What do you think?

ಕನಸೇ ಕಾಡುಮಲ್ಲಿಗೆ
260 pages, Paperback
Published January 1, 2023
About the author
Madhu Y.N.
7 books8 followersಮಧು ವೈ ಎನ್ ತುಮಕೂರು ಜಿಲ್ಲೆಯವರು. ತುಮಕೂರಿನ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ. ಬಿಟ್ಸ್ ಪಿಲಾನಿಯಿಂದ ಸಾಫ್ಟವೇರ್ ಸಿಸ್ಟಮ್ಸ್‌ನಲ್ಲಿ ಮಾಸ್ಟರ್ಸ್ ಡಿಗ್ರಿ. ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗ ಆರಂಭ. ಸದ್ಯಕ್ಕೆ ಐಬಿಎಮ್ ಉದ್ಯೋಗಿ. ಬೆಂಗಳೂರಿನಲ್ಲಿ ವಾಸ.
ಇವರ ಹಲವಾರು ಕತೆಗಳು ಕನ್ನಡದ ಪ್ರಮುಖ ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ. ಚೊಚ್ಚಲ ಕೃತಿ ‘ಕಾರೇಹಣ್ಣು’ 2019ರ ‘ಈ ಹೊತ್ತಿಗೆ ಕಥಾ ಸಂಕಲನ ಪ್ರಶಸ್ತಿ’ ಪಡೆದಿದೆ. ಎರಡನೆಯ ಕಥಾ ಸಂಕಲನ ‘ಫೀಫೋ’ ಹೊಸ ಮಾದರಿಯ ಕತೆಗಳ ಗುಚ್ಛವೆಂದು ಗುರುತಿಸಿಕೊಂಡಿದೆ. ಇವರ ‘ಕನಸೇ ಕಾಡುಮಲ್ಲಿಗೆ’ ಕನ್ನಡದಲ್ಲಿ ವಿರಳಾತಿವಿರಳವಾಗಿರುವ ಯಂಗ್ ಅಡಲ್ಟ್ ಮಾದರಿಯ, ಹಾಸ್ಯ-ಪ್ರಣಯ ಮಿಶ್ರಿತ ಲವಲವಿಕೆಯ ಕಾದಂಬರಿಯೆಂದು ಓದುಗರ ಪ್ರೀತಿಗೆ ಪಾತ್ರವಾಗಿದೆ. ‘ಡಾರ್ಕ್‌ವೆಬ್’ ಕೃತಿ ತಂತ್ರಜ್ಞಾನದ ಸಂಗತಿಗಳನ್ನು ಕಥಾ ಮಾದರಿಯಲ್ಲಿ ಪ್ರಸ್ತುತಪಡಿಸಿರುವ ಕನ್ನಡದ ಮೊದಲ ತಂತ್ರಜ್ಞಾನ ಪುಸ್ತಕವೆಂದು ಮೆಚ್ಚುಗೆ ಪಡೆದಿದೆ. ಅದೇ ಮಾದರಿಯ ಹೊಸ ಪುಸ್ತಕ ‘ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಸರಳಗನ್ನಡದಲ್ಲಿ’ ಕನ್ನಡದಲ್ಲಿ ಎಐ ಬಗ್ಗೆ ಮೂಡಿ ಬಂದಿರುವ ಪ್ರಥಮ ಕೃತಿಯಾಗಿ ಗಮನ ಸೆಳೆದಿದೆ.
ಇವರು ಸದ್ಯಕ್ಕೆ ವಿಜಯಕರ್ನಾಟಕ ಪತ್ರಿಕೆಗೆ ‘ಟೆಕ್‌ಪೋಸ್ಟ್’ ಎಂಬ ಅಂಕಣದಲ್ಲಿ ಎರಡು ವಾರಕ್ಕೊಮ್ಮೆ ವಿಜ್ಞಾನ ತಂತ್ರಜ್ಞಾನ ಕುರಿತಾಗಿ ಲೇಖನಗಳನ್ನು ಬರೆಯುತ್ತಿರುವರು.

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 16 of 16 reviews
November 30, 2023
ಅದೇನಾಯ್ತಂದ್ರೆ,
ಮಧುಸೂದನ್ ಅವ್ರ ಈ ಮೊದಲಿನ ಮೂರು ಪುಸ್ತಕಗಳೂ ನನ್ಹತ್ರ ಇದ್ರೂ ಯಾವ ಪುಸ್ತಕಾನೂ ಇದುವರೆಗೂ ನಾ ಓದಿರ್ಲಿಲ್ಲ. ಓದ್ಬಾರ್ದು ಅಂತೇನಿಲ್ಲ, ನಮ್ನಮ್ ತಲೆಲಿ ನಾವು ಚಿರಂಜೀವಿಗಳಲ್ವಾ... ನಿಧಾನಕ್ ಓದಿದ್ರಾಯ್ತು ಅಂತಂದ್ಕೊಂಡಿದ್ದೆ.
ಹೊಸ ಪುಸ್ತಕ ಭಾಳ ಅದೃಷ್ಟ ಮಾಡಿತ್ತು ಅನ್ಸತ್ತೆ, ಅಚಾನಕ್ಕಾಗಿ ಅಚ್ಚಿಗೂ ಮೊದಲು ಅದನ್ನ ಓದೋ ಭಯಂಕರ ಚಾನ್ಸ್ ನಂಗ್ ಸಿಕ್ಬಿಡ್ತು. ಓದ್ತಾ ಓದ್ತಾ ಅದೆಷ್ಟ್ ಇನ್ವಾಲ್ವಾಗಿದ್ದೆ ಅಂದ್ರೇ ಅವೆಲ್ಲ ಲೇಖಕ ಸೃಷ್ಟಿಸಿರೋ ಪಾತ್ರಗಳು, ಫುಲ್ಲು ಫಿಕ್ಷನಲ್ಲು ಅನ್ನೋದೆಲ್ಲ ಮರ್ತೋಗಿ ದೇವ್ರೆ ಇಷ್ಟ್ ಮುದ್ದಾದ ಜೋಡಿ ಸದಾ ಚನಾಗಿರ್ಲಪ್ಪಾ ಅಂದ್ಕೊಳ್ತಿದ್ದೆ- ಅವರೇನೋ ನಮ್ಮ ನೆಂಟರ ಮನೆ ಮಕ್ಕಳೇನೋ ಅನ್ನೋ ಅಕ್ಕರೆಯಲ್ಲಿ. ಪುಸ್ತಕ ಓದ್ತಾ ಓದ್ತಾ ನಾನು ಹೊರಳಾಡ್ಕೊಂಡ್ ನಗೋದು ನೋಡಿ ನಮ್ಮಮ್ಮ 'ನಂಗೂ ಕೊಡೇ, ಅದೇನ್ ಅಷ್ಟ್ ನಗೊಂತದಿದೆ ನೋಡಣ' ಅಂದಿದ್ಲು, ನಾನವಾಗ 'ಇರಮ್ಮ, ಬುಕ್ ಪಬ್ಲಿಷ್ಷಾದ್ಮೇಲ್ ತಂದ್ಕೊಡ್ತಿನಿ, ಆವಾಗ್ ಓದು' ಅಂದಿದ್ದೆ.
ಇಗೋ ಈಗ ಪಬ್ಲಿಷ್ಷಾಗಿದೆ.. ಚಂದದ ರಕ್ಷಾಪುಟ ಹೊದ್ಕೊಂಡು ಕೂತಿರೋ ಒಂದು ಮುಗ್ಧ ಪ್ರೇಮ ಕಥೆ - ಕನಸೇ ಕಾಡುಮಲ್ಲಿಗೆ.
ಹಾಗ್ ನೋಡಕ್ಹೋದ್ರೆ ಇದೇನಂತಾ ರಾಕೆಟ್ ಸೈನ್ಸ್ ಲೆವೆಲ್ ಕಥೆ ಏನಲ್ಲ. ಪ್ರೇಮಕಥೆಗಳಂದ್ರೇ ದೂರ ಓಡೋ ನನ್ನಂಥೋಳಿಗೂ ಇದು ಯಾಕ್ ಇಷ್ಟ ಆಯ್ತಂದ್ರೆ, ಕಥೆ ನಡೆಯೋ ಕಾಲಘಟ್ಟ, ಆ ಕಾಲದಲ್ಲಿ (ಅಂದ್ರೇ ಡೈನೋಸಾರ್ ಯುಗ ಏನಲ್ಲ.. ಈಗ್ಗೆ ಒಂದ್ ಹತ್ತೋ ಹದ್ನೈದೋ ವರ್ಷ ಹಿಂದೆ ಅಂದ್ಕೊಳಣ) ... ಆ ಕಾಲದಲ್ಲಿ , ರೆಸಿಡೆನ್ಶಿಯಲ್ ಸ್ಕೂಲಿನ ಬಿಗಿ ವಾತಾವರಣದಲ್ಲಿ ಅರಳೋ ಆ ಮುದ್ದಾದ ಪ್ರೇಮ ಕತೆ, ಅದನ್ನ ಹೇಳೋಕೆ ಲೇಖಕ ಆಯ್ಕೆ ಮಾಡ್ಕೊಂಡ ತೆಳು ಹಾಸ್ಯಮಯ ಧಾಟಿ, ಬಳಸಿರೋ ತುಮಕೂರು- ಸಿರಾದ ಪಕ್ಕಾss ಲೋಕಲ್ ಭಾಷೆ .... ಆಹ್! Beauty ... ಅಲ್ದೇ ಸ್ಮಾರ್ಟ್ ಫೋನು, ಸ್ಮಾರ್ಟ್ ವಾಚು, ಐ ಪಾಡ್ ಅಂತ ಗ್ಯಾಜೆಟ್ಸಲ್ಲೇ ಮುಳುಗಿರೋ ಈಗಿನ ಪ್ರೇಮಿಗಳಿಗೆ ಯಾವತ್ತೂ ಸಿಗದ ಲವ್ ಲೆಟರ್ ಕಾಲದ ಪ್ರೇಮ ಕಥೆ ಇದು. ಸಿರಾ- ತುಮಕೂರು ಭಾಗದ ರೈತಾಪಿ ಜನಜೀವನ, ಭಾಷೆ, ಸಂಸ್ಕೃತಿಗಳ ಒಂಥರಾ ಅನ್ನಫಿಷಿಯಲ್ ದಾಖಲಾತಿ ಅಂತನೂ ಅಂದ್ಕೊಬಹುದು. ಪ್ರೇಮ ಕಥೆ ಅಂದ್ರೆ ಕಥೆ ಮತ್ತದರ ಅಂತ್ಯ ಹೀಗ್ಹೀಗ್ ಆಗ್ಬಹುದು ಅನ್ನೋ ಪ್ರಾಬಬಲಿಟಿ ಗೆಸ್ ಮಾಡಬಹುದಾದ್ರೂ ಓದ್ತಾ 'ಏ ಹಿಂಗಾಯ್ತಲ ಏನಿದು' ಅನಿಸುವಂತೆ ಅಚ್ಚರಿಯ ಕೋಷೆಂಟ್ ಉಳಿಸ್ಕೊಳೋದ್ರಲ್ಲಿ ಲೇಖಕ ಗೆದ್ದಿದಾರೆ. ಒಟ್ಟಾರೆ ಇದೊಂದು ತುಂಬ ಮಜವಾಗಿ ನಗ್ತಾ ನಗ್ತಾ ಓದಬಹುದಾದ ಕ್ಯೂಟ್ ಕ್ಯೂಟ್ ಲವ್ ಸ್ಟೋರಿ.
ಸಾಕ್ಬಿಡಿ.. ಜಾಸ್ತಿ ಹೇಳಿದ್ರೆ ಸ್ಪಾಯ್ಲರ್ಸ್ ಆಗ್ಬಿಡತ್ತೆ, ಇಲ್ಲಿಗ್ ನಿಲ್ಸಣ. ಅಷ್ಟುಕ್ಕೂ ಇಷ್ಟುದ್ದ ಬರ್ದು ನಾನೇನ್ ಹೇಳೋಕ್ ಬಂದೆ ಅಂದ್ರೇss,
ಕಾದಂಬರಿ ನನಗಿಷ್ಟ ಆಯ್ತು. ಸಿಕ್ಕಾಪಟೆ ಇಷ್ಟ ಆಯ್ತು 😀
PS; ಅಕ್ಷರ ದೋಷಗಳು, ವಾಕ್ಯ ಅಲೈನ್ಮೆಂಟ್ ಇತ್ಯಾದಿ ವಿಚಾರದಲ್ಲಿ ಇನ್ನಷ್ಟು ಗಮನ ಅಗತ್ಯ, ಮುಂದಿನ ಎಡಿಷನ್ನಲ್ಲಿ ಲೇಖಕ-ಪ್ರಕಾಶಕ ಆ ಬಗ್ಗೆ ಗಮನಹರಿಸಲಿ.

January 6, 2024
ಕನ್ನಡದಲ್ಲಿ ಯಂಗ್ ಅಡಲ್ಟ್ ಕಾದಂಬರಿಗಳು ಕಡಿಮೆ. ಆ ದಿಸೆಯಲ್ಲಿ ಒಳ್ಳೆಯ ಪ್ರಯತ್ನ.
ಕಾದಂಬರಿ ಒಂದು ಹಂತದವರೆಗೆ ಮಜವಾಗಿ ಓದಿಸಿಕೊಂಡು ಹೋಯ್ತು. ಆದರೆ ಆ ಥಿಯೇಟರ್ ಪ್ರಸಂಗದ ನಂತರ ಇಡೀ ಕಾದಂಬರಿ ಸ್ಟೀಮ್ ಕಳಕೊಳ್ಳುತ್ತಾ ಸಾಗಿತು. ಕೊನೆಯಂತೂ ತುಂಬಾ ಗೊಂದಲ ಮೂಡಿಸಿತು.
ಲೇಖಕರು ತಮ್ಮ ಭಾಷಾ ಪ್ರಯೋಗ ಮತ್ತು ನಿರೂಪಣೆಯಲ್ಲಿ ತಾವೇ ಕಳೆದುಹೋದ ಹಾಗೆ ಕಂಡಿತು.
ಒಮ್ಮೆ ಓದಬಹುದು.

December 2, 2023
ಇದು residential ಶಾಲೆಯಲ್ಲಿ ಓದುತ್ತಿರುವ ಟೀನೇಜ್ ಕಥಾನಾಯಕನ coming of age story. ಕಥೆಯ ಕೇಂದ್ರ ಟೀನೇಜ್ infatuation, ಆದರೆ ಕಥೆ ಅದಕ್ಕೆ ಸೀಮಿತ ಆಗದೆ ಹಳ್ಳಿಯ/ಕೃಷಿಕರ ಜೀವನ, growing pains, family dynamics, school day misadventures ಇವೆಲ್ಲ ಸೇರಿ ಒಂದು entertaining ಓದಿನ ಅನುಭವ ಕೊಡತ್ತೆ.
ನಿರೂಪಣೆಯಲ್ಲಿ ಬಳಸಿರುವ ಸಹಜ ಆಡು ಭಾಷೆ ಮತ್ತು ಹಾಸ್ಯದ ಶೈಲಿ ಕಾದಂಬರಿಯ ವಿಶೇಷತೆ. ಕಥೆಯ ಹಿನ್ನೆಲೆಯಲ್ಲಿ ಬರುವ ವಿವರಗಳಲ್ಲಿ ಬಳಸಿರುವ ರೆಫರೆನ್ಸ್ ಗಳು ಕಥೆ ನಡೆಯುವ ಕಾಲಘಟ್ಟವನ್ನು reinforce ಮಾಡಲು ಚೆನ್ನಾಗಿ ಬಳಕೆ ಆಗಿವೆ - nostalgic ಓದುಗರಿಗೆ ಕಥೆಯನ್ನು ಇನ್ನಷ್ಟು ಆಪ್ತವಾಗಿ ಮಾಡತ್ತೆ.
Overall ಕಾದಂಬರಿಯ ಬಂಧ ಇನ್ನಷ್ಟು ಬಿಗಿಯಾಗಿ ಮಾಡಬಹುದಿತ್ತು ಅಂತ ಅನಿಸಿತು - still ಕನ್ನಡದಲ್ಲಿ ವಿಭಿನ್ನ ಪ್ರಯತ್ನ, ಭಾಷೆ ಮತ್ತು ಥೀಮ್ ದೃಷ್ಟಿಯಿಂದ. ಮುಂದಿನ ದಿನಗಳಲ್ಲಿ ಹೊಸ ಓದುಗರನ್ನು ಸೆಳೆಯುವ ಇಂತಹ ಪುಸ್ತಕಗಳು ಹೆಚ್ಚಾಗಿ ಬರಲು ಕನಸೇ ಕಾಡುಮಲ್ಲಿಗೆ ಕಾದಂಬರಿ ಸ್ಪೂರ್ತಿ ಆಗಬಹುದು.
(ಇದೇ ಲೇಖಕರ ಫೀಫೋ ಕಥಾ ಸಂಕಲನದ ಕೊನೆಯಲ್ಲಿ ಈ ಥೀಮ್ ನ ಎರಡು ಕಥೆಗಳಿವೆ. ಈ ಕಾದಂಬರಿ ಇಷ್ಟ ಆದವರು ತಪ್ಪದೆ ಓದಿ.)

December 2, 2024
ಕನಸೇ ಕಾಡುಮಲ್ಲಿಗೆ ಒಂದು Young Adult Fiction ಪುಸ್ತಕ. ಕನ್ನಡದಲ್ಲಿ ಇಂಥ ಪ್ರಯತ್ನಗಳು ತುಂಬಾ ಕಮ್ಮಿ. ಈಗಿನ ಪೀಳಿಗೆಯ ಯುವ ಜನರಿಗೆ ಮಿಸ್ಟ್ರಿ ಥ್ರಿಲರ್ ಬಿಟ್ಟು ಬೇರೆ ಜಾನರ್ ಓದಿಸಿ ಕನ್ನಡ ಪುಸ್ತಕ ಓದೋ ಹಂಬಲ ಸೃಷ್ಟಿಸೋದಾದರೆ ಈ ಪುಸ್ತಕ ಕಣ್ಮುಚ್ಚಿ ಸಜೆಸ್ಟ್ ಮಾಡಬೋದು.
ಕತೆ ಶುರುವಿನಿಂದ ಹಿಡಿದು ಕೊನೆತನಕ ಹ್ಯುಮರ್ ಇದ್ದೇ ಇದೆ. ಶುರುವಲ್ಲಿ ಭಾಷೆಯ ಪ್ರಯೋಗ, ಆಂಗ್ಲ ಪದಗಳು ಹಾಗೂ ಉದ್ಭವಿಸೋ ಸನ್ನಿವೇಶಗಳು ನಗು ಬರಿಸೋ ಕಾರಣವಾದರೆ ಕೊನೆಯ ತನಕ ಇರೋ ಭಾಷಾ ಪ್ರಯೋಗ ಅಲ್ಲಲ್ಲಿ ಒಂದು ಸ್ಮೈಲ್ಗೆ ಕಾರಣ. ಕೆಲವೊಂದು ಚಾಪ್ಟರ್ಗಳು ಮತ್ತೆ ಮತ್ತೆ ಓದಿ ಯೋಚ್ನೆ ಮಾಡಿ ಮಾಡಿ ಹೊಟ್ಟೆ ತುಂಬಾ ನಕ್ಕಿದ್ದೂ ಉಂಟು. ಲೈಬ್ರರಿಲಿ ಆಚೆ ಈಚೆ ಓದೋರ್ ಇರುವಾಗ ನಗು ಕಂಟ್ರೋಲ್ ಮಾಡಿ ಓದ್ಲಿಕ್ಕೂ ಕಷ್ಟ ಪಟ್ಟಿದಿನಿ. ನನ್ನ ಹೈಸ್ಕೂಲ್ ದಿನಗಳಿಗೆ ಕನೆಕ್ಟ್ ಕೂಡ ಆಯ್ತು.
ಗ್ರಾಮ್ಯ ಭಾಷೆ ತುಂಬಾ ಚೆನ್ನ. ಕೆಲವೊಂದು ಶಬ್ದಗಳು ಓದ್ಲಿಕ್ಕೆ ಕಷ್ಟ ಪಟ್ಟೆ, ಕೆಲವೊಂದು ಅರ್ಥ ಆಗಿಲ್ಲ, ಕೆಲವೊಂದು ಅರ್ಥ ಆಗೋಕೆ ಟೈಮ್ ಹಿಡಿತು. ಆದರೂ ಭಾಷೆಯ ಮೇಲೆ ಪ್ರೀತಿ ಅಪಾರ, ಹಾಗಾಗಿ ಕಷ್ಟವಾದರೂ ಇಷ್ಟಪಟ್ಟು ಓದಿದೆನೆ.
ಕಾದಂಬರಿಯು ಕೊನೆಗೆ ಯಾವ ಟ್ರ್ಯಾಕ್ ಹಿಡಿತು ಅನ್ನೋದು ಗೊತ್ತಾಗಿಲ್ಲ, ಸ್ವಲ್ಪ ಕನ್ಫ್ಯೂಸ್ ಆಯ್ತು. ನನ್ಗನ್ಸುತ್ತೆ ಲೇಖಕರು ಕೆಲವೊಂದು ನೈಜ ಘಟನೆಗಳನ್ನ ತೋರಿಸಲೇಬೇಕು ಅನ್ನೋ ಕಾರಣ, ಅದೇ ಡೈರೆಕ್ಷನ್ನಲ್ಲಿ ಕತೆ ಬರಿತಾ ಬರಿತಾ ಓದುಗರ ಕಣ್ಣು ತಪ್ಪೋ ಹಾದಿ ಹಿಡಿದರು ಅನ್ಸ್ತು. ಕಾದಂಬರಿಯ ಜಾನರ್ಗೆ ನೀಡಬೇಕಾದಂತಹ ಕೊನೆ ಸಿಗಲಿಲ್ಲ ಅನ್ನೋದು ನನ್ನ ಭಾವನೆ.
ಕೊನೆಯದಾಗಿ ಹೇಳುವುದಾದರೆ, ಇದೊಂದು ಅತ್ಯುನ್ನತ ಪ್ರಯತ್ನ, ಇಂತಹ ಪುಸ್ತಕಗಳನ್ನು ಪ್ರೋತ್ಸಾಹಿಸಿ, ಈ ಜಾನರ್ ಇನ್ನು ಎಕ್ಸ್ ಫ್ಲೋರ್ ಆಗ್ಬೇಕು, ಕತೆಗಳು ಬರ್ಬೇಕು. ಮುಂದೆ ಕನ್ನಡ ಪುಸ್ತಕಗಳಿಗೆ ಒಳ್ಳೆ ರೀಚ್ ಸಿಗ್ಬೇಕಾದ್ರೆ ಇಂಥ Youth Fiction ಕಾದಂಬರಿಗಳು ಬರ್ತಾ ಇರ್ಬೇಕು.
ರೇಟಿಂಗ್ - ⭐⭐⭐⭐

December 10, 2025
Residential school hostel ಅಲ್ಲಿ ನಡೆಯುವ love story. ಎಲ್ಲೋ ಒಂದು ಕಡೆ school days ಗೆ ಕರ್ಕೊಂಡ್ ಹೋಗಿ ಬಂತು ಈ ಬುಕ್.
Starting ಅಲ್ಲಿ ಓದೋಕೆ ಸ್ವಲ್ಪ ಕಷ್ಟ ಆಯಿತು due to tumkur kannada. ಆಮೇಲೆ ಓದ್ತಾ ಓದ್ತಾ, adjust ಆಯಿತು.
last chapter ಓದುವಾಗ ಏನಪ್ಪ ಹಿಂಗೆ ಆಗ್ತಿದೆ ಇವರ love story ಅನ್ನಿಸ್ತು.. ಆಮೇಲೆ ending ಬೇರೆ ನೆ ಇತ್ತು.
ಚೆನ್ನಾಗಿದೆ.

February 4, 2025
ಮುಖಪುಟ ನೋಡಿದರೆ ಸಾಕು ಪಟ್ ಅಂತ ಊಹಿಸಬಹುದು ಇದೊಂದು ಸ್ಕೂಲ್ ಲವ್ ಸ್ಟೋರಿಯೆಂದು. ಹೌದು ಬಾಲ್ಯದಿನಗಳ ಕೆಲವು ಕ್ಷಣಗಳನ್ನು ನೆನಪಿಸಿದಂತಹ ಪುಸ್ತಕ. ಶಾಲಾದಿನಗಳಲ್ಲಿ ನಿಮಗೊಂದು ಲವ್ ಸ್ಟೋರಿ ಇದ್ದಿದ್ರೆ ಮತ್ತೆ ಫ್ಲ್ಯಾಶ್‌ಬ್ಯಾಕಿಗೆ ಹೋಗುವಿರಿ. ಇಲ್ಲದವರಿಗೆ ಛೇ ನನಗೊಂದು ಇರಬೇಕಿತ್ತು ಅಂದುಕೊಳ್ಳುವಿರಿ. ಲವ್ ಸ್ಟೋರಿ ಹೊರತು ಪಡಿಸಿ ಇನ್ನೂ ಬೇಕಾದಷ್ಟು ಇವೆ ಈ ಪುಸ್ತಕದಲ್ಲಿ. ಬಾಲ್ಯದ ಗೆಳೆಯರು, ಮಾಷ್ಟ್ರು - ಟೀಚರುಗಳು, ನಾವು ಮಾಡಿದ ಚೇಷ್ಟೆಗಳು, ರಜೆ ದಿವಸಗಳು ಒಂದ್ಸಲ ಮತ್ತೆ ಮರುಕಳಿಸಿದವು..
ತುಮಕೂರಿನ ಗ್ರಾಮ್ಯ ಭಾಷೆ ಇಲ್ಲಿ ಹೇರಳವಾಗಿದೆ. ನನಗೆ ಇಷ್ಟವಾಯಿತು, ಹಾಗೆ ಓದಲು ಸ್ವಲ್ಪ ಕಷ್ಟವಾಯಿತು. ಇನ್ನೂ ಸ್ವಲ್ಪ ಎಮೋಷನ್ಸ್ ಇದ್ದಿದ್ರೆ ಚೆನ್ನಾಗಿರ್ತಿತ್ತೇನೊ. ಮತ್ತೆಲ್ಲವು ಚೆನ್ನಾಗಿತ್ತು.
ಕನಸೇ ಕಾಡುಮಲ್ಲಿಗೆ
🖊ಮಧು ವೈ. ಎನ್.

June 13, 2024
ಈ ಪುಸ್ತಕದ ಪ್ರತಿ ಪುಟ ಓದಿ ಮುಗಿಸಿದಾಗ ಬೇಸರವಾಗುತ್ತಿತ್ತು... ಎಲ್ಲಿ ಪುಸ್ತಕ ಬೇಗ ಮುಗಿದುಹೋಗುತ್ತೋ ಎಂಬ ಭಯದಿಂದ... ಅಷ್ಟು ಚೆನ್ನಾಗಿದೆ... ಪ್ರತಿ ಪುಟಾನೂ ನಗಿಸಲೇಬೇಕೆಂಬ ಪಣ ತೊಟ್ಟಂತೆ ಲೇಖಕರು ಬರೆದಿದ್ದಾರೆ... ನಮ್ಮೆಲ್ಲರ ಬಾಲ್ಯವನ್ನು ಕಣ್ಣೆದುರಿಗೆ ತಂದು ಇಟ್ಟಂತೆ ಅನಿಸುತ್ತದೆ...
April 5, 2024
ಸಾಮಾಜಿಕ ಮಾಧ್ಯಮದಲ್ಲಿ ಸತತವಾಗಿ ಗುರುತಿಸಿಕೊಂಡ ಈ ಕಾದಂಬರಿ Young Adult ಮಾದರಿಯ ಕೃತಿಯೆನ್ನಬಹುದು. ಬಾಲ್ಯದ ಮತ್ತು ಪ್ರೌಢ ಶಿಕ್ಷಣ ಸಮಯದ ವಯೋ ಸಹಜ ಚಟುವಟಿಕೆಗಳನ್ನು ಲೇಖಕರು ಬಹಳ ಮಜವಾಗಿ ಹಾಸ್ಯಮಯದೊಂದಿಗೆ ಗ್ರಾಮ್ಯ ಕನ್ನಡಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಸಾವರಿಸಿಕೊಂಡು ಕಚಗುಳಿ ನೀಡುತ್ತಾ ಹೋಗುವ ಕಾದಂಬರಿ ಕಡೆ ಭಾಗದಲ್ಲಿ ದುರಂತಮಯವಾಗಿ ಕೊನೆಯಾಗುವುದು ಸ್ವಲ್ಪ ಬೇಸರವಾಯಿತು :(
Read
December 15, 2023ಈ ಕಾದಂಬರಿ ನಮ್ಮನ್ನು ಸ್ಕೂಲ್ ಗೆ ಒಂದ್ virtual Tour ಕರ್ಕೊಂಡು ಹೋಗಿ ಬಂದ್ಬಿಡುತ್ತೆ....
ಒಂದೊಂದು ಪುಟ ಓದಿದಾಗಲು ಅಲ್ಲಿನ ಚಿತ್ರಣ ಕಣ್ಮುಂದೆ ಬಂದಂತಾಗುತ್ತದೆ, ಮತ್ತೇ ನಾವೇ ಪಾತ್ರದರಿ ಅನ್ನೋ ಅಷ್ಟು ಹತ್ತಿರವಾಗುತ್ತೆ, ಬಹುಷಃ ಅದು ಭಾಷೆ ಶೈಲಿ ಇಂದ ಇರಬಾಹುದೇನೋ! ಮಧು Y N ಒಂದು ಒಳ್ಳೆಯ ಪ್ರಯತ್ನ ಮಾಡಿದ್ದೀರಿ... ನಿಮ್ಮ ಬರವಣಿಗೆ ಹೇಗೆ ಎಲ್ಲರ ಮೆಚ್ಚುಗೆ ಗೆ ಪಾತ್ರವಾಗಲಿ...

January 3, 2024
Awesome book, amazing narration, call him kannada Chetan Bhagat for his narration , I loved reading it through out.. ಇವರ ಎಲ್ಲಾ ಪುಸ್ತಕಗಳಲ್ಲಿ ಇದು ನನ್ನ personal favourite ಆಯ್ತು ಇವಾಗ.. ಎಲ್ಲಾ ಪ್ರಸಂಗಗಳನ್ನು ಕಣ್ ಮುಂದೆ ಮೂಡೊ ಹಾಗೆ ವಣ್ರಿಸಿದ್ದಾರೆ... ಎಲ್ಲಾ ಕನ್ನಡ ಪುಸ್ತಕ ಪ್ರೇಮಿಗಳು ಓದಿ, ನಿಜ್ ನಿಜ್ವಾಗಲು ಇಷ್ಟ ಆಗುತ್ತೆ 😊
January 9, 2026
ಒಂದೊಳ್ಳೆ Young Adult ಪುಸ್ತಕ. ಬರವಣಿಗೆ ತುಂಬಾ ಚೆನ್ನಾಗಿದೆ. ರೆಸಿಡೆನ್ಸಿಯಲ್ ಶಾಲೇ ಬಗ್ಗೆ ಕೇಳಿದೀನಿ. ಪರೀಕ್ಷೆ ಬರೆದು ಸೇರಿಕೊಂಡಿರೋರನ್ನ ನೋಡಿದೀನಿ. ಯಾರೂ ಅವರ ಅನುಭವಗಳನ್ನ, ನೆನಪುಗಳನ್ನ, ಇಷ್ಟು ಸ್ವಾರಸ್ಯಕರವಾಗಿ ಹೇಳಿರಲಿಲ್ಲ. ಇಂಗಿಂಗೆಂಗೆಲ್ಲಾ ಆಗಬಹುದಲ್ವಾ ಅನ್ನೋ ಕಲ್ಪನೆ ಕೂಡ ಇರ್ಲಿಲ್ಲ. ಅಲ್ಲಿದ್ದು ಆ ಅನುಭವಗಳನ್ನು ಅನುಭವಿಸಿ ಬರಬೇಕು ಅಷ್ಟೇ. ಅಲ್ಲಿದ್ದು ಅನುಭವಿಸೋಕೆ ಆಗದೇ ಇರೋರಿಗೆ ಈ ಓದು. ಒಂದೊಳ್ಳೆ ಗ್ರಾಮ್ಯ ಭಾಷೆ. ಇದನ್ನೇನಾದರೂ ಗದ್ಯ ರೂಪದ ಸರಳ ಕನ್ನಡದಲ್ಲಿ ಬರೆದಿದ್ರೆ, ಇದು ಒಂದು ಸಾಮಾನ್ಯ ಓದು ಆಗಿರೋದು.
ಬರೆದಿರೋ ಶೈಲಿ ಮತ್ತು ಗ್ರಾಮ್ಯಕ್ಕೆ 100 ಮಾರ್ಕ್ಸು.
ಚೆನ್ನಾಗಿ ಎಳ್ಕೊಂಡೋಗಿದೆ, ಕೊನೇ 5 ಪುಟ ಯಾಕೋ ಸಿನಿಮಾ ತರ ಆಗಿದೆಯಲಾ ಅನ್ನೋ ಬೇಜಾರಿದೆ. ಕನ್ಫ್ಯೂಜು ಆಗತ್ತೆ. ಬಿಳಿ ಬಟ್ಟೆಲೀ ಮುಚ್ಚಿರೋ ಶವ ಯಾರದು ಅಂತ ? ಮೊದಪ್ಪಂದಾ ? ಕೊನೆ ಪುಟದಲ್ಲಿ ನಾಲ್ಕು ಮಕ್ಕಳು ಹಾಕೊಂಡು ಬರೋದು ಯಾರು ? ಪಿಳ್ಳೆ ಮತ್ತು ಪಿಳ್ಳೆ ತಮ್ಮಾ ಅನ್ಕೊಂಡ್ರು, ಜೊತೆಗೆಗಿದ್ದಿದ್ದು ಮೋದಪ್ಪಾನೇನ ?
ಎಲ್ಲೂ ಶಾಲೇ ಹೆಸರು ಹೇಳದೇನೆ, ಹುಡುಗಿ ಹೆಸರು ಹೇಳದೇನೆ, ಆಗಿರೋದೆಲ್ಲಾ ಹೇಳೋದಿದೆಯಲ್ಲ; ಅದೇ ಯಾರಿಗೂ ಹೇಳದೆ ಇರೋದು, ಎಲ್ಲರಿಗೂ ಹೇಳೋಕೆ ಹೊರಟಿರೋದು. ಇದು ಕಾಲ್ಪನಿಕ ಅನ್ನೋಕಾಗಲ್ಲ, ಆದರೆ ಓದೋರಿಗೆ ಕಾಲ್ಪನಿಕ ಅನ್ನಿಸ್ಬೇಕು ಅಂತಾನೇ ಬರೆದ ಹಾಗಿದೆ. ಊರು, ಹಳ್ಳಿ ಜೀವನ, ಜನರ ಆಸಕ್ತಿಗಳು, ದಿನ ನಿತ್ಯದ ಮಾತು ಕತೆಗಳು, ಬದುಕಿನ ಬವಣೆಗಳು, ರೈತರ ಜೀವನ, ಸುತ್ತಮುತ್ತ ಇರುವ ಜನಗಳ ಚಿತ್ರಣ, ರಾಜಕೀಯ, ಎಲ್ಲಾ ವಿಷಯಗಳು ಎಷ್ಟು ಬೇಕೋ ಅಷ್ಟು ಹೇಳೋಕೆ ಪ್ರಯತ್ನ ಪಟ್ಟಿದ್ದಾರೆ.
ತಿಪಟೂರು, ಸಿರಾ, ತುಮಕೂರು ಜಾಗಗಳು, ಭಾಷೆಯ ಸೊಗಡು, ಮಣ್ಣು, ಜನರ ಬೆವರಿನ ವಾಸನೆ ಹಂಗೇ ಪ್ರತೀ ಪುಟದಲ್ಲೂ ಕಾಣ್ಸತ್ತೆ.
"ನಮ್ದು" ಅಲ್ಲೇ ನಿಂತಿತ್ತು, "ನಮ್ದು" ಬಂತು, ಪಕ್ಕದಲ್ಲಿ ನಿಂತು ವನೀತಿತ್ತು, ಅನ್ನೋ ಶಬ್ದಗಳನ್ನು ಓದೋವಾಗ, ಓದ್ತಾ ಇರೋರು ಅವರವರ ಸ್ವಂತ ನೆನಪುಗಳಿಗೆ ಹೋಗ್ತಾರೆ ಅಂದರೂ ಆಶ್ಚರ್ಯ ಏನು ಇಲ್ಲ.
ಏನಾದರೂ ಆಗಲಿ, ಒಳ್ಳೆ ಮಜಾ ಅಂತೂ ಇದೆ.

April 10, 2025
ಒಳಗಿರುವ ಮಹಾನ್ ಕವಿಗಳೆಲ್ಲ ರಜೆ ತಗೊಂಡಾಗ, ಮಹಾನ್ ವಿಚಾರವಂತರೆಲ್ಲ ನಾಟ್ ರೀಚೆಬಲ್ ಆದಾಗ, ಎಲ್ಲನ್ನೂ ಬಿಟ್ಟು ಅನಾಥನಾಗಿರೋ ಚಿರಯುವಕನಿಗೆ ಏನಾದ್ರು ಮಜಾ ಬರೋದು ಓದೋಕೆ ಕೊಡದೆ ಇದ್ರೆ ಅವ್ನು ಕಣ್ಮರೆಯಾಗ್ಬಿಡ್ತಾನೆ.
ಫುಲ್ ಕಾದಂಬರಿ ಭರ್ಜರಿ ಮನೋರಂಜನೆ ಕೊಡೋದು ಪಕ್ಕ. ಇದನ್ನೆಲ್ಲಾದ್ರು ಸಿನೆಮಾ ಮಾಡಿದ್ರೆ ಕಾಸರಗೋಡು ಸಿನೆಮಾದ ತರಹ ಕಿಕ್ ಕೊಡುತ್ತೆ. ರೋಲರ್ ಕೋಸ್ಟರ್ ತರಹ ಊರು, ಸ್ಕೂಲು, ಲವ್ವು, ಡವ್ವು ಅಂತೆಲ್ಲ ಮಸ್ತಾಗಿ ಅದಕ್ಕಿಂತ ಹೆಚ್ಚಾಗಿ ಕ್ಯೂಟ್ ಆಗಿ ಓದಿಸಿಕೊಂಡು ಹೋಗುತ್ತಿದು. ಬರವಣಿಗೆ ಇರೋದೆ ಸಕತ್ ಕ್ಲೋಸ್ ಆಗಿ ಓದಿಸಿಕೊಂಡು ಹೋಗೋವಾಗೆ. ತಲೆ ಹಾಳಾಗ್ದಂಗೆ, ಹಂಗೆ ಕಿವಿ ಮೇಲೆ ಹಾರಿ ಹೋಗ್ದಂಗೆ ಗುರು ಮಜಾ ಮಾಡೋಕೆ ಅಂತಾನೆ ಒಂದು, ಓದಿದ್ರೆ ಕಳ್ದೇ ಹೋಗ್ಬೇಕು ಅನ್ನೋವಂಗಿದ್ದು ಒಂದು ಪುಸ್ತಕ/ಕಾದಂಬರಿ ಓದಬೇಕು ಅಂತಿದ್ರೆ ಇದನ್ನ ತಗಳಿ ಓದ್ಕಳು ಎಂಜಾಯ್ ಮಾಡ್ಕಳಿ. ಜೈ!

December 15, 2023
Excellent novel !
December 15, 2023
Having read this novel twice back to back I felt I have been marooned back into the golden days of my life, the plot grows on to us, it consumes us, every moment of keeping glued to this amazing novel is an exhilarating experience, what captivates the heart is the style of the language used in articulation of the story, the author brings the local village slang that makes this novel more alluring, it's breeze...🎊❤️
December 26, 2023
ನಾನು ನಿಮ್ಮನೋಮ್ಮೆ ಭೇಟಿ ಮಾಡಬೇಕು, ನಮ್ಮದು ಶಿರಾ,
ನಿಮ್ಮನ್ನು ಭೇಟಿ ಮಾಡೋದು ಕನಸು, ಆದರೆ ಅದನ್ನು ಕಾಡಿನಲ್ಲೇ ಬಿಡಲು ಇಷ್ಟವಿಲ್ಲ

December 31, 2024
Beautiful prose and of course, our dear Navodaya ❤️
Displaying 1 - 16 of 16 reviews