Jump to ratings and reviews
Rate this book

Himagni

Rate this book
Himaagni [Paperback] Ravi Belegere

Unknown Binding

11 people are currently reading
276 people want to read

About the author

Ravi Belagere

105 books420 followers
Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
35 (38%)
4 stars
31 (34%)
3 stars
12 (13%)
2 stars
8 (8%)
1 star
5 (5%)
Displaying 1 - 10 of 10 reviews
173 reviews22 followers
April 27, 2022
#ಅಕ್ಷರವಿಹಾರ_೨೦೨೨

ಕೃತಿ: ಮುಸಲ ಯುದ್ಧದಲ್ಲಿ ಹಿಮಾಗ್ನಿ

ಲೇಖಕರು: ರವಿ ಬೆಳಗೆರೆ

ಪ್ರಕಾಶಕರು: ಭಾವನಾ ಪ್ರಕಾಶನ ಬೆಂಗಳೂರು


ರವಿ ಬೆಳಗೆರೆಯವರ ಈ ಕೃತಿ ಓದುವುದಕ್ಕೆ ಮೊದಲು ಹಿಮಾಲಯನ್ ಬ್ಲಂಡರ್ ಎಂಬ ಕೃತಿಯ ಅನುವಾದವನ್ನು ಓದಿದ್ದೆ. ಹಾಗಾಗಿ ಇದೇ ನಾನು ಓದಿದ ಅವರ ಮೊದಲ ಸ್ವತಂತ್ರ ಕೃತಿ. ರವಿಬೆಳಗೆರೆಯವರ ಹಾಯ್ ಬೆಂಗಳೂರ್ ಪತ್ರಿಕೆಯನ್ನು ಓದಬಾರದೆಂಬ ನಿರ್ಬಂಧ ಅವರ ಪುಸ್ತಕಗಳಿಗೂ ಅನ್ವಯವಾಗಿತ್ತು(ಇದು ನನ್ನ ಪಾಲಕರು ಹಾಕಿದ್ದ ನಿರ್ಬಂಧ). ಇತ್ತೀಚೆಗೆ ನನ್ನ ಸಹೋದರಿಯೊಬ್ಬರಿಂದ ಹಿಮಾಗ್ನಿ ಕೃತಿಯನ್ನು ಎರವಲು ತಂದು ಓದಿದೆ. ಆವಾಗಲೇ ನನಗೆ ಗೊತ್ತಾಗಿದ್ದು ಅವರ ಬರವಣಿಗೆಯ ಶೈಲಿ ಮಂತ್ರಮುಗ್ಧರನ್ನಾಗಿ ಮಾಡುತ್ತದೆ ಎಂಬುದು. ಅವರು ಕಥೆಕಟ್ಟುವ ಪರಿಗೆ, ಅಚಾನಕ್ಕಾಗಿ ತಂದು ನಿಲ್ಲಿಸುವ ತಿರುವುಗಳಿಗೆ ಓದುಗರನ್ನು ತುದಿಗಾಲಿನಲ್ಲಿ ನಿಲ್ಲಿಸುವ ಶಕ್ತಿಯಿದೆ….


ಇನ್ನು ಈ ಕಾದಂಬರಿಯ ಕಥೆಯ ವಿಷಯಕ್ಕೆ ಬರೋಣ. 2008ರಲ್ಲಿ ಭಾರತದ ಮುಂಬಯಿ ಮೇಲೆ ಹತ್ತು ಭಯೋತ್ಪಾದಕರು ಏಕಾಏಕಿ ದಾಳಿ ನಡೆಸಿ ಮುಗ್ಧ ಜನರ ಮಾರಣಹೋಮ ನಡೆಸಿದರು. ಆಗ ಭಯೋತ್ಪಾದನೆಯ ಮೂಲಕ್ಕೆ ಮತ್ತು ಭಯೋತ್ಪಾದಕರ ಮನೆಗೆ ನುಗ್ಗಿ ಅವರನ್ನು ನಾಶಗೊಳಿಸುವ ದಿಟ್ಟ ನಿರ್ಧಾರ ತೆಗೆದುಕೊಂಡರು ಈ ದಾಳಿಯಿಂದ ವಿಚಲಿತರಾದ ಮಾಯಿನೋ ಗಾಂಧಿ!!! ಆಗಲೇ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿಯರ ಹೆಡೆಮುರಿ ಕಟ್ಟಿದ ಕರ್ನಲ್ ಮಾಚಿಮಾಡ ರವೀಂದ್ರ ಪೂಣಚ್ಚರವರ ನೇತೃತ್ವದಲ್ಲಿ ಐದು ಜನರ ತಂಡ ಕಠಿಣ ತರಬೇತಿಯನ್ನು ಪಡೆಯುತ್ತಾರೆ. ಈ ತಂಡವು ತಮ್ಮ ಯೋಜನೆಯಂತೆ ತಮಗೆ ದೊರೆತ ಪಟ್ಟಿಯಲ್ಲಿನ ಅನೇಕ ಉಗ್ರರನ್ನು ಇಟಲಿ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಜರ್ಮನಿ ಮತ್ತು ಅಫ್ಘಾನಿಸ್ತಾನದಲ್ಲಿ ನಾವು ಮಾಡುತ್ತದೆ. ಇದಲ್ಲದೇ ಆ ಪಟ್ಟಿಯಲ್ಲಿಲ್ಲದ ನಾಲ್ಕು ಜನರನ್ನು ಸಹ ಕೊಲೆಮಾಡಲಾಗುತ್ತದೆ. 


ಇನ್ನೇನು ಪಟ್ಟಿಯಲ್ಲಿರುವ ಮೂರು ಜನರು ಮಾತ್ರ ಉಳಿದಿದ್ದಾರೆ ಎಂದಾಗ ಭಾರತದಿಂದ ತೆರಳಿದ ಈ ಐದು ಜನರ ಗುಂಪಿನಲ್ಲಿ ತಲ್ಲಣಗಳು, ಗೊಂದಲಗಳು ಕಾಣಲಾರಂಭಿಸುತ್ತವೆ. ಇದರ ಸಿಕ್ಕುಗಳನ್ನು ಬಿಡಿಸಲು ಪ್ರಯತ್ನಿಸುವ ಕರ್ನಲ್ ರವೀಂದ್ರನಿಗೆ ತನಿಖೆಯ ವಿವರಗಳು ಒಂದೊಂದೇ ಬಯಲಾದಾಗ ತಾನೆಂತಹ ಸಂಧಿಗ್ದ ಸುಳಿಯಲ್ಲಿ ಸಿಲುಕಿಕೊಂಡಿರುವೆ ಎಂಬ ಅರಿವಾಗುತ್ತದೆ. ಇಷ್ಟಕ್ಕೂ ಆ ಪಟ್ಟಿಯಲ್ಲಿಲ್ಲದ ನಾಲ್ಕು ಜನರ ಕೊಲೆ ಮತ್ತು ಭಾರತದ ಮೇಲಿನ ಭಯೋತ್ಪಾದಕ ದಾಳಿಗೆ ಏನಾದರೂ ಸಂಬಂಧವಿತ್ತೇ? ತನ್ನ ತಂಡದಲ್ಲಿ ಉಂಟಾದ ತಲ್ಲಣಗಳಿಗೆ ಕಾರಣರಾದವರ ಪಿತೂರಿಯನ್ನು ಹೊರಗೆಳೆಯುವಲ್ಲಿ ಯಶಸ್ವಿಯಾಗುತ್ತಾನೆಯೇ ರವೀಂದ್ರ ಪೂಣಚ್ಚ? ಆ ಕಾರ್ಯಾಚರಣೆಯಲ್ಲಿ ತನಗಾದ ಅನ್ಯಾಯವನ್ನು ಪ್ರತಿಭಟಿಸಿ ಅದರ ಲೆಕ್ಕ ಚುಕ್ತಾ ಮಾಡುವಲ್ಲಿ ಅವನು ಯಶಸ್ವಿಯಾದನೇ ಎಂಬುದನ್ನು ತಿಳಿಯಲು ಕಾದಂಬರಿ ಓದುವುದು ಉತ್ತಮ…


ಉಗ್ರರ ಕುರಿತು ಮಾಹಿತಿ ಕಲೆಹಾಕುವುದು, ಅವರ ದಿನಚರಿಯನ್ನು ಅಭ್ಯಸಿಸಿ ಯೋಜನೆಯನ್ನು ರೂಪಿಸುವುದು, ಆ ಯೋಜನೆಯಲ್ಲಿ ಯಾವುದೇ ಲೋಪಗಳಾಗದಂತೆ ಕಾರ್ಯರೂಪಕ್ಕೆ ತರುವುದು ಇವೆರಳಲ್ಲದರ ವಿವರಗಳು ರೋಚಕವಾಗಿವೆ. ಭಾರತೀಯ ರಾಜಕಾರಣದಲ್ಲಿ ಚಾಲ್ತಿಯಲ್ಲಿರುವ, ಭೂಗತ ಪಾತಕಿಗಳ ಮತ್ತು ಭಯೋತ್ಪಾದಕರನೇಕರ ಹೆಸರುಗಳು ಇಲ್ಲಿ ಅಲ್ಪಸ್ವಲ್ಪ ತಿರುಗುಮುರುಗಾಗಿ ಈ ಕಥೆ ನಿಜವಾಗಿ ನಡೆದಿರಬಹುದಾ ಎಂಬ ಅನುಮಾನ ಓದುಗರಲ್ಲಿ ಮೂಡುತ್ತದೆ. ಆದರೆ ಲೇಖಕರ ಪ್ರಕಾರ ಇದೊಂದು ಶುದ್ಧ ಕಾಲ್ಪನಿಕ ಕಾದಂಬರಿ…


ನಮಸ್ಕಾರ,

ಅಮಿತ್ ಕಾಮತ್
Profile Image for Abhi.
89 reviews20 followers
February 8, 2021
||• ಹಿಮಾಗ್ನಿ •||

ಕರ್ನಲ್ ಮಾಚಿಮಾಡ ರವೀಂದ್ರ ‌ಪೂಣಚ್ಚ!!

ಶ್ರೀಮತಿ ಸೋನಿಯಾ ಗಾಂಧಿರವರ ಚಿತ್ರವಿರುವ ಪುಸ್ತಕ ನೋಡಿದ ಕೂಡಲೇ ಪುಸ್ತಕದ ಒಡಲು ರಾಜಕೀಯವನ್ನು ಹೊತ್ತಿರಬಹುದು ಅಥವಾ ಯುದ್ಧಕ್ಕೆ ಸಂಬಂಧ ಪಟ್ಟಿರಬಹುದು ಅನಿಸಿತ್ತು‌. ಅದರೊಂದಿಗೆ ಇನ್ನಷ್ಟು ವಿಷಯಗಳಿವೆ. ವಿಪರ್ಯಾಸವೆಂದರೆ - ಲೇಖಕರು ಈ ಪುಸ್ತಕ ಕೇವಲ ಕಾಲ್ಪನಿಕವಷ್ಟೇ, ಯಾವುದಾದರೂ ವ್ಯಕ್ತಿಯೊಂದಿಗೆ ತಳುಕು ಹಾಕಿಕೊಂಡರೇ ಅದು ಕಾಕತಾಳೀಯ ಎಂಬ ಪುಟ್ಟ ಸಂದೇಶವನ್ನಿರಿಸಿದ್ದಾರೆ. ಕಾಲ್ಪನಿಕವೇ ಇರಬಹುದಾ ಎಂಬ ಪ್ರಶ್ನೆಗೆ ನಮ್ಮ ದೇಶದ ಆಗುಹೋಗುಗಳೇ ಉತ್ತರಿಸಬೇಕು. ಇನ್ನೊಂದು ವಿಶೇಷತೆಯೆಂದರೆ ಪುಸ್ತಕದ ಪಯಣ ಸಾಗುತ್ತಾ ನಮ್ಮೊಳಗಿನ ಭಾರತೀಯ ಹೆಚ್ಚು ಜಾಗೃತನಾಗುತ್ತಾನೆ.

ರವಿ ಬೆಳಗೆರೆ ಅವರನ್ನು ಮೆಚ್ಚಿಕೊಂಡು ಓದುವವರಿದ್ದಾರೆ, ಅವರನ್ನು ಹಚ್ಚಿಕೊಂಡು ಓದುವವರಿದ್ದಾರೆ. ನಾನು ತುಸು ಹೆಚ್ಚೇ ಹಚ್ಚಿಕೊಂಡು ಓದುತ್ತೇನೆ. "ದ ಟಿಪಿಕಲ್ ಬೆಳಗೆರೆ ಫ್ಲೇರ್" ಪುಸ್ತಕದುದ್ದಕ್ಕೂ ಕಾಣಸಿಗುತ್ತದೆ. ಓದುಗನನ್ನು ಸೆಳೆದುಕೊಂಡು ೫೦೪ ಪುಟಗಳ ಕಾದಂಬರಿಯುದ್ದಕ್ಕೂ ಆರ್‌ಬಿ ಅವರು ಆವರಿಸಿಕೊಳ್ಳುತ್ತಾರೆ. ಓದುಗ ಮಂತ್ರಮುಗ್ಧ!!! ರವೀ ಸರ್ ಸಾಮಾನ್ಯವಾಗಿ ಭಾವನಾತ್ಮಕವಾಗಿ ಬರೆಯುತ್ತಾರೆ.‌ ಸಂಶೋಧನೆ ಆಧಾರಿತ ಕಾದಂಬರಿಗಳು ಬೆರಳೆಣಿಕೆಯಷ್ಟು ಅಷ್ಟೇ. ಬಹುಶಃ ಹಿಮಾಗ್ನಿಯೊಂದೇ.

ಸ್ಟೀಫನ್ ಸ್ಪಿಲ್‌ಬರ್ಗ್‌ ಬಹುಪಾಲು ಜನರಿಗೆ ಗೊತ್ತಿರುವ ಜಗತ್ಪ್ರಸಿದ್ಧ ನಿರ್ದೇಶಕ. ಅವರ ನಿರ್ದೇಶನದಲ್ಲಿ ೨೦೦೫ರಲ್ಲಿ ತೆರೆಕಂಡ ಮ್ಯೂನಿಚ್ ಸಿನಿಮಾವನ್ನು ಪ್ರೇರಣೆಯಾಗಿರಿಸಿಕೊಂಡು ಬರೆದ ಪುಸ್ತಕವಿದು. ಇಸ್ರೇಲಿಯನ್ ರಾಜಕೀಯದ ವಸ್ತುವನ್ನು "ನೆಟಿವಿಟಿ"ಯೊಂದಿಗೆ ತಳುಕು ಹಾಕಿಸಿ ಬರೆಯಲಾಗಿದೆ. ಮೊದಮೊದಲಿಗೆ ಕಾದಂಬರಿಯ ವಸ್ತು ಮತ್ತು ಬಂದು ಹೋಗುವ ಪಾತ್ರಗಳು ಹುಬ್ಬೇರುವಂತೆ ಮಾಡಿದರೂ ಕೊನೆಕೊನೆಯಲ್ಲಿನ "ಕಾಲ್ಪನಿಕ ಸತ್ಯಗಳು" ಆ ಪಾತ್ರಗಳೆಡೆಗೆ ಒಂದು ವಿಚಿತ್ರವಾದ ಹೇಯಭಾವವನ್ನು ಹುಟ್ಟಿಸಿಬಿಡುತ್ತದೆ. ಮ್ಯೂನಿಚ್ ಸಿನಿಮಾ‌ ಮಾತ್ರವಲ್ಲದೇ ಇನ್ನಷ್ಟು ಕೃತಿಗಳನ್ನು ಸಂಶೋಧಿಸಿ ಬರೆದಿರುವುದರಿಂದ ಪುಸ್ತಕ ಸತ್ಯವನ್ನು ಮತ್ತಷ್ಟು ಆಕರ್ಷಿಸಿದೆ.

ಬೆಸ್ಟ್ ಆಫ್ ಬೆಳಗೆರೆ ಎಂಬ ಪುಸ್ತಕಗಳ ಸಾಲಿನಲ್ಲಿ ಈ ಪುಸ್ತಕ ಖಂಡಿತವಾಗಿ ಸೇರುತ್ತದೆ. ಓದಿ :)

ಅಭಿ...
Profile Image for ಸುಶಾಂತ ಕುರಂದವಾಡ.
429 reviews25 followers
May 2, 2021
ಬ್ರೋಫೇರ್ಸ್ case ಕಥಾವಸ್ತು. ಈ ಕಾದಂಬರಿ ಓದಿದ ಮೇಲೆ ಹೀಗೂ ಇರಬಹುದೇನೋ ಅನ್ನುವ ಊಹೆ ನಮಗೂ ಬರುತ್ತೆ.
Profile Image for Akasharagala Alemaari.
15 reviews2 followers
February 11, 2024
ಇದು ’ಹಿಮಾಗ್ನಿ’. ಅಪ್ಪಟ ಕೌಂಟರ್ ಟೆರೆರಿಸಂ ನ ಕಥಾವಸ್ತು. ೨೦೦೮ ರಲ್ಲಿ ಮುಂಬೈಯಲ್ಲಿ ನಡೆದ ಭಯೋತ್ಪಾದಕ ಕೃತ್ಯದ ಹಿಂದಿರುವ ನಿಜವಾದ ಉಗ್ರರನ್ನು ಸದೆಬಡಿಯಲು ಭಾರತದಿಂದ ನಿಯೋಜನೆಗೊಂಡ ’ರಾ’ (RAW) ನ ಒಂದು ಟೀಮ್ ಮತ್ತು ಆ ಟೀಮ್ ನ ಮುನ್ನಡೆಸುತ್ತಿರುವ ಲೀಡರ್ ಬಗೆಗಿನ ರೋಚಕ ಕಾದಂಬರಿ.

ಕೌಂಟರ್ ಟೆರರಿಸಂ ನ ಉದ್ದ ಅಗಲಗಳು, ಬೇಹುಗಾರಿಕೆಯ ವಿವಿಧ ಆಯಾಮಗಳು ಹಾಗೂ ’ರಾ’ (RAW) ಸಂಸ್ಥೆಯ ಏಜೆಂಟರ ಜೀವನ, ಅವರಿಗಿರುವ ಪ್ರಾಣಾಪಯದ ಭಯ ಎಲ್ಲವೂಗಳ ಕುರಿತು ಅದ್ಭುತವಾಗಿ ಕಥೆ ಹೆಣೆದಿದ್ದಾರೆ ಬೆಳಗೆರೆಯವರು. ಬೆಳಗೆರೆಯವರ ಓದಿನಲ್ಲಿ ಒಂದು ಚುಂಬಕ ಶಕ್ತಿ ಇದೆ. ಅದು ಇಲ್ಲಿನ ಪ್ರತಿ ಪುಟದ ತಿರುವಿನಲ್ಲಿ ನಿಮ್ಮನ್ನ ಸೆಳೆದುಕೊಳ್ಳುತ್ತಲೇ ಹೋಗುತ್ತದೆ. ಭಯೋತ್ಪಾದಕ ಪಡೆಯನ್ನು ಬೆನ್ನತ್ತಿ ಹೋಗುವ ಭಾರತದ ಯೋಧರು ಯಾರ್ಯಾರು? ಹೋದವರೆಲ್ಲರೂ ತಮಗೆ ವಹಿಸಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರಾ? ಇವರ ನಡುವೆ ಮುತ್ತಪ್ಪ ರೈ ಬಂದು ಹೋಗುವುದೇಕೆ? ಕೊನೆಗೆ ಎಲ್ಲರೂ ಬದುಕುಳಿಯುತ್ತಾರಾ ಅಥವಾ ಕೊಲೆ ಮಾಡಲೂ ಹೋದವರೆ ಕೊಲೆಯಾಗುತ್ತಾರಾ? ಎಲ್ಲವನ್ನು ಪುಸ್ತಕ ಓದಿಯೇ ತಿಳಿಯಬೇಕು. ಪ್ರತಿ ಪುಟದಲ್ಲೂ ರೋಚಕತೆ ತುಂಬಿದೆ. ಭರ್ತಿ 500 ಪುಟಗಳ ಪುಸ್ತಕ ಅದ್ಭುತವಾದ ಓದುವಿಕೆಯನ್ನ ನೀಡುವುದು ಸತ್ಯ..
Profile Image for Kashyap Karthik.
44 reviews
January 4, 2026
ಕಾದಂಬರಿ ಅನ್ನುವುದಕ್ಕಿಂತ ಭಾಷಾಂತರ ಅನ್ನಬಹುದು. ಇಸ್ರೇಲ್ ನ ಮೊಸಾದ್ ಕುರಿತು Munich ಎಂಬ ಸಿನಿಮಾ ಇದೆ. ತಮ್ಮ ಒಲಿಂಪಿಕ್ ಆಟಗಾರರ ಹತ್ಯೆಗೆ ಮೊಸಾದ್ ಸೇಡು ತೀರಿಸಿಕೊಳ್ಳುತ್ತದೆ, ಜೊತೆಗೆ ತನ್ನ ಸಹಚರನನ್ನು ಕೊಂದ ತಪ್ಪಿಗೆ ಒಬ್ಬಳನ್ನು ತಂಡ ಕೊಲ್ಲುತ್ತದೆ. ಆ ಸಿನಿಮಾ ಅಥವಾ ಪುಸ್ತಕದ ಭಾಗವನ್ನು ಲೇಖಕರು ಏಥಾವತ್ತಾಗಿ ನಿರೂಪಿಸಿದ್ದಾರೆ, ಹೆಸರುಗಳನ್ನು ಬದಲಾಯಿಸಿ.

ಅದಲ್ಲದೆ ಕಾಂಗ್ರೆಸ್ ಪಕ್ಷದ ಮೈನೋ ಗಾಂಧೀ ಯೋಗ್ಯತೆಯನ್ನು ಬಯಲು ಮಾಡಿದ್ದಾರೆ. ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು RAW ಏಜೆಂಟ್ ಗಳನ್ನು (ಅರ್ಥಾತ್ ದೇಶದ ಆಸ್ತಿ) ಬಳಸಿಕೊಂಡ ನೀಚ ಬುದ್ಧಿ ಕಾದಂಬರಿಯಲ್ಲಿ ವ್ಯಕ್ತವಾಗಿದೆ. ಇದು ಬಹುಶಃ ಮತ್ತೊಂದು ಆಕರ ಗ್ರಂಥದಿಂದ ಭಾಷಾಂತರ ಮಾಡಿರಬಹುದು ಎಂಬುದು ನನ್ನ ಅಭಿಪ್ರಾಯ.

ಒಟ್ಟಾರೆ ಲೇಖಕರ ಉತ್ತಮವಾದ ತರ್ಜಿಮೆ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ ಅನ್ನುವುದು ಸ್ಪಷ್ಟ. ಒಂದೊಳ್ಳೆ ಪುಸ್ತಕ.
Profile Image for Manu Ramachandra.
4 reviews
June 25, 2018
Excellent book. The plot of the story is well netted. Last 100 pages is very interesting.
1 review
Read
April 26, 2017
Best Original account based novel.

Great!!!!!!!!

Machimada Hero
Displaying 1 - 10 of 10 reviews

Can't find what you're looking for?

Get help and learn more about the design.