಕಾರಣ?
ಬಂಗಾಳ ಸಮುದ್ರದಲ್ಲಿ ಭಾರತದ ನೌಕಾಪಡೆಯ ಜೊತೆ ಮಿಲಿಟರಿ ಕಸರತ್ತು ಮಾಡುತ್ತಿದ್ದ ಅಮೆರಿಕದ ಯುದ್ದ ನೌಕೆಗಳ ತಂಡ ಒಂದು ರಹಸ್ಯ ಕಾರ್ಯಾಚರಣೆಯಲ್ಲಿ ನಿರತವಾಗಿತ್ತೆ?
ಬೌದ್ದ ಧರ್ಮದ ಬಿಕ್ಕುಗಳ ಜೀವನ ನಿಯಮಗಳನ್ನು ರೂಪಿಸುವಲ್ಲಿ ಬುದ್ದನ ಜೀವನವನ್ನೇ ಮಾದರಿಯಾಗಿಸಿಕೊಂಡದ್ದು ಎಷ್ಟು ಸರಿ? ಬೌದ್ದ ಮುನಿಗಳು ಸಂಸಾರ ಜೀವನವನ್ನು ಅಳವಡಿಸಿಕೊಳ್ಳುವುದು ಬುದ್ದನ ಬೋಧನೆಗೆ ತಾತ್ವಿಕವಾಗಿ ವಿರೋಧವಾಗುತ್ತದೆಯೆ? ಇಂಥಹ ಪ್ರಶ್ನೆಗಳನ್ನು ಬೌದ್ದ ಮುನಿಯೊಬ್ಬನ ಮನಸ್ಸಿನಲ್ಲಿ ನೆಟ್ಟ ಹೆಣ್ಣೊಬ್ಬಳು ಸಾಮ್ರಾಟ ಅಶೋಕನನ್ನೆ ಪೇಚಿಗೆ ಸಿಲುಕಿಸಿ ಬೌದ್ದ ಧರ್ಮದ ತಾತ್ವಿಕತೆಯನ್ನೆ ಪ್ರಶ್ನಿಸಿದ್ದಳು.
Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.
Education: Ph. D. University of Agricultural Sciences, Bangalore, India, l983 M.Sc. (Agri.) in Genetics & Plant Breeding, UAS, Bangalore, l979 B.Sc (Agri.), University of Agricultural Sciences, Bangalore, l976.
Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.
Though an agriculture scientist, his novels and stories bring to the reader, the lesser-known and hidden facts of history along with science. Some of his novels are also aimed at bringing the most complicated elements of science to the general reader.
Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.
In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013
Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines
ಗಣೇಶಯ್ಯ ಅವ್ರ ಪುಸ್ತಕಗಳೇ ಹಾಗೆ, ಕಣ್ಣ ಮುಂದಿರುವ ವಿಶಾಲ ಸಾಗರದಂತೆ ತಿಳಿದುಕೊಳ್ಳುವುದಕ್ಕೆ ಹಲವು ವಿಷಯಗಳಿರುತ್ತವೆ. ಚರಿತ್ರೆ, ಸಸ್ಯ ವಿಜ್ಞಾನ, ಪ್ರಾಣಿ/ಕೀಟ ಪ್ರಪಂಚ ಇತ್ಯಾದಿ ವಿಷಯಗಳು ಅವರ ಪುಸ್ತಕಗಳಲ್ಲಿ ಕಾಣ ಸಿಗುವುದು ಅವರ ಪುಸ್ತಕದ ಸ್ಪೆಷಾಲಿಟಿ. ಚರಿತ್ರೆಯ ರೋಚಕ ಸಂಗತಿಗಳನ್ನು ರೋಚಕ ಕಥಾ ಹಂದರದಲ್ಲಿ ಹುದುಗಿಸಿ ಓದುಗರಿಗೆ ಉಣ ಬಡಿಸುವುದು ಅವರ ಸ್ಟೈಲು.
------------------------
ನಾನು ಇತ್ತೀಚಿಗೆ ಓದಿದ ಅವರ ಪುಸ್ತಕ ‘ಪದ್ಮಪಾಣಿ’. ಒಟ್ಟು ೮ ಕಥೆಗಳ ಸಂಕಲನ ಇದಾಗಿದ್ದು, ಗೊತ್ತಿಲ್ಲದ ಹಲವು ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಯಿತು.
೧. ಪದ್ಮಪಾಣಿ
ಅಜಂತಾ ಗುಹೆಯಲ್ಲಿ ಇರುವ ಪದ್ಮ ಪಾಣಿಯ ಮೊಗದ ಹಿಂದಿನ ರಹಸ್ಯ ಏನು? ಕಮಲಾಂಬಿಕೆ ಯ ಹಠ, ದಿನ್ನಗರ ಚಾತುರ್ಯ, ವಿಷ್ಣು ಶರ್ಮನ ಕೌಶಲ್ಯ - ಇವುಗಳ ಒಟ್ಟು ರೂಪವೇ ಪದ್ಮಪಾಣಿಯೇ? ಸನ್ಯಾಸವನ್ನು ಅಪ್ಪಿಕೊಂಡು ಸಂಸಾರವ ತೊರೆದ ಭೌದ್ಧ ಬಿಕ್ಕುಗಳು ತಮ್ಮ ಪೂರ್ವ ಸಂಸಾರವನ್ನು ಹಿಂದೆಯೇ ಬಿಟ್ಟು ಬರುತ್ತಾರೆ. ಅಂತಹ ಅದೆಷ್ಟೋ ಕುಟುಂಬಗಳಲ್ಲಿದ್ದ ಮಹಿಳೆಯರಲ್ಲಿ ಕಮಲಾಂಬಿಕೆಯೂ ಒಬ್ಬಳು. ನಂತರ ವರುಷಗಳ ನಂತರ ಅಜಂತಾದ ಗುಹೆಯಲ್ಲಿ ಉದಯಿಸಿದ ಪದ್ಮಪಾಣಿ ,ಇವಳ ಸೇಡಿಗೆ ಮೂಕ ಸಾಕ್ಷಿ!
೨. ಕೆರಳಿದ ಕರುಳು
ಪಾಲುಕ್ಕಮ್ಮನ ಐತಿಹ್ಯ ತಿಳಿದುಕೊಳ್ಳಲು ಹೊರಟ ಲೇಖಕರಿಗೆ ಸಿಕ್ಕಿದ ಮಾಹಿತಿ ಒಂದೆಡೆಯಾದರೆ ,ದೇವರ ಮೂರುತಿಯಲ್ಲಿ ಸಿಕ್ಕಿದ ತಾಳೆ ಗರಿಯಲ್ಲಿ ಇದ್ದ ರಹಸ್ಯ ರೋಚಕವಾದ ಗುಟ್ಟನ್ನು ಬಿತ್ತುಕೊಡುತ್ತದೆ. ಅಕ್ಕಮ್ಮನ ಕೋಪ, ಕೋಟಿಗೆಣ್ಣನ ಮಗುವನ್ನು ಅಕ್ಕಮ್ಮ ಸಾಕಿದ್ದು..ನಂತರ ಅವಳ ಕೃತಾರ್ಥವಾಗಿ ಸಾಕಮ್ಮ ‘ಪಾಲು ಅಕ್ಕಮ್ಮ ’ ಎಂದು ಅಕ್ಕಮ್ಮ ನನ್ನು ದೇವರನ್ನಾಗಿಸಿದ್ದು ಹೀಗೆ ಕಥೆಯು ಸಾಗಿ ಕೊನೆಯವರೆಗೂ ಓದುಗರನ್ನು ಹಿಡಿದಿಡುತ್ತದೆ.
೩. ಮರಳ ತೆರೆಗಳೊಳಗೆ
ಅಲಮೇಲಮ್ಮ ,ಮೈಸೂರು ಅರಸರಿಗೆ ಕೊಟ್ಟ ಶಾಪದ ಬಗ್ಗೆ ಗೊತ್ತೇ ಇದೆ. ಆದರೆ ಅದರ ಹಿಂದಿನ ಕೆಲವು ವೈಜ್ಞಾನಿಕ ಹಾಗೂ ಐತಿಹಾಸಿಕ ಘಟನಾವಳಿಗಳು ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಗಣೇಶಯ್ಯ ಅವರು ‘ಮರಳ ತೆರೆಗಳೊಳಗೆ’ ಎಂಬ ಕಥೆಯಲ್ಲಿ ಇದನ್ನು ವಿವರಿಸಿದ್ದಾರೆ. Phd ವಿದ್ಯಾರ್ಥಿನಿ ಕಲ್ಪನಾ ಹಾಗೂ ಕರ್ನಾಟಕ ಸರ್ಕಾರದ ಪರಂಪರೆ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಡಾ| ಗಿರಿಜಾ ಎಂಬುವವರ ನಡುವೆ ನಡೆಯುವ ಸೊಗಸಾದ ಸಂಭಾಷಣೆ ಯ ಮೂಲಕ ಶಾಪದ ಹಲವು ಆಯಾಮಗಳನ್ನು ಲೇಖಕರು ವಿವರಿಸಿದ್ದಾರೆ. ತಲಕಾಡಿನ ವೃದ್ಧೆ ಓರ್ವರ ಮಾತಿನಲ್ಲಿ ಶಾಪದ ಹೊಸ ಮುಖ ಗೋಚರಿಸಿ , ಹೀಗೂ ಇರಬಹುದು ಎಂಬುದು ಸ್ಪಷ್ಟವಾಗುತ್ತದೆ.
೪. ಕಿತ್ತೂರ ನಿರಂಜಿನಿ
ಕಿತ್ತೂರು ರಾಣಿ ಚೆನ್ನಮ್ಮನ ವಂಶದಲ್ಲಿ ಇದ್ದ ೯ ನೆ ರಾಜ ಮಾಳವ ರುದ್ರೆ ಗೌಡ ಉರ್ಫ್ ಫಕೀರ ರುದ್ರ ಸರ್ಜಾ ಎಂಬ ರಾಜನ ಹೆಸರಿನಿಂದ ಲೇಖಕರಿಗೆ ಉಂಟಾದ ಗೊಂದಲದ ಫಲಶ್ರುತಿ ಈ ‘ಕಿತ್ತೂರ ನಿರಂಜನ’ ಎಂಬ ಕಥೆ. ಕಲ್ಮಠದ ನೆಲಮಾಳಿಗೆ ಯಲ್ಲಿ ಇದ್ದ ಎರಡು ಸಮಾಧಿಗಳ ಹಿಂದಿನ ಕಥೆ ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತೆ. ಅದು ರಾಜ ರುದ್ರೆ ಗೌಡ ಹಾಗೂ ನಿರಂಜನ ಎಂಬ ಮುಸಲ್ಮಾನ ಹೆಣ್ಣು ಮಗಳ ನಡುವೆ ಇದ್ದ ಅನನ್ಯ ಪ್ರೀತಿ ಗೆ ಸಾಕ್ಷಿ. ಬಾಳಲ್ಲಿ ನಡೆದ ಕೆಲ ಷಡ್ಯಂತ್ರ ಗೆಳಿಂದ ಬೇಸತ್ತ ನಿರಂಜನ ಎಲ್ಲವನ್ನೂ ಎಲ್ಲರನ್ನೂ ತೊರೆದು ಸನ್ಯಾಸ ದೀಕ್ಷೆ ಪಡೆಯುತ್ತಾಳೆ. ಕಥೆಯ ಕೊನೆಯಲ್ಲಿ ನಿರಂಜನ ಳನ್ನು ನೆನೆದು ದುಃಖ ಉಮ್ಮಳಿಸಿ ಬಂತು. ಏನಪ್ಪಾ ಅಂತ ಸಂಗತಿ ? ತಿಳಿದುಕೊಳ್ಳಲು ಕಥೆಯನ್ನು ಓದಿ.
೫. ಕಲೆಯ ಬಲೆಯಲ್ಲಿ - ಬೇಲೂರಿನ ಮದನಿಕೆಗಳ ಹಿಂದಿರುವ ರೂಪದರ್ಶಿಯರು ಯಾರು ?ನಾಟ್ಯ ಸರಸ್ವತಿ ಶಾಂತಲೆಯೇ? ಹೀಗೊಂದು ಪ್ರಶ್ನೆಯ ಹಿನ್ನೆಲೆಯಲ್ಲಿ ಬೆಳೆದಿರುವ ಈ ಕಥೆಯಲ್ಲಿ phd ವಿಧ್ಯಾರ್ಥಿನಿ ಮಾಧವಿ ತನ್ನ ಪ್ರಭಂದದ ಮೂಲಕ ಉತ್ತಮ ಹುಡುಕವ ಪ್ರಯತ್ನ ಮಾಡುತ್ತಾಳೆ. ಚಾವಣ - ಶಾಂತಲೆಯ ಕಲಾ ಪ್ರೇಮ, ವನಜಾಂಬಿಕೆಯ ತ್ಯಾಗ ಹೀಗೆ ಹಲವು ಸಂಗತಿಗಳು ಬೇಲೂರಿನ ಮದನಿಕೆಯಲ್ಲಿ ಬೆರೆತು , ಅವುಗಳ ಸೌಂದರ್ಯದ ಹುಡುಕಾಟಕ್ಕೆ ಹೊಸ ಆಯಾಮ ನೀಡುತ್ತದೆ.
೬. ಉಗ್ರಭಂದ - ತಾಯಿ ಮತ್ತು ಮಕ್ಕಳ ಕಲಹ ಸಾಧ್ಯವೇ ? ಎಂಬ ಥೀಸಿಸ್ ನ ಸುತ್ತ ಹೆಣೆದಿರುವ ಕಥೆಯಿದು. ತಮಗೆ ಬಂದ ಥೀಸಿಸ್ ನ ಮೇಲೆ ರಶೀದಾ ಳ ಹೆಸರು ಕಂಡು ಬೆಚ್ಚಿದ ಪ್ರೊ ಮೋಹನ್ ರಾಮ್, ಕೆಲ ವಾರಗಳ ಹಿಂದೆ ನಡೆದ ಘಟನೆಯನ್ನು ಮೆಲುಕು ಹಾಕುತ್ತಾರೆ. ರಶೀದ ತಾನು ಪ್ರೀತಿಸಿದ ಹುಡುಗಿಯೆಂದೂ, ಆಕೆಯನ್ನೇ ವಿವಾಹ ವಾಗುದುವುದೆಂದೂ ,ಬೇರೆ ಮನೆಗೆ ಹೋಗುವುದೆಂದು ತಮ್ಮ ಮಗ ಹೇಳಿದ್ದನ್ನು ಅವರು ಹೇಗೆ ಮರೆತಾರು? ಕೆಲ ವರುಷಗಳ ಹಿಂದೆ ತಮ್ಮ ಮಗಳು ಹಾಗೂ ಹೆಂಡತಿಯ ಮೇಲೆ ನಡೆದ ಉಗ್ರರ ದಾಳಿಯೂ ನೆನೆಪಾಗಿ ಮೋಹನ್ ರಾಮ್ ಕುಗ್ಗಿಹೋಗುತ್ತಾರೆ. ಥೀಸಿಸ್ ಸೆಮಿನಾರ್ ಎಲ್ಲಾ ಮುಗಿದು ಕೊನೆಗೆ ರಶೀದ ಳ ಜೊತೆ ಮಗ ಮನೆಗೆ ಏಕೆ ಬರುತ್ತಾನೆ? ಅಸಲಿಗೆ ಈ ರಶೀದಾ ಯಾರು? ತಿಳಿದುಕೊಳ್ಳಲು ನೀವು ಈ ಕಥೆಯನ್ನು ಓದಬೇಕು!
೭. ಮಲಬಾರ್ ೦೭
ಮಲಬಾರ್ ೭ ಎಂಬ ಹೆಸರಿನಲ್ಲಿ ಬಂಗಾಳ ಕೊಲ್ಲಿಯಲ್ಲಿ ನಡೆಯುತ್ತಿದ್ದ ಇಂಡೋ ಅಮೆರಿಕನ್ ನೌಕಾ ಆಪರೇಷನ್ ನಲ್ಲಿ ಅಮೆರಿಕ ಗುಪ್ತವಾಗಿ ನಡೆಸಿದ ಕಾರ್ಯಾಚನೆಯನ್ನು ಭೇದಿಸಿದಾಗ ಸಿಕ್ಕಿದ ಮಾಹಿತಿ ನಿಜಕ್ಕೂ ರೋಚಕವಾಗಿದೆ. ಸಿಲಿಕಾನ್ ball nano technology ಯನ್ನು ಬಳಸಿಕೊಂಡು ಹೇಗೆ ಕಿ ಸ್ಟೋನ್ species ಗಳನ್ನೂ ನಶಗಳೊಸಿಬಹುದು ಎಂಬುದರ ಮಾಹಿತಿ ಇಲ್ಲಿದೆ. ಅರಳಿ ಮರದ ಪರಾಗ ಸ್ಪರ್ಶದ ಕ್ರಿಯಾ ವಿಧಾನವನ್ನು ಈ ಕಥೆಯ ಮೂಲಕ ತಿಳಿದುಕೊಂಡೆ.
೮. ಧರ್ಮ ಸ್ತಂಭ
ಸಾಂಚಿಯಲ್ಲಿರುವ ಮುರಿದಿದ್ದ ಅಶೋಕ ಸ್ತಂಭದ ಹಿಂದಿನ ಚರಿತೆಯನ್ನು ಲೇಖಕರು ಇಲ್ಲಿ ಉಲ್ಲೇಖಿಸಿದ್ದಾರೆ. ಭೌದ್ದ ಧರ್ಮದ ತತ್ವಗಳ ಬುಡವನ್ನು ಅಲ್ಲಾಡಿಸಿದ ಪರಂಜಿತರ ಚಿಂತನೆ, ಆ ತತ್ವಗಳಿಗೆ ಮೂಲಾಧಾರವಗಿದ್ದ ಮಾದ್ರಿಯ ಸರಳ ಪ್ರಶ್ನೆಗಳು ಹೀಗೆ ಹಲವು ವಿಚಾರವನ್ನು ಇತಿಹಾಸದ reference ಜೊತೆ ಸೇರಿಸಿ ಸುಂದರವಾಗಿ ಕಥೆ ಹೆಣೆದಿದ್ದಾರೆ ಲೇಖಕರು.
ಒಂದು ಕಥೆ, ಅದನ್ನ ನೀವು ಕೇಳುವುದು (ಮತ್ತು ಕೇಳಿಸುವುದು) ನಿಮ್ಮ ಹೃದಯದಲ್ಲಿ! ಹೌದು! ಮತ್ತದರ ಮಾರ್ದನಿ ನಿಮ್ಮ ಹೃದಯದ ಕೋಣೆಯಲ್ಲೆಲ್ಲ ಅನುರಣನವಾಗುತ್ತೆ. ಅದಕ್ಕೆ ನಿಮ್ಮ ಪ್ರತಿಸ್ಪಂದನ ಹೃದಯದಲ್ಲಿ ಕಂಪನವೇಳಿಸುತ್ತೆ. ನಿಮ್ಮ ಬೇರೆಲ್ಲಾ ಆಲೋಚನೆಗಳು ಸ್ತಬ್ಧವಾಗುತ್ತೆ, ಅಲ್ಲಿ ಪದ್ಮಪಾಣಿಯ ಕಥೆ ಮಾತ್ರ play ಆಗುತ್ತಿರುತ್ತೆ.
ಈ ಕಥೆಗಳಲ್ಲಿ ಬರುವ ವಿಚಾರಗಳಲ್ಲಿ ಕೆಲವೊಂದು ಊಹೆಗೂ ಮೀರಿದ್ದು, ಕೆಲವೊಂದು ಕಲ್ಪನೆಗೂ ಮೀರಿದ್ದು!
ಹೆಣ್ಣಿಬ್ಬರ ಮಹತ್ವಾಕಾಂಕ್ಷೆ, ದೂರಾಲೋಚನೆ, ಕಲೆಯ ಕುರಿತಾದ ದೂರದೃಷ್ಟಿ ಹಾಗೂ ಅದರ ಅಮರತೆಯ ಬಗೆಗಿನ ತಿಳುವಳಿಕೆ.... ಮತ್ತು ರಾಣಿಯಾಗಿ, ಮಹಿಳೆಯಾಗಿ ವ್ಯಕ್ತಿಗೆ ಇರಬಹುದಾದ ನೂರಾರು ಕಟ್ಟುಪಾಡುಗಳ ಮಧ್ಯೆ ಅದನ್ನು ಕಾರ್ಯಗತಗೊಳಿಸಲು ಅವರು ತೋರುವ ಬುದ್ಧಿವಂತಿಕೆ, ದೃಢ ನಿರ್ಧಾರ, ಹಾಗೆ ಮಾಡಲು ಅದೆಂಥಾ ಗಟ್ಟಿ ವ್ಯಕ್ತಿತ್ವ, ದಿಟ್ಟತನ ಇರಬೇಕೆಂದು ನಮ್ಮಲ್ಲಿ ಅಗಾಧವಾಗಿ ಮೂಡುವ ಅಚ್ಚರಿ...
ಅಶೋಕನ ಆತುರದ ನಿರ್ಧಾರದಿಂದಲೋ, ತಪ್ಪು ತಿಳುವಳಿಕೆಯಿಂದಲೋ ಅಥವಾ ಅವನ ಮೂಗಿನ ನೇರಕ್ಕೆ ಯೋಚಿಸಿದ್ದರಿಂದಲೋ ಇಲ್ಲವೇ ಧರ್ಮವನ್ನ ರಕ್ಷಿಸುವ ಸಲುವಾಗಿ ಅಧರ್ಮವನ್ನಾಚರಿಸುವ ಅವನ ಬುದ್ಧಿಯ ಮುಂದೆ ಮಾದ್ರಿಯ ಎದೆಗಾರಿಕೆಯ, ಮುಕ್ತಮಾತು, ಸರಿ ಕಂಡು ಬಂದದ್ದನ್ನ ಹೇಳುವಲ್ಲಿ ಅವಳು ತೋರುವ ದಿಟ್ಟತನ, ಅವಳ ಸರಳ ಪ್ರಶ್ನೆಗಳಲ್ಲಿರುವ ಅಗಾಧ ವಿಚಾರಗಳೂ, ಅವುಗಳಿಗೆ ಯಾರಲ್ಲಿಯೂ ಉತ್ತರ ವಿಲ್ಲದಿರುವುದು....
ಅಶೋಕನ ದುಡುಕು ನಿರ್ಧಾರಗಳಿಂದ ಧರ್ಮದ ಸಂಕೇತವಾಗಿದ್ದ ಅಶೋಕ ಸ್ಥಂಭಕ್ಕಾವ ಅರ್ಥವಿಲ್ಲ ಎಂಬುದನ್ನು ಸೂಚಿಸುವಂತೆ ಅವಳು ಅದನ್ನು ಕೆಡಹುವುದು ನಮ್ಮ ಕಣ್ಣರಳಿಸುತ್ತದೆ, ಅಬ್ಬಾ ಎಂಬ ಭಾವ ಮನದಲ್ಲಿ ಮೈದೋರುತ್ತದೆ.
ನಾನು ಎಂಬ ಭಾವ ಅತಿಯಾದರೆ ಆಗುವ ದುರಂತವೇ, ನಾವು ಮಾತ್ರ ಎಂಬ ಧೋರಣೆ ಹೆಚ್ಚಾದಾಗಲೂ ಮಿಗಿಲಾಗಿ ಸಂಭವಿಸುತ್ತದೆ ಎಂಬುದಕ್ಕೆ ಹಾಗೂ ಮಾನವರ ಸ್ವಾರ್ಥಕ್ಕಾಗಿ ನಡೆಸುವ ದೌರ್ಜನ್ಯಗಳು ಹೇಗೆ ಒಬ್ಬರಲ್ಲಿ ಜಿಗುಪ್ಸೆ, ನಿರಾಸೆಯನ್ನ ಹುಟ್ಟಿಸುತ್ತೆ ಎಂಬುದಕ್ಕೆ ಕಿತ್ತೂರಿನ ನಿರಂಜನಿಯ ಕಥೆ ಒಳ್ಳೆಯ ಉದಾಹರಣೆ.
ಹೇಗೆಲ್ಲಾ ಇರಬಾರದು, ಹಾಗಿದ್ದರೆ ಎಂಥೆಂಥ ದುರಂತಗಳಾಗುತ್ತವೆ ಎಂಬುದಕ್ಕೆ ಕೆ ಎನ್ ಗಣೇಶಯ್ಯ ಅವರ ಪದ್ಮಪಾಣಿ ಕೃತಿಯ ಕಥೆಗಳು ಉತ್ತಮ ಉದಾಹರಣೆಯಾಗಿವೆ.
ಪುಸ್ತಕ: ಪದ್ಮಪಾಣಿ ವಿಭಾಗ: ಕಥಾ ಸಂಕಲನ ಲೇಖಕ: ಕೆ.ಎನ್ ಗಣೇಶಯ್ಯ
ಕೆ.ಎನ್. ಗಣೇಶಯ್ಯ ಅವರ ಪುಸ್ತಕಗಳು ವಿಶಾಲ ಸಾಗರದಂತೆ , ಚರಿತ್ರೆ, ಸಸ್ಯ ವಿಜ್ಞಾನ, ಪ್ರಾಣಿ,ಕೀಟ ಪ್ರಪಂಚ ಇತ್ಯಾದಿ ವಿಷಯಗಳು ಅವರ ಪುಸ್ತಕಗಳಲ್ಲಿ ಕಾಣ ಸಿಗುವುದು ಅವರ ಪುಸ್ತಕದ ಸ್ಪೆಷಾಲಿಟಿ. ಚರಿತ್ರೆಯ ರೋಚಕ ಸಂಗತಿಗಳನ್ನು ರೋಚಕ ಕಥಾ ಹಂದರದಲ್ಲಿ ಹುದುಗಿಸಿ ಓದುಗರಿಗೆ ಉಣ ಬಡಿಸುವುದು ಅವರ ಸ್ಟೈಲು ಅವರ ಕೆಲವು ಚರಿತ್ರೆಗೆ ಸಂಬಂಧ ಪಟ್ಟ ಪುಸ್ತಕಗಳಲ್ಲಿ ಸತ್ಯ ಕಲ್ಪನೆ ಎರಡು ಇರುವುದು ಹಾಗಾಗಿ ಯಾವುದು ಸತ್ಯ, ಯಾವುದು ಕಲ್ಪನೆ ನಮ್ಮ ಊಹೆಗೆ ಬಿಟ್ಟದ್ದು.
ಪದ್ಮಪಾಣಿ: ಅಜಂತ ಗುಹೆಯ ಪದ್ಮಪಾಣಿ ಚಿತ್ರ ಬುದ್ಧನದ್ದೇ??
ಕೆರಳಿದ ಕರುಳು: ಆಂಧ್ರದ ಗಡಿಯ ಪಾಲುಕ್ಕಮ್ಮನ ಕಾಲ್ಪನಿಕ ಕಥೆ |
ಮರಳ ತೆರೆಗಳೊಳಗೆ: ತಲಕಾಡು ಮರಳಾದದ್ದು ಹೇಗೆ ? ಮಾಲಂಗಿ ಮಡುವಾದದ್ದು ಹೇಗೆ ? ಮೈಸೂರು ಅರಸರಿಗೆ ಅಲಮೇಲಮ್ಮ ನಿಜವಾಗಿಯೂ ಶಾಪವಿತ್ತಳೆ?
ಕಿತ್ತೂರ ನಿರಂಜಿನಿ : ಕಿತ್ತೂರ ೯ನೇ ಚಕ್ರವರ್ತಿ ರುದ್ರಗೌಡನ ಮುಸ್ಲಿಂ ಹೆಂಡತಿ ನಿರಂಜಿನಿ ಆದದ್ದು ಹೇಗೆ ?
ಕಲೆಯ ಬಲೆಯಲ್ಲಿ: ಶಾಂತಲೆ ಬೇಲೂರಿನ ಮದನಿಕೆಗೆಗಳಿಗೆ ರೂಪದರ್ಶಿಯೆ???!!!
ಉಗ್ರಬಂಧ: ತಾ.ಮ.ಕ (ತಾಯಿ ಮಕ್ಕಳ ಕಿತ್ತಾಟ) ಅನುವಂಶಿಕವೋ? ಶರೀರ ಮತ್ತು ಮಾನಸಿಕ ಕ್ರಿಯೆಯೋ???
ಮಲಬಾರ್-೦೭ : ಪರಿಸರದ ಉಳಿವಿಗಾಗಿ ಪರಾಗ ಕಣಜ ಮತ್ತು ಅರಳಿ ಮರ ಎಷ್ಟು ಮುಖ್ಯ?? ಅದರ ಜೀವನ ಚಕ್ರದ ಬಗ್ಗೆ ಒಂದು ಸೊಗಸಾದ ಪ್ಲಾಂಟ್ ಸೈನ್ಸ್ ಕಥೆ
ಧರ್ಮ ಸ್ತಂಭ: ಅಹಿಂಸೆ ಪಾಲನೆಯ ಬೌದ್ಧ ಧರ್ಮದ ಪಾಲಕನಾದ ಅಶೋಕ ಚಕ್ರವರ್ತಿ ಸಂಚಿಯಲ್ಲಿರುವ ಅಶೋಕ ಸ್ಥಂಭದಲ್ಲಿ ಹಿಂಸೆಯ ಕುರಿತು ಬರೆಯಲು ಕಾರಣ ?????
ಈ ಎಲ್ಲಾ ಪ್ರಶ್ನಗಳಿಗೆ ಉತ್ತರ ಬೇಕಿನಿಸಿದವರು ಒಮ್ಮೆ ಓದಬೇಕು.
This is a an awesome book of small stories. Reader gets lots of information on Indian history. While reading, one do get curious to know and search the related topics. The stories reveals many non familiar mysteries about past, which definitely have impact on thoughts and reader do notice these on the historical places. One who is interested in knowing more details about history should not miss this book. Also who thinks history is boring should read this, especially students. Author do put the things very clearly and writing style is very helpful to read it faster. Full of thrillers, mysteries and facts. Book got very good bibliography. Book is good to keep in our library and worth for cross reference for many links for further studies.
ಇತಿಹಾಸದ ಕಥೆಗಳನ್ನು ಗಣೇಶಯ್ಯ ಅವರ ಪುಸ್ತಕಗಳಲ್ಲಿ ಓದುವುದೇ ಒಂದು ಹಬ್ಬ. ಕುತೂಹಲ ಹೆಚ್ಚಿಸಿ ಮತ್ತಷ್ಟು ತಿಳಿಯುವ ಹಾಗೆ ಮಾಡುತ್ತವೆ ಪ್ರತಿಯೊಂದು ಕಥೆ. ನಾವು ತಿಳಿದಿರುವ ಕೆಲವೊಂದು ಕಥೆಗಳಿಗೆ ಇನ್ನೊಂದು ಮುಖವಿರುವುದು ಅರಿತಾಗ ಸುತ್ತಲೂ ಇನ್ನೆಷ್ಟು ರಹಸ್ಯಗಳಿವೆಯೋ ಎನ್ನಿಸುತ್ತದೆ.
ನನ್ನ ವಿಮರ್ಶೆ ಇಲ್ಲಿದೆ: ಪದ್ಮಪಾಣಿ-ಕೆ. ಎನ್. ಗಣೇಶಯ್ಯ- ಪುಸ್ತಕ ವಿಮರ್ಶೆ: ( ನನ್ನ ರೇಟಿಂಗ್: 8/10) ~~~~~~~~~~~~~~~~~~~~~~~~~~~~~~~~~~~~~~~~ ಮತ್ತೊಂದು ಐತಿಹಾಸಿಕ ಜಾನಪದ ಶೈಲಿಯ ರಹಸ್ಯಗಳ ಹಿನ್ನೆಲೆಯುಳ್ಳ ರೋಚಕ ಕಥೆಗಳ ಕಥಾ ಸಂಕಲನ ಇದು. ಪದ್ಮಪಾಣಿ ಎಂಬ ಶೀರ್ಷಿಕೆ ಕತೆಯಲ್ಲಿ ಕತೆಯಲ್ಲಿ ಲೇಖಕರು ಅಜಂತಾ ಗುಹೆಯ ಸುಂದರ ಶಿಲ್ಪವೊಂದರ ಬೆಳಕಿಗೆ ಬಾರದ ಬೌದ್ಧ ಧರ್ಮದ ಕತೆಯನ್ನು ಭೂತವೊಂದು ಹೇಳಿದಂತೆ ಬಿಂಬಿಸಿದರೆ, ಮಲಬಾರ್-೦೭ ಎಂಬಲ್ಲಿ ಜೈವಿಕ ಭಯೋತ್ಪಾದನೆ (Bio terrorism) ಎಂಬ ವಿನೂತನ ಕಥಾವಸ್ತುವನ್ನು ಉಸಿರು ಹಿಡಿವ ವೇಗದಲ್ಲಿ ಬಿಡಿಸುತ್ತಾರೆ. ಪಾಲುಕ್ಕಮ್ಮನ ತಾಯಿ ಕರುಳಿನ ಕತೆ ಒಂದೆಡೆಯಾದರೆ, ತಲಕಾಡಿನ ಮರಳಿನ ಕೆಳಗೆ ಅಡಗಿರಬಹುದಾದ ಅಲಮೇಲಮ್ಮನ ಕತೆ ಇನ್ನೊಂದೆಡೆ. ಹೀಗೆ ಮಿಕ್ಕೆಲ್ಲ ಕತೆಗಳಲ್ಲಿ:- ಕಿತ್ತೊರಿನ ಬೇಗಮ್ ಕತೆ, ಬೇಲೂರು ಶಿಲಾಬಾಲಿಕೆಯ ಮತ್ತು ಶಾಂತಲೆಯ ಸಾಮ್ಯದ ಹಿಂದಿನ ಕತೆಯನ್ನು ಕಾಲ್ಪನಿಕವಾದರೂ ನಾವು ಇದುವರೆಗೂ ತಿಳಿದ ಮಾಹಿತಿಗಳಿಗೆ ಭಿನ್ನವಾದರೂ ಅತಿ ರೋಚಕವಾಗಿ ಬಿಡಿಸುತ್ತಾರೆ. ಚರಿತ್ರೆಯನ್ನೆ ಬಳಸಿಕೊಂಡು ಆ ಘಟನೆಗಳ ಆಧಾರದ ಮೇಲೆ ತಮ್ಮ ಕಲ್ಪನೆಯನ್ನು ತಾರ್ಕಿಕವಾಗಿ ಹರಿಯಬಿಡುವ ಇವರ ಪ್ರತಿಭೆ ಅನನ್ಯ. ೮ ಇಂತಾ ಕುತೂಹಲಕಾರಿ ಕತೆಗಳಿರುವ ಈ ಸಂಕಲನ ಎಲ್ಲರಿಗೂ ಮಾಹಿತಿ ಭರಿತ ಮನರಂಜನೆ ನೀಡುವಲ್ಲಿ ಸಫಲವಾಗಿದೆ. ಕೊಂಡು ಓದಬೇಕಾದ ಪುಸ್ತಕ:- ಅಂಕಿತ ಪುಸ್ತಕ, 164 ಪುಟಗಳು, ಬೆಲೆ: ರೂ. 130