Jump to ratings and reviews
Rate this book

ಸುಪಾರಿ | Supari

Rate this book
ಲೇಖಕ ಕುಂ. ವೀರಭದ್ರಪ್ಪ ಅವರ ಕಾದಂಬರಿ ಕೃತಿ ʻಸುಪಾರಿʼ. ಪೋಲಿಸ್‌ ವ್ಯವಸ್ಥೆ, ತನ್ನ ಹತ್ಯೆಗೆ ತಾನೆ ಸುಪಾರಿ ಕೊಟ್ಟುಕೊಳ್ಳುವುದು, ಎನಕೌಂಟರ್‌ ವಿಷಯದಲ್ಲಿ ಪಿಹೆಚ್‌ಡಿ ಪಡೆದ ಉನ್ನತ ಪೊಲೀಸ್‌ ಅಧಿಕಾರಿಗಳು, ದಯಾನಿದಿಯ ಅಂತ್ಯ ಮುಂತಾದ ಅನೇಕ ಸುಪಾರಿ ಜಗತ್ತಿನ ಚಿತ್ರಗಳ ಮೂಲಕ ಓದುಗರ ಕುತೂಹಲವನ್ನು ಕತೆಯುದ್ದಕ್ಕೂ ಹಿಡಿದಿಟ್ಟುಕೊಳ್ಳುವ ಕಾದಂಬರಿ. ಇಲ್ಲಿ ಸಾಮಾಜಿಕ ವಾಸ್ತವಗಳನ್ನು ತೆರೆದಿಡುತ್ತಾ ಸುಪಾರಿಯ ಹಲವು ಪದರಗಳನ್ನು, ನಿಗೂಢತೆಯನ್ನು, ಅಪರಾಧ ಜಗತ್ತಿನ ಮುಖಗಳನ್ನು ಲೇಖಕರು ಒಂದೊದಾಗಿಯೇ ಓದುಗರ ಮುಂದೆ ಬಿಚ್ಚಿಡುತ್ತಾ ಹೋಗುತ್ತಾರೆ.

450 pages, Hardcover

First published January 1, 2023

1 person want to read

About the author

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು.
ಶಿವರಾಜ್ ಕುಮಾರ್ ಅಭಿನಯದ ’ಮನ ಮೆಚ್ಚಿದ ಹುಡುಗಿ’ ಅವರ ಕಾದಂಬರಿ ’ಬೇಟೆ’ ಆಧರಿಸಿದ ಚಿತ್ರ. ಅವರ ’ಬೇಲಿಯ ಹೂಗಳು’ ಕಾದಂಬರಿಯನ್ನು ಆಧರಿಸಿ ಬಂದದ್ದು ’ದೊರೆ’ ಸಿನಿಮಾ. ‘ಕೊಟ್ರೇಶಿ ಕನಸು’, ‘ಕೆಂಡದ ಮಳೆ’ ಅವರ ಕತೆಯಾರಿತ ಮತ್ತೆರಡು ಪ್ರಮುಖ ಚಿತ್ರಗಳು. ಅವರ ಮತ್ತೊಂದು ಮಹತ್ವದ ಕೃತಿಯಾದ ‘ಕೂರ್ಮಾವತಾರ’ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದೆ.
ಆಂಧ್ರದ ಹಿರೇಹಳ್ಳದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದ ಅವರು ಸೃಜನಶೀಲ ಸಾಹಿತ್ಯದಿಂದ ಸೃಜನೇತರ ಸಾಹಿತ್ಯದತ್ತಲೂ ಹೊರಳಿಕೊಂಡ ಕುಂ.ವೀ. ಚಾಪ್ಲಿನ್ ಕುರಿತು ಮಹತ್ವದ ಕೃತಿಯೊಂದನ್ನು ಬರೆದರು. ಶಾಮಣ್ಣ, ಯಾಪಿಲ್ಲು ಮತ್ತು ಅರಮನೆ ಕಾದಂಬರಿಗಳನ್ನು ಬರೆದರು. ಅರಮನೆ ಕೃತಿಗೆ 2007ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.
‘ಕಪ್ಪು’, ‘ಬೇಲಿ ಮತ್ತು ಹೊಲ’, ‘ಆಸ್ತಿ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’, ‘ಯಾಪಿಲ್ಲು’, ‘ಶ್ಯಾಮಣ್ಣ’, ‘ಕೆಂಡದ ಮಳೆ’, ‘ಬೇಟೆ’, ‘ಪಕ್ಷಿಗಳು’, ‘ಪ್ರತಿಧ್ವನಿ’, ‘ದ್ವಾವಲಾಪುರ’, ‘ಹನುಮ’, ‘ಅರಮನೆ’, ‘ಸೋಲೋ’, ‘ಬೇಲಿಯ ಹೂಗಳು’, ‘ಅರೊಹಣ’ ಕಾದಂಬರಿಗಳು.
‘ಚಾಪ್ಲಿನ್’, ‘ರಾಹುಲ ಸಾಂಕೃತ್ಯಾಯನ’, ‘ಗಾಂದೀ ಕ್ಲಾಸ್’ ವ್ಯಕ್ತಿ ಚಿತ್ರಣಗಳು. ತೆಲುಗು ಕಥೆಗಳು ಅನುವಾದಿತ ಕೃತಿ. ‘ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ’ ಅವರ ವಿಮರ್ಶಾತ್ಮಕ ಕೃತಿ. ‘ಕಥೆಗಳು: 1989’ ಅವರ ಸಂಪಾದನೆಯಲ್ಲಿ ಮೂಡಿ ಬಂತು.
ಕುಂ. ವೀರಭದ್ರಪ್ಪನವರಿಗೆ ಕೆಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೇ ಅಲ್ಲದೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿದರೆ ಕನ್ನಡ ಸಾಹಿತ್ಯ ಪರಿಷತ್ತು ನೃಪತುಂಗ ಪ್ರಶಸ್ತಿಯೊಂದಿಗೆ ಗೌರವಿಸಿದೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
0 (0%)
3 stars
0 (0%)
2 stars
1 (50%)
1 star
1 (50%)
Displaying 1 - 2 of 2 reviews
Profile Image for Kanarese.
136 reviews19 followers
September 25, 2025
Not even eligible for 1* rating:

At page 216, I decided I couldn’t stomach this anymore. This 356-page novel is going nowhere. The sarcasm and excessive filler have crossed a line, making *Supari* one of the worst books I’ve ever read. I’m done with Kum Vee.
Profile Image for Raghavendra Shekaraiah.
34 reviews
February 18, 2025
ಬೃಹದಾಕಾರದ ಕಾದಂಬರಿ. ಓದಲು ಶುರು ಮಾಡಿದಾಗ ಸರಳವಾಗಿಯೇ ಕಂಡಿತು. ಆದ್ರೆ ಕೆಲವು ಪುಟಗಳಾದಮೇಲೆ ಕಥೆ ನಿಧಾನವಾಗಿದೆ ಅನ್ನಿಸ್ತು. ಪರವಾಗಿಲ್ಲ, ಸ್ವಲ್ಪ ಹೊತ್ತಿನಲ್ಲಿ ಕಥೆ ವೇಗ ಪಡೆಯಬಹುದು ಅನ್ನೋ ಆಸೆಯಲ್ಲಿ ಓದ್ತಾ ಹೋದೆ. ಅರ್ಧ ಪುಸ್ತಕ ಮುಗಿಸಿದಮೇಲೆ ಕಥೆ ಇನ್ನೂ ಹಿಂದಿನ ಜಾಗದಲ್ಲೇ ನಿಂತಿದೆ ಅನ್ನಿಸ್ತು. ಸಾಗೋದೇ ಇಲ್ಲಾನೋ ಹಾಗೆ.

ಗೊತ್ತಾಗಿದ್ದು, ಇದು ತುಂಬಾ ನಿಧಾನವಾದ ಕಾದಂಬರಿ. ಕಲ್ಪನೆ ಮತ್ತು ಕ್ರೈಮ್ ಥ್ರಿಲ್ಲರ್ ಕಥೆಗಳ ಗೊಂದಲಮಯ ಮಿಶ್ರಣ. ನಿಜ ಜಗತ್ತಿಗೆ ಸಂಬಂಧವೇ ಇಲ್ಲದಂತೆ ಕಥೆ ಸಾಗಿದೆ. ಮುಖ್ಯವಾಗಿ ಪಾತ್ರಗಳು ಕಮ್ಮಿ ಬೆಳವಣಿಗೆ ಹೊಂದಿದ್ದು, ಆಳವಾಗಿಲ್ಲ. ಯಾವ ಪಾತ್ರಕ್ಕೂ ಓದುಗರಿಗೆ ಸಂಬಂಧ ಬೆಳೆಸುವಷ್ಟು ಆಳ ಇಲ್ಲ. ಈ ಲೇಖಕರ ನಾನು ಓದಿದ ಮೊದಲ ಪುಸ್ತಕ, ತುಂಬಾ ನಿರಾಸೆಯಾಯಿತು. ಒಳ್ಳೆಯದಾಗಿದೆ ಅಂತ ಮೊದಲೇ ನಿರೀಕ್ಷೆ ಹೆಚ್ಚು ಇಟ್ಕೊಂಡೆ ಅನ್ನಿಸುತ್ತೆ. ಇಷ್ಟವಾದವರಿಗೆ ಓದಬಹುದು, ಆದ್ರೆ ಮತ್ತೆ ಯೋಚಿಸಿ.
Displaying 1 - 2 of 2 reviews

Can't find what you're looking for?

Get help and learn more about the design.