Jump to ratings and reviews
Rate this book

'ಪಾಕ ಕ್ರಾಂತಿ' ಮತ್ತು ಇತರ ಕತೆಗಳು

Rate this book
'ಪಾಕ ಕ್ರಾಂತಿ' ಮತ್ತು ಇತರ ಕತೆಗಳು
ಲೇಖಕರು: ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು

Paaka Kranti mattu itara Kategalu: A collection of essays and short stories by K. P. Purnachandra Tejasvi.

Published by Pustaka Prakashana, Saraswatipuram, Mysore

112 pages, Paperback

First published January 1, 2008

32 people are currently reading
574 people want to read

About the author

K.P. Poornachandra Tejaswi

58 books1,100 followers
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.

Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.

He has won several awards for his contribution to literature such as the Rajyotsava and Kannada Sahitya Academy awards.

Poornachandra Tejaswi died of cardiac arrest at the age of 69

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
105 (39%)
4 stars
105 (39%)
3 stars
39 (14%)
2 stars
9 (3%)
1 star
9 (3%)
Displaying 1 - 22 of 22 reviews
Profile Image for ಲೋಹಿತ್  (Lohith).
90 reviews1 follower
July 22, 2024
ಈ ಪುಸ್ತಕ ಕೊಂಡು ೧ ವರ್ಷವೇ ಆಯಿತು.. ಅವರ ಎಲ್ಲ ಇತರ ಕಥಾ ಕೃತಿಗಳನ್ನು ಓದಿ ಮುಗಿಸಿದೆ,ಇದನೊಂದು ಕೊನೆಗೆ ಇರಿಸಿದ್ದೆ.
ತೇಜಸ್ವಿಯವರ ಪುಸ್ತಕವೆಂದರೆ ಕಾಡು,ಊರು, ನೀರು,ಸಸ್ಯ,ಪ್ರಾಣಿ,ಮಳೆಯ ವರ್ಣನೆ ಇದ್ದೆ ಇರುತ್ತದೆ..
ಹಾಗಾಗಿ ಮಳೆಗಾಲದಲ್ಲೆ ಈ ಕೃತಿಯನ್ನು ಓದಿರಾಯಿತೆಂದು ಏತ್ತಿಟ್ಟಿದ್ದು ಒಳ್ಳೇದೆ ಆಯಿತು.

"ಪಾಕಕ್ರಾಂತಿ","ಸುವರ್ಣ ಸ್ವಪ್ನ" ತುಂಬಾ ಹಿಡಿಸಿತು..
Profile Image for Soumya.
218 reviews49 followers
January 6, 2022
Audio book ಕೇಳಿದ್ದು. Narration ತುಂಬಾ ಕೆಟ್ಟದಾಗಿ ಇತ್ತು.
ಹಾಗಾಗಿ book ಬಗ್ಗೆ ಈಗ review ಬರೆದರೆ ಸಮಂಜಸ ಅನ್ನಿಸದೇ ಇರಬಹುದು.

May be will 'read' this book sometime later and then review the book 😊
29 reviews1 follower
June 17, 2024
ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು ಊರಿಗೆ ಹೋದಾಗ ಅಡುಗೆ ಮಾಡಲು ಹೋಗಿ ಪೇಚಿಗೆ ಸಿಲುಕುವ ಹಾಸ್ಯ ಸಂಗತಿ ಜೊತೆಗೆ ಇನ್ನೂ ಹಲವು ಕತೆಗಳು ರಂಜಿಸುತ್ತವೆ...
63 reviews9 followers
December 31, 2020
"ಪಾಕ ಕ್ರಾಂತಿ" - ಓದಲೇ ಬೇಕಾದ ಕತೆ. ಪುಸ್ತಕದಲ್ಲಿ ಇನ್ನೂ ಹಲವು ಕತೆಗಳಿವೆ. ಮುಖ್ಯವಾಗಿ "ಪಿಶಾಚಿಗಳು", "ವನ ವರಾಹಗಳು", "ದನಗಳು", "ಮೂಡಿಗೆರೆ ಎಂಬ ಊರು", "ಸಂತೆ", 'ಸಿತಾರ್ ವಾಧ್ಯದ ಕತೆ".
"ಪಾಕ ಕ್ರಾಂತಿ" - ಪ್ರತೀ ಸಾರಿ ಕುಕ್ಕರ್ ಇಡಲು ಒಲೆಯ ಮುಂದೆ ಹೋದಾಗ, ಇರುವೆಗಳನ್ನು ಕಂಡಾಗ, ಸೀಮೆ ಎಣ್ಣೆಯ ವಾಸನೆ ಮೂಗಿಗೆ ಬಡಿದಾಗ, ರೇಷನ್ ಕಾರ್ಡ ಹೆಸರು ಕಿವಿಗೆ ಬಿದ್ದಾಗ , ಯಾರಾದರೂ ಮಗುವಿಗೆ ಒಂದು ಹೆಸರು ಸೂಚಿಸುವಂತೆ ಕೇಳಿದಾಗ ತಕ್ಷಣಕ್ಕೆ ನೆನಪಾಗುವ ಕತೆ. ತೇಜಸ್ವಿಯವರು ಪ್ರಕೃತಿಯೊಂದಿಗಿನ ಒಡನಾಟದ ನೈಜ ಅನುಭವಗಳ ಚಿತ್ರಿಸುವಿಕೆಯ ಬಗೆಯನ್ನು ಎಷ್ಟು ಹೇಳಿದರೂ ಸಾಲದು. ನೀವೇ ಓದಿಕೊಳ್ಳಿ.
Profile Image for Abhiram's  Book Olavu.
106 reviews3 followers
July 19, 2025
ಪ್ರಾಯಶಃ ತೇಜಸ್ವಿ ಅವರು ಮಲೆನಾಡಿನ ಬಗೆಗೆ ಅವಿಸ್ಮರಣೀಯವಾಗಿ ಬರೆದ ಹಾಗೆ ಇತರರು ಬರೆದಿರಲು ಸಾದ್ಯವೇ ಇಲ್ಲ! ನನಗಂತೂ ತೇಜಸ್ವಿ ಅವರು ಪ್ರಸ್ತಾಪಿಸಿರುವರ ಎಷ್ಟೋ ವಿಚಾರಗಳು ನನ್ನ ಸ್ಮೃತಿ ಪಟಲದಲ್ಲಿ ಹಾಗೆಯೆ ಉಳಿದುಕೊಂಡಿದೆ. ಮತ್ತು ಕೆಲವೆಲ್ಲ ವಿಷಯಗಳು ಈಗ nostalgic ಆಗಿ ಹೋಗಿವೆ. ಮತ್ತೆಮತ್ತೆ ತೇಜಸ್ವಿ ಅವರ ಪುಸ್ತಕಗಳ ಪುಟಗಳನ್ನ ತಿರುವಿದಾಗ, ಸಂತಸಗೊಂಡಿದ್ದೂ ಉಂಟು.

ಇದೇ ಪುಸ್ತಕದಲ್ಲಿ ಬರುವ ಎಷ್ಟೋ ವಿಚಾರಗಳು ನಗು ತರಿಸಿವೆ ಕೂಡ. ಉದಾಹರಣೆಗೆ, ಮೂಡಿಗೆರೆ ಜನರು ಏನನ್ನಾದರೂ ಚಿವುಟದೆ ಮುರಿಯದೆ ಮಾತಾಡುವುದಿಲ್ಲ ಅಂತ ತೇಜಸ್ವಿಯವರು ಒಂದು ಕಡೆ ಹೇಳುವರು.
ಹಾಗೆಯೇ ಕೆಲವು ವಿಚಾರಗಳಂತು ಹಲವು ದಶಕಗಳ ಹಿಂದಕ್ಕೆ ಕರೆದೊಯ್ಯುತ್ತವೆ. ಉದಾಹರಣೆಗೆ, ಮಲೆನಾಡಿನ ಭಾಗಗಳಲ್ಲಿ ನೆಡೆಯುತ್ತಿದ್ದ ಸಂತೆಗಳ ಬಗ್ಗೆ; ಸಂತೆ ನೆಡೆದ ಮಾರನೆ ದಿನ ಅಲ್ಲಿ ಸಂತೆ ನೆಡೆದಿತ್ತೆ ಅಂತ ಅನುಮಾನ ಬರುವಷ್ಟು ಯಥಾಸ್ಥಿತಿಗೆ ಬಂದಿರುತ್ತಿತ್ತು. ಇನ್ನೂ ಕರೆಂಟು ಹೋದರಂತೂ ಮಲೆನಾಡನ್ನು ಇಂಕ್ ಡಬ್ಬಿ ಒಳಗೆ ಅದ್ದಿದಂತ್ತಾಗುತ್ತಿತ್ತು; ಅಷ್ಟು ಕಾರ್ಗತ್ತಲು! ಮೆಟ್ರೋ ನಗರದಲ್ಲಿ ಕುಳಿತು ಯೋಚಿಸಿದಾಗ, ಕರೆಂಟು ಹೋದ ಸಂದರ್ಭದಲ್ಲಿ ಸೀಮೆ ಎಣ್ಣೆ ಹಣತೆ ಅಥವಾ ಗ್ಯಾಸ್ ಲೈಟು ಉರಿಸುತ್ತಿದ್ದ ಆ ಕಾಲ ಎತ್ತ ಮಾಯವಾಯ್ತು ಅಂತ ಅಚ್ಚರಿ ಮೂಡುವುದು!

ಇನ್ನೂ ತೇಜಸ್ವಿ ಅವರ ಅಡುಗೆ ತಯಾರಿಯ ಬಗ್ಗೆ ಓದಿದರಂತೂ ಹೊಟ್ಟೆ ಹುಣ್ಣಾಗುವಂತೆ ನಗುವುದಂತೂ ಗ್ಯಾರಂಟಿ! ನವೀನ ರೆಸಿಪಿಗಳೆಲ್ಲ ಜನ್ಮ ತಾಳುವವು! ಹಾಗೆಯೇ ರಾಜೇಶ್ವರಿ ಅವರು ಇನ್ನೆಷ್ಟು ತೇಜಸ್ವಿ-ಪ್ರಯೋಗಗಳನ್ನ ನೋಡಿರಬಹುದು, ಅಲ್ಲವೇ? ನನಗೆ ಈ ಸಂಗತಿಗಳನ್ನ ಓದಿ, ತೇಜಸ್ವಿಯವರ ತಲೆ ಹೀಗೂ ಕೆಲಸ ಮಾಡುವುದೇ ಅಂತ ಆಶ್ಚರ್ಯವೂ ಆಗಿದ್ದಂಟು!
Profile Image for Sanjay Manjunath.
200 reviews10 followers
July 8, 2024
ಪಾಕಕ್ರಾಂತಿಗೆ 5* ಮತ್ತು ಇತರ ಕಥೆಗಳಿಗೆ 4*
Profile Image for Gowrav Shenoy.
18 reviews
June 19, 2018
ಪಾಕ ಕ್ರಾಂತಿ ಪುರುಷರ ಅಡುಗೆ ಅವಾಂತರಗಳ ಬಗೆಗಿನ ಲಘುಹಾಸ್ಯ ಬರಹ. ತೇಜಸ್ವಿಯವರ ಸವಿಸ್ತಾರ ವಿವರಣೆ ನಗುತ್ತಲೇ ಓದುಗನನ್ನು ಓದಿಸಿಕೊಂಡು ಹೋಗುತ್ತದೆ. ಕುಕ್ಕರ್ ಕತೆ ಎಷ್ಟು ರೋಚಕವೆಂದರೆ, ಇಂದಿಗೂ ಕುಕ್ಕರ್ ನೋಡಿದೊಡನೆ ಅದು ಸಿಡಿಯುವ ಬಾಂಬಿನಂತೆ ಕಾಣಿಸುತ್ತದೆ. ಸುಲಭ ಅಡುಗೆಯ ಮೊರೆ ಹೊಕ್ಕವರಲ್ಲಿ ಕತೆಯ ಪಾತ್ರಧಾರಿಯೂ ಒಬ್ಬ. ಅದು ತೇಜಸ್ವಿ. ಇನ್ನೂ ಹಲವಾರು ಕತೆಗಳಿವೆ.
Profile Image for Manu HS.
3 reviews
March 2, 2016
Awesome book.... Use to lough while reading this book... His holding on Kannada words/Language is really impressive.
Profile Image for Srikanth.
238 reviews
September 13, 2019
ಎಲ್ಲಿಯೂ ಬೋರು ಹೊಡೆಸದೆ ಸಣ್ಣ ಸಣ್ಣ ಕಥೆಗಳ ರೂಪದಲ್ಲಿ ಅಡುಗೆಯ ಅವಾಂತರ, ನಗು, ಮಳೆಗಾಲ, ಸಂತೆ, ಮೂಡುಗೆರೆ, ದನಗಳು, ಸಿತಾರ್ ಹೀಗೆ ಅನೇಕ ವಿಚಾರಗಳ ಬಗ್ಗೆ ಚೆಂದವಾಗಿ ಬರೆದಿದ್ದಾರೆ.
Profile Image for ಸುಶಾಂತ ಕುರಂದವಾಡ.
424 reviews25 followers
June 2, 2022
ಪುಸ್ತಕ: ಪಾಕ ಕ್ರಾಂತಿ ಮತ್ತು ಇತರ ಕತೆಗಳು
ಲೇಖಕರು: ಕೆ ಪಿ ಪೂರ್ಣಚಂದ್ರ ತೇಜಸ್ವಿ

ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು ತೇಜಸ್ವಿ ಅವರ ಮರಣದ ನಂತರ ಅವರ ಬಿಡಿ ಲೇಖನ, ಕತೆಗಳನ್ನು ಒಂದು ಪುಸ್ತಕವನ್ನಾಗಿ ೨೦೦೮ರಲ್ಲಿ ಮುದ್ರಿಸಿದರು. ಕತೆಗಳನ್ನು ಓದುತ್ತಾ ಹೋದಂತೆ ತೇಜಸ್ವಿಯವರ ನೋಟವೇ ಬೇರೆ. ಇತರ ಕತೆಗಾರರಂತಲ್ಲ ಇವರ ಕತೆಗಳು. ಬೇರೆ ಜಗತ್ತಿಗೇ ತಗೊಂಡು ಹೋಗುತ್ತವೆ. ಪ್ರಸ್ತುತ ಪುಸ್ತಕದಲ್ಲಿ ತೇಜಸ್ವಿಯವರು ಹೊಸದೊಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಒಟ್ಟು ಎಂಟು ಕತೆಗಳನ್ನೊಳಗೊಂಡ ಈ ಪುಸ್ತಕದ ಪ್ರತಿ ಕತೆಯು ವಿಭಿನ್ನವಾಗಿ ಮೂಡಿಬಂದಿವೆ. ಪಾಕಕ್ರಾಂತಿ ಕತೆಯು ಅತಿ ಚೆನ್ನಾಗಿ ಮೂಡಿ ಬಂದಿದೆ. ತಮ್ಮ ಪ್ರೀಯ ಪತ್ನಿ ಮನೆಯಲ್ಲಿರದಾಗ ಲೇಖಕ ತಾನೇನು ಮಾಡದಂತಹ ಕೆಲಸವೇ ಇದು ಅಂತ ತಿಳಿದುಕೊಂಡು ಪಾಕಶಾಸ್ತ್ರಕ್ಕೆ ಕೈ ಹಾಕುತ್ತಾರೆ. ಅದರಲ್ಲಿ ಅವರಿಗೆ ಎದರಾಗುವ ಸವಾಲುಗಳು ನಮಗೆ ಮಜಾ ನೀಡುತ್ತವೆ. ಆ ಸಮಯದಲ್ಲಿ ಅವರಿಗೆ ತಲೆ ನೋವಾದರೂ ನಮಗೆ ತಿಳಿಹಾಸ್ಯ.
ಸುವರ್ಣ ಸಪ್ನ ಕತೆಯಲ್ಲಿ ರಮೇಶನ ಜೀವನದಲ್ಲಿಯ ಕನಸು ಮತ್ತು ನನಸುಗಳ ನಡುವಿನ ಹೋರಾಟ. ಬಸ್ಸಿಗಾಗಿ ಕಾಯುತ್ತಾ ಕುಳಿತಾಗ ಅವನ ತಲೆಯಲ್ಲಿ ಹರಿದು ಹೋಗುವ ಯೋಚನಾ ಲಹರಿ ಕತೆಗೆ ಮುದ ನೀಡುತ್ತದೆ.
ನಗು ಕತೆಯಲ್ಲಿ ಕಿಟ್ಟು ಮತ್ತು ಶಿಕ್ಷಕಿಯ ನಡುವಿನ ಬಾಂಧವ್ಯ ಮತ್ತು ಪ್ರೀತಿಯ ಕುರುಹು ಅದಮ್ಯವಾದುದು ಎಂದು ಈ ಕತೆಯಲ್ಲಿ ತೋರಿಸಲಾಗಿದೆ.
ಮಳೆಗಾಲದ ಚಿತ್ರ ಕತೆಯಲ್ಲಿ ಮಲೆನಾಡಿನ ಚಿತ್ರಣ ಅದ್ಭುತ. ಅದರ ಜೊತೆಗೆ ಅಲ್ಲಿಯ ಜನರಿಗೆ ಒದಗುವ ಕಷ್ಟ ಕಾರ್ಪಣ್ಯಗಳ ಚಿತ್ರಣ.
ಸಂತೆ ಕತೆಯಲ್ಲಿ ಊರಿನ ಸಂತೆಯ ಚಿತ್ರಣ ಮತ್ತು ಅಲ್ಲಿ ನಡೆಯುವ ಸಂಭಾಷಣೆ. ಸಂತೆ ಪದವನ್ನು ಬೇರೆಯಾಗಿ ಅರ್ಥೈಸಿಕೊಂಡಿರುವ ಜನರು ನಿಜವಾಗಿ ಸಂತೆ ಎಂದರೇನು ಅಂತ ತಿಳಿಯಲು ಕಥಾನಾಯಕ ಹೋದಾಗ ಅವರು ಕಾಣುವ ಆ ಸನ್ನಿವೇಶ, ಕಣ್ಣೋಟವೇ ಈ ಕತೆ.
ಅಜ್ಜಿಯ ಸಾವಿನಿಂದ ಕಿಟ್ಟಿಯ ಕಣ್ಣ��ಂದ ಹನಿಗಳು ಉದುರುವ ದೃಶ್ಯವನ್ನು ಮೃತ್ಯೋರ್ಮಾ ಕತೆಯಲ್ಲಿ ಓದಿದಾಗ ಬೇಜಾರಾಗುವುದು ಖಂಡಿತ.
ಕೇವಲ ೮೯ ಪುಟಗಳನ್ನು ಹೊಂದಿದ್ದರೂ ಆ ಪುಸ್ತಕದ content ಅದರ ನೂರು ಪಟ್ಟು.
Profile Image for Reshma Hegde.
16 reviews3 followers
June 30, 2023
ಪಾಕ ಕ್ರಾಂತಿ ಮತ್ತು ಇತರ ಕಥೆಗಳು ಪೂ ಚಂ ತೇ ಅವರ ಎಂಟು ಕಥೆಗಳುಳ್ಳ ರೋಚಕ ಕಥಾಸಂಕಲನ.
ಮೊದಲನೆಯ ಕಥೆ ಪಾಕ ಕ್ರಾಂತಿ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಹೆಂಡತಿ ತವರು ಮನೆಗೆ ಹೋದ ಸಮಯದಲ್ಲಿ ಅಡುಗೆ ಮನೆಯಲ್ಲಿ ಒಂದು ಕ್ರಾಂತಿಯನ್ನು ಮಾಡಬೇಕು ಎಂಬ ಹರ ಸಾಹಸಕ್ಕೆ ಕೈಹಾಕಿ ಹಲವಾರು ವೈಫಲ್ಯಗಳನ್ನು ಕಂಡರು. ಅವರು ಈ ಕಥೆಯನ್ನು ತುಂಬಾ ಹಾಸ್ಯ ಜನಕವಾಗಿ ಬರೆದಿದ್ದಾರೆ.
ಎರಡನೆಯದು ಕಳ್ಳನ ಕಥೆ. ಇದು ಕೇವಲ ಎರಡು ಪುಟದ ಸಣ್ಣ ಕಥೆ.
ಸುವರ್ಣ ಸ್ವಪ್ನ ಈ ಕಥೆಯಲ್ಲಿ ರಮೇಶನ ವಿಚಿತ್ರ ಕನಸುಗಳ ಬಗ್ಗೆ ಉಲ್ಲೇಖವಿದೆ.
ಪಿಶಾಚಿಗಳು ಎಂಬ ಕಥೆಯೂ ಚೆನ್ನಾಗಿದೆ.
ನಗು ಎಂಬ ಕತೆಯಲ್ಲಿ ಕಿಟ್ಟುವಿನ ಮುಗ್ಧತೆ ನನ್ನ ಮನಸ್ಸಿಗೆ ಏನೋ ಸಂತಸ ಕೊಟ್ಟಿತು.
ಮಳೆಗಾಲದ ಚಿತ್ರ ಕಥೆಯಲ್ಲಿ ಲೇಖಕರು ಮಲೆನಾಡಿನ ಮಳೆಗಾಲದ ಚಿತ್ರಣವನ್ನು ಹಲವು ಜನರ ಬಗ್ಗೆ ಹೇಳುತ್ತಾ ತುಂಬಾ ಚೆನ್ನಾಗಿ ವಿವರಿಸಿದ್ದಾರೆ.
'ಮಲೆನಾಡಿನ ಎಷ್ಟೋ ಕಡೆಗಳ ಸಂತೆ ಎಂದರೆ ಇದ್ದಕ್ಕಿದ್ದ ಹಾಗೆ ಬೆಳಗಿನ ಝಾವ ಬೀಳುವ ಕನಸಿನ ಹಾಗೆ, ದಾರಿಯಲ್ಲಿ ಪ್ರಯಾಣ ಮಾಡುತ್ತಾ ಇರುತ್ತೀರಿ. ನಿಶ್ಚಲವಾಗಿ ನಿಮ್ಮೆದುರು ನಿಂತ ಸುತ್ತಲಿನ ಕಾಡು, ಪರ್ವತಗಳು, ಕಣಿವೆಗಳು ಮುಂದೇನು ಸಂಭವಿಸಬಹುದು ಎನ್ನುವುದರ ಸುಳಿವನ್ನೇ ಕೊಡುವುದಿಲ್ಲ. ಕಾಡಿನ ಮಧ್ಯದ ದೊಡ್ಡ ಬಯಲಿನಲ್ಲಿ ಹಠತ್ತಾಗಿ ಒಂದು ಸಂತೆ ಪ್ರತ್ಯಕ್ಷವಾಗುತ್ತದೆ.' ಹೀಗೆ ಪ್ರಾರಂಭವಾದ ಸಂತೆ ಕಥೆಯಲ್ಲಿ ಲೇಖಕರು ತಮಗೆ ಸಂತೆಯಲ್ಲಾದ ಹಲವಾರು ಅನುಭವಗಳ ಬಗ್ಗೆ ನುಡಿಯುತ್ತಾರೆ.
ಕೊನೆಯ ಕಥೆಯಾದ ಮೃತ್ಯುರ್ಮಾ... ನನಗೆ ಅಬಚೂರಿನ ಪೋಸ್ಟಾಫೀಸು ಪುಸ್ತಕದ ಕೊನೆಯ ಕಥೆಯಾದ ತ್ಯಕ್ತದ ನೆನಪನ್ನು ಮರುಕಳಿಸಿತು.
ಒಟ್ಟಾರೆ ಪಾಕಕ್ರಾಂತಿ ಒಂದು ತುಂಬಾ ಒಳ್ಳೆಯ ಸಣ್ಣ ಕಥೆಗಳ ಭಂಡಾರ ಎಂದು ಹೇಳಬಹುದು.
Profile Image for Harish Kamath.
67 reviews2 followers
September 29, 2020
A collection of 11 short stories written by K.P Poornachandra Tejaswi for various newspapers/magazines. It is a short read and can be completed in one sitting.

The language used is simple, easy to understand, and interpret.

My personal favorites from the book were the chapters of Paaka Kranti and Suvarna Swapnagalu.

Paaka Kranti which translates to Cooking Revolution are the troubles author goes thru in cooking for himself in absence of his wife. It is hilarious to read. The coffee without milk, cooking fish only to invite ants, and almost blowing the roof of his home will keep you laughing till the end.

Suvarna Swapnagalu captures the musings/daydreams of a school going kid in a remote faraway village while his fellow neighbors and his mother are worried about his lucid daydreams/musings.

A quick read to enjoy on your weekend.
23 reviews9 followers
April 30, 2022
ನಮ್ಮ ದೇಶ ಮುಂದುವರೆಯದಿರುವುದಕ್ಕೆ ಮುಖ್ಯ ಕಾರಣ ಇವರ ಸಂಪ್ರದಾಯ ನಿಷ್ಠೆಯೇ. ಇದು ಅಡುಗೆ ಮನೆಯಿಂದಲೇ ಶುರುವಾಗುತ್ತೆ. ನನ್ನ ಶ್ರೀಮತಿ ಊರಿಗೆ ಹೊರಟಿರುವುದರಿಂದ ನನ್ನ ತತ್ವ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ಇಳಿಸಿ ಆ ಸಂಶೋಧನೆಯ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರುವುದಕ್ಕೆ ಒಳ್ಳೆಯ ಸಮಯ.

ಹೀಗೆ ಶುರುವಾಗುತ್ತೆ ತೇಜಸ್ವಿ ಅವರ ಪಾಕ ಕ್ರಾಂತಿಯ ಕಥೆ.

ಪಾಕ ಕ್ರಾಂತಿ, ಇದು 12 ಸಣ್ಣ ಕಥೆ ಮತ್ತು ಸಣ್ಣ ಲೇಖನಗಳ ಚಿಕ್ಕ ಚೊಕ್ಕ ಪುಸ್ತಕ. ಇದರಲ್ಲಿ ಪಾಕ ಕ್ರಾಂತಿ ಮತ್ತು ಸಂತೆ ಎರಡು ಲೇಖನಗಳು ನನಗೆ ಬಹಳ ಇಷ್ಟ ಆಗಿದ್ದು. ಸಾಮಾನ್ಯವಾಗಿ ಬರವಣಿಗೆಯಲ್ಲಿ ಓದುಗನನ್ನು ನಗಿಸೋದು ಬಹಳ ಕಷ್ಟ. ಆದರೆ ತೇಜಸ್ವಿ ಅವರಿಗೆ ಈ ಕಲೆ ಲೀಲಾಜಾಲವಾಗಿ ಬಂದಿದೆ. ಅವರ ಬರವಣಿಗೆ ಸರಳ ಆದರೂ ಅದಕ್ಕೊಂದು ತೂಕ ಇರತ್ತೆ. ನಮ್ಮ ಸುತ್ತ ಮುತ್ತಲಿನ ಘಟನೆಗಳನ್ನೇ ಎಷ್ಟು ಸ್ವಾರಸ್ಯಕರವಾಗಿ ಬರೆಯುತ್ತಾರೆ.
18 reviews
June 26, 2022
ಪಾಕ‌ಕ್ರಾಂತಿ ಮತ್ತು ಇತರೆ ಕಥೆಗಳು ಅದ್ಭುತ ಕಥೆಗಳ ಸಂಗ್ರಹ. ಅವುಗಳಲ್ಲಿ ನನ್ನ ನೆಚ್ಚಿನವು ಪಾಕಕ್ರಾಂತಿ, ನಗು ಮತ್ತು ವನ ವರಾಹಗಳು ಎಂಬುವ ಮೂರು ಕಥೆಗಳು. ಕೆಲವೊಂದು ಕಥೆಗಳು ಆಳವಾಗಿ ಚಿಂತಿಸಬಹುದಾದ ಕಥಾವಸ್ತುವನ್ನು ಹೊಂದಿದ್ದು ನನಗೆ ಅವುಗಳನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗಿದ್ದರಿಂದ ಓದುವಾಗ ಕೊಂಚ ನಿರುತ್ಸಾಹವುಂಟಾಯಿತು. ಪಾಕಕ್ರಾಂತಿ ಕಥೆಯಿಂದ ಮನಸ್ಸಿನಿಂದ ಬಹಳವಾಗಿ ನಗಬಹುದು. ತೇಜಸ್ವಿಯವರ ಬರವಣಿಗೆಯ ಸೊಬಗು ಆನಂದಿಸಬೇಕಾದಲ್ಲಿ, ಈ ಪುಸ್ತಕ ಖಂಡಿತ ಓದಲೇಬೇಕಾಗಿರುವಂಥದ್ದು.
Profile Image for Anagha S Jahgirdar.
76 reviews
April 30, 2023
Cooking revolution is always spoiling any body. Too many good dishes or recipies? Or just book reading? Tejaswi tales a net full of new perspectives about his kitchen, his wife and? Cooking revolution because his wife is soooo good at cooking than him. Other binge stories also into that foodie revolution.
1 review
May 30, 2021
i want read a book paakakranti if any one having the pdf plz send me ygbalaganur@gmail.com
Profile Image for Bharath Manchashetty.
127 reviews2 followers
December 22, 2025
ಅಡುಗೆ ಮಾಡಲು ಪ್ರಾರಂಭಿಸುವ ತೇಜಸ್ವಿಯವರು ಸರ್ಕಾರದ ವ್ಯವಸ್ಥೆಯನ್ನೇ ಟೀಕಿಸುವ ಪರಿ ಅವರಿಗೆ ಮಾತ್ರ ಸಾಧ್ಯ.
Profile Image for Anirudh .
833 reviews
May 21, 2013
Hilarious stories! Was tempted to try out some cooking experiments given!
Displaying 1 - 22 of 22 reviews

Can't find what you're looking for?

Get help and learn more about the design.