Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.
Education: Ph. D. University of Agricultural Sciences, Bangalore, India, l983 M.Sc. (Agri.) in Genetics & Plant Breeding, UAS, Bangalore, l979 B.Sc (Agri.), University of Agricultural Sciences, Bangalore, l976.
Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.
Though an agriculture scientist, his novels and stories bring to the reader, the lesser-known and hidden facts of history along with science. Some of his novels are also aimed at bringing the most complicated elements of science to the general reader.
Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.
In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013
Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines
ಮೋಹದಿಂದ ಕಲೆ ಒಬ್ಬನಲ್ಲಿ, ಕಲೆಯ ಮೋಹ ಇನ್ನೊಬ್ಬನಲ್ಲಿ! ಒಬ್ಬನ ಮೋಹ ಸಾವಿಗೆಡೆಯಾದರೆ, ಇನ್ನೊಬ್ಬನ ಮೋಹ ವೈರಾಗ್ಯಕ್ಕೆಡೆಯಾಗುವುದು "ಶಾಲಭಂಜಿಕೆಯಲ್ಲಿ".
ಉಳಿಯುವಿಕೆ, ಬೆಳೆಯುವಿಕೆಗೆ ತಾಳ್ಮೆ, ಗಟ್ಟಿತನ, ದೃಢತೆ, ಮುಂದುವರಿಯುವಿಕೆ ಅಗತ್ಯ ಎಂಬುದನ್ನು ಮನಗಾಣಿಸುವ "ಇಮ್ಮಡಿಯ ಗೋಪುರಗಳು" ಹಾಗೂ ಪತ್ನಿಯ ಆಕಾಂಕ್ಷೆಗಳಿಗೆ ಅಡಿಪಾಯವಾಗಿ ಹಾಕುವ ಬೆಂಗಳೂರಿನ ಗೋಪುರಗಳು ಮತ್ತು ಅವಳ ಇಚ್ಛೆಯನ್ನು ತಾ ನಡೆಯಬೇಕಾದ ಹಾದಿಯಾಗಿ ನೋಡುವ ಪತಿ.
ವಿಷಯಗಳ ಬಿಡಿಬಿಡಿಯಾಗಿಟ್ಟು ವಿದ್ಯಾರ್ಥಿನಿಯರನ್ನು ವಂಚಿಸುವ PhD ಮಾರ್ಗದರ್ಶಕ, ವಿಷಯಗಳ ಇಡಿಯಾಗಿ ನೋಡದೇ ಮೋಸ ಹೋಗುವ ವಿದ್ಯಾರ್ಥಿನಿಯರು "ನಂಜಾದ ಮಧುವಿನಲ್ಲಿ". ಈ ಶೀರ್ಷಿಕೆಯನ್ನು ವಿಷದ ಭಾವನೆಗಳಿಂದ ಕಲುಷಿತಗೊಂಡ ಹೃದಯಕ್ಕೂ ಅನ್ವಯಿಸಿಕೊಳ್ಳಬಹುದು.
ಎದೆಯಾಳದ ನೋವು "ಎದೆಯಾಳದಿಂದೆದ್ದ ಗೋವಾಗಿದೆ", ಅದೇ ಶೀರ್ಷಿಕೆಯ ಕಥೆಯಲ್ಲಿ. (ಗೋವಿನ ವಂಶದವರೆಂಬ) ಮೂಲದ ಸಹಜ ಮೋಹ, ಆಘಾತಕಾರಿ ಇತಿಹಾಸ, ಎದೆಯಾಳದಿಂದ ನೋವಾಗಿ ಎದ್ದು, ಕಲೆಯಾಗಿ (ಬಸವ ಸಂಕೇತ) ಅರಳಿ ಹರಡಿದೆ, ಇದರಲ್ಲಿ.
ವ್ಯಕ್ತಿಯೊಬ್ಬನ/ಸಮುದಾಯವೊಂದರ ಅರಿವಿನ ಸ್ತರಕ್ಕೆ ಬಾರದ ಜ್ಞಾನ, ಬದಲಾವಣೆ, ಪ್ರಕೃತಿ ವಿಸ್ಮಯಗಳು, ಸಂಶಯವಾಗಿ, ದ್ವೇಷಕ್ಕೆ ತಿರುಗಿ ವಿನಾಶಕ್ಕೆಡೆ ಮಾಡುವುದು "ಹುಲಿಯ ಮಡಿಲ ಹುಳುವಿನಲ್ಲಿ". ಹಾಗೆಯೇ ಅದನ್ನ ತಲೆಕೆಳಗು ಮಾಡಬಲ್ಲ ಕಸುವಿರುವುದು, ವಿವೇಕಯುತ ಬುದ್ಧಿವಂತಿಕೆ, ಜ್ಞಾನ, ಕಾರ್ಯಶಕ್ತಿ ಹಾಗೂ ಸೂಕ್ತ ಬೆಂಬಲಗಳ ಬಲದಿಂದ ಎಂದೂ ತೋರಿಸಿ ಕೊಡುವುದೂ ಇದೇ ಕಥೆ!
Shalabhanjike is a collection of about eight short stories based on true events. This is probably one of his earliest creative writings. Though the stories are not detailed, the author has done a phenomenal job in making readers understand the importance of knowing History and Science. The author has also cited various references to substantiate his writings which is otherwise seen only in scientific reports. At many points in the book, I was awestruck with facts provided by him. Few of them being: Locating the coordinates of a Flower using Bees, The History of Gow Garbha of Vishnu Idol in Somanathapura and few others.
At the end, it makes me say, History and Science are so multifaceted, and often covered with a thick of superstitious beliefs.. The more we dig the more it reveals!
Historical facts presented in form of fictional stories. Loved the story of Bangalore in particular. (Will probably look more into it based on the references shared in this book).
Collection of short stories, hence a quick and nice read.
ಗಣೇಶಯ್ಯನವರು ಸಸ್ಯ ವಿಜ್ಞಾನಿ ಆಗಿರುವುದರಿಂದ ಅವರೊಳಗಿನ ಸಂಶೋಧಕ ಎಲ್ಲಕ್ಕೂ ಆಧಾರವನ್ನು ಬಯಸುತ್ತದೆ. ಅದಕ್ಕೆ ಎಲ್ಲಾಕಥೆಯ ಕೊನೆಗೆ ಚಿತ್ರ ಸಮೇತ ಅವರ ಕತೆಗೆ ಏನು ಪ್ರೇರಣೆ ಅನ್ನೋದನ್ನ ವಿವರಿಸಿದ್ದಾರೆ ಮತ್ತು reference ಪುಸ್ತಕಗಳ ಹೆಸರನ್ನು ಕೊಟ್ಟಿರುವುದು ಸಂಶೋಧನೆ ಮಾಡುವವರಿಗೆ ಖಂಡಿತ ಸಹಾಯವಾಗುತ್ತದೆ. ಕಥೆಯೊಳಗೆ ಸತ್ಯವನ್ನು ಹೇಳೋದರಲ್ಲಿ ಗಣೇಶಯ್ಯನವರು ಸಿದ್ದಹಸ್ತರು.
ಸಣ್ಣ ಸಣ್ಣ ಕಥೆಗಳಿಂದ ತುಂಬಿದ ಚಂದದ ಪುಸ್ತಕ , ಕನ್ನಡದ edge of seat thiriller ಅನ್ನಬಹುದು , ಕಥೆಗಾರ ಇಲ್ಲಿ ಕಥೆ, ಸತ್ಯ , ಪ್ರಶ್ನೆ , ಉತ್ತರ , ತರ್ಕ ಎಲ್ಲವನ್ನೂ ಮಾಡಿದ್ದಾರೆ. ಒಂದೊಳ್ಳೆ ಇಂಗ್ಲಿಷ್ Thirller web series ನೋಡಿದ ಅನುಭವ .
ಶಾಲಭಂಜಿಕೆ ಮತ್ತು ಇತರ ಏಳು ಕಥೆಗಳನ್ನು ಹೊಂದಿದ ಈ ಪುಸ್ತಕ ಇತಿಹಾಸ ಮತ್ತು ವಿಜ್ಞಾನದ ಹದವಾದ ಮಿಶ್ರಣಗಳನ್ನು ಹೊಂದಿದ ಸೊಗಸಾದ ಕಾಲ್ಪನಿಕ ಕಥೆಗಳನ್ನು ಉಣಬಡಿಸಿದೆ. ಎಲ್ಲಾ ಕಥೆಗಳು ನೈಜ ಘಟನೆಗಳಾಧಾರಿತವಾಗಿದೆ. ಪ್ರತಿ ಕಥೆಯ ಮುಕ್ತಾಯದ ನಂತರ ಅದಕ್ಕೆ ಸಂಭಂದಿಸಿದ ಮೂಲ ಗ್ರಂಥಗಳನ್ನು ಮತ್ತು ಚಿತ್ರಗಳನ್ನು ಲೇಖಕರು ಉಲ್ಲೇಖಿಸಿದ್ದಾರೆ.
"ಶಾಲಭಂಜಿಕೆ" ಎಂಬ ಅಮೋಘ ರೂಪದರ್ಶಿಯ ಪ್ರತಿಮೆಯನ್ನು ನೋಡಿದ ರಾಜ ದಂತಿದುರ್ಗನು ಮರುಳಾದರು ಅದನ್ನು ಕೆತ್ತಿದ ಶಿಲ್ಪಿಯನ್ನೇಕೆ ಕೊಂದ.?
ಜೇನು ನೊಣಗಳ ಮೇಲಿನ ಸಂಶೋಧನೆ ಐದು ಕೋಟಿ ಡಾಲರ್ಗಳ ಸಂಭಾವನೆ ಕೊಡುವುದಾದರೆ ಸಂಶೋಧನೆ ಮಾಡಿದ ವಿಜ್ಞಾನಿ ಏಕೆ ಆತ್ಮಹತ್ಯೆ ಮಾಡಿಕೊಂಡ?
ಸೋಮನಾಥಪುರದ ವಿಷ್ಣು ಪ್ರತಿಮೆಯ 'ಎದೆಯಾಳದಿಂದೆದ್ದ ಗೋವು' ಎದೆಯಾಳದ ನೋವನ್ನು ಬಿಚ್ಟಿಟ್ಟ ರೀತಿ ಹಾಗೆ ಶಿಲಾವ್ಯೂಹ, ಪಿರಾಮಿಡ್ಡಿನ ಗರ್ಭದಲ್ಲಿ, ಬೆಂಗಳೂರಿನ ಕೆಂಪೇಗೌಡರ ಕಾಲದ ಗೋಪುರಗಳು, ಒಂದು refined oil ಕಂಪನಿಯು ತನ್ನ ಸ್ವಾರ್ಥಕೋಸ್ಕರ ಭಾರತದ ಸಸ್ಯ ಪ್ರಭೇದದ ವಿನಾಶಕ್ಕೆ ಹೊರಟ ಕತೆಗಳು ಹೀಗೆ ವಿಭಿನ್ನ ಎಂಟು ಕತೆಗಳು ಇತಿಹಾಸ ಮತ್ತು ವಿಜ್ಞಾನಗಳಲ್ಲಿನ ಕೌತುಕತೆ ದುಪ್ಪಟ್ಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ನಮ್ಮ ಸುತ್ತಲಿನ ವೈಜ್ಞಾನಿಕ ಮತ್ತು ಚಾರಿತ್ರಿಕ ಸಂಶೋಧನೆಗಳನ್ನು ಸರಳ ಕಥೆಗಳಾಗಿ ಉಣಬಡಿಸುವ ಒಂದು ಅದ್ಭುತ ಪ್ರಯತ್ನ. ಒಟ್ಟು ೮ ಸಣ್ಣ ಕಥೆಗಳ ಸಂಗ್ರಹ. ಗ್ವಾಲಿಯರ್ನ ಗುರ್ಜರಿ ಮೊಹಲ್ ಅಲ್ಲಿರುವ ಸುಂದರ ಶಾಲಾಭಾಂಜಿಕೆ ಪ್ರತಿಮೆಯ ಸುತ್ತ ಹೆಣೆದ ಕಥೆ, ಕೃತಿಯ ಶೀರ್ಷಿಕೆ. ಎಲ್ಲ ಕಥೆಗಳು ಒಂದಕ್ಕಿಂತ ಒಂದು ಕೂತೂಹಲಕರವಾಗಿ ಮೂಡಿಬಂದಿದೆ ಹಾಗೂ ಚರಿತ್ರೆಯ ಬಗೆಗಿನ ಆಸಕ್ತಿಯನ್ನು ಹೆಚ್ಚಿಸುವಂತಿವೆ.
ಪ್ರತೀ ಕಥೆಯೂ ಹೊಸ ಹೊಸ ವಿಷಯಗಳ ಬಗ್ಗೆ ಕುತೂಹಲ ಹುಟ್ಟಿಸುತ್ತದೆ. ಕೆಲವು ಇತಿಹಾಸದ ದಿನಗಳತ್ತ ಕರೆದರೆ ಕೆಲವು ಇಂದಿನ ವೈಜ್ಞಾನಿಕ ಸಂಶೋಧನೆಗಳತ್ತ ಗಮನ ಸೆಳೆಯುತ್ತವೆ. ನೈಜ ಘಟನೆ, ಕ್ಲಿಷ್ಟ ಸಂಶೋಧನೆಯ ವಿವರಗಳು ಕಥಾ ರೂಪದಲ್ಲಿರುವುದರಿಂದ ಓದಿ ತಿಳಿಯುವುದು ಸುಲಭ!
ಇತಿಹಾಸದೊಳಗಿನ ಎಳೆಗಳನ್ನ ಎಳೆದು ತೆಗೆದು, ವಿಜ್ಞಾನ ಜಗತ್ತಿನ ಸಂಶೋಧನಗಳನ್ನ ಒರೆಗೆ ಹಚ್ಚುತ್ತಾ, ಅದನ್ನ ಕಥೆ ಕಾದಂಬರಿ ರೂಪದಲ್ಲಿ ಹಿಡಿದಿಡುವ ಕುಸುರಿ ಕಲೆಯಲ್ಲಿ ಗಣೇಶಯ್ಯ ಅವರು ಸಿದ್ಧ ಹಸ್ತರು. ಅವರ ಪ್ರತಿ ಪುಸ್ತಕದ ತುಂಬಾ ಮಾಹಿತಿಗಳ ಭಂಡಾರವೇ ಅಡಗಿರುತ್ತದೆ. ಪುಸ್ತಕದ ಅಲ್ಲಲ್ಲಿ ಅವರು ಒದಗಿಸುವ ಪೂರಕ ಪೂರವೆಗಳು ಒಮ್ಮೊಮ್ಮೆ ನನ್ನನ್ನು ಹುಡಕಾಟದಲ್ಲಿ ತೊಡಗಿಸಿಕೊಳ್ಳ ಪ್ರಚೋದಿಸಿ ಬಿಡುತ್ತದೆ. ಎಲ್ಲಕ್ಕಿಂತ ನನ್ನನ್ನು ಹೆಚ್ಚು ಬೆರಗಾಗಿಸುವುದು, ಗಣೇಶಯ್ಯ ಅವರ ತಿರುಗಾಟ ಮತ್ತು ಓದು. ಕೆಲ ಕಥೆ, ಕಾದಂಬರಿ ಬರಿಯುವುದಕ್ಕಿಂತ ಮುಂಚೆ ಸ್ವತಃ ಆಯಾ ಪ್ರದೇಶಗಳಿಗೆ ಹೋಗಿ ಭೇಟಿ ಕೊಟ್ಟು ಅಲ್ಲಿನ ಪ್ರದೇಶದ ಪ್ರಾಕೃತಿಕ ವಾಸ್ತವ ಮತ್ತು ಇತಿಹಾಸ ತಿಳಿದು, ತಾವು ಅಲ್ಲಿದ್ದು ಸ್ವತಃ ಆ ನೆಲದ ಮಣ್ಣಿನನಲ್ಲಿ ಓಡಾಡಿ, ಅದಕ್ಕೆ ಸಂಬಂಧ ಪಟ್ಟ ಹಲವಾರು ಪುಸ್ತಕಗಳನ್,ನ ಮಾಹಿತಿಗಳನ್ನ ಕೆದಕಿ ಅಧ್ಯಯನ ಮಾಡಿ, ತದನಂತರ ಒಂದು ಕಥೆ ಕಾದಂಬರಿಯನ್ನ ಬರೆಯುವ ಅವರ ವೈಖರಿಯೇ ಮೆಚ್ಚುಗೆಯಾಗುವಂತದ್ದು. ಅದರಂತೆ ಇಲ್ಲೂ 'ಶಾಲಭಂಜಿಕೆ' ಕೃತಿಯಲ್ಲೂ ಅದೇ ನಿರೂಪಣಾ ಶೈಲಿ ಕಾಣಿಸುತ್ತದೆ. ಭಾರತದ ಮೊನಾಲಿಸಾ ಎಂದು ಕರೆಯಿಸಿಕೊಳ್ಳುವ ವಿಗ್ರಹ, ಪ್ರಾಣಿ ಜಗತ್ತಿನ ಅಚ್ಚರಿ, ಹಳೆಯ ಕಾಲದ ವೈದ್ಯ ಪದ್ಧತಿಯ ಕುರುಹು, ಕೆಂಪೇಗೌಡರು ಕಟ್ಟಿದ ಗೋಪುರ, ಪಾಮ್ ಆಯಿಲ್ ಉತ್ಪಾದನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದ ತೊಂದರೆ ಹೀಗೆ ಒಂದೊಂದು ಕಥೆಯಲ್ಲೂ ವಿಭಿನ್ನ ಮಾಹಿತಿಗಳ ಹೊಳಹುಗಳಿವೆ. ಅವರ ಬದಲಾಗದ ನಿರೂಪಣಾ ಶೈಲಿಯೊಂದನ್ನು ಬಿಟ್ಟರೆ ಉಳಿದಂತೆ ಪುಸ್ತಕ ಆರಾಮವಾಗಿ ಓದಿಸಿಕೊಂಡು ಹೋಗುತ್ತದೆ.
ಪ್ರತೀ ಕಥೆಯೂ ಹೊಸ ಹೊಸ ವಿಷಯಗಳ ಬಗ್ಗೆ ಕುತೂಹಲ ಹುಟ್ಟಿಸುತ್ತದೆ. ಕೆಲವು ಇತಿಹಾಸದ ದಿನಗಳತ್ತ ಕರೆದರೆ ಕೆಲವು ಇಂದಿನ ವೈಜ್ಞಾನಿಕ ಸಂಶೋಧನೆಗಳತ್ತ ಗಮನ ಸೆಳೆಯುತ್ತವೆ. "ಶಾಲಭಂಜಿಕೆ"ಭಾರತದ ಮೊನಾಲಿಸಾ ಎಂದು ಕರೆಯಿಸಿಕೊಳ್ಳುವ ವಿಗ್ರಹ, ಪ್ರಾಣಿ ಜಗತ್ತಿನ ಅಚ್ಚರಿ, ಹಳೆಯ ಕಾಲದ ವೈದ್ಯ ಪದ್ಧತಿಯ ಕುರುಹು, ಕೆಂಪೇಗೌಡರು ಕಟ್ಟಿದ ಗೋಪುರ, ಪಾಮ್ ಆಯಿಲ್ ಉತ್ಪಾದನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದ ತೊಂದರೆ ಹೀಗೆ ಒಂದೊಂದು ಕಥೆಯಲ್ಲೂ ವಿಭಿನ್ನ ಮಾಹಿತಿಗಳ ಭಂಡಾರಗಳೇ ಅಡಗಿದೆ.ಹೊಸ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಲು ಇಲ್ಲವೇ ಕಡೇಪಕ್ಷ ಅಳಿದುಳಿದ ಶಿಲಾಸಾಕ್ಷಿಗಳತ್ತ ತುಸು ಗೌರವದಿಂದ ನೋಡುವಂತಾಗಲು ಇಂದು ಇಂಥ ಥ್ರಿಲ್ಲರ್‍ಗಳ ಅಗತ್ಯ ತುಂಬ ಇದೆ...
Ganeshaiah makes use of his research acumen and weaves interesting stories around history, science, and beliefs, etc. Totally loved some stories in this book. Plant scientists and insect oriented scientists will totally dig this book well.