Jump to ratings and reviews
Rate this book

ಮೂಕಧಾತು [Mookadhatu]

Rate this book
ಚರಿತ್ರೆಯನ್ನು ಆಧರಿಸಿ ಹಲವಾರು ಅಪರೂಪದ ಥ್ರಿಲ್ಲರ್ ಗಳನ್ನು ಹೊರತಂದ ಕೆ ಎನ್ ಗಣೇಶಯ್ಯನವರು ಇದೀಗ ಮನುಷ್ಯನ ವಿಕಾಸದ ಕುರಿತು ಹೊಸ ಕೃತಿಯನ್ನು ರಚಿಸಿದ್ದಾರೆ. ಕ್ಷಣ ಕ್ಷಣಕ್ಕೂ ಮುಂದೇನಾಗುವುದೋ ಎಂಬ ಕುತೂಹಲ ಹುಟ್ಟಿಸುವ ಈ ಕಾದಂಬರಿಯ ಮುಖ್ಯ ವಸ್ತು ನಮ್ಮೊಳಗಿದ್ದು ನಮ್ಮನಾಳುವ ಧಾತುಗಳಾಗಿವೆ. ಲೇಖಕರೇ ಹೇಳುವ ಪ್ರಕಾರ, ದೇವರು, ಧರ್ಮ ಮತ್ತು ವಿಜ್ಞಾನ ಈ ಕಾದಂಬರಿಯ ಚರ್ಚಾವಸ್ತುವಾಗಿವೆ.

248 pages, Paperback

Published January 1, 2012

5 people are currently reading
112 people want to read

About the author

K.N. Ganeshaiah

44 books165 followers
Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.

Education:
Ph. D. University of Agricultural Sciences, Bangalore, India, l983
M.Sc. (Agri.) in Genetics & Plant Breeding, UAS, Bangalore, l979
B.Sc (Agri.), University of Agricultural Sciences, Bangalore, l976.

Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.

Though an agriculture scientist, his novels and stories bring to the reader, the lesser-known and hidden facts of history along with science. Some of
his novels are also aimed at bringing the most complicated elements of science to the general reader.

Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.

In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013

Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
59 (39%)
4 stars
64 (42%)
3 stars
25 (16%)
2 stars
2 (1%)
1 star
1 (<1%)
Displaying 1 - 12 of 12 reviews
Profile Image for Akhila Ashru.
187 reviews20 followers
May 23, 2021
ನಾನು ಒಬ್ಬ ಬಯೋ ಕೆಮಿಸ್ಟ್ರಿ ಅಧ್ಯಾಪಕಿಯಾದ ಕಾರಣ ಈ ಪುಸ್ತಕದ ಬಗ್ಗೆ ಬರೆದರೆ ಬಯಾಸ್ ಆಗ ಬಹುದು. ನಾನು ಕೂಡ ಜೀವ ವಿಕಸನದ ಬಗ್ಗೆ ಅಧ್ಯಯನ ಮಾಡಿರುವುದರಿಂದ ಈ ಪುಸ್ತಕ ಹತ್ತಿರವಾಯ್ತು. ಗ್ರಾಂಡ್ ಮಾ ಹೈಪೊಥೆಸಿಸ್ ನಂತಹ ವಿಷಯಗಳು ನೆನಪಾದವು. ಆದರೆ ಪುಸ್ತಕದ ಉತ್ತರಾರ್ಧ ಸ್ವಲ್ಪ ಗೊಂದಲಮಯ ಎನಿಸಿತು. ಆಸೆ, ವಿಜ್ಞಾನ, ಹಾಗು ಧರ್ಮದ ವಿಶ್ಲೇಷಣೆಗಳು ಅದ್ಭುತವಾಗಿವೆ. ಒಳ್ಳೆಯ ಸೈನ್ಸ್ ಫಿಕ್ಷನ್ .
Profile Image for Soumya.
217 reviews48 followers
May 7, 2021
ಗಣೇಶಯ್ಯ ಅವರ ಇತರೆ ಕಾದಂಬರಿಗಳಂತೆ ಓದಿಸಿಕೊಂಡು ಹೋಗುತ್ತದೆ.

ಕಥೆ ಒಂದು ಇತಿಹಾಸದ ಪುಟದಿಂದ ಶುರು ಆಗಿ ಈಗಿನ ವಿಜ್ಞಾನಿಗಳ ಜತೆ ಮೇಳೈಸಿಕೊಂಡು ಮುಗಿಯುತ್ತದೆ.

ಮನುಷ್ಯನ ಮೂಲ ಧಾತುವಿನ ವಿಚಾರವನ್ನ ಹಲವು ವಿಜ್ಞಾನಿಗಳ thesisನ ಮೂಲಕ ಕಥೆಯನ್ನ ಚೆನ್ನಾಗಿ ಹೆಣೆದ್ದಿದ್ದಾರೆ. ಅವರೇ ಹೇಳುವಂತೆ ದೇವರು ಧರ್ಮ ವಿಜ್ಞಾನ, ಆಸೆ ಮತ್ತು ನಾಗರಿಕತೆ, ಸ್ವಾರ್ಥ ಮತ್ತು ಜೀವನ ಈ ಮೂರು ಅಂಶಗಳನ್ನ ಸೇರಿಸಿ ತಮ್ಮ ಕಾಲ್ಪನಿಕ ಕಥೆಯನ್ನ ರಚಿಸಿದ್ದಾರೆ.

ಚೀನಾ ಒಂದಲ್ಲ ಒಂದು ವಿಚಾರಕ್ಕೆ(ಹೆಚ್ಚಿನ ಸಮಯ ಕೆಟ್ಟ ವಿಷಯಕ್ಕೆ) ಜಗತ್ತಿನ ಗಮನ ಸೆಳೆಯುತ್ತಿರುತ್ತೆ.
ಈ ಕಥೆಯಲ್ಲಿ chinese ಹೇಗೆ ಒಂದು ವೈರಾಣುವನ್ನು ಉತ್ಪತ್ತಿ ಮಾಡಿ , ಉತ್ಪತ್ತಿ ಮಾಡಿದ ವೈರಾಣುವಿನಿಂದ ತಮಗೆ ಏನು ತೊಂದ್ರೆ ಆಗದ ಹಾಗೆ ನೋಡಿಕೊಂಡು, ಜಗತನ್ನು ಹಾಳು ಮಾಡೋ ತಂತ್ರ ಓದೋವಾಗ ಇಂದಿನ covid virus ವಿಚಾರ ತಲೇಲಿ ಮತ್ತೆ ಮತ್ತೆ ಕೋರಿತ ಇತ್ತು.
ಯಾಕೋ ಗೊತ್ತಿಲ್ಲ ಈ ಪುಸ್ತಕ ಓದಿದ ಮೇಲೆ covid ಖಂಡಿತ ಚೀನಾ virus ಅನ್ನೋದು ನನ್ನ ತಲೇಲಿ ಕುಳಿತುಬಿಟ್ಟಿದೆ 😂
9 reviews7 followers
May 10, 2018
ಡಾ. ಕೆ. ಎನ್. ಗಣೇಶಯ್ಯ ಅವರ ಕಾದಂಬರಿಗಳು ರೋಚಕತೆಯಿಂದ ಕೂಡಿರುತ್ತದೆ. ಅದರಂತೆ ಮೂಕ ಧಾತು ಮನುಷ್ಯನ ವಿಕಾಸ ಕುರಿತು ಇರುವ ಕಾದಂಬರಿ. ನಮ್ಮೊಳಗಿದ್ದು ನಮ್ಮನಾಳುವ ಧಾತುಗಳು ಈ ಕಾದಂಬರಿಯ ಮುಖ್ಯ ವಸ್ತುವಾಗಿವೆ.

ಸೈಕೊಟಿಕ್ ಎನ್ನುವ ಒಂದು ಚೀನಾ ಮೂಲದ ಕಂಪೆನಿಯು ಮಾನವನ ಸ್ವಾರ್ಥ ಧಾತುಗಳಿಂದ ಮಾನವನ ಭವಿಷ್ಯತ್ತನ್ನೇ ಬದಲಾಯಿಸುವ ಬೃಹತ್ ಕಾರ್ಯಕ್ಕೆ ಕೈ ಹಾಕಿರುತ್ತದೆ. ವೈರಸ್ ಗಳನ್ನು ಉಪಯೋಗಿಸಿ ಸಂಪೂರ್ಣ ಮಾನವ ಕುಲದ ಆಸೆಯ ಮತ್ತು ಸ್ವಾರ್ಥದ ವಂಶಧಾತುಗಳನ್ನೇ ನಿಷ್ಕ್ರಿಯಗೊಳಿಸುವ ಯೋಜನೆಯನ್ನು ಅವರು ಹೆಣೆದಿರುತ್ತಾರೆ. ಆ ಯೋಜನೆ ಅಷ್ಟು ಸುಲಭವಲ್ಲ. ಅದಕ್ಕಾಗಿ ಅವರು ಭಾರತ, ಜರ್ಮನಿ ದೇಶಗಳ ವಿಜ್ಞಾನಿಗಳನ್ನು ಕಿಡ್ನಾಪ್ ಮಾಡಿ ಅವರ ಕೆಲಸಕ್ಕೆ ಉಪಯೋಗಿಸುತ್ತಾರೆ. ಇಡೀ ಪ್ರಪಂಚಕ್ಕೆ ಆ ವೈರಸ್ ಅನ್ನು ಹರಡಿ, ತಮಗೆ ಮಾತ್ರ ವೈರಸ್ ಗೆ ನಿರೋಧಕ ಅಂದರೆ resistant ಚುಚ್ಚಿಕೊಂಡು ನಂತರ ಇಡೀ ಜಗತ್ತನ್ನು ಆಳುವ ಉದ್ದೇಶ ಹೊಂದಿರುತ್ತಾರೆ.
ಅಲ್ಲಿ ಇರುವ ಭಾರತೀಯ ವಿಜ್ಞಾನಿಗಳಿಗೆ ಅದು ತಿಳಿದು ಅವರ ಯೋಜನೆಯನ್ನು ನಿಷ್ಕ್ರಿಯಗೊಳಿಸುತ್ತಾರೆ. ಇದು ಕಥೆ.
ಪೂರ್ತಿ ಪುಸ್ತಕ ಓದಿದರೆ ಸಾಕು, ಕಲಾ ವಿಭಾಗದ ವಿದ್ಯಾರ್ಥಿ ಆದರೂ ಕೂಡಾ ಧಾತುಗಳು, ಮಾನವನ ವಿಕಾಸ, ಇವೆಲ್ಲಾ ವಿಷಯಗಳು ಸುಲಭವಾಗಿ ಅರ್ಥವಾಗುತ್ತದೆ. ಕಥೆಯ ಜೊತೆಗೆ ಅನೇಕ ಹೊಸ ವಿಷಯಗಳನ್ನು ತಿಳಿಸುವ ಈ ಪುಸ್ತಕ ಒಂದು ಒಳ್ಳೆಯ ಓದಿಗೆ ಸಹಕಾರಿ.
ಓದಿದವರೆಲ್ಲಾ ಮೆಲುಕು ಹಾಕಿಕೊಳ್ಳಿ. ಓದದೆ ಇದ್ದವರು ಸಾಧ್ಯ ಆದರೆ ಓದಿ. ಓದಿದ ನಂತರ ಒಂದು ಒಳ್ಳೆಯ ಪುಸ್ತಕ ಓದಿದ ಅನುಭವ ನೀಡುತ್ತದೆ.
Profile Image for Abhi.
89 reviews20 followers
January 2, 2021
|!• ಮೂಕಧಾತು •!|

ನನ್ನ ನಿಲುಕಿಗೆ ಡಾರ್ವಿನ್ನನ ವಿಕಾಸವಾದದ ಥಿಯರಿ ಈಗಲೂ ಒಪ್ಪಿತವಲ್ಲ. ಆ್ಯಡಮ್ ಅಂಡ್ ಈವ್‌ರ ಕಥೆಗಳು ಕೂಡ ಹಾಗೆಯೇ. ಮಾನವನ ವಿಕಾಸದ ಬಗ್ಗೆ ನನ್ನ ಪ್ರಶ್ನೆಗಳಿಗೆ ಐತಿಹಾಸಿಕವಾಗಿ ಉತ್ತರ ಸಿಕ್ಕಿಲ್ಲ. ವೈಜ್ಞಾನಿಕವಾಗಿ‌ ಬಂದಿರುವ ವಾದ ವಿವಾದ ಸಂವಾದಗಳು ಅಷ್ಟು ರುಚಿಸಿಲ್ಲ. ಆದರೆ, ಒಂದು ಖಂಡಿತವಾದ ವಿಷಯವೇನೆಂದರೆ ನಮ್ಮ ವಿಕಾಸದ ಹಿಂದೆ ಯಾವುದೋ ಒಂದು ವಿಶೇಷವಾದ ಮೂಲವಿದೆ. ಆ ಮೂಲವೇ ಆಸೆ. ಬದುಕುಳಿಯುವ ಆಸೆ. ಡಾರ್ವಿನ್ನನ ಥಿಯರಿ ಒಪ್ಪದಿದ್ದರೂ ಆತನ "ಸರ್ವೈವಲ್ ಆಫ್ ದ ಫಿಟ್ಟೆಸ್ಟ್" ಎಂಬ ವಾಕ್ಯವು ಒಪ್ಪಿತವೇ. ಅಂತೆಯೇ ಧರ್ಮ, ವಿಜ್ಞಾನ ಮತ್ತು ಮನುಷ್ಯ ಸಂಬಂಧಗಳ ಹದವಾದ ಮಿಳಿತವನ್ನು ಒಳಗೊಂಡ ಮೂಕಧಾತು ಪುಸ್ತಕದ ಮೂಲಧಾತು ಆಸೆ.

ಕೆ ಎನ್ ಗಣೇಶಯ್ಯರವರ ಪುಸ್ತಕಗಳಲ್ಲಿ ಸಾಮಾನ್ಯವಾಗಿ ಇತಿಹಾಸದಲ್ಲಿ ನಡೆದ ವಿಷಯಗಳಿರುತ್ತವೆ. ಯಾವುದೋ ಹುಡುಕಾಟದೊಂದಿಗೆ ಶುರುವಾಗಿ ಅದಕ್ಕೊಂದಿಷ್ಟು ತಿರುವುಗಳನ್ನು ನೀಡಿ ಸುಖಾಂತ್ಯ ಕಾಣಿಸುವುದು ಅವರ ಟೆಂಪ್ಲೇಟ್ ಎಂದುಕೊಂಡರೇ ನಿಮ್ಮ‌ ಊಹೆ ಇಲ್ಲಿ ತಪ್ಪಾಗಲಿದೆ. ಇತಿಹಾಸದ ಉಲ್ಲೇಖವಿದ್ದರೂ ಕೆಲವು ಪುಟಗಳಿಗೆ ಸೀಮಿತವಾಗಿ ಮಿಕ್ಕೆಲ್ಲಾ ಘಟನಾವಳಿಗಳು ನಡೆಯುವುದು ಪ್ರಸ್ತುತದಲ್ಲಿಯೇ.

ಬುದ್ಧ, ಆತನ ಅನುಯಾಯಿ ನಾಗಾರ್ಜುನ, ಹ್ಯುಯೆನ್‌ತ್ಸಾಂಗ್ ಮತ್ತು ಶಾತಕರ್ಣಿರ ಕಾಲದಲ್ಲಿ ನಡೆದ‌ ಕೆಲವು ವಿಷಯಗಳು ಚೀನಾದಲ್ಲಿ ನಡೆಯುವ ಒಂದು ವೈಜ್ಞಾನಿಕ ಸಂಶೋಧನೆಗೆ ಹೇಗೆ ಪುಷ್ಟಿ ಕೊಡುತ್ತವೆ ಎಂಬುದನ್ನು ಓದಿದರೇ ನೀವು ‌ರೋಮಾಂಚಿತರಾಗುವಿರಿ. ಲೇಖಕರು ಈ ಪುಸ್ತಕ ಬರೆಯುವ ಮೊದಲು ಅದಿನ್ನೆಷ್ಟು ಓದಿಕೊಂಡಿದ್ದರೋ‌ ಎಂದು ಉದ್ಗರಿಸಿಕೊಂಡೆ. ಅವರು ಹೇಳುವ ಸಾಕಷ್ಟು ವಿಷಯಗಳು ಬೇಸ್‌ಲೆಸ್ ಎನಿಸುವುದಿಲ್ಲ. ಡಿಎನ್ಎ‌ ಮತ್ತು ನ್ಯೂರೋಸೈನ್ಸ್ ಕುರಿತು‌ ಅಧ್ಯಯನ ‌ಮಾಡುವವರು ಓದಲೇಬೇಕಾದ ಪುಸ್ತಕ.‌ ಅಷ್ಟಕ್ಕೂ ಚೀನಾದ‌ ಆ ಮಾಫಿಯಾ ಗ್ಯಾಂಗೊಂದು ಸಂಶೋಧಿಸುತ್ತಿದ್ದ ಗೇಮ್ ಚೇಂಜಿಂಗ್ ವಿಷಯವಾದರೂ‌ ಏನು? ಉತ್ತರ ಪುಸ್ತಕದಲ್ಲಿ.

ಭಾರತದಲ್ಲಿರುವ ಜ್ಞಾನ ಸಂಪತ್ತು ಮತ್ತು ನಾವು ಸಾವಿರಾರು ವರ್ಷಗಳ ಹಿಂದೆಯೇ ಸಾಧಿಸಿದ್ದ ವೈದ್ಯಕೀಯ ಸಿದ್ದಿಗಳು ನಿಮ್ಮ ಹುಬ್ಬೇರಿಸಲಿವೆ.

ನನ್ನನ್ನು ಸೇರಿದಂತೆ ಬಹಳಷ್ಟು ಜನರನ್ನು ಕಾಡುತ್ತಿರುವ ವಿಷಯ ಕೊರೋನಾ ವೈರಸ್‌ ಚೀನಾದ‌ ವುಹಾನ್ ಮಾರ್ಕೆಟ್‌ನಲ್ಲಿ ಶುರುವಾಗಿ ಪ್ರಪಂಚದಲ್ಲೆಲ್ಲಾ‌ ಹೇಗೆ ಹರಡಿತು‌ ಎಂದು. ಮೂಲಸ್ಥಳದಲ್ಲಿ ಒಂದು ಲಕ್ಷವನ್ನೂ‌ ದಾಟದ ಈ ಸಾಂಕ್ರಾಮಿಕ ರೋಗ ಇಷ್ಟೊಂದು‌ ದೇಶಗಳನ್ನು ತಲುಪಿ ಸುಮಾರು ೫ ಕೋಟಿಗೂ ಹೆಚ್ಚು ಜನರಿಗೆ ಹರಡಲು ಹೇಗೆ ಸಾಧ್ಯ? ಈ ಬಗ್ಗೆ ಒಂದು ವಿಶೇಷವಾದ ವಿವರಣೆ ಇದೆ. ಆ ವಿವರಣೆ ‌ವೈಯಕ್ತಿಕವಾಗಿ‌ ಸತ್ಯ ಎನಿಸಿತು. ಭಾರತ ಮತ್ತು ಅಮೆರಿಕಾ‌‌ ದೇಶಗಳಲ್ಲಿ ಕೋವಿಡ್‌ ಸಂಖ್ಯೆ ಹೆಚ್ಚಾಗಿದೆ. ‌ಚೀನಾ‌ದೊಂದಿಗೆ ಈ‌ ಎರಡು‌ ದೇಶಗಳು ವೈಮನಸ್ಸು‌ ಎಲ್ಲರಿಗೂ ತಿಳಿದಿದೆ. ಅದನ್ನು ಹತ್ತಿಕ್ಕಲು ಈ‌ ರೀತಿಯ ಹುನ್ನಾರ ನಡೆದಿರಬಹುದು ಅನಿಸಿತು, ನಿಮಗೂ ಅನಿಸಬಹುದು.

ಏಲಿಯನ್ ಮತ್ತು ಭೂಮಿಯ ಮೇಲ್ಮೈ ಆಚೆಗೆ ಬದುಕುತ್ತಿರುವ ಜೀವಿಗಳ ಕುರಿತು ಇರುವ ಉಲ್ಲೇಖಗಳು ವಿಜ್ಞಾನದ ಕಡೆಗೆ ನಿಮ್ಮ ಕುತೂಹಲವನ್ನು ಹೆಚ್ಚಿಸಲಿದೆ. ಇನ್ನೂ ಫ್ಯಾಸಿನೇಟಿಂಗ್ ಎನಿಸುವಂತಹ ಹತ್ತು ಹಲವು ವಿಷಯಗಳಿವೆ. ಸಮಯ ಮಾಡಿಕೊಂಡು ಓದಿ, ಹೊಸ (ದುರ್)ಆಲೋಚನೆಗಳ ಲೋಕದಲ್ಲಿ ಪಯಣಿಸಿ!!!

ಎಂದಿನಂತೆ ಈ ಪುಸ್ತಕ ಓದಿದ್ದಲ್ಲಿ ನಿಮ್ಮ ಅಭಿಪ್ರಾಯ ನನ್ನೊಂದಿಗೂ‌ ಹಂಚಿಕೊಳ್ಳಿ.

ಶುಭವಾಗಲಿ,

ಅಭಿ...
Profile Image for Raghavendra.
6 reviews2 followers
June 22, 2018
ಕಾದಂಬರಿ ಮೂಲ ವಸ್ತು ಏನೋ ಚೋಲೋ ಅದ. ಆದ್ರ ಕೆಲವೊಂದು ಕಡೆ ವಸ್ತುವಿನ ವಿಶ್ಲೇಷಣೆ ಭಾಳ ಬರೆದಿದ್ದಾರೆ, ಇದು ಬೇಕಾಗಿರಲಿಲ್ಲ, ಸ್ವಲ್ಪ ರಬ್ಬರ ಎಳೆದಂಗದ! ಒಟ್ಟಾರೆ ಹೇಳ್ಬೇಕಂದ್ರ, ಇದೇ ಕಾದಂಬರಿಕಾರರ ಬೇರೆ ಕಾದಂಬರಿ ಓದಿದಷ್ಟು ನಿಘುಡತೆ , ಸೆಳೆತ ಈ ಕಾದಂಬರಿಯಲ್ಲಿ ನನಗೆ ಕಾಣಲಿಲ್ಲ!
Profile Image for Bharath Manchashetty.
123 reviews2 followers
January 2, 2026
ಮೂಕಧಾತು ಎಂದರೆ ವೀರ್ಯ ಎಂದರ್ಥ. ಒಂದು ಮಗು ಹುಟ್ಟಲು ಗಂಡು-ಹೆಣ್ಣಿನ ವೀರ್ಯಾಣು-ಅಂಡಾಣಿನ ಪಾತ್ರ ಬಹು ಮುಖ್ಯ. ಇದರಲ್ಲಿ ಬರುವ ಮನುಷ್ಯನ ಹುಟ್ಟಿನ ಹುಡುಕಾಟ ಇತಿಹಾಸಕ್ಕೆ ಕೊಂಡೊಯ್ಯುತ್ತದೆ. ಇದರಲ್ಲಿ ಬರುವ ಪ್ರಾಣಿವರ್ಗ, ಮನುಷ್ಯವರ್ಗ ತನ್ನ ಹುಟ್ಟನ್ನು ಹೇಗೆ ಕಾಪಾಡಿಕೊಳ್ಳುತ್ತದೆ ಎಂದು ವಿವರಿಸಿರುವ ಪರಿ ಅದ್ಭುತ ಮತ್ತು ರೋಚಕ.

ಖಂಡಿತ ಓದಬೇಕಾದ ಕೃತಿ.
Profile Image for Narendra Prabhu Gurusiddappa.
11 reviews3 followers
March 6, 2019
Good way of explaining the godly "atma dhaatu" which still remains a mystery.
Best that he kept the aatma dhatu a mystery finally after all the explanations from the scientific explorations.
Profile Image for Goutam Hebbar.
166 reviews11 followers
May 24, 2021
ಈ ಪುಸ್ತಕ ಓದುವ ಮೊದಲು ಕನ್ನಡದಲ್ಲಿ ವಿಜ್ಞಾನ ಹಾಗೂ ಕಲ್ಪನೆಯನ್ನು ಇಷ್ಟು ಉತ್ಕೃಷ್ಟವಾಗಿ ಜೋಡಿಸಿ ಬರೆಯುವವರು ಇದ್ದಾರೆ ಎಂದು ನನಗೆ ತಿಳಿದೇ ಇರಲಿಲ್ಲಾ... ಒಮ್ಮೆ ಓದಲು ಶುರು ಮಾಡಿದರೆ ಕೆಳಗಿಡುವು ಅಸಾಧ್ಯ ಅನ್ನುವಷ್ಟು ಪುಸ್ತಕ ಚೆನ್ನಾಗಿದೆ.
Profile Image for Yashawanth Ramaswamy.
76 reviews5 followers
June 20, 2016
This book is a scientific fiction. Here the author has used scientific theories proposed by well known scientists like Darwin, Dawkins etc and some historical aspects to build a story. In this story,he discusses about relationship between religion, science and God ; Desire of human and civilization ; selfishness and human life. He tells the scientific theories in a very simple manner which is understandable to any one. The main theme of the story revolves around the desire and selfishness of human life where author put forwards many scientific evidences which says that they are needed for the development of human race in contrary to the beliefs of religion where it says to leave desire and selfishness.
Displaying 1 - 12 of 12 reviews

Can't find what you're looking for?

Get help and learn more about the design.