ತನ್ನೆದುರಿಗಿದ್ದ ತಿಮಿಂಗಿಲ ವಾಂತಿಯ ಚಿಕ್ಕ ತುಂಡೊಂದನ್ನು ಕೈಗೆತ್ತಿಕೊಂಡ ಡಿಟೆಕ್ಟಿವ್ ಹಿಮವಂತನು ಅದರೆಡೆಗೆ ತೀಕ್ಷ್ಣ ದೃಷ್ಟಿ ಬೀರುತ್ತಾ "ನನಗೇನೋ ಈ ಕೇಸಿನಲ್ಲಿ ಥ್ರಿಲ್ ಇದೆಯೆಂದು ಅನಿಸುತ್ತಿದೆ. ನಾನು ಈ ಕೇಸನ್ನು ತೆಗೆದುಕೊಳ್ಳುತ್ತೇನೆ, ಆದರೆ ಇನ್ವೆಸ್ಟಿಗೇಶನ್ ಗೆಂದು ಆ ಎಸ್ಟೇಟಿನೊಳಗೆ ಹೋಗುವುದಾದರು ಹೇಗೆ? ಎಂದು ಪ್ರಶ್ನಿಸುತ್ತಿದ್ದಂತೆ, ಅದರ ಕುರಿತು ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನನಗೆ ಬಹಳ ಬೇಕಾದ ಸ್ನೇಹಿತರೊಬ್ಬರು ರಿಸರ್ಚ್ ವಿಚಾರವಾಗಿ ಬಿಸ್ಲೆ ಘಾಟಿಗೆ ಬರುತ್ತಿರುವುದರಿಂದ, ಅವರಿಗೆ ಉಳಿದುಕೊಳ್ಳಲು ಒಂದು ತಿಂಗಳ ಮಟ್ಟಿಗೆ ನಿಮ್ಮ ಗೆಸ್ಟ್ ಹೌಸಿನ ಅಗತ್ಯವಿದೆಯೆಂದು ಎಸ್ಟೇಟಿನ ಓನರ್ ಕಾಳಿದಾಸ್ ಅರಸರಲ್ಲಿ ನಾನು ಕೇಳಿಕೊಳ್ಳುತ್ತೇನೆ. ಅದಕ್ಕವರು ಬೇಡವೆನ್ನುವುದಿಲ್ಲ. ಕಾಳಿದಾಸ್ ಅರಸರ ಫ್ಯಾಮಿಲಿಯ ಸದಸ್ಯರು ಕೂಡ ಕೆಲದಿನಗಳ ಮಟ್ಟಿಗೆ, ಅಲ್ಲಿರುತ್ತಾರೆ. ಅವರಲ್ಲಿಲೇ ಯಾರೋ ಕೋಟ್ಯಂತರ ರೂಪಾಯಿ ಮೌಲ್ಯದ ನನ್ನ ಮಾಲನ್ನು ಅಪಹರಿಸಿದ್ದಾರೆ. ಆದ್ದರಿಂದ ನೀವು ಆರಾಮಾಗಿ ನಿಮ್ಮ ವಿಚಾರಣೆಯನ್ನು ಕೈಗೊಳ್ಳಬಹುದು. ಅಂದಾಗೆ ಆ ಎಸ್ಟೇಟಿನ ಹೆಸರು "ಕಮಲಾಪುರ ಎಸ್ಟೇಟ್!!" ಎಂದು ಮಂಗಳೂರಿನ ಪ್ರಭಾಕರ್ ಶೆಟ್ಟಿಯು ಹೇಳುತ್ತಿದ್ದಂತೆ ಹಿಮವಂತನ ದೃಷ್ಟಿಯು ಅವನೆದುರಿಗಿದ್ದ ಫ್ಯಾಮಿಲಿ ಫೋಟೋ ದತ್ತ ಹೊರಳಿತು. ಆ ಕಲರ್ ಫೋಟೊವು ಬಣ್ಣ ಬಣ್ಣದ ರಹಸ್ಯಗಳನ್ನೊತ್ತು ಕುಳಿತಿತ್ತು!!
ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ.
‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ನಾನು’ ಹಾಗೂ ‘ಬಿಸಿನೆಸ್ ಚಾಣಕ್ಯ’ ಎಂಬ ಪುಸ್ತಕಗಳನ್ನು ನಿರೂಪಣೆ ಮಾಡಿಕೊಟ್ಟಿದ್ದಾರೆ. ಇವರು ‘ದಾನವ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ‘ಆಟೋಶಂಕ್ರಿ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.
ತಾನು ಬರೆದ ಕಾದಂಬರಿಗಳನ್ನು ಸಿನಿಮಾರೂಪಕ್ಕೆ ತಂದು ನಿರ್ದೇಶಕನಾಗೇಕೆಂಬುದು ಇವರ ಗುರಿ. ಇವರ ಪತ್ತೇದಾರಿಯ ಕಾದಂಬರಿಗಳಾದ ‘ಕಾಲಯ ತಸ್ಮೈ ನಮಃ’, ಮತ್ತು ‘ಸ್ವಪ್ನದ ಬೆನ್ನೇರಿ’ಯನ್ನು ಸ್ನೇಹ ಬುಕ್ ಹೌಸ್ ನವರು ಪ್ರಕಟಿಸಿದ್ದಾರೆ. ಜೊತೆಗೆ ಮತ್ತೊಂದು ಪತ್ತೇದಾರಿಯ ಕಾದಂಬರಿ ‘ತ್ಯಾಗರಾಜ್ ಕಾಲೋನಿ’ ಪ್ರಕಟಗೊಂಡಿದೆ.
ಬಹಳ ದಿನಗಳಿಂದ ಬಯಕೆಪಟ್ಟಿಯಲ್ಲಿದ್ದ ಈ ಪುಸ್ತಕ ಓದಿದ್ದು ಸಂತಸ ನೀಡಿದೆ. ಮೊದಲ ಬಾರಿ ಈ ಲೇಖಕರ ಪುಸ್ತಕ ಓದುತ್ತಿದ್ದು, ಟಿ ಕೆ ರಾಮರಾವ್ ಮತ್ತು ರವಿ ಬೆಳಗೆರೆಯವರ ನೆನಪಿಸಿತು. ಬಹುಶಃ ಮುಂದಿನ ದಿನಗಳಲ್ಲಿ ಅವರ ಜಾಗವನ್ನು ಕೌಶಿಕ್ ಅವರು ತುಂಬಬಲ್ಲರೇನೋ. ತಿಮಿಂಗಿಲದ ವಾಂತಿಯ ಬಗ್ಗೆ ಇದೇ ಮೊದಲ ಬಾರಿ ಕೇಳಿದ್ದು! ಅದರ ಕಳ್ಳತನದ ಸುತ್ತಮುತ್ತ ನಡೆಯುವ ಪ್ರಸಂಗಳ ಮೇಲೆ ಈ ಕಥೆಯನ್ನು ಹೆಣೆಯಲಾಗಿದೆ. ಹಾಗೆ ಕುಟುಂಬವೊಂದರ ಕುಟುಂಬ ರಹಸ್ಯದ ಮೇಲೆ ಅಲ್ಲಿ ನಡೆಯುವ ಘಟನೆಗಳ ಸುತ್ತ ಅಲ್ಲಿ ರೂಪಿಸುವ ಬಿಂಬವು ಕೊನೆಯ ಪುಟದವರೆಗೂ ಕರೆದುಕೊಂಡು ಹೋಗುತ್ತದೆ. ಪುಸ್ತಕ ಬರೆದಿರುವ ಶೈಲಿ ಹೆಚ್ಚು ಕಡಿಮೆ ರವಿ ಬೆಳಗೆರೆಯವರ ಹಾಗೆ ಎನಿಸುತ್ತದೆ. ಅವರಿಂದ ಇನ್ಸ್ಪೈರ್ ಆಗಿರಬಹುದು!
ಒಂದೊಳ್ಳೆ ಡಿಟೆಕ್ಟಿವ್ ಸಿನಿಮಾ ಅಥವಾ ವೆಬ್ ಸೀರೀಸ್ ನೋಡಿದಂತಹ ಅನುಭವ. ಕೊನೆಯ ಅಧ್ಯಾಯದವರೆಗೂ Who done it ? ಎನ್ನುವ ಪ್ರಶ್ನೆಗೆ ಉತ್ತರ ಸಿಗದಂತೆ ಓದಿಸಿಕೊಂಡು ಹೋಗುವ ಕೌಶಿಕ್ ಅವರ ಬರವಣಿಗೆ ಮೆಚ್ಚುವಂತದ್ದು.
ಸಂಪೂರ್ಣ ಕಥೆ ಗಿರಕಿ ಹೊಡೆಯುವುದು ಆಂಬರ್ಗ್ರೀಸ್ನ ಸುತ್ತ, Ambergris ಎಂದರೆ ತಿಮಿಂಗಿಲ ವಾಂತಿ, ನನಗೆ ನಿಜವಾಗಲೂ ಇಂತದ್ದೊಂದು ಇದೆ ಅಂತ ತಿಳಿದೇ ಇರಲಿಲ್ಲ. Hypnopedia, Somniloquy ತರಹದ ನಿದ್ರೆಗೆ ಸಂಬಂಧಪಟ್ಟ ಕಾಯಿಲೆಗಳನ್ನ ಕಥೆಗೆ ಪೂರಕವಾಗಿ ಬಳಸಿಕೊಂಡಿದ್ದು ಲೇಖಕರ ಸೃಜನಶೀಲತೆಯನ್ನು ತೋರುತ್ತದೆ. ಟಿಪಿಕಲ್ ಓಲ್ಡ್ ಮೂವೀಸ್ಗಳಲ್ಲಾಗುವಂತ ಮುಕ್ತಾಯ ನಂಗೇನು ಅಷ್ಟು ಹಿಡಿಸಿಲಿಲ್ಲ, not the unique conclusion I had hoped for.
"ತಮ್ಮೊಳಗೆ ಅದೆಷ್ಟೇ ಅಸಹನೆಗಳಿದ್ದರೂ ಅದನ್ನು ಹೊರಗೆ ತೋರ್ಪಡಿಸಿಕೊಳ್ಳದೆ ನಾಟಕೀಯದ ನಗುವನ್ನೊತ್ತು ಮನೆಯ ಪ್ರತಿಯೊಬ್ಬರೂ ಅಲ್ಲಿ ಲವಲವಿಕೆಯಿಂದ ಓಡಾಡಿಕೊಂಡಿದ್ದರು"
My third book of Kowshik Koodurasthe after ಅರ್ಧ ಸತ್ಯ ಅರ್ಧ ಸುಳ್ಳು & ಒಂದು ಕೋಪಿಯ ಕಥೆ. While both the other books involved characters and their events set in varied environments, this book completely revolves around characters of the same family living in an estate together (during the period of the main story). Each character has his/her own justified motive, primarily to obtain either Ambergris or ancestral property or lets say money, in some way or the other.
The writer has beautifully explored every character of this rather big family, giving sufficient space to each, taking time to connect with others. All along, as a reader I only felt that the mystery would end with any of the characters of the family primarily involved, only to realise some off characters being involved providing for twists after twists.
One best thing about the writer has to be the way he justifies every single event, motive, connecting them without creating any confusions in reader's mind and a sense of completion at the end.
Suspense thriller Web series ನೋಡಿದ ಅನುಭವ 😍 ಕೌಷಿಕ್ ಅವರ ಭಾಷೆಯ ಬಗ್ಗೆ ಒಂಚೂರು ಮೈನರ್ ತರಕಾರುಗಳಿವೆ (ಬಂದು ಹೇಳಿದರು ಅನ್ನೋದನ್ನ ಬಂದೇಳಿದರು ಅಂತಲೋ ಕೈಯ್ಯಲ್ಲಿ ಹಿಡಿದು ಅನ್ನೋದನ್ನ ಕೈಯ್ಯಲ್ಲಿಡಿದು ಅಂತನೋ ಬರೆಯೊ ಅವರ ಭಾಷಾ ಬಳಕೆ ನಂಗೆ ಓದೋಕೆ ರಗಳೆ) ಅದರ ಹೊರತಾಗಿ very well crafted story.
One of the best suspense thriller I have read this year.
ಕೊನೆಯವರೆಗೂ ಯಾರು ಕೊಲೆಗಾರ ಅಂತ guess ಮಾಡೋಕೆ ಆಗಲ್ಲ. ಪ್ರತಿ character ನ introduce ಮಾಡಿದ ನಂತರ ಒಂದು ಅನುಮಾನದ ಬೀಜ ಬಿತ್ತಿ ಇಡ್ತಾರೆ. ಪುಸ್ತಕ ಕೆಳಗೆ ಇಡಲು ಮನಸ್ಸೇ ಆಗಲ್ಲ. ಒಂದೇ stretch ಅಲ್ಲಿ ಓದಿಕೊಂಡು ಹೋಗಿಸುವಂತದ್ದು.
Case of Kamalapura Estate by Koushik Koodurasthe is a story of murder, secret affairs, and hidden motives. The story revolves around ambergris, beginning with the theft of this valuable substance and eventually leading to multiple murders.
As usual, detective Himavanth uncovers the truth, but in the process he discovers more than one motive behind the crimes. Much like an Agatha Christie novel, the story features multiple important characters, each with a motive, leaving the reader constantly wondering who will ultimately succeed in carrying out their plans.
This is another classic whodunit mystery from the author, filled with multiple twists and turns throughout. Though the ending did not convince me as much as some of his other novels, it is still a good mystery novel that keeps you engaged until the very end.
ತಿಮಿಂಗಿಲ ವಾಂತಿ(ಇದರ ಬಗ್ಗೆ ನನಗೆ ಗೊತ್ತಾಗಿದ್ದು ಈ ಪುಸ್ತಕ ಓದುವಾಗಲೇ)ಯ ಪತ್ತೆದಾರಿಯಿಂದ ಪ್ರಾರಂಭವಾಗುವ ಕಾದಂಬರಿ ಒಂದು ಶ್ರೀಮಂತ ಎಸ್ಟೇಟ್ ಕುಟುಂಬದ ಒಳ-ಹೊರಗಿನ ಕುಟಿಲತೆಗಳಿಂದ ನಡೆಯುವ ಕೊಲೆಗಳ ಪತ್ತೇದಾರಿವರೆಗೆ ಹಲವು ತಿರುವುಗಳನ್ನು ಪಡೆದು ಓದುಗರನ್ನು seat-edgeನಲ್ಲಿ ಕೂರಿಸಿ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ. Web-series ನೋಡಿದ ಅನುಭವವಾಗುವುದು ಸಹಜವಾಗಿದೆ. ನನಗಿದು ಲೇಖಕರ ಮೊದಲ ಓದು, ಲೇಖಕರ ಇನ್ನೆರಡು ಪುಸ್ತಕಗಳು ಆಗಲೇ ಕೈ ಸೇರಿವೆ. P.S. ರವಿ ಬೆಳಗೆರೆಯವರ ಉತ್ಕಟ ಪ್ರೇಮಿ ಹಿಮವಂತ ಇಲ್ಲಿ ಪತ್ತೆದಾರನಾಗಿದ್ದಾನೆ 😜
*ತಿಮಿಂಗಿಲ ವಾಂತಿ* ಹೆಸರೇ ಎಷ್ಟು ವಿಚಿತ್ರವಾಗಿದೆ ಅಲ್ವಾ. ಸ್ಪರ್ಮ್ ವೇಲ್ ತಾವು ಸೇವಿಸಿದ ಆಹಾರವು ಜೀರ್ಣವಾಗದೆ ಅದನ್ನು ಹೊರಗೆ ಹಾಕಿದಾಗ ಬರುವ ದ್ರವಮಿಶ್ರಿತ ಘನ ವಸ್ತುವಿಗೆ ತಿಮಿಂಗಿಲ ವಾಂತಿ ಅಥವಾ ಅಂಬರ್ಗ್ರೀಸ್ ಎನ್ನುತ್ತಾರೆ. ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇರುವುದರಿಂದ ಅದನ್ನು ಕೊಲ್ಲಲಾಗುತ್ತಿದೆ, ಅದರಿಂದ ಇದರ ಮಾರಾಟವನ್ನು ನಿಷೇದಿಸಲಾಗಿದೆ. ಇದೆ ಕಥಾವಸ್ತುವನ್ನು ಇಟ್ಟುಕೊಂಡು ಹೆಣೆದಿರುವ ಕಥೆಯೇ ಇದು.
ಕಮಲಾಪುರ ಎಸ್ಟೇಟಿನಲ್ಲಿ ಕಳೆದುಹೋಗಿರುವ ಅಂಬರ್ಗ್ರೀಸ್ ಅನ್ನು ಹುಡುಕಿ ಬರುವ ಮನೆಯವರ ಹಾವ-ಭಾವವನ್ನು ಗಮನಿಸುತ್ತಾ ಅವರ ಒಂದೊಂದು ರಹಸ್ಯವನ್ನು ಭೇದಿಸುತ್ತ, ನಡೆದ ಎರಡು ಕೊಲೆಗಳ ರಹಸ್ಯವನ್ನು ಸವಿಸ್ತಾರವಾಗಿ ಬಿಡಿಸುವುದೇ ಈ ಕಥೆಯ ಹಂದರ. "ಸ್ಲೀಪ್ ಟಾಕಿಂಗ್" ಮತ್ತು "ಸ್ಲೀಪ್ ಲರ್ನಿಂಗ್" ಎಂಬ ನಿದ್ದೆಗೆ ಸಂಬಂಧಪಟ್ಟ ಕಾಯಿಲೆಗಳನ್ನು ಬಳಸಿಕೊಂಡಿದ್ದು ಕಥೆಗೆ ಇನ್ನಷ್ಟು ಮೆರಗುಕೊಟ್ಟು ಕಥೆಯನ್ನು ಬೇರೆ ದಿಕ್ಕಿನಲ್ಲಿ ತೇಲುವಂತೆ ಮಾಡಿದೆ. ಪ್ರತಿ ಪುಟದಲ್ಲೂ ಮುಂದೇನು ರಹಸ್ಯ ಅಡಗಿದೆ ಎಂಬುದು ಕಥೆಯನ್ನು ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ ಅದು ಅವರ ಬರವಣಿಗೆಗೆ ಇರುವ ಶಕ್ತಿ... ಕೌಶಿಕ್ ಕೂಡುರಸ್ತೆ ಅವರ "ಕೇಸ್ ಆಫ್ ಕಮಲಾಪುರ ಎಸ್ಟೇಟ್" ಒಮ್ಮೆ ಓದಿ ಮತ್ತು ಓದಿಸಿ.. 😊✨
ಕಥೆ ಚೆನ್ನಾಗಿ ಇದ್ರೂ ಬರವಣಿಗೆ ಅಷ್ಟು ಖುಷಿ ಕೊಡಲಿಲ್ಲ. ಇಡೀ ಪುಸ್ತಕ ಪೂರ್ತಿ suspense maintain ಮಾಡಿದ್ರೂ ಓದುವಾಗ ಅದು ಕುತೂಹಲಕ್ಕಿಂತ, ಕಿರಿಕಿರಿಯೇ ಆಯ್ತು. ಬರವಣಿಗೆಯ ವಿಷಯ ಚೆನ್ನಾಗಿದೆ, ಲೇಖಕನಿಗೆ ವಿಷಾಯಸಕ್ತಿ ತುಂಬಾ ಇದೆ. ತುಂಬಾ ಪಾತ್ರಗಳನ್ನ ಹಾಕಿ ಸ್ವಲ್ಪ ಕಲಸುಮೇಲೋಗರ ಆಯ್ತು. Ending ಕೂಡ ಸ್ವಲ್ಪ crisp ಹಾಗೂ convincing ಇದ್ರೆ ಚೆನ್ನಾಗಿರೋದು.
ಸಹಜವಾಗಿ ಸುಲಭವಾಗಿ ಓದಬಹುದಾದಂತಹ ಕಥೆ. ಓದುಗರ ಕುತೂಹಲವನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಲೇಖಕರು ಸಫಲರಾಗಿದ್ದಾರೆ . ಕಾದಂಬರಿಯ ಪಾತ್ರಗಳ ಬಗ್ಗೆ ಇನ್ನೂ ಆಳವಾಗಿ ಬರೆದು ಕಥೆಯಲ್ಲಿ ಬರುವ ವೈಜ್ಞಾನಿಕ ಅಂಶಗಳನ್ನು ವಿಸ್ತರಿಸಿದ್ದರೆ ಚೆನ್ನಾಗಿದ್ದಿರಬಹುದು ಅನ್ನಿಸುತ್ತೆ ಆದರೆ ಅದು ಲೇಖಕರಿಗೆ ಬಿಟ್ಟಿದ್ದು . ಚಲನಚಿತ್ರ ನಿರ್ದೇಶನದಲ್ಲಿ ಒಳ್ಳೆಯ ಹಿಡಿತ ಸಾಧಿಸಿದರೆ ನಮ್ಮ ಚಿತ್ರರಂಗಕ್ಕೆ ಲೇಖಕರು ಒಳ್ಳೆ ಕೊಡುಗೆ ನೀಡಬಹುದು.
2.5 stars!! It was an easy and interesting read. Didn't know who the killer was till the end. I had read 'Ondu Kopiya Kathe' from this author a few months ago. It felt that even this book sort of follows a similar trajectory. Like some illegal thing is being smuggled (Kopi and Ambergris in each novel) and it gets lost and too many people get involved, there's a suspicious murder which gets intertwined with this illegal thing. So in the end both things gets resolved (murder and the thing that was lost). Same story with different people and different rare item that is being lost/stolen. So it did get a little boring because I felt like I was reading the same thing again just with a different cast of characters. Other than that it was a good story and as said in the dedication of the book it is definitely inspired by Agatha Christie