Jump to ratings and reviews
Rate this book

ಕರ್ನಲನಿಗೆ ಯಾರೂ ಬರೆಯುವುದೇ ಇಲ್ಲ

Rate this book
karnalnige yaaroo bareyuvude illa -- by Shrinivasa Vaidya, published by Manohara Granthamala.

It's a Kannada translation of Gabriel Garcia Marquez's No One Writes to the Colonel.

Paperback

13 people want to read

About the author

Shrinivas Vaidya

10 books4 followers

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
4 (30%)
4 stars
5 (38%)
3 stars
4 (30%)
2 stars
0 (0%)
1 star
0 (0%)
Displaying 1 - 4 of 4 reviews
Profile Image for That dorky lady.
375 reviews73 followers
March 7, 2025
ವಿಷಾದವೇ ಘನೀಭವಿಸಿ ಪುಟಗಳ ತುಂಬ ಹರಡಿಕೊಂಡಂತಾ ನೀಳ್ಗತೆಯಿದು!

ಗೆಬ್ರಿಯಲ್ ಗಾರ್ಸಿಯ ಮಾರ್ಕೇಸನ 'love in times of cholera' ಬಿಟ್ಟು ಮತ್ಯಾವ ಕೃತಿಯನ್ನೂ ಇಲ್ಲಿಯವರೆಗೂ ಓದಿರಲಿಲ್ಲ. ಕೇವಲ ಆತನ ಬರಹ ಶೈಲಿ , ಕಥನಗಾರಿಕೆಯ ಕುರಿತು ಅಲ್ಲಿಲ್ಲಿ ಓದಿ- ಕೇಳಿ, 'ಒಂದು ನೂರು ವರ್ಷದ ಏಕಾಂತ' ಕಾದಂಬರಿಯ ಧಾರಾವಾಹಿ ಅವತರಣಿಕೆಯನ್ನು ನೋಡಿ ಆತನೆಂದರೆ ಒಂದು ಬಗೆಯ ಆರಾಧನೆ ಹುಟ್ಟಿದ್ದು ಸುಳ್ಳಲ್ಲ.ಆದರೆ ಈ ಕಿರು ಕಾದಂಬರಿ 'ಕರ್ನಲನಿಗೆ ಯಾರೂ ಬರೆಯುವುದೇಯಿಲ್ಲ' ಓದುವಾಗ ಪಾತ್ರಗಳ ವಿಷಾದದ ಭಾರವನ್ನು ನಾನೇ ಹೊತ್ತು ತಿರುಗುತ್ತಿರುವಂತೆನಿಸಿ ಗ್ಯಾಬೋನನ್ನು ಬೈದುಕೊಳ್ಳುವಂತಾಯ್ತು.

ಪುತ್ರ ಶೋಕಂ ನಿರಂತರಂ ಎನ್ನುತ್ತಾರೆ. ಗೆರೆಗಿಂತ ಗೆರೆ ದೊಡ್ಡದು ಎನ್ನುವಂತೆ ಮಗನ ಸಾವಿನ ದುಃಖವನ್ನೂ ಮಿರಿಸುವಂತೆ ಬದುಕೆನ್ನೋ ಬದುಕೇ ದುರ್ಭರವಾಗುತ್ತಾ ಬದುಕಲೂ ಆಗದೆ ಸಾಯಲೂ ಆಗದೆ, ಬರಬೇಕಾದ ಪೆನ್ಷನ್ನಿನ ಆಸೆಯಲ್ಲಿ ಜೀವ ಹಿಡಿದು ಕಾಯುವ ಎರಡು ಮುದಿ ಜೀವಿಗಳ ಶೋಕವನ್ನು ಕಣ್ಣಿಗೆ ಕಟ್ಟುವಂತೆ - ಅಲ್ಲ, ನಾವೇ ಜೀವಿಸುತ್ತಿರುವಂತೆ ಎನಿಸುವಷ್ಟು ಗಾಢವಾಗಿ ಚಿತ್ರಿಸಿದ್ದಾನೆ ಮಾರ್ಕೇಸ್. ನಡುವಲ್ಲಿ ಬರುವ ಕರ್ನಲ್ ಅವ್ರೆಲಿಯಾನೋ ಬ್ವೆಂಡಿಯಾ ಪ್ರಸ್ತಾಪ ಖುಷಿಕೊಡುತ್ತದಾದರೂ ಇಡೀ ಕೃತಿ ಸಾವಿನಲ್ಲಿ ಶುರುವಾಗಿ, ಸಾವಿನಲ್ಲೇ ಮುಳುಗೆದ್ದು, ಸಾವಿನ ದಾರಿ ಕಾಯುತ್ತಾ ಮುಕ್ತಾಯಗೊಳ್ಳುತ್ತದೆ.

ತುಸು ಕಷ್ಟದ ಓದು, ಶ್ರೀನಿವಾಸ ವೈದ್ಯರ ಅನುವಾದ ಅತ್ಯಂತ ಸರಳವಾಗಿದ್ದು ಓದಿನ ಕಷ್ಟವನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದೆ. ಓ ಎಲ್. ನಾಗಭೂಷಣ ಸ್ವಾಮಿಯವರ ಪ್ರಸ್ತಾವನೆ ಕೃತಿಯನ್ನು ಅರ್ಥೈಸಿಕೊಳ್ಳಲು, ಇಂತಾ ಒಂದು ಕೃತಿಯನ್ನು ಹೇಗೆ ಮತ್ತು ಏಕೆ ಓದಬೇಕು ಎಂದು ತಿಳಿಯಲು ಸಹಾಯಕಾರಿಯಾಗಿದೆ.
Profile Image for Prashanth Bhat.
2,157 reviews140 followers
June 17, 2020
ಕರ್ನಲನಿಗೆ ಯಾರೂ ಬರೆಯುವುದಿಲ್ಲ - (ಮೂಲ - ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ) ಅನುವಾದ - ಶ್ರೀನಿವಾಸ ವೈದ್ಯ.

ಇದು ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನ no one writes to colonel ಅನ್ನುವ ಕಿರು ಕಾದಂಬರಿಯ ಅನುವಾದ.
ಇದು ಪ್ರಕಟವಾದಾಗ ಅಷ್ಟು ಮನ್ನಣೆ ಪಡೆಯಲಿಲ್ಲ. ಸ್ವತಃ ಮಾರ್ಕ್ವೆಜ್ ಇದನ್ನ ತನ್ನ ಅತ್ಯುತ್ತಮ ಕೃತಿ ಎಂದು ಕರೆದುಕೊಂಡಿದ್ದಾನೆ. ಅವನು ಇದನ್ನು ಜನ‌ ಓದಲಿ ಅಂತ ತಾನು one hundred years of solitude ಬರೆದೆ ಅಂತ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ.
ಕತೆ ಬದುಕಿನ ಮುಸ್ಸಂಜೆಯದು. ಮುದುಕ ಕರ್ನಲ್ ಮತ್ತು ಅವನ ಪತ್ನಿ ಹದಿನೈದು ವರ್ಷಗಳಿಂದ ಬಾರದ ಪೆನ್ಶನ್ ಗೆ ಕಾಯುತ್ತಾ ಇದ್ದಾರೆ. ಅವರ ಮಗ ಒಂಬತ್ತು ತಿಂಗಳ ಹಿಂದಷ್ಟೆ ತೀರಿಕೊಂಡಿದ್ದಾನೆ. ಅವನು ಕಾಳಗಕ್ಕಾಗಿ ಸಾಕಿದ ಹುಂಜ ತಮಗೆ ಐಶ್ವರ್ಯ ತಂದು ಕೊಡುವುದು ಎಂದು ಕರ್ನಲ್ ನಂಬಿದ್ದಾನೆ. ಮನೆಯ ವಸ್ತುಗಳನ್ನ ಮಾರಿ, ಬಂದ ಅಲ್ಪಸ್ವಲ್ಪ ಹಣದಿಂದ ಅವರ ಜೀವನ‌ ತೆವಳುತ್ತಿದೆ. ದಿನ ಬೆಳಗಾದರೆ ಅವತ್ತಿನ ಊಟದ ಚಿಂತೆ , ತನಗೆ ಪೆನ್ಶನ್ ನ ಟಪ್ಪಾಲು ಬರುತ್ತದೋ ಎಂದು ನಿರುಕಿಸುವುದೇ ಕರ್ನಲ್ ನ ಕೆಲಸ. ತಾನು ಹಣದ ಎರಡು ಚೀಲಗಳ ಕತ್ತೆಯ ಮೇಲೆ ಹೊರಿಸಿ ಸಾಗಿಸಿದ್ದನ್ನೂ, ತಾನು ಸೈನಿಕನಾಗಿದ್ದಾಗಿನ ಯುದ್ಧದ ಕಾಲವನ್ನೂ ನೆನಪಿಸಿಕೊಳ್ಳುವ ಅವನಿಗೆ ತಾನು ಭೂತಕಾಲದಲ್ಲಿ ಬದುಕುತ್ತಿದ್ದೇನೋ, ವರ್ತಮಾನದಲ್ಲಿದ್ದೇನೋ ಸ್ಪಷ್ಟವಿಲ್ಲ. ಮಗನ ಸಾವಿಗೆ ದುಃಖಿಸಲೂ ಅವರಿಗೆ ಆಗುತ್ತಿಲ್ಲ. ಹುಂಜವ ಮಾರಿದರೆ ಕೊಂಚ ಹಣವಾದರೂ ದೊರೆಯುತ್ತದೆ ಅನ್ನುವುದು ಹೆಂಡತಿಯ ನಿಲುವು. ಅದನ್ನ ಮಾರಿದರೆ ಅದರ ಮೇಲೆ ಬಾಜಿ ಕಟ್ಟಿದ ಯುವಕರಿಗೆ ನಿರಾಸೆಯಾಗುತ್ತದಲ್ಲ ಅನ್ನುವುದು ಕರ್ನಲನ ವಾದ. ಹುಂಜಗಳ ಕಾಳಗದಲ್ಲಿ ಹುಂಜ ಸೋತರೆ ಅನ್ನುವುದನ್ನೆಲ್ಲ ಚಿಂತಿಸಲೂ ಅವನು ಸಿದ್ಧನಿಲ್ಲ. ಇದೆಲ್ಲ ಆಗುವವರೆಗೆ ಹೊಟ್ಟೆಗೆ ಏನು ತಿನ್ನುವುದು ಅನ್ನುವ ಹೆಂಡತಿಯ ಪ್ರಶ್ನೆಗೆ ಕರ್ನಲ್ ನ‌ ಉತ್ತರ 'ಶಗಣಿ'. ಅಲ್ಲಿಗೆ ಕಾದಂಬರಿ ಮುಗಿಯುತ್ತದೆ.
ಮಾರ್ಕ್ವೆಜ್ ನ ಶಕ್ತಿಯಿರುವುದು ಅವನ ಮ್ಯಾಜಿಕಲ್ ರಿಯಲಿಸಮ್ ನಲ್ಲಿ. ಇದನ್ನು ಕನ್ನಡದಲ್ಲಿ ಮಾಂತ್ರಿಕ ವಾಸ್ತವವಾದ ಎಅಮದು ಕರೆಯುತ್ತಾರೆ. ಉದ್ದ ರೆಕ್ಕೆಗಳ ಮುದುಕನಿದ್ದ ಅಂತ ಅವ ಬರೆದರೆ ಅದು ನಿಜವೇ. ಅದರಲ್ಲಿ ಪವಾಡ ಇತ್ಯಾದಿಗಳು ಬರುವುದಿಲ್ಲ. ಅದನ್ನೂ ವಾಸ್ತವ ಎಂಬಂತೆ ಚಿತ್ರಿಸುವುದೇ ಅವನ ಬರವಣಿಗೆಯ ಬೆರಗು. ಅವನ ಜಗದ್ವಿಖ್ಯಾತ ಕಾದಂಬರಿ one hundred years of solitude ತುಂಬಾ ಇಂತಹ ಘಟನೆಗಳು ಇಡಿಕಿರಿದಿವೆ.
ಆದರೆ ಈ ಕಾದಂಬರಿ ಮಾತ್ರ ಅದರಿಂದ ಹೊರತಾಗಿದೆ. ಕಣ್ಣೆದುರಿನ ಕ್ರೂರ ವಾಸ್ತವವನ್ನು ಅವನು ಶಬ್ದಗಳಲ್ಲಿ ಬಣ್ಣಿಸುವಾಗ ನಾವು ಇಲ್ಲೇ ಕುಕ್ಕರುಗಾಲಲ್ಲಿ ಕೂತು ಕರ್ನಲ್ ಮತ್ತವನ‌ ಹೆಂಡತಿಯ ಮಾತಿಗೆ ಕಿವಿಯಾಗುತ್ತಿದ್ದೇವೆ ಅನಿಸುತ್ತದೆ. ಮೂಳೆಗಳ ಕೊರೆವ ಅಕ್ಟೋಬರ್ ನ ಚಳಿಗೆ ಕರ್ನಲ್ ನಡುಗುವಾಗ ನಮಗೂ ಹಾಗೇ ಅನಿಸುತ್ತದೆ.
ಈ ಕಾದಂಬರಿ ಓದುವಾಗ ವಸುಧೇಂದ್ರ ಅನುವಾದದ ಮಿಥುನ ನೆನಪಾಗುತ್ತದೆ.ತೇಜಸ್ವಿಯ ತಬರನ‌ ಕತೆ ಕಣ್ಣೆದುರು ಬರುತ್ತದೆ.
ನಮಗೆಲ್ಲರಿಗೂ ಬದುಕಲ್ಲಿ ಒಂದಲ್ಲ ಒಂದು ಸಲ ಏನು ಮಾಡಲೂ ಆಗದ ಅಸಹಾಯಕ ಭಾವನೆ ಆವರಿಸುತ್ತದಲ್ಲ ಅದು ಇದನ್ನ ಓದುವಾಗ ಆಗುತ್ತದೆ.
ವಿಷಣ್ಣ ಭಾವದ, ಈ ಪುಸ್ತಕ ಕಾಡಿದಷ್ಟು ಬೇರೆ ಯಾವುದೂ ಕಾಡಿಲ್ಲ.
ಇದನ್ನು ಸಾಲು, ಸಾಲು ನಿಧಾನವಾಗಿ ಓದಿ. ಆಗ ಮಾತ್ರ ಪ್ರವೇಶ ಸಾಧ್ಯ. ಇಲ್ಲವಾದರೆ ಗೋಳಾಗುವ ಅಪಾಯವಿದೆ.
ಕೆಲ ಪುಸ್ತಕಗಳೇ ಹಾಗೆ. ಮೊದಲ ಓದಿಗೆ ಅವು ತಮ್ಮನ್ನ ಬಿಟ್ಟುಕೊಡುವುದಿಲ್ಲ.
ಅನುವಾದದ ಬಗ್ಗೆ ಎರಡು ಮಾತಿಲ್ಲ. ಮುಖಪುಟ ಚಿತ್ರವೂ ಪೂರಕವಾಗಿದೆ. ಬರಿಯ ಅರವತ್ತು ರೂಪಾಯಿಗೆ ಮನೋಹರ ಗ್ರಂಥಮಾಲೆಯವರು ತಂದ ಈ ಪುಸ್ತಕ ಸಾಹಿತ್ಯಕ್ಕೆ ಬದುಕಿನ ಕಾಣುವ ಶಕ್ತಿಯಿದೆ ಅನ್ನುವ ಮಾತಿಗೆ ಪುಷ್ಟಿ ನೀಡುತ್ತದೆ.
Profile Image for Bharath Manchashetty.
122 reviews2 followers
December 2, 2025

“no one writes to colonel” ಶ್ರೀನಿವಾಸ ವೈದ್ಯರ ಭಾವಾನುವಾದ ಕೃತಿ.

“೬೮ ಪುಟದ ಕಾದಂಬರಿಯಾಗಿದ್ದರೂ ಮಾನವನ ನಿರೀಕ್ಷೆಯ ಗಹನ ಮನೋವೃತ್ತಿಯನ್ನು ಎದುರಾಳಿಯಿಲ್ಲದಷ್ಟು ಭಾವನಾತ್ಮಕವಾಗಿ ಅನಾವರಣಗೊಳಿಸುವ ಶಕ್ತಿ ಈ ಕೃತಿಗಿದೆ. ಪ್ರತೀ ಕೃತಿಯಲ್ಲೂ ನಾಯಕ, ನಾಯಕಿ, ಖಳನಾಯಕ ಇತ್ಯಾದಿ ಪಾತ್ರಗಳ ಜೊತೆ ಹಲವು ಸನ್ನಿವೇಶಗಳನ್ನು ಎದುರಿಸುವುದೇ ಕಥಾನಕ ಆಗಿ ಲೇಖಕನು ತನ್ನಲ್ಲಿರುವ ಮೌಲ್ಯ, ತತ್ವಗಳನ್ನು ಪಾತ್ರಗಳ ಮುಖೇನ ಹೇಳುತ್ತಾನೆ. ಆದರೆ ಈ ಒಂದು ಕೃತಿಯಲ್ಲಿ ಕೈಗೆ ಸಿಗದ ಖಳನಾಯಕನೇ ನಮ್ಮ ರಾಜಕೀಯ ಸಾಮಾಜಿಕ ವ್ಯವಸ್ಥೆ, ಕಾಣದ ಹಸಿವು, ಕಾಣುವ ಬಡತನದ ಜೊತೆ ಮಗನನ್ನು ಕಳೆದುಕೊಂಡು ದುಡಿಯಲಾಗದ ವಯೋಸಹಜ ವೃದ್ಧಾಪ್ಯ…ಇದೆಲ್ಲದಕ್ಕೂ ಕೊರಗುವ ನಾಯಕ ಕರ್ನಲ್ನಲ್ಲಿರುವ ಪ್ರಾಮಾಣಿಕತೆ ಮತ್ತು ತನ್ನ ಹೆಂಡತಿಯ ಬದುಕುವ ಹಠವೇ ಆಗಿದೆ.

“ರೋಗಿ ಹೆಂಡತಿ, ಮರಣಹೊಂದಿದ ಮಗ, ವೃದ್ಧಾಪ್ಯದ ಮಂಪರು, ವಾಸ್ತವಕ್ಕೆ ಹೊಂದಿಕೊಳ್ಳಲಾಗದ ಮನಸ್ಥಿತಿ , ಮಾರಲು ಮೌಲ್ಯ ವಸ್ತುವಿಲ್ಲದ ಮನೆ, ೪೦ ವರ್ಷ ಪ್ರಾಯದ ಬೂಟ್ಸು, ಪ್ರತೀ ಶುಕ್ರವಾರದ ಅಂಚೆಯಲ್ಲಿ ಪಿಂಚಣಿ ವೇತನ ಬರುತ್ತದೆಂದು ಹದಿನೈದು ವರ್ಷಗಳಿಂದ ಕಾಯುವ ಅಸಹಾಯಕತೆ, ಅಕ್ಟೋಬರ್ ತಿಂಗಳಿನ ಕೊರೆಯುವ ಚಳಿಯಲ್ಲಿ ಹೊಟ್ಟೆ ಹಿಂಡುವ ಹಸಿವು, ಸಾಮಾಜಿಕ ಕಳಕಳಿಯಿರುವ ವೈದ್ಯ…. ಇದೆಲ್ಲದರ ನಡುವೆ ತನ್ನ ಮಗ ಬಿಟ್ಟುಹೋದ ಕೋಳಿಯಿಂದ ಸ್ಪರ್ಧೆ ಗೆದ್ದು ಜೀವನ ನಡೆಸಬೇಕೆನ್ನುವ ಕನಸು, ಮಧುಮೇಹ ಶ್ರೀಮಂತ ಸ್ನೇಹಿತನ ವಿಚಿತ್ರ ಮನಸ್ಥಿತಿಯ ಹೆಂಡತಿ, ಇಷ್ಟನ್ನು ಗ್ರಹಿಸುವುದು ಒಬ್ಬ ಗಂಭೀರ ಓದುಗನಿಗೆ ಮಾತ್ರ, ರಸದ ದೃಷ್ಟಿಯಿಂದ ಕೃತಿ ಅಷ್ಟು ಪ್ರಭಾವ ಬೀರದೆ ಇದ್ದರೂ ಮೌಲ್ಯದ ದೃಷ್ಟಿಯಲ್ಲಿ ನನ್ನ ಬಹುಮೆಚ್ಚಿನ ಕೃತಿ.

ಕರ್ನಲ್‌ನ ಜೀವನವೇ ನಿರೀಕ್ಷೆಯ ರೂಪಕ. ಜೀವನವು ನಿರೀಕ್ಷೆಯಿಲ್ಲದೆ ಅನರ್ಥ, ಬಡತನದ ಮನೋವಿಜ್ಞಾನ, ಹೂತುಹಾಕಲ್ಪಟ್ಟ ಕನಸುಗಳು, ವ್ಯಕ್ತಿ ಸ್ವಾಭಿಮಾನ ಮತ್ತು ಬಡತನದ ತೂಕ, ರಾಜಕೀಯ ಮೌನ ಮತ್ತು ಮಾನವದ ಹೋರಾಟ, ಮೌನಾತ್ಮಕ ದೌರ್ಬಲ್ಯತೆಯ ತಾಳ್ಮೆ, ಸಾಮಾನ್ಯ ಮನುಷ್ಯನಿಗೆ ಧ್ವನಿಯಿಲ್ಲದ ಸರ್ಕಾರದ ಒಟ್ಟಾರೆ ಚಿತ್ರಣ ಕೃತಿಯ ಪ್ರತೀ ಪುಟದಲ್ಲೂ ಕಾಡುತ್ತದೆ.

ಕೃತಿಯಲ್ಲಿ ಬರುವ ಮೇಲಿನ ವಿಚಾರಗಳು ತನ್ನ ಕೆಲವೇ ಪಾತ್ರಗಳ ಮೂಲಕ ಓದುಗನಾದ ನನ್ನನ್ನು ವೃದ್ಧಾಪ್ಯಕ್ಕೆ ಒಯ್ದು ಮನಕಲಕಿ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡಿ ಜಾಡಿಸಿದಂತಾಯ್ತು. ನಾವೇನನ್ನು ನಂಬಿಕೊಂಡು ಬದುಕುತ್ತೇವೆ?
ನಿರೀಕ್ಷೆ ನಿಷ್ಪ್ರಯೋಜಕವಾಗಿದ್ದರೂ ಬದುಕಬೇಕೆಂಬುವ ಹಂಬಲ ಎಷ್ಟು ಸರಿ.? ಪ್ರಾಮಾಣಿಕತೆ ಎಷ್ಟು ಸರಿ.? ಇತರ ಪ್ರಶ್ನೆಗಳು ಮನಸ್ಸನ್ನು ಸೂರೆಗೊಳಿಸಿದವು.

ಕಥೆ ಮುಗಿದ ಬಳಿಕವೂ ಕರ್ನಲ್‌ನ ಮೌನ, ಅವನ ನಿರೀಕ್ಷೆ, ಅವನ ಕೋಳಿ—ಮನಸ್ಸಿನಲ್ಲಿ ಉಳಿಯುತ್ತವೆ.

-ಭರತ್ ಎಂ.
ಓದಿದ್ದು ೩೦.೧೧.೨೦೨೫

Profile Image for Sanket Patil.
37 reviews3 followers
January 11, 2014
Garcia Marquez's No One Writes to the Colonel is a brilliant novella about a retired war here -- the colonel -- who is awaiting his pension, living with his wife in a small town of a war torn South American country. He's been waiting since the day the civil war was over, which was several decades ago. He only son was killed by the authorities as he was thought to be an insurgent. Among other things, it's a compelling story of the loneliness and frustrations associated with old age. The struggle to uphold dignity, and hope, in the face of poverty. The eternal wait that likely won't result in fruition.

I had read the original several years ago and it has remained one of my favourites. I recently came across this Kannada translation by Shrinivasa Vaidya, a Kannada short story writer and novelist. It's a very well done translation.
Displaying 1 - 4 of 4 reviews

Can't find what you're looking for?

Get help and learn more about the design.