ಒಂದೆರಡು ದೆವ್ವದ ಕತೆ ಬರೆದ ನಂತರ 'ನೀವು ದೆವ್ವಗಳನ್ನು ನೋಡಿದ್ದೀರಾ?' ಅಂತ ಅನೇಕರು ನನ್ನನ್ನು ಕೇಳುತ್ತಿದ್ದರು. ಆಗೆಲ್ಲ ನಾನು ಖಚಿತವಾದ ಧ್ವನಿಯಲ್ಲಿ 'ನೋಡಿದ್ದೇನೆ' ಅಂತ ಹೇಳುತ್ತಿದ್ದೆ. ಅವರು 'ನಾವೂ ದೆವ್ವಗಳನ್ನು ನೋಡಬೇಕು' ಅನ್ನುತ್ತಿದ್ದರು. 'ನಮ್ಮೂರಿಗೆ ಬನ್ನಿ, ತೋರಿಸುತ್ತೇನೆ' ಎಂದು ಅವರಿಗೆ ಆಹ್ವಾನ ಕೊಡುತ್ತಿದ್ದೆ. ಹೀಗೆ ಹಲವು ಮಿತ್ರರನ್ನು ನಮ್ಮೂರಿಗೆ ಕರೆದೊಯ್ದು ದೆವ್ವಗಳನ್ನೂ ಪಿಶಾಚಿಗಳನ್ನೂ ತೋರಿಸಿದ್ದೆ.
ಇತ್ತೀಚೆಗೆ ನನ್ನ ಮಗಳು ಖುಷಿಗೆ ದೆವ್ವ ನೋಡುವ ಆಸೆಯಾಯಿತು. ಅವಳನ್ನು ಕರೆದುಕೊಂಡು ನಮ್ಮೂರಿಗೆ ಹೋದೆ. ನಡುರಾತ್ರಿ ದೆವ್ವ ವಾಸ ಮಾಡುತ್ತಿದ್ದ ಮರ ಇದ್ದ ಜಾಗಕ್ಕೆ ಹೋಗಿ ನೋಡಿದರೆ, ದೆವ್ವ ವಾಸಿಸುತ್ತಿದ್ದ ಹುಣಸೇ ಮರವನ್ನು ಯಾರೋ ಕಡಿದು ಹಾಕಿದ್ದರು. ಅದೇ ಜಾಗದಲ್ಲಿ ಯಾವುದೋ ಫ್ಯಾಕ್ಟರಿ ಕಟ್ಟಿದ್ದರು. ದೆವ್ವ ಯಾವುದೋ ಬೇರೆ ಮರ ಹುಡುಕಿಕೊಂಡು ಹೋಗಿರಬೇಕು ಅಂದುಕೊಂಡು ಊರುತುಂಬ ಹುಡುಕಾಡಿದೆವು. ದೆವ್ವ ವಾಸಿಸಲಿಕ್ಕೆ ಅನುಕೂಲಕರವಾದ ಒಂದೇ ಒಂದು ಮರವನ್ನು ನಮ್ಮೂರಿನ ಮಂದಿ ಉಳಿಸಿರಲಿಲ್ಲ. ಎಲ್ಲೆಲ್ಲೂ ಬೀದಿ ದೀಪಗಳನ್ನು ಹಾಕಿ, ದೆವ್ವಕ್ಕೆ ಬೇಕಾದ ಕತ್ತಲನ್ನೂ ಕೂಡ ಕಸಿದುಕೊಂಡಿದ್ದರು.
ಈಗ ನಿಮಗೆ ದೆವ್ವ ಪಿಶಾಚಿಗಳು ಸಿಗುವುದು ಈ ಪುಸ್ತಕದಲ್ಲಿ ಮಾತ್ರ.
Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
A collection of 17 short stories. Being a big fan of Horror movies, I bought this book with much expectations, thinking these would provide some great chills for my night read, only to realise most of them are typical old fashioned Horror. Listing 6 of them with what I liked in each:
1. ನಿರ್ಮಲ ಕೊಂದ ಗಂಡು ಮಗುವಿನ ಕತೆಯು - The way a child's Ghost was haunting its killers was unique, simple but painful and something I never came across.
2. ಕರಡಿ ದೆವ್ವದ ಹುಡುಕಾಟದಲ್ಲಿ - Hilarious end to a not so horrifying story.
3. ರಾಯಭಾಗದ ರಹಸ್ಯ ರಾತ್ರಿ - A routine story involving an Old Big Bungalow provides for some tense chilling moments, forcing a reader to place themselves in the shoes of different characters.
4. ಯಡಕುಮೇರಿಯ ಸುರಂಗದಲ್ಲಿ - A train tunnel connects this sad love story of Malenadu.
5. ರಾಂಗ್ ನಂಬರ್ - Henceforth, the song ಹಮೇ ತುಮ್ಸೆ ಪ್ಯಾರ್ ಕಿತ್ನ, ಯೆ ಹಮ್ ನಹಿ ಜಾನ್ತೇ will always remind me of this story. More of a haunting story than a horror.
6. ಕೊನೆಯ ಮಾತುಗಳು ಅವನಿಗೆ ಕೇಳಿಸಲಿಲ್ಲ - This is the last story of the book and my pick of all. Just six pages and it has an Old ಹಠಮಾರಿ ಅಜ್ಜಿ staying alone in a big house, a revenge story, a climax twist. Sweet!