ತೇಜಸ್ವಿಯವರನ್ನು ಒಂದೇ ಬಾರಿ ಭೇಟಿಯಾದ, ಸೆಪ್ಟೆಂಬರ್ ಎಂಟರಲ್ಲಿ ಬೆಂಗಳೂರು ಚಿತ್ರಕಲಾ ಪರಿಷತ್ತಿನ ಆಶ್ರಯದಲ್ಲಿ ನಡೆಯುವ ಸಂಸ್ಕರಣೆಯ ಕಾರ್ಯಕ್ರಮದಲ್ಲಿ ಕಿರು ಹೊತ್ತಿಗೆ ಬರೆಯುತ್ತಿದ್ದ, ಫೇಸ್ಬುಕ್ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳನ್ನು ಲೇಖಕರು ಇಲ್ಲಿ ನೀಡಿದ್ದಾರೆ. ತೇಜಸ್ವಿ ಬಗ್ಗೆಯಿರುವ ಅಭಿಪ್ರಾಯಗಳ ವಿಸ್ತಾರ ಈ ಕೃತಿಯ ನಂತರ ಹೆಚ್ಚಾಗುತ್ತಾ ಹೋಗುತ್ತದೆ. ತೇಜಸ್ವಿಯೆಂದರೆ, ತೇಜಸ್ವಿ ಬಂದರೆ ಅದರ ಶಕ್ತಿ ಹೇಗಿತ್ತು ಅನ್ನೋದು ಇಲ್ಲಿ ಸೈಬರ್ ಕಣಿವೆಯ ಲೇಖನದಲ್ಲಿ ಹೇಳಿದ್ದಾರೆ. ಇಂದಿಗೂ ಅಂದಿನಿಂದ ಕಾಣಸಿಗುವ ಸಮಸ್ಯೆಗಳೇ ಇಲ್ಲಿರೋದು ನೋಡಿದರೆ ಬದಲಾವಣೆ ಪದಕ್ಕೆ ಯಾವ ಅರ್ಥ ಹುಡುಕಬೇಕು ಅನ್ನೋದು ಗೊತ್ತಾಗಲ್ಲ. ಕನ್ನಡ ಮೂಲೆ ಗುಂಪಾಗುತ್ತಿರುವುದು ಎಲ್ಲಾ ಬಾಯಿಯಲ್ಲಿ ಕೊಚ್ಚಿಕೊಳ್ಳುವ ವಿಷಯವಾದರು ಅದರ ಸಮಸ್ಯೆಯ ಮೂಲ ತಾವೇ, ತೀರ ಮಡಿವಂತಿಕೆ, ಅಗಾಧ ಜ್ಞಾನವಿದೆಯೆನ್ನುವ ಮೌಡ್ಯ, ಇಂಗ್ಲಿಷ್ ನಂತೆ ಬೇರೆ ಭಾಷೆಯ ಪದಗಳನ್ನು ಬಳಸಿ ಕನ್ನಡ ಮಾತಾಡುವ ವಿಷಯದಲ್ಲಿ ಉಲ್ಟಾಸೀದಾ ಯೋಚನೆ ಹೀಗೆ ಇಂತವುಗಳೂ, ಕನ್ನಡ ಬರಿ ಕತೆ ಕಾದಂಬರಿಯಿಂದ ಉಳಿಯದು, ಮೊದಲು ಅದನ್ನ ಬಳಸಬೇಕು. ಬದಲಾಗುತ್ತಿರುವ ಜಗತ್ತಿನ ಜೊತೆ ಸಾಗಿ ಕಾಪಾಡಿಕೊಳ್ಳಬೇಕು ಅನ್ನೋ ತೇಜಸ್ವಿ ನುಡಿಗಳು ಈ ಕೃತಿಯಲ್ಲಿಯೂ ಘರ್ಜನೆ ಮಾಡಿವೆ. ಹೀಗೆ ಹತ್ತು ಹಲವು ತೇಜಸ್ವಿ ಮಜಲುಗಳ ಬಗ್ಗೆ ಮಾತಾಡಿದ್ದಾರೆ ಲೇಖಕರು. ಕೆಲವೊಂದು ಗೊತ್ತಿರೋದು, ಗೊತ್ತಿಲ್ಲದ್ದು, ನೆನಪು ಹೋಗಿರೋದು ಮುಂತಾದ ಲೇಖನಗಳನ್ನು ನೀಡಿದ್ದಾರೆ. ಬರವಣಿಗೆ ಸರಳ ಸಲೀಸಾಗಿ ತೇಜಸ್ವಿಯವರನ್ನು ನೆನಪಿಸಿ ಪುಸ್ತಕಗಳ ತುಂಬ ತುಂಬಿಸಿಕೊಂಡು ಹೋಗಿದೆ.