ಈ ಕಥೆಯಲ್ಲಿ ಅನೇಕ ಜೀವಂತ ಮಹನೀಯರ ಉಲ್ಲೇಖಗಳಿವೆ. ಈ ಕಥೆಗೆ ಬೇಕಾದಷ್ಟು ಮಾತ್ರ ತೆಗೆದು ಕೊಂಡಿರುವುದರಿಂದ ಅವರ ಮಹತ್ವಕ್ಕೆ ಲೋಪ ಬಂದಿಲ್ಲ ಎಂದುಕೊಂಡಿದ್ದೇನೆ. ಒಂದು ಪ್ರಾಣಿ ಕುಡಿಯುವಷ್ಟು ಕುಡಿದಷ್ಟೇ ಅಲ್ಲ ನಡಿಯಲ್ಲಿ ನೀರಿರುವುದು. ಅದರಿಂದ ಆ ಮಹನೀಯರು ನನ್ನ ಮೇಲೆ ಕೋಪಗೊಳ್ಳದಿರಲಿ.
ದೇವುಡು(೧೮೮೬ ಡಿಸೆಂಬರ್ ೨೯ - ೧೯೬೨ ಅಕ್ಟೋಬರ್ ೨೭) ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು. ಅವರು ಅನೇಕ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ "ಮಹಾಕ್ಷತ್ರಿಯ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.