ನಾನು ಬೆಳೆದು ಬಂದಿರುವ ಪರಿಸರಕ್ಕೆ ವಿಭಿನ್ನವಾದ ಕಥೆ ಇದು. ಯಾವುದೋ ಆಶಯ ಅಂತ ಅವರು ಪ್ರಾಣದಾಸೆ ಇಲ್ಲದೇ ಹೋರಾಡ್ತಾ ಇರುವುದು ನನಗೆ ವಿಸ್ಮಯ ಎನಿಸುತ್ತದೆ. ಅಲ್ಲದೇ ವಿಶಾರದಾ ಪಾತ್ರಧಾರಿಯ ಅತಿಯಾದ ಒಳ್ಳೆಯತನ ಕೋಪವನ್ನೂ ತರಿಸುತ್ತದೆ. ನ್ಯಾಯ-ನೀತಿ ಅಂತ ಹೋದರೆ ಕಡೆಗೆ ಏನಾಗುತ್ತದೆ ಅಂತ ಎಚ್ಚರಿಸುವ ಕಥೆ ಇದು. ಸಿನೆಮಾ ನೋಡಿದ ಹಾಗೆ ಭಾಸವಾಯ್ತು.