What do you think?


ಹಿರಣ್ಯಗರ್ಭ
ಸಹಸ್ರನಾಮಗಳು, ಸೂಕ್ತಿಗಳು ಎಲ್ಲವೂ ಕೇವಲ ಧಾರ್ಮಿಕ ಪಾಠಗಳೇ ಅಥವಾ ಲೌಕಿಕದಲ್ಲಿ ಶ್ರೀಸಾಮಾನ್ಯನಿಗೆ ಸಂದೇಶಗಳೇ? ಇಂಥ ಜಿಜ್ಞಾಸೆಯ ಎಳೆಯೊಂದರ ಕೌತುಕ ಕಥಾಹಂದರದ, ನವ ಲೇಖಕ ನವೀನ್ ಶಾಂಡಿಲ್ಯ ಅವರ 'ಹಿರಣ್ಯ ಗರ್ಭ' 1. ನಿಧಿಶೋಧದ ಕಥೆಗಳು ಯಾವಾಗಲೂ ರೋಚಕವೇ. ಕಡೆಯಲ್ಲಿ ದಕ್ಕುವುದೋ ಇಲ್ಲವೋ ಎಂಬ ಕುತೂಹಲದ ಜೊತೆಗೆ ಹುಡುಕಾಟದ ಹಾದಿಯ ಪ್ರತಿ ತಿರುವೂ, ಸುಳಿವೂ, ದಿಕ್ಕುತಪ್ಪುವುದು, ಸಕಾಲ ಸಹಕಾರ ಸಿಗುವುದು ಎಲ್ಲವೂ ಅದ್ಭುತ ಎನಿಸೋ ಅಪರೂಪದ ಪ್ರಯತ್ನ ತಿಳಿಯುವ ಆಸಕ್ತಿ ನಿಮ್ಮಲ್ಲಿದೆಯೇ? 2. ಬೆಂಗಳೂರೆಲ್ಲಿ, ಹಂಪೆಯೆಲ್ಲಿ, ಮಹಾಕೂಟ ಎಲ್ಲಿ... ಈ ಯುವತಂಡ ನಿಧಿಶೋಧಿಸುತ್ತಾ ಜೊತೆಗೆ ಐತಿಹಾಸಿಕ ಪ್ರವಾಸ ಮಾಡ್ತಿರೋ ಹಾಗಿದೆ. ಇವರ ಪ್ರಯಾಣಕ್ಕೆ ನೀವೂ ಜೊತೆಯಾಗೋ ಉತ್ಸಾಹವಿದೆಯಾ? ಸಿಗೋ ಸುಳಿವುಗಳನ್ನು ಬೇಧಿಸೋ ಆಸಕ್ತಿ ಇದೆಯಾ? 3. ಲೇಖಕರೂ ಭಾಗವಾಗಿರೋ ಈ ಕಥೆಯಲ್ಲಿ, ನಿಜಕ್ಕೂ ಅವರ ಪತ್ರ ಏನು? ನಿಧಿಶೋಧಕರ ಜೊತೆ ಅವರಿಗೇನು ಕೆಲಸ? ಈ ತಂಡವನ್ನ ಲೇಖಕರು ಸಂಧಿಸಿದ್ದು ಹೇಗೆ? ಅಥವಾ ಇದೆಲ್ಲಕ್ಕೂ ಶ್ರೀಕಾರ ಹಾಡಿದ್ದೇ ಅವರಾ? 4. ವೇದಗಳ ಸಂದೇಶಗಳನ್ನು ವಿಜ್ಞಾನದ ವ್ಯಾಖ್ಯಾನಗಳಿಂದ ವಿಶ್ಲೇಷಿಸಿ, ವಿಸ್ಮಯಕಾರಿ ಗುಟ್ಟೊಂದನ್ನು ಬೇಧಿಸಲು ನಿಧಿಶೋಧಕ್ಕೆ ಹೊರಟ ಯುವಕರು ತಮ್ಮ ಪ್ರಯತ್ನದಲ್ಲಿ ಸಫಲರಾಗುತ್ತಾರೆಯೇ? 5. ನಿಧಿಶೋಧಕ್ಕೆ ಉದ್ದೇಶ ಮುಖ್ಯವೇ? ಸ್ವಂತ ಲಾಭಕ್ಕಾದ್ರೆ ನಿಧಿ ಸಿಗೋದಿಲ್ಲವೆ? ಲೋಕಕಲ್ಯಾಣಕ್ಕಾದರೆ ದಕ್ಕುತ್ತದೆಯೇ? ಇವೆಲ್ಲಾ ಜಿಜ್ಞಾಸೆ ಬಿಟ್ಟು ಕುತೂಹಲಕ್ಕೆ ಅಂತ ನಿಧಿ ಹಿಂದೆ ಹೋದರೆ? ಆಗ ಏನುಕಥೆ?
Paperback
Published January 1, 2021
Ratings & Reviews
Friends & Following
Create a free account to discover what your friends think of this book!
Community Reviews
Displaying 1 - 2 of 2 reviews
April 10, 2025
ಮತ್ತೊಂದು ನಿದಿ ಹುಡ್ಕೊಂಡು, ಸುಳಿವು ಬಿಡಿಸ್ಕೊಂಡು ಹೋಗೋ ಕತೆ ; ಒಂತರ ಗಣೇಶಯ್ಯನವರ ಹಾಗೆ. ಹಾಗಾದ್ರೆ ಇದರಲ್ಲೇನು ವಿಶೇಷ ? ಅಂತ ಕೇಳಿದ್ರೆ ಈ ಕತೇಲಿ ಇ ಇತಿಹಾಸ ತೆಳುವಾಗಿದ್ರು ಹಣೆದಿರೋ ಕತೆ ಚೆನ್ನಾಗಿರೋದು. ಹುಡುಕಾಟ ಶುರುವಾಗುವ ಮೊದಲ ಆಘಾತ, ಅಪಘಾತ ಅಥವಾ ಘಟನೆ ಚೆನ್ನಾಗಿರೋ ವಿಚಿತ್ರವಾಗಿರೋದು. ಕತೆಯಲ್ಲಿ ಬರೋ ತಿರುವುಗಳು ಕತೆಯನ್ನ ಇನ್ನಷ್ಟು ಆಸಕ್ತಿದಾಯಕವಾಗಿಸೋದು. ಹಂಪಿಗಿಂಪಿಯ ಸುತ್ತ ಕತೆ ತಿರುಗೋದು, ಪಾತ್ರಗಳ ಹಿನ್ನೆಲೆ ಕತೆ, ಅಸಾಧಾರಣ ಒಗಟುಗಳನ್ನು ಬಿಡಿಸೋದು ಇತ್ಯಾದಿ ಮತ್ಯಾದಿಗಳು ಕಾದಂಬರಿಯನ್ನ ಇಷ್ಟಪಡುವಂತೆ ಮಾಡುತ್ತೆ.
ಆದ್ರೆ! ಸುಳಿವುಗಳನ್ನ ಬಿಡಿಸಿ ಮುಂದೆ ಸಾಗುತ್ತಾ ಹೋದಾಗ ಒಡೆದ ರಹಸ್ಯಗಳ ಜನನ ಕಾರಣಕ್ಕೆ ಸಮರ್ಥನೆ ಸರಿಯಾಗಿ ಎಲ್ಲೂ ಕೊಟ್ಟಿಲ್ಲ ಅನಿಸ್ತು. ಹಲವು ಕಡೆ ಸಂಭಾಷಣೆ, ಕತೆಯ ಹರಿವು, ಗಡಿಬಿಡಿ ಮಾಡಿ ಬರದಂತೆ ಭಾಸವಾಗುತ್ತದೆ. ಇನ್ನು ಗುಟ್ಟು ಒಡೆಯುವ ಸುಳಿವುಗಳು ತಲೆಗೆ ಹೊಳೆಯುವ ಸಂದರ್ಭಗಳು ಎಲ್ಲಾ ಒಂದೇ ತರಹದ ನಿಯಮ ಪಾಲಿಸಿದಂತಿದೆ. ಕತೆಯ ಕುತೂಹಲವಷ್ಟೆ ನನ್ನ ಕಾದಂಬರಿಯ ಓದಿಸಿಕೊಂಡು ಹೋಗುವಂತೆ ಮಾಡಿದೆಯೆ ಹೊರತು, ಬರವಣಿಗೆ ನನಗೆ ಓದೋಕೆ ಸ್ವಲ್ಪ ಕಷ್ಟ ಅನಿಸ್ತು.
ನಿಮ್ಮ ಅನಿಸಿಕೆಗಳು ಬದಲಾಗಬಹುದು. ಒಮ್ಮೆ ಓದಿ ನೋಡಿ. ಕತೆ ಚೆನ್ನಾಗಿದೆ.
ಜೈ
ಆದ್ರೆ! ಸುಳಿವುಗಳನ್ನ ಬಿಡಿಸಿ ಮುಂದೆ ಸಾಗುತ್ತಾ ಹೋದಾಗ ಒಡೆದ ರಹಸ್ಯಗಳ ಜನನ ಕಾರಣಕ್ಕೆ ಸಮರ್ಥನೆ ಸರಿಯಾಗಿ ಎಲ್ಲೂ ಕೊಟ್ಟಿಲ್ಲ ಅನಿಸ್ತು. ಹಲವು ಕಡೆ ಸಂಭಾಷಣೆ, ಕತೆಯ ಹರಿವು, ಗಡಿಬಿಡಿ ಮಾಡಿ ಬರದಂತೆ ಭಾಸವಾಗುತ್ತದೆ. ಇನ್ನು ಗುಟ್ಟು ಒಡೆಯುವ ಸುಳಿವುಗಳು ತಲೆಗೆ ಹೊಳೆಯುವ ಸಂದರ್ಭಗಳು ಎಲ್ಲಾ ಒಂದೇ ತರಹದ ನಿಯಮ ಪಾಲಿಸಿದಂತಿದೆ. ಕತೆಯ ಕುತೂಹಲವಷ್ಟೆ ನನ್ನ ಕಾದಂಬರಿಯ ಓದಿಸಿಕೊಂಡು ಹೋಗುವಂತೆ ಮಾಡಿದೆಯೆ ಹೊರತು, ಬರವಣಿಗೆ ನನಗೆ ಓದೋಕೆ ಸ್ವಲ್ಪ ಕಷ್ಟ ಅನಿಸ್ತು.
ನಿಮ್ಮ ಅನಿಸಿಕೆಗಳು ಬದಲಾಗಬಹುದು. ಒಮ್ಮೆ ಓದಿ ನೋಡಿ. ಕತೆ ಚೆನ್ನಾಗಿದೆ.
ಜೈ
December 3, 2023
This is pretty great if you like treasure hunt books combined with mythology and history. Only issue is the female characterization is bit cringe. All men are refered with their names. But the one female character is always called using adjectives. Lot of adjectives.
Displaying 1 - 2 of 2 reviews



