Jump to ratings and reviews
Rate this book

ಸ್ವೈಪ್ ರೈಟ್ | Swipe Right

Rate this book
ಕತೆಗಾರ್ತಿ ರಂಜನಿ ರಾಘವನ್ ಅವರ ಚೊಚ್ಚಲ ಕಾದಂಬರಿ ಸ್ವೈಪ್ ರೈಟ್. ನಿನ್ನ ಬೆರಳಂಚಲಿ ನಾನು ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಕೃತಿಯಲ್ಲಿ ಕತೆಗಾರ ವಸುಧೇಂದ್ರ ಅವರ ಮುನ್ನುಡಿಯ ಮಾತುಗಳಿವೆ. ಅವರು ಹೇಳುವಂತೆ, ಬೆಂಗಳೂರಿನ ಯುವಜನತೆ ತನ್ನದೇ ಆದ ವಿಭಿನ್ನ ಪರಿಸರವನ್ನು ಕಟ್ಟಿಕೊಂಡಿದೆ. ದೊಡ್ಡ ಕನಸುಗಳು, ವೈಯಕ್ತಿಕ ಸ್ಪೇಸ್, ಡಿಜಿಟಲ್ ಸುನಾಮಿ, ಸರಸ-ವಿರಸ, ಸ್ವೈಪ್ ರೈಟ್, ಸ್ವೈಪ್ ಲೆಫ್ಟ್, ತ್ವರಿತ ಫಲಿತಾಂಶ, ತುಸು ಆದರ್ಶ, ದೂರದ ಕಾಡಿನ ಪ್ರೀತಿ, ಪ್ರಾಣಿದಯೆ, ಓಪನ್ ರಿಲೇಶನ್‌ಶಿಪ್ - ಹೀಗೆ. ಇವೆಗಳೆಲ್ಲವೂ ಮಾಂತ್ರಿಕನೊಬ್ಬ ಗಾಳಿಯಲ್ಲಿ ಐದಾರು ಚೆಂಡುಗಳನ್ನು ಎಸೆದು ನೆಲಕ್ಕೆ ಬೀಳದಂತೆ ಸಮತೋಲನ ಕಾಯ್ದುಕೊಳ್ಳಬೇಕಾದ ಒತ್ತಡದಲ್ಲಿ ಸಾಗುತ್ತಿರುತ್ತವೆ. ಯಾವುದೋ ಗಳಿಗೆಯಲ್ಲಿ ಅನಿರೀಕ್ಷಿತವೊಂದು ಸಂಭವಿಸಿ ಚೆಂಡುಗಳು ನೆಲಕ್ಕೆ ಬಿದ್ದಾಗ, ಯುವಜಗತ್ತು ಕಂಗಾಲಾಗಿ ಅಧೀರನಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆ ಸ್ಥಿತಿಯನ್ನು ಎದುರಿಸುವ ಒತ್ತಡದಲ್ಲಿಯೇ ಹರೆಯದವನೊಬ್ಬ ಪ್ರಬುದ್ಧನಾಗುತ್ತಾನೆ. ಅಂತಹ ಜಗತ್ತೊಂದನ್ನು, ಅದರದೇ ಆದ ಭಾಷೆ-ಭಾವ-ಧ್ವನಿಗಳ ಲಯದೊಂದಿಗೆ ಈ ಕಾದಂಬರಿಯಲ್ಲಿ ಲೇಖಕಿ ರಂಜನಿ ರಾಘವನ್ ನಮಗೆ ಕಟ್ಟಿಕೊಟ್ಟಿದ್ದಾರೆ. ಲೇಖಕಿಯು ಅಂತಹ ಬದುಕಿನ ಭಾಗವೇ ಆಗಿರುವುದರಿಂದ, ಈ ಕಾದಂಬರಿಯ ಸಹಜತೆಯ ನಡೆಯಲ್ಲಿ ಒಂಚೂರೂ ಲಯ ತಪ್ಪುವುದಿಲ್ಲ. ಹಿರಿಯ ಕತೆಗಾರರಿಗೆ ಯಾವತ್ತೂ ಸವಾಲೆನ್ನಿಸುವ ಆಧುನಿಕ ಹುಡುಗರ ಕಥನ ಇಲ್ಲಿ ನೀರು ಹರಿದಷ್ಟು ಸರಾಗವಾಗಿ ಚಲಿಸಿದೆ. ಮುಗ್ಧತೆಯನ್ನು ಕಳೆದುಕೊಳ್ಳದೆ ಬದುಕನ್ನು ಕಾಣುವ ಲೇಖಕಿಯ ಸ್ವಭಾವ, ಇಲ್ಲಿ ಕತೆಗೆ ತನ್ನದೇ ಆದ ಕೋಮಲ ಬೆಳದಿಂಗಳನ್ನು ಲೇಪಿಸಿದೆ. ಜಗತ್ತಿನ ಕಠೋರ ಬಿಸಿಲಿನ ಅರಿವೂ ಲೇಖಕಿಗಿರುವುದರಿಂದ, ಸಂಬಂಧಗಳ ಕಗ್ಗಂಟೊಂದನ್ನು ಎದುರಿಸುವ ಸನ್ನಿವೇಶವೂ ಈ ಕೃತಿಯಲ್ಲಿ ಗಾಢವಾಗಿ ಮೂಡಿಬಂದಿದೆ ಎಂದಿದ್ದಾರೆ.

239 pages, Paperback

Published January 1, 2022

2 people are currently reading
7 people want to read

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
2 (18%)
4 stars
7 (63%)
3 stars
2 (18%)
2 stars
0 (0%)
1 star
0 (0%)
Displaying 1 - 4 of 4 reviews
Profile Image for Megzzz.
5 reviews3 followers
September 25, 2024
Very well written in the first attempt only by Ranjani. Along with her acting, i started liking her writing as well. The story makes you to be on your toe to know what happens next. The feelings have been expressed very well. Waiting for Swipe right part 2 😊
18 reviews
October 13, 2024
'ಸ್ವೈಪ್ ರೈಟ್' ಅಂದ್ರೆ ಜೀವನದ ಕೆಲವು ಮುಖ್ಯವಾದ ಸರಿಯಾದ ನಿರ್ಧಾರಗಳು ಅನ್ನೋ POV ಕಟ್ಟಿಕೊಟ್ಟಿರೋ ಒಂದು ಬ್ಯೂಟಿಫುಲ್ ಕಾದಂಬರಿ ಈ ಪುಸ್ತಕ. ಮಿಂಚು, ಅನೂಪ್, ಅರವಿಂದಾ, ಸುರೇಶ್ ಚಕ್ರವರ್ತಿ, ಮಹಾಲಸಾ ಆಯುರ್ವೇದ ಕ್ಲಿನಿಕ್, ಸಾಂದೀಪನಿ ವಿದ್ಯಾ ಸಂಸ್ಥೆ, ಚಿತ್ಕಳಾ, ಶೇಖರ್ , ರಾಧಮ್ಮಜ್ಜಿ , NCC, ಹೀಗೆ ಇವೆಲ್ಲ ಇರುವ ಒಂದು ಪುಟ್ಟ ಪ್ರಪಂಚದ ಪರಿಚಯ ಮಾಡಿಕೊಡುವಲ್ಲಿ ರಂಜನಿಯವರು ಯಶಸ್ವಿಯಾಗಿದ್ದಾರೆ. ‌ನಿಜವಾದ ಪ್ರೀತಿ ಎಲ್ಲರಿಗೂ ಸಿಗುವುದೇ? ಪ್ರೀತಿಸೋದಕ್ಕೆ ಏಜ್ ಲಿಮಿಟ್ ಇದ್ಯಾ? ಮನಸ್ಸಿಗೆ ಸರಿ ಅನ್ನಿಸೋ ಹಲವು ಸ್ವೈಪ್ ರೈಟ್ ಮೊಮೆಂಟ್ಸ್ ಸಮಸ್ಯೆ ತಂದೊಡ್ಡಬಹುದಾ? ಹೀಗೆ ಹಲವಾರು ತರ್ಕ ಪ್ರಶ್ನೆಗಳನ್ನೂ ಇದರಲ್ಲಿ ಅಡಗಿಸಿದ್ದಾರೆ ಲೇಖಕಿಯವರು. ಇಂಗ್ಲಿಷ್ ರೊಮ್ಯಾಂಟಿಕ್ ಪುಸ್ತಕಗಳನ್ನು ಓದಿದ್ದೇನೆ.. ಆದರೆ ಕನ್ನಡದಲ್ಲಿ ಅ ಜಾನರ್ನ ಮೊದಲ ಪುಸ್ತಕ ಇದು‌. ತುಂಬಾನೇ ಕ್ಯೂಟ್ ಹಾಗೂ ಅದ್ಭುತವಾಗಿ ಬರಿದಿದ್ದಾರೆ ನಮ್ಮ ರಂಜನಿ ಮೇಡಮ್. ಕಲಾವಿದರಾಗಿ ಈಗ ಸಾಹಿತಿಯಾಗಿ ಅವರ ಭಾಷೆ ಮೇಲಿನ ಹಿಡಿತ, ಪದಗಳ ಆಯ್ಕೆ, ಈಗಿನ ಕಾಲದ ಶೈಲಿಯ ಬರವಣಿಗೆ ನನಗೆ ಬಹಳ ಇಷ್ಟವಾಯಿತು.
ಓಹ್ ಇದರಲ್ಲಿ ಹ್ಯಾಪಿ ಎಂಡಿಂಗ್ ಇರಬಹುದು ಎಂದು ನಂಬಿದ್ದ 'ಹೋಪ್ಲೆಸ್ ರೊಮ್ಯಾಂಟಿಕ್ ' ಮನಕ್ಕೆ ಆಘಾತ ಕಾದಿತ್ತು. 'ಕ್ಲಿಫ್ ಹ್ಯಾಂಗರ್' ನಲ್ಲಿ ಓದುಗರನ್ನು ಬಿಟ್ಟುಬಿಟ್ಟರು ನಮ್ಮ ಲೇಖಕಿ 🥲

ಕತೆ ಡಬ್ಬಿ ಓದಿ ನಿಮ್ಮ ಬರವಣಿಗೆಯ ಅಭಿಮಾನಿಯಾದ ನನಗೆ ಈ ಪುಸ್ತಕ ಬಹಳ ಹಿಡಿಸಿತು @ranjani.raghavan ma'am ❤️
Can't wait to read your upcoming books✨

ಒಮ್ಮೆ ಓದಲೇಬೇಕಾಗಿರೋ ಬ್ಯೂಟಿಫುಲ್ ಕಾದಂಬರಿ ಇದು! Do give it a read😁

'Swipe Right' to see more pictures of the book🌝

@aloka.lekhyam Thank you for the beautiful customised bookmark 🥹 I love it to the core💫

ಧನ್ಯವಾದಗಳು 🙏🏻✨

Do like and share this post with your reader friends and comment if you are going to read this book!

P.S. Though I had all my assignments and seminars due date coming up, I could not keep this book down.I am ready to embrace sleepless nights completing it, as reading this took priority😆😂😁
It was an automatic page turner and my entertainer in the long journey of Mumbai that I went to 2 days back.
Profile Image for Sharath H S.
1 review
February 24, 2024
Nice narration of 2 stories, one with the busy & IT life of Bangalore and Peace & Simple life in Udupi.
This entire review has been hidden because of spoilers.
Displaying 1 - 4 of 4 reviews

Can't find what you're looking for?

Get help and learn more about the design.