To one side of the village, Hosamanehalli, flowed the Sharavathi. On the other was Sita Parvatha. This was no mountain despite its name; it was a hillock. Its back was lush with forestlands but its head was bald. During the times of the Ramayana, Rama, Sita and Lakshmana had crossed the Sharavathi and rested in a cave on top of this hill. Now, sprawled at its foot were five families, three areca plantations and three rice fields. Of the five families, three were those of the landlords, the other two of bonded labourers, bonded since birth. Of the three landlords, Heramba Hegde and Parameshwarappa were wealthy; they owned the bonded labourers, Byra and Hala, who worked their land. Ganapayya was neither rich nor poor. He did not own labourers; he hired some and paid them wages. But that did not make a difference to his status. The respect the landlords commanded came from their place and role in the community, not from their wealth. This had been the system in the villages for generations. Everything changed with the Sharavathi Hydro-electric Project. Countless villages were submerged and with them went the lifestyle and values that had sustained communities in the Malnad area. The government arranged to compensate the displaced landlords with land. The labourers had no land anyway, so they were not covered by the compensation. A Submersion Office was set up to see to the process but only those landlords who could grease the palms of the officials were given land elsewhere. Ganapayya was not wealthy enough to bribe. So his application was 'lost'. He decided to stay back with his wife and father and face the consequences of the change in the landscape, thanks to modernisation. When the river did rise and submerge the land around the Linganmakki Dam, it spared Ganapayya's house. Sharavathi did not drown him but people did. He was judged by an alien urban yardstick and found wanting. As money became the new criterion for respect, he felt degraded by his community and his wife. In losing his self-worth as a person, Ganapayya lost everything else.
ದ್ವೀಪ ಸಿನಿಮಾ ನೋಡಿದಾಗಿಲಿಂದ ಅದರ ಮೂಲ ಕಾದಂಬರಿ ಓದುವ ಆಸೆ ಇದ್ದರೂ ಹೇಗೂ ಸಿನಿಮಾ ನೋಡಿಯಾಗಿದೆಯಲ್ಲ, ಕಥೆ ಓದಲು ಅವಸರವೇನು ಎಂದು ಇಷ್ಟೂ ಕಾಲ ಕಡೆಗಣಿಸಿದ್ದಾಯ್ತು. ಸಿನಿಮಾ ಬಿಂಬಿಸಿರುವ ಕಥೆಗೂ ಕಾದಂಬರಿಕಾರ ಹೇಳಹೊರಟ ಕಥೆಗೂ ಬಹಳವೇ ವ್ಯತ್ಯಾಸವಿದೆ ಮತ್ತು ಎರಡೂ ಅದರದರ ರೀತಿಯಲ್ಲಿ ಚೆನ್ನಾಗಿವೆ ಅನ್ನೋದು ಕಾದಂಬರಿ ಓದಿ ಮತ್ತೊಮ್ಮೆ ಸಿನಿಮಾ ನೋಡಿದ ಮೇಲಿನ ಅನಿಸಿಕೆ.
ದ್ವೀಪ ಚಿಕ್ಕ ಕಾದಂಬರಿಯಾದರೂ ಬಹಳವೇ ಆಳವೂ ಮನೋಜ್ಞವೂ ಆಗಿದೆ.
ಶರಾವತಿಯ ಲಿಂಗನಮಕ್ಕಿ ಡ್ಯಾಮ್ 1964ರಲ್ಲಿ ಉದ್ಘಾಟನೆ ಆಯ್ತಂತೆ. ಈ ಯೋಜನೆಯಿಂದ ಬೆಳಗಿದ ಮನೆಗಳು ಲೆಕ್ಕವಿಲ್ಲದಷ್ಟು ನಿಜ, ಆದರೆ ಅಣೆಕಟ್ಟಿನ ನಿರ್ಮಾಣದಿಂದ ಮುಳುಗಡೆಯಾದ ಭೂಭಾಗದ ಜನಜೀವನ ಕತ್ತಲಿಟ್ಟಿದ್ದಂತೂ ಸುಳ್ಳಲ್ಲ. ನಾ.ಡಿಸೋಜರ ಮೇಲೆ ಶರಾವತಿ ಅಣೆಕಟ್ಟಿನ ಮುಳುಗಡೆ ಎಷ್ಟು ಗಾಢವಾದ ಪ್ರಭಾವ ಬೀರಿದೆ ಎನ್ನಲು ಈ ದ್ವೀಪ ಕಾದಂಬರಿಯೂ ಸೇರಿ ಅವರು ಬರೆದಿರುವ ಅನೇಕ ಸಾಹಿತ್ಯ ಮುಳುಗಡೆಯ ಸುತ್ತಲೇ ಕೇಂದ್ರಿತವಾಗಿರುವುದು ಸಾಕ್ಷಿ. ಗ್ರಾಮ್ಯ ಭಾಷೆ, ಸಂಸ್ಕೃತಿಯ ಅದ್ಭುತ ಚಿತ್ತಾರದಿಂದ ಕಾದಂಬರಿ ಮತ್ತಷ್ಟು ಶ್ರೀಮಂತ.
ಊರು ಮುಳುಗಿ ದ್ವೀಪವಾದ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡು ನಂಬಿದ ದೈವವನ್ನು ಬಿಟ್ಟು ಹೋಗಲೂ ಆರದೆ, ಹುಲಿ ಕಾಟದಿಂದ ಬೇಸತ್ತಿರುವುದರ ಜೊತೆಗೆ ಅತ್ತ ಸರಕಾರ ಘೋಶಿಸಿದ್ದ ಪರಿಹಾರವೂ ಇಲ್ಲದೆ ಇತ್ತ ಹುಟ್ಟಿ ಬೆಳೆದ ಭೂಮಿಯೂ ಇಲ್ಲದೇ ಪರಿತಪಿಸುವ ಗಣಪೈಯ್ಯ ಮತ್ತವನ ಕುಟುಂಬದ ಕಥೆ ಕಾದಂಬರಿಯ ಮುಖ್ಯಭೂಮಿಕೆಯಲ್ಲಿದ್ದರೆ ಗಣಪೈಯ್ಯ, ನಾಗವೇಣಿ, ಕೃಷ್ಣಯ್ಯರ ನಡುವಿನ ಮಾನಸಿಕ ತುಮುಲ, ಎಲ್ಲರೂ ತಮ್ಮತಮ್ಮ ಮನಸ್ಸಿನನುಗುಣ ನಡೆಯುತ್ತಾ ದ್ವೀಪವಾಗುವ ಕಥೆ ಕಾದಂಬರಿಯ ಒಳಸುಳಿ.
ಆಳವಾಗಿ ಹಬ್ಬಿದ ಮಾನಸಿಕ ಬೇರು ಕಿತ್ತು ಇನ್ನೆಲ್ಲೋ ನೆಡುವ ಅನಿವಾರ್ಯ, ಜೀವಭಯ, ಒಂಟಿತನ, ತನ್ನವರೂ ತನ್ನನ್ನು ನಂಬದಿರುವ ತಬ್ಬಲಿತನ, ಮೂರು ಮತ್ತೊಂದು ಜೀವಗಳ ನಡುವೆ ಹರಿದಾಡುವ ಬದುಕಿನ ಏಕತಾನತೆ ಎಲ್ಲವನ್ನೂ ಸರಳವಾದ ಭಾಷೆಯಲ್ಲಿ ಎಷ್ಟೊಂದು ಚೆನ್ನಾಗಿ ಮೂಡಿಸಿದ್ದಾರಲ್ಲ ಡಿಸೋಜ಼ ಸರ್ 😍 A good read, a must read kind of novel this is.
ಇತ್ತೀಚಿಗೆ ದ್ವೀಪ ಕಾದಂಬರಿ ಓದಿದ ತರುವಾಯ ಚಲನಚಿತ್ರ ನೋಡಿದೆ. ಒಂದಿಷ್ಟು ಕಾದಂಬರಿಗಳನ್ನು ಚಿತ್ರಗಳನ್ನಾಗಿ ಮಾಡಿದರೆ ಅವು ಫಲವನ್ನು ನೀಡುವುದಿಲ್ಲ, ಆದರೆ ಕೆಲವು ಕಾದಂಬರಿಗಳನ್ನು ಚಲನಚಿತ್ರವನ್ನಾಗಿ ಮಾಡಿದಾಗ ಅವು ಕಾದಂಬರಿಗಿಂತ ಚೆನ್ನಾಗಿ ಮೂಡಿ ಬರುತ್ತವೆ. ಆ ಸಾಲಿಗೆ ಈ ಕಾದಂಬರಿ ಸೇರುತ್ತದೆ. ಮುಳುಗಡೆಯ ಕಥಾವಸ್ತುವನ್ನು ಹೊಂದಿರುವ ಈ ಚಲನಚಿತ್ರ ಅದ್ಭುತ ತಾರಾಗಣವನ್ನು ಹೊಂದಿದೆ. ನಾಗವೇಣಿ ಪಾತ್ರದಲ್ಲಿ ಸೌಂದರ್ಯ , ಅವಿನಾಶ್ ಗಣಪಯ್ಯಯನ ಪಾತ್ರದಲ್ಲಿ, ಚೋಮನದುಡಿ ಖ್ಯಾತಿಯ ವಾಸುದೇವರಾವ್ ದುಗ್ಗಜ್ಜನಾಗಿ ಪಾತ್ರ ನಿರ್ವಹಿಸಿದ್ದಾರೆ. ದಕ್ಷಿಣಕನ್ನಡದಲ್ಲಿ ಅತಿಯಾದ ಮಳೆಯಿಂದಾಗಿ ಊರು ಮುಳುಗಡೆಗೆ ಸನೀಹವಾಗಿರುತ್ತದೆ. ಆ ಊರಿನ ಜನಗಳೆಲ್ಲ ಊರು ಬಿಟ್ಟು ತಮ್ಮ ನೆಲೆಯನ್ನು ಭದ್ರಗೊಳಿಸಲು ಹೋಗುತ್ತಾರೆ ಆದರೆ ದುಗ್ಗಜ್ಜನಿಗೆ ಮಾತ್ರ ತನ್ನೂರಿನ ಮೇಲೆ ಅಪಾರ ಭಕ್ತಿ ಮತ್ತು ಪ್ರೀತಿ ಅದಕ್ಕಾಗಿ ಊರನ್ನು ಬಿಡದೇ ಅಲ್ಲಿಯೇ ಠಿಕಾಣಿ ಹೂಡುತ್ತಾನೆ. ಆ ಪಾತ್ರಕ್ಕೆ ವಾಸುದೇವರಾವ್ ಹೇಳಿ ಮಾಡಿಸಿದಂತಿದೆ. ಮುಳುಗಡೆ ಅಧಿಕಾರಿಗಳು ಬಂದು ಅಲ್ಲಿಯ ನೆಲೆಗಳನ್ನು ಪರಿಶೀಲನೆಗಾಗಿ ಬಂದಾಗ ವಾಸುದೇವರಾವ್ ಅವರ ಅಭಿನಯ ಯಾವುದೇ ಶ್ರೇಷ್ಠ ನಟನಿಗೂ ಮಾಡಲು ಆಗುವುದೋ ಇಲ್ಲೋ ಕಾಣೆ. ಅಧಿಕಾರಿಗಳು ದುಗ್ಗಜ್ಜ ಮತ್ತು ಗಣಪಯ್ಯ ನಡೆಸಿಕೊಂಡು ಬಂದಿದ್ದ ಪೂಜೆಯನ್ನು ಸಣ್ಣ ದೇವಾಲಯವನ್ನು ಪರಿಶೀಸಲು ಬಂದಾಗ ಅದು ಸಾರ್ವಜನಿಕ ಸ್ವತ್ತು ಎಂದು ನಿರ್ಧರಿಸಿ ಬಿಡುತ್ತಾರೆ. ಅವಾಗ ವಾಸುದೇವರಾವ್ ಅವರು ಅವಿನಾಶನ ಮುಖವನ್ನು ನೋಡುತ್ತಾರೆ. ಆ ನೋಟದಲ್ಲಿ ಎಷ್ಟು ಅರ್ಥಗರ್ಭಿತವಾದ ಅಭಿವ್ಯಕ್ತತೆಯುಂಟು. ಮೊದಲೇ ಅನಕ್ಷರಸ್ಥರಾದ ದುಗ್ಗಜ್ಜನಿಗೆ ಈ ಎಲ್ಲ ಕೋಟ್ಲೆ ಎಲ್ಲಿ ತಿಳಿಬೇಕು. ಅವರು ವಾಸಿಸುತ್ತಿದ್ದ ಬೆಟ್ಟದ ಮೇಲೆ ರಾಮ-ಸೀತಾ ಇಬ್ಬರೂ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು ಅದಕ್ಕಾಗಿ ಆ ಬೆಟ್ಟ ಮುಳುಗಡೆಗೆ ಬಲಿಯಾಗಲಾರದೆಂದೇ ಬಲವಾಗಿ ನಂಬಿದ ಭೋಳೆ ಸ್ವಭಾವದವರು. ಮುಳುಗಡೆಯಿಂದ ಅಲ್ಪವಾದರೂ ಪರಿಹಾರ ಸಿಗಬಹುದೆಂದು ಆಶಾವಾದಿಯಾಗಿದ್ದ ದುಗ್ಗಜ್ಜನಿಗೆ ಈ ಸರ್ಕಾರಿ ನೌಕರರ ಮಾತುಗಳು ಅರ್ಥವಾಗಲಿಲ್ಲ ಎಂಬುದು ಅವರ ನೋಟದಿಂದಲೇ ತಿಳಿಯುತ್ತದೆ. ಆದರೂ ಮಗ ಹೇಗಾದರೂ ಮಾಡಿ ಅವರನ್ನು ಮನವರಿಕೆ ಮಾಡಬಲ್ಲ ಅಂತ ಇನ್ನೊಂದು ಆಶಾಭಾವ. ಆದರೆ ಪರಿಹಾರ ಸಿಕ್ಕಿದ್ದರೆ ದುಗ್ಗಜ್ಜ ಮನೆ ಬಿಡುವನೇ? ತಲೆತಲಾಂತರಗಳಿಂದ ನೆಲೆಸಿದ್ದ ತಾಣವದು. ಹಾಗೆ ಹೇಗೆ ಬಿಟ್ಟು ಬಿಡಲಾಗುತ್ತದೆ! ಆದರೆ ಜೀವದ ಮೇಲಿನ ಆಸೆಯೋ ಅಥವಾ ತನ್ನ ಊರನ್ನು ಮತ್ತೆ ಯಥಾಸ್ಥಿತಿಯಲ್ಲಿ ನೋಡುವ ಆಸೆಯೇನೋ ದುಗ್ಗಜ್ಜ ಊರನ್ನು ಬಿಟ್ಟು ಪರಸ್ಥಳಕ್ಕೆ ಹೋಗುತ್ತಾರೆ. ಆದರೆ ಅಲ್ಲಿರುವುದು ಅವರ ದೇಹ ಮಾತ್ರ ಮನದಲ್ಲಿ ತುಡಿಯುತ್ತಿದ್ದುದು ತನ್ನ ಮನೆಯ ಅವಸ್ಥೆ. ತನ್ನೂರು, ತಾನು ಹುಟ್ಟು ಬೆಳೆದ ಆ ಮನೆ. ಕೊನೆಗೆ ಅಲ್ಲಿಯೇ ಆ ಪುಣ್ಯಕ್ಷೇತ್ರದಲ್ಲೇ ದುಗ್ಗಜ್ಜ ಕೊನೆಯುಸಿರೆಳೆಯುತ್ತಾನೆ. ಕನಿಷ್ಠಪಕ್ಷ ದುಗ್ಗಜ್ಜ ತನ್ನ ಹುಟ್ಟೂರಲ್ಲಿ ಕೊನೆಯುಸಿರೆಳೆದನು ಅದಕ್ಕಾಗಿ ಅವನು ಅದೃಷ್ಟವಂತ . ಈಗಿನ ಜನರ ಸ್ಥಿತಿಯನ್ನು ಕಂಡರೆ ಬಹಳ ಸಂಕಟವಾಗುತ್ತದೆ. ಬೆಂಗಳೂರೆಂಬ ದೈತ್ಯ ಪಟ್ಟಣಕ್ಕೆ ತಮ್ಮ ಹುಟ್ಟೂರನ್ನು ತೊರೆದು ಬಂದ ತರುಣರು ಬೆಂಗಳೂರಿನಲ್ಲೇ ಠಿಕಾಣಿ ಹೂಡುತ್ತಾರೆ. ಅವರ ಮನಸ್ಸು ಎಷ್ಟು ಗಟ್ಟಿ ಇರಬಹುದು? ಯಾರಾದರೂ ತನ್ನ ತಾಯಿಯನ್ನು ತೊರೆದು ಅನ್ಯ ಮಹಿಳೆಯನ್ನು ತಾಯಿ ಎನ್ನಬಹುದೇ? ಹಾಗನ್ನಬಹುದಾದರೆ ಅದಕ್ಕಾಗಿ ಅವನ ಹೃದಯ ಎಂತಹ ಜ್ವಾಲೆಯ ಶಾಖದಿಂದ ಬೆಂದಿರಬಹುದು? ಬಾಹ್ಯ ಶಾರೀರಿಕ ಗಾಯಗಳಿಗೆ ಪರಿಹಾರಗಳಿರಬಹುದು ಆದರೆ ಆಂತರಿಕ ಗಾಯಗಳಿಗೆ? ಸಾಧ್ಯವೇ ಇಲ್ಲ. ಮನುಷ್ಯ ಸ್ವಾವಲಂಬಿಯಾಗಲು ಪ್ರಯತ್ನಿಸಿದರೂ ಪರೋಕ್ಷವಾಗಿ ಅವನು ಅನ್ಯರೀತಿಯಾಗಿ ಅವಲಂಬಿತನಾಗುತ್ತಾನೆ . ಅದು ಪ್ರಸ್ತುತ ಪರಿಕಲ್ಪನೆಯಲ್ಲಿ ತನ್ನ ಕಾಯಕ ಸಹಾಯ ನೀಡಿದ ಆ ಸ್ಥಳ. ಅದರ ಮೇಲೆ ಅವಲಂಬಿತನಾಗಿರುತ್ತಾನೆ. ಅದಕ್ಕಾಗಿ ತನ್ನ ಹುಟ್ಟು ಸ್ಥಳವನ್ನು ಬಿಟ್ಟು ಪಟ್ಟಣವನ್ನು ತನ್ನ ಮಲತಾಯಿಯನ್ನಾಗಿ ಮಾಡುತ್ತಾನೆ. ಹೌದು, ಆ ಮಲತಾಯಿ ಅವನಿಗೆ ಅನ್ನ ಕೊಡಬಹುದು, ನೆಲೆಸಲು ಸ್ಥಳ ಕೊಡಬಹುದು ಆದರೆ ಅವಳು ಸ್ವಂತ ತಾಯಿಯಾಗುವಳೇ? ಸ್ವಂತ ತಾಯಿಯ ಮಡಿಲಲ್ಲಿ ಸಿಗುವ ಆಹ್ಲಾದಕರ ಸಮಾಧಾನ ಇನ್ನೆಲ್ಲೂ ಸಿಗಲಾರದು . ಅದಕ್ಕೆ ಏನೋ ಹಿಂದಿನ ಕಾಲದ ಜನರು ಹುಟ್ಟೂರನ್ನು ತಮ್ಮ ಮುಂದಿನ ಪೀಳಿಗೆಯ ಜನರು ಮರೆಯಬಾರದೆಂದು ಹೆಸರಿನ ಜೊತೆಗೆ ತಮ್ಮ ಹುಟ್ಟೂರನ್ನು ಅಡ್ಡಹೆಸರನ್ನಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಕೆಲವರು ತಮ್ಮ ಕಾಯಕವನ್ನು ಅಡ್ಡಹೆಸರನ್ನಾಗಿ ಇಟ್ಟುಕೊಂಡರು ಅಂದರೆ ಅವರಿಗೆ ತಮ್ಮ ಹುಟ್ಟೂರಿಗಿಂತ ಕಾಯಕವೇ ಮೇಲು ಅಂತಲೇ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ.
ಪುನರ್ವಸು ಓದಿದ ನಂತರ ಅಂತಹದ್ದೆ ಇನ್ನೊಂದು ಪುಸ್ತಕ ಹುಡುಕುತ್ತಿದ್ದೆ. ಆಗ ಸಿಕ್ಕಿದ್ದೆ ನಾ.ಡಿಸೋಜ ಅವರ ದ್ವೀಪ.
1948 ರಲ್ಲಿ ನಿರ್ಮಾಣವಾದ ಹಿರೇಭಾಸ್ಕರ ಅಣೆಕಟ್ಟಿನಿಂದ ಅದೆಷ್ಟು ಜನರು ಮುಳುಗಡೆಯಿಂದ ತಮ್ಮ ಹುಟ್ಟಿ ಬೆಳೆದ ನಾಡು ತೊರೆದು ಬೇರೆ ಜಾಗಕ್ಕೆ ಹೋದವರೆಷ್ಟೋ, ತೊರೆಯದೆ ಸತ್ತವರೆಷ್ಟೋ.. ದ್ವೀಪ, ಇದು ಶರಾವತಿ ನದಿಗೆ 1964 ರಲ್ಲಿ ನಿರ್ಮಾಣಗೊಂಡ ಲಿಂಗನಮಕ್ಕಿ ಅಣೆಕಟ್ಟಿನಿಂದ ಪರಿಹಾರ ಸಿಗದೆ ಗಣಪಯ್ಯನ ಕುಟುಂಬ ಮುಳುಗಡೆಯ ಕತೆ. ಲಿಂಗನಮಕ್ಕಿ ಅಣೆಕಟ್ಟು ಹಿರೇಭಾಸ್ಕರ ಅಣೆಕಟ್ಟಿನಕ್ಕಿಂತ ಮೂರು ಪಟ್ಟು ದೊಡ್ಡದು. ಇದರಿಂದ 70 ಕಿ.ಮೀ ರಷ್ಟು ಭೂಪ್ರದೇಶ ಮುಳುಗಡೆ ಆಗಿದೆ, ಅಲ್ಲದೆ ಸುಮಾರು 175 ಹಳ್ಳಿಗಳು ಮುಳುಗಿಹೋಗಿದೆ. ಅಲ್ಲದೇ ಸ್ವತಃ ಹಿರೇಭಾಸ್ಕರ ಅಣೆಕಟ್ಟು ಕೂಡ ಈ ಲಿಂಗನಮಕ್ಕಿ ಅಣೆಕಟ್ಟಿನಿಂದ ಮುಳುಗಡೆ ಹೊಂದಿದೆ. ಸೂಕ್ತ ಪರಿಹಾರ ಸಿಗದೆ ಗಣಪಯ್ಯ ಅವನ ಹೆಂಡತಿ ಹಾಗು ಅಪ್ಪ ಸೀತಾಪರ್ವತದ ಹೊಸಮನೆಹಳ್ಳಿಯಲ್ಲಿ ಕಾಲ ಕಳೆಯಬೇಕಾಗುತ್ತದೆ. ಇವರ ಸಹಾಯಕ್ಕೆ ಗಣಪಯ್ಯನ ಹೆಂಡತಿ ನಾಗವೇಣಿಯ ಮನೆಯ ಮಗನಂತೆ ಇರುವ ಮನೆ ಕೆಲಸದವನಾದ ಕೃಷ್ಣಯ್ಯನನ್ನು ಸೀತಾಪರ್ವತಕ್ಕೆ ಕರೆಸಿಕೊಳ್ಳುತ್ತಾರೆ. ದಿನದಿಂದ ದಿನಕ್ಕೆ ಶರಾವತಿ ಏರುತ್ತಾ ಬರುತ್ತಾಳೆ, ಬಿಡುವಿಲ್ಲದ ಮಳೆಯಿಂದ ಸೀತಾಪರ್ವತ ದ್ವೀಪವಾಗಿ ಮಾರ್ಪಾಡುತ್ತದೆ, ರಸ್ತೆ ಹಾಗೂ ಹೊರಗಿನವರ ಸಂಪರ್ಕ ಕಡಿದು ಹೋಗುತ್ತದೆ. ಗಣಪಯ್ಯನ ಅಪ್ಪ ಅನಾರೋಗ್ಯದಿಂದ ಸಾಯುತ್ತಾನೆ. ಮೂವರ ಕುಟುಂಬದಲ್ಲಿ ಗಣಪಯ್ಯನಿಗೆ ಅವನ ಹೆಂಡತಿ ಮತ್ತು ಕೃಷ್ಣಯ್ಯ ಮೇಲೆ ಸಂಶಯದ ಬೀಜ ತಲೆಯಲ್ಲಿ ಮೊಳಕೆ ಒಡೆಯುತ್ತದೆ. ಆ ನಿರ್ಜನ ದ್ವೀಪದಲ್ಲಿ ಹುಲಿ, ಹಾವು, ಇತರ ಕಾಡು ಪ್ರಾಣಿಗಳ ಜೊತೆ ಇವರ ಸಂಸಾರ ಎಲ್ಲಿಯವರೆಗೆ ತಲುಪುತ್ತದೆ ಎಂಬುವುದೆ ಈ ಕಿರುಕಾದಂಬರಿ ದ್ವೀಪ. ಕಾದಂಬರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಈ ಕಾದಂಬರಿ ಚಲನಚಿತ್ರವಾಗಿ ಅದ್ಭುತವಾಗಿ ಮೂಡಿಬಂದಿದೆ.
Dweepa: Island , by Na D'Souza , translated from Kannada by Susheela Punitha
A small, wonderful book. Liking all the books in the oxford novella publishing series. Dweepa means Island in Kannada but it encompasses much more- the encircling of a small hamlet Hosamanehalli by the River Sharavati forming a metastable island. This island can be encroached and immersed underwater any time by the forces of nature.. A flotsam of misery.. and trapped are three people..
Ganapayya , his wife and her family friend are trapped both geographically and metaphorically in this makeshift island from the overflowing Sharavati Dam. Ganapayya being adamant plans on staying in this tiny village after the rest of the people have abandoned it for money from the government. Ganapayya's compensation is lost and forgotten.. Money for memories.. Money for livelihood.. To leave one's birthplace and erase all its existence is impossible for him.. and He dreams of farming areca nuts.. His wife dreams of enjoying other women's company and togetherness.. Krishnayya.. an orphan chained to commands enters this Dweepa
Nature and fate have hatched diabolical plans.. The closing of boundaries with water rushing from each side and the fear grasping their throats.. Krishnayya vies for her.. Ganappaya is jealous and red eyed.. A storm of love or weather? The ending is predictable. The animals from the forests now seek refuge in their home..
ನಾ. ಡಿಸೋಜರ ಕಿರು ಕಾದಂಬರಿ “ದ್ವೀಪ” ನನಗೆ ಗಜಾನನ ಶರ್ಮರ ಬೃಹತ್ ಕಾದಂಬರಿಯಾದ “ಪುನರ್ವಸು”ವಿನ ನೆನಪು ಮಾಡಿತು. ಕಾರಣ, ಶರಾವತಿ ನದಿಗೆ ಅಣೆಕಟ್ಟು ನಿರ್ಮಿಸಿದ್ದರಿಂದ ಉಂಟಾದ ಮುಳುಗಡೆಯ ಕುರಿತಾದ ವಸ್ತುವನ್ನು ಎರಡೂ ಕಾದಂಬರಿಗಳು ಹೊಂದಿವೆ. ಕಥಾವಸ್ತು ಒಂದೇ ರೀತಿ ಎನಿಸಿದರೂ “ದ್ವೀಪ” ಕಾದಂಬರಿ ಕೇವಲ ಮುಳುಗಡೆಯಿಂದಾದ ತೊಡಕುಗಳನ್ನಷ್ಟೇ ಅಲ್ಲದೇ ಮನುಷ್ಯ ಸಂಬಂಧಗಳ ಮತ್ತು ಭಾವೆನಗಳ ತಿಕ್ಕಾಟವನ್ನು, ಮಾನಸಿಕ ವಿಕ್ಷಪ್ತತೆಯನ್ನು ನಮ್ಮ ಮುಂದೆ ತೆರೆದಿಡುತ್ತದೆ.
A classic novel that depicts how lives of simple villagers were drowned in the Sharavathi valley due to hydro power project plan. Story not only highlights the human wildlife conflict but also explains the struggles within human relations.. Worth reading it !!
“ದ್ವೀಪ-ಒಂದು ಪುಟ್ಟ ಕಾದಂಬರಿ, ಶರಾವತಿ ನದಿಯ ಮುಳಗಡೆಯ ಆಗು ಹೋಗುಗಳನ್ನು ತೆರೆದಿಡುತ್ತದೆ. ಮುಳುಗಡೆ ಹೆಚ್ಚಾದಂತೆ ಊರು ಬಿಡುವುದು ಅನಿವಾರ್ಯವಾಗಿ ಸಂಬಂಧಗಳ ಸೆಳೆತಗಳೂ ಸಡಿಲಾಗಿ ಅದರದರ ಪಾಡಿಗೆ ಹರಿಯಲು ಹಾತೊರೆದಾಗ ಉಂಟಾಗುವ ಭೋರ್ಗರೆತ ಎಲ್ಲವೂ ಸೇರುವುದು ನೀರಿಗೆ ಅಷ್ಟೇ..!”
“ಕಾದಂಬರಿ ಓದಿ ಸಿನಿಮಾ ನೋಡಿದಮೇಲೆ ಅನಿಸಿದ್ದು, ಕೃತಿಗೂ ಬೆಳ್ಳಿಪರದೆಯದಕ್ಕೂ ತುಂಬಾ ವ್ಯತ್ಯಾಸವಿದೆ. ಕೃತಿಯ ಸಣ್ಣ ಎಳೆಯನ್ನು ಗಾಢವಾಗಿ ವಿಸ್ತರಿಸಿ ಪಾತ್ರಗಳ ಅಭಿನಯ ನಿಜಕ್ಕೂ ಮೆಚ್ಚುವಂತದ್ದು., ಸೌಂದರ್ಯ, ಅವಿನಾಶ್, ವಾಸುದೇವಾಚಾರ್ಯ ಅವರ ಕಲೆ ಸಿನಿಮಾದ ಉದ್ದಕ್ಕೂ ವಿಜೃಂಭಿಸಿದೆ…!”
You can have a brief view of the lives of rural Kannadigas, especially of those of isolated people, it leaves you wondering at the end. An awesome read.