Jump to ratings and reviews
Rate this book

ಹೊಕ್ಕಳ ಮೆದುಳು | Hokkala Medulu

Rate this book
‘ಹೊಕ್ಕಳ ಮೆದುಳು’ ಡಾ.ಕೆ.ಎನ್. ಗಣೇಶಯ್ಯ ಅವರ ಕಥಾಂಬರಿ. ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ 'ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಕತೆ' ಎಂಬ ಅಂತಾರಾಷ್ಟ್ರೀಯ ಕಮ್ಮಟದಲ್ಲಿ ಭಾಗವಹಿಸಿಲು ಆಹ್ವಾನಿತಗೊಂಡಿದ್ದ ಭಾರತದ ಧರ್ಮಗುರುಗಳು ಅಚ್ಚರಿಯ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲಿನ ಮಾನಸಿಕ ಆಸ್ಪತ್ರೆಯಲ್ಲಿ ನಡೆದ ದುರಂತವೊಂದಕ್ಕೆ ಇಂದಿನ ನ್ಯಾಯಪದ್ಧತಿಯ ಆವರಣದಲ್ಲಿ ಸೂಕ್ತ ಮತ್ತು ಸಿದ್ಧ ಪರಿಹಾರ ಸಿಗದ ಕಾರಣ, ವಿಜ್ಞಾನಿಗಳ, ನ್ಯಾಯಪಾಲಕರ ಮತ್ತು ಧರ್ಮಗುರುಗಳ ನಡುವೆ ಒಂದು ಜಾಗತಿಕ ಚರ್ಚೆಯನ್ನು ಏರ್ಪಡಿಸಲಾಗಿರುತ್ತದೆ. ಮಾನಸಿಕ ಸ್ಥಿತಿಯಲ್ಲಾಗುವ ಪಲ್ಲಟಗಳ ಬಗ್ಗೆ ನಡೆದ ಈ ಚರ್ಚೆಯಲ್ಲಿ ಎದುರಾಗುವ ಗೊಂದಲಗಳ ಮತ್ತು ಸವಾಲುಗಳ ಮೂಲಕ ಆಸ್ಪತ್ರೆಯಲ್ಲಿ ನಡೆದ ದುರಂತವೊಂದರ ವಿವರಗಳು ಅನಾವರಣಗೊಳ್ಳುವ ಕುತೂಹಲಕಾರಿ ಕಥನ ಇಲ್ಲಿದೆ.

104 pages, Paperback

First published January 1, 2024

16 people want to read

About the author

K.N. Ganeshaiah

44 books166 followers
Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.

Education:
Ph. D. University of Agricultural Sciences, Bangalore, India, l983
M.Sc. (Agri.) in Genetics & Plant Breeding, UAS, Bangalore, l979
B.Sc (Agri.), University of Agricultural Sciences, Bangalore, l976.

Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.

Though an agriculture scientist, his novels and stories bring to the reader, the lesser-known and hidden facts of history along with science. Some of
his novels are also aimed at bringing the most complicated elements of science to the general reader.

Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.

In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013

Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
4 (30%)
4 stars
7 (53%)
3 stars
2 (15%)
2 stars
0 (0%)
1 star
0 (0%)
Displaying 1 - 2 of 2 reviews
1 review
April 18, 2024
ಸತ್ಯವೇ ಎಂದಿಗೂ ಜೀವಂತ. ಆದರೇ ಕೆಲವು ಸತ್ಯಗಳನ್ನು ಒಪ್ಪಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಆದರೇ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ. ಏಕೆಂದರೆ ಅದು ಸತ್ಯವಲ್ಲವೇ? ಅಂತಹ ನಿಜವನ್ನು ಪ್ರತಿ ಬರವಣಿಗೆಯಲ್ಲು ಪರಿಚಯಿಸುವ ಗಣೇಶಯ್ಯರವರೆಂದರೇ ನನಗೆ ಅಚ್ಚುಮೆಚ್ಚು.

ಸಾಹಿತ್ಯಕ್ಕೂ, ವಿಜ್ಞಾನಕ್ಕೂ ಹೆಣೆಯುವ ನಂಟು, ಕಾಫಿಗೆ ಬೆಲ್ಲ ಬೆರಸಿದಷ್ಟು ಸ್ವಾದಿಷ್ಟ . ಅಂತಹ ರುಚಿಯಾದ ಕಾಫಿಯನ್ನು ಪ್ರತಿ ಕತೆ, ಕಾದಂಬರಿ, ಲೇಖನಗಳಲ್ಲಿ ಬಡಿಸುತ್ತ, ವಿಭಿನ್ನವಾದ ಶೈಲಿಯಲ್ಲಿ ವಿಜ್ಞಾನ ಪ್ರಪಂಚವನ್ನು ಪರಿಚಯಿಸುತ್ತ, "ಹೌದಲ್ಲವೇ?, ಇದು ಹೀಗೆಕೆ ಆಗಬಾರದು? ಇದು ಸಹ ಸರಿಯಲ್ಲವೇ? ಅಲ್ಲ ಇದೇ ಸರಿ." ಎಂಬ ಹೊಸ ಹೊಸ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಲು ಕಾರಣರಾಗುತ್ತಾರೇ ಗಣೇಶಯ್ಯರವರು.

ಅವರ ಪುಸ್ತಕಗಳ ಸೆಳೆತದಲ್ಲಿ, ಈ ವರ್ಷದ ಶಿವರಾತ್ರಿ, ನನ್ನ ಬದುಕಿನಲ್ಲಿ ಅತ್ಯಂತ ಚಿರಸ್ಮರಣೀಯವಾದ್ದದು ಹೊಕ್ಕಳ ಮೆದುಳಿನ ಧ್ಯಾನದಲ್ಲಿ.

ನ್ಯೂಯಾರ್ಕಿನ ಮೌಂಟ ಸಿನಾಯೆಂಬ ಆಸ್ಪತ್ರೆಯಲ್ಲಿ, ವೈಜರ್ ಹಾಗೂ ತನ್ನ ಸೈನ್ಯ ಮಾಡುವ ಡಾ|| ಬ್ಯಾಕರ್ರವರ ಕೊಲೆಯ ಸುತ್ತ ಸುಳಿಯುತ್ತದೆ ಈ ಕತೆ. ಹೂ...! ವೈಜರ್ ಮತ್ತು ತನ್ನ ಸೈನ್ಯ. ಈ ಮಾತನ್ನು ವೈಜರ್ ನ್ಯೂಸ್ ಚಾನೇಲಿನ ಸಂದರ್ಶನದಲ್ಲಿ ಹೇಳಿದಾಗ, ನನ್ನ ಓದು ಅಲ್ಲಿಗೆ ನಿಂತು, ಒಮ್ಮೆ ಯೋಚಿಸಿದೇ. ಸೈನ್ಯವೇ? ಆ ಗಳಿಗೆ ನನ್ನ ನೆನಪುಗಳು ನಾನು ಅಲ್ಲಿಯವರೆಗು ನೋಡಿದ್ದ ರೋಚಕ ಸಿನಿಮಾಗಳ ಸುತ್ತ ಒಂದು ಪಯಾಣ ಮಾಡಿ ಬಂತು. ನಂತರ "ಓಹೋ!, ಬಹುಶಃ ಇದು Multi split personality ಇರಬೇಕು ಎಂದು ಊಹಿಸಿದೆ. ಆದರೇ ಇದು ಬ್ಯಾಕ್ಟೀರಿಯಾಗಳ ಕೈವಾಡ ಎಂಬ ಸತ್ಯದ ತಿರುವಿನಲ್ಲಿ ಸಿಕ್ಕಿಹಾಕಿಕೊಂಡಾಗ ಆದ ದಿಗ್ಭ್ರಮೆ ಅಚ್ಟಳಿಯದೆ ಕಣ್ಣೆದುರು ಸೆರೆಯಾಗಿದೆ.

ಆಗ ಕತೆಯಲ್ಲಿ ಬರುವ ಆಗಸ್ಟ್ 15 ದಿನಾಂಕದ ಕುರಿತು ಯೋಚಿಸಿದೆ. ನಮ್ಮ ಭಾರತಕ್ಕೆ ಅಗಸ್ಟ್ 15 ವೀರರೂ, ಸ್ವತಂತ್ರ ಹೊರಾಟಗಾರರು ತಮ್ಮ ಜೀವ ತ್ಯಾಗ ಮಾಡಿ, ಬ್ರಿಟಿಷರಿಂದ ಮುಕ್ತಿ ನೀಡಿದ ದಿನವಾದರೇ. ನ್ಯೂಯಾರ್ಕಿನಲ್ಲಿ ವೈಜರ್ ತನ್ನ ಜೀವಾಣುಗಳ ತ್ಯಾಗ ಮಾಡಿ ಕಾರ್ಲೋಸಿಗೆ ಮನೋರೋಗದಿಂದ ಮುಕ್ತಿ ನೀಡಲು ಪ್ರಾರಂಭಿಸಿದ ದಿನ. ದಿನಾಂಕದಲ್ಲಿ ಅದೆಷ್ಟು ಚಂದದ ನಂಟಿದು!

ನಮ್ಮೊಳಗೆ ಕೋಟಿ ಕೋಟಿ ಜೀವಾಣುಗಳ ಇಷ್ಟು ದೊಡ್ಡ ಸಾಮ್ರಾಜ್ಯವಿದೆಯೇ? ಅವುಕ್ಕೆ ನಾವು, ನಮಗೆ ಅವು ಆಶ್ರಯವಾಗಿ ಬದುಕುತ್ತಿದೇವ? ಎಂಬ ಆಶ್ಚರ್ಯದಲ್ಲಿ ಮುಂದೆ ಓದುತ್ತ ಹೋದಂತೆ, ನಮ್ಮೊಳು ಮೂಡುತ್ತಿದ್ದ ಪ್ರಶ್ನೆಗಳನ್ನೆ, ಡಾ|| ಕ್ಯಾಥರೀನ್, ಪಾದ್ರಿ , ಇನ್ನು ಹಲವರು ಕೇಳಿದಂತೆ, ಅದಕ್ಕೆ ಪ್ರತ್ಯುತ್ತರವು ಸಿಕ್ಕಿದಂತ ಸಮಧಾನವಾಗುತ್ತಿದಂತೆ, "ವಸುದೈವ ಕುಟುಂಬಕಂ", ಸಮಸ್ತ ಭೂಮಂಡಲದ ಎಲ್ಲ ಜೀವಗಳು ಒಂದೇ ಕುಟುಂಬದ ಸದಸ್ಯರು ಎಂಬ ನವ ಆಯಾಮವೇ ಸೋಜಿಗ.

ಕತೆಯ ಕೊನೆ ಕೊನೆಯದಲ್ಲಿ, ಎಲ್ಲವು ಸುಗಮವಾಗಿ, ವೈಜರಿಗು ನ್ಯಾಯ ದೊರಕಿ, ಎಲ್ಲವು ಪರಮಸುಖವಾದಾಗ, ವೈಜರ್ ಹೇಳುವ ಕೊನೆಯ ಮಾತು " V ಗ್ರೂಪ್ ಇದ್ದರು ನಾನು ಪಾಪ ಮಾಡಿದ್ದೇನೆ ಅನಿಸುತ್ತದೆ" ಎಂಬ ಮಾತು ಅಷ್ಟು ವಿಜ್ಞಾನದ ತಿರುವುಗಳಲ್ಲಿ , ಆತ್ಮ ಸಾಕ್ಷಿಯ ಪರಿಚಯ ನೀಡಿ, ಕತೆಗೆ ಅಂತ್ಯದಲ್ಲಿ ನವ ಆರಂಭ ಹಾಡುತ್ತದೆ. ಪುನಃ ನಾನ್ನೊಳು "ಹೌದಲ್ಲವ?" ಎಂಬ ಪ್ರಶ್ನೆ ಮೂಡಿಸುತ್ತದೆ.


ಟೀವಿ ಚಾನಲಿನಲ್ಲಿ ಕ್ರೈಮ್ ನ್ಯೂಸ್ ನೋಡಿದಾಗ, ಇದು ಬ್ಯಾಕ್ಟೀರಿಯಾಗಳ ಕೈವಾಡವೇ ಇರಬೇಕು, ನಾನು ತಪ್ಪು ಮಾಡಿ ಅಮ್ಮ ಬೈಯುವಾಗ, "ಅಮ್ಮ ನನ್ನದಲ್ಲ ತಪ್ಪು, ನನ್ನ ಜೀವಾಣುಗಳದ್ದು" ಎಂದು ಹುಸಿ ನಗುವುದು, ಸ್ನೇಹಿತರು ಪರೀಕ್ಷೆಗೆ ಹೆದರುವಾಗ, ನಿನ್ನ ಕರುಳಿನಲ್ಲಿ ಹೀಗೆ ಆಗುತ್ತರಬಹುದು ಎಂದು ಪದೇ ಪದೇ ಅವರಿಗೆ ಹೊಕ್ಕಳ ಮೆದುಳಿನ ಕತೆ ಹೇಳುವುದು, ಇವಲ್ಲವು ನನಗೆ ಹೊಕ್ಕಳ ಮೆದುಳು ಸದಾ ಕಾಡುವುದು ಎಂಬುದಕ್ಕೆ ಸಾಕ್ಷಿ ಏನೊ?

ಸಾಹಿತ್ಯದೊಂದಿಗೆ ವಿಜ್ಞಾನವನ್ನು ಹೆಣೆಯುವ ಹಾಗೆ, ವಿದ್ಯಾರ್ಥಿಯ ಶಾಲೆ ಹಾಗೂ ಕಾಲೇಜಿನ ಪಠ್ಯಕ್ರಮದಲ್ಲಿ ಪ್ರತಿಯೊಂದು ಪಾಠವು ಕತೆಯ ರೂಪದಲ್ಲಿದ್ದರೇ ಅದೆಷ್ಟು ಚಂದ ಇರುತ್ತದೆ ಅಲ್ಲವಾ?
Profile Image for Abhiram's  Book Olavu.
107 reviews3 followers
June 25, 2025
ಈ ಸೂಕ್ಷ್ಮ ಜೀವಿಗಳ ಲೋಕ ಎಷ್ಟು ಸೋಜಿಗ ಅವೆಲ್ಲಾ? ಒಂದು ಸಾಮಾನ್ಯ ಸೂಕ್ಷ್ಮದರ್ಶಕ ಮುಖೇನ ವೀಕ್ಷಿಸಿದಾಗಲೇ ಎಷ್ಟು ವರ್ಣರಂಜಿತವಾಗಿ ಕಾಣುವ ಈ ಲೋಕ, ಇನ್ನೂ ಆಧುನಿಕ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳ ಅಡಿಯಲ್ಲಿ ಇನ್ನೆಷ್ಟು ವೈಭವಯುತವಾಗಿ ತೊರ್ಗೊಳ್ಳಬಹುದು, ಊಹಿಸಿ?!
ಈ ಲೋಕದ ಆಗುಹೋಗುಗಳನ್ನ ವಿಶ್ಲೇಷಿಸಿದರೆ ಎಲ್ಲವೂ ಜೀವಕೋಶಗಳ ಹಾಗೆಯೇ ಜೀವರಾಸಾಯನಿಕ ವಲಯಗಳಲ್ಲಿಯೇ ನೆಡೆಯುವುದು. ಸರಿಸುಮಾರು ೪೦ ಟ್ರಿಲಿಯನ್ ಸೂಕ್ಷ್ಮ ಜೀವಿಗಳು ಒಬ್ಬ ಮಾನವನ ದೇಹದಲ್ಲಿರುವವು ಎಂದರೆ ಅದು ಊಹಿಸಲೂ ಅಸಾಧ್ಯವೇ! ಇನ್ನು ನಮ್ಮ ಕರುಳಿನಲ್ಲಿರು ಸೂಕ್ಷ್ಮ ಜೀವಿಗಳ (gut microbes) ಸಂಖ್ಯೆ ಸರಾಸರಿ ೧೦ ರಿಂದ ೧೦೦ ಟ್ರಿಲಿಯನ್ ಎನ್ನಬಹುದು. ಇವುಗಳಲ್ಲಿ ಎಲ್ಲಾ ಪ್ರಭೇದಗಳೂ ಸೇರಿ good microbes ಮತ್ತು bad microbes ಗಳಾಗಿ ಗುಂಪುಗೊಂಡಿರುತ್ತವೆ. ಇದೊಂಥರಾ ಧರ್ಮ ಅಧರ್ಮಗಳ ನಿರಂತರ ಹೋರಾಟ. ಒಮ್ಮೊಮ್ಮೆ ನಾವು ಸೇವಿಸೊ ಆಹಾರ, ಕುಡಿಯುವ ಪಾನಿಯಗಳಿಂದ ಈ ಪಂಗಡಗಳ ಜಯ ಪರಾಜಯ ನಿರ್ಧಾರವಾಗುವುದು. ಸಾಮಾನ್ಯವಾಗಿ good gut microbes ಇರಬೇಕಾದರೆ, ಉತ್ತಮ ಹಾಗೂ ಪೌಷ್ಟಿಕ ಆಹಾರ ಸೇವಿಸುಬೇಕಾಗಿರುವುದು ಈಗಾಗಲೇ ಸಾಬೀತಾಗಿದ ಜ್ಞಾನ.

ಹಾಗಾದರೆ, ಈ ಕಿರು ಕಾದಂಬರಿಯಲ್ಲಿ ಅಂತಹದ್ದೇನಿದೆ?

ಅದೇನೆಂದರೆ, ಈಗಿರುವ ನಮ್ಮ ಜ್ಞಾನದ ಮುಂದುವರಿದ ಅಧ್ಯಾಯ ಅಂತ‌ಲೇ ಹೇಳಬಹುದು. ಈ ನಮ್ಮ ಕರುಳಿನ ಸೂಕ್ಷ್ಮ ಜೀವಿಗಳಿಂದ ಬಿಡುಗಡೆಯಾಗುವ ರಾಸಾಯನಿಕ ಅಂಶಗಳಿಗೆ ನಮ್ಮ ಮನಸ್ಸು ಅಥವಾ ಮಾನಸಿಕ ಚಟುವಟಿಕೆಗಳನ್ನ ನಿಯಂತ್ರಿಸುವ ಶಕ್ತಿ ಇದೆ! good gut microbes ಇದ್ದರೆ good guys ಆಗುವೆವು, bad gut microbes ಇದ್ದಲ್ಲಿ bad guys ಆಗುವೆವು, ಅಷ್ಟೇ!

ಎಷ್ಟೋ ಮಾನಸಿಕ ಸಮಸ್ಯೆಗಳಿಗೆ good gut microbesಗಳ‌ ಸಹಾಯದಿಂದ ಮದ್ದನ್ನು ನೀಡಬಹುದು (gut microbe pills). ಇನ್ನು ಈ ತಂತ್ರ, ಮನಃಶಾಸ್ತ್ರಜ್ಞರಿಗೆ ಒಂದು ವರವೇ ಸರಿ! ಇನ್ನು ಈ ನಮ್ಮ gut microbes history ಕೇಡಿಗಳ ಅಥವಾ ದುಷ್ಟರ ಕೈಸೇರಿದರೇ? ಅವರು ನಮ್ಮ ಆರೋಗ್ಯವನ್ನ ಹದಗೆಡಿಸುಲೂಬಹುದು ಅಥವಾ ಇನ್ನೂ ಘೋರ, ನಮ್ಮನು human weapon ಆಗಿಯೂ ಬಳಸಬಹುದು! ವಿಪರ್ಯಾಸವೆಂದರೆ ಯಾವುದೇ ಆವಿಷ್ಕಾರ ಅಥವಾ ಸಂಶೋಧನೆಯ ಉದ್ದೇಶಕ್ಕೆ ಎರಡು ಮುಖಗಳಿರುತ್ವೆ. ಉಪಯೋಗ, ದುರುಪಯೋಗವಾಗಬಾರದು ಅಷ್ಟೇ! ಈ ಎಲ್ಲಾ ವಿಷಯಗಳನ್ನ ತಮ್ಮ ಜ್ಞಾನ ಬತ್ತಳಿಕೆಯಲ್ಲಿ ಇರಿಸಿ ಒಂದು ಚಿಕ್ಕದಾದ ಹಾಗೆಯೇ ಚೊಕ್ಕದಾದ ಕಾದಂಬರಿಯನ್ನ ನಮ್ಮ ಗಣೇಶಯ್ಯನವರು ನಮ್ಮ ಮುಂದೆ ಇರಿಸಿದ್ದಾರೆ.
Displaying 1 - 2 of 2 reviews

Can't find what you're looking for?

Get help and learn more about the design.