Jump to ratings and reviews
Rate this book

Ghandruk | ಘಾಂದ್ರುಕ್

Rate this book
'ಘಾಂದ್ರುಕ್' ನಮ್ಮಲ್ಲಿ ತೀವ್ರ ಆಸಕ್ತಿ ಹುಟ್ಟಿಸುವುದು ಅದರ ಭೌಗೋಳಿಕ ವಿಸ್ತಾರ ಮತ್ತು ಮಾನವೀಯ ಸಂಬಂಧಗಳ ಆಕರ್ಷಣೆಯಿಂದಾಗಿ. ನಮ್ಮ ದಕ್ಷಿಣ ಕನ್ನಡದಿಂದ ಹಿಡಿದು ಹಿಮಾಲಯದ ತಪ್ಪಲು,ನೇಪಾಳ ಅಲ್ಲಿನ ಘಾಂದ್ರುಕ್' ಎಂಬ ಹಳ್ಳಿ, ಅನ್ನಪೂರ್ಣ ಶಿಖರ, ಗಂಡಕಿ ನದಿ-ಹೀಗೆ ಪ್ರಕೃತಿ,ಸೃಷ್ಟಿ ಮತ್ತು ಮಾನವ ಬದುಕಿನ ಗತ,ಲಯಗಳು ಒಂದರೊಳಗೊಂದು ಬೆಸೆದುಕೊಂಡು ಅನಾವರಣಗೊಳ್ಳುವ ಈ ಕಾದಂಬರಿಯ ಕಥನದಲ್ಲಿ ಒಂದಕ್ಕಿಂತ ಹೆಚ್ಚು ಆಯಾಮಗಳಿವೆ.ಈ ಕಾದಂಬರಿಯ ಮೂಲ ಮೌಲ್ಯಗಳು, ಚಿಂತನೆ ಇರುವುದು ನೇಪಾಳವೂ ಸೇರಿದಂತೆ, ಭಾರತೀಯ ಸಂಸ್ಕೃತಿಯಲ್ಲೇ. ಇದಕ್ಕೆ ಆಧುನಿಕ ಯುಗದಲ್ಲಿ ಮೂಡಿರುವ ಆಯಾಮಗಳು ಈ ಬದುಕನ್ನು ಹೆಚ್ಚು ಸಂಕೀರ್ಣಗೊಳಿಸಿವೆ. ಚಿಂತನೆಯಲ್ಲಿ ಸ್ವಲ್ಪ ಗೊಂದಲ ಆರಾಜಕತೆಗಳಿಗೆಡೆ ಮಾಡಿಕೊಟ್ಟಿವೆ. ಹೊಸ ಆಯಾಮಗಳನ್ನೊಳಗೊಂಡ ವರ್ತಮಾನದ ಆಧುನಿಕ ಬದುಕಿನ ಶೋಧವೇ ಕಾದಂಬರಿಯ ಧ್ಯೇಯ ಉದ್ದೇಶಗಳು ಎಂದೇ ಇದನ್ನು ನವ್ಯೋತ್ತರ 'ನವ್ಯ' ಕಾದಂಬರಿ ಎಂದು ಕರೆಯಬಹುದೇನೋ.
ವ್ಯಕ್ತಿಗತ ನೆಲೆಯಿಂದ ಸಾರ್ವತ್ರಿಕ ನೆಲೆಗೆ ಚಾಚಿಕೊಳ್ಳುವ ಈ ಕಾದಂಬರಿಯಲ್ಲಿ ಮುಖ್ಯವಾಗಿ ಈ ಕೆಲವು ಆಯಾಮಗಳನ್ನು ಗುರುತಿಸಬಹುದು. ವರ್ತಮಾನ ಕಾಲದ ಕಾರ್ಪೊರೆಟ್ ಜಗತ್ತು,ಪ್ರಕೃತಿ, ಸೃಷ್ಟಿ - ಬದುಕಿನ ಲಯ ಗತಿಗಳು, ಮಾನವ ಸಂಬಂಧಗಳು, ಧಾರ್ಮಿಕ ಜಿಜ್ಞಾಸೆ ಮತ್ತು ಜಾಗತಿಕ ಪರಿಸ್ಥಿತಿ.

424 pages, Hardcover

First published January 1, 2023

1 person is currently reading
12 people want to read

About the author

Satish Chapparike

4 books2 followers
ಪತ್ರಕರ್ತ, ಲೇಖಕ, ಕಾದಂಬರಿಕಾರ ಸತೀಶ್ ಚಪ್ಪರಿಕೆ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆಯವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೋಟೆಲ್ ಉದ್ಯಮದಿಂದ ಬೆಂಗಳೂರಿಗೆ ಬಂದು ನೆಲಸಿದರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ‘ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್‌ಷಿಪ್’ ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸತೀಶ್ ಲಂಡನ್‌ನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೇವಲ ಬರವಣಿಗೆಯ ಶಕ್ತಿಯಿಂದಲೇ ‘ಪ್ರಜಾವಾಣಿ’ ದಿನಪತ್ರಿಕೆ ಸೇರಿ, ಅಲ್ಲಿ ಪತ್ರಕರ್ತ ಜೀವನ ಆರಂಭಿಸಿದ ಅವರು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ ನಂತರ ‘ಟಿವಿ9’, ‘ದಿ ಸಂಡೆ ಇಂಡಿಯನ್’ ನಿಯತಕಾಲಿಕದ ಸಹಾಯಕ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅದಾದ ಮೇಲೆ ಒಂದು ವರ್ಷ ‘ಸಿಂಬಯಾಸಿಸ್ ವಿಶ್ವವಿದ್ಯಾಲಯ’ದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ ಸತೀಶ್ ನಂತರ ‘ವಿಆರ್‌ಎಲ್ ಮೀಡಿಯಾ’ ಸಂಸ್ಥೆಯ ಪ್ರಧಾನ ಸಂಪಾದಕರಾಗಿಯೂ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ್ದರು. ಆ ನಂತರ ಪತ್ರಿಕಾ ವ್ಯವಸಾಯಕ್ಕೆ ವಿದಾಯ ಹೇಳಿ ಕಳೆದ ಆರು ವರ್ಷಗಳಿಂದ ಬೆಂಗಳೂರು ಮೂಲದ ಅಂತರ್ ರಾಷ್ಟ್ರೀಯ ಸಂಸ್ಥೆ ‘ಫರ್ಬೆಂಡನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್’ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ‘ಪ್ರಜಾವಾಣಿ’ ಮತ್ತು ‘ಹಫಿಂಗ್ಟನ್ ಪೋಸ್ಟ್’ (ಇಂಗ್ಲಿಷ್)ನಲ್ಲಿ ಹಲವು ಅಂಕಣಗಳನ್ನು ಬರೆದಿದ್ದಾರೆ.

ಮೂರು ದಶಕಗಳ ಹಿಂದೆ ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಗಳ ಮೂಲಕ ಕಥೆಗಾರರಾಗಿ ಗುರುತಿಸಿಕೊಂಡ ಸತೀಶ್ ಚಪ್ಪರಿಕೆ ಅವರ ‘ಮತ್ತೊಂದು ಮೌನಕಣಿವೆ’ (ಪರಿಸರ ಲೇಖನಗಳು), ‘ಹಸಿರು ಹಾದಿ’ (ಅ.ನ.ಯಲ್ಲಪ್ಪ ರೆಡ್ಡಿ ಆತ್ಮಕತೆ), ವಿಶ್ವಕಪ್ ಕ್ರಿಕೆಟ್ (ಕ್ರಿಕೆಟ್ ಕುರಿತಾದ ಕೃತಿ), ಬೇರು (ಕಥಾ ಸಂಕಲನ), ಥೇಮ್ಸ್ ತಟದ ತವಕ ತಲ್ಲಣ (ಪ್ರವಾಸ ಕಥನ), ದೇವಕಾರು (ಜನಪರ ಲೇಖನಗಳ ಸಂಗ್ರಹ), ಮುಸಾಫಿರ್ (ಅಂಕಣ ಬರಹಗಳ ಸಂಗ್ರಹ) ಮತ್ತು ‘ಕಾಂಜಿ ಭಾಯಿ ಎ ಬಯೋಗ್ರಫಿ’ (ಇಂಗ್ಲಿಷ್) ಕೃತಿಗಳು ಪ್ರಕಟವಾಗಿವೆ. ಈ ಪೈಕಿ ‘ಥೇಮ್ಸ್ ತಟದ ತವಕ ತಲ್ಲಣ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ಹದಿನೆಂಟು ವರ್ಷಗಳ ದೀರ್ಘ ಕಾಲದ ನಂತರ ಅವರ ಎರಡನೇ ಕಥಾ ಸಂಕಲನ ‘ವರ್ಜಿನ್ ಮೊಹಿತೊ’ 2020ರಲ್ಲಿ ಪ್ರಕಟಗೊಂಡಿದೆ. ಅವರ ಮೊದಲ ಕಾದಂಬರಿ ‘ಘಾಂದ್ರುಕ್’ 2023ರಲ್ಲಿ ಅಂಕಿತಾ ಪುಸ್ತಕದಿಂದ ಪ್ರಕಟಗೊಂಡಿರುತ್ತದೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (14%)
4 stars
5 (71%)
3 stars
1 (14%)
2 stars
0 (0%)
1 star
0 (0%)
Displaying 1 - 5 of 5 reviews
Profile Image for Prashanth Bhat.
2,173 reviews141 followers
October 16, 2023
ಇದೊಬ್ಬ ಸಿದ್ಧಾರ್ಥನ ಕಥೆ. ಸಿದ್ಧಾರ್ಥ ಬುದ್ಧ ಆದನೋ ಇಲ್ಲವೋ ಎಂಬುದು ನಿಮಗೆ ಬಿಟ್ಟ ವಿಷಯ. ಹೈಕಿಂಗ್ ಮಾಡುವವರಿಗೆ ಇದು ಕೈಪಿಡಿ. ಹಾಗೆಯೇ ಕಾರ್ಪೊರೇಟ್ ಚದುರಂಗದ ಆಟಗಳು ತನ್ನ ಹುಡುಕಾಟ ಇವೆಲ್ಲಾ ಸೇರಿದ ಕಥೆ.

ಓದಿಸಿಕೊಂಡು ಹೋಯಿತು.
Profile Image for Mallikarjuna M.
51 reviews14 followers
November 11, 2023
ಖುದ್ದು ಅಂಕಿತ ಪುಸ್ತಕದಲ್ಲಿ ಕಂಬತ್ತಳ್ಳಿ ದಂಪತಿಗಳ ಸಲಹೆಯಂತೆ ಕೊಂಡ ಈ ಪುಸ್ತಕ ರೋಚಕವಾಗಿ ಓದಿಸಿಕೊಂಡಿತು. 36ರ ಹರೆಯದ ಯಶಸ್ವಿ ನವೋದ್ಯಮಿ 'ಸಿದ್ಧಾರ್ಥ' ನವೋದ್ಯಮ(Startups)ದ ಕರಾಳ ಮುಖ, ಸಂಬಂಧಗಳ ಚಡಪಡಿಕೆಯಿಂದ ದೂರದ ನೇಪಾಳಕ್ಕೆ ಬಂದು ಅನ್ನಪೂರ್ಣ ಸರ್ಕೀಟ್ ಚಾರಣದಲ್ಲಿ ಕಳೆದು ಕಂಡುಕೊಳ್ಳುವ ಭರವಸೆಯಲ್ಲಿ ತನ್ನನ್ನೂ ಕಂಡುಕೊಂಡನೋ, ಮತ್ತೆ ಕಳೆದುಕೊಂಡನೋ ತಿಳಿಯಲು ಕಾದಂಬರಿ ಓದಬೇಕು.

ನವೋದ್ಯಮವನ್ನು ಸ್ನೇಹಿತರ ಕಣ್ಣಿನಿಂದ ನೋಡಿದ್ದ; ಚಾರಣದಲ್ಲಿನ ವೈಯುಕ್ತಿಕ ಆಸಕ್ತಿ ಮತ್ತು Philosophical touchನಿಂದಾಗಿ ಈ ಕಾದಂಬರಿ ನನಗೆ ಮತ್ತಷ್ಟೂ ಹಿಡಿಸಿತು.

P.S. ಕುಳಿತಲ್ಲೇ ಅನ್ನಪೂರ್ಣ ಸರ್ಕೀಟ್ ಟ್ರೆಕ್ ಮಾಡಿಸುವ ಲೇಖಕರಿಗೆ ಅನಂತ ಧನ್ಯವಾದಗಳು 🙏💛
Profile Image for Soumya.
221 reviews49 followers
May 19, 2024
ಚೆನ್ನಾಗಿದೆ.
ಸಿದ್ಧಾರ್ಥನ ಮೂಲಕ ಅನ್ನಪೂರ್ಣ circuit ನ trek ಮಾಡಿ ಬಂದ ಅನುಭವ ಆಯ್ತು.

ಒಬ್ಬ entrepreneur ಎಲ್ಲಾ ಬಿಟ್ಟು ತನ್ನನ್ನ ತಾನು ಹುಡ್ಕೋ ಪ್ರಯತ್ನವಾಗಿ ಅನ್ನಪೂರ್ಣ circuit trek ಹೋಗ್ತಾನೆ.
Trek ಮಧ್ಯೆ ಸಿಗೋ ಪಾತ್ರಗಳು, ಅವರು ಹೇಳೋ trek tips and ಅವುಗಳು ಹೇಗೆ ಜೀವನ ಪಾಠ ಕೂಡ ಆಗಬಹುದು ಎಲ್ಲವುದನ್ನು ಕಥೆಯಲ್ಲಿ ಚೆನ್ನಾಗಿ ಹೇಳಿದ್ದಾರೆ.
ಹಾಗೆ ಧರ್ಮ, ಯುದ್ಧ etc ಹೇಗೆ ರಾಜಕೀಯದ motive ಆಗಿದೆ and ಅದನ್ನ ತಡಿಯೋಕೆ ನಿಜ ಪ್ರಯತ್ನ ಆಗಲ್ಲ ಅನ್ನೋದನ್ನ ಕೂಡ ಸೂಚ್ಯವಾಗಿ ಹೇಳಿದ್ದಾರೆ.

ಎಲ್ಲೂ ಬೇಜಾರು ಬರಿಸದೆ, ಓದಿಸಿಕೊಂಡು ಹೋದ ಪುಸ್ತಕ.
This entire review has been hidden because of spoilers.
Profile Image for Ashwini.
35 reviews2 followers
September 24, 2023
ತುಂಬಾ ಸರಳವಾಗಿ ಓದಿಸಿಕೊಂಡು ಹೋಗುವಂತ ಪುಸ್ತಕ. ಒಂದು ಕಡೆ ನೇಪಾಳದ ಅನ್ನಪೂರ್ಣ ಸರ್ಕ್ಯೂಟ್ ಚಾರಣ ಮಾಡ್ತಾ. ಇನ್ನೊಂದು ಕಡೆ ಅಂಥರ್ಪ್ರಿನರ್ ಲೋಕದ ಕಹಿಸತ್ಯಗಳನ್ನು ಹೇಳತ ಕತೆ ಸಾಗುತ್ತದೆ. ನಾಯಕ ಸಿದ್ಧಾರ್ಥ್ ತನ್ನನ್ನು ತಾನು ಚರಣದಲ್ಲಿ ಕಳೆದು ಕೊಳ್ಳಬೇಕು ಅಂತ ಹೊರಟವ. ಚರಣದಲ್ಲಿ ಅವನ್ನು ಅವನು ಕಳೆದು ಕೊಂಡನೋ?ಕಂಡು ಕೊಂಡನೋ? ಮತ್ತೇನನ್ನೋ ಆಯ್ಕೆ ಮಾಡಿದನೋ ಅನ್ನೋದು ಕತೆ.
Profile Image for Srikanth.
238 reviews
July 28, 2025
ಕಥೆಯ ನಾಯಕ ಸಿದ್ಧಾರ್ಥ ಅನ್ನಪೂರ್ಣ ಸರ್ಕೀಟ್ ನಲ್ಲಿ ಚಾರಣ ಮಾಡುತ್ತಾ ತನ್ನ ಗತ ಜೀವನದ ಕ್ಷಣಗಳನ್ನು ಮೆಲುಕು ಹಾಕುತ್ತಾ ವರ್ತಮಾನದಲ್ಲಿ ಸೋಫಿಯಾ ಎನ್ನುವ ಯುವತಿಯನ್ನು ಭೇಟಿ ಮಾಡಿ ಅವಳೊಂದಿಗೆ ಸ್ವಲ್ಪ ದಿನಗಳು ಚಾರಣ ಮಾಡುತ್ತಾ ಕಳೆದು ಅವಳ ಗತ ಜೀವನದ ಬಗ್ಗೆ ಸಹ​ ತಿಳಿದುಕೊಳ್ಳುತ್ತಾನೆ. ಸಿದ್ಧಾರ್ಥನ ಹುಟ್ಟೂರಿನ ದೈವಾರಾಧನೆ ಮತ್ತು ಆತನ ಕಾರ್ಪೊರೇಟ್ ಜಗತ್ತಿನ ವಿವರಗಳು ಮತ್ತು ಸೋಫಿಯಾಳ ಯು.ಎನ್.ಎಚ್.ಆರ್.ಸಿ ಯಲ್ಲಿನ ಉದ್ಯೋಗದ ಪ್ರಯುಕ್ತ ಕಂಡಂತಹ ವಿವಿಧ ದೇಶಗಳ ಯುದ್ಧ-ಅಂತರ್ಯುದ್ಧಗಳ ವಿವರಗಳು ನಮ್ಮನ್ನು ನಾವೇ ಈ ಜೀವನದ ಉದ್ದೇಶ ಹಾಗು ಸಾರ್ಥಕಥೆಯ ಬಗ್ಗೆ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಒಟ್ಟಿನಲ್ಲಿ ತನ್ನನ್ನು ತಾನು ಹುಡುಕುತ್ತಾ ಹೋದ ಸಿದ್ಧಾರ್ಥ ಕೊನೆಗೆ ತನ್ನ ಪ್ರಯತ್ನದಲ್ಲಿ ಯಶಸ್ವಿಯಾದನೋ ಇಲ್ಲವೋ ಎನ್ನುವುದು ಪ್ರಶ್ನೆಯಾಗೇ ಉಳಿಯುತ್ತದೆ.
This entire review has been hidden because of spoilers.
Displaying 1 - 5 of 5 reviews

Can't find what you're looking for?

Get help and learn more about the design.